ರಾಜ್ಯ

ಆಗಸ್ಟ್ 2 ರಿಂದ ಶಾಲಾ ಕಾಲೇಜುಗಳು ರೀ ಓಪನ್!ಅನುಮತಿ‌ ನೀಡಲಿದೆಯೇ ಶಿಕ್ಷಣ ಇಲಾಖೆ?

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಅಬ್ಬರ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಶಾಲೆ, ಕಾಲೇಜುಗಳನ್ನು ಹಂತ ಹಂತವಾಗಿ ಆರಂಭಿಸಲು ಮಾಡಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಅವರಿಗೆ ವಿಸ್ತೃತ ವರದಿಯನ್ನು ಸಲ್ಲಿಸಲಾಗಿದ್ದು, ಇನ್ನೂ ಎರಡು ದಿನಗಳ ಒಳಗೆ ರಾಜ್ಯ ಸರ್ಕಾರದ ಅಧಿಕೃತ ತೀರ್ಮಾನ ಹೊರಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ. ರಾಜ್ಯದಲ್ಲಿ ಮೊದಲ ಹಂತದಲ್ಲಿ 9,10,11, 12 ನೇ ತರಗತಿಗಳಿಗೆ ಭೌತಿಕ ತರಗತಿಗಳನ್ನು ಆರಂಭಿಸುವ ಯೋಚನೆ ಶಿಕ್ಷಣ ಇಲಾಖೆ ಮುಂದಿದ್ದು, […]

ಆಗಸ್ಟ್ 2 ರಿಂದ ಶಾಲಾ ಕಾಲೇಜುಗಳು ರೀ ಓಪನ್!ಅನುಮತಿ‌ ನೀಡಲಿದೆಯೇ ಶಿಕ್ಷಣ ಇಲಾಖೆ? Read More »

ತಾಕತ್ತಿದ್ದರೆ ದಲಿತರನ್ನು ಸಿಎಂ ಮಾಡಲಿ – ಬಿಜೆಪಿಗೆ ಸಿದ್ದು ಸವಾಲ್

ಮಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶೀಘ್ರ ರಾಜೀನಾಮೆ ನೀಡುವ ಸಾಧ್ಯತೆ ಇದ್ದು, ಬಿಜೆಪಿಯಲ್ಲಿ ಖಾಲಿಯಾಗುವ ಸಿಎಂ ಹುದ್ದೆಗೆ ದಲಿತ ನಾಯಕನನ್ನು ಆಯ್ಕೆ ಮಾಡಲಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರಿಗೆ ಸವಾಲು ಹಾಕಿದ್ದಾರೆ. ನಗರದಲ್ಲಿ‌ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಳಿನ್ ಕುಮಾರ್ ಕಟೀಲು ಇತ್ತೀಚೆಗೆ ಕಾಂಗ್ರೆಸ್ ದಲಿತ ಸಿಎಂ ಅಭ್ಯರ್ಥಿಯನ್ನು ಘೋಷಿಸಲಿ ಎಂದು ಹೇಳಿದ್ದರು. ಇದೀಗ ಬಿಜೆಪಿಯಲ್ಲಿ ಮುಖ್ಯಮಂತ್ರಿ ಹುದ್ದೆ ಖಾಲಿ ಬೀಳಲಿದೆ. ನಳಿನ್ ನಮಗೆ ಹೇಳುವ ಬದಲು ಅವರೇ

ತಾಕತ್ತಿದ್ದರೆ ದಲಿತರನ್ನು ಸಿಎಂ ಮಾಡಲಿ – ಬಿಜೆಪಿಗೆ ಸಿದ್ದು ಸವಾಲ್ Read More »

ಚಾರ್ಮಾಡಿ ಘಾಟ್ ನಲ್ಲಿ ಭೂಕುಸಿತ: ರಸ್ತೆ ಸಂಪರ್ಕ ಕಡಿತದ ಆತಂಕ

ಮಂಗಳೂರು: ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಚಾರ್ಮಾಡಿ ಘಾಟಿಯಲ್ಲಿ ಗುಡ್ಡ ಕುಸಿತ ಉಂಟಾಗಿದೆ. ಮಂಗಳೂರು ತುಮಕೂರು ರಾಷ್ಟ್ರೀಯ ಹೆದ್ದಾರಿ 73 ಮಾರ್ಗದ ಘಾಟಿಯ ಆರನೇ ತಿರುವಿನಲ್ಲಿ ಕುಸಿತ ಉಂಟಾಗಿದೆ. ಇನ್ನು ಶಿರಾಢಿ ಘಾಟ್ ಬಂದ್ ಆಗಿರುವುದರಿಂದ ಸದ್ಯ ಚಾರ್ಮಾಡಿ ಘಾಟ್​ನಲ್ಲಿ ವಾಹನ ಸಂಚಾರ ಮುಂದುವರಿದಿದ್ದು, ಈಗಾಗಲೇ ಘಟನಾ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗುಡ್ಡ ಕುಸಿತ ಇನ್ನು ಹೆಚ್ಚಾಗುವ ಭೀತಿ ಎದುರಾಗಿದ್ದು, ಚಾರ್ಮಾಡಿ ಘಾಟ್ ಕೂಡ​ ಬಂದ್ ಆಗುವ ಸಾಧ್ಯತೆಯಿದೆ.

ಚಾರ್ಮಾಡಿ ಘಾಟ್ ನಲ್ಲಿ ಭೂಕುಸಿತ: ರಸ್ತೆ ಸಂಪರ್ಕ ಕಡಿತದ ಆತಂಕ Read More »

ವಾಯುಭಾರ ಕುಸಿತ| ಕರಾವಳಿ, ದಕ್ಷಿಣ ಒಳನಾಡಲ್ಲಿ ಭಾರೀ‌ ಮಳೆ, ಅಲರ್ಟ್ ಘೋಷಣೆ

ಮಂಗಳೂರು : ಜುಲೈ 23ರೊಳಗೆಬಂಗಾಳಕೊಲ್ಲಿಯಲ್ಲಿ ಕಡಿಮೆ ಒತ್ತಡ ಪ್ರದೇಶಉಂಟಾಗುವ ಸಾಧ್ಯತೆ ಇರುವುದರಿಂದ ಮುಂಗಾರು ಮಳೆ ಪ್ರಮಾಣ ಹೆಚ್ಚಾಗಲಿದ್ದು, ಕರ್ನಾಟಕ ಮತ್ತು ಮಹಾರಾಷ್ಟ್ರದ ಮೇಲೆ ಮತ್ತಷ್ಟು ಪ್ರಭಾವ ಬೀರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎರಡು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿ ತೀರ ಮತ್ತು ದಕ್ಷಿಣ ಭಾಗಗಳಲ್ಲಿಮುಂದಿನ 5 ದಿನಗಳವರೆಗೂ ಮಳೆಮುಂದುವರಿಯಲಿದ್ದು, ಉತ್ತರ ಕರ್ನಾಟಕದ ಭಾಗಗಳಲ್ಲಿ 24ರಿಂದ ಮಳೆರಾಯನ ಆರ್ಭಟ

ವಾಯುಭಾರ ಕುಸಿತ| ಕರಾವಳಿ, ದಕ್ಷಿಣ ಒಳನಾಡಲ್ಲಿ ಭಾರೀ‌ ಮಳೆ, ಅಲರ್ಟ್ ಘೋಷಣೆ Read More »

ಪ್ರಧಾನಿಯ ಚಾರಿತ್ರ್ಯವಧೆ ಮಾಡುವ ಮುನ್ನ ಎಚ್ಚರ | ಆಧಾರರಹಿತ ಸುದ್ದಿ ಬಿತ್ತರಿಸದಂತೆ TV 5 ಮಾಧ್ಯಮಕ್ಕೆ ಕೋರ್ಟ್ ಆದೇಶ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅಥವಾ ಅವರು ಪ್ರತಿನಿಧಿಸುತ್ತಿರುವ ಪಕ್ಷದ ವಿರುದ್ಧ ಆಧಾರರಹಿತವಾಗಿ ಯಾವುದೇ ಸುದ್ದಿ ಪ್ರಸಾರ ಮಾಡಬಾರದು ಎಂದು tv5 ಮಾದ್ಯಮಕ್ಕೆ ನ್ಯಾಯಾಲಯ ಆದೇಶ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾಧ್ಯಮವು ‘ಆರ್ ವಿ ಸ್ಟುಪ್ಪಿಡ್’ ಎಂಬ ಕಾರ್ಯಕ್ರಮದ ಮೂಲಕ ಸುಳ್ಳು ಸುದ್ದಿ ಬಿತ್ತರಿಸುತ್ತಿದೆ. ಈ ಆರೋಪಗಳಿಗೆ ಮಾಧ್ಯಮದ ಬಳಿ ಯಾವುದೇ ಸಾಕ್ಷ್ಯಧಾರವಿಲ್ಲ. ಎಂದು ಬಿಜೆಪಿ ಕಾನೂನು ಪ್ರಕೋಷ್ಠದ ಸದಸ್ಯರಾದ ಆರ್ ಹರೀಶ್ ಕುಮಾರ್ ಎಂಬವರು ಮೊಕದ್ದಮೆ ಹೂಡಿದ್ದರು. ಟಿವಿ 5 ಕನ್ನಡ ಸುದ್ದಿ

ಪ್ರಧಾನಿಯ ಚಾರಿತ್ರ್ಯವಧೆ ಮಾಡುವ ಮುನ್ನ ಎಚ್ಚರ | ಆಧಾರರಹಿತ ಸುದ್ದಿ ಬಿತ್ತರಿಸದಂತೆ TV 5 ಮಾಧ್ಯಮಕ್ಕೆ ಕೋರ್ಟ್ ಆದೇಶ Read More »

ಆಗಸ್ಟ್ 10ರ ಒಳಗೆ ಎಸ್ಸೆಸ್ಸೆಲ್ಸಿ ಫಲಿತಾಂಶ- ಸಚಿವ ಸುರೇಶ್ ಕುಮಾರ್

ಬೆಂಗಳೂರು: ಈ ಬಾರಿಯ ಹತ್ತನೇ ತರಗತಿ ಪರೀಕ್ಷೆಗಳು ಪೂರ್ಣಗೊಂಡಿದ್ದು, ಆಗಸ್ಟ್ 10ರ ಒಳಗೆ ಫಲಿತಾಂಶ ಪ್ರಕಟಿಸುವುದಾಗಿ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಎರಡು ದಿನಗಳ ಕಾಲ ನಡೆದ ಪರೀಕ್ಷೆಗಳು ಯಶಸ್ವಿಯಾಗಿ ನಡೆದಿದ್ದು, ಪರೀಕ್ಷೆ ಬರೆದ ಮಕ್ಕಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಇವತ್ತು ಭಾಷಾ ವಿಷಯಗಳಿಗೆ ಪರೀಕ್ಷೆ ನಡೆಸಲಾಯಿತು. ಇಂದು ನಡೆದ ಪರೀಕ್ಷೆಗೆ ಶೇಕಡಾ 99.65ರಷ್ಟು ಹಾಜರಾತಿಯಿತ್ತು. ಪ್ರಥಮ ಭಾಷೆಗೆ ಒಟ್ಟು 8,19,694 ವಿದ್ಯಾರ್ಥಿಗಳ ನೋಂದಣಿ ಮಾಡಿಕೊಂಡಿದ್ದರು. ಪ್ರಥಮ ಭಾಷೆ ಪರೀಕ್ಷೆಗೆ 7,83,881ವಿದ್ಯಾರ್ಥಿಗಳು ಹಾಜರಾಗಿದ್ದರು.ಪ್ರಥಮ

ಆಗಸ್ಟ್ 10ರ ಒಳಗೆ ಎಸ್ಸೆಸ್ಸೆಲ್ಸಿ ಫಲಿತಾಂಶ- ಸಚಿವ ಸುರೇಶ್ ಕುಮಾರ್ Read More »

75 ರ ಬಳಿಕ ಗದ್ದುಗೆಯಲ್ಲಿರುವ ನಿಯಮ ಬಿಜೆಪಿ ಯಲ್ಲಿಲ್ಲ | ಪಕ್ಷವನ್ನು ಮುಂದೆಯೂ ಅಧಿಕಾರಕ್ಕೆ ತರುವುದೇ ನನ್ನ ಗುರಿ: ಬಿಎಸ್ ವೈ

ಬೆಂಗಳೂರು: ಸಿಎಂ ಕುರ್ಚಿಯಿಂದ ಈ ಮಾಸಾಂತ್ಯಕ್ಕೆ ಕೆಳಗಿಳಿಯುವ ಬಗ್ಗೆ ಇದೇ ಮೊದಲ ಬಾರಿಗೆ ಸ್ವತಃ ಪ್ರತಿಕ್ರಿಯಿಸಿರುವ ಬಿಎಸ್ವೈ, ರಾಜ್ಯದಲ್ಲಿ ಮುಂದಿನ ಬಾರಿಗೆ ಪಕ್ಷವನ್ನು ಅಧಿಕಾರಕ್ಕೆ ತರುವುದೇ ನನ್ನ ಗುರಿ ಎಂದಿದ್ದಾರೆ. ಇದು ಪದತ್ಯಾಗಕ್ಕೆ ಯಡ್ಡಿ ಮಾನಸಿಕವಾಗಿ ತಯಾರಾಗಿರುವ ಸೂಚನೆ ನೀಡಿದಂತಾಗಿದೆ. ಈ ಬಗ್ಗೆ ಇಂದು ಸುದ್ದಿಗರರೊಂದಿಗೆ ಮಾತನಾಡಿದ ಸಿಎಂ, 26 ರವರೆಗೆ ರಾಜ್ಯಕ್ಕಾಗಿ ಶ್ರಮಿಸುತ್ತಿದ್ದೇನೆ. ಆ ಬಳಿಕ ಪಕ್ಷದ ವರಿಷ್ಟರ ನಿರ್ಧಾರಕ್ಕೆ ತಲೆಬಾಗಿ ಅವರು ನೀಡುವ ಸೂಚನೆಯನ್ನು ಪಾಲಿಸುತ್ತೇನೆ ಎಂದಿದ್ದಾರೆ. ಬಿಜೆಪಿ ನನಗೆ ಎಲ್ಲವನ್ನೂ ಕೊಟ್ಟಿದೆ. ಜುಲೈ

75 ರ ಬಳಿಕ ಗದ್ದುಗೆಯಲ್ಲಿರುವ ನಿಯಮ ಬಿಜೆಪಿ ಯಲ್ಲಿಲ್ಲ | ಪಕ್ಷವನ್ನು ಮುಂದೆಯೂ ಅಧಿಕಾರಕ್ಕೆ ತರುವುದೇ ನನ್ನ ಗುರಿ: ಬಿಎಸ್ ವೈ Read More »

ಭೂಕುಸಿತ- ಶಿರಾಡಿ ಘಾಟ್ ರಸ್ತೆ ಸಂಚಾರ ಬಂದ್

ಹಾಸನ: ಜಿಲ್ಲೆಯಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಸಕಲೇಶಪುರ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 75ರ ದೋಣಿಗಾಲ್‌ ಬಳಿ ಭೂ ಕುಸಿತ ಉಂಟಾಗಿ ಶಿರಾಡಿ ಘಾಟ್‌ ರಸ್ತೆಯಲ್ಲಿ ವಾಹನ ಸಂಚಾರ ಬಂದ್‌ ಮಾಡಲಾಗಿದೆ. ಮಂಗಳೂರಿಗೆ ತೆರಳುವವರು ಬೇಲೂರು ಮೂಲಕ ಚಾರ್ಮಾಡಿ ಘಾಟ್‌ನಲ್ಲಿ ತೆರಳುವಂತೆ ಸೂಚನೆ ನೀಡಲಾಗಿದ್ದು. ಮೂಡಿಗೆರೆ, ಹಾನುಬಾಳು, ಕೊಟ್ಟಗೆಹಾರದ ಮೂಲಕ ಬದಲಿ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಧರ್ಮಸ್ಥಳ, ಮಂಗಳೂರು, ಕುಕ್ಕೆ ಸುಬ್ರಹ್ಮಣ್ಯಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಬೆಳಿಗ್ಗೆ ಭೂಕುಸಿತವಾದ ಕಾರಣ ಮುನ್ನೆಚ್ಚರಿಕಾ ಕ್ರಮವಾಗಿ ತಾತ್ಕಾಲಿಕವಾಗಿ ಸಂಚಾರ ಬಂದ್‌ ಮಾಡಲಾಗಿದೆ. ಸ್ಥಳಕ್ಕೆ

ಭೂಕುಸಿತ- ಶಿರಾಡಿ ಘಾಟ್ ರಸ್ತೆ ಸಂಚಾರ ಬಂದ್ Read More »

‘ನನ್ನವರೇ ನನಗೆ ಕಂಟಕ..:’ ಬಿಎಸ್‍ವೈ

ಬೆಂಗಳೂರು: ಇನ್ನು ಕೆಲವೇ ದಿನಗಳಲ್ಲಿ ಬಿ.ಎಸ್ ಯಡಿಯೂರಪ್ಪ ಅವರು ಪದತ್ಯಾಗ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದ್ದು, ಈ ಬೆನ್ನಲ್ಲೇ ಬಿಎಸ್‍ವೈ ಭಾವುಕದ ಮಾತುಗಳನ್ನು ಆಪ್ತರ ಬಳಿ ಹೇಳಿಕೊಂಡಿದ್ದಾರೆ. ನನ್ನವರೇ ನನಗೆ ಶತ್ರುವಾದರು ಎಂದು ಬಿಎಸ್‍ವೈ ಅವರು ತಮ್ಮ ಆಪ್ತರ ಬಳಿ ಭಾವುಕರಾಗಿದ್ದಾರೆ. ತಾವೇ ಕರೆತಂದ ಮೂವರಿಂದ ಬಿಎಸ್‍ವೈ ಕುರ್ಚಿಗೆ ಕಂಟಕವಾಗಿದೆಯಂತೆ. ತನ್ನ ಬೆನ್ನಿಗೆ ನಿಲ್ತಾರೆ ಅಂದುಕೊಂಡಿದ್ದವರಿಂದಲೇ ಸಿಎಂಗೆ ಸಂಕಷ್ಟ ಎದುರಾಗಿದೆ.ಸಿ. ಪಿ ಯೋಗೇಶ್ವರ್, ಬಸನಗೌಡ ಪಾಟೀಲ್ ಯತ್ನಾಳ್, ಸಿ. ಪಿ ಯೋಗೇಶ್ವರ್, ಹೆಚ್. ವಿಶ್ವನಾಥ್ ಹೀಗೆ ಮೂವರು ವ್ಯಕ್ತಿಗಳು

‘ನನ್ನವರೇ ನನಗೆ ಕಂಟಕ..:’ ಬಿಎಸ್‍ವೈ Read More »

ಸಪ್ತಪದಿಗೆ ಮತ್ತೆ ಕೂಡಿಬಂತು ಮುಹೂರ್ತ| ಶೀಘ್ರದಲ್ಲೇ ಯೋಜನೆ ಪುನರಾರಂಭ-ಸಚಿವ ಕೋಟ|

ಶಿವಮೊಗ್ಗ: ಮುಜರಾಯಿ ಮತ್ತು ಧಾರ್ಮಿಕ ದತ್ತಿ ಇಲಾಖೆಯು ಕೊರೋನಾ ಸೋಂಕಿನ ಕಾರಣದಿಂದಾಗಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದ ಸಪ್ತಪದಿ ಮಹತ್ವಾಕಾಂಕ್ಷಿ ಯೋಜನೆಯನ್ನು ಪುನರಾರಂಭಗೊಳಿಸಲು ಉದ್ದೇಶಿಸಿದ್ದು, ರಾಜ್ಯದ 100 ಆಯ್ದ ದೇವಸ್ಥಾನಗಳಲ್ಲಿ ಸರ್ಕಾರದ ವತಿಯಿಂದಲೇ ಸರಳ ವಿವಾಹ ಕಾರ್ಯಕ್ರಮವನ್ನು ಏರ್ಪಡಿಸಲಾಗುವುದು ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ರಾಜ್ಯ ಮುಜರಾಯಿ ಮತ್ತು ದಾರ್ಮಿಕ ದತ್ತಿ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಇಂದು ಶಿವಮೊಗ್ಗ ನಗರದ ಕೋಟೆ ಶ್ರೀರಾಮಾಂಜನೇಯ ದೇವಸ್ಥಾನಕ್ಕೆ ಸಚಿವ ಕೆ.ಎಸ್.ಈಶ್ವರಪ್ಪ ಅವರೊಂದಿಗೆ ಭೇಟಿ ನೀಡಿ

ಸಪ್ತಪದಿಗೆ ಮತ್ತೆ ಕೂಡಿಬಂತು ಮುಹೂರ್ತ| ಶೀಘ್ರದಲ್ಲೇ ಯೋಜನೆ ಪುನರಾರಂಭ-ಸಚಿವ ಕೋಟ| Read More »