ರಾಜ್ಯ

ಮಂಗಳೂರು: ಪಿಲಿಕುಳದ ಗೂಡಿನಿಂದ ಹೊರಬಂದಿದ್ದ ಸಿಂಹ..!, ಆತಂಕ ಸೃಷ್ಟಿಸಿದ ಮೃಗರಾಜ

ಮಂಗಳೂರು: ವಾಮಂಜೂರಿನ ಪಿಲಿಕುಳ ಡಾ.ಶಿವರಾಮ ಕಾರಂತ ವನ್ಯಜೀವಿ ಧಾಮದ ಸಿಂಹವೊಂದು ತನ್ನ ಗೂಡಿನಿಂದ ಹೊರಗೆ ಬಂದು ಕೆಲ ಸಮಯ ಪ್ರವಾಸಿಗರು ಸೇರಿದಂತೆ ಅಲ್ಲಿಯ ಸಿಬ್ಬಂದಿಗಳಲ್ಲಿ ಆತಂಕ ಉಂಟುಮಾಡಿದ ಘಟನೆ ಜುಲೈ ತಿಂಗಳಲ್ಲಿ ನಡೆದಿದ್ದು, ತಡವಾಗಿ ಬಹಿರಂಗಗೊಂಡಿದೆ.ಇನ್ನು ಈ ಘಟನೆ ಮೃಗಾಲಯದ ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿ ಸಂಭವಿಸಿದೆ ಎಂದು ಹೇಳಲಾಗುತ್ತಿದ್ದು, ಆದರೆ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ. ಪಿಲಿಕುಳದಲ್ಲಿ ಕಾಡು ಪ್ರಾಣಿಗಳಾದ ಚಿರತೆ, ಹುಲಿ, ನಂತರದಲ್ಲಿ ಸಿಂಹದ ಎನ್‌ಕ್ಲೋಶರ್ ಇದೆ. ಎನ್‌ಕ್ಲೋಶರ್ ಎಂದರೆ ಮೃಗಾಲಯದ ಪ್ರಾಣಿಗಳಿಗೆ ವಿಹರಿಸುವುದಕ್ಕೆ ಬೇಕಾದ ವಿಶಾಲವಾದ ಆವರಣವಾಗಿದೆ. […]

ಮಂಗಳೂರು: ಪಿಲಿಕುಳದ ಗೂಡಿನಿಂದ ಹೊರಬಂದಿದ್ದ ಸಿಂಹ..!, ಆತಂಕ ಸೃಷ್ಟಿಸಿದ ಮೃಗರಾಜ Read More »

ಶಾಸಕ ಎಂ.ಪಿ ಕುಮಾರಸ್ವಾಮಿ ಕಾರು ಅಪಘಾತ, ಮಹಿಳೆ ಸಾವು

ಹಾಸನ: ಬಿಜೆಪಿ ಶಾಸಕ ಎಂ.ಪಿ. ಕುಮಾರಸ್ವಾಮಿ ಅವರಿಗೆ ಸೇರಿದ ಕಾರು ಡಿಕ್ಕಿಯಾಗಿ ಮಹಿಳೆ ಸಾವನ್ನಪ್ಪಿದ ಘಟನೆ ಜಿಲ್ಲೆಯ ಬೇಲೂರು ತಾಲ್ಲೂಕಿನ ಹನುಮಂತ ನಗರದಲ್ಲಿ ನಡೆದಿದೆ. ಬೇಲೂರಿನತ್ತ ಬರುತ್ತಿದ್ದ ಶಾಸಕರ ಕಾರು ಚಾಲಕ ಅಪಘಾತವೆಸಗಿದ್ದು, 55 ವರ್ಷದ ಮಹಿಳೆ ಮೃತಪಟ್ಟಿದ್ದಾರೆ. ಚಾಲಕನ ಪಾನಮತ್ತನಾಗಿ ಕಾರು ಚಾಲನೆ ಮಾಡುತ್ತಿದ್ದ ಆರೋಪ ಕೇಳಿಬಂದಿದೆ. ಕಾರು ರಿಪೇರಿಗೆಂದು ಬೆಂಗಳೂರಿಗೆ ಹೊರಟಿದ್ದ ಎನ್ನಲಾಗಿದ್ದು, ಬೇಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಶಾಸಕ ಎಂ.ಪಿ ಕುಮಾರಸ್ವಾಮಿ ಕಾರು ಅಪಘಾತ, ಮಹಿಳೆ ಸಾವು Read More »

ಹಣಕ್ಕಾಗಿ ಸ್ವಂತ ಪತ್ನಿಯನ್ನೇ ಮಾರಿದ ಭೂಪ| 500 ರೂ ಕೊಟ್ಟು ಖರೀದಿಸಿದಾತನಿಂದ ನಡೆಯಿತು ಹೀನ ಕೃತ್ಯ|

ಅಹಮದಾಬಾದ್: ತನ್ನ ಸ್ವಂತ ಪತ್ನಿಯನ್ನು 500 ರೂ.ಗೆ ಮಾರಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಹಿಳೆ ಖರೀದಿಗೆ ಹಣ ನೀಡಿದ ಪುರುಷ ಏಕಾಂತ ಸ್ಥಳದಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾಗಿ ಮಹಿಳೆ ಪೊಲೀಸರಿಗೆ ದೂರು ನೀಡಿದ ವೇಳೆ ಈ ಘಟನೆ ತಿಳಿದುಬಂದಿದೆ. ಶುಕ್ರವಾರ ಪ್ರಕರಣದ ಬಗ್ಗೆ ಮಾಹಿತಿ ಪಡೆದ ಪೊಲೀಸರು, ದೂರಿನ ಮೇಲೆ ತಕ್ಷಣ ಕ್ರಮ ಕೈಗೊಂಡು 24 ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಲ್ಲಿ ಒಬ್ಬನನ್ನು ಸೋನು ಶರ್ಮಾ ಎಂದು ಗುರುತಿಸಲಾಗಿದೆ ಎಂದು ಪೊಲೀಸ್ ಠಾಣೆಯ ಪ್ರಭಾರಿ ಮದನಲಾಲ್

ಹಣಕ್ಕಾಗಿ ಸ್ವಂತ ಪತ್ನಿಯನ್ನೇ ಮಾರಿದ ಭೂಪ| 500 ರೂ ಕೊಟ್ಟು ಖರೀದಿಸಿದಾತನಿಂದ ನಡೆಯಿತು ಹೀನ ಕೃತ್ಯ| Read More »

ಕಲುಷಿತ ನೀರು ಸೇವನೆ| ನಾಲ್ವರು ಸಾವು

ವಿಜಯಪುರ : ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮಕರಬ್ಬಿ ಗ್ರಾಮದಲ್ಲಿ ಬೋರ್ ವೆಲ್ ಪೈಪ್ ಗೆ ಚರಂಡಿ ನೀರು ಮಿಶ್ರಣಗೊಂಡಿದ್ದರಿಂದಾಗಿ, ಕಲುಷಿತ ನೀರು ಸೇವಿಸಿದಂತ ಗ್ರಾಮದ ಅನೇಕರು ಅಸ್ವಸ್ಥಗೊಂಡಿದ್ದಾರೆ. ಅಸ್ವಸ್ಥಗೊಂಡು ಚಿಕಿತ್ಸೆ ಪಡೆಯುತ್ತಿದ್ದಂತ ಗ್ರಾಮಸ್ಥರಲ್ಲಿ 10 ದಿನಗಳಲ್ಲಿ ನಾಲ್ವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ವಿಜಯಪುರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮಕರಬ್ಬಿ ಗ್ರಾಮದಲ್ಲಿನ ಕುಡಿಯುವ ನೀರಿನ ಪೈಪ್ ಗೆ ಚರಂಡಿ ನೀರು ಮಿಶ್ರಣಗೊಂಡಿದೆ. ಇದೇ ನೀರನ್ನು ಗ್ರಾಮದ ಜನರಿಗೆ ಕುಡಿಯಲು ಬಿಟ್ಟ ಕಾರಣ, ಗ್ರಾಮದಲ್ಲಿನ ಅನೇಕರಿಗೆ ಹೊಟ್ಟೆನೋವು, ವಾಂತಿ, ಬೇಧಿ ಕಾಣಿಸಿಕೊಂಡಿದೆ.

ಕಲುಷಿತ ನೀರು ಸೇವನೆ| ನಾಲ್ವರು ಸಾವು Read More »

11ನೇ‌ ಮಹಡಿಯಿಂದ ಬಿದ್ದ ಮಗು ದಾರುಣ ಸಾವು, ಪೋಷಕರ ಆಕ್ರಂದನ

ಬೆಂಗಳೂರು: ಪೋಷಕರು ಹೊರಗೆ ಹೋಗಿದ್ದ ಸಮಯದಲ್ಲಿ 11ನೇ ಮಹಡಿಯಲ್ಲಿ ಆಟವಾಡುತ್ತಿದ್ದ ಹನ್ನೊಂದು ವರ್ಷದ ಬಾಲಕ ಆಯ ತಪ್ಪಿ ಪಕ್ಕದ ಕ್ಲಬ್ ಹೌಸ್‍ನ 5ನೇ ಮಹಡಿಗೆ ಬಿದ್ದು ಮೃತಪಟ್ಟಿರುವ ಘಟನೆ ಆರ್‍ಆರ್ ನಗರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸಾಫ್ಟ್‌ವೇರ್ ಇಂಜಿನಿಯರ್ ಪುತ್ರ ಗಗನ್ ಮೃತಪಟ್ಟ ಬಾಲಕ. ಬನಶಂಕರಿ 3ನೇ ಹಂತದಲ್ಲಿರುವ ಶೋಭಾ ವ್ಯಾಲಿ ವ್ಯೂ ಅಪಾರ್ಟ್‍ಮೆಂಟ್‍ನಲ್ಲಿ ಈ ದುರ್ಘಟನೆ ಸಂಭವಿಸಿದೆ. ಗಗನ್ ನಿನ್ನೆ ಸ್ನೇಹಿತರ ಜೊತೆ ಆಟವಾಡುತ್ತಿದ್ದುದನ್ನು ಗಮನಿಸಿದ ಪೋಷಕರು, ಮನೆ ಬಳಿಯೇ ಬಿಟ್ಟು ಕಾರ್ಯನಿಮಿತ್ತ ಹೊರಗೆ

11ನೇ‌ ಮಹಡಿಯಿಂದ ಬಿದ್ದ ಮಗು ದಾರುಣ ಸಾವು, ಪೋಷಕರ ಆಕ್ರಂದನ Read More »

ಇಂದು ನೂತನ ಜಿಲ್ಲೆ ವಿಜಯನಗರ ಉದ್ಘಾಟನೆ

ಹೊಸಪೇಟೆ: ರಾಜ್ಯದ 31ನೇ ಜಿಲ್ಲೆಯಾಗಿ ಉದಯಗೊಂಡಿರುವ ವಿಜಯನಗರದ ಅಧಿಕೃತ ಉದ್ಘಾಟನಾ ಸಮಾರಂಭ ಶನಿವಾರ (ಅ. 2) ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಕಾರ್ಯಕ್ರಮ ನಡೆಯಲಿರುವ ಜಿಲ್ಲಾ ಕ್ರೀಡಾಂಗಣ ಮಿನಿ ಹಂಪಿಯಾಗಿ ಬದಲಾಗಿದೆ. ಬೆಟ್ಟ-ಗುಡ್ಡ, ವಿರೂಪಾಕ್ಷೇಶ್ವರ ದೇವಸ್ಥಾನ, ಸಾಲು ಮಂಟಪ, ಉಗ್ರ ನರಸಿಂಹ, ಸಪ್ತಸ್ವರ ಮಂಟಪ ನಿರ್ಮಿಸಲಾಗಿದೆ. ಪ್ರವೇಶ ದ್ವಾರದ ಮುಂಭಾಗದಲ್ಲಿ 40 ಅಡಿ ಎತ್ತರದ ಶ್ರೀಕೃಷ್ಣದೇವರಾಯನ ಫೈಬರ್‌ ಪುತ್ಥಳಿ ಪ್ರತಿಷ್ಠಾಪಿಸಲಾಗಿದೆ. ನಗರದ ಎಲ್ಲಾ ರಸ್ತೆಗಳಿಗೆ ವಿದ್ಯುತ್‌ ದೀಪಗಳ ಅಲಂಕಾರ ಮಾಡಲಾಗಿದೆ. ತಳಿರು ತೋರಣ ಕಟ್ಟಲಾಗಿದೆ. ಶನಿವಾರ ಸಂಜೆ

ಇಂದು ನೂತನ ಜಿಲ್ಲೆ ವಿಜಯನಗರ ಉದ್ಘಾಟನೆ Read More »

ಕೋವಿಡ್ ಹಿನ್ನಲೆ| ವಾಹನ ದಾಖಲೆ ಸಿಂಧುತ್ವ ಅವಧಿ ವಿಸ್ತರಿಸಿದ ಸಾರಿಗೆ ಇಲಾಖೆ|

ನವದೆಹಲಿ: ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಮೋಟಾರು ವಾಹನ ದಾಖಲೆಗಳಾದ ಚಾಲನಾ ಪರವಾನಗಿ, ನೋಂದಣಿ ಪ್ರಮಾಣಪತ್ರ ಮತ್ತು ಇತರ ಪರವಾನಗಿಗಳ ಸಿಂಧುತ್ವವನ್ನು 2021ರ ಅಕ್ಟೋಬರ್ 31ರವರೆಗೆ ವಿಸ್ತರಿಸಿದೆ. ಈ ಆದೇಶವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡಿದ್ದು, ನಾಗರಿಕರು, ಸಾಗಾಣಿಕೆದಾರರು ಮತ್ತು ಇತರ ಸಂಘಟನೆಗಳು ತೊಂದರೆಗಳನ್ನ ಎದುರಿಸದಂತೆ ಜಾರಿಗೆ ತರುವಂತೆ ವಿನಂತಿಸಿದೆ. ಮೋಟಾರು ವಾಹನ ಕಾಯ್ದೆ, 1988 ಮತ್ತು ಕೇಂದ್ರ ಮೋಟಾರು ವಾಹನ ನಿಯಮಗಳು, 1989ಕ್ಕೆ ಸಂಬಂಧಿಸಿದ ದಾಖಲೆಗಳ

ಕೋವಿಡ್ ಹಿನ್ನಲೆ| ವಾಹನ ದಾಖಲೆ ಸಿಂಧುತ್ವ ಅವಧಿ ವಿಸ್ತರಿಸಿದ ಸಾರಿಗೆ ಇಲಾಖೆ| Read More »

ಈ ಬಾರಿ ನಡೆಯುತ್ತೆ ತಲಕಾವೇರಿ ಜಾತ್ರೆ| ಅ.17 ರಂದು ತೀರ್ಥಸ್ವರೂಪಿಣಿಯಾಗಿ ಉದ್ಭವಿಸಲಿದ್ದಾಳೆ ಕಾವೇರಿ|

ಕೊಡಗು : ಪ್ರತಿವರ್ಷದಂತೆ ಈ ವರ್ಷವೂ ತಲಕಾವೇರಿಯಲ್ಲಿ ಕಾವೇರಿ ತೀರ್ಥೋದ್ಭವಕ್ಕೆ ದಿನಾಂಕ ನಿಗದಿ ಮಾಡಲಾಗಿದೆ. ಅಕ್ಟೋಬರ್ 17ರಂದು ಮಧ್ಯಾಹ್ನ 1 ಗಂಟೆ 11 ನಿಮಿಷಕ್ಕೆ ಪವಿತ್ರ ಕಾವೇರಿ ತೀರ್ಥೋದ್ಭವವಾಗಲಿದೆ ಕೊರೋನಾ ಸೋಂಕಿನ ಕಾರಣದಿಂದಾಗಿ ಕಾವೇರಿ ತೀರ್ಥೋದ್ಭವ ನಡೆಯೋದು ಅನುಮಾನವಾಗಿತ್ತು.ಆದರೆ ಈ ಬಾರಿ ಕೊರೋನಾ ಆತಂಕದ ನಡುವೆಯೂ ಕಾವೇರಿ ತೀರ್ಥೋದ್ಭವ ಕಾರ್ಯಕ್ರಮಕ್ಕೆ ಮುಹೂರ್ತ ನಿಗದಿ ಮಾಡಲಾಗಿದೆ. ಅ. 17 ರಂದು ಮಧ್ಯಾಹ್ನ 1.11 ನಿಮಿಷಕ್ಕೆ ಕಾವೇರಿ ತೀರ್ಥೋದ್ಭವವಾಗಲಿದೆ. ಮಕರ ಲಗ್ನದಲ್ಲಿ ಕಾವೇರಿ ತೀರ್ಥರೂಪದಲ್ಲಿ ತಲಕಾವೇರಿಯಲ್ಲಿ ಉಗಮವಾಗಲಿದ್ದಾಳೆ.

ಈ ಬಾರಿ ನಡೆಯುತ್ತೆ ತಲಕಾವೇರಿ ಜಾತ್ರೆ| ಅ.17 ರಂದು ತೀರ್ಥಸ್ವರೂಪಿಣಿಯಾಗಿ ಉದ್ಭವಿಸಲಿದ್ದಾಳೆ ಕಾವೇರಿ| Read More »

ಉಪ್ಪಿನಂಗಡಿ: ನೀರೆಂದು ತಿಳಿದು ಪೆಟ್ರೋಲ್ ‌ಕುಡಿದ ಮಹಿಳೆ ಸಾವು

ಉಪ್ಪಿನಂಗಡಿ: ಮಹಿಳೆಯೊಬ್ಬರು ತಪ್ಪಾಗಿ ನೀರಿನ ಬದಲು ಪೆಟ್ರೋಲ್‌ ಕುಡಿದು ಅಸ್ವಸ್ಥಗೊಂಡು ಬಳಿಕ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ಉಪ್ಪಿನಂಗಡಿ ಸಮೀಪದ ಪೆರ್ನೆಯ ಸಂಪದಕೋಡಿ ಎಂಬಲ್ಲಿ ನಡೆದಿದೆ. ಮೃತ ಮಹಿಳೆ ಪದ್ಮಾವತಿ (79) ಎಂದು ಗುರುತಿಸಲಾಗಿದೆ. ದೃಷ್ಟಿ ದೋಷದಿಂದ ಬಳಲುತ್ತಿದ್ದ ಈಕೆ ಪೆರ್ನೆಯ ಸಂಪದಕೋಡಿಯಲ್ಲಿರುವ ತನ್ನ ಮಗಳ ಮನೆಗೆ ಬಂದಿದ್ದಾಗ ಅಲ್ಲಿ ಹುಲ್ಲು ಕತ್ತರಿಸುವ ಯಂತ್ರದ ಬಳಕೆಯ ಉದ್ದೇಶದಿಂದ ಮನೆಯಲ್ಲಿ ಬಾಟಲಿಯಲ್ಲಿ ತಂದಿರಿಸಿದ ಪೆಟ್ರೋಲನ್ನು ತಿಳಿಯದೇ ಕುಡಿದಿದ್ದಾರೆ ಎಂದು ಹೇಳಲಾಗಿದೆ. ಆ ಬಳಿಕ ಅಸ್ವಸ್ಥರಾದ ಅವರನ್ನು ಮಂಗಳೂರಿನ ವೆನ್‌

ಉಪ್ಪಿನಂಗಡಿ: ನೀರೆಂದು ತಿಳಿದು ಪೆಟ್ರೋಲ್ ‌ಕುಡಿದ ಮಹಿಳೆ ಸಾವು Read More »

ನದಿಗೆ ಉರುಳಿದ‌ ಬಸ್| ಆರು ಮಂದಿ ದುರ್ಮರಣ|

ಮೇಘಾಲಯ: ಇಲ್ಲಿನ ಶಿಲ್ಲಾಂಗ್‌ ಜಿಲ್ಲೆಯಲ್ಲಿ ನಡುರಾತ್ರಿಯಲ್ಲಿ ಪ್ರಯಾಣಿಸುತ್ತಿದ್ದ ಬಸ್‌ವೊಂದು ನದಿಗೆ ಉರುಳಿದ್ದು, ಆರು ಜನರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ನಡೆದಿದೆ. ಖಾಸಗಿ ಬಸ್‌ನಲ್ಲಿ ಸುಮಾರು 21 ಜನರು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಬಸ್ ಶಿಲ್ಲಾಂಗ್‌ ಸಮೀಪದಲ್ಲಿರುವ ರಿಂಗ್ಡಿ ನದಿಗೆ ಉರುಳಿ ಬಿದ್ದಿದೆ. ಘಟನೆಯಲ್ಲಿ ಬಸ್‌ನಲ್ಲಿದ್ದ ಆರು ಜನರು ಸಾವನ್ನಪ್ಪಿದ್ದಾರೆ. 16 ಜನರನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದುರಂತದ ಬಗ್ಗೆ ಮಾಹಿತಿ ತಿಳಿದ ಕೂಡಲೇ ಪೊಲೀಸರು ಮತ್ತು ರಕ್ಷಣಾ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ರಕ್ಷಣಾ ಕಾರ್ಯಾ ಆರಂಭಿಸಿದ್ದರು. ಆದರೆ,

ನದಿಗೆ ಉರುಳಿದ‌ ಬಸ್| ಆರು ಮಂದಿ ದುರ್ಮರಣ| Read More »