ಪೊಲೀಸ್ ಬಲೆಗೆ ಬಿದ್ದ ಪೊಲೀಸ್ ಜೊತೆ ಮಂಚ ಹತ್ತಿದ್ದ ಪೊಲೀಸ್

ಹೈದರಾಬಾದ್​: ಸಹೋದ್ಯೋಗಿ ಮಹಿಳೆಯೊಂದಿಗೆ ಅನೈತಿಕ ಚಟುವಟಿಕೆಯಲ್ಲಿ ತೊಡಗಿದ್ದಾಗ ಪಿ ಎಸ್ ಐ ಪೊಲೀಸ್ ಬಲೆಗೆ ಬಿದ್ದ ಘಟನೆ ಹೈದರಬಾದ್ನಲ್ಲಿ ನಡೆದಿದೆ.

Ad Widget ... ..

ಸಹೋದ್ಯೋಗಿಯೊಂದಿಗೆ ಸರಸ ಸಲ್ಲಾಪದಲ್ಲಿ ತೊಡಗಿ ಸಿಕ್ಕಿಬಿದ್ದ ಹೈದರಾಬಾದ್​ನ ಜವಹರ್​ ನಗರ ಠಾಣೆಯ ಸಬ್​ ಇನ್ಸ್​ಪೆಕ್ಟರ್​ನನ್ನು ರಾಚಕೊಂಡ ಪೊಲೀಸ್​ ಆಯುಕ್ತ ಮಹೇಶ್​ ಭಾಗವತ್​ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಪಿಎಸ್​ಐ ಅನಿಲ್​ ಎಂಬವರು ಮಹಿಳಾ ಸಿಬ್ಬಂದಿಯೊಂದಿಗೆ ಹಲವು ದಿನಗಳಿಂದ ಈ ಸಂಬಂಧ ಇಟ್ಟುಕೊಂಡಿದ್ದರು. ಇದರ ನಡುವೆ ತಿಮ್ಮೈಪಲ್ಲಿಯಲ್ಲಿರುವ ರೆಸಾರ್ಟ್​ನ
ಒಂದರಲ್ಲಿ ಅನಿಲ್​ ಮತ್ತು ಮಹಿಳೆ ಇಬ್ಬರು ಸೇರಿರುವುದಾಗಿ ಕೀಸರ ಠಾಣೆಗೆ ಪೊಲೀಸರಿಗೆ ಮಾಹಿತಿ ಬಂದಿತ್ತು. ಮೊದಲೇ ಈ ಬಗ್ಗೆ ದೂರು ಪಡೆದಿದ್ದ ಪೊಲೀಸರು ದಾಳಿ ನಡೆಸಿದಾಗ ಎಸ್​ಐ ಅನಿಲ್​ ಮತ್ತು ಮಹಿಳೆ ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದಾರೆ. ಇವರಿಬ್ಬರನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣದಲ್ಲಿ ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದರಿಂದ ಅನಿಲ್​ರನ್ನು ತಕ್ಷಣವೇ ಪೊಲೀಸ್​ ಆಯುಕ್ತರು ಅಮಾನತು ಮಾಡಿ ಆದೇಶಿಸಿದ್ದಾರೆ.

Ad Widget

Leave a Comment

Your email address will not be published. Required fields are marked *