-ದೇಶ ಕೋಶ

ಭಾರತದ ಮುಕುಟ ಇಂಡಿಯಾ ಗೇಟ್ ಐತಿಹಾಸಿಕ ಸ್ಮಾರಕಕ್ಕೀಗ ಶತವರ್ಷದ ಸಂಭ್ರಮ

ಪ್ರಿನ್ಸ್ ಆರ್ಥರ್, ದಿ ಡ್ಯೂಕ್ ಆಫ್ ಕನ್ಹಾಟ್ ನಿಂದ ಶಂಕುಸ್ಥಾಪನೆ ನೆರವೇರಿಸಲ್ಪಟ್ಟ ಭಾರತದ ಮುಕುಟಮಣಿ ದೆಹಲಿಯ ಇಂಡಿಯಾ ಗೇಟ್ ಶತ ವರ್ಷಗಳ ಹೊಸ್ತಿಲಲ್ಲಿದೆ. ಈ ವಿಚಾರ ತಿಳಿಯಬೇಕಾದರೆ ಬರೋಬ್ಬರಿ 100 ವರ್ಷಗಳ ಇತಿಹಾಸ ಪುಟಗಳನ್ನು ತಿರುಚಿ ಹಾಕಬೇಕಾಗುತ್ತದೆ.ದಿಲ್ಲಿಯ ಅತ್ಯಂತ ಪ್ರಮುಖ ಆಕರ್ಷಣೆಗಳಲ್ಲಿ ಇಂಡಿಯಾ ಗೇಟ್‌ ಕೂಡ ಒಂದು. ಅತಿ ಹೆಚ್ಚು ಸಂಖ್ಯೆಯ ಪ್ರವಾಸಿಗರು ಭೇಟಿ ನೀಡುವ ತಾಣ ಕೂಡ ಹೌದು. ನಗರ ಕೇಂದ್ರದಲ್ಲಿ ಇದು ನೆಲೆಸಿದೆ. ಇದು ರಾಷ್ಟ್ರೀಯ ಸ್ಮಾರಕವಾಗಿ ಗುರುತಾಗಿದೆ. 42 ಮೀಟರ್‌ ಎತ್ತರವಾಗಿರುವ ಇದು, […]

ಭಾರತದ ಮುಕುಟ ಇಂಡಿಯಾ ಗೇಟ್ ಐತಿಹಾಸಿಕ ಸ್ಮಾರಕಕ್ಕೀಗ ಶತವರ್ಷದ ಸಂಭ್ರಮ Read More »

ಖಿನ್ನತೆಯ ಮೆಟ್ಟಿ ನಿಂತವ ಜಗತ್ತಿಗೆ ದೊಡ್ಡಣ್ಣನಾದ. ಅಬ್ರಾಹಂ ಲಿಂಕನ್ ಎಂಬ ಅಜಾತಶತ್ರು

ಮನೋಖಿನ್ನತೆ… ಇದು ಬಹುತೇಕ ಎಲ್ಲರನ್ನೂ ಕಾಡಿರುವ ಭೂತ. ಇದರ ತೀಕ್ಷ್ಣತೆ ಹಲವರನ್ನು ಕುಗ್ಗಿಸಿಬಿಟ್ಟರೆ ಮನೋ ದಾರ್ಢ್ಯತೆ, ಛಲ ಮತ್ತು ಹೊಣೆಗಾರಿಕೆಗಳಿಂದ ಬದ್ಧರಾದ ವ್ಯಕ್ತಿಗಳು ಅದರಿಂದ ಹೊರಬಂದು ಜಗತ್ತನ್ನೇ ಬೆರಗುಗೊಳಿಸುವಂತಹ ಸಾಧನೆ ಮಾಡಿ ಮಹಾಪುರುಷರು ಎನಿಸುತ್ತಾರೆ. ಇಂತಹವರ ಸಾಲಿನಲ್ಲಿ ಅಚ್ಚರಿಪಡುವಂತಹ ವ್ಯಕ್ತಿ ಎಂದರೆ ಅಮೆರಿಕದ 16ನೇ ಅಧ್ಯಕ್ಷ ಅಬ್ರಹಾಂ ಲಿಂಕನ್.! ಆಧುನಿಕ ಪ್ರಜಾಪ್ರಭುತ್ವಕ್ಕೆ ಭಾಷ್ಯ ಬರೆದು, ಗುಲಾಮಗಿರಿಯನ್ನೇ ಹೊಡೆದೋಡಿಸಿದ ಅಜಾತಶತ್ರು. ಅಮೆರಿಕದ ಅಧ್ಯಕ್ಷರಾಗಿ ಆ ದೇಶದ ಆರ್ಥಿಕ ಪರಿಸ್ಥಿತಿ ಉನ್ನತ ಶೃಂಗಕ್ಕೇರಲು ಭದ್ರ ಬುನಾದಿ ಹಾಕಿದ ಅಬ್ರಹಾಂ ಲಿಂಕನ್

ಖಿನ್ನತೆಯ ಮೆಟ್ಟಿ ನಿಂತವ ಜಗತ್ತಿಗೆ ದೊಡ್ಡಣ್ಣನಾದ. ಅಬ್ರಾಹಂ ಲಿಂಕನ್ ಎಂಬ ಅಜಾತಶತ್ರು Read More »

ಕಾಶ್ಮೀರ ಕಣಿವೆಯಲ್ಲೊಂದು ಹಿಮ ಕೆಫೆ: ಪ್ರವಾಸಿಗರ ಸ್ವರ್ಗವಾಗಿದೆ ಗುಲ್ಮಾರ್ಗ್ ನ ಇಗ್ಲೂ….

ಕಾಶ್ಮೀರ… ಭೂಲೋಕದ ಸ್ವರ್ಗಕ್ಕೆ ಮನಸೋಲದವರೇ ಇಲ್ಲ. ಸದಾ ಹಿಮದಿಂದ ಆವೃತ್ತವಾಗಿರುವ ಈ ಕಣಿವೆ ರಾಜ್ಯದಲ್ಲಿ ಈ ಚಳಿಗಾಲ ಮತ್ತೊಂದು ವಿಶಿಷ್ಟ ಆಕರ್ಷಣೆ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ಅದುವೇ ಗುಲ್ಮಾರ್ಗ್ ನ ಇಗ್ಲೂ ಕೆಫೆ(ಹಿಮ ಕೆಫೆ). ಚಳಿಗಾಲದ ಸೀಸನ್ ನಲ್ಲಿ ಎತ್ತ ನೋಡಿದರೂ ಹಿಮ. ಅದರಲ್ಲೂ ಕಣಿವೆ ರಾಜ್ಯದ ಗುಲ್ಮಾರ್ಗ್ ಕ್ಕೆ ಚಳಿಗಾಲದಲ್ಲಿ ಪ್ರವಾಸಿಗರು ಭೇಟಿ ನೀಡುವ ನೆಚ್ಚಿನ ತಾಣಗಳಲ್ಲಿ ಮೊದಲ ಸ್ಥಾನದಲ್ಲಿದೆ. ಈಗ ಗುಲ್ಮಾರ್ಗ್ ನಲ್ಲಿ ಇಗ್ಲೋ ಕೆಫೆ ತಲೆ ಎತ್ತಿದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.

ಕಾಶ್ಮೀರ ಕಣಿವೆಯಲ್ಲೊಂದು ಹಿಮ ಕೆಫೆ: ಪ್ರವಾಸಿಗರ ಸ್ವರ್ಗವಾಗಿದೆ ಗುಲ್ಮಾರ್ಗ್ ನ ಇಗ್ಲೂ…. Read More »