ರಾಜ್ಯ

ಚಿಕ್ಕಮಗಳೂರು: ಚಿಕಿತ್ಸೆಗಾಗಿ ವೃದ್ಧೆಯನ್ನು ಜೋಳಿಗೆಯಲ್ಲಿ ಹೊತ್ತೊಯ್ದ ಸಂಬಂಧಿಕರು| ರಸ್ತೆ ಮನವಿಗೆ ಸ್ಪಂದಿಸದ ಸಚಿವರು, ಜಿಲ್ಲಾಧಿಕಾರಿ

ಸಮಗ್ರ ನ್ಯೂಸ್: ರಸ್ತೆ ಇಲ್ಲದೆ ವೃದ್ಧೆಯನ್ನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲು ಸಂಬಂಧಿಕರು ಜೋಳಿಗೆಯಲ್ಲಿ ಹೊತ್ತೊಯ್ದ ಘಟನೆ ಜಿಲ್ಲೆಯ ಕಳಸ ತಾಲೂಕಿನ ಗಂಟೆಮಕ್ಕಿ ಗ್ರಾಮದಲ್ಲಿ ನಡೆದಿದೆ. ವೃದ್ಧೆ ವೆಂಕಮ್ಮ(85) ಇವರು ಅನಾರೋಗ್ಯಕ್ಕೆ ಒಳಗಾದವರು. ಇವರು ಮನೆ ರಸ್ತೆ ಇಲ್ಲದೆ ತಮ್ಮ ಕೆಲಸ ಕಾರ್ಯಗಳಿಗೆ ಕಾಲು ದಾರಿಯಲ್ಲಿ ಓಡಾಡುತ್ತಿದ್ದ ಆದಿವಾಸಿ ಕುಟುಂಬವಾಗಿದೆ. ಇದೀಗ ಇವರಿಗೆ ಅನಾರೋಗ್ಯ ಉಂಟಾಗಿದ್ದು ಆಸ್ಪತ್ರೆಗೆ ಸಾಗಿಸಲು ವಾಹನ ಬಾರದೆ ಮನೆಯಿಂದ ಜಮೀನಿನ ಕಾಲು ದಾರಿಯಲ್ಲಿಸಂಬಂಧಿಕರು ಜೋಳಿಗೆಯಲ್ಲಿ ಹೊತ್ತೊಯ್ದಿದ್ದಾರೆ. 2021ರಲ್ಲಿಯೇ ರಸ್ತೆ ಇಲ್ಲ ರಸ್ತೆ ಮಾಡಿಸಿಕೊಡಿ ಎಂದು […]

ಚಿಕ್ಕಮಗಳೂರು: ಚಿಕಿತ್ಸೆಗಾಗಿ ವೃದ್ಧೆಯನ್ನು ಜೋಳಿಗೆಯಲ್ಲಿ ಹೊತ್ತೊಯ್ದ ಸಂಬಂಧಿಕರು| ರಸ್ತೆ ಮನವಿಗೆ ಸ್ಪಂದಿಸದ ಸಚಿವರು, ಜಿಲ್ಲಾಧಿಕಾರಿ Read More »

ಶ್ರೀಮತಿ ಇಂಪಾ ಜೆ. ಎಂ. ಇವರಿಗೆ ಪ್ರಾಮಾಣಿಕತೆಗೆ ಸಿಕ್ಕ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ

ಸಮಗ್ರ ನ್ಯೂಸ್: ಕೊಟ್ಟಿಗೆಹಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಾನಹಳ್ಳಿ ಮೂಡಿಗೆರೆ ತಾಲ್ಲೂಕು ಇಲ್ಲಿಯ ಶಿಕ್ಷಕಿಯವರಾದ ಶ್ರೀಮತಿ ಇಂಪಾ ಜೆ. ಎಂ.ಇವರಿಗೆ ಈ ಬಾರಿಯ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ದೊರಕಿದೆ. ಇವರು ಈ ಶಾಲೆಯಲ್ಲಿ ಸತತ ಹದಿನಾರು ವರ್ಷಗಳಿಂದ ತಮ್ಮ ಸೇವೆ ಸಲ್ಲಿಸುತ್ತಿದ್ದು ಹದಿಮೂರು ವರ್ಷಗಳ ಕಾಲ ಸಹ ಶಿಕ್ಷಕಿಯಾಗಿ, ಕಳೆದ ಮೂರು ವರ್ಷಗಳಿಂದ ಪ್ರಭಾರಿ ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದು ನಮ್ಮ ಊರಿನ ನಮ್ಮ ಶಾಲೆಯ ಅಭಿವೃದ್ಧಿಗೆ ಮಕ್ಕಳ ಶೈಕ್ಷಣಿಕ ಗುಣಮಟ್ಟದ ಶಿಕ್ಷಣಕ್ಕೆ

ಶ್ರೀಮತಿ ಇಂಪಾ ಜೆ. ಎಂ. ಇವರಿಗೆ ಪ್ರಾಮಾಣಿಕತೆಗೆ ಸಿಕ್ಕ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ Read More »

ಕೇರಳದ ಪ್ರಸ್ತಾವನೆಗೆ ಕರ್ನಾಟಕ ಎಳ್ಳುನೀರು| ಕಾಂಞಂಗಾಡ್- ಕಾಣಿಯೂರು ರೈಲು ಮಾರ್ಗ‌ ಅಸಾಧ್ಯವೆಂದ ಸಿಎಂ ಬೊಮ್ಮಾಯಿ

ಸಮಗ್ರ ನ್ಯೂಸ್: ರೈಲ್ವೆ ಮಾರ್ಗ, ರಸ್ತೆ ಸಾರಿಗೆ ಸೇರಿ ಮೂರು ವಿಚಾರಗಳಲ್ಲಿ ಕರ್ನಾಟಕ ಸರ್ಕಾರವನ್ನು ಮನವೊಲಿಸಲು ಬಂದಿದ್ದ ನೆರೆ ರಾಜ್ಯ ಕೇರಳ ಸಿಎಂ ಪಿಣರಾಯಿ ವಿಜಯನ್‌ ಅವರ ಎಲ್ಲ ಮೂರು ಪ್ರಸ್ತಾವನೆಗಳನ್ನೂ ಕರ್ನಾಟಕ ಸರ್ಕಾರ ತಿರಸ್ಕರಿಸಿದೆ. ಕಾಞಂಗಾಡ್- ಕಾಣಿಯೂರು ರೈಲು ಮಾರ್ಗ ಸೇರಿದಂತೆ ವಿವಿಧ ರೈಲ್ವೆ ಮತ್ತು ಹೆದ್ದಾರಿ ಯೋಜನೆಗಳಿಗೆ ಸಂಬಂಧಿಸಿದಂತೆ ಸಹಮತಿ ನೀಡುವಂತೆ ಕೇರಳ ಸರ್ಕಾರ ಕೋರಿದೆ. ಪ್ರಸ್ತಾವಿತ ಕಾಞಂಗಾಡ್ – ಕಾಣಿಯೂರು ರೈಲು ಮಾರ್ಗವು ಕೇರಳದಲ್ಲಿ 40 ಕಿ.ಮೀ. ಹಾಗೂ ಕರ್ನಾಟಕದಲ್ಲಿ 31 ಕಿ.ಮೀ.

ಕೇರಳದ ಪ್ರಸ್ತಾವನೆಗೆ ಕರ್ನಾಟಕ ಎಳ್ಳುನೀರು| ಕಾಂಞಂಗಾಡ್- ಕಾಣಿಯೂರು ರೈಲು ಮಾರ್ಗ‌ ಅಸಾಧ್ಯವೆಂದ ಸಿಎಂ ಬೊಮ್ಮಾಯಿ Read More »

ಬೆಳಗಾವಿ: ರಸ್ತೆ ಸುರಕ್ಷತಾ ತಡೆಗೋಡೆಯ ನಿರ್ಮಿಸಲು ಸಮೀಕ್ಷೆ ನಡೆಸಿದ ಅಧಿಕಾರಿಗಳು

ಸಮಗ್ರ ನ್ಯೂಸ್: ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಉಗಾರಖುರ್ದ ಪಟ್ಟಣ ಹಾಗೂ ಉಗಾರ ಬುದ್ರುಕ ಗ್ರಾಮದ ಮಾರ್ಗದ ರಸ್ತೆಯ ಬಗ್ಗೆ ‘ಸಮಗ್ರ ಸಮಾಚಾರ’ ಅಧಿಕಾರಿಗಳು ನಿರ್ಲಕ್ಷ್ಯಕ್ಕೆ ನೆಲಕ್ಕೆ ಉರುಳಿದ ಗೂಡ್ಸ್ ವಾಹನ ಎಂಬ ಶೀರ್ಷಿಕೆಯ‌ಡಿಯಲ್ಲಿ ವರದಿ ಬಿತ್ತರಿಸಿತ್ತು. ವರದಿ ಬಿತ್ತರವಾಗುತ್ತಿದಂತೆ ರಸ್ತೆ ತಡೆಗೋಡೆಯ ನಿರ್ಮಾಣಕ್ಕೆ ಅಧಿಕಾರಿಗಳು ಸಮೀಕ್ಷೆ ಮಾಡಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ರಸ್ತೆಗೆ ಸುರಕ್ಷತಾ ತಡೆಗೋಡೆಯನ್ನು ನಿರ್ಮಾಣ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಸಮಗ್ರ ಸಮಾಚಾರ ವರದಿಗೆ ಸಾರ್ವಜನಿಕರು ಮೆಚ್ಚುಗೆಯನ್ನು ‌ವ್ಯಕ್ತಪಡಿಸಿದ್ದಾರೆ.

ಬೆಳಗಾವಿ: ರಸ್ತೆ ಸುರಕ್ಷತಾ ತಡೆಗೋಡೆಯ ನಿರ್ಮಿಸಲು ಸಮೀಕ್ಷೆ ನಡೆಸಿದ ಅಧಿಕಾರಿಗಳು Read More »

ಗುಡ್ ನ್ಯೂಸ್: ಅತಿಥಿ‌ ಶಿಕ್ಷಕರ ಗೌರವಧನ ಬಿಡುಗಡೆ

ಸಮಗ್ರ‌ ನ್ಯೂಸ್: ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರಿಗೆ ಗೌರವಧನ ನೀಡಲು ಸರ್ಕಾರದ ವತಿಯಿಂದ 175.05 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ 2022 -23ನೇ ಶೈಕ್ಷಣಿಕ ಸಾಲಿನಲ್ಲಿ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಈ ಅತಿಥಿ ಶಿಕ್ಷಕರಿಗೆ ಗೌರವ ಧನ ನೀಡಲು ಅನುದಾನ ಬಿಡುಗಡೆ ಮಾಡಲಾಗಿದೆ. ವಿಳಂಬ ಮಾಡದಂತೆ ಬಿಡುಗಡೆಯಾದ ಅನುದಾನವನ್ನು ತಾಲೂಕು ಪಂಚಾಯಿತಿಗಳ ಮೂಲಕ ತಕ್ಷಣವೇ ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಲಾಗಿದೆ. ಪ್ರಾಥಮಿಕ ಶಾಲೆಗಳ

ಗುಡ್ ನ್ಯೂಸ್: ಅತಿಥಿ‌ ಶಿಕ್ಷಕರ ಗೌರವಧನ ಬಿಡುಗಡೆ Read More »

ದೇಸಿ ಸೀರೆ ತೊಟ್ಟು ಜಾಗೃತಿ ಮೂಡಿಸಿದ ನಾರಿಯರ ಓಟ

ಸಮಗ್ರ ನ್ಯೂಸ್:  ದೇಸಿ ಸೀರೆ ತೊಟ್ಟ ಮಹಿಳೆಯರು ಸೀರೆಯಲ್ಲೇ ಓಡಿ ದೈಹಿಕ ಚಟುವಟಿಕೆ ಕುರಿತು ಜಾಗೃತಿ ಮೂಡಿಸಿದರು. ತನೈರಾ ಸಂಸ್ಥೆಯು ಭಾನುವಾರ ಬೆಳಗ್ಗೆ ಮಲ್ಲೇಶ್ವರಂನಲ್ಲಿ ಏರ್ಪಡಿಸಿದ್ದ 3 ಕಿ.ಮೀ ಉದ್ದದ ‘ಸೀರೆ ಉಟ್ಟ ನಾರಿಯರ ಓಟದ ಸ್ಪರ್ಧೆ’ಗೆ (ರನ್ ವಿತ್ ಸ್ಯಾರಿ) ಕ್ಷೇತ್ರದ ಶಾಸಕ ಮತ್ತು ಸಚಿವ ಸಿ ಎನ್ ಅಶ್ವತ್ಥ ನಾರಾಯಣ ಚಾಲನೆ ನೀಡಿದರು. 18ನೇ ಅಡ್ಡರಸ್ತೆಯ ಮೈದಾನದಿಂದ ಆರಂಭವಾದ ಈ ಸ್ಪರ್ಧೆಯಲ್ಲಿ ಸಾವಿರಾರು ನಾರಿಯರು ಉತ್ಸಾಹದಿಂದ ಪಾಲ್ಗೊಂಡಿದ್ದರು. ಈ ವೇಳೆ ಮಾತನಾಡಿದ ಸಚಿವರು, ಆರೋಗ್ಯದ

ದೇಸಿ ಸೀರೆ ತೊಟ್ಟು ಜಾಗೃತಿ ಮೂಡಿಸಿದ ನಾರಿಯರ ಓಟ Read More »

ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಭರಪೂರ ಕೊಡುಗೆ ಘೋಷಿಸಿದ ಸಿಎಂ

ಸಮಗ್ರ ನ್ಯೂಸ್: ಪ್ರಸಕ್ತ ಸಾಲಿನಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ 2,100 ಶಾಲಾ ಕೊಠಡಿಗಳು ಮತ್ತು 2,500 ಅಂಗನವಾಡಿ ಕೇಂದ್ರಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಕಲ್ಯಾಣ ಕರ್ನಾಟಕದ ಅಮೃತ ಮಹೋತ್ಸವದ ಅಂಗವಾಗಿ ಶನಿವಾರ ಇಲ್ಲಿನ ಪೊಲೀಸ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಈ ಭಾಗದ ಸರ್ವಾಂಗೀಣ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಮತ್ತು ಕನಸನ್ನು ನನಸಾಗಿಸಲು ಬದ್ಧವಾಗಿದೆ ಎಂದರು. ಕಲ್ಯಾಣ ಕರ್ನಾಟಕ ಪ್ರದೇಶದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಲು ಸೂಚನೆಗಳನ್ನು

ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಭರಪೂರ ಕೊಡುಗೆ ಘೋಷಿಸಿದ ಸಿಎಂ Read More »

ವಾಹನಗಳಲ್ಲಿ ಎಲ್ಇಡಿ ದೀಪ ಬಳಸಿದರೆ 500ರೂ ದಂಡ ಫಿಕ್ಸ್

ಸಮಗ್ರ ನ್ಯೂಸ್ : ಎಲ್ ಇಡಿ (LED) ಬಳಸುವ ವಾಹನ ಸವಾರರಿಗೆ ಸಾರಿಗೆ ಸಚಿವ ಶ್ರೀರಾಮುಲು ಬಿಗ್ ಶಾಕ್ ನೀಡಿದ್ದು, ವಾಹನಗಳಲ್ಲಿ ಎಲ್ ಇಡಿ ದೀಪ ಬಳಸುತ್ತಿರುವ ಸವಾರರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ತಿಳಿಸಿದ್ದಾರೆ. ವಿಧಾನ ಪರಿಷತ್ ನಲ್ಲಿ ಬಿಜೆಪಿಯ ವೈ.ಎಂ. ಸತೀಶ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ವಾಹನಗಳಲ್ಲಿ ಎಲ್ ಇಡಿ ದೀಪ ಬಳಸುತ್ತಿರುವ ಸವಾರರ ವಿರುದ್ಧ ಮೋಟಾರು ವಾಹನ ಕಾಯ್ದೆಯ ಕಲಂ 177ರಡಿ ಪ್ರಕರಣ ದಾಖಲಿಸಿ 500 ರೂ. ದಂಡ ವಿಧಿಸಲಾಗುವುದು ಎಂದು ತಿಳಿಸಿದ್ದಾರೆ.

ವಾಹನಗಳಲ್ಲಿ ಎಲ್ಇಡಿ ದೀಪ ಬಳಸಿದರೆ 500ರೂ ದಂಡ ಫಿಕ್ಸ್ Read More »

ಸೆ.26 ಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪೌರ ಸನ್ಮಾನ

ಸಮಗ್ರ ನ್ಯೂಸ್: ‘ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೆ.26 ರಂದು ಹುಬ್ಬಳ್ಳಿಗೆ ಭೇಟಿ ನೀಡಲಿದ್ದು, ಹುಬ್ಬಳ್ಳಿ-ಧಾರವಾಡ ಜನತೆಯ ಪರವಾಗಿ ಮಹಾನಗರ ಪಾಲಿಕೆ ವತಿಯಿಂದ ಪೌರ ಸನ್ಮಾನ ನೀಡಲಾಗುತ್ತದೆ. ಐತಿಹಾಸಿಕ ದಸರಾ ಉದ್ಘಾಟನೆಗಾಗಿ ಸಾಂಸ್ಕೃತಿಕ ನಗರಿ ಮೈಸೂರಿಗೆ 26ರಂದು ಭೇಟಿ ನೀಡಲಿರುವ ಅವರು, ಆ ನಂತರ ಹುಬ್ಬಳ್ಳಿಗೆ ಬರಲಿದ್ದಾರೆ. ಪೌರ ಸನ್ಮಾನ ನಡೆಯಲಿರುವ ಇಲ್ಲಿನ ಜಿಮ್ಖಾನ ಮೈದಾನಕ್ಕೆ ಶುಕ್ರವಾರ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಮೇಯರ್ ಈರೇಶ ಅಂಚಟಗೇರಿ, ಪೊಲೀಸ್ ಆಯುಕ್ತ ಲಾಭೂ ರಾಮ್ ಭೇಟಿ ನೀಡಿ ಪರಿಶೀಲಿಸಿದರು.

ಸೆ.26 ಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪೌರ ಸನ್ಮಾನ Read More »

ಕಾಣೆಯಾಗಿದ್ದ ಮಹಿಳಾ ಪೋಲಿಸ್ ಪೇದೆ; ಶವವಾಗಿ ಪತ್ತೆ

ಸಮಗ್ರ ನ್ಯೂಸ್: ನಾಪತ್ತೆಯಾಗಿದ್ದ ಮಹಿಳಾ ಪೊಲೀಸ್ ಪೇದೆ ಶವವಾಗಿ ಪತ್ತೆಯಾದ ಘಟನೆಯೊಂದು ಹಾಸನ ಜಿಲ್ಲೆಯಲ್ಲಿ ನಡೆದಿದೆ. ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಸುಧಾ (39) ಮೃತ ಮಹಿಳಾ ಪೊಲೀಸ್ ಪೇದೆ ಎಂದು ಗುರುತಿಸಲಾಗಿದೆ. ಅರಸೀಕೆರೆ-ತಿಪಟೂರು ರಾಷ್ಟ್ರೀಯ ಹೆದ್ದಾರಿ 206 ರ ಮೈಲನಹಳ್ಳಿ ಗ್ರಾಮದ ಬಳಿಯ ಪೊದೆಯೊಂದರಲ್ಲಿ ಸುಧಾ ಮೃತದೇಹ ಸಿಕ್ಕಿದೆ. ಹುಳಿಯಾರು ಪೊಲೀಸ್ ಠಾಣೆಯಲ್ಲಿ ಸುಧಾ ಕರ್ತವ್ಯ ನಿರ್ವಹಿಸುತ್ತಿದ್ದರು. ಆದರೆ ಇತ್ತೀಚೆಗೆ ಹುಳಿಯಾರು ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಾಗಿತ್ತು. ಇದೀಗ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿ ಸುಧಾರನ್ನು ಕಾರಿನಲ್ಲಿ

ಕಾಣೆಯಾಗಿದ್ದ ಮಹಿಳಾ ಪೋಲಿಸ್ ಪೇದೆ; ಶವವಾಗಿ ಪತ್ತೆ Read More »