ರಾಜ್ಯ

ರಾಜ್ಯದಲ್ಲಿ ಕೋವಿಡ್ ನಿಯಂತ್ರಣ ಮಾರ್ಗಸೂಚಿ ತಿಂಗಳಾಂತ್ಯದವರೆಗೂ ಮುಂದುವರಿಕೆ

ಬೆಂಗಳೂರು : ಕೋವಿಡ್ 19 ಕಣ್ಗಾವಲು ನಿಯಂತ್ರಣ ಮತ್ತು ಜಾಗ್ರತೆ ಮಾರ್ಗಸೂಚಿಗಳನ್ನು ಆಗಸ್ಟ್ 30 ರವರೆಗೆ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಬಗ್ಗೆ ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್ ಆದೇಶ ಹೊರಡಿಸಿದ್ದು, ರಾಜ್ಯದಲ್ಲಿ ಕೋವಿಡ್ 19 ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಕೊರೊನಾ ಸೋಂಕು ವ್ಯಾಪಕವಾಗಿ ಹರಡುವದನ್ನು ತಡೆಯಲು ಕೇಂದ್ರೀಕೃತ ಕಣ್ಗಾವಲು ಕೋವಿಡ್ 19 ಸಮುಚಿತ ವರ್ತನೆಗಳನ್ನು ಕಟ್ಟು ನಿಟ್ಟಾಗಿ ಅನುರಿಸುವುದು ಹಾಗೂ ಸ್ಥಳೀಯವಾಗಿ ನಿಯಂತ್ರಿಸಲು ಆರೋಗ್ಯ ತಜ್ಞರು ಸೂಚಿಸಿದ್ದು, ಈ […]

ರಾಜ್ಯದಲ್ಲಿ ಕೋವಿಡ್ ನಿಯಂತ್ರಣ ಮಾರ್ಗಸೂಚಿ ತಿಂಗಳಾಂತ್ಯದವರೆಗೂ ಮುಂದುವರಿಕೆ Read More »

ಅಲ್ಲಿ‌ ಕಾಮನ್ ಸೆನ್ಸ್ ತಪ್ಪಿದ್ದು ಯಾರು? ಡಿಸಿ, ಡಿಎಚ್ಒ ರನ್ನು ತರಾಟೆಗೆ ತೆಗೆದುಕೊಂಡ ಸಿಎಂ ಗೆ ಉಸ್ತುವಾರಿ ಸಚಿವರು ಕಂಡಿಲ್ಲವೇ?

ಮಂಗಳೂರು: ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಬಸವರಾಜ ಬೊಮ್ಮಾಯಿಯವರು ಪ್ರಥಮ ‌ಬಾರಿಗೆ ಕರಾವಳಿ ಪ್ರವಾಸವನ್ನು ಗುರುವಾರ ಮಾಡಿದ್ದರು. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಮತ್ತು ಉಡುಪಿಯಲ್ಲಿ ದಿನೇದಿನೇ ಕೊರೊನಾ ಪ್ರಕರಣಗಳು ಜಾಸ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಭೇಟಿ ತುಂಬಾ ಪ್ರಾಮುಖ್ಯತೆ ಪಡೆದಿತ್ತು. ಅದರಂತೆ ಮುಖ್ಯಮಂತ್ರಿಗಳು ಕೂಡಾ ಕಾಲಿಗೆ ಚಕ್ರಕಟ್ಟಿಕೊಂಡವರಂತೆ ಜಿಲ್ಲೆಯಲ್ಲಿ ಪ್ರಗತಿ ಪರಿಶೀಲನೆ ನಡೆಸಿದ್ದು ನಿಜಕ್ಕೂ ಸಾರ್ವಜನಿಕರಲ್ಲಿ ಒಂದು ರೀತಿಯ ಆಶಾಭಾವ ಮೂಡಿಸಿತ್ತು. ಆದರೆ ಸಿಎಂ ರ ಸಭೆಯಲ್ಲಿ ‌ನಡೆಸಿಕೊಟ್ಟ ಜಿಲ್ಲಾಡಳಿತದ ಅಧಿಕಾರಿಗಳಿಗೆ ‌ಮಾತ್ರ ‘ಕೋಲು ಕೊಟ್ಟು

ಅಲ್ಲಿ‌ ಕಾಮನ್ ಸೆನ್ಸ್ ತಪ್ಪಿದ್ದು ಯಾರು? ಡಿಸಿ, ಡಿಎಚ್ಒ ರನ್ನು ತರಾಟೆಗೆ ತೆಗೆದುಕೊಂಡ ಸಿಎಂ ಗೆ ಉಸ್ತುವಾರಿ ಸಚಿವರು ಕಂಡಿಲ್ಲವೇ? Read More »

ಪೊಲೀಸ್ ಸಬ್‌ಇನ್ಸ್​​ಪೆಕ್ಟರ್​​ ಆಗಬೇಕು ಎಂದು ಹೊಟ್ಟೆಯಲ್ಲಿ ಇದ್ದ ಕಂದನನ್ನು ಪಣಕ್ಕಿಟ್ಟ ಮಹಿಳೆ

ಕಲಬುರಗಿ: ಪೊಲೀಸ್ ಸಬ್‌ಇನ್ಸ್​​ಪೆಕ್ಟರ್​​ ಆಗಬೇಕು ಎನ್ನುವ ಚಲ ಹೊಂದಿರುವ ಮಹಿಳೆ, ತಾನು ಗರ್ಭಿಣಿ ಎನ್ನುವುದನ್ನು ಮರೆತು ಫಿಜಿಕಲ್ ಟೆಸ್ಟ್​​ನಲ್ಲಿ ಭಾಗವಹಿಸಿದ ಅಚ್ಚರಿ ಮೂಡಿಸಿದ್ದಾರೆ. ಬೀದರ್​ ಜಿಲ್ಲೆಯ ಅಶ್ವಿನಿ ಸಂತೋಶ (24) ಕೊರೆ ಎಂಬ ಮಹಿಳೆ ಇಂಜಿನಿಯರಿಂಗ್ ಪದವಿ ಪೂರೈಸಿದ ಬಳಿಕ ಪೊಲೀಸ್ ಸಬ್ ಇನ್ಸ್​​ಪೆಕ್ಟರ್​​ ಆಗಬೇಕು ಅನ್ನೋ ಕನಸಿತ್ತು. ಇದೇ ಕಾರಣಕ್ಕೆ ಕಠಿಣ ಪರಿಶ್ರಮ ಹಾಕಿದ್ದು, ಈಗಾಗಲೇ ಎರಡು ಬಾರಿ ಫಿಜಿಕಲ್ ಟೆಸ್ಟ್‌ನಲ್ಲಿ ಪಾಸ್ ಆಗಿದ್ದಾರೆ. ಇವರು ಲಿಖಿತ ಪರೀಕ್ಷೆ (ರಿಟನ್ ಟೆಸ್ಟ್)​​ ಮುಗಿಸಿಲ್ಲ. ಎರಡು ಬಾರಿ

ಪೊಲೀಸ್ ಸಬ್‌ಇನ್ಸ್​​ಪೆಕ್ಟರ್​​ ಆಗಬೇಕು ಎಂದು ಹೊಟ್ಟೆಯಲ್ಲಿ ಇದ್ದ ಕಂದನನ್ನು ಪಣಕ್ಕಿಟ್ಟ ಮಹಿಳೆ Read More »

ರಾಜ್ಯದಲ್ಲಿ ಏರುತ್ತಿರುವ ಕೋವಿಡ್ 3ನೇ ಅಲೆ| ಇಂದು ತಜ್ಞರ ಜೊತೆ ಸಿಎಂ ಸಭೆ| ಸ್ವಾತಂತ್ರ್ಯ ಬಳಿಕ ಟಫ್ ರೂಲ್ಸ್ ಜಾರಿ, ಲಾಕ್ ಡೌನ್ ಭೀತಿ…!?

ಬೆಂಗಳೂರು : ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಕೊರೊನಾ 3 ನೇ ಅಲೆ ಆತಂಕದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಮಾಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ. ರಾಜ್ಯದಲ್ಲಿ ಹಂತ ಹಂತವಾಗಿ ಅನ್ ಲಾಕ್ ಮಾಡಲಾಗಿದ್ದು, ಶ್ರಾವಣ ಮಾಸದ ಸೋಮವಾರ ಮತ್ತು ಭೀಮನ ಅಮಾವಾಸ್ಯೆ ದಿನ ಜನ ದೇವಸ್ಥಾನಗಳಿಗೆ ಲಗ್ಗೆ ಇಟ್ಟಿದ್ದರು. ಶ್ರಾವಣ ಮಾಸದಲ್ಲಿ ಸಾಲು ಸಾಲು ಹಬ್ಬಗಳು ಬರುತ್ತಿರುವ ಹಿನ್ನೆಲೆಯಲ್ಲಿ ದೇವಸ್ಥಾನಗಳಿಗೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು

ರಾಜ್ಯದಲ್ಲಿ ಏರುತ್ತಿರುವ ಕೋವಿಡ್ 3ನೇ ಅಲೆ| ಇಂದು ತಜ್ಞರ ಜೊತೆ ಸಿಎಂ ಸಭೆ| ಸ್ವಾತಂತ್ರ್ಯ ಬಳಿಕ ಟಫ್ ರೂಲ್ಸ್ ಜಾರಿ, ಲಾಕ್ ಡೌನ್ ಭೀತಿ…!? Read More »

ಹಬ್ಬ ಹರಿದಿನಗಳ ಆಚರಣೆಗೆ ಹೊಸ ಗೈಡ್ಲೈನ್ಸ್ ಹೊರಡಿಸಿದ ರಾಜ್ಯ ಸರ್ಕಾರ

ಬೆಂಗಳೂರು : 2021ನೇ ಸಾಲಿನ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಿನಲ್ಲಿ ನಡೆಯಲಿರುವ ಗಣೇಶ ಚತುರ್ಥಿ, ಮೋಹರಂ ಮತ್ತು ಇತರೆ ಹಬ್ಬಗಳ ಆಚರಣೆ ಸಂದರ್ಭದಲ್ಲಿ ಕೋವಿಡ್-19 ಸೋಂಕು ನಿಯಂತ್ರಣ ತಡೆಗಟ್ಟಲು ಅನುಸರಿಸಬೇಕಾದಂತ ಮಾರ್ಗಸೂಚಿ ಕ್ರಮಗಳನ್ನು ಪ್ರಕಟಿಸಿದೆ. ಈ ಕುರಿತಂತೆ ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್ ಆದೇಶ ಹೊರಡಿಸಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯವು 2021ರ ಆಗಸ್ಟ್ ರಿಂದ ಅಕ್ಟೋಬರ್ ಮಾಹೆಯಲ್ಲಿ ಆಚರಿಸಲಾಗುವ ಹಬ್ಬಗಳಾದಂತ ಮೋಹರಂ, ಶ್ರೀಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ, ದುರ್ಗಾ ಪೂಜೆ

ಹಬ್ಬ ಹರಿದಿನಗಳ ಆಚರಣೆಗೆ ಹೊಸ ಗೈಡ್ಲೈನ್ಸ್ ಹೊರಡಿಸಿದ ರಾಜ್ಯ ಸರ್ಕಾರ Read More »

ವೀಕೆಂಡ್ ಕರ್ಪ್ಯೂ ಹಿನ್ನೆಲೆ| ಮಂಗಳೂರು ವಿ.ವಿ ವಾರಾಂತ್ಯ ಪರೀಕ್ಷೆಗಳು ಮುಂದೂಡಿಕೆ

ಮಂಗಳೂರು: ಕೋವಿಡ್ ನಿಯಂತ್ರಣದ ಹಿನ್ನಲೆಯಲ್ಲಿ ಜಿಲ್ಲಾಡಳಿತ ವಾರಾಂತ್ಯ ಕರ್ಫ್ಯೂವನ್ನು ಮುಂದುವರಿಸುವ ನಿರ್ಧಾರ ತೆಗೆದುಕೊಂಡಿದ್ದು ಈ ಹಿನ್ನೆಲೆಯಲ್ಲಿ ಆ.14ರ ಶನಿವಾರ ಹಾಗೂ ಆ.28ರಂದು ನಿಗದಿಯಾಗಿದ್ದ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಉಳಿದಂತೆ ಯಾವುದೇ ಪರೀಕ್ಷೆಗಳಲ್ಲಿ ಬದಲಾವಣೆ ಇರುವುದಿಲ್ಲ. ಈ ಹಿಂದೆ ನಿಗದಿಪಡಿಸಿದ ವೇಳಾಪಟ್ಟಿಯಂತೆ ಬಾಕಿ ಉಳಿದ ಪರೀಕ್ಷೆಗಳು ನಡೆಯಲಿದ್ದು ಯಾವುದೇ ಬದಲಾವಣೆ ಇರುವುದಿಲ್ಲ. ವಾರಾಂತ್ಯದ ಪರೀಕ್ಷೆಗಳನ್ನು ಮಾತ್ರ ಬದಲಾವಣೆ ಮಾಡಿರುವುದಾಗಿ ವಿ.ವಿ ಪ್ರಕಟಣೆ ತಿಳಿಸಿದೆ.

ವೀಕೆಂಡ್ ಕರ್ಪ್ಯೂ ಹಿನ್ನೆಲೆ| ಮಂಗಳೂರು ವಿ.ವಿ ವಾರಾಂತ್ಯ ಪರೀಕ್ಷೆಗಳು ಮುಂದೂಡಿಕೆ Read More »

ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಮಸೀದಿಯಲ್ಲಿ ಶ್ರಮದಾನ

ಶನಿವಾರಸಂತೆ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕೊಡ್ಲಿಪೇಟೆ ಸ್ವಸಹಾಯ ಸಂಘದ ವತಿಯಿಂದ 75ನೇ ಸ್ವಾತಂತ್ರ್ಯೋತ್ಸವ ಪ್ರಯುಕ್ತ ಕೊಡ್ಲಿಪೇಟೆಯ ಜಾಮೀಯಾ ಮಸ್ಜಿದ್‍ನಲ್ಲಿ ಸ್ವಚ್ಛತಾ ಕಾರ್ಯ ಹಮ್ಮಿಕೊಳ್ಳಲಾಯಿತು. ಈ ಬಗ್ಗೆ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕೊಡ್ಲಿಪೇಟೆ ವಲಯ ಮೇಲ್ವೀಚಾರಕ ಭರತ್‍ಕುಮಾರ್ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಹಲವಾರು ಕಾರ್ಯಕ್ರಮಗಳು ಅನುಷ್ಠಾನಗೊಂಡಿದ್ದು ರಾಜ್ಯದಲ್ಲಿ ಸ್ವಸಹಾಯ ಸಂಘಗಳ ಮೂಲಕ ಜನಮನ್ನಣೆಗೊಂಡಿದೆ ಎಂದರು. ಕಳೆದ ಮತ್ತು ಪ್ರಸ್ತುತ ವರ್ಷ ಕೋವಿಡ್ ಸಂಧಿಘ್ನ ಪರಿಸ್ಥಿತಿಯಲ್ಲಿ ಬಡವರಿಗೆ ಆಹಾರ ಕಿಟ್ ವಿತರಣೆ ಮಾಡುವ ಮೂಲಕ ಸಮಾಜ

ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಮಸೀದಿಯಲ್ಲಿ ಶ್ರಮದಾನ Read More »

ನಾನು ಹೇಳಿದ್ದು ಹೌದು ತಪ್ಪು ಎಂದು ಕ್ಷಮೆಯಾಚಿಸಿದ ಈಶ್ವರಪ್ಪ

ಬೆಳಗಾವಿ: ಕಾಂಗ್ರೆಸ್ ನಾಯಕರ ವಿರುದ್ಧ ಅವಾಚ್ಯ ಬಳಸಿದಕ್ಕೆ ಸಚಿವ ಈಶ್ವರಪ್ಪ “ನಾನು ಆ ಪದ ಬಳಸಬಾರದಿತ್ತು, ಆದರೆ ಬಳಸಿದ್ದೇಕ್ಕೆ ಕ್ಷಮೆಯನ್ನು ಯಾಚಿಸಿದ್ದೇನೆ” ಎಂದು ಕ್ಷಮೆಯಸಿದ್ದಾರೆ. ಕಾಂಗ್ರೆಸ್‍ನವರ ವಿರುದ್ಧ ಅಶ್ಲೀಲ ಶಬ್ದ ಬಳಸಿದ ವಿಚಾರವಾಗಿ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ನಾನು ಹೇಳಿದ್ದು ಹೌದು, ಆ ಒಂದು ಪದ ಬಳಸಿದ್ದು ತಪ್ಪು. ಸಿಟ್ಟಿನ ಭರದಲ್ಲಿ ಹೇಳಿ ಆ ಪದವನ್ನು ಹಿಂಪಡೆದುಕೊಂಡಿದ್ದೇನೆ. ಆದರೆ ಸುಲಭ್ ಶೌಚಾಲಯಕ್ಕೆ ನರೇಂದ್ರ ಮೋದಿ ಅವರ ಹೆಸರಿಡಬೇಕು ಎಂದು ಹೇಳಿದನ್ನು ಕಾಂಗ್ರೆಸ್ ಅವರು ಒಪ್ಪುತ್ತಾರಾ? ಕಾಂಗ್ರೆಸ್ ಅವರು

ನಾನು ಹೇಳಿದ್ದು ಹೌದು ತಪ್ಪು ಎಂದು ಕ್ಷಮೆಯಾಚಿಸಿದ ಈಶ್ವರಪ್ಪ Read More »

ಬೆಳ್ತಂಗಡಿ : ಅಜ್ಜನ ಜೊತೆಗಿದ್ದ ಮಗು ನಾಪತ್ತೆ ಪ್ರಕರಣ ಎರಡು ವರ್ಷದ ಹೆಣ್ಣು ಮಗು ಶವವಾಗಿ ಪತ್ತೆ

ಬೆಳ್ತಂಗಡಿ: ಇಲ್ಲಿನ ಸುಲ್ಕೇರಿ ಗ್ರಾಮದಲ್ಲಿ ಆ.10 ರ ಮಧ್ಯಾಹ್ನ ನಾಪತ್ತೆಯಾಗಿದ್ದ ಎರಡು ವರ್ಷದ ಹೆಣ್ಣು ಮಗು ಇಂದು ಶವವಾಗಿ ಪತ್ತೆಯಾಗಿದೆ. ಜಂತಿಗೂಳಿಯ ಪರಾರಿ ನಿವಾಸಿ ಸಂಜೀವ ಶೆಟ್ಟಿ ಅವರ ಪುತ್ರಿ ಸುಚಿತ್ರ ಮತ್ತು ಸುಭಾಷ್ ದಂಪತಿಯು ತಮ್ಮ ಎರಡು ವರ್ಷದ ಹೆಣ್ಣು ಮಗುವಿನೊಂದಿಗೆ ಸುಲ್ಕೇರಿ ಯ ತವರು ಮನೆಯಲ್ಲಿ ವಾಸವಿದ್ದರು. ಮಂಗಳವಾರ ಮಧ್ಯಾಹ್ನ ಸುಚಿತ್ರಾ ಅವರು ಮಗುವನ್ನು ಅಜ್ಜನೊಂದಿಗೆ ಮನೆಯಲ್ಲಿ ಬಿಟ್ಟು ತಾಯಿಯೊಂದಿಗೆ ಹುಲ್ಲು ತರಲು ಎಂದು ತೋಟಕ್ಕೆ ಹೋಗಿದ್ದರು ಎನ್ನಲಾಗಿದೆ. ಹಿಂತಿರುಗಿ ಬರುವಷ್ಟರಲ್ಲಿ ಮಗು ಕಾಣಿಸದೆ

ಬೆಳ್ತಂಗಡಿ : ಅಜ್ಜನ ಜೊತೆಗಿದ್ದ ಮಗು ನಾಪತ್ತೆ ಪ್ರಕರಣ ಎರಡು ವರ್ಷದ ಹೆಣ್ಣು ಮಗು ಶವವಾಗಿ ಪತ್ತೆ Read More »

ಬ್ಯಾಂಕ್ ನೌಕರರಿಗೆ ಗುಡ್ ನ್ಯೂಸ್| ವಾರ್ಷಿಕ ಸರ್ಪ್ರೈಜ್ ರಜೆ ಗಿಪ್ಟ್ ನೀಡಿದ ಆರ್ ಬಿ ಐ|

ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ಉದ್ಯೋಗಿಗಳಿಗೆ ವಾರ್ಷಿಕ 10 ದಿನಗಳ ವಾರ್ಷಿಕ ರಜೆಯ ಸರ್ಪ್ರೈಜ್ ಗಿಫ್ಟ್ ನೀಡಿದೆ. ವಾಣಿಜ್ಯ ಬ್ಯಾಂಕುಗಳು, ಗ್ರಾಮೀಣಾಭಿವೃದ್ಧಿ ಬ್ಯಾಂಕುಗಳು ಮತ್ತು ಸಹಕಾರಿ ಬ್ಯಾಂಕುಗಳಿಗೆ ಅನ್ವಯವಾಗುವಂತೆ ಪ್ರತಿ ವರ್ಷ ಕನಿಷ್ಠ 10 ದಿನಗಳ ಅನಿರೀಕ್ಷಿತ ನೀಡಬಹುದಾಗಿದೆ. ಟ್ರೆಜರಿ ಆಪರೇಷನ್, ಕರೆನ್ಸಿ, ರಿಸ್ಕ್ ಮಾಡೆಲಿಂಗ್ ಮೊದಲಾದ ಅತಿಸೂಕ್ಷ್ಮ ವಿಭಾಗಗಳಲ್ಲಿ ಕೆಲಸ ಮಾಡುವವರಿಗೆ ಪ್ರತಿವರ್ಷ 10 ದಿನಗಳ ರಜೆ ನೀಡಲಾಗುವುದು. ಇಂತಹ ರಜೆಗಳನ್ನು ನೀಡುವ ಬಗ್ಗೆ ಮೊದಲೇ ತಿಳಿಸುವುದಿಲ್ಲ. ಅನಿರೀಕ್ಷಿತ ರಜೆ ನೀಡಲಾಗುತ್ತದೆ. ಬ್ಯಾಂಕ್

ಬ್ಯಾಂಕ್ ನೌಕರರಿಗೆ ಗುಡ್ ನ್ಯೂಸ್| ವಾರ್ಷಿಕ ಸರ್ಪ್ರೈಜ್ ರಜೆ ಗಿಪ್ಟ್ ನೀಡಿದ ಆರ್ ಬಿ ಐ| Read More »