ರಾಜ್ಯ

ಕೇರಳದಲ್ಲಿ ಮತ್ತೆ ಕಾಣಿಸಿಕೊಂಡ ನಿಫಾ| ಬಾಲಕನ ಬಲಿ ಪಡೆದ ಬಾವಲಿ ಜ್ವರ

ಕೋಝಿಕೋಡ್: ಕೇರಳದಲ್ಲಿ ಆತಂಕ ಮೂಡಿಸಿದ್ದ ನಿಫಾ ವೈರಸ್ ಮತ್ತೆ ಕಾಣಿಸಿಕೊಂಡಿದೆ. ರಾಜ್ಯದ ಕೋಳಿಕೋಡ್ ನಲ್ಲಿ 13 ವರ್ಷದ ಬಾಲಕ ನಿಫಾ ವೈರಸ್ ನಿಂದ ಸಾವನ್ನಪ್ಪಿದ್ದಾನೆ ಎಂದು ಆರೋಗ್ಯ ಇಲಾಖೆ ಮೂಲಗಳು ಭಾನುವಾರ ತಿಳಿಸಿವೆ. ಸೋಂಕಿಗೊಳಗಾಗಿರುವ ಬಾಲಕ ಛತಮಂಗಳಂ ಹತ್ತಿರ ಬಳಿಯಿರುವ ಚುಲೂರ್ ಮೂಲದವನೆಂದು ತಿಳಿದುಬಂದಿದೆ.ಪುಣೆ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಗೆ ಕಳುಹಿಸಲಾದ ಹುಡುಗನ ಮಾದರಿಗಳು ನಿಫಾ ವೈರಸ್ ಇರುವಿಕೆಯನ್ನು ದೃಢಪಡಿಸಿವೆ. ಕೇಂದ್ರ ಸರ್ಕಾರವು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದ ತಂಡವನ್ನು ರಾಜ್ಯಕ್ಕೆ ರವಾನಿಸಿದೆ, ಅದು ಭಾನುವಾರ ತಲುಪಲಿದೆ. […]

ಕೇರಳದಲ್ಲಿ ಮತ್ತೆ ಕಾಣಿಸಿಕೊಂಡ ನಿಫಾ| ಬಾಲಕನ ಬಲಿ ಪಡೆದ ಬಾವಲಿ ಜ್ವರ Read More »

ಈ ಪುಟ್ಟ ಕೈ ಹಾವು ಹಿಡಿಯೋದಕ್ಕೂ ಸೈ| ಆರರ ಪೋರಿಯ ಉರಗ ಪ್ರೇಮ ಕಂಡರೆ ಅಚ್ಚರಿಯಾಗುತ್ತೆ

ಮಡಿಕೇರಿ: ಆರು ವರ್ಷದ ಬಾಲಕಿಯೊಬ್ಬಳು ಮನೆಯಂಗಳಕ್ಕೆ ಬಂದ ಹಾವನ್ನು ಹಿಡಿದಿದು ಗ್ರಾಮಸ್ಥರಿಗೆ ಅಚ್ಚರಿ ಮೂಡಿಸಿರುವ ಘಟನೆ ವೀರಾಜಪೇಟೆ ತಾಲೂಕಿನ ಕಾವಾಡಿ ಗ್ರಾಮದಲ್ಲಿ ನಡೆದಿದೆ. ಈಕೆ ಕಾವಾಡಿ ಗ್ರಾಮದ ರೋಷನ್ ಎಂಬವರ ಆರು ವರ್ಷದ ಮಗಳು ತನುಷಾ. ತನ್ನ ಎರಡು ವರ್ಷದ ತಂಗಿಯೊಂದಿಗೆ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದಾಗ ಹಾವೊಂದು ಬರುತ್ತಿರುವುದನ್ನು ಕಂಡಿದ್ದಾಳೆ. ನೋಡುತ್ತಿದ್ದಂತೆ ಅದು ಮನೆಯ ಸಮೀಪದಲ್ಲೇ ಇರುವ ಪೊದೆಯೊಳಕ್ಕೆ ಹೋಗುತ್ತಿದ್ದನ್ನು ತನುಷಾ ನೋಡಿದ್ದಾಳೆ. ಕೂಡಲೇ ಮನೆಯೊಳಗಿದ್ದ ಅಮ್ಮನನ್ನು ಕೂಗಿ ಕರೆದು ಅಮ್ಮ ಹಾವು ಬಂದಿದೆ ಎಂದು ಹೇಳಿದ್ದಾಳೆ.

ಈ ಪುಟ್ಟ ಕೈ ಹಾವು ಹಿಡಿಯೋದಕ್ಕೂ ಸೈ| ಆರರ ಪೋರಿಯ ಉರಗ ಪ್ರೇಮ ಕಂಡರೆ ಅಚ್ಚರಿಯಾಗುತ್ತೆ Read More »

ಶಾಸಕರಿಗೆ ಪುಷ್ಪವೃಷ್ಟಿ ಸುರಿಸಿದ ಪೊಲೀಸರು| ಎಸ್ಪಿಯಿಂದ ಶೋಕಾಸ್ ನೋಟಿಸ್ ಜಾರಿ|

ಬೆಳಗಾವಿ: ಎರಡು ದಿನಗಳ ಹಿಂದೆ ಜನ್ಮ ದಿನ ಆಚರಿಸಿಕೊಂಡ ಕಿತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮಹಾಂತೇಶ ದೊಡ್ಡಗೌಡರ ದಂಪತಿ ಮೇಲೆ ಪೊಲೀಸರು ಪುಷ್ಪವೃಷ್ಟಿ ಮಾಡಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕ ವಲಯದಲ್ಲಿ ಟೀಕೆಗೊಳಗಾಗಿದೆ. ಪಟ್ಟಣದಲ್ಲಿರುವ ಅವರ ಮನೆಯಲ್ಲಿ ಶಾಸಕ ಮತ್ತು ಅವರ ಪತ್ನಿ ಮಂಜುಳಾ ಅವರನ್ನು ರಾಜ-ಮಹಾರಾಣಿಯಂತೆ ಕೂರಿಸಿ ಪುಷ್ಪವೃಷ್ಟಿ ಮಾಡಿರುವುದು ಎಷ್ಟು ಸರಿ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ‘ಶಾಸಕರು ಪೊಲೀಸರಿಂದ ಹೂಗುಚ್ಚ ಸ್ವೀಕರಿಸಬೇಕಿತ್ತು. ಅದರ ಬದಲಾಗಿ ಪುಷ್ಪವೃಷ್ಟಿ

ಶಾಸಕರಿಗೆ ಪುಷ್ಪವೃಷ್ಟಿ ಸುರಿಸಿದ ಪೊಲೀಸರು| ಎಸ್ಪಿಯಿಂದ ಶೋಕಾಸ್ ನೋಟಿಸ್ ಜಾರಿ| Read More »

ಕೊಲ್ಲೂರು ಮೂಕಾಂಬಿಕೆ ದರ್ಶನಕ್ಕೆ ಬರುವ ಭಕ್ತರಿಗೆ ಆಧಾರ್ ಕಡ್ದಾಯ

ಕುಂದಾಪುರ: ಇನ್ನು ಮುಂದೆ ಕೊಲ್ಲೂರು ಶ್ರೀಮೂಕಾಂಬಿಕೆ ದರ್ಶನಕ್ಕೆ ಬರುವ ಭಕ್ತರಿಗೆ ಆಧಾರ್ ಕಡ್ಡಾಯವಾಗಿದೆ ಎಂದು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಪಿ.ಬಿ. ಮಹೇಶ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕೋವಿಡ್-19 ಹಿನ್ನೆಲೆ ಪ್ರಸ್ತುತ ವಿದ್ಯಾಮಾನಗಳನ್ನು ಪರಿಗಣಿಸಿ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಉಡುಪಿ ಜಿಲ್ಲಾಧಿಕಾರಿಗಳ ಆದೇಶದಂತೆ ಸೆಪ್ಟಂಬರ್ 4ರಿಂದ ಅನ್ವಯವಾಗುವಂತೆ ಮುಂದಿನ ಆದೇಶದವರೆಗೆ ಈ ನಿಯಮ ಜಾರಿಯಲ್ಲಿರಲಿದೆ. ದೇವಾಲಯ ಪ್ರವೇಶದ್ವಾರದಲ್ಲಿ ದೇವಾಲಯ ಪ್ರವೇಶಿಸುವ ಎಲ್ಲಾ ಭಕ್ತಾದಿಗಳ ಆಧಾರ್ ಕಾರ್ಡ್ ಪರಿಶೀಲಿಸಿ ಹೆಸರು,ಊರು ಹಾಗೂ ಸಂಪರ್ಕ ಸಂಖ್ಯೆಯನ್ನು ದಾಖಲಿಸಲಾಗುತ್ತದೆ. ಕೇರಳ ರಾಜ್ಯದಿಂದ ಆಗಮಿಸುವ ಭಕ್ತರು

ಕೊಲ್ಲೂರು ಮೂಕಾಂಬಿಕೆ ದರ್ಶನಕ್ಕೆ ಬರುವ ಭಕ್ತರಿಗೆ ಆಧಾರ್ ಕಡ್ದಾಯ Read More »

ಪ್ರವಾಹಕ್ಕೆ ತತ್ತರಿಸಿದ ಅಮೇರಿಕಾ: ಸಾವು ನೋವಿನ ಪ್ರಮಾಣ ಏರಿಕೆ -ಮಹಿಳೆ ನರಳಾಟವನ್ನು ಕಂಡು ಹೋದ ಕನ್ನಡಿಗ ದುರ್ಮರಣ

ಬೆಂಗಳೂರು: ಅಮೇರಿಕಾದಲ್ಲಿ ಉಂಟಾದ ಭೀಕರ ಪ್ರವಾಹದಲ್ಲಿ ಮಹಿಳೆಯೋರ್ವರನ್ನು ರಕ್ಷಿಸಲು ಹೋಗಿ ಕನ್ನಡಿಗನೊಬ್ಬ ಸಾವನಪ್ಪಿದ ಸುದ್ದಿಯನ್ನು ಅಮೇರಿಕಾದ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. ಚಿಕ್ಕಬಳ್ಳಾಪುರ, ಚಿಂತಾಮಣಿ ತಾಲೂಕಿನ ಬೊಮ್ಮೆಪಲ್ಲಿ ನಿವಾಸಿ ಧನುಷ್ ರೆಡ್ಡಿ(31) ಮೃತ ವ್ಯಕ್ತಿ. ಇವರು ಕಳೆದ ಬುಧವಾರ ಪ್ರವಾಹದಲ್ಲಿ ಸಿಲುಕಿದ್ದ ಮಹಿಳೆಯ ನರಳಾಟವನ್ನು ಕೇಳಿ ರಕ್ಷಿಸಲು ಮುಂದಾದ ಗಿದ್ದರು. ಅದರೆ ಇದೇ ವೇಳೆ ಪ್ರವಾಹದ ನೀರಲ್ಲಿ ಕೊಚ್ಚಿ ಹೋಗಿದ್ದಾರೆ. ಬೃಹತ್ ಗಾತ್ರದ ಪೈಪ್ ಲೈನಲ್ಲಿ ಕೊಚ್ಚಿ ಹೋದ ಧನುಷ್ ರೆಡ್ಡಿ ಮೃತ ದೇಹ ಒಂದು ದಿನದ

ಪ್ರವಾಹಕ್ಕೆ ತತ್ತರಿಸಿದ ಅಮೇರಿಕಾ: ಸಾವು ನೋವಿನ ಪ್ರಮಾಣ ಏರಿಕೆ -ಮಹಿಳೆ ನರಳಾಟವನ್ನು ಕಂಡು ಹೋದ ಕನ್ನಡಿಗ ದುರ್ಮರಣ Read More »

BPL ಕಾರ್ಡ್ ದಾರರಿಗೆ ಬಿಗ್ ಶಾಕ್ ನೀಡಿದ ರಾಜ್ಯ ಸರ್ಕಾರ| ವಾರ್ಷಿಕ 1.20 ಲಕ್ಷ ರೂ. ಆದಾಯ ಹೊಂದಿರುವವರ ಕಾರ್ಡ್ ರದ್ದು…!

ಬೆಂಗಳೂರು: ರಾಜ್ಯ ಸರ್ಕಾರ BPL ಕಾರ್ಡ್ ಹೊಂದಿರುವವರಿಗೆ ದೊಡ್ಡ ಶಾಕ್ ನೀಡಿದೆ. ಇತ್ತೀಚೆಗೆ ಫ್ರಿಡ್ಜ್ , ಟಿವಿ ಬೈಕ್ ಇದ್ದವರ ಬಿಪಿಎಲ್ ಕಾರ್ಡ್ ಕ್ಯಾನ್ಸಲ್ ಮಾಡುವುದಾಗಿ ಸುಳಿವು ನೀಡಿದ್ದ ಸರ್ಕಾರದ ನಡೆ ವಿರುದ್ಧ ವಿಪಕ್ಷಗಳು ಹಾಗೂ ಮಧ್ಯಮ ವರ್ಗದ ಜನರು ತೀವ್ರ ಆಕ್ರೋಶ ಹೊರಹಾಕಿದ್ದರು. ಇದೀಗ ರಾಜ್ಯದಲ್ಲಿ ವಾರ್ಷಿಕ 1.20 ಲಕ್ಷ ರೂ. ಆದಾಯ ಹೊಂದಿರುವವರ ಬಿಪಿಎಲ್ ಕಾರ್ಡ್ ದಾರರ ಕಾರ್ಡ್ ರದ್ದು ಮಾಡಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ತಿಳಿಸಿದೆ. ಅಲ್ಲದೇ ಸಾಕಷ್ಟು

BPL ಕಾರ್ಡ್ ದಾರರಿಗೆ ಬಿಗ್ ಶಾಕ್ ನೀಡಿದ ರಾಜ್ಯ ಸರ್ಕಾರ| ವಾರ್ಷಿಕ 1.20 ಲಕ್ಷ ರೂ. ಆದಾಯ ಹೊಂದಿರುವವರ ಕಾರ್ಡ್ ರದ್ದು…! Read More »

ಹೆಡ್ ಕಾನ್‍ಸ್ಟೇಬಲ್ ಸರಕ್ಕೆ ಕನ್ನ ಹಾಕಿದ ಖದೀಮರು

ಮೈಸೂರು: ಹೆಡ್ ಕಾನ್‍ಸ್ಟೇಬಲ್ ಸರ ಕದ್ದು ಪರಾರಿಯಾಗಿರುವ ಘಟನೆ ನಗರದ ಸಂತ ಫಿಲೋಮಿನಾ ಚರ್ಚ್ ಬಳಿ ಗುರುವಾರ ರಾತ್ರಿ ನಡೆದಿದೆ. ಇಲಿಯಾಸ್ ಸರ ಕಳೆದುಕೊಂಡ ಹೆಡ್ ಕಾನ್‍ಸ್ಟೇಬಲ್. ಇವರು ಮಫ್ತಿಯಲ್ಲಿದ್ದಾಗ ಕಳ್ಳರು ಸರವನ್ನು ಕದ್ದು ಪರಾರಿಯಾಗಿದ್ದರು. 32 ಗ್ರಾಂ. ಚಿನ್ನದ ಸರ ಕಸಿದ ಕಳ್ಳರು, ನಂತರ ಓಡಲಾಗದೆ ಮಿಲಾದ್ ಪಾರ್ಕ್‍ನಲ್ಲಿ ಇಬ್ಬರು ಕಳ್ಳರು ಅಡಗಿದ್ದರು. ತಕ್ಷಣ ಸಾರ್ವಜನಿಕರು ಇಬ್ಬರನ್ನೂ ಹಿಡಿದು ಸರ ಸಮೇತ ಪೆÇಲೀಸರ ವಶಕ್ಕೆ ನೀಡಿದ್ದಾರೆ.ಲಷ್ಕರ್ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆಯನ್ನು ಪೆÇಲೀಸರು

ಹೆಡ್ ಕಾನ್‍ಸ್ಟೇಬಲ್ ಸರಕ್ಕೆ ಕನ್ನ ಹಾಕಿದ ಖದೀಮರು Read More »

ಅಕ್ರಮವಾಗಿ ರಸಗೊಬ್ಬರ ದಾಸ್ತಾನು:47 ಕೆ.ಜಿ.ಯೂರಿಯಾ ಚೀಲ ವಶಕ್ಕೆ

ಹಾಸನ: ಅಕ್ರಮವಾಗಿ ರಸಗೊಬ್ಬರ ದಾಸ್ತಾನು ಮಾಡಿ, ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ಹಿನ್ನೆಲೆ ಅಧಿಕಾರಿಗಳು ದಾಳಿ ನಡೆಸಿ 47 ಕೆ.ಜಿ. ರಸಗೊಬ್ಬರವನ್ನು ವಶಪಡಿಸಿಕೊಂಡಿದ್ದಾರೆ.ಜಿಲ್ಲೆಯ ಅರಸೀಕೆರೆ ತಾಲೂಕಿನ ಅಣ್ಣಾಯಕನಹಳ್ಳಿ, ಕೆಳಗಲಹಟ್ಟಿ ಗ್ರಾಮದಲ್ಲಿ ಘಟನೆ ನಡೆದಿದೆ. ಗ್ರಾಮದ ಜಯಶಂಕರ್ ಅವರ ಮನೆಯ ಮುಂಭಾಗ ಯೂರಿಯಾ ರಸಗೊಬ್ಬರವನ್ನು ಹೆಚ್ಚಿನ ಬೆಲೆಗೆ ರೈತರಿಗೆ ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ ಎಂಬ ದೂರು ಕೇಳಿ ಬಂದಿತ್ತು. ಈ ಖಚಿತ ಮಾಹಿತಿ ಮೇರೆಗೆ ಸಹಾಯಕ ಕೃಷಿ ನಿರ್ದೇಶಕ ಅಶೋಕ್, ರಸಗೊಬ್ಬರ ನಿರೀಕ್ಷಕ ಪ್ರಭಾವತಿ ಮತ್ತು ಪೆÇಲೀಸರ ತಂಡ

ಅಕ್ರಮವಾಗಿ ರಸಗೊಬ್ಬರ ದಾಸ್ತಾನು:47 ಕೆ.ಜಿ.ಯೂರಿಯಾ ಚೀಲ ವಶಕ್ಕೆ Read More »

ಮಂಗಳೂರು: ದುಷ್ಕರ್ಮಿಗಳ ತಂಡದಿಂದ ಯುವಕನಿಗೆ ಚೂರಿ ಇರಿತ

ಮಂಗಳೂರು: ವಕ್ತಿಯೊಬ್ಬನಿಗೆ ತಂಡವೊಂದು ಚೂರಿ ಇರಿದ ಘಟನೆ ಮಂಗಳೂರು ಹೊರವಲಯದ ಎದುರುಪದವು ಎಂಬಲ್ಲಿ ನಿನ್ನೆ ತಡರಾತ್ರಿ ನಡೆದಿದೆ.ಇರಿತಕ್ಕೊಳಗಾದವರನ್ನು ಬಾಗಲಕೋಟೆ ಮೂಲದ ನಿಂಗಣ್ಣ ಎಂದು ಗುರುತಿಸಲಾಗಿದೆ. ಚೂರಿ ಎದುರುಪದವು ನಿವಾಸಿ ದಿವಾಕರ್ ಯಾನೆ ದೀವ ತಂಡದಿಂದ ಈ ಕೃತ್ಯ ನಡೆದಿದೆ ಎಂದು ತಿಳಿದು ಬಂದಿದೆ. ಮದ್ಯಪಾನದ ಅಮಲಿನಲ್ಲಿ ನಿಂಗಣ್ಣ ಹಾಗೂ ತಂಡದೊಂದಿಗೆ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಜಗಳ ಪ್ರಾರಂಭವಾಗಿ ಕೊನೆಗೆ ಚೂರಿ ಇರಿಯುವ ಹಂತಕ್ಕೆ ಹೋಗಿದೆ.ಚೂರಿ ಇರಿತದ ಪರಿಣಾಮ ನಿಂಗಣ್ಣ ತಲೆಗೆ ಗಂಭೀರ ಗಾಯವಾಗಿದ್ದು

ಮಂಗಳೂರು: ದುಷ್ಕರ್ಮಿಗಳ ತಂಡದಿಂದ ಯುವಕನಿಗೆ ಚೂರಿ ಇರಿತ Read More »

ಮೈಸೂರು ವಿವಿ ಪದವಿ ಪರೀಕ್ಷೆಗಳು ಮುಂದೂಡಿಕೆ

ಮೈಸೂರು: ಶುಕ್ರವಾರದಿಂದ (ಸೆ.3) ಆರಂಭವಾಗಬೇಕಿದ್ದ ಮೈಸೂರು ವಿಶ್ವವಿದ್ಯಾಲಯದ ಪದವಿ ಪರೀಕ್ಷೆಗಳು ಮುಂದೂಡಿಕೆಯಾಗಿವೆ. ಒಂದೇ ದಿನ ಎರಡು ವಿಷಯದ ಪರೀಕ್ಷೆ ನಿಗದಿಯಾಗಿತ್ತು. ಹೀಗಾಗಿ ಪರೀಕ್ಷಾ ದಿನಾಂಕ ಬದಲಿಸುವಂತೆ ವಿದ್ಯಾರ್ಥಿಗಳ ಮನವಿ ಸಲ್ಲಿಸಿದ್ದರು. ಹೀಗಾಗಿ ಶುಕ್ರವಾರದ ಬದಲು ಸೆಪ್ಟೆಂಬರ್ 13ರಿಂದ ಪದವಿ ಪರೀಕ್ಷೆಗಳು ಆರಂಭವಾಗಲಿದ್ದು, ಪರೀಕ್ಷೆ ಮುಂದೂಡಿಕೆ ಬಗ್ಗೆ ಮೈಸೂರು ವಿವಿ ಪರೀಕ್ಷಾಂಗ ಕುಲಸಚಿವ ಜ್ಞಾನಪ್ರಕಾಶ್ ಅಧಿಕೃತ ಮಾಹಿತಿ ನೀಡಿದ್ದಾರೆ. “ಪದವಿ ವಿದ್ಯಾರ್ಥಿಗಳ ಹಿತದೃಷ್ಟಿ ನಮಗೆ ಮುಖ್ಯ. ಆದ್ದರಿಂದ ಪರೀಕ್ಷಾ ದಿನಾಂಕವನ್ನು ಮುಂದೂಡಲಾಗಿದೆ. ಪರಿಷ್ಕೃತ ಪರೀಕ್ಷಾ ವೇಳಾಪಟ್ಟಿಯನ್ನು ಆದಷ್ಟು ಬೇಗ

ಮೈಸೂರು ವಿವಿ ಪದವಿ ಪರೀಕ್ಷೆಗಳು ಮುಂದೂಡಿಕೆ Read More »