ರಾಜ್ಯ

ಕುತೂಹಲ ಮೂಡಿಸಿದ‌ ಮೈಲಾರ ಗೊರವಯ್ಯನ ಕಾರ್ಣಿಕ ನುಡಿ| ಅಂಬಲಿ ಹಳಸೀತು, ಕಂಬಳಿ ಬೀಸಿತಲೇ ಎಂದ ಗೊರವಯ್ಯ| ಏನಿದರ ಒಳ ಮರ್ಮ?

ಸಮಗ್ರ ನ್ಯೂಸ್: ತೀವ್ರ ಕೂತುಹಲ ಕೆರಳಿಸಿದ್ದ ಈ ಬಾರಿಯ ಮೈಲಾರ ಕಾರ್ಣಿಕೋತ್ಸವವನ್ನು ಮಂಗಳವಾರ ಗೊರವಯ್ಯ ನುಡಿದಿದ್ದಾರೆ. ಅಂಬಲಿ ಹಳಸಿತು ಕಂಬಳಿ ಬಿಸಿತಲೆ ಪರಾಕ್ ಎಂಬ ದೈವನುಡಿ ಎಲ್ಲರಲ್ಲೂ ಕುತೂಹಲ ಮೂಡಿಸಿದೆ. ಅನ್ನದಾತರಿಗೆಲ್ಲಾ ಆನಂದ ತಂದಿದ್ದರೆ, ರಾಜಕೀಯ ಪಕ್ಷಗಳಲ್ಲಿ ಚರ್ಚೆ ಹುಟ್ಟು ಹಾಕಿದೆ. ದಕ್ಷಿಣ ಭಾರತದಲ್ಲಿ ಪ್ರಖ್ಯಾತಿ ಹೊಂದಿರುವ ಐತಿಹಾಸಿಕ ಸುಕ್ಷೇತ್ರ ಮೈಲಾರ ಕಾರ್ಣಿಕೋತ್ಸವ ಅದ್ದೂರಿಯಾಗಿ ಜರುಗಿತು. ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮೈಲಾರ ಗ್ರಾಮದಲ್ಲಿ ಭಂಡಾರದ ಒಡೆಯ ದೈವವಾಣಿಯನ್ನು ಲಕ್ಷಾಂತರ ಜನರು ಆಲಿಸಿದರು‌. ಭರತ ಹುಣ್ಣಿಮೆ ನಂತರ […]

ಕುತೂಹಲ ಮೂಡಿಸಿದ‌ ಮೈಲಾರ ಗೊರವಯ್ಯನ ಕಾರ್ಣಿಕ ನುಡಿ| ಅಂಬಲಿ ಹಳಸೀತು, ಕಂಬಳಿ ಬೀಸಿತಲೇ ಎಂದ ಗೊರವಯ್ಯ| ಏನಿದರ ಒಳ ಮರ್ಮ? Read More »

ರೈತರ ಸಾಲಮನ್ನಾದಿಂದ ದೇಶದ ಆರ್ಥಿಕತೆಗೆ ಉಪಯೋಗವಿಲ್ಲ – ತೇಜಸ್ವಿ ಸೂರ್ಯ| ಉದ್ಯಮಿಗಳ ಮೇಲಿನ ಸಾಲಮನ್ನಾದಿಂದ ಲಾಭವಿದೆಯೇ? ಎಂದ ರೈತ ಮುಖಂಡರು

ಸಮಗ್ರ ನ್ಯೂಸ್: ರೈತರ ಸಾಲಮನ್ನಾ ಮಾಡುವುದರಿಂದ ದೇಶದ ಆರ್ಥಿಕತೆಗೆ ಯಾವುದೇ ರೀತಿಯ ಉಪಯೋಗವಾಗಿಲ್ಲ ಎಂದು ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ, ಸಂಸದ ತೇಜಸ್ವಿ ಸೂರ್ಯ ಹೇಳಿಕೆ ನೀಡಿದ್ದಾರೆ. ಮಂಗಳೂರಿನಲ್ಲಿ ಮಾತನಾಡಿರುವ ಅವರು, “ಆಗ ಯುಪಿಎ ಸರ್ಕಾರವಿತ್ತು. 2009ನೇ ಇಸವಿಯಲ್ಲಿ ಚುನಾವಣೆಗೆ ಹೋಗಬೇಕಿತ್ತು. 2008ನೇ ಇಸವಿಯ ಬಜೆಟ್‌ನಲ್ಲಿ ಒಂದು ಲಕ್ಷ ಕೋಟಿ ರೂಪಾಯಿ ರೈತರ ಸಾಲವನ್ನು ಮನ್ನಾ ಮಾಡಿದರು. ಚುನಾವಣೆ ಗೆಲ್ಲುವ ದೃಷ್ಟಿಯಲ್ಲಿ ಈ ಕ್ರಮ ಜರುಗಿಸಿದರು. ಸಾಲಮನ್ನಾದಿಂದ ತಾತ್ಕಾಲಿಕವಾಗಿ ರೈತರಿಗೆ ಒಂದಿಷ್ಟು ಉಪಯೋಗವಾಯಿತು. ಅದರಿಂದ ದೇಶದ

ರೈತರ ಸಾಲಮನ್ನಾದಿಂದ ದೇಶದ ಆರ್ಥಿಕತೆಗೆ ಉಪಯೋಗವಿಲ್ಲ – ತೇಜಸ್ವಿ ಸೂರ್ಯ| ಉದ್ಯಮಿಗಳ ಮೇಲಿನ ಸಾಲಮನ್ನಾದಿಂದ ಲಾಭವಿದೆಯೇ? ಎಂದ ರೈತ ಮುಖಂಡರು Read More »

ಮೈಸೂರು: ಪೊಲೀಸ್ ವಾಹನ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಪಾಟ್ ಡೆತ್

ಸಮಗ್ರ ನ್ಯೂಸ್: ಮೈಸೂರು ಜಿಲ್ಲೆಯ ನಂಜನಗೂಡು ಬಳಿಯ ಸಂಚಾರ ಠಾಣೆ ಬಳಿ ಪೊಲೀಸ್ ವಾಹನ ಡಿಕ್ಕಿಯ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಮುದ್ದಳ್ಳಿ ನಿವಾಸಿ ಅಭಿ (25) ಪೊಲೀಸ್ ವಾಹನ ಡಿಕ್ಕಿಯಾಗಿ ಸಾವನ್ನಪ್ಪಿರುವ ಯುವಕ. ನಂಜನಗೂಡು ಹೆಚ್ ಕೆಹೆಚ್ ಕಾಲೋನಿಯ ತಿರುವಿನಲ್ಲಿ ಅಪಘಾತ ನಡೆದಿದ್ದು, ಬೈಕ್ ಸವಾರ ಅಭಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈ ಹಿಂದೆಯೂ ಈ ಸ್ಥಳದಲ್ಲಿ ಹಲವು ಅಪಘಾತಗಳು ನಡೆದಿವೆ. ದೂರು ನೀಡಿದ್ರೂ ಕ್ರಮ ಕೈಗೊಂಡಿಲ್ಲ ಎಂದು

ಮೈಸೂರು: ಪೊಲೀಸ್ ವಾಹನ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಪಾಟ್ ಡೆತ್ Read More »

ಮತ್ತೆ ಜನತೆಗೆ ಶಾಕ್ ನೀಡಲು ಎಸ್ಕಾಂಗಳು ರೆಡಿ| ಕರೆಂಟ್ ಬಿಲ್ ಯೂನಿಟ್ ಗೆ ₹ 2ರಷ್ಟು ಏರಿಕೆ ಸಾಧ್ಯತೆ

ಸಮಗ್ರ ನ್ಯೂಸ್: ರಾಜ್ಯದ ಜನತೆಗೆ ಮತ್ತೆ ವಿದ್ಯುತ್ ದರ ಏರಿಕೆಯ ಶಾಕ್, ರಾಜ್ಯದ ವಿದ್ಯುತ್ ವಿತರಣಾ ಕಂಪನಿಗಳು ವಿದ್ಯುತ್ ದರ ಪರಿಷ್ಕರಣೆ ಕೋರಿರುವ ಹಿನ್ನೆಲೆಯಲ್ಲಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಫೆ. 13 ರಿಂದ ಮಾರ್ಚ್ 1 ರವರೆಗೆ ಸಾರ್ವಜನಿಕ ಆದಾಲಯತ್ ನಡೆಸಲಿದ್ದು, ಮತ್ತೆ ವಿದ್ಯುತ್ ದರ ಏರಿಕೆಯಾಗುವ ಸಾಧ್ಯತೆ ಇದೆ. ಎಸ್ಕಾಮ್ ಗಳು ಪ್ರತಿ ಯುನಿಟ್ ಗೆ 1.50 ರಿಂದ 2 ರೂ. ತನಕ ವಿದ್ಯುತ್ ದರ ಏರಿಕೆ ಕೋರಿ ಈಗಾಗಲೇ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ

ಮತ್ತೆ ಜನತೆಗೆ ಶಾಕ್ ನೀಡಲು ಎಸ್ಕಾಂಗಳು ರೆಡಿ| ಕರೆಂಟ್ ಬಿಲ್ ಯೂನಿಟ್ ಗೆ ₹ 2ರಷ್ಟು ಏರಿಕೆ ಸಾಧ್ಯತೆ Read More »

‘ಇಸ್ಲಾಂಗೆ ಬಾ, ಇಲ್ಲವಾದಲ್ಲಿ ಶ್ರದ್ದಾಳಂತೆ ಸಾಯಲು‌ ಸಿದ್ದಳಾಗು’| ಅತ್ಯಾಚಾರವೆಸಗಿ ಬೆದರಿಕೆ ಒಡ್ಡುತ್ತಿದ್ದ ಮುಸ್ಲಿಂ ಯುವಕನ ಬಂಧನ

ಸಮಗ್ರ ನ್ಯೂಸ್: ಹಿಂದೂ ಹುಡುಗಿಯ ಮೇಲೆ ಅತ್ಯಾಚಾರವೆಸಗಿ, ಇಸ್ಲಾಂಗೆ ಮತಾಂತರಗೊಳ್ಳುವಂತೆ ಒತ್ತಾಯಿಸಿ ಮತ್ತು ಕೊಲ್ಲುವುದಾಗಿ ಬೆದರಿಕೆ ಹಾಕಿದ ಮುಸ್ಲಿಂ ಯುವಕನನ್ನು ಬಂಧಿಸಲಾಗಿದೆ. ಅಲಿಖಾನ್ ಎಂಬ ಹೆಸರಿನ ಸುಳ್ಳು ಗುರುತಿನ ಮೂಲಕ 11ನೇ ತರಗತಿಯ ಯುವತಿಯನ್ನು ಹಿಂಬಾಲಿಸುವ ಮೂಲಕ ಪರಿಚಯಿಸಿಕೊಂಡಿದ್ದಾನೆ. ಆಕೆಯೊಂದಿಗೆ ಸ್ನೇಹ ಬೆಳೆಸಿದ ನಂತರ ಗೌತಮ್ ಬುದ್ಧ ನಗರಕ್ಕೆ ಕರೆದೊಯ್ದು ಸಂತ್ರಸ್ತೆಗೆ ಮದ್ಯಪಾನ ಮಾಡಿಸಿ ಅತ್ಯಾಚಾರವೆಸಗಿದ್ದಾನೆ. ನಂತ್ರ, ಪದೇ ಪದೇ ಲೈಂಗಿಕ ಕಿರುಕುಳ ನೀಡಿ ಆಕೆಗೆ ಬ್ಲ್ಯಾಕ್‌ಮೇಲ್ ಮಾಡಲು ಪ್ರಾರಂಭಿಸಿದ್ದಾನೆ. ನಂತರ, ಸಂತ್ರಸ್ತೆಗೆ ಅವನ ಹೆಸರು ಅಮಾನ್,

‘ಇಸ್ಲಾಂಗೆ ಬಾ, ಇಲ್ಲವಾದಲ್ಲಿ ಶ್ರದ್ದಾಳಂತೆ ಸಾಯಲು‌ ಸಿದ್ದಳಾಗು’| ಅತ್ಯಾಚಾರವೆಸಗಿ ಬೆದರಿಕೆ ಒಡ್ಡುತ್ತಿದ್ದ ಮುಸ್ಲಿಂ ಯುವಕನ ಬಂಧನ Read More »

ರಾಜ್ಯಕ್ಕೆ ಇಂದು ಪ್ರಧಾನಿ ಮೋದಿ ಭೇಟಿ| ಹಲವು ಕಾರ್ಯಕ್ರಮಗಳಿಗೆ ಚಾಲನೆ

ಸಮಗ್ರ ನ್ಯೂಸ್: ಪ್ರಧಾನಿ ನರೇಂದ್ರ ಮೋದಿಯವರು ಇಂದು ರಾಜ್ಯಕ್ಕೆ ಆಗಮಿಸುತ್ತಿದ್ದು, ವಿವಿಧ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಬೆಳಗ್ಗೆ 11:30ಕ್ಕೆ ಬೆಂಗಳೂರಿನಲ್ಲಿ ಇಂಡಿಯಾ ಎನರ್ಜಿ ಸಪ್ತಾಹದಲ್ಲಿ ಪಾಲ್ಗೊಳ್ಳುವ ಅವರು ಮಧ್ಯಾಹ್ನ 3:30ಕ್ಕೆ ತುಮಕೂರಿನ ಗುಬ್ಬಿ ತಾಲೂಕಿನಲ್ಲಿರುವ ಹೆಚ್‌ಎಎಲ್ ಹೆಲಿಕಾಪ್ಟರ್ ತಯಾರಿಕಾ ಘಟಕದ ಉದ್ಘಾಟನೆ ನೆರವೇರಿಸಲಿದ್ದಾರೆ. ಬಳಿಕ ಜಲಜೀವನ್ ಮಿಷನ್ ಯೋಜನೆ ಅಡಿ ಚಿಕ್ಕನಾಯಕನಹಳ್ಳಿ ಮತ್ತು ತಿಪಟೂರು ತಾಲೂಕಿನ ವಿವಿಧ ಗ್ರಾಮಗಳಿಗೆ ನೀರು ಪೂರೈಸುವ ಯೋಜನೆಗಳಿಗೆ ಭೂಮಿ ಪೂಜೆ ನೆರವೇರಿಸಲಿದ್ದು, ನಂತರ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ

ರಾಜ್ಯಕ್ಕೆ ಇಂದು ಪ್ರಧಾನಿ ಮೋದಿ ಭೇಟಿ| ಹಲವು ಕಾರ್ಯಕ್ರಮಗಳಿಗೆ ಚಾಲನೆ Read More »

ಹಾಡುಹಗಲೇ ಚೂರಿಯಿಂದ ಇರಿದು ಯುವಕನ ಬರ್ಬರ ಕೊಲೆ

ಸಮಗ್ರ ನ್ಯೂಸ್: ಯುವಕನೋರ್ವನನ್ನು ಚೂರಿಯಿಂದ ಇರಿದು ಬರ್ಬರವಾಗಿ ಕೊಲೆಗೈದ ಘಟನೆ ಉಡುಪಿ ಜಿಲ್ಲೆಯ ಕಾಪುವಿನ ಪಾಂಗಾಳದಲ್ಲಿ ರವಿವಾರ ಸಂಜೆ ನಡೆದಿದೆ. ಪಾಂಗಾಳ ಮಂಡೇಡಿ ನಿವಾಸಿ ಶರತ್ ಶೆಟ್ಟಿ (41) ಹತ್ಯೆಗೀಡಾದ ಯುವಕ. ಪಾಂಗಾಳ ಶ್ರೀ ಜನಾರ್ದನ ದೇವಸ್ಥಾನದ ಬಳಿಯ ಅಂಗಡಿಯ ಬಳಿಯೊಂದರಲ್ಲಿ ಕೃತ್ಯ ನಡೆದಿದ್ದು, ಗಂಭೀರ ಗಾಯಗೊಂಡು ರಕ್ತದ ಮಡುವಿನಲ್ಲಿ‌ ಬಿದ್ದಿದ್ದ ಯುವಕನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಕಾಪು ವೃತ್ತ ನಿರೀಕ್ಷಕ ಕೆ.ಸಿ. ಪೂವಯ್ಯ, ಕಾಪು ಎಸ್ಸೈ ಸುಮ ಬಿ., ಕ್ರೈಂ ಎಸ್ಸೈ ಭರತೇಶ್ ಕಂಕಣವಾಡಿ ಸಹಿತ

ಹಾಡುಹಗಲೇ ಚೂರಿಯಿಂದ ಇರಿದು ಯುವಕನ ಬರ್ಬರ ಕೊಲೆ Read More »

ಹಿರಿಯ ಗಾಯಕಿ‌ ವಾಣಿ ಜಯರಾಂ ಸಾವು ಸಂಭವಿಸಿದ್ದು ಹೇಗೆ ಗೊತ್ತಾ? ಪೋಸ್ಟ್ ಮಾರ್ಟಂ ರಿಪೋರ್ಟ್ ನಲ್ಲಿ ಬಯಲಾಯ್ತು ಅಸಲಿ ಸತ್ಯ

ಸಮಗ್ರ ನ್ಯೂಸ್: ಹಿರಿಯ ಗಾಯಕಿಯ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿ, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿದ್ದರು. ಭಾನುವಾರ ಅವರ ಮರಣೋತ್ತರ ಪರೀಕ್ಷೆಯ ವಿವರ ಬಹಿರಂಗವಾಗಿದೆ. ಜೊತೆಗೆ ಅದರೊಂದಿಗೆ ಮನೆಯ ಹಾಗೂ ಅಕ್ಕಪಕ್ಕದ ಸಿಸಿಟಿವಿ ದೃಶ್ಯಾವಳಿಗಳನ್ನೂ ಪರಿಶೀಲಿಸಿದ ಪೊಲೀಸರು ಹಿರಿಯ ಗಾಯಕಿ ಸಾವಿನ ಕೇಸ್‌ ಕುರಿತು ಸ್ಪಷ್ಟ ನಿಲುವು ತೆಗೆದುಕೊಂಡಿದ್ದಾರೆ. ವಾಣಿ ಜಯರಾಮ್ ಅವರ ಸಾವಿನಲ್ಲಿ ಯಾವುದೇ ಅನುಮಾನವಿಲ್ಲ ಎಂದು ಪೋಸ್ಟ್ ಮಾರ್ಟಮ್‌ ವರದಿ ತಿಳಿಸಿದೆ. ಅವರು ತಮ್ಮ ಹಾಸಿಗೆಯ ಬಳಿ

ಹಿರಿಯ ಗಾಯಕಿ‌ ವಾಣಿ ಜಯರಾಂ ಸಾವು ಸಂಭವಿಸಿದ್ದು ಹೇಗೆ ಗೊತ್ತಾ? ಪೋಸ್ಟ್ ಮಾರ್ಟಂ ರಿಪೋರ್ಟ್ ನಲ್ಲಿ ಬಯಲಾಯ್ತು ಅಸಲಿ ಸತ್ಯ Read More »

ಸಾರ್ವತ್ರಿಕ ಚುನಾವಣೆಯಲ್ಲಿ ಅಥಣಿ ಯಿಂದ ಸ್ವರ್ಧೆ| ಅಚ್ಚರಿಯ ಹೇಳಿಕೆ ನೀಡಿದ ಲಕ್ಷ್ಮಣ್ ಸವದಿ.

ಸಮಗ್ರ ನ್ಯೂಸ್: ಸಾರ್ವತ್ರಿಕ ಚುನಾವಣೆಯಲ್ಲಿ ಅಥಣಿ ಮತಕ್ಷೇತ್ರದಿಂದ ನಾನು ಅಥವಾ ಶಾಸಕ ಮಹೇಶ್ ಕುಮಠಳ್ಳಿ ಇಬ್ಬರಲ್ಲಿ ಒಬ್ಬರು ಸ್ಪರ್ಧೆ ಮಾಡುತ್ತೇವೆ ಎಂದು ಲಕ್ಷ್ಮಣ್ ಸವದಿ ಅಚ್ಚರಿ ಹೇಳಿಕೆ ನೀಡಿದ್ದಾರೆ. ಅವರು ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ನಗರೋತ್ಥಾನ ಅನುದಾನದಲ್ಲಿ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಸಂದರ್ಭದಲ್ಲಿ ಮಾದ್ಯಮಗಳ ಜೊತೆ ಮಾತನಾಡಿ, ಇಬ್ಬರಲ್ಲಿ ಒಬ್ಬರು ಚುನಾವಣೆ ಸ್ವರ್ಧೆ ಮಾಡುತ್ತೇವೆ, ಮತದಾರರ ಪ್ರಭು ನಮ್ಮ ಪಕ್ಷದ ಮೇಲೆ ಸಂಪೂರ್ಣ ಆಶಿರ್ವಾದ ಮಾಡಲೆಂದು ಕೋರಿದರು, ಜೊತೆಗೆ ಈಗಾಗಲೇ ಮಹೇಶ್ ಕುಮಠಳ್ಳಿ ಹೇಳಿದ

ಸಾರ್ವತ್ರಿಕ ಚುನಾವಣೆಯಲ್ಲಿ ಅಥಣಿ ಯಿಂದ ಸ್ವರ್ಧೆ| ಅಚ್ಚರಿಯ ಹೇಳಿಕೆ ನೀಡಿದ ಲಕ್ಷ್ಮಣ್ ಸವದಿ. Read More »

ಕಾಂಗ್ರೆಸ್ ಪಕ್ಷದ ತಾಯಿ ಬಂಜೆಯಾಗಿದೆ, ಮಕ್ಕಳು ಹುಟ್ಟಲಾರವು – ಲಕ್ಷ್ಮಣ್ ಸವದಿ‌

ಸಮಗ್ರ ನ್ಯೂ ಸ್: ಕಾಂಗ್ರೆಸ್ ನವರು ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ಹಗಲು ಕನಸು ಕಾಣುತ್ತಿದ್ದಾರೆ. ಕಾಂಗ್ರೆಸ್ ತಾಯಿ ಬಂಜೆಯಾಗಿದೆ, ಮಕ್ಕಳು ಹುಟ್ಟುವ ಪ್ರಶ್ನೆಯಿಲ್ಲ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಲಕ್ಷ್ಮಣ್ ಸವದಿ ಲೇವಡಿ ಮಾಡಿದ್ದಾರೆ. ರಾಜ್ಯದಲ್ಲಿ ಕೇವಲ 50 ದಿನದಲ್ಲಿ ಬಿಜೆಪಿ ಸರ್ಕಾರ ಉರುಳುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿಕೆ ನೀಡಿದ್ದು, ಈ ವಿಚಾರದಲ್ಲಿ ಸವದಿ ಅಥಣಿಯಲ್ಲಿ ಮಾದ್ಯಮಗಳಿಗೆ ಪ್ರತಿಕ್ರಿಯೆ ನೀಡಿ ಮಾತನಾಡಿದರು. ಮತ್ತೆ ಅಧಿಕಾರಕ್ಕೆ ಬರಲು ಕಾಂಗ್ರೆಸ್

ಕಾಂಗ್ರೆಸ್ ಪಕ್ಷದ ತಾಯಿ ಬಂಜೆಯಾಗಿದೆ, ಮಕ್ಕಳು ಹುಟ್ಟಲಾರವು – ಲಕ್ಷ್ಮಣ್ ಸವದಿ‌ Read More »