“ನನ್ನ ಜೊತೆಗಿನ ನೆನಪುಗಳಿರುವ ಅಮ್ಮನ ಮೊಬೈಲ್ ಹಿಂದಿರುಗಿಸಿ” ಕೋವಿಡ್ ಗೆ ಜೀವತೆತ್ತ ತಾಯಿಯ ಮುದ್ದಿನ ಮಗಳ ಭಾವುಕ ಪತ್ರ ವೈರಲ್
ಕುಶಾಲನಗರ: ವಿಶ್ವದಾದ್ಯಂತ ಕಳೆದೊಂದು ವರ್ಷಗಳಲ್ಲಿ ಕೊರೋನಾ ಹಲವಾರು ಕರುಣಾಜನಕ ವ್ಯಥೆಗಳನ್ನು ಸೃಷ್ಟಿಸಿದೆ. ಕೊರೊನಾದಿಂದಾಗಿ ಜೀವ ಕಳೆದುಕೊಂಡ ಕುಟುಂಬದ ಸದಸ್ಯರ ಕಳೇಬರವನ್ನೂ ನೋಡಲಾಗದೆ ಜನ ದುಖಃದ ಕಡಲಲ್ಲಿ ತೇಲುತ್ತಿರುವ ಅದೆಷ್ಟೋ ಸನ್ನಿವೇಶಗಳಿಗೆ ನಾವು ನಿತ್ಯ ಸಾಕ್ಷಿಯಾಗುತ್ತಿದ್ದೇವೆ. ಅಂದರಂತೆ ತಾಯಿಯನ್ನು ಕಳೆದುಕೊಂಡ 10 ವರ್ಷದ ಬಾಲಕಿಯೊಬ್ಬಳು ಅಮ್ಮನ ಜೊತೆ ತಾನು ಕಳೆದ ದಿನಗಳ ನೆನಪು ಹೊತ್ತ ಮೊಬೈಲ್ ಅನ್ನು ಹುಡುಕಿ ಕೊಡುವಂತೆ ಮನವಿ ಮಾಡಿದ ಈ ಕಥೆ ನಿಜಕ್ಕೂ ಕರುಣಾಜನಕವಾಗಿದೆ. ಕೊವಿಡ್ ತುತ್ತಾಗಿ ಜೀವ ತೆತ್ತ ಪ್ರೀತಿಯ ತಾಯಿ ಆಸ್ಪತ್ರೆಯಿಂದ









