ರಾಜ್ಯ

ಹಾಲು, ಮೊಸರಿನ ದರದಲ್ಲಿ ₹3 ಏರಿಕೆ| ಗ್ರಾಹಕರಿಗೆ ಕತ್ತರಿ, ಹೈನುಗಾರರಿಗೆ ಬಂಪರ್ ಕೊಡುಗೆ

ಸಮಗ್ರ ನ್ಯೂಸ್: ಪ್ರತಿ ಲೀಟರ್ ನಂದಿನಿ ಹಾಲಿನ ದರದಲ್ಲಿ 3 ರೂಪಾಯಿ ಏರಿಸಲು ಕೆಎಂಎಫ್ ನಿರ್ಧರಿಸಿದೆ. ಹಾಗೂ ಮೊಸರಿನ ಬೆಲೆಯೂ ಕೂಡ 3 ರೂಪಾಯಿ ಏರಿಕೆ ಮಾಡಲಾಗಿದೆ. ಕರ್ನಾಟಕ ಹಾಲು ಒಕ್ಕೂಟವು ನಡೆಸಿದ ಸಭೆಯಲ್ಲಿ ನಂದಿನಿ ಹಾಲಿನ ದರ ಏರಿಕೆಗೆ ಸಂಬಂಧಿಸಿದಂತೆ ಅಂತಿಮ ನಿರ್ಣಯ ಕೈಗೊಳ್ಳಲಾಗಿದೆ. ಹೈನುಗಾರಿಕೆಗೆ ಹೆಚ್ಚಿನ ಒತ್ತು ನೀಡುವುದು ಹಾಗೂ ರೈತರ ಆರ್ಥಿಕ ಅಭಿವೃದ್ಧಿಗಾಗಿ ಪ್ರತಿ ಲೀಟರ್ ಹಾಲು ಹಾಗೂ ಮೊಸರಿನ ಮೇಲೆ 3 ರೂಪಾಯಿ ಹೆಚ್ಚಳ ಮಾಡುವುದಕ್ಕೆ ಕೆಎಂಎಫ್ ನಿರ್ಧರಿಸಿದೆ ಎಂದು ತಿಳಿದು […]

ಹಾಲು, ಮೊಸರಿನ ದರದಲ್ಲಿ ₹3 ಏರಿಕೆ| ಗ್ರಾಹಕರಿಗೆ ಕತ್ತರಿ, ಹೈನುಗಾರರಿಗೆ ಬಂಪರ್ ಕೊಡುಗೆ Read More »

ಮಂಡ್ಯದ ಚುಂಚನಗಿರಿಯಲ್ಲಿ ವಧೂವರ‌ರ ಸಮಾವೇಶ| ಹುಡುಗರ ಅರ್ಜಿ ಸಂಖ್ಯೆ ನೋಡಿ ಆಯೋಜಕರೇ ಸುಸ್ತು!!

ಸಮಗ್ರ ನ್ಯೂಸ್: ಚುಂಚನಗಿರಿಯಲ್ಲಿ ನಡೆದ ರಾಜ್ಯ ಮಟ್ಟದ ವಧು ವರ ಸಮಾವೇಶದಲ್ಲಿ ಒಕ್ಕಲಿಗ ಹುಡುಗರ ಅರ್ಜಿ ಸಂಖ್ಯೆ ನೋಡಿ ಆಯೋಜಕರು ಸುಸ್ತಾದ ಘಟನೆ ನಡೆದಿದೆ. ಒಕ್ಕಲಿಗರಿಗೆ ಮದುವೆಯಾಗಲು ಹುಡುಗಿಯರು ಸಿಗುತ್ತಿಲ್ಲವೆಂದು ಒಕ್ಕಲಿಗ ವಧುಗಳಿಗಾಗಿ ಸಾವಿರಾರು ಒಕ್ಕಲಿಗ ಹುಡುಗರು ಮುಗಿಬಿದ್ದಿದ್ದರು. ಸಮಾವೇಶದಲ್ಲಿ 200 ಜನ ಒಕ್ಕಲಿಗ ಹುಡುಗಿಯರಿಗೆ 10 ಸಾವಿರಕ್ಕೂ ಹೆಚ್ಚಿನ ಹುಡುಗರ ಅರ್ಜಿ ಬಂದಿದ್ದವು. ಹುಡುಗರ ಅರ್ಜಿ ಸಂಖ್ಯೆ ನೋಡಿ ಸಮಾವೇಶದ ಆಯೋಜಕರು ಸುಸ್ತಾದರು. ಹುಡುಗಿಯರಿಗಾಗಿ ಸಮಾವೇಶದಲ್ಲಿ ಸಾವಿರಾರು ಹುಡುಗರು ಮತ್ತ ಅವರ ಪೋಷಕರು ಕ್ಯೂ ನಿಂತಿದ್ದರು.

ಮಂಡ್ಯದ ಚುಂಚನಗಿರಿಯಲ್ಲಿ ವಧೂವರ‌ರ ಸಮಾವೇಶ| ಹುಡುಗರ ಅರ್ಜಿ ಸಂಖ್ಯೆ ನೋಡಿ ಆಯೋಜಕರೇ ಸುಸ್ತು!! Read More »

ಹುಣಸೂರು: ನಿಂತಿದ್ದ ಗೂಡ್ಸ್ ಗೆ ಡಿಕ್ಕಿ ಹೊಡೆದ ಬಸ್

ಸಮಗ್ರ ನ್ಯೂಸ್: ಹೆದ್ದಾರಿಯಲ್ಲಿ ಪಂಚರ್ ಆಗಿ ನಿಂತಿದ್ದ ಬೆಲ್ಲದ ಟಕ್ಕರ್ ಗಾಡಿಗೆ ಹಿಂದೆಯಿಂದ ಬಂದ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಟಕ್ಕರ್ ಉರುಳಿ ಬಿದ್ದ ಘಟನೆ ಹುಣಸೂರು ಹೆದ್ದಾರಿಯಲ್ಲಿ ನಡೆದಿದೆ. ಬಸ್ ನಲ್ಲಿ ಸುಮಾರು 20 ಜನ ಪ್ರಯಾಣಿಕರು ಇದ್ದರು. ಈ ಖಾಸಗಿ ಬಸ್ಸೊಂದು ನಿಂತಿದ್ದ ಬೆಲ್ಲದ ಗೂಡ್ಸ್ ಗಾಡಿಗೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ. ಅಪಘಾತವು ಕುಪ್ಪೆ ಕೊಳಘಟ್ಟ ಗ್ರಾಮದಲ್ಲಿ ನಡೆದಿದ್ದು, ಯಾವುದೇ ವ್ಯಕ್ತಿಗೂ ಅನಾಹುತ ಕಂಡು ಬಂದಿಲ್ಲ ಎಂದು ತಿಳಿದುಬಂದಿದೆ.

ಹುಣಸೂರು: ನಿಂತಿದ್ದ ಗೂಡ್ಸ್ ಗೆ ಡಿಕ್ಕಿ ಹೊಡೆದ ಬಸ್ Read More »

ಬೆಂಗಳೂರು ಏರ್ ಪೋರ್ಟ್ ಮೇಲೆ ಅದಾನಿ ಕಣ್ಣು| ಷೇರು ಮಾರಾಟ ಖರೀದಿಗೆ ಚಿಂತನೆ

ಸಮಗ್ರ ನ್ಯೂಸ್: ಮಂಗಳೂರು, ಅಹಮದಾಬಾದ್, ಜೈಪುರ, ಗುವಾಹಟಿ ಮತ್ತು ತಿರುವನಂತಪುರಂ ವಿಮಾನ ನಿಲ್ದಾಣಗ ನಂತರ ಈಗ ಅದಾನಿ ಗ್ರೂಪ್ ಕಣ್ಣು ಬೆಂಗಳೂರು ವಿಮಾನ ನಿಲ್ದಾಣದ ಮೇಲೂ ಬಿದ್ದಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಉಸ್ತುವಾರಿ, ಕಾರ್ಯ ನಿರ್ವಹಣೆ ಮಾಡುವ ಬೆಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್‌ನಲ್ಲಿ (ಬಿಐಎಎಲ್) ಪಾಲನ್ನು ತೆಗೆದುಕೊಳ್ಳುವ ಬಗ್ಗೆ ಅದಾನಿ ಗ್ರೂಪ್ ಚಿಂತಿಸುತ್ತಿದೆ ಎಂದು ಈ ಬಗ್ಗೆ ತಿಳಿದಿರುವ ಉನ್ನತ ಮೂಲಗಳು ಮಾಹಿತಿ ನೀಡಿವೆ. “ಅದಾನಿ ಗ್ರೂಪ್ ಕೆಲವು ಸಮಯದಿಂದ ವಿಮಾನ ನಿಲ್ದಾಣದಲ್ಲಿ ಪಾಲನ್ನು ಖರೀದಿಸಲು

ಬೆಂಗಳೂರು ಏರ್ ಪೋರ್ಟ್ ಮೇಲೆ ಅದಾನಿ ಕಣ್ಣು| ಷೇರು ಮಾರಾಟ ಖರೀದಿಗೆ ಚಿಂತನೆ Read More »

ದೈವಾರಾಧನೆ ಬಗ್ಗೆ ಅವಹೇಳನಕಾರಿ ಹೇಳಿಕೆ| ಬಿ.ಟಿ ಲಲಿತಾ ನಾಯಕ್ ವಿರುದ್ದ ದೂರು ದಾಖಲು

ಸಮಗ್ರ ನ್ಯೂಸ್: ಮಾಜಿ ಸಚಿವೆ ಬಿ.ಟಿ ಲಲಿತಾ ನಾಯಕ್ ಅವರು ದೈವ ನರ್ತಕರು ನಾಟಕ ಮಾಡುತ್ತಾರೆ ಎಂಬುದಾಗಿ ಹೇಳುವ ಮೂಲಕ, ದೈವಾರಾಧನೆ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದರ ಬೆನ್ನಲ್ಲೇ ಅವರ ವಿರುದ್ಧ ದೂರು ದಾಖಲಾಗಿದೆ. ರಾಜ್ಯ ಸರ್ಕಾರದ ವಿರುದ್ಧ ಕಾಂತಾರ ಚಿತ್ರದ ಬಳಿಕ ದೈವ ನರ್ತಕರಿಗೆ ರೂ.2,000 ಗೌರವ ಧನವನ್ನು ಘೋಷಣೆ ಮಾಡಲಾಗಿತ್ತು. ಆದ್ರೇ ಸರ್ಕಾರದ ಈ ನಡೆಯನ್ನು ಮಾಜಿ ಸಚಿವೆ ಬಿ.ಟಿ ಲಲಿತಾ ನಾಯಕ್ ಖಂಡಿಸಿದ್ದರು. ಅಲ್ಲದೇ ಇದು ಮೂಢನಂಬಿಕೆಗೆ ಇಂಬು ಕೊಡುತ್ತದೆ ಎಂಬುದಾಗಿ ಹೇಳಿದ್ದರು.

ದೈವಾರಾಧನೆ ಬಗ್ಗೆ ಅವಹೇಳನಕಾರಿ ಹೇಳಿಕೆ| ಬಿ.ಟಿ ಲಲಿತಾ ನಾಯಕ್ ವಿರುದ್ದ ದೂರು ದಾಖಲು Read More »

ಬಣಕಲ್: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಟಿ.ಎಂ.ಗಜೇಂದ್ರ ಆಯ್ಕೆ

ಸಮಗ್ರ ನ್ಯೂಸ್: ಬಣಕಲ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಟಿ.ಎಂ.ಗಜೇಂದ್ರ ಆಯ್ಕೆಯಾಗಿದ್ದಾರೆ. ಇವರು ಮೂರು ಬಾರಿ ಈ ಹಿಂದೆ ಅಧ್ಯಕ್ಷರಾಗಿದ್ದ, ಬಣಕಲ್ ಸುಸಜ್ಜಿತ ಕಟ್ಟಡಕ್ಕೆ ಇವರು ಶ್ರಮಿಸಿದ್ದರು.ಅಧ್ಯಕ್ಷ ಎ.ಆರ್.ಅಭಿಲಾಷ್ ರಾಜೀನಾಮೆಯಿಂದ ಸ್ಥಾನ ತೆರವಾಗಿತ್ತು. ಚುನಾವಣಾ ಅಧಿಕಾರಿಯಾಗಿ ಗುರುಮೂರ್ತಿ ಭಾಗವಹಿಸಿದ್ದರು. ಅಭಿನಂದನಾ ಸಮಾರಂಭದಲ್ಲಿ ನೂತನ ಅಧ್ಯಕ್ಷ ಟಿ.ಎಂ.ಗಜೇಂದ್ರ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷ ಎ.ಆರ್.ಅಭಿಲಾಷ್,ಉಪಾಧ್ಯಕ್ಷರಾದ ಮಮತ ಬಿನ್ನಡಿ,ನಿರ್ದೇಶಕರುಗಳಾದ ಬಿ.ಎಂ.ಭರತ್,ರಂಗನಾಥ್,ಬಿ.ಎಸ್.ಕಲ್ಲೇಶ್,ಬಿ.ಎಸ್.ವಿಕ್ರಂ,ಶಾಮಣ್ಣ ಬಣಕಲ್, ದಿಲ್ ದಾರ್ ಬೇಗಂ,ಬಿ.ಎಸ್.ನಾರಾಯಣ್ ಗೌಡ,ಚಂದ್ರಶೇಖರ್,ಜಿ.ಬಿ.ಲಕ್ಷ್ಮಿ, ಸಿಇಒ ಜಿ.ಪಿ.ನಿಶಾಂತ್ ಇದ್ದರು.

ಬಣಕಲ್: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಟಿ.ಎಂ.ಗಜೇಂದ್ರ ಆಯ್ಕೆ Read More »

ಮತ್ತೆ ಚುರುಕಾದ ಹಿಂಗಾರು| ರಾಜ್ಯದ ಒಳನಾಡು, ಕರಾವಳಿಯಲ್ಲಿ ಮಳೆ ಸಾಧ್ಯತೆ| 8 ಜಿಲ್ಲೆಗಳಿಗೆ ಹಳದಿ ಅಲರ್ಟ್

ಸಮಗ್ರ ನ್ಯೂಸ್: ಕರ್ನಾಟಕದಲ್ಲಿ ಹಿಂಗಾರು ಮಳೆ ಮತ್ತೆ ಚುರುಕುಗೊಳ್ಳುತ್ತಿದ್ದು, ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಆಗಲಿದೆ. ಕರ್ನಾಟಕದ ಒಟ್ಟು 8 ಜಿಲ್ಲೆಗಳಿಗೆ ಹಳದಿ ಅಲರ್ಟ್ ನೀಡಲಾಗಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಇಂದು ಭಾರೀ ಮಳೆಯಾಗುವ ಸಾಧ್ಯತೆಯಿದೆ. ಕರ್ನಾಟಕದ ಉತ್ತರ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದ್ದು, ದಕ್ಷಿಣ ಒಳನಾಡಿನಲ್ಲಿ ಧಾರಾಕಾರ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಂದು (ಶನಿವಾರ) ದಕ್ಷಿಣ ಒಳನಾಡಿನ ಜಿಲ್ಲೆಗಳಿಗೆ ಹಳದಿ

ಮತ್ತೆ ಚುರುಕಾದ ಹಿಂಗಾರು| ರಾಜ್ಯದ ಒಳನಾಡು, ಕರಾವಳಿಯಲ್ಲಿ ಮಳೆ ಸಾಧ್ಯತೆ| 8 ಜಿಲ್ಲೆಗಳಿಗೆ ಹಳದಿ ಅಲರ್ಟ್ Read More »

ಚಿಕ್ಕಮಗಳೂರು: ಹೊತ್ತಿ ಉರಿದ ರೇಡಿಯೇಟರ್ ಸರ್ವಿಸ್ ಅಂಗಡಿ

ಸಮಗ್ರ ನ್ಯೂಸ್: ಬೆಂಕಿ ತಗುಲಿ ರೇಡಿಯೇಟರ್ ಸರ್ವಿಸ್ ಅಂಗಡಿಹೊತ್ತಿ ಉರಿದ ಘಟನೆ ಚಿಕ್ಕಮಗಳೂರು ನಗರದ ಐಜಿ ರಸ್ತೆಯಲ್ಲಿ ನಡೆದಿದೆ. ಇದು ಲುಕ್ಮನ್ ಎಂಬುವರಿಗೆ ಸೇರಿದ ಅಂಗಡಿಯಾಗಿದೆ. ಇವರು ರೇಡಿಯೇಟರ್ ಸರ್ವಿಸ್ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿದೆ. ತಕ್ಷಣ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ.

ಚಿಕ್ಕಮಗಳೂರು: ಹೊತ್ತಿ ಉರಿದ ರೇಡಿಯೇಟರ್ ಸರ್ವಿಸ್ ಅಂಗಡಿ Read More »

ಕೊಟ್ಟಿಗೆಹಾರ: ಹಕ್ಕುಪತ್ರಕ್ಕಾಗಿ ಬಡಕುಟುಂಬದ ಅಲೆದಾಟ|ತಿಂಗಳ ಹಿಂದೆ ಆತ್ಮಹತ್ಯೆಗೂ ಯತ್ನ| ಇದಕ್ಕೆ ಅಧಿಕಾರಿಗಳು, ಜನಪ್ರತಿನಿಧಿಗಳೇ ಹೊಣೆ

ಸಮಗ್ರ ನ್ಯೂಸ್: ಹೊಸಹಳ್ಳಿ ಗ್ರಾಮದ ಬಡಕುಟುಂಬವೊಂದು ಹಕ್ಕುಪತ್ರಕ್ಕಾಗಿ ಅಲೆದಾಡಿ ತಿಂಗಳ ಹಿಂದೆ ಆತ್ಮಹತ್ಯೆಗೆ ಯತ್ನಿಸಿದ ಘಟಣೆಯೂ ನಡೆದಿದೆ. ಬಿ ಹೊಸಹಳ್ಳಿ ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ಪ್ರಸನ್ನ ಎಂಬುವವರ ಕುಟುಂಬವು ಗುಡಿಸಿಲಿನಲ್ಲಿ ವಾಸ ಮಾಡಿಕೊಂಡಿದ್ದು ಬಿ ಹೊಸಳ್ಳಿ ಗ್ರಾ.ಪಂ ವ್ಯಾಪ್ತಿಯ ಸರ್ವೆ ನಂ. 38 ರಲ್ಲಿ ಆಶ್ರಯ ನಿವೇಶನಕ್ಕಾಗಿ ಮೀಸಲಿಟ್ಟ ಜಾಗದಲ್ಲಿರುವ ನಿವೇಶನದ ಹಕ್ಕುಪತ್ರ ಬಿ ಹೊಸಹಳ್ಳಿ ಗ್ರಾ.ಪಂಯಲ್ಲಿ 2019 ರಿಂದ ಇದ್ದರೂ ಕೂಡ ಹಕ್ಕುಪತ್ರ ನೀಡುತ್ತಿಲ್ಲ ಎಂಬುದು ಪ್ರಸನ್ನ ಅವರ ಆರೋಪ. 2022ರ ಸೆಪ್ಟೆಂಬರ್ 6

ಕೊಟ್ಟಿಗೆಹಾರ: ಹಕ್ಕುಪತ್ರಕ್ಕಾಗಿ ಬಡಕುಟುಂಬದ ಅಲೆದಾಟ|ತಿಂಗಳ ಹಿಂದೆ ಆತ್ಮಹತ್ಯೆಗೂ ಯತ್ನ| ಇದಕ್ಕೆ ಅಧಿಕಾರಿಗಳು, ಜನಪ್ರತಿನಿಧಿಗಳೇ ಹೊಣೆ Read More »

ಆನೆಗಳ ಎಣ್ಣೆಪಾರ್ಟಿ ನೋಡಿದ್ದೀರಾ? ದಟ್ಟ ಕಾಡಿನೊಳಗೆ ನಡೆದಿತ್ತು‌ 24 ಆನೆಗಳ ಭರ್ಜರಿ ಮೋಜು ಮಸ್ತಿ!! ಏನಿದು ಮತ್ತಿನ ಗಮ್ಮತ್ತು? ಇಲ್ಲಿದೆ ಕಂಪ್ಲೀಟ್ ಸ್ಟೋರಿ…

ಸಮಗ್ರ ನ್ಯೂಸ್: ದಟ್ಟ ಕಾಡಿನ ಒಳಗೆ ಲೋಕಲ್‌ ಮದ್ಯ ತಯಾರಿಸುವ ಪ್ರದೇಶಕ್ಕೆ ಹೋದಾಗ ಒಡಿಶಾದ ಕಿಯೋಂಜಾರ್ ಜಿಲ್ಲೆಯ ಗ್ರಾಮಸ್ಥರಿಗೆ ಅಚ್ಚರಿ ಕಾದಿತ್ತು. ಸಾಂಪ್ರದಾಯಿಕ ಮದ್ಯ ತಯಾರಿಸುವ ಪ್ರದೇಶದ ಯಾವ ಡ್ರಮ್‌ಗಳಲ್ಲೂ ಮದ್ಯ ಇದ್ದಿರಲಿಲ್ಲ. ಆದರೆ, ಅವುಗಳ ಪಕ್ಕದಲ್ಲಿ ಬರೋಬ್ಬರಿ 24 ಆನೆಗಳು ಭರ್ಜರಿಯಾಗಿ ನಿದ್ರೆ ಮಾಡುತ್ತಿದ್ದವು. ಹಾಗಂತ ಅವುಗಳು ಸುಮ್ಮನೆ ನಿದ್ರೆ ಮಾಡಿರಲಿಲ್ಲ. ಡ್ರಮ್‌ಗಳಲ್ಲಿದ್ದ ಲೋಕಲ್‌ ಎಣೆಯಲ್ಲಿ ಕಂಠಪೂರ್ತಿ ಕುಡಿದಿದ್ದ ಆನೆಗಳು ‘ಫುಲ್‌ ಟೈಟ್‌’ ಆಗಿ ಅಲ್ಲಿಯೇ ಬಿದ್ದುಕೊಂಡಿದ್ದವು. ಗ್ರಾಮಸ್ಥರ ಪ್ರಕಾರ, ಶಿಲಿಪಾದಾ ಗೋಡಂಬಿ ಅರಣ್ಯದ ಬಳಿ

ಆನೆಗಳ ಎಣ್ಣೆಪಾರ್ಟಿ ನೋಡಿದ್ದೀರಾ? ದಟ್ಟ ಕಾಡಿನೊಳಗೆ ನಡೆದಿತ್ತು‌ 24 ಆನೆಗಳ ಭರ್ಜರಿ ಮೋಜು ಮಸ್ತಿ!! ಏನಿದು ಮತ್ತಿನ ಗಮ್ಮತ್ತು? ಇಲ್ಲಿದೆ ಕಂಪ್ಲೀಟ್ ಸ್ಟೋರಿ… Read More »