ರಾಜ್ಯ

ಕನ್ನಡ ಕಬೀರ, ಭಾವೈಕ್ಯತೆಯ ಸಂತ, ಪದ್ಮಶ್ರೀ ಇಬ್ರಾಹಿಂ ಸುತಾರ ಇನ್ನಿಲ್ಲ

ಸಮಗ್ರ ನ್ಯೂಸ್ ಡೆಸ್ಕ್: ಭಾವೈಕ್ಯತೆ ಸಂದೇಶ ಸಾರುತ್ತಿದ್ದ ಸಂತ, ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ(82) ಅವರು ಇಂದು (ಫೆ.5) ಬೆಳಗ್ಗೆ ಹೃದಯಾಘಾತದಿಂದ ನಿಧನರಾದರು. ರಬಕವಿ-ಬನಹಟ್ಟಿ ತಾಲೂಕಿನ ಮಹಾಲಿಂಗಪುರ ಪಟ್ಟಣದ ನಿವಾಸದಲ್ಲಿ ಇಂದು ಕೊನೆಯುಸಿರೆಳೆದಿದ್ದಾರೆ. ತಾವು ಹೋದ ಕಡೆಯಲೆಲ್ಲ ಭಾವೈಕ್ಯತೆಯ ಸಂದೇಶವನ್ನು ಸಾರುತ್ತಿದ್ದ ಸುತಾರ‌ ಕನ್ನಡ ಕಬೀರ ಎಂದೇ ಹೆಸರಾಗಿದ್ದರು. ಕುರಾನ್, ಬೈಬಲ್, ಭಗವದ್ಗೀತೆ ಹಾಗೂ ಶರಣರ ತತ್ವಗಳ ಅಧ್ಯಯನ ಮಾಡಿದ್ದರು. ಪ್ರವಚನ, ಗೀತೆಗಳ ಮೂಲಕ ಜನರಲ್ಲಿ ಸಮಾನತೆ, ಧರ್ಮ ಸಹಿಷ್ಠುತೆ ಪಾಠವನ್ನು ಮಾಡುತ್ತಿದ್ದರು. ಇವರ ಸೇವೆಯನ್ನು ಮೆಚ್ಚಿ […]

ಕನ್ನಡ ಕಬೀರ, ಭಾವೈಕ್ಯತೆಯ ಸಂತ, ಪದ್ಮಶ್ರೀ ಇಬ್ರಾಹಿಂ ಸುತಾರ ಇನ್ನಿಲ್ಲ Read More »

ಪುತ್ತೂರು ಉಪವಿಭಾಗಾಧಿಕಾರಿ ಡಾ. ಯತೀಶ್ ಉಳ್ಳಾಲ್ ಗೆ ವರ್ಗಾವಣೆ| ನೂತನ ಎಸಿ ಆಗಿ ಗಿರೀಶ್ ನಂದನ್

ಸಮಗ್ರ ನ್ಯೂಸ್ ಡೆಸ್ಕ್: ಪುತ್ತೂರು ಉಪವಿಭಾಗ ಅಧಿಕಾರಿ(ಎಸಿ)ಯಾಗಿದ್ದ ಡಾ| ಯತೀಶ್ ಉಳ್ಳಾಲ್ ಅವರಿಗೆ ವರ್ಗಾವಣೆಯಾಗಿದ್ದು, ಆ ಜಾಗಕ್ಕೆ ಕೆಎಎಸ್ ಅಧಿಕಾರಿ ಗಿರೀಶ್ ನಂದನ್ ನಿಯುಕ್ತಿಗೊಳಿಸಿ ಸರ್ಕಾರ ಆದೇಶಿಸಿದೆ. ಹಾಸನ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಮುಖ್ಯ ಆಡಳಿತಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕೆಎಎಸ್ ಕಿರಿಯ ಶ್ರೇಣಿಯ ಅಧಿಕಾರಿ ಗಿರೀಶ್‌ ನಂದನ್ ಎಂ.ಅವರನ್ನು ಪುತ್ತೂರು ಉಪವಿಭಾಗದ ನೂತನ ಉಪವಿಭಾಗಾಧಿಕಾರಿಯಾಗಿ ನೇಮಕಗೊಳಿಸಿ ವರ್ಗಾವಣೆ ಮಾಡಿ ಸರ್ಕಾರದ ಅಧೀನ ಕಾರ್ಯದರ್ಶಿ ಉಮಾದೇವಿ ಆದೇಶಿಸಿದ್ದಾರೆ. ಪುತ್ತೂರು ಉಪ ವಿಭಾಗಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಡಾ|ಯತೀಶ್ ಉಳ್ಳಾಲ್

ಪುತ್ತೂರು ಉಪವಿಭಾಗಾಧಿಕಾರಿ ಡಾ. ಯತೀಶ್ ಉಳ್ಳಾಲ್ ಗೆ ವರ್ಗಾವಣೆ| ನೂತನ ಎಸಿ ಆಗಿ ಗಿರೀಶ್ ನಂದನ್ Read More »

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್| ದ್ವಿತೀಯ ಪಿಯುಸಿ ಮಾದರಿ ಪ್ರಶ್ನೆಪತ್ರಿಕೆ ಬಿಡುಗಡೆ

ಸಮಗ್ರ ನ್ಯೂಸ್ ಡೆಸ್ಕ್: ದ್ವಿತೀಯ ಪಿಯುಸಿ ಮಾದರಿ ಪ್ರಶ್ನೆ ಪತ್ರಿಕೆ ಬಿಡುಗಡೆ ಮಾಡಲಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಮಾಹಿತಿ ನೀಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಸಚಿವರು 2021 -22 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಒಟ್ಟು 42 ವಿಷಯಗಳ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಬಿಡುಗಡೆ ಮಾಡಲಾಗಿದೆ. pue.kar.nic.in ವೆಬ್ಸೈಟ್ ನಲ್ಲಿ ಪ್ರಶ್ನೆಪತ್ರಿಕೆಗಳು ಲಭ್ಯವಿವೆ ಎಂದು ತಿಳಿಸಿದ್ದಾರೆ. ಏಪ್ರಿಲ್ 16 ರಿಂದ ಮೇ 4 ರವರೆಗೆ ಸೆಕೆಂಡ್ ಪಿಯುಸಿ ವಾರ್ಷಿಕ ಪರೀಕ್ಷೆ ನಡೆಯಲಿದ್ದು,

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್| ದ್ವಿತೀಯ ಪಿಯುಸಿ ಮಾದರಿ ಪ್ರಶ್ನೆಪತ್ರಿಕೆ ಬಿಡುಗಡೆ Read More »

ಬೆಂಗಳೂರು: ಪ್ರತಿಭಟನೆಯಲ್ಲಿ ತೊಡಗಿದ್ದ ಎಬಿವಿಪಿ‌ ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್

ಸಮಗ್ರ ನ್ಯೂಸ್ ಡೆಸ್ಕ್ : ವಿದ್ಯಾರ್ಥಿ ವೇತನ, ಹಾಸ್ಟೆಲ್, ಮೌಲ್ಯಮಾಪನ ಸೇರಿದಂತೆ ಹಲವು ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಎಬಿವಿಪಿ ನಡೆಸುತ್ತಿದ್ದ ಪ್ರತಿಭಟನೆ ಸಂದರ್ಭದಲ್ಲಿ ಲಾಠಿ ಚಾರ್ಜ್ ನಡೆದಿದ್ದು, ಹಲವು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ‌ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ವಿದ್ಯಾರ್ಥಿಗಳು ವಿವಿಗೆ ಮುತ್ತಿಗೆ ಹಾಕಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿಯೇ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ಅಲ್ಲದೇ, ಪ್ರತಿಭಟನೆ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮಧ್ಯೆಯೂ ಜಗಳ ನಡೆದಿದ್ದು, ಇಲ್ಲಿಯ ವಿಶ್ವವಿದ್ಯಾಲಯದಲ್ಲಿ ಎಬಿವಿಪಿ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ವಿವಿ ಸಂಶೋಧನಾ ವಿದ್ಯಾರ್ಥಿಗಳ ನಡುವೆ ಜಗಳ ಆರಂಭವಾಗಿದೆ.

ಬೆಂಗಳೂರು: ಪ್ರತಿಭಟನೆಯಲ್ಲಿ ತೊಡಗಿದ್ದ ಎಬಿವಿಪಿ‌ ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್ Read More »

ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್| ‘ಪೂರ್ಣ ಕ್ಯಾರಿ ಓವರ್’ಗೆ ಅನುಮತಿ

ಸಮಗ್ರ ನ್ಯೂಸ್ ಡೆಸ್ಕ್: ಕೊರೋನಾ ಸೋಂಕಿನಿಂದಾಗಿ 2021-22ನೇ ಸಾಲಿಗೆ ಅನ್ವಯವಾಗುವಂತೆ ಡಿಪ್ಲೊಮಾ ವಿದ್ಯಾರ್ಥಿಗಳಿಗೆ `ಪೂರ್ಣ ಕ್ಯಾರಿ ಓವರ್’ಗೆ ಅನುಮತಿ ನೀಡಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದ್ದಾರೆ. ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವ ಅವರು, ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಗರಿಷ್ಠ 4 ವಿಷಯಗಳಿಗೆ ಮಾತ್ರ ಕ್ಯಾರಿ ಓವರ್ ಕೊಡುವ ಪದ್ಧತಿ ಇದೆ. ಆದರೆ, ಕೊರೋನಾ ಸೋಂಕು ವ್ಯಾಪಕವಾಗಿ ಹಬ್ಬಿದ್ದರಿಂದ ವಿದ್ಯಾರ್ಥಿಗಳಿಗೆ ಅನಾನುಕೂಲವಾಗಿದೆ. ಹೀಗಾಗಿ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪ್ರಸ್ತಕ ಶೈಕ್ಷಣಿಕ ವರ್ಷಕ್ಕೆಪೂರ್ಣ ಕ್ಯಾರಿ ಓವರ್’ಗೆ ಅವಕಾಶ

ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್| ‘ಪೂರ್ಣ ಕ್ಯಾರಿ ಓವರ್’ಗೆ ಅನುಮತಿ Read More »

ಬೆಂಗಳೂರು :ಬೀದಿ ನಾಯಿ ಮೇಲೆ ಕಾರು ಹತ್ತಿಸಿ ವಿಕೃತಿ ಮೆರೆದ ಯುವಕ

ಸಮಗ್ರ ನ್ಯೂಸ್ ಡೆಸ್ಕ್: ಬೀದಿ ನಾಯಿ ಮೇಲೆ ಕಾರು ಹತ್ತಿಸಿ ಯುವಕನೊಬ್ಬ ವಿಕೃತಿ ಮೆರೆದ ಘಟನೆ ಜಯನಗರದಲ್ಲಿ ನಡೆದಿದೆ. ಮಾಜಿ ಉದ್ಯಮಿ ಆದಿಕೇಶವುಲು ನಾಯ್ಡು ಮೊಮ್ಮಗ ಆದಿ ಈ ಕೃತ್ಯ ಎಸಗಿದ್ದಾನೆ. ಬೀದಿ ಮೇಲೆ ಮಲಗಿದ್ದ ನಾಯಿಯ ಮೇಲೆ ಉದ್ದೇಶಪೂರ್ವಕವಾಗಿಯೇ ಆಡಿ ಕಾರು ಹತ್ತಿಸಿ ವಿಕೃತಿ ಮೆರೆದಿದ್ದಾನೆ. ಆದಿ ಕಾರನ್ನು ಬೇಕೆಂದೇ ರಿವರ್ಸ್ ತೆಗೆದುಕೊಂಡು ನಾಯಿ ಮೇಲೆ ಹತ್ತಿಸಿದ್ದಾನೆ. ಕಾರು ಹತ್ತಿದ ರಭಸಕ್ಕೆ ನಾಯಿ ವಿಲ-ವಿಲ ಒದ್ದಾಡಿದೆ. ಜಯನಗರ 1ನೇ ಬ್ಲಾಕ್ 10ನೇ ಬಿ ಮೈನ್ ನಲ್ಲಿ

ಬೆಂಗಳೂರು :ಬೀದಿ ನಾಯಿ ಮೇಲೆ ಕಾರು ಹತ್ತಿಸಿ ವಿಕೃತಿ ಮೆರೆದ ಯುವಕ Read More »

ವಿಜಯಪುರದಲ್ಲಿ ಮತ್ತೆ ಕಂಪಿಸಿದ‌ ಭೂಮಿ| ಆತಂಕದಲ್ಲಿ ಬಸವನಾಡಿನ ಜನತೆ

ಸಮಗ್ರ ನ್ಯೂಸ್ ಡೆಸ್ಕ್: ವಿಜಯಪುರ ನಗರ ಹಾಗೂ ತಾಲೂಕಿನ ಹಲವು ಕಡೆಯಲ್ಲಿ ಮತ್ತೆ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 2.9 ರಷ್ಟು ದಾಖಲಾಗಿದೆ. ಅಲಿಯಾಬಾದ್, ನಿಂಗನಾಳ, ಭರಟಗಿ, ಗೂಗದಡ್ಡಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಭೂಕಂಪ ಹಿನ್ನೆಲೆಯಲ್ಲಿ ಸ್ಥಳೀಯ ನಿವಾಸಿಗಳಲ್ಲಿ ಆತಂಕ ಹೆಚ್ಚಾಗಿದೆ. ಭೂಮಿ ಕಂಪನದ ವೇಳೆ ತಮಗಾದ ಅನುಭವದ ಬಗ್ಗೆ ಜನ ಮಾಹಿತಿ ಹಂಚಿಕೊಂಡಿದ್ದಾರೆ. ಬಸವ ನಾಡಿನಲ್ಲಿ ಕೆಲ ತಿಂಗಳಿನಿಂದ ಆಗಾಗ್ಗೆ ಭೂಮಿ ಕಂಪಿಸುತ್ತಿರುವುದು ಜನರನ್ನು ಆತಂಕಕ್ಕೆ ದೂಡಿದೆ. ನೆರೆಯ

ವಿಜಯಪುರದಲ್ಲಿ ಮತ್ತೆ ಕಂಪಿಸಿದ‌ ಭೂಮಿ| ಆತಂಕದಲ್ಲಿ ಬಸವನಾಡಿನ ಜನತೆ Read More »

ಮಹೀಂದ್ರಾ ಶೋ ರೂಂನಲ್ಲಿ ಅವಮಾನಕ್ಕೊಳಗಾದ ರೈತನ ಮನೆಗೆ ಬಂತು ಹೊಸ ಗೂಡ್ಸ್ ಜೀಪ್ |ಶುಭಕೋರಿದ ಆನಂದ್ ಮಹೀಂದ್ರ

ತುಮಕೂರು: ಮಹೀಂದ್ರಾ ಶೋ ರೂಂನಲ್ಲಿ ರೈತನಿಗೆ ಅಪಮಾನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಹೊಸ ಬೆಳವಣಿಗೆಯೊಂದು ನಡೆದಿದೆ. ಇದೀಗ ರೈತನ ಮನೆಗೆ ಮಹೀಂದ್ರ ಗೂಡ್ಸ್ ವಾಹನ ಆಗಮಿಸಿದೆ. ಜ.28 ರೈತ ಕೆಂಪೇಗೌಡಗೆ ಕಂಪನಿ ವಾಹನ ಡೆಲಿವರಿ ಮಾಡಿದೆ. ಅಷ್ಟೇ ಅಲ್ಲದೆ, ಈ ಕುರಿತು ಸ್ವತಃ ಆನಂದ್ ಮಹೀಂದ್ರ ಟ್ವೀಟ್​ ಮಾಡಿದ್ದಾರೆ. ರೈತ ಕೆಂಪೇಗೌಡರಿಂದ ಮಹಿಂದ್ರ ಗೂಡ್ಸ್ ವಾಹನ ಖರೀದಿ ಮಾಡಲಾಗಿದೆ. ಈ ಬಗ್ಗೆ ರೈತ ಕೆಂಪೇಗೌಡರ ಸಂತಸ ಹಂಚಿಕೊಂಡಿದ್ದಾರೆ. 9.40 ಲಕ್ಷ ರೂಪಾಯಿಗೆ ಕೆಂಪೇಗೌಡ ವಾಹನ ಖರೀದಿಸಿದ್ದಾರೆ. 2

ಮಹೀಂದ್ರಾ ಶೋ ರೂಂನಲ್ಲಿ ಅವಮಾನಕ್ಕೊಳಗಾದ ರೈತನ ಮನೆಗೆ ಬಂತು ಹೊಸ ಗೂಡ್ಸ್ ಜೀಪ್ |ಶುಭಕೋರಿದ ಆನಂದ್ ಮಹೀಂದ್ರ Read More »

ರಾಜ್ಯಾಧ್ಯಂತ ನೈಟ್ ಕರ್ಪ್ಯೂವನ್ನು ರದ್ದು

ಬೆಂಗಳೂರು: ಕೊರೋನಾ ನಿಯಂತ್ರಣಕ್ಕಾಗಿ ರಾಜ್ಯಾಧ್ಯಂತ ಜಾರಿಗೊಳಿಸಲಾಗಿದ್ದಂತ ನೈಟ್ ಕರ್ಪ್ಯೂವನ್ನು ರದ್ದುಪಡಿಸಲಾಗಿದೆ. ಇದಲ್ಲದೇ ಹೋಟೆಲ್, ರೆಸ್ಟೋರೆಂಟ್, ಪಬ್ ಗಳಲ್ಲಿನ ಶೇ.50ರ ಮಿತಿಯನ್ನು ವಾಪಾಸ್ ಪಡೆಯಲಾಗಿದೆ.ಆದ್ರೇ ಸಿನಿಮಾ ಮಂದಿರಗಳಲ್ಲಿ ಶೇ.50ರ ಮಿತಿಯನ್ನು ಮುಂದುವರೆಸಲಾಗಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ತಿಳಿಸಿದ್ದಾರೆ. ಈ ಕುರಿತಂತೆ ಇಂದು ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಕೋವಿಡ್ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ತಜ್ಞರು ನೀಡಿದಂತ ವರದಿಯ ಆಧಾರದ ಮೇಲೆ ಹಲವು ವಿಚಾರಗಳನ್ನು ಚರ್ಚಿಸಲಾಗಿದೆ. ರಾಜ್ಯದಲ್ಲಿ 0-14 ವರ್ಷ 22,318 ಮಕ್ಕಳಿಗೆ

ರಾಜ್ಯಾಧ್ಯಂತ ನೈಟ್ ಕರ್ಪ್ಯೂವನ್ನು ರದ್ದು Read More »

ಐಪಿಎಸ್ ಅಧಿಕಾರಿ ರವಿ‌ ಡಿ. ಚೆನ್ನಣ್ಣನವರ್ ವರ್ಗಾವಣೆಗೆ ಬ್ರೇಕ್

ಸಮಗ್ರ ನ್ಯೂಸ್ ಡೆಸ್ಕ್: ಐಪಿಎಸ್ ಅಧಿಕಾರಿ ರವಿ.ಡಿ.ಚೆನ್ನಣ್ಣನವರ್ ರನ್ನು ವಾಲ್ಮೀಕಿ ಬುಡಕಟ್ಟು ನಿಗಮದ ಎಂಡಿ ಆಗಿ ವರ್ಗಾಯಿಸಿದ್ದ ರಾಜ್ಯ ಸರ್ಕಾರ ಇದೀಗ ಆದೇಶಕ್ಕೆ ತಡೆ ಹಿಡಿದಿದೆ.ರಾಜ್ಯ ಸರ್ಕಾರವು ಜನವರಿ 26 ರಂದು ರವಿ ಡಿ.ಚೆನ್ನಣ್ಣನವರ್ ಸೇರಿ ಒಟ್ಟು 9 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು. ರವಿ.ಡಿ.ಚೆನ್ನಣ್ಣನವರ್ ಸಿಐಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ರಾಜ್ಯ ಸರ್ಕಾರ ರವಿ. ಡಿ.ಚೆನ್ನಣ್ಣನವರ್ ರನ್ನು ವಾಲ್ಮೀಕಿ ಬುಡಕಟ್ಟು ನಿಗಮದ ಎಂಡಿ ಆಗಿ ವರ್ಗಾವಣೆ ಮಾಡಿತ್ತು. ರವಿ ಚೆನ್ನಣ್ಣನವರ್ ಸೇರಿದಂತೆ ಕೆಲ ಪೊಲೀಸ್ ಅಧಿಕಾರಿಗಳ

ಐಪಿಎಸ್ ಅಧಿಕಾರಿ ರವಿ‌ ಡಿ. ಚೆನ್ನಣ್ಣನವರ್ ವರ್ಗಾವಣೆಗೆ ಬ್ರೇಕ್ Read More »