ರಾಜ್ಯ

ಮಂಗಳೂರು: ಮುಸ್ಲಿಂ ಯುವಕನ‌ ಮೇಲೆ ಹಲ್ಲೆ

ಸಮಗ್ರ ನ್ಯೂಸ್ ಡೆಸ್ಕ್: ಮುಸ್ಲಿಂ ಯುವಕನ ಮೇಲೆ ಮೂವರು ದುಷ್ಕರ್ಮಿಗಳು ಹಲ್ಲೆ ನಡೆಸಿರುವ ಘಟನೆ ತೊಕ್ಕೊಟ್ಟು ಬಳಿ ನಡೆದಿದೆ. ಇಬ್ರಾಹೀಂ ಹರ್ಷದ್ (31) ಹಲ್ಲೆಗೊಳಗಾದ ಯುವಕ. ಖಾಸಗಿ ಬಸ್ ನಿರ್ವಾಹಕ ಯಶ್ಚಿತ್ ಹಾಗೂ ಇತರ ಇಬ್ಬರು ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ ಎಂದು ಹಲ್ಲೆಗೊಳಗಾದ ಯುವಕ‌ ಆರೋಪಿಸಿದ್ದಾರೆ. ದುಷ್ಕರ್ಮಿಗಳಲ್ಲಿ‌ ಓರ್ವ ಸಂಘಪರಿವಾರ ಸಂಘಟನೆಯಲ್ಲಿ‌ ಗುರುತಿಸಿಕೊಂಡಿದ್ದ ಎನ್ನಲಾಗಿದೆ. ಸಂತ್ರಸ್ತ ಯುವ ರಿಕ್ಷಾ ಚಾಲಕನಾಗಿದ್ದು, ತೊಕ್ಕೊಟ್ಟು ಆಟೋ ರಿಕ್ಷಾ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರನ್ನು ಕರೆದುಕೊಂಡು ಹೋಗುತ್ತಿರುವಾಗ ದುಷ್ಕರ್ಮಿಗಳ ತಂಡ ದಾಳಿ ನಡೆಸಿದೆ. ಈ […]

ಮಂಗಳೂರು: ಮುಸ್ಲಿಂ ಯುವಕನ‌ ಮೇಲೆ ಹಲ್ಲೆ Read More »

ರಾಜ್ಯದಲ್ಲಿ ತಾರಕಕ್ಕೇರಿದ ಹಿಜಾಬ್ ವಿವಾದ| ಈ ಮುಸ್ಲಿಂ ಸಹೋದರಿ ಹಿಜಾಬ್ ಬಗ್ಗೆ ಹೇಳೋದೇನು ಗೊತ್ತಾ?

ಸಮಗ್ರ ನ್ಯೂಸ್ ಡೆಸ್ಕ್: ರಾಜ್ಯದಲ್ಲಿ ಹಿಜಾಬ್ ಕುರಿತ ಮೇಲಾಟಗಳು ತಾರಕಕ್ಕೆ ಏರುತ್ತಿರುವಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧಗಳ ಚರ್ಚೆ ಜೋರಾಗುತ್ತಿದೆ. ಕೆಲವು ಮಂದಿ ಹಿಜಾಬ್ ಕುರಿತು ಸಮರ್ಥನೆ ಮಾಡಿಕೊಂಡರೆ ಮತ್ತೆ ಹಲವರು ಇದರ ವಿರುದ್ದ ಮಾತನಾಡುತ್ತಿದ್ದಾರೆ. ಈ ನಡುವೆ ತರಗತಿಯಲ್ಲಿ ಹಿಜಾಬ್ ಧಾರಣೆ ವಿರೋಧಿಸಿ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಹಾಕುತ್ತಾ‌ ಬರುತ್ತಿದ್ದು, ಕಾಲೇಜು ಮುಖ್ಯಸ್ಥರಿಗೆ ತಲೆನೋವಾಗಿ ಪರಿಣಮಿಸಿದೆ. ಸರ್ಕಾರ ಸಮವಸ್ತ್ರ ಕುರಿತು ಕಠಿಣ ಆದೇಶ ತಂದರೂ ಅದ್ಯಾವುದಕ್ಕೂ ಕಿಮ್ಮತ್ತು ನೀಡದೆ ವಿದ್ಯಾರ್ಥಿಗಳು ಬಣ್ಣಗಳ ಹೋರಾಟದಲ್ಲಿ ತೊಡಗಿರುವುದು

ರಾಜ್ಯದಲ್ಲಿ ತಾರಕಕ್ಕೇರಿದ ಹಿಜಾಬ್ ವಿವಾದ| ಈ ಮುಸ್ಲಿಂ ಸಹೋದರಿ ಹಿಜಾಬ್ ಬಗ್ಗೆ ಹೇಳೋದೇನು ಗೊತ್ತಾ? Read More »

ರಾಜ್ಯದ ಕಾಲೇಜು ಕ್ಯಾಂಪಸ್ ಗಳಲ್ಲಿ ಕಲರ್ ವಾರ್| ಹಿಜಾಬ್, ಕೇಸರಿ‌ ಬಳಿಕ ನೀಲಿ ಶಾಲು ಎಂಟ್ರಿ| ಸರ್ಕಾರದ ಆದೇಶಕ್ಕಿಲ್ಲ ಕಿಮ್ಮತ್ತು|

ಸಮಗ್ರ ನ್ಯೂಸ್ ಡೆಸ್ಕ್: ಶಾಲಾ ಕಾಲೇಜುಗಳಲ್ಲಿ ಕಡ್ಡಾಯವಾಗಿ ಸಮವಸ್ತ್ರ ಸಂಹಿತೆ ಪಾಲಿಸುವಂತೆ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದ್ದರೂ ಇಂದು ರಾಜ್ಯದ ಬಹುತೇಕ ಕಾಲೇಜುಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದಿದ್ದರೆ, ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಬಂದಿದ್ದಾರೆ. ಇದರಿಂದ ಕಾಲೇಜು ಆಡಳಿತ ಮಂಡಳಿಗೆ ತಲೆ ನೋವಾಗಿದ್ದು ಮುಂದೆ ಏನು ಎಂಬ ಭಯದಲ್ಲಿ ಕುಳಿತಿದ್ದಾರೆ. ಸದ್ಯ ಕೆಲ ಕಾಲೇಜುಗಳಲ್ಲಿ ರಜೆ ಘೋಷಿಸಲಾಗಿದೆ. ಕೆಲವು ಕಡೆ ವಿದ್ಯಾರ್ಥಿಗಳಿಗೆ ಕ್ಲಾಸ್ ರೂಂ ಪ್ರವೇಶಕ್ಕೆ ತಡೆ ಹಿಡಿಯಲಾಗಿದೆ. ಇದರ ಜೊತೆಗೆ ಹಿಜಾಬ್,

ರಾಜ್ಯದ ಕಾಲೇಜು ಕ್ಯಾಂಪಸ್ ಗಳಲ್ಲಿ ಕಲರ್ ವಾರ್| ಹಿಜಾಬ್, ಕೇಸರಿ‌ ಬಳಿಕ ನೀಲಿ ಶಾಲು ಎಂಟ್ರಿ| ಸರ್ಕಾರದ ಆದೇಶಕ್ಕಿಲ್ಲ ಕಿಮ್ಮತ್ತು| Read More »

ಲಿಪ್‌ಲಾಕ್ ಮಾಡಿದ ‘ಕಿಲಾಡಿ’ ರವಿತೇಜ| ಸಿನಿಮಾ ಪ್ರಮೋಷನ್ ಗೆ ಮುತ್ತಿನ ಮಳೆ

ಸಮಗ್ರ ಫಿಲಂ ಡೆಸ್ಕ್: ತೆಲುಗಿನಲ್ಲಿ ತಯಾರಾಗಿರುವ ‘ಕಿಲಾಡಿ’ ಸಿನಿಮಾ ಕನ್ನಡ ಸೇರಿದಂತೆ ಬೇರೆ ಬೇರೆ ಭಾಷೆಗಳಿಗೆ ಡಬ್​ ಆಗಿ ಬಿಡುಗಡೆ ಆಗಲಿದೆ. ಫೆ.11ರಂದು ಈ ಸಿನಿಮಾವನ್ನು ರಿಲೀಸ್​ ಮಾಡಲು ತೀರ್ಮಾನಿಸಲಾಗಿದೆ. ಈಗಾಗಲೇ ಬಿಡುಗಡೆ ಆಗಿರುವ ಹಾಡುಗಳು ಜನಮೆಚ್ಚುಗೆ ಗಳಿಸಿವೆ. ಭರ್ಜರಿಯಾಗಿ ಪ್ರಚಾರ ಮಾಡುತ್ತಿರುವ ಚಿತ್ರತಂಡಕ್ಕೆ ಈಗ ಈ ಲಿಪ್​ ಲಾಕ್​ ಫೋಟೋ ವರದಾನವಾಗಿದೆ. ಈ ಫೋಟೋದಲ್ಲಿ ಇರುವ ನಟಿ ಯಾರು ಎಂಬುದು ಬಹಿರಂಗ ಆಗಿಲ್ಲ. ಆ ಪ್ರಶ್ನೆಗೆ ಉತ್ತರ ತಿಳಿಯಬೇಕು ಎಂದರೆ ಪ್ರೇಕ್ಷಕರು ಚಿತ್ರಮಂದಿರಕ್ಕೆ ಹೋಗಬೇಕಾಗುವುದು ಅನಿವಾರ್ಯ.

ಲಿಪ್‌ಲಾಕ್ ಮಾಡಿದ ‘ಕಿಲಾಡಿ’ ರವಿತೇಜ| ಸಿನಿಮಾ ಪ್ರಮೋಷನ್ ಗೆ ಮುತ್ತಿನ ಮಳೆ Read More »

ಹಿಜಾಬ್ ವಿವಾದ; ಪ್ರವೇಶಾತಿ ಸಂದರ್ಭದ‌ ತಿಳುವಳಿಕೆ ಪತ್ರ ವೈರಲ್

ಸಮಗ್ರ ನ್ಯೂಸ್ ಡೆಸ್ಕ್: ಉಡುಪಿ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿಗೆ ಪ್ರವೇಶಾತಿ ಪಡೆಯುವಾಗ ಕಾಲೇಜಿನ ನಿಯಮಾವಳಿ ಪತ್ರಕ್ಕೆ ಮುಸ್ಲಿಂ ವಿದ್ಯಾರ್ಥಿನಿ ಸಹಿ ಹಾಕಿದ್ದಾರೆ ಎನ್ನಲಾದ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಾಳೇಜು ನಿಯಮಾವಳಿ ಪಾಲನೆಯ ತಿಳಿವಳಿಕೆ ಪತ್ರದಲ್ಲಿ ಸಮವಸ್ತ್ರ ಹಾಗೂ ಗುರುತಿನ ಚೀಟಿ ಧರಿಸಿ ಬರುವುದು ಕಡ್ಡಾಯ ಸೇರಿದಂತೆ 10 ನಿಯಮಗಳು ಇವೆ. ವಿದ್ಯಾರ್ಥಿನಿ ರೇಷಮ್‌ ಎಂಬುವರು ಪತ್ರಕ್ಕೆ ಸಹಿ ಮಾಡಿದ್ದಾರೆ. ಈ ಪತ್ರ ಜಾಲತಾಣದಲ್ಲಿ ಸುದ್ದಿಯಾಗಿದ್ದು, ಪ್ರವೇಶಾತಿ ಪಡೆಯುವಾಗ ಸಮವಸ್ತ್ರ ನಿಯಮವನ್ನು ಒಪ್ಪಿ ಈಗ

ಹಿಜಾಬ್ ವಿವಾದ; ಪ್ರವೇಶಾತಿ ಸಂದರ್ಭದ‌ ತಿಳುವಳಿಕೆ ಪತ್ರ ವೈರಲ್ Read More »

ವಸತಿ ಶಾಲೆಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ

ಸಮಗ್ರ ನ್ಯೂಸ್ ಡೆಸ್ಕ್: 2022-23ನೇ ಸಾಲಿನ 6ನೇತರಗತಿ ಪ್ರವೇಶಕ್ಕೆ ನಗರದ ಕಮ್ಮಾಜೆ, ನೆಲ್ಲಿತೀರ್ಥ, ಗುರುಪುರ ಮೂಡಬಿದ್ರೆಯ ಕಲ್ಲಬೆಟ್ಟು, ಬೆಳ್ತಂಗಡಿಯ ಮಚ್ಚಿನ, ಮುಂಡಾಜೆ, ಹೊಸಂಗಡಿ ಬಂಟ್ವಾಳದ ವಗ್ಗ, ಪುತ್ತೂರಿನ ಬಲ್ನಾಡು, ಉಪ್ಪಿನಂಗಡಿ ಹಾಗೂ ಸುಳ್ಯದ ಪಂಜ ಮೊರಾರ್ಜಿ ದೇಸಾಯಿ, ಡಾ. ಬಿ. ಆರ್. ಅಂಬೇಡ್ಕರ್, ಇಂದಿರಾ ಗಾಂಧಿ ವಸತಿ ಶಾಲೆಗಳಿಗೆ ಅರ್ಜಿ ಅಹ್ವಾನಿಸಲಾಗಿದೆ.ಪ್ರಸ್ತುತ ಜಿಲ್ಲೆಯಲ್ಲಿ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. 6 ರಿಂದ 10ನೇತರಗತಿಯ ವರೆಗೆ ಆಂಗ್ಲ ಮಾಧ್ಯಮದಲ್ಲಿ ವ್ಯಾಸಂಗ ಮಾಡಲು ಪ್ರತಿಭಾನ್ವಿತ

ವಸತಿ ಶಾಲೆಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ Read More »

ಹಿಜಾಬ್ V/s ಕೇಸರಿ ಫೈಟ್ ಗೆ ಸರ್ಕಾರದಿಂದ ಬ್ರೇಕ್ ಯತ್ನ| ಸಮವಸ್ತ್ರ ಸಂಹಿತೆ ಜಾರಿಗೊಳಿಸಿ ಆದೇಶ

ಸಮಗ್ರ ನ್ಯೂಸ್ ಡೆಸ್ಕ್: ರಾಜ್ಯದ ವಿವಿಧ ಕಾಲೇಜುಗಳಲ್ಲಿ ಹಿಜಾಬ್- ಕೇಸರಿ ಶಾಲಿನ ವಿವಾದ ಭುಗಿಲೆದ್ದ ಬೆನ್ನಲ್ಲೇ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಸರ್ಕಾರ ನಿಗದಿಪಡಿಸಿರುವ ಸಮವಸ್ತ್ರವನ್ನೇ ಕಡ್ಡಾಯವಾಗಿ ಧರಿಸಬೇಕು ಎಂದು ರಾಜ್ಯ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ. ಖಾಸಗಿ ಶಾಲೆಗಳಲ್ಲಿ ಆಯಾ ಆಡಳಿತ ಮಂಡಳಿ ನಿರ್ಧರಿಸಿರುವ ಸಮವಸ್ತ್ರವನ್ನು ಧರಿಸಬೇಕಾದುದು ಕಡ್ಡಾಯವಾಗಿದೆ. ಪದವಿ ಪೂರ್ವ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿನ ಕಾಲೇಜುಗಳಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಅಥವಾ ಆಡಳಿತ ಮಂಡಳಿ ಮೇಲ್ವಿಚಾರಣಾ ಸಮಿತಿ ನಿರ್ಧರಿಸುವ ಸಮವಸ್ತ್ರ ಧರಿಸಬೇಕು. ಒಂದುವೇಳೆ ಆಡಳಿತ ಮಂಡಳಿ ಸಮವಸ್ತ್ರ

ಹಿಜಾಬ್ V/s ಕೇಸರಿ ಫೈಟ್ ಗೆ ಸರ್ಕಾರದಿಂದ ಬ್ರೇಕ್ ಯತ್ನ| ಸಮವಸ್ತ್ರ ಸಂಹಿತೆ ಜಾರಿಗೊಳಿಸಿ ಆದೇಶ Read More »

ಚಿಕ್ಕಮಗಳೂರಲ್ಲಿ ಮತ್ತೆ ಹಿಜಾಬ್ ವಿವಾದ ಶುರು| ಕೇಸರಿ ಶಾಲು ಧರಿಸಿ ಕಾಲೇಜಿಗೆ ಬಂದ ವಿದ್ಯಾರ್ಥಿಗಳು

ಸಮಗ್ರ ನ್ಯೂಸ್ ಡೆಸ್ಕ್: ಕರಾವಳಿ ಬಳಿಕ ಮಲೆನಾಡಲ್ಲಿ ಹಿಜಾಬ್ ವಿವಾದ ಮತ್ತೆ ಕಾಣಿಸಿಕೊಂಡಿದೆ. ಕಾಫಿನಾಡು ಚಿಕ್ಕಮಗಳೂರಿನ ಕೊಪ್ಪ ಕಾಲೇಜಿನಲ್ಲಿ ಹಿಜಾಬ್ ಗಲಾಟೆ ಸುಖಾಂತ್ಯವಾಗಿತ್ತು. ಆದರೆ, ಈ ಗೊಂದಲ ಈಗ ಮತ್ತೆ ಚಿಕ್ಕಮಗಳೂರು ಜಿಲ್ಲೆಯಲ್ಲೂ ಪ್ರಾರಂಭವಾಗಿದೆ. ಹಿಜಾಬ್ ಧರಿಸಿಕೊಂಡು ಬಂದ ವಿದ್ಯಾರ್ಥಿನಿಯ ವಿರುದ್ಧ ಯುವಕರು ಕೇಸರಿ ಶಾಲು ಧರಿಸಿ ಬಂದು ಪ್ರತಿಭಟನೆ ನಡೆಸುತ್ತಿದ್ದು, ಚಿಕ್ಕಮಗಳೂರು ನಗರದ ಇಂದಾವರ ದೊಡ್ದಸಿದ್ದಲಿಂಗೇಗೌಡ ಸರ್ಕಾರಿ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಧರಣಿ ಮಾಡುತ್ತಿದ್ದಾರೆ. ಯಾರಿಗೂ ಹಿಜಾಬ್ ಧರಿಸಲು ಅವಕಾಶ ಕೊಡದಂತೆ ವಿದ್ಯಾರ್ಥಿಗಳು ಆಗ್ರಹಿಸುತ್ತಿದ್ದು, ಸಮಸ್ಯೆ ಬಗೆಹರಿಸದಿದ್ದರೆ,

ಚಿಕ್ಕಮಗಳೂರಲ್ಲಿ ಮತ್ತೆ ಹಿಜಾಬ್ ವಿವಾದ ಶುರು| ಕೇಸರಿ ಶಾಲು ಧರಿಸಿ ಕಾಲೇಜಿಗೆ ಬಂದ ವಿದ್ಯಾರ್ಥಿಗಳು Read More »

“ಭಾರತ ಧರ್ಮಾಧಾರಿತ ದೇಶವಲ್ಲ, ಪ್ರಜಾಪ್ರಭುತ್ವ ದೇಶ” – ಪತ್ರಕರ್ತ ಹೆಚ್.ಆರ್ ರಂಗನಾಥ್ ಹೇಳಿಕೆಗೆ ಶಾಸಕ ಯತೀಂದ್ರ ಸಿಡಿಮಿಡಿ

ಬೆಂಗಳೂರು: ಈ ದೇಶದ ಭದ್ರ ಬುನಾದಿಯೇ ಹಿಂದೂ ಧರ್ಮ, ಭಾರತ ಸೃಷ್ಟಿಯಾಗಿರುವುದೇ ಹಿಂದೂ ಧರ್ಮದ ಆಧಾರದಲ್ಲಿ ಎಂಬ ಹಿರಿಯ ಪತ್ರಕರ್ತ ಎಚ್.ಆರ್.ರಂಗನಾಥ್ ಅವರ ಹೇಳಿಕೆಗೆ ಕಾಂಗ್ರೆಸ್ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಡಾ.ಯತೀಂದ್ರ “ ಹೌದು ಇದು ಭಾರತ, ಪಾಕಿಸ್ತಾನವಲ್ಲ. ಪಾಕಿಸ್ತಾನದಂತೆ ನಮ್ಮದು ಧರ್ಮಾಧಾರಿತ ದೇಶವಲ್ಲ. ಎಲ್ಲ ಧರ್ಮ, ಜಾತಿ, ಜನಾಂಗ, ಲಿಂಗ, ಭಾಷೆ, ಸಂಸ್ಕೃತಿಯವರಿಗೂ ಸಮಾನ ಹಕ್ಕು ಹಾಗು ಸ್ವಾತಂತ್ರ್ಯ ನೀಡುವ ಉನ್ನತ ಆಶಯದೊಂದಿಗೆ ನಿರ್ಮಾಣಗೊಂಡ ರಾಷ್ಟ್ರ ನಮ್ಮದು.

“ಭಾರತ ಧರ್ಮಾಧಾರಿತ ದೇಶವಲ್ಲ, ಪ್ರಜಾಪ್ರಭುತ್ವ ದೇಶ” – ಪತ್ರಕರ್ತ ಹೆಚ್.ಆರ್ ರಂಗನಾಥ್ ಹೇಳಿಕೆಗೆ ಶಾಸಕ ಯತೀಂದ್ರ ಸಿಡಿಮಿಡಿ Read More »

ರಸ್ತೆ ನಿಯಮ ಉಲ್ಲಂಘಿಸುವ ಪ್ರಯಾಣಿಕರ ಗಮನಕ್ಕೆ

ಇನ್ನುಮುಂದೆ ಪೊಲೀಸರು ರಸ್ತೆಯಲ್ಲಿ ವಾಹನಗಳಿಗೆ ಅಡ್ಡ ಹಾಕಲ್ಲ ! ಆದರೇ…? ಮುಂದೆ ಓದಿ ಸಮಗ್ರ ನ್ಯೂಸ್ ಡೆಸ್ಕ್: ಇನ್ಮುಂದೆ ಪೊಲೀಸರು ರಸ್ತೆಯಲ್ಲಿ ಸಾರ್ವಜನಿಕರ ವಾಹನಗಳಿಗೆ ಅಡ್ಡ ಹಾಕುವುದಿಲ್ಲ. ಸಂಚಾರ ನಿಯಮ ಉಲ್ಲಂಘಿಸಿರುವ ವಾಹನ ಚಾಲಕ ಮತ್ತು ಸವಾರರಿಂದ ದಂಡ ವಸೂಲಿ ಮಾಡಲು ಸಂಚಾರ ಪೊಲೀಸರು ರಸ್ತೆಗಳ ಬದಲು ಇನ್ಮುಂದೆ ಆರ್​ಟಿಒ ಕಚೇರಿ ಮುಂದೆ ಕಾರ್ಯಾಚರಣೆ ನಡೆಸಲಿದ್ದಾರೆ. ರಸ್ತೆಗಳಲ್ಲಿ ವಾಹನಗಳನ್ನು ತಡೆದು ಹಳೇ ಪ್ರಕರಣಗಳ ಪರಿಶೀಲನೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿರುವುದರಿಂದ ಈ ಹೊಸ ಮಾದರಿ

ರಸ್ತೆ ನಿಯಮ ಉಲ್ಲಂಘಿಸುವ ಪ್ರಯಾಣಿಕರ ಗಮನಕ್ಕೆ Read More »