ರಾಜ್ಯ

ದುಷ್ಕರ್ಮಿಗಳಿಂದ ಕಾಫಿ ನಾಡು ಚಂದು ಅವರ ಇನ್ಸ್ಟಾಗ್ರಾಂ ಖಾತೆ ಹ್ಯಾಕ್

ಸಮಗ್ರ ನ್ಯೂಸ್ : ಸೋಷಿಯಲ್ ಮೀಡಿಯಾದಲ್ಲಿ ಬರ್ತ್‌ಡೇ ವಿಶ್ ಮಾಡುತ್ತಲೇ ಸಾಕಷ್ಟು ಖ್ಯಾತಿ ಗಳಿಸಿದ ಕಾಫಿ ನಾಡು ಚಂದುಗೆ ಇದೀಗ ಸಂಕಷ್ಟವೊಂದು ಎದುರಾಗಿದೆ. ಚಿಕ್ಕಮಗಳೂರಿನಲ್ಲಿ ಆಟೋ ಓಡಿಸಿಕೊಂಡು ಸ್ವತಃ ಪ್ರತಿಭೆಯಿಂದಲೇ ಮೇಲೆ ಬಂದಿರೋ ಕಾಫಿ ನಾಡು ಚಂದು ಅವರ ಇನ್ಸ್ಟಾಗ್ರಾಂ ಖಾತೆ ದುಷ್ಕರ್ಮಿಗಳು ಹ್ಯಾಕ್ ಮಾಡಿದ್ದಾರೆ. ನಾನು ಶಿವಣ್ಣ ಪುನೀತ್ ಅಣ್ಣನ ಅಭಿಮಾನಿ ಎಂದು ವೀಡಿಯೋ ಶುರು ಮಾಡುತ್ತಿದ್ದ ಚಂದು ಅವರ ಇನ್ಸ್ಟಾಗ್ರಾಂ ಅಕೌಂಟ್ ಕಾಣೆಯಾಗಿದೆ. ಬರ್ತ್‌ಡೇ ವಿಶ್ ಮಾಡುವ ಮೂಲಕ 4 ಲಕ್ಷಕ್ಕೂ ಅಧಿಕ ಫ್ಯಾನ್ಸ್ […]

ದುಷ್ಕರ್ಮಿಗಳಿಂದ ಕಾಫಿ ನಾಡು ಚಂದು ಅವರ ಇನ್ಸ್ಟಾಗ್ರಾಂ ಖಾತೆ ಹ್ಯಾಕ್ Read More »

ಹೆಸ್ಕಾಂ ನೌಕರ ನೇಣಿಗೆ ಶರಣು

ಸಮಗ್ರ ನ್ಯೂಸ್ : ಹೆಸ್ಕಾಂ ನೌಕರ ನೇಣಿಗೆ ಶರಣಾದ ಘಟನೆಯೊಂದು ಅಥಣಿ(ಬೆಳಗಾವಿ) ಪಟ್ಟಣದ ಹಲ್ಯಾಳ ಸರ್ಕಲ್‌ಗೆ ಹೊಂದಿಕೊಂಡಿರುವ ವಿದ್ಯುತ್ ವಿತರಣಾ ಕೇಂದ್ರದ ಆವರಣದಲ್ಲಿ ನಡೆದಿದೆ. ಮಂಜುನಾಥ ಮುತ್ತಗಿ (35) ಮೃತರೆಂದು ಗುರುತಿಸಲಾಗಿದೆ. ಗುತ್ತಿಗೆ ಆಧಾರದ ಮೇಲೆ ಅಥಣಿ ವಿದ್ಯುತ್ ಇಲಾಖೆಯಲ್ಲಿ ಇವರು ಕೆಲಸ ಮಾಡುತ್ತಿದ್ದರು. ವಿದ್ಯುತ್ ಕಂಬಗಳನ್ನು ನೆಡುವ ಟ್ರ್ಯಾಕ್ಟರ್‌ಗೆ ಬೈಕ್ ಸಹಾಯದಿಂದ ನೇಣು ಬಿಗಿದುಕೊಂಡಿದ್ದಾರೆಂದು ತಿಳಿದುಬಂದಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಅಥಣಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಹೆಸ್ಕಾಂ ನೌಕರ ನೇಣಿಗೆ ಶರಣು Read More »

ಮುರುಘಾ ಶ್ರೀ ಗಳ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ

ಸಮಗ್ರ ನ್ಯೂಸ್ : ಪೋಕ್ಸೊ ಪ್ರಕರಣದಡಿ ಬಂಧನಕ್ಕೊಳಗಾಗಿರುವ ಮುರುಘಾ ಶ್ರೀಗಳ ಜಾಮೀನು ಅರ್ಜಿ ವಿಚಾರಣೆಯನ್ನು ನಾಳೆಗೆ ಮುಂದೂಡಲಾಗಿದೆ. ಚಿತ್ರದುರ್ಗ ಜಿಲ್ಲಾ ನ್ಯಾಯಾಲಯವು ಜಾಮೀನು ಅರ್ಜಿ ವಿಚಾರಣೆಯನ್ನು ಮುಂದೂಡಿದ್ದು, ನಾಳೆ ಆಕ್ಷೇಪಣೆ ಸಲ್ಲಿಸಲು ಸೂಚನೆ ನೀಡಿದೆ. ಈ ವೇಳೆ ಸಂತ್ರಸ್ತೆಯರು ಕೋರ್ಟ್‌ ಹಾಜರಾಗಲಿದ್ದು, ಅವರ ಸಮ್ಮುಖದಲ್ಲೇ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಮುರುಘಾ ಶ್ರೀ ಜಾಮೀನಿಗೆ ನಾಳೆ ಸಂತ್ರಸ್ತೆಯರ ಪರ ವಕೀಲರು ಆಕ್ಷೇಪಣೆ ಸಲ್ಲಿಸಲಿದ್ದಾರೆ. 4ನೇ ಆರೋಪಿ ಮಠದ ಕಾರ್ಯದರ್ಶಿ ಪರಮಶಿವಯ್ಯ, 5ನೇ ಆರೋಪಿ ವಕೀಲ ಗಂಗಾಧರಯ್ಯ ನಿರೀಕ್ಷಣಾ

ಮುರುಘಾ ಶ್ರೀ ಗಳ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ Read More »

ಕೊಲ್ಲೂರು ಕ್ಷೇತ್ರದ ಸೌಪರ್ಣಿಕಾ ನದಿಯಲ್ಲಿ ಕೊಚ್ಚಿ ಹೋಗಿದ್ದ ಮಹಿಳೆ ಮೃಹದೇಹ ಪತ್ತೆ

ಸಮಗ್ರ ನ್ಯೂಸ್: ಇಲ್ಲಿನ ಪ್ರಸಿದ್ಧ ಕ್ಷೇತ್ರ ಶ್ರೀ ಮೂಕಾಂಬಿಕಾ ದೇಗುಲಕ್ಕೆ ದರ್ಶನಕ್ಕೆ ಆಗಮಿಸಿದ್ದ ಮಹಿಳೆ ನದಿಯಲ್ಲಿ ಕೊಚ್ಚಿ ಹೋದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮಹಿಳೆಯ ಮೃತದೇಹ ಪತ್ತೆಯಾಗಿದೆ. ಸೆ. 10ರಂದು ಸೌಪರ್ಣಿಕಾ ನದಿಯಲ್ಲಿ ಕೊಚ್ಚಿ ಹೋಗಿದ್ದ ತಿರುವನಂತಪುರದ ಮುರುಗನ್‌ ಅವರ ಪತ್ನಿ ಶಾಂತಿ ಶೇಖರನ್‌(42) ಅವರ ಮೃತದೇಹ ಸೆ. 11ರ ಸಂಜೆ ಪತ್ತೆಯಾಗಿದೆ. ತಿರುವನಂತಪುರದಿಂದ ಕೊಲ್ಲೂರು ಕ್ಷೇತ್ರ ದರ್ಶನಕ್ಕೆ 14 ಮಂದಿಯ ತಂಡ ಆಗಮಿಸಿತ್ತು. ಅವರು ಸೌಪರ್ಣಿಕಾ ಸ್ನಾನಘಟ್ಟಕ್ಕೆ ತೆರಳಿ ತೀರ್ಥ ಸ್ನಾನಕ್ಕೆಂದು ನದಿಗೆ ಇಳಿದಿದ್ದರು. ಶಾಂತಿ

ಕೊಲ್ಲೂರು ಕ್ಷೇತ್ರದ ಸೌಪರ್ಣಿಕಾ ನದಿಯಲ್ಲಿ ಕೊಚ್ಚಿ ಹೋಗಿದ್ದ ಮಹಿಳೆ ಮೃಹದೇಹ ಪತ್ತೆ Read More »

ಇಂದಿನಿಂದ ರಾಜ್ಯ ವಿಧಾನಮಂಡಲ ಅಧಿವೇಶನ| ಸರ್ಕಾರದ ವಿರುದ್ದ ಮುಗಿಬೀಳಲು ಪ್ರತಿಪಕ್ಷಗಳು ಸಜ್ಜು

ಸಮಗ್ರ ನ್ಯೂಸ್: ಕರ್ನಾಟಕ ವಿಧಾನಮಂಡಲದ ಅಧಿವೇಶನ ಸೋಮವಾರ ಆರಂಭಗೊಳ್ಳಲಿದ್ದು, ಹತ್ತು ದಿನಗಳ ಕಲಾಪದಲ್ಲಿ (ಸೆ.12 ರಿಂದ ಸೆ.23) ಬಿಜೆಪಿ ಸರ್ಕಾರದ ಹೆಡೆಮುರಿ ಕಟ್ಟಲು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಹಲವು ‘ಅಸ್ತ್ರ’ಗಳನ್ನು ಸಿದ್ಧ ಮಾಡಿಕೊಂಡಿವೆ. ಗುತ್ತಿಗೆ ಕಾಮಗಾರಿಯಲ್ಲಿ ಶೇ 40 ಲಂಚದ ಆರೋಪ, ಇತ್ತೀಚಿನ ಮಳೆ ಮತ್ತು ಪ್ರವಾಹದಿಂದ ಜನರಿಗಾದ ಸಂಕಷ್ಟ, ಪಠ್ಯ ಪುಸ್ತಕ ಪರಿಷ್ಕರಣೆಯಲ್ಲಿ ಅವಾಂತರ ಸೇರಿದಂತೆ ಹಲವು ವಿಷಯಗಳನ್ನು ಪ್ರಸ್ತಾಪಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಉಭಯ ಪಕ್ಷಗಳು ಸಜ್ಜಾಗಿವೆ. ಇದಕ್ಕೆ ತಿರುಗೇಟು ನೀಡಲು ಬಿಜೆಪಿಯೂ ತಯಾರಿ

ಇಂದಿನಿಂದ ರಾಜ್ಯ ವಿಧಾನಮಂಡಲ ಅಧಿವೇಶನ| ಸರ್ಕಾರದ ವಿರುದ್ದ ಮುಗಿಬೀಳಲು ಪ್ರತಿಪಕ್ಷಗಳು ಸಜ್ಜು Read More »

ಇಂದು(ಸೆ.12) ದ್ವಿತೀಯ ಪಿಯುಸಿ ಪೂರಕ ಫಲಿತಾಂಶ ಪ್ರಕಟ| ಫಲಿತಾಂಶ ವೀಕ್ಷಿಸುವುದು ಹೇಗೆ ಗೊತ್ತಾ?

ಸಮಗ್ರ ನ್ಯೂಸ್: ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ ಫಲಿತಾಂಶವನ್ನು ಇಂದು (ಸೆ.12) ಪ್ರಕಟಿಸಲಾಗುವುದು ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್‌ ತಿಳಿಸಿದ್ದಾರೆ. ಈ ಕುರಿತು ಟ್ವೀಟ್‌ ಮೂಲಕ ಮಾಹಿತಿ ನೀಡಿದ ಸಚಿವರು, ‘ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಫಲಿತಾಂಶವನ್ನು ಸೆಪ್ಟೆಂಬರ್ 12ರಂದು ಪ್ರಕಟಿಸಲಾಗುತ್ತದೆ. ಬೆಳಗ್ಗೆ 11 ಗಂಟೆ ನಂತರ ವೆಬ್‌ಸೈಟ್‌ http://karresults.nic.in ನಲ್ಲಿ ಫಲಿತಾಂಶ ಲಭ್ಯವಾಗಲಿದೆ’ ಎಂದಿದ್ದಾರೆ. ಫಲಿತಾಂಶ ಪರಿಶೀಲಿಸುವುದು ಹೇಗೆ?karresults.nic.in ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ.ಫಲಿತಾಂಶದ ಲಿಂಕ್ ಅನ್ನು ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ.ಫಲಿತಾಂಶದ ಲಿಂಕ್ ಅನ್ನು

ಇಂದು(ಸೆ.12) ದ್ವಿತೀಯ ಪಿಯುಸಿ ಪೂರಕ ಫಲಿತಾಂಶ ಪ್ರಕಟ| ಫಲಿತಾಂಶ ವೀಕ್ಷಿಸುವುದು ಹೇಗೆ ಗೊತ್ತಾ? Read More »

ಬಿಗ್ ಬಾಸ್ ಆರಂಭಕ್ಕೆ ಕೆಲವೊಂದು ಧಾರಾವಾಹಿ ಅಂತ್ಯಗೊಳಿಸಿದ ಕಲರ್ಸ್ ಕನ್ನಡ

ಬೆಂಗಳೂರು: ಬಿಗ್ ಬಾಸ್ ಕನ್ನಡ 9 ನೇ ಆವೃತ್ತಿ ಆರಂಭವಾಗಲು ಕೆಲವೇ ದಿನ ಬಾಕಿಯಿದೆ. ಹೀಗಾಗಿ ಈ ಕಲರ್ಸ್ ವಾಹಿನಿ ಬಿಗ್ ಬಾಸ್ ಶೋ ಪ್ರಸಾರಕ್ಕೆ ಸಮಯ ನಿಗದಿಪಡಿಸಲು ಕೆಲವೊಂದು ಧಾರವಾಹಿಗಳಿಗೆ ಕತ್ತರಿ ಹಾಕಲು ಹೊರಟಿದೆ. ಬಿಗ್ ಬಾಸ್ ಕನ್ನಡ ಸೀಸನ್ 9 ಟಿವಿಯಲ್ಲಿ ಪ್ರಸಾರವಾಗಲಿದೆ. ಹೀಗಾಗಿ ಕಲರ್ಸ್ ವಾಹಿನಿ ತನ್ನ ಜನಪ್ರಿಯ ಧಾರವಾಹಿಗಳಾದ ನಮ್ಮನೆ ಯುವರಾಣಿ, ಕನ್ಯಾಕುಮಾರಿ, ಮಂಗಳಗೌರಿ ಮದುವೆ ಮತ್ತು ನನ್ನರಸಿ ರಾಧೆ ಎಂಬ ಮೂರು ಧಾರವಾಹಿಗಳನ್ನು ಅಂತ್ಯಗೊಳಿಸುತ್ತಿದೆ. ಈ ಜೊತೆಗೆ ನಮ್ಮನೆ ಯುವರಾಣಿ

ಬಿಗ್ ಬಾಸ್ ಆರಂಭಕ್ಕೆ ಕೆಲವೊಂದು ಧಾರಾವಾಹಿ ಅಂತ್ಯಗೊಳಿಸಿದ ಕಲರ್ಸ್ ಕನ್ನಡ Read More »

ಇನ್ಮುಂದೆ ರಸ್ತೆಗಳಲ್ಲಿ ಹುಟ್ಟುಹಬ್ಬ ಆಚರಿಸಿದರೆ ಜೈಲು ಶಿಕ್ಷೆ ಫಿಕ್ಸ್

ಸಮಗ್ರ ನ್ಯೂಸ್ : ಇತ್ತೀಚೆಗೆ ರಸ್ತೆಗಳಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುವುದು ಟ್ರೆಂಡ್ ಆಗಿಬಿಟ್ಟಿದೆ. ಆದರೆ, ಇನ್ನು ಮುಂದೆ ರಸ್ತೆಗಳಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುವವರ ಮೇಲೆ ಕೇಸ್ ದಾಖಲಿಸಿ, ಜೈಲಿಗೆ ಕಳುಹಿಸಲು ಪೊಲೀಸರು ಮುಂದಾಗಿದ್ದಾರೆ. ಸದ್ಯ ಈ ನಿಯಮ ರಾಮನಗರ ಜಿಲ್ಲೆಯಾದ್ಯಂತ ಜಾರಿಯಲ್ಲಿದೆ. ಹುಟ್ಟುಹಬ್ಬದ ಆಚರಣೆ ನೆಪದಲ್ಲಿ ಬೇರೆ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದ್ದು ಹಾಗೂ ಅಪಘಾತಗಳು ಸಂಭವಿಸುವ ಸಾಧ್ಯತೆ ಇರುವುದರಿಂದ ಈ ರೂಲ್ಸ್ ಜಾರಿ ಮಾಡಲಾಗಿದೆ.

ಇನ್ಮುಂದೆ ರಸ್ತೆಗಳಲ್ಲಿ ಹುಟ್ಟುಹಬ್ಬ ಆಚರಿಸಿದರೆ ಜೈಲು ಶಿಕ್ಷೆ ಫಿಕ್ಸ್ Read More »

ಸಿಡಿಲು ಬಡಿದು ಇಬ್ಬರು ದುರ್ಮರಣ

ಸಮಗ್ರ ನ್ಯೂಸ್: ಸತತವಾಗಿ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಗೆ ಜನಜೀವನ ನಲುಗಿ ಹೋಗಿದೆ ಅತಿವೃಷ್ಟಿ ಹಾಗೂ ನೆರೆ ಭೀತಿ ಜನರನ್ನು ತಲ್ಲಣಗೊಳಿಸಿದೆ. ಶನಿವಾರ ಸಿಡಿಲು ಬಡಿದು ಓರ್ವ ಮಹಿಳೆ ಹಾಗೂ ವ್ಯಕ್ತಿಯೊಬ್ಬರು ದುರ್ಮರಣ ಹೊಂದಿದ್ದಾರೆ. ಜಿಲ್ಲೆಯ ಸುರಪುರ ತಾಲೂಕಿನ ಚಿಕ್ಕನಹಳ್ಳಿಯ ನಂದಮ್ಮ (35) ಹಾಗೂ ದೇವತ್ಕಲ್ ಗ್ರಾಮದ ರಾಜು ಸಿಂಗ್ (38) ಮೃತರು. ತಮ್ಮ ಭತ್ತದ ಜಮೀನಿನಲ್ಲಿನ ಕಳೆ ತೆಗೆದು ವಾಪಸ್ ಬರುವಾಗ ಸಿಡಿಲು ಬಡಿದು ನಂದಮ್ಮ ಮೃತಪಟ್ಟರೆ, ಮನೆ ಮುಂದೆ ನಿಂತಿದ್ದಾಗ ಸಿಡಿಲು ಬಡಿದು ರಾಜು ಸಿಂಗ್ ಕೊನೆಯುಸಿರೆಳೆದರು.

ಸಿಡಿಲು ಬಡಿದು ಇಬ್ಬರು ದುರ್ಮರಣ Read More »

ರಾಜ್ಯದಲ್ಲಿ ಇನ್ನೂ ನಾಲ್ಕು ದಿನ ಮಳೆ| ಹಲವು ಜಿಲ್ಲೆಗಳಿಗೆ ಅಲರ್ಟ್ ಘೋಷಣೆ

ಸಮಗ್ರ ನ್ಯೂಸ್: ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಇನ್ನೂ ನಾಲ್ಕು ದಿನ ಮಳೆಯ ಆರ್ಭಟ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಂದಿನಿಂದ ಕರಾವಳಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, 10 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಕೊಡಗು, ಹಾಸನ, ಚಿಕ್ಕಮಗಳೂರು ಮತ್ತು ಶಿವಮೊಗ್ಗ, ಉತ್ತರ ಒಳನಾಡಿನ ಬೆಳಗಾವಿ, ಬೀದರ್, ರಾಯಚೂರು ಜಿಲ್ಲೆಗಳಲ್ಲಿ ಇಂದು ಭಾರೀ ಮಳೆಯಾಗುವ ಹಿನ್ನೆಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಬಾಗಲಕೋಟೆ,

ರಾಜ್ಯದಲ್ಲಿ ಇನ್ನೂ ನಾಲ್ಕು ದಿನ ಮಳೆ| ಹಲವು ಜಿಲ್ಲೆಗಳಿಗೆ ಅಲರ್ಟ್ ಘೋಷಣೆ Read More »