ಬೆಂಗಳೂರಿನಿಂದ 1 ಲಕ್ಷ ಕೇಸರಿ ಶಾಲುಗಳು ಕರಾವಳಿಗೆ ರವಾನೆಯಾಗಿದೆ| ಹಿಜಾಬ್- ಕೇಸರಿ ವಿವಾದ ಬಿಜೆಪಿ, ಆರ್ಎಸ್ಎಸ್ ಷಡ್ಯಂತ್ರದ ಭಾಗ- ಎಂ.ಲಕ್ಷ್ಮಣ
ಮೈಸೂರು: ‘ಬೆಂಗಳೂರಿನ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿರುವ ಗಾರ್ಮೆಂಟ್ಸ್ ಕಾರ್ಖಾನೆಯಿಂದ ಸುಮಾರು ಒಂದು ಲಕ್ಷ ಕೇಸರಿ ಶಾಲುಗಳು ಕರಾವಳಿ ಜಿಲ್ಲೆಗಳಿಗೆ ರವಾನೆಯಾಗಿದೆ. ಈ ಬಗ್ಗೆ ಸಮಗ್ರ ತನಿಖೆಯಾಗಲಿ’ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಆಗ್ರಹಿಸಿದರು. ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಈಗ ನಡೆಯುತ್ತಿರುವ ಹಿಜಾಬ್- ಕೇಸರಿ ಶಾಲು ವಿವಾದವು ಬಿಜೆಪಿ, ಆರ್ಎಸ್ಎಸ್ ಷಡ್ಯಂತ್ರದ ಭಾಗವಾಗಿದೆ. ಫೆ.6 ರಂದು ಕೇಸರಿ ಶಾಲುಗಳು ಮತ್ತು 15 ಸಾವಿರ ಕೇಸರಿ ಪೇಟಾಗಳನ್ನು ಹಂಚಲಾಗಿದೆ. ಅದರ ಪ್ರಾಯೋಜಕತ್ವ ವಹಿಸಿದ್ದು ಯಾರೆಂಬುದು ಬಯಲಾಗಲಿ’ ಎಂದು ಒತ್ತಾಯಿಸಿದರು. […]










