Current shock

ಪುತ್ತೂರು: ವಿದ್ಯುತ್ ಶಾಕ್‌ನಿಂದ ಯುವಕ ಮೃತ್ಯು

ಸಮಗ್ರ ನ್ಯೂಸ್ : ವಿದ್ಯುತ್ ಶಾಕ್‌ನಿಂದ ಯುವಕ ಮೃತಪಟ್ಟ ಘಟನೆ  ನಿಡಳ್ಳಿ ಗ್ರಾಮದ ಬೋಳುಂಬುಡೆಯಲ್ಲಿ ಘಟನೆ ಮೇ 24ರ ರಾತ್ರಿ ಸಂಭವಿಸಿದೆ. ಬೇಲೂರಿನ ಅಂಕಿಹಳ್ಳಿ ನಿವಾಸಿ ಜೋಕಿಂ ಪಿಂಟೋ ಅವರ ಪುತ್ರ ರೋಶನ್ ಪಿಂಟೋ (29) ಮೃತಪಟ್ಟ ಯುವಕ.ಜೋಕಿಂ ಅವರು ಪತ್ನಿ ಇಬ್ಬರು ಮಕ್ಕಳೊಂದಿಗೆ ಅವರ ಮಾವನ ಮನೆ ನಿಡಳ್ಳಿಯ ಬೋಳುಂಬುಡೆಗೆ ಬಂದಿದ್ದರು. ರೋಶನ್ ರಾತ್ರಿ ಸ್ಥಾನ ಮುಗಿಸಿ ಬಟ್ಟೆ ಒಗೆಯುವ ಸ್ಥಳಕ್ಕೆ ಹೋದಾಗ ಅಲ್ಲಿದ್ದ ವಿದ್ಯುತ್ ವಯರ್ ನಿಂದ ಶಾಕ್ ಹೊಡೆದು ನೆಲಕ್ಕೆ ಬಿದ್ದಿರುವುದಾಗಿ ತಿಳಿದುಬಂದಿದೆ. ಗಂಭೀರ ಗಾಯಗೊಂಡ […]

ಪುತ್ತೂರು: ವಿದ್ಯುತ್ ಶಾಕ್‌ನಿಂದ ಯುವಕ ಮೃತ್ಯು Read More »

ಕೇರಳದಲ್ಲಿ ಕರೆಂಟ್ ಶಾಕ್ ಹೊಡೆದು ಬಂಟ್ವಾಳದ ಯುವಕ ಮೃತ್ಯು

ಸಮಗ್ರ ನ್ಯೂಸ್: ಕೆಲಸ ಮಾಡುತ್ತಿದ್ದ ವೇಳೆ ಕರೆಂಟ್ ಶಾಕ್ ಹೊಡೆದು ಬಂಟ್ವಾಳ ಮೂಲದ ವ್ಯಕ್ತಿಯೋರ್ವರು ಕೇರಳದ ಕಂಪೆನಿಯೊದರಲ್ಲಿ ಮೃತಪಟ್ಟ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬಂಟ್ವಾಳ ತಾಲೂಕಿನ ಸಜೀಪ ಮುನ್ನೂರು ಗ್ರಾಮದ ಮರ್ತಾಜೆ ನಿವಾಸಿ ವಿದ್ಯಾಧರ ಕುಲಾಲ್ (35) ಮೃತಪಟ್ಟ ವ್ಯಕ್ತಿ. ಅವರು ಕೇರಳದ ಖಾಸಗಿ ಎಲೆಕ್ಟ್ರಾನಿಕ್ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಸೆ. 5ರಂದು ಸೋಮವಾರ ಕರ್ತವ್ಯ ದಲ್ಲಿರುವಾಗ ವಿದ್ಯುತ್ ಹರಿದು ಅವರು ಮೃತಪಟ್ಟ ಘಟನೆ ನಡೆದಿದೆ. ಮೂಲತ ಬೆಳ್ಳಾರೆ ನಿವಾಸಿಯಾಗಿದ್ದ ಇವರು ಇತ್ತೀಚೆಗೆ ಸಜೀಪ ಮುನ್ನೂರು

ಕೇರಳದಲ್ಲಿ ಕರೆಂಟ್ ಶಾಕ್ ಹೊಡೆದು ಬಂಟ್ವಾಳದ ಯುವಕ ಮೃತ್ಯು Read More »

ಮೂಡಿಗೆರೆ: ಗಣಪತಿ ವಿಸರ್ಜಿಸಿ ಬರುವ ವೇಳೆ ವಿದ್ಯುತ್ ಶಾಕ್; ಮೂವರು ಸಾವು

ಸಮಗ್ರ ನ್ಯೂಸ್: ಗಣಪತಿ ವಿಸರ್ಜಿಸಿ ಬರುವಾಗ ವಿದ್ಯುತ್ ಶಾಕ್ ನಿಂದ ಮೂವರು ಸಾವನಪ್ಪಿರುವ ಘಟನೆ ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ಬಿ.ಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ. ಟ್ರ್ಯಾಕ್ಟರ್ ನಲ್ಲಿದ್ದ ಪೆಂಡಾಲ್ ಗೆ ವಿದ್ಯುತ್ ತಂತಿ ತಗುಲಿ ರಾಜು (47) ರಚನಾ (35) ಪಾರ್ವತಿ (26) ಸಾವನಪ್ಪಿದ್ದಾರೆ. ಗಂಭೀರ ಗಾಯಗೊಂಡ ಆರು ಜನ ಮೂಡಿಗೆರೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಗಂಭೀರ ಗಾಯಗೊಂಡ ಸಂಗೀತ, ಪಲ್ಲವಿ ಹಾಸನಕ್ಕೆ ರವಾನಿಸಲಾಗಿದೆ. ಇಂಜಿನ್ ಮೇಲೆ ಕೂತಿದ್ದ ಡ್ರೈವರ್ ಅಪಾಯದಿಂದ ಪಾರಾಗಿದ್ದಾರೆ.ಬಣಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಮೂಡಿಗೆರೆ: ಗಣಪತಿ ವಿಸರ್ಜಿಸಿ ಬರುವ ವೇಳೆ ವಿದ್ಯುತ್ ಶಾಕ್; ಮೂವರು ಸಾವು Read More »