ರಾಜ್ಯ

ಸುಬ್ರಹಣ್ಯದಲ್ಲಿ ನ.28 ರಿಂದ ನ.29 ತನಕ
ಮದ್ಯದ ಅಂಗಡಿ ಬಂದ್

ಸಮಗ್ರ ನ್ಯೂಸ್: ಕುಕ್ಕೆ ಶ್ರೀ ಸುಬ್ರಹಣ್ಯ ದೇವಸ್ಥಾನದ ವಾರ್ಷಿಕ ಚಂಪಾ ಷಷ್ಠಿ ಮಹೋತ್ಸವದ ಪ್ರಯುಕ್ತ ಶಾಂತಿ ಸುವ್ಯವಸ್ಥೆ ಕಾಪಾಡುವ ಹಾಗೂ ಸಾರ್ವಜನಿಕ ಹಿತ ದೃಷ್ಟಿಯಿಂದ ಮುಂಜಾಗ್ರತ ಕ್ರಮವಾಗಿ ಮದ್ಯದ ಅಂಗಡಿಗಳನ್ನು ಮುಚ್ಚಲು ಕರ್ನಾಟಕ ಅಬಕಾರಿ ಕಾಯಿದೆ 1965 ಸೆಕ್ಷನ್ 21(1)ರಡಿ ಪ್ರದತ್ತ ಅಧಿಕಾರ ಚಲಾಯಿಸಿ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಅವರು ಆದೇಶ ಹೊರಡಿಸಿದ್ದಾರೆ. ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ವ್ಯಾ ಪ್ತಿಯ ಇಂಚಾಡಿ ಬಳಿಯ ಪ್ರಶಾಂತ್ ಬಾರ್ ಮತ್ತು ರೆಸ್ಟೋ ರೆಂಟ್ ಹಾಗೂ ಬೆಳ್ಳಿ ಬಾರ್ […]

ಸುಬ್ರಹಣ್ಯದಲ್ಲಿ ನ.28 ರಿಂದ ನ.29 ತನಕ
ಮದ್ಯದ ಅಂಗಡಿ ಬಂದ್
Read More »

ಚಿಕ್ಕಮಗಳೂರು: ವಿವಾದಿತ ಇನಾಂ ದತ್ತಪೀಠಕ್ಕೆ ವ್ಯವಸ್ಥಾಪನಾ ಸಮಿತಿ ರಚನೆ

ಸಮಗ್ರ ನ್ಯೂಸ್: ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ವಿವಾದ ಸಂಬಂಧ ರಾಜ್ಯ ಸರ್ಕಾರ ಆಡಳಿತ ಮಂಡಳಿ ರಚನೆ ಮಾಡಿ‌ ಆದೇಶ ಹೊರಡಿಸಿದೆ. ರಾಜ್ಯ ಸರ್ಕಾರವು ಸುಮಾರು 3 ದಶಕಗಳಿಂದ ವಿವಾದಿತ ಸ್ಥಳವಾಗಿರುವ ಪೀಠಕ್ಕೆ ಓರ್ವ ಮುಸ್ಲಿಂ ಸೇರಿದಂತೆ 8 ಜನ ಸದಸ್ಯರಿರುವ ವ್ಯವಸ್ಥಾಪನಾ ಸಮಿತಿ ರಚಿಸಿ ಆದೇಶ ಹೊರಡಿಸಿದೆ. ವ್ಯವಸ್ಥಾಪನಾ ಸಮಿತಿಯಲ್ಲಿ ಕೆ.ಸತೀಶ್, ಸಿ.ಜಿ. ಲೀಲಾ, ಶೀಲಾ, ಎನ್.ಎಸ್.ಸುಮಂತ್, ಕೆ.ಎಸ್.ಗುರುವೇಶ್, ಜಿ. ಎಚ್.ಹೇಮಂತ್‌ಕುಮಾರ್, ಎಸ್.ಎಂ.ಭಾಷಾ, ಸಿ.ಎಸ್.ಚೇತನ್ ಒಳಗೊಂಡ ಸಮಿತಿಯನ್ನು ರಚಿಸಲಾಗಿದೆ ಎಂದು ಧಾರ್ಮಿಕ ದತ್ತಿ ಇಲಾಖೆ

ಚಿಕ್ಕಮಗಳೂರು: ವಿವಾದಿತ ಇನಾಂ ದತ್ತಪೀಠಕ್ಕೆ ವ್ಯವಸ್ಥಾಪನಾ ಸಮಿತಿ ರಚನೆ Read More »

ನಿರ್ಮಾಪಕನ ಮನೆಮುಂದೆ ಮಿಡ್ ನೈಟ್ ಹೈಡ್ರಾಮಾ| ಮಧ್ಯರಾತ್ರಿ ನಗ್ನಳಾಗಿ ಕುಳಿತ ನಟಿ

ಸಮಗ್ರ ನ್ಯೂಸ್: ಪ್ರೊಡ್ಯೂಸರ್​​ ಮನೆ ಮುಂದೆ ಮಿಡ್​ನೈಟ್​ ಹೈಡ್ರಾಮಾ ನಡೆದಿದ್ದು, ಮಧ್ಯರಾತ್ರಿ ಮೂರು ಗಂಟೆ ವೇಳೆ ನಟಿ ನಗ್ನಳಾಗಿ ಕುಳಿತಿದ್ಧಾಳೆ . ನಿರ್ಮಾಪಕ ನನಗೆ ಅನ್ಯಾಯ ಮಾಡಿದ್ದಾನೆಂದು ಪ್ರೊಟೆಸ್ಟ್​ ನಡೆಸಿದ್ಧಾರೆ. ಹೈದ್ರಾಬಾದ್​ನ ಜ್ಯುಬಿಲಿ ಹಿಲ್ಸ್​ನಲ್ಲಿ ಹೈಡ್ರಾಮಾ ನಡೆದಿದೆ. ಗೀತಾ ಆರ್ಟ್ಸ್​ ಮುಂಭಾಗ ಮಿಡ್​ ನೈಟ್​ ಪ್ರೊಟೆಸ್ಟ್​ ಮಾಡಿದ್ದು,ನಟಿ ಸುನಿತಾ ಬೋಯಾ ನನಗೆ ನ್ಯಾಯ ಕೊಡಿಸಿ ಎಂದು ಪ್ರೊಟೆಸ್ಟ್​ ನಡೆಸಿದ್ಧಾರೆ. ನಟಿ ನಿರ್ಮಾಪಕ ಬನ್ನಿ ವಾಸು ವಿರುದ್ಧ ಪ್ರತಿಭಟನೆ ಮಾಡಿದ್ಧಾರೆ. ಬನ್ನಿವಾಸು ಹಲವು ಸಿನಿಮಾಗಳ ನಿರ್ಮಾಣ, ಡಿಸ್ಟ್ರಿಬ್ಯೂಷನ್​ ಮಾಡಿದ್ದಾರೆ.

ನಿರ್ಮಾಪಕನ ಮನೆಮುಂದೆ ಮಿಡ್ ನೈಟ್ ಹೈಡ್ರಾಮಾ| ಮಧ್ಯರಾತ್ರಿ ನಗ್ನಳಾಗಿ ಕುಳಿತ ನಟಿ Read More »

ನಾಳೆ ಮಂಗಳೂರಿಗೆ ಸಿಎಂ ಬೊಮ್ಮಾಯಿ ಭೇಟಿ

ಸಮಗ್ರ ನ್ಯೂಸ್: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನ. 19ರ ಶನಿವಾರ ಜಿಲ್ಲೆಯ ಪ್ರವಾಸ ಕೈಗೊಂಡಿದ್ದಾರೆ. ಅವರು ಅಂದು ಬೆಳಿಗ್ಗೆ 9:30ಕ್ಕೆ ಬೆಂಗಳೂರಿನ ಹೆಚ್.ಎ.ಎಲ್ ವಿಮಾನ ನಿಲ್ದಾಣದಿಂದ ಹೊರಟು 10.30ಕ್ಕೆ ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವರು. ನಂತರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸಂಸ್ಕೃತಿ ಇಲಾಖೆ, ಮಂಗಳೂರು ಮಹಾನಗರ ಪಾಲಿಕೆ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯಗೌಡ ಸ್ಮಾರಕ ಉಸ್ತುವಾರಿ ಸಮಿತಿ(ರಿ), ವತಿಯಿಂದ ನಗರದ ಬಾವುಟಗುಡ್ಡೆಯಲ್ಲಿ ಆಯೋಜಿಸಿರುವ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ಕೆದಂಬಾಡಿ ರಾಮಯ್ಯಗೌಡರ ಪ್ರತಿಮೆ ಲೋಕಾರ್ಪಣೆ

ನಾಳೆ ಮಂಗಳೂರಿಗೆ ಸಿಎಂ ಬೊಮ್ಮಾಯಿ ಭೇಟಿ Read More »

ಶಾಲೆಗೆ ಹೋಗಿದ್ದ 7ನೇ ತರಗತಿ ಬಾಲಕಿ ನಿಗೂಢ ರೀತಿಯಲ್ಲಿ ನಾಪತ್ತೆ – ಶಾಲಾ ಆವರಣದಲ್ಲಿ ಬ್ಯಾಗ್ ಇಟ್ಟು ದಿಢೀರ್ ಕಣ್ಮರೆ

ಸಮಗ್ರ ನ್ಯೂಸ್: ಶಾಲೆಗೆ ತೆರಳಿದ್ದ ಏಳನೇ ತರಗತಿ ವಿದ್ಯಾರ್ಥಿನಿ ನಿಗೂಢ ರೀತಿಯಲ್ಲಿ ನಾಪತ್ತೆಯಾಗಿರುವ ಘಟನೆ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಅಣತಿ ಗ್ರಾಮದಲ್ಲಿ ನಡೆದಿದೆ. ದಾಸರಹಳ್ಳಿ ಗ್ರಾಮದ ಡಿ.ಬಿ.ಕುಮಾರ್ ಅವರ ಸಾಕು ಮಗಳು ನಂದಿತಾ ಕಾಣೆಯಾದಾಕೆ. ಅಣತಿ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ನಂದಿತಾ, ಸರ್ಕಾರಿ ಹಾಸ್ಟೆಲ್‍ನಲ್ಲಿದ್ದಳು. ನವೆಂಬರ್ 7ರಂದು ಸಂಜೆ 5 ಗಂಟೆ ಸುಮಾರಿಗೆ ಶಾಲೆ ಮುಗಿಸಿ ಹಾಸ್ಟೆಲ್‍ಗೆ ಹೋಗದೆ ನಾಪತ್ತೆಯಾಗಿದ್ದಾಳೆ. ಮೂಲತಃ ಕೆ.ಆರ್.ಪೇಟೆ, ತಾಲ್ಲೂಕಿನ ನಂಜೇಗೌಡ ಮಂಗಳ ದಂಪತಿ ಪುತ್ರಿ ನಂದಿತಾಳನ್ನು ತಾತ ಚನ್ನರಾಯಪಟ್ಟಣ ದಾಸರಹಳ್ಳಿ

ಶಾಲೆಗೆ ಹೋಗಿದ್ದ 7ನೇ ತರಗತಿ ಬಾಲಕಿ ನಿಗೂಢ ರೀತಿಯಲ್ಲಿ ನಾಪತ್ತೆ – ಶಾಲಾ ಆವರಣದಲ್ಲಿ ಬ್ಯಾಗ್ ಇಟ್ಟು ದಿಢೀರ್ ಕಣ್ಮರೆ Read More »

ಲಿಂಗಾಯತರು ಹಿಂದೂಗಳಲ್ಲ – ತೋಂಟದಾರ್ಯ ಸ್ವಾಮೀಜಿ

ಸಮಗ್ರ ನ್ಯೂಸ್: ಹಿಂದೂ ಧರ್ಮ ಅಲ್ಲ, ಇದು ಜೀವನ ಶೈಲಿಯಾಗಿದೆ. ವೈದಿಕ ಧರ್ಮಕ್ಕೆ ಈಗ ಹಿಂದೂ ಧರ್ಮ ಎಂದು ಕರೆಲಾಗುತ್ತಿದೆ. ವೈದಿಕ ಧರ್ಮವನ್ನು ಹಿಂದೂ ಧರ್ಮ ಎಂದು ಕರೆದಾಗ, ಲಿಂಗಾಯತರು ಹಿಂದೂಗಳು ಆಗಲ್ಲ. ಲಿಂಗಾಯತ ಧರ್ಮ ಅವೈದಿಕ ಧರ್ಮ, ವೇಗ, ಆಗಮನ, ಪುರಾಣವನ್ನು ವಿರೋಧಿಸಿದ ಧರ್ಮ. ದೇಶದಲ್ಲಿ ಜೈನ, ಬೌದ್ಧ, ಕ್ರೈಸ್ತರಂತೆ ಲಿಂಗಾಯತ ಸಹ ಒಂದು ಪ್ರತ್ಯೇಕ ಧರ್ಮ. ಹಿಂದೂಗಳ ಆಚರಣೆ ಹಾಗೂ ಲಿಂಗಾಯತರ ಆಚರಣೆಗೆ ವ್ಯತ್ಯಾಸ ಇದೆ ಎಂದು ಬೆಳಗಾವಿಯಲ್ಲಿ ಗದಗಿ ತೋಂಟದಾರ್ಯ ಮಠದ ಡಾ.

ಲಿಂಗಾಯತರು ಹಿಂದೂಗಳಲ್ಲ – ತೋಂಟದಾರ್ಯ ಸ್ವಾಮೀಜಿ Read More »

ಒತ್ತುವರಿ ಜಮೀನು ತೆರವಿಗೆ ಹೋದ ತಹಸೀಲ್ದಾರ್ ವಿರುದ್ದ ತಿರುಗಿಬಿದ್ದ ರೈತ| ಕರ್ತವ್ಯಕ್ಕೆ ಅಡ್ಡಿ ಆರೋಪ; ಬಂದ ದಾರಿಗೆ ಸುಂಕವಿಲ್ಲದಂತೆ ವಾಪಸ್

ಸಮಗ್ರ ನ್ಯೂಸ್: ಒತ್ತುವರಿ ಆಗಿದ್ದ ಸರ್ಕಾರಿ ಜಮೀನು ತೆರವಿಗೆ ಹೋದ ತಹಸೀಲ್ದಾರ್ ವಿರುದ್ದ ರೈತ ತಿರುಗಿಬಿದ್ದ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ರತ್ನಪುರಿ ಗ್ರಾಮದಲ್ಲಿ ನಡೆದಿದೆ.‌ ಜೆಸಿಬಿ ಯಂತ್ರದ ಮುಂದೆ ಕುಳಿತು ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆ. ರೈತನ ಪಟ್ಟಿಗೆ ಮಣಿದ ಅಧಿಕಾರಿಗಳು ಬಂದ ದಾರಿಗೆ ಸುಂಕವಿಲ್ಲವೆಂಬಂತೆ ವಾಪಸ್ ಬಂದಿದ್ದಾರೆ. ರತ್ನಪುರಿ ಗ್ರಾಮದ ಸರ್ವೆ ನಂ 1369ರ 1.33 ಗುಂಟೆ ಜಮೀನು ಸರ್ಕಾರಿ ಜಮೀನಾಗಿದೆ. ಸದರಿ ಜಮೀನನ್ನ ದೇಶಕ್ಕೆ ಸೇವೆ ಸಲ್ಲಿಸಿದ ಯೋಧರಿಗೆ ನೀಡುವ ಉದ್ದೇಶದಿಂದ ಮೀಸಲಿಡಲು ಮುಂದಾದ

ಒತ್ತುವರಿ ಜಮೀನು ತೆರವಿಗೆ ಹೋದ ತಹಸೀಲ್ದಾರ್ ವಿರುದ್ದ ತಿರುಗಿಬಿದ್ದ ರೈತ| ಕರ್ತವ್ಯಕ್ಕೆ ಅಡ್ಡಿ ಆರೋಪ; ಬಂದ ದಾರಿಗೆ ಸುಂಕವಿಲ್ಲದಂತೆ ವಾಪಸ್ Read More »

ಬೆಂಗಳೂರು: ಕಿಲ್ಲರ್‌ ಬಿಎಂಟಿಸಿ ಗೆ ಯೋಧ‌ ಬಲಿ

ಸಮಗ್ರ ನ್ಯೂಸ್: ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಕೋಲಾರ ಮೂಲದ ಯೋಧ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದರು.ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ಚಿನ್ನಕೋಟೆ ಗ್ರಾಮದ ಯೋಧ ಚೇತನ್(22) ಮೃತ ದುರ್ದೈವಿ. ಇವರ ತಂದೆ ಸುರೇಶ್ ನಿವೃತ್ತ ಯೋಧರು. ತಂದೆಯಂತೇ ತಾನೂ ಕೂಡ ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸಬೇಕೆಂದು ಮಹತ್ತರ ಆಸೆಯೊಂದಿಗೆ ಸೇನೆಗೆ ಸೇರಿದ್ದ ಚೇತನ್​, ಚೆನ್ನೈ ರೆಜಿಮೆಂಟ್​ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಮೂರು ವರ್ಷ ಪೂರೈಸಿದ್ದ ಚೇತನ್, ರಜೆ ಮೇಲೆ ಊರಿಗೆ ಆಗಮಿಸಿದ್ದರು.

ಬೆಂಗಳೂರು: ಕಿಲ್ಲರ್‌ ಬಿಎಂಟಿಸಿ ಗೆ ಯೋಧ‌ ಬಲಿ Read More »

ಜಗತ್ತಿನಲ್ಲೇ ಅತಿ ಉದ್ದನೆಯ ಮೂಗು ಇರುವ ವ್ಯಕ್ತಿಯನ್ನು ನೋಡಿದ್ದೀರ?

ದೆಹಲಿ: ಜಗತ್ತಿನಲ್ಲೇ ಅತಿ ಉದ್ದನೆಯ ಮೂಗು ಹೊಂದಿರುವ ವ್ಯಕ್ತಿಯ ಫೋಟೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಥಾಮಸ್ ವಾಡ್‌ಹೌಸ್‌ (ವೆಡ್ಡೆರ್‌) ಎಂಬ ವ್ಯಕ್ತಿ ಉದ್ದನೆಯ ಮೂಗು ಹೊಂದಿದ್ದರು. ಅವರ ಮೂಗು 7.5 ಇಂಚು ಉದ್ದವಾಗಿದೆ ಎಂದು ಹಿಸ್ಟಾರಿಕ್ ವಿಡ್ಸ್ ಎಂಬ ಟ್ವಿಟ್ಟರ್ ಪೇಜ್ ಟ್ವೀಟ್‌ ಮಾಡಿದೆ. ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ವೆಬ್‌ಸೈಟ್‌ನಲ್ಲೂ ಈ ವ್ಯಕ್ತಿಯ ಪರಿಚಯವಿದೆ. ವಿಶ್ವದಲ್ಲೇ ಅತಿ ಉದ್ದನೆಯ ಮೂಗು ಹೊಂದಿರುವ ವ್ಯಕ್ತಿ ಇವರಾಗಿದ್ದಾರೆ. ಥಾಮಸ್ ವಾಡ್‌ಹೌಸ್ 18ನೇ ಶತಮಾನದಲ್ಲಿ ವಾಸವಾಗಿದ್ದರು. ಇವರು ಬ್ರಿಟನ್‌ ಸರ್ಕಸ್ ಕಂಪನಿಯಲ್ಲಿ

ಜಗತ್ತಿನಲ್ಲೇ ಅತಿ ಉದ್ದನೆಯ ಮೂಗು ಇರುವ ವ್ಯಕ್ತಿಯನ್ನು ನೋಡಿದ್ದೀರ? Read More »

ಕರುನಾಡ ಜನತೆಗೆ ‘ನಮ್ಮ ಕ್ಲಿನಿಕ್’

ಸಮಗ್ರ ನ್ಯೂಸ್: ಮಗುವಿನ ಆರೈಕೆ ಸೇರಿದಂತೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದೊರಕುವ ಎಲ್ಲ ರೀತಿಯ ಸೌಲಭ್ಯಗಳು ಸಿಗಲಿರುವ, ಅಲ್ಲದೆ ಕೇಂದ್ರ ಸರಕಾರದ ರಾಷ್ಟ್ರೀಯ ಆರೋಗ್ಯ ಮಿಷನ್‌ ನಡಿ ಸಿಗುವ ಎಲ್ಲ ಸೌಲಭ್ಯ ಲಭ್ಯವಿರುವ ಕ್ಲಿನಿಕ್ ಇದಾಗಿದೆ. ಮಲೇರಿಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳ ತಪಾಸಣೆಯನ್ನೂ ಇಲ್ಲಿ ನಡೆಸಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ 12 ಮತ್ತು ಉಡುಪಿ ಜಿಲ್ಲೆಯ 6 ಕಡೆ ಸಹಿತ ಕರಾವಳಿ ಭಾಗದ 18 ಕಡೆಗಳಲ್ಲಿ ಕೆಲವೇ ದಿನಗಳಲ್ಲಿ ನಮ್ಮ ಕ್ಲಿನಿಕ್ ಕಾರ್ಯಾರಂಭಗೊಳ್ಳುವ ಸಾಧ್ಯತೆಗಳಿದ್ದು ಪ್ರತಿ ಕ್ಲಿನಿಕ್‌ನಲ್ಲಿವೈದ್ಯಾಧಿಕಾರಿ,

ಕರುನಾಡ ಜನತೆಗೆ ‘ನಮ್ಮ ಕ್ಲಿನಿಕ್’ Read More »