ಆಸ್ತಿ ವಿವಾದ ಮಾರಾಮಾರಿ ನಾಲ್ವರ ಕೊಲೆಯಲ್ಲಿ ಅಂತ್ಯ

ಹೊಳೆನರಸೀಪುರ: ತಾಲ್ಲೂಕಿನ ಮಾರಗೌಡನಹಳ್ಳಿ ಗ್ರಾಮದಲ್ಲಿ ಆಸ್ತಿ ವಿಚಾರವಾಗಿ ನಡೆದ ಸಂಬಂಧಿಕರ ನಡುವಿನ ಘರ್ಷಣೆಯು ನಾಲ್ವರ ಸಾವಿನಲ್ಲಿ ಅಂತ್ಯವಾಗಿದೆ. ಗ್ರಾಮದ ಮಲ್ಲೇಶ್ ಹಾಗೂ ಸ್ವಾಮಿಗೌಡ ಎಂಬವರ ನಡುವೆ ಜಮೀನು ವಿಚಾರವಾಗಿ ಹಿಂದೆಯೂ ಗಲಾಟೆ ನಡೆಯುತ್ತಿತ್ತು. ನಿನ್ನೆ ಮಧ್ಯಾಹ್ನ ಮತ್ತೆ ಜಮೀನಿನ ಬಳಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದು ಹರಿತವಾದ ಆಯುಧದಿಂದ ಇರಿದ ಪರಿಣಾಮ ಮಲ್ಲೇಶ ( 60 ), ಮಲ್ಲೇಶನ ಚಿಕ್ಕಪ್ಪನ ಮಗ ಮಂಜೇಶ ( 35 ), ಮಲ್ಲೇಶನ ಅಳಿಯ ರವಿ ( 35 ) ಮತ್ತು ಎದುರು ಗುಂಪಿನ ಸ್ವಾಮಿಗೌಡರ ಮಗ ಪಾಪಣ್ಣಿ ( 42 ) ಸಾವನ್ನಪ್ಪಿದ್ದಾರೆ.  

. Ad Widget . Ad Widget . Ad Widget

ಜಮೀನು ಹಂಚಿಕೆ ಬಗ್ಗೆ ನ್ಯಾಯಾಲಯದಲ್ಲಿ ತೀರ್ಮಾನವಾಗಿ ಮಲ್ಲೇಶ್ ಪರ ತೀರ್ಪು ಬಂದಿದೆ. ಹಾಗಾಗಿ ಮಲ್ಲೇಶ್ ಮಗ ಬಸವರಾಜು ಬೆಳಿಗ್ಗೆ ಉಳುಮೆ ಮಾಡಲು ಜಮೀನಿಗೆ ಹೋದಾಗ ಸ್ವಾಮಿಗೌಡ ಅವರ ಮಗ ಪಾಪಣ್ಣಿ , ಪ್ರದೀಪ , ಶಶಿ ಗಲಾಟೆ ಮಾಡಿ , ಹೆದರಿಸಿ ಕಳುಹಿಸಿದ್ದರು . ಈ ಸಂಬಂಧ ಮಲ್ಲೇಶ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮಧ್ಯಾಹ್ನ ಮತ್ತೆ ಜಮೀನಿಗೆ ತೆರಳಿದ ಸಂದರ್ಭ ಘಟನೆ ನಡೆದಿದೆ.

. Ad Widget .

Leave a Comment

Your email address will not be published. Required fields are marked *