ರಾಜ್ಯ

ಪಿಯುಸಿ ದಾಖಲಾತಿಗೆ ಗ್ರೀನ್ ಸಿಗ್ನಲ್ | ಸುತ್ತೋಲೆ ಹೊರಡಿಸಿದ ಪ.ಪೂ.ಶಿಕ್ಷಣ ಇಲಾಖೆ

ಬೆಂಗಳೂರು: ಎಸ್‌ಎಸ್‌ಎಲ್ಸಿ ಪರೀಕ್ಷೆ ಫಲಿತಾಂಶದ ಬೆನ್ನಲ್ಲೇ ಪ್ರವೇಶಕ್ಕೆ ಗ್ರೀನ್ ಸಿಗ್ನಲ್ ನೀಡಲಾಗಿದೆ. ಆಗಸ್ಟ್ 30 ರ ವರೆಗೆ ದಂಡ ಶುಲ್ಕವಿಲ್ಲದೆ ದಾಖಲಾತಿಗೆ ಅವಕಾಶ ನೀಡಲಾಗಿದೆ. ಸೆಪ್ಟೆಂಬರ್ 1 ರಿಂದ 11 ರವರೆಗೆ ವಿಳಂಬ ಶುಲ್ಕ ನೀಡಿ ಪ್ರವೇಶ ಪಡೆಯಬಹುದು. 670 ರೂಪಾಯಿ ವಿಳಂಬ ಶುಲ್ಕ ಪಾವತಿಸಿ ದಾಖಲಾತಿ ಮಾಡಿಕೊಳ್ಳಬಹುದಾಗಿದೆ. ಸೆ. 11 ರವರೆಗೆ ಪ್ರವೇಶ ಪಡೆಯದವರಿಗೆ 2890 ರೂಪಾಯಿ ವಿಶೇಷ ದಂಡದೊಂದಿಗೆ ಪ್ರವೇಶ ನೀಡಲಾಗುವುದು. 2890 ರೂಪಾಯಿ ದಂಡ ಪಾವತಿಸಿ ಸೆಪ್ಟೆಂಬರ್ 13 ರಿಂದ 25ರವರೆಗೆ ದಾಖಲಾತಿ […]

ಪಿಯುಸಿ ದಾಖಲಾತಿಗೆ ಗ್ರೀನ್ ಸಿಗ್ನಲ್ | ಸುತ್ತೋಲೆ ಹೊರಡಿಸಿದ ಪ.ಪೂ.ಶಿಕ್ಷಣ ಇಲಾಖೆ Read More »

ಕ್ರೀಡಾ ಪ್ರೇಮಿಗಳಿಗೆ ಗುಡ್ ನ್ಯೂಸ್|ಒಲಿಂಪಿಕ್ ನಲ್ಲಿ ಇನ್ಮುಂದೆ ಕ್ರಿಕೆಟ್ ಕೂಡಾ‌ ಸೇರ್ಪಡೆ|

ಹಲವು ವರ್ಷಗಳಿಂದ ಕ್ರಿಕೆಟ್ ಅಭಿಮಾನಿಗಳು ಕಾಯುತ್ತಿರುವ ಘಳಿಗೆ 2028ರಲ್ಲಿ ಕೂಡಿಬರುತ್ತಿದ್ದು, 2028ರಲ್ಲಿ ಲಾಸ್​ ಎಂಜಲೀಸ್​ನಲ್ಲಿ ನಡೆಯಲಿರುವ ಒಲಿಂಪಿಕ್ಸ್​​ನಲ್ಲಿ ಕ್ರಿಕೆಟ್ ಸೇರ್ಪಡೆ ಮಾಡಲು ಬಿಡ್​ ಮಾಡಿರೋದಾಗಿ ಐಸಿಸಿ ಹೇಳಿದೆ. ಐಸಿಸಿ ಈಗಾಗಲೇ ವರ್ಕಿಂಗ್ ಗ್ರೂಪ್​ನ್ನು ರಚನೆ ಮಾಡಿದೆ. ಈ ಮೂಲಕ ಕ್ರಿಕೆಟ್ ಪ್ರಿಯರಿಗೆ ಭರ್ಜರಿಗೆ ಗುಡ್ ನ್ಯೂಸ್ ನೀಡಿದೆ.. ಇನ್ನೂ 2028ರ ಲಾಸ್ ​ಏಂಜಲೀಸ್​ ಒಲಂಪಿಕ್ ​ನಲ್ಲಿ ಕ್ರಿಕೆಟ್​ ಸೇರ್ಪಡೆ ಮಾಡಿದಲ್ಲಿ ಟೀಂ ಇಂಡಿಯಾ ಕೂಡ ಸ್ಪರ್ಧೆಗೆ ಇಳಿಯಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ, ಹೇಳಿದ್ರು. ಈ

ಕ್ರೀಡಾ ಪ್ರೇಮಿಗಳಿಗೆ ಗುಡ್ ನ್ಯೂಸ್|ಒಲಿಂಪಿಕ್ ನಲ್ಲಿ ಇನ್ಮುಂದೆ ಕ್ರಿಕೆಟ್ ಕೂಡಾ‌ ಸೇರ್ಪಡೆ| Read More »

ಜಾರಕಿಹೊಳಿ ವಿರುದ್ಧ ವಜಾಗೊಂಡಿದ್ದ ಪ್ರಕರಣವೊಂದಕ್ಕೆ ಮರುಜೀವ

ಬೆಂಗಳೂರು: ಜಾರಕಿಹೊಳಿ ವಿರುದ್ಧ ವಜಾಗೊಂಡಿದ್ದ ಪ್ರಕರಣವೊಂದಕ್ಕೆ ಮರುಜೀವ ನೀಡಿ ಹೈಕೋರ್ಟ್ ಆದೇಶ ಹೊರಡಿಸಿದೆ. ರಮೇಶ್ ಜಾರಕಿಹೊಳಿ ವಿರುದ್ಧ ಸಹಕಾರಿ ಬ್ಯಾಂಕ್ ಗೆ ನೀಡಿದ್ದ 5.2ಕೋಟಿ ಚೆಕ್ ಬೌನ್ಸ್ ಪ್ರಕರಣ ದಾಖಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಚಿಕ್ಕೋಡಿ ನ್ಯಾಯಾಲಯ ನೀಡಿದ್ದ ಆದೇಶವನ್ನು ಹೈಕೋರ್ಟ್ ರದ್ದು ಮಾಡಿದೆ. ಚೆಕ್ ಬೌನ್ಸ್ ಪ್ರಕರಣದಲ್ಲಿ ಸಹಕಾರಿ ಬ್ಯಾಂಕ್ ಖಾಸಗಿ ದೂರು ದಾಖಲಿಸಿತ್ತು. ಆದರೆ ಬ್ಯಾಂಕ್ ಪರ ವಕೀಲರು ಕೋರ್ಟ್ ಗೆ ಹಾಜರಾಗದ ಹಿನ್ನೆಲೆಯಲ್ಲಿ ಚಿಕ್ಕೋಡಿ ನ್ಯಾಯಾಲಯ ಪ್ರಕರಣ ವಜಾಗೊಳಿಸಿ ಆದೇಶ ನೀಡಿತ್ತು. ಈ ಆದೇಶ

ಜಾರಕಿಹೊಳಿ ವಿರುದ್ಧ ವಜಾಗೊಂಡಿದ್ದ ಪ್ರಕರಣವೊಂದಕ್ಕೆ ಮರುಜೀವ Read More »

ಸರ್ಕಾರಿ ಕಾರ್ಯಕ್ರಮಗಳಲ್ಲಿ ಹಾರ ತುರಾಯಿ ನಿಷೇಧ – ಸಿ ಎಸ್ ರವಿ‌ ಆದೇಶ

ಬೆಂಗಳೂರು : ಸರ್ಕಾರದ ಸಭೆ -‌ ಸಮಾರಂಭಗಳಲ್ಲಿ ಹೂಗುಚ್ಚ, ಹಾರ-ತುರಾಯಿ, ಹಣ್ಣಿನ ಬುಟ್ಟಿ, ಶಾಲು, ನೆನಪಿನ ಕಾಣಿ ಇತ್ಯಾದಿಗಳನ್ನು ನೀಡುವುದನ್ನು ನಿಷೇಧಿಸಿ‌ ಆದೇಶಿಸಿದೆ. ಈ ಕುರಿತಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿ ಕುಮಾರ್ ಸುತ್ತೋಲೆ ಹೊರಡಿಸಿದ್ದು, ರಾಜ್ಯ ಸರ್ಕಾರ ಮತ್ತು ಸರ್ಕಾರದ ಸ್ವಾಮ್ಯಕ್ಕೊಳಪಡುವ ಸಂಸ್ಥೆಗಳು ನಡೆಸುವ ಸಭೆ ಮತ್ತು ಸಮಾರಂಭಗಳಲ್ಲಿ ಹೂಗುಚ್ಛ, ಹಾರ, ತುರಾಯಿ, ಹಣ್ಣಿನ ಬುಟ್ಟಿ, ಶಾಲು, ನೆನಪಿನ ಕಾಣಿಕೆ ಇತ್ಯಾದಿ ಯಾವುದೇ ರೀತಿಯ ಕಾಣಿಕೆಗಳನ್ನು ನೀಡಬಾರದೆಂದು, ಈ ಮೂಲಕ ನಿರ್ದೇಶಿಸಿದೆ. ಈ ನಿರ್ದೇಶನವನ್ನು

ಸರ್ಕಾರಿ ಕಾರ್ಯಕ್ರಮಗಳಲ್ಲಿ ಹಾರ ತುರಾಯಿ ನಿಷೇಧ – ಸಿ ಎಸ್ ರವಿ‌ ಆದೇಶ Read More »

ಕೋವಿಡ್ ಏರಿಕೆ ಪ್ರಭಾವ| ಆ.15ರಿಂದ ರಾಜ್ಯದಲ್ಲಿ ಮತ್ತೆ ಕರ್ಪ್ಯೂ ಭೀತಿ…?

ಬೆಂಗಳೂರು: ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳಿಂದ ರಾಜ್ಯಕ್ಕೆ ವಲಸಿಗರ ಪ್ರಮಾಣ ಹೆಚ್ಚಾಗುತ್ತಿದ್ದು, ರಾಜ್ಯ ಸರ್ಕಾರ ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ಆ.15ರ ಸ್ವಾತಂತ್ರ್ಯ ದಿನಾಚರಣೆ ನಂತರ ರಾಜಧಾನಿ ಬೆಂಗಳೂರು ಸೇರಿದಂತೆ ನೆರೆ ರಾಜ್ಯಗಳಿಗೆ ಗಡಿ ಹಂಚಿಕೊಂಡಿರುವ ಎಂಟು ಜಿಲ್ಲೆಗಳು ಹಾಗೂ ಕೋವಿಡ್-19 ಹೆಚ್ಚಾಗಿರುವ ಜಿಲ್ಲೆಗಳಲ್ಲೂ ಬಿಗಿಕ್ರಮ ಜಾರಿಯಾಗುವ ಸಂಭವವಿದೆ. ಈ ಬಗ್ಗೆ ಈಗಾಗಲೇ ಸುಳಿವು ಕೊಟ್ಟಿರುವ ಕಂದಾಯ ಸಚಿವ ಆರ್.ಅಶೋಕ್ ಅವರು ಆ.15ರ ನಂತರ ಬೆಂಗಳೂರು ಮತ್ತಿತರ ಕಡೆ ಕೆಲವು ಕಠಿಣ ನಿಯಮಗಳನ್ನು

ಕೋವಿಡ್ ಏರಿಕೆ ಪ್ರಭಾವ| ಆ.15ರಿಂದ ರಾಜ್ಯದಲ್ಲಿ ಮತ್ತೆ ಕರ್ಪ್ಯೂ ಭೀತಿ…? Read More »

ವಾಹನ ಸವಾರರಿಗೆ ಗುಡ್ ನ್ಯೂಸ್| ಇನ್ಮುಂದೆ ಸ್ಥಳದಲ್ಲೇ ಟ್ರಾಫಿಕ್ ದಂಡ ಕಟ್ಬೇಕಾಗಿಲ್ಲ – ಗೃಹ ಸಚಿವ ಆರಗ ಜ್ಞಾನೇಂದ್ರ‌ ಖಡಕ್ ಸೂಚನೆ

ಬೆಂಗಳೂರು : ವಾಹನ ಸವಾರರಿಗೆ ಗೃಹ ಸಚಿವ ಆರಗ ಜ್ಞಾನೆಂದ್ರ ಭರ್ಜರಿ ಸಿಹಿಸುದ್ದಿ ನೀಡಿದ್ದು, ಬೆಂಗಳೂರು ಸೇರಿ ರಾಜ್ಯಾದ್ಯಂತ ಟ್ರಾಫಿಕ್ ಸ್ಪಾಟ್ ಫೈನ್ ಕ್ಯಾನ್ಸಲ್ ಮಾಡುವಂತೆ ಪೊಲೀಸ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ವಾಹನಗಳನ್ನು ಅಡ್ಡಗಟ್ಟಿ ಸ್ಪಾಟ್ ಫೈನ್ ಕಲೆಕ್ಷನ್ ಮಾಡದಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಟ್ರಾಫಿಕ್ ಪೊಲೀಸರು ಬಳಸುತ್ತಿದ್ದ ಮಷಿನ್ ಗಳನ್ನು ಆಯಾ ಪೊಲೀಸ್ ಠಾಣೆಗಳಲ್ಲಿ ಸರೆಂಡರ್ ಮಾಡಲು ಸೂಚನೆ ನೀಡಿದ್ದಾರೆ. ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿದ ವಾಹನ ಸವಾರರಿಗೆ ಪೊಲೀಸರು ಪಿಡಿಎ

ವಾಹನ ಸವಾರರಿಗೆ ಗುಡ್ ನ್ಯೂಸ್| ಇನ್ಮುಂದೆ ಸ್ಥಳದಲ್ಲೇ ಟ್ರಾಫಿಕ್ ದಂಡ ಕಟ್ಬೇಕಾಗಿಲ್ಲ – ಗೃಹ ಸಚಿವ ಆರಗ ಜ್ಞಾನೇಂದ್ರ‌ ಖಡಕ್ ಸೂಚನೆ Read More »

ಎಸ್ಸೆಸೆಲ್ಸಿ ರಿಸಲ್ಟ್: ದ.ಕ ಜಿಲ್ಲೆಯಲ್ಲಿ 9 ವಿದ್ಯಾರ್ಥಿಗಳಿಗೆ ಔಟ್ ಆಪ್ ಔಟ್

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು ಒಂಭತ್ತು ವಿದ್ಯಾರ್ಥಿಗಳು ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಪಡೆದಿದ್ದಾರೆ. ಮೂಡುಬಿದಿರೆಯ ಆಳ್ವಾಸ್ ಕನ್ನಡ ಮಾಧ್ಯಮ ಪ್ರೌಢಶಾಲೆಯ ಗಣೇಶ್ ಎಚ್. ವೀರಾಪುರ ಜಿಲ್ಲೆಯಲ್ಲಿ ಶೇ 100 ಅಂಕ ಪಡೆದ ಕನ್ನಡ ಮಾಧ್ಯಮದ ಏಕೈಕ ವಿದ್ಯಾರ್ಥಿಯಾಗಿದ್ದಾರೆ. ಸುಳ್ಯ ತಾಲ್ಲೂಕಿನ ಸುಬ್ರಹ್ಮಣ್ಯದ ಕುಮಾರಸ್ವಾಮಿ ಇಂಗ್ಲಿಷ್ ಮೀಡಿಯಂ ಪ್ರೌಢಶಾಲೆಯ ಅನನ್ಯಾ ಎಂ.ಡಿ. ಮತ್ತು ವೆನೆಸ್ಸಾ ಶರೀನ್ ಡಿಸೋಜಾ, ಮಂಗಳೂರು ಉರ್ವಾ ಕೆನರಾ ಪ್ರೌಢಶಾಲೆಯ ಕೀರ್ತನಾ ಶೆಣೈ, ಬೆಳ್ತಂಗಡಿ ಸೇಂಟ್‌ ಮೇರಿಸ್ ಪ್ರೌಢಶಾಲೆಯ

ಎಸ್ಸೆಸೆಲ್ಸಿ ರಿಸಲ್ಟ್: ದ.ಕ ಜಿಲ್ಲೆಯಲ್ಲಿ 9 ವಿದ್ಯಾರ್ಥಿಗಳಿಗೆ ಔಟ್ ಆಪ್ ಔಟ್ Read More »

ಎಸ್‍ಎಸ್‍ಎಲ್‍ಸಿ ಫಲಿತಾಂಶ : ಓರ್ವಳನ್ನು ಬಿಟ್ಟು ಉಳಿದ ಎಲ್ಲಾ ವಿದ್ಯಾರ್ಥಿಗಳು ಪಾಸ್

ಆಕೆ ಅನುತ್ತೀರ್ಣವಾಗಲು ಕಾರಣವೇನು? ಬೆಂಗಳೂರು: ಶಿಕ್ಷಣ ಸಚಿವ ಬಿಸಿ ನಾಗೇಶ್ ಅವರು ಮಧ್ಯಾಹ್ನ 3:30ಕ್ಕೆ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದರು. ಇದೇ ಮೊದಲ ಬಾರಿಗೆ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಶೇ.99.99ರಷ್ಟು ಫಲಿತಾಂಶ ರಾಜ್ಯದಲ್ಲಿ ದಾಖಲಾಗಿದೆ. ಕೋವಿಡ್ ಸಮಯದಲ್ಲಿ ಹೇಗೆ ಮಾಡ್ತಾರೆ ಪರೀಕ್ಷೆ ಅಂತ ಗೊಂದಲ ಇತ್ತು. ಅಧಿಕಾರಿ ವರ್ಗದವರು ಶ್ರಮಪಟ್ಟು ಕೆಲಸ ಮಾಡಿದ್ದಾರೆ ಎಂದು ಹೇಳಿ ಮಾಜಿ ಸಚಿವ ಸುರೇಶ್ ಕುಮಾರ್ ಮತ್ತು ಯಡಿಯೂರಪ್ಪನವರನ್ನು ನೆನಪು ಮಾಡಿಕೊಂಡರು. ಒಟ್ಟು 8,71,443 ಮಕ್ಕಳು ಪರೀಕ್ಷೆ ಬರೆದಿದ್ದು, 8,71,442 ವಿದ್ಯಾರ್ಥಿಗಳು ಪಾಸ್

ಎಸ್‍ಎಸ್‍ಎಲ್‍ಸಿ ಫಲಿತಾಂಶ : ಓರ್ವಳನ್ನು ಬಿಟ್ಟು ಉಳಿದ ಎಲ್ಲಾ ವಿದ್ಯಾರ್ಥಿಗಳು ಪಾಸ್ Read More »

ಮೇಕೆದಾಟು ಅಣೆಕಟ್ಟು ನಿರ್ಮಾಣ ಶತಸಿದ್ಧ – ಸಿಎಂ ಬೊಮ್ಮಾಯಿ

ಮೈಸೂರು: ಯಾರು ಏನೇ ಹೇಳಿದರೂ ಮೇಕೆದಾಟು ಅಣೆಕಟ್ಟು ನಿರ್ಮಾಣ ಮಾಡಿಯೇ ಸಿದ್ಧ. ನಮ್ಮ ನೀರು, ನಮ್ಮ ಹಕ್ಕು ಯೋಜನೆ ಬಗ್ಗೆ ಡಿಪಿಆರ್ ಸಿದ್ಧಪಡಿಸಿ ದೆಹಲಿಗೆ ಕಳುಹಿಸಲಾಗಿದ್ದು, ಶೀಘ್ರದಲ್ಲೇ ಅನುಮೋದನೆ ಸಿಗುವ ವಿಶ್ವಾಸವಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದರು. ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿದ ಸಿಎಂ ಬೊಮ್ಮಾಯಿ, ನಾಡ ಅಧಿದೇವತೆ ಚಾಮುಂಡೇಶ್ವರಿ ದೇವಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಮಾತನಾಡಿದ ಅವರು, ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ಚಾಮುಂಡಿ ತಾಯಿ ಮೊದಲ ದರ್ಶನ

ಮೇಕೆದಾಟು ಅಣೆಕಟ್ಟು ನಿರ್ಮಾಣ ಶತಸಿದ್ಧ – ಸಿಎಂ ಬೊಮ್ಮಾಯಿ Read More »

ಇಂದು ಮಧ್ಯಾಹ್ನ 3:30ಕ್ಕೆ ಎಸ್‌ಎಸ್‌ಎಲ್​ಸಿ ಪರೀಕ್ಷೆ ಫಲಿತಾಂಶ

ಬೆಂಗಳೂರು: ಮೂರು ವಾರಗಳ ಹಿಂದೆ ನಡೆಸಲಾಗಿದ್ದ ರಾಜ್ಯ ಎಸ್ಸೆಸ್ಸೆಲ್ಸಿ ಪರೀಕ್ಷೆಗಳ ಫಲಿತಾಂಶ ಇಂದು ಮಧ್ಯಾಹ್ನ ಮತ್ತು ಸಂಜೆಯ ಒಳಗೆ ಫಲಿತಾಂಶ ಅಧಿಕೃತವಾಗಿ ಘೋಷಣೆಯಾಗಲಿದೆ. ನೂತನ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರು ಸುದ್ದಿಗೋಷ್ಠಿ ಕರೆದು ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಲಿದ್ದಾರೆ. ರಾಜ್ಯ 10ನೇ ತರಗತಿ ಫಲಿತಾಂಶವನ್ನು ನೇರವಾಗಿ ಫಲಿತಾಂಶವನ್ನು KB.KAR.NIC.IN ಅಥವಾ KARRESULTS.NIC.IN ವೆಬ್ ಸೈಟ್​ಗಳಲ್ಲಿ ಪಡೆಯಬಹುದು. ಇಂದು ಸಂಜೆಯೇ ಈ ಜಾಲತಾಣಗಳಲ್ಲಿ ಫಲಿತಾಂಶ ವೀಕ್ಷಿಸಬಹುದು. ಜುಲೈ 19 ಮತ್ತು 22ರಂದು ಎರಡೇ

ಇಂದು ಮಧ್ಯಾಹ್ನ 3:30ಕ್ಕೆ ಎಸ್‌ಎಸ್‌ಎಲ್​ಸಿ ಪರೀಕ್ಷೆ ಫಲಿತಾಂಶ Read More »