ರಾಜ್ಯ

ಶಿವಮೊಗ್ಗ: ರಥಕ್ಕೆ‌ ಬೆಂಕಿ ಹಚ್ಚಿ ಪರಾರಿಯಾದ ಕಿಡಿಗೇಡಿಗಳು

ಸಮಗ್ರ‌ ನ್ಯೂಸ್: ಶಿವಮೊಗ್ಗದಲ್ಲಿ ಕಿಡಿಗೇಡಿಗಳ ಅಟ್ಟಹಾಸ ಮೆರೆದಿದ್ದು, ರಾಗಿಗುಡ್ಡದ ಬ್ರಹ್ಮ ವಿಷ್ಣು ಮಹೇಶ್ವರ ದೇವಸ್ಥಾನದ ರಥಕ್ಕೆ ಬೆಂಕಿ ಹಚ್ಚಿ ಪರಾರಿಯಾಗಿರುವ ಘಟನೆ ನಡೆದಿದೆ. ರಾಗಿಗುಡ್ಡದ ಬ್ರಹ್ಮ ವಿಷ್ಣು ಮಹೇಶ್ವರ ದೇವಸ್ಥಾನದ ರಥಕ್ಕೆ ಪೆಟ್ರೋಲ್ ಸುರಿದು ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು, ಘಟನೆಯಿಂದ ರಥ ಬಹುಪಾಲು ಹಾನಿಗೊಳಗಾಗಿದೆ. ಘಟನೆ ಸಂಬಂಧ ದೇವಸ್ಥಾನದ ಅರ್ಚಕ ರಾಘವೇಂದ್ರ ದೂರು ಸಲ್ಲಿಸಿದ್ದಾರೆ. ಮಾಸ್ಕ್ ಧರಿಸಿ ಬಂದ ಇಬ್ಬರು ದುಷ್ಕರ್ಮಿಗಳು ರಥಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಘಟನೆ ಸಂಬಂಧ ಶಿವಮೊಗ್ಗ ಗ್ರಾಮಾಂತರ ಠಾಣೆ

ಶಿವಮೊಗ್ಗ: ರಥಕ್ಕೆ‌ ಬೆಂಕಿ ಹಚ್ಚಿ ಪರಾರಿಯಾದ ಕಿಡಿಗೇಡಿಗಳು Read More »

ಶಾಸಕ‌ ಮಾಡಾಳ್ ವಿರೂಪಾಕ್ಷಪ್ಪ ಕಾಣೆಯಾಗಿದ್ದಾರೆ!! ಕಾಂಗ್ರೆಸ್ ನಿಂದ ಮತ್ತೊಂದು ಅಭಿಯಾನ

ಸಮಗ್ರ ನ್ಯೂಸ್: ಚನ್ನಗಿರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರನ ಮನೆಯಲ್ಲಿ ಕೋಟಿ ಕೋಟಿ ಹಣ ಪತ್ತೆಯಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತೊಂದು ಅಭಿಯಾನ ಶುರುಮಾಡಿದೆ. ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲಿಯೂ ‘ಮಾಡಾಳ್ ಮಿಸ್ಸಿಂಗ್’ ಪೋಸ್ಟರ್ ಅಂಟಿಸಲಾಗಿದ್ದು, A-1 ಆರೋಪಿಯನ್ನು ದಯವಿಟ್ಟು ಹುಡುಕಿ ಕೊಡಿ, 100 ಕ್ಕೆ ಕರೆ ಮಾಡಿ ಮಾಡಾಳ್ ಮಾಹಿತಿ ಕೊಡಿ ಎತ್ತರ 5.9 ಅಡಿ, ವಯಸ್ಸು 72, ಗೋದಿ ಮೈಬಣ್ಣ, ನಾಪತ್ತೆಯಾದ ದಿನಾಂಕ 04-03-2023 ಕರೆ ಮಾಡಿ ಪೊಲೀಸರಿಗೆ ಮಾಹಿತಿನೀಡಿ ಎಂದು ಪೋಸ್ಟರ್

ಶಾಸಕ‌ ಮಾಡಾಳ್ ವಿರೂಪಾಕ್ಷಪ್ಪ ಕಾಣೆಯಾಗಿದ್ದಾರೆ!! ಕಾಂಗ್ರೆಸ್ ನಿಂದ ಮತ್ತೊಂದು ಅಭಿಯಾನ Read More »

ಹಾರ್ಟ್ ಅಟ್ಯಾಕ್ ಸಂಭವಿಸುವ ಮೊದಲ ಸೂಚನೆಗಳಿವು| ಈ ಲಕ್ಷಣಗಳಿದ್ರೆ ನಿಮ್ಮ ಹೃದಯ ಜೋಪಾನ..!

ಸಮಗ್ರ ನ್ಯೂಸ್: ಈ ಹಿಂದೆಲ್ಲಾ ಹೃದಯಕ್ಕೆ ಸಂಬಂಧಿಸಿದ ಕೆಲ ಕಾಯಿಲೆಗಳನ್ನು ಅದರಲ್ಲೂ ಹೃದಯಾಘಾತವನ್ನು ಸಾಮಾನ್ಯವಾಗಿ ವೃದ್ಧರ ಕಾಯಿಲೆ ಎಂದು ಪರಿಗಣಿಸಲಾಗಿತ್ತು. ವಯಸ್ಸಾದವರಲ್ಲಿ ಈ ಕಾಯಿಲೆಗಳು ಕಾಣಿಸಿಕೊಳ್ಳುತ್ತಿದ್ದವು. ಆದರೆ ಈಗ ವಯಸ್ಸಿನ ಯಾವುದೇ ಮಿತಿ ಇಲ್ಲದೇ ಹಠಾತ್‌ ಸಾವಿಗೆ ಕಾರಣವಾಗಿರುವ ಕೆಲ ಹೃದಯ ರೋಗಗಳು ಸಂಭವಿಸುತ್ತಿವೆ. ಇಂದು ಚಿಕ್ಕ ಮಕ್ಕಳಿಂದ ಹಿಡಿದು ಹದಿಹರೆಯದವರಲ್ಲಿ ಹೃದಯಾಘಾತ ಹಾಗೂ ಹೃದಯ ಸಂಬಂಧಿ ಕಾಯಿಲೆಗಳು ಸಾಮಾನ್ಯ ಎನಿಸಿವೆ. ಹೀಗಾಗಿ ವಯಸ್ಸಿನ ಬಗ್ಗೆ ಯೋಚಿಸದೇ ಈಗ ಹೃದಯವನ್ನು ಕಾಳಜಿ ಮಾಡುವುದು ಮುಖ್ಯವಾಗಿದೆ. ಯಾವುದೇ ರೋಗ

ಹಾರ್ಟ್ ಅಟ್ಯಾಕ್ ಸಂಭವಿಸುವ ಮೊದಲ ಸೂಚನೆಗಳಿವು| ಈ ಲಕ್ಷಣಗಳಿದ್ರೆ ನಿಮ್ಮ ಹೃದಯ ಜೋಪಾನ..! Read More »

ಚಾರ್ಮಾಡಿ ಘಾಟ್‍ನಲ್ಲಿ ಕಾಡ್ಗಿಚ್ಚು

ಸಮಗ್ರ ನ್ಯೂಸ್:ಚಾರ್ಮಾಡಿ ಘಾಟ್‍ನ ಬಿದಿರುತಳ ಸಮೀಪ ಅರಣ್ಯದಲ್ಲಿ ಕಾಡ್ಗಿಚ್ಚಿನಿಂದಾಗಿ ಹತ್ತಾರು ಎಕರೆ ಅರಣ್ಯ ಬೆಂಕಿಗಾಹುತಿಯಾಗಿದೆ. ಅರಣ್ಯದ ನಡುವೆ ಹಾದು ಹೋಗಿರುವ ರಸ್ತೆ ಬದಿಯಲ್ಲೇ ಬೆಂಕಿ ದಗದಗಿಸಿ ಉರಿಯುತ್ತಿದ್ದು ಬಿರುಬಿಸಿಲಿನಿಂದ ಒಣಗಿ ನಿಂತ ಹುಲ್ಲು, ಒಣಗಿದ ಎಲೆಗಳಿಂದಾಗಿ ವೇಗವಾಗಿ ಎಲ್ಲೆಡೆಗೆ ಹರಡುತ್ತಿದೆ. ಅರಣ್ಯ ಇಲಾಖೆ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸುತ್ತಿದ್ದು ಒಂದೆಡೆ ಬೆಂಕಿ ಕೆಡಿಸಿದರೇ ಮತ್ತೊಂದು ಕಡೆಯಲ್ಲಿ ಬೆಂಕಿ ಕಾಣಿಸಿಕೊಳ್ಳುವುದು ಸವಾಲಾಗಿ ಪರಿಣಮಿಸಿದೆ. ಕಳೆದ ಕೆಲ ದಿನಗಳಿಂದ ಚಾರ್ಮಾಡಿ ಘಾಟ್‍ನ ಆಲೇಕಾನ್ ಅರಣ್ಯ, ದೇವರಮನೆ, ಬಲ್ಲಾಳರಾಯನ ದುರ್ಗ ಭಾಗದಲ್ಲಿ ಕಾಡ್ಗಿಚ್ಚು

ಚಾರ್ಮಾಡಿ ಘಾಟ್‍ನಲ್ಲಿ ಕಾಡ್ಗಿಚ್ಚು Read More »

ಕುಸಿದ ಈರುಳ್ಳಿ ಬೆಲೆ| ಪ್ರಧಾನಿ‌ ನಿವಾಸಕ್ಕೆ ಪಾರ್ಸಲ್ ಕಳುಹಿಸಿದ ರೈತರು!!

ಸಮಗ್ರ ನ್ಯೂಸ್: ಈರುಳ್ಳಿ ಬೆಲೆ ಕುಸಿತದಿಂದ ಕಂಗಾಲಾಗಿರುವ ಮಹಾರಾಷ್ಟ್ರದ ಅಹಮದ್‌ನಗರದ ರೈತರ ಗುಂಪೊಂದು ಪ್ರತಿಭಟನೆ ಸೂಚಕವಾಗಿ ‍ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಂಚೆ ಮೂಲಕ ಸೋಮವಾರ ಈರುಳ್ಳಿಯನ್ನು ‘ಪಾರ್ಸೆಲ್‌’ ಕಳುಹಿಸಿದೆ. ‘ಬೆಲೆ ಇಳಿಕೆಯಿಂದ ಸಂಕಷ್ಟಕ್ಕೆ ಸಿಲುಕಿರುವ ತಮಗೆ ಅಗತ್ಯ ಪರಿಹಾರ ಒದಗಿಸಬೇಕು. ಈರುಳ್ಳಿ ಹಾಗೂ ಇತರೆ ಕೃಷಿ ಉತ್ಪನ್ನಗಳ ರಫ್ತಿನ ಮೇಲೆ ಹೇರಲಾಗಿರುವ ನಿಷೇಧವನ್ನು ತೆರವುಗೊಳಿಸಬೇಕು. ಪ್ರತಿ ಕ್ವಿಂಟಲ್‌ಗೆ ₹1 ಸಾವಿರ ಪರಿಹಾರ ಪ್ರಕಟಿಸಬೇಕು’ ಎಂದು ಶೇತ್ಕಾರಿ ಸಂಘಟನೆ ಹಾಗೂ ಶೇತ್ಕಾರಿ ವಿಕಾಸ್‌ ಮಂಡಳ ಒತ್ತಾಯಿಸಿವೆ. ‘ಕೇಂದ್ರ

ಕುಸಿದ ಈರುಳ್ಳಿ ಬೆಲೆ| ಪ್ರಧಾನಿ‌ ನಿವಾಸಕ್ಕೆ ಪಾರ್ಸಲ್ ಕಳುಹಿಸಿದ ರೈತರು!! Read More »

ರಶ್ಮಿಕಾ ಬ್ಯೂಟಿಗೆ ಕ್ಲೀನ್ ಬೌಲ್ಡ್ ಆದ ಶುಭ್ಮನ್ ಗಿಲ್| ಆಕೆ ನನ್ನ ಕ್ರಶ್ ಎಂದ ಕ್ರಿಕೆಟ್ ತಾರೆ

ಸಮಗ್ರ ನ್ಯೂಸ್: ನ್ಯಾಷನಲ್‌ ಕ್ರಷ್‌, ಹೆಸರೇ ಸೂಚಿಸುವಂತೆ ರಶ್ಮಿಕಾ ಎಂದರೆ ಜನ ಸಾಮಾನ್ಯರಿಗೆ ಮಾತ್ರವಲ್ಲ ಸೆಲೆಬ್ರಿಟಿಗಳಿಗೆ ಕೂಡಾ ಬಹಳ ಇಷ್ಟ. ಕಳೆದ ವರ್ಷ ಟಾಲಿವುಡ್‌ ನಟ ಬಾಲಕೃಷ್ಣ, ತಮ್ಮ ಅನ್‌ಸ್ಟಾಪಬಲ್‌ ಶೋನಲ್ಲಿ ರಶ್ಮಿಕಾ ಎಂದರೆ ಬಹಳ ಇಷ್ಟ ಎಂದು ಹೇಳಿಕೊಂಡಿದ್ದರು. ಇದೀಗ ಭಾರತೀಯ ಕ್ರಿಕೆಟ್‌ ತಂಡದ ಯುವ ಕ್ರಿಕೆಟಿಗ ಶುಭ್ಮನ್‌ ಗಿಲ್‌ ಕೂಡಾ ರಶ್ಮಿಕಾಗೆ ಬೌಲ್ಡ್‌ ಆಗಿದ್ದಾರಂತೆ. ಕಳೆದ ಕೆಲವು ದಿನಗಳಿಂದ ಈ ಸುದ್ದಿ ಹರಿದಾಡುತ್ತಿದೆ. ಕ್ರಿಕೆಟಿಗರ ಹಾಗೂ ಸಿನಿಮಾ ತಾರೆಯರ ಪ್ರೀತಿ ಪ್ರೇಮ ಪ್ರಣಯ ಇಂದು

ರಶ್ಮಿಕಾ ಬ್ಯೂಟಿಗೆ ಕ್ಲೀನ್ ಬೌಲ್ಡ್ ಆದ ಶುಭ್ಮನ್ ಗಿಲ್| ಆಕೆ ನನ್ನ ಕ್ರಶ್ ಎಂದ ಕ್ರಿಕೆಟ್ ತಾರೆ Read More »

ಕೊಡಗಿನಲ್ಲಿ ಮುಂದುವರಿದ ಕಾಳ್ಗಿಚ್ಚು| ತಾವೂರು ಮತ್ತು ತಣ್ಣಿಮಾನಿ ಬೆಟ್ಟದಲ್ಲಿ ಕಾಣಿಸಿಕೊಂಡ ಬೆಂಕಿ

ಸಮಗ್ರ ನ್ಯೂಸ್: ಕೊಡಗಿನಲ್ಲಿ ಕಾಳ್ಗಿಚ್ಚಿ‌ನ ಹಾವಳಿ ಮುಂದುವರೆದಿದ್ದು, ಭಾಗಮಂಡಲ ಸಮೀಪದ ತಾವೂರು, ತಣ್ಣಿಮಾನಿ ಬೆಟ್ಟದಲ್ಲಿ ಭಾರೀ ಅವಘಡ ಸಂಭವಿಸಿದೆ. ಭಾನುವಾರ ಸಂಜೆಯಿಂದ ಬೆಟ್ಟದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು,ಭಾಗಮಂಡಲ ಪಟ್ಟಣಕ್ಕೆ ಬೆಂಕಿಯ ಜ್ವಾಲೆ ಗೋಚರಿಸುತ್ತಿದೆ. ಬೆಟ್ಟದ ಕೆಳಗಿನ ಸ್ಥಳೀಯ ನೂರಾರು ಎಕರೆ ತೋಟಗಳಿಗೆ ಬೆಂಕಿ ಹರಡುವ ಆತಂಕ‌ ಎದುರಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳದಲ್ಲಿ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದು, ಅಗ್ನಿಶಾಮಕ ದಳ ತೆರಳಲು ಸಾಧ್ಯವಿಲ್ಲದ ಹಿನ್ನೆಲೆ ಕಾಡು ಸೊಪ್ಪು ಬಳಿಸಿ ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದೆ‌. ಡಿ ಎಫ್

ಕೊಡಗಿನಲ್ಲಿ ಮುಂದುವರಿದ ಕಾಳ್ಗಿಚ್ಚು| ತಾವೂರು ಮತ್ತು ತಣ್ಣಿಮಾನಿ ಬೆಟ್ಟದಲ್ಲಿ ಕಾಣಿಸಿಕೊಂಡ ಬೆಂಕಿ Read More »

ರಾಜ್ಯದಲ್ಲಿ ಮತ್ತೆ ಕೊರೊನಾ ಗುಮ್ಮ| ಅಲ್ಲಲ್ಲಿ ಹೆಚ್ಚಾಗ್ತಿದೆ ಸೋಂಕು ಪ್ರಕರಣ|

ಸಮಗ್ರ ನ್ಯೂಸ್: ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮತ್ತೆ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ಆರೋಗ್ಯ ಸಚಿವ ಡಾ. ಸುಧಾಕರ್ ತಜ್ಞರ ಜೊತೆಗೆ ಮಹತ್ವದ ಸಭೆ ನಡೆಸಲಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಚ್​​3 ಎನ್​2 ಬಗ್ಗೆ ನಿಗಾವಹಿಸಲು ಕೇಂದ್ರ ಆರೋಗ್ಯ ಸಚಿವಾಲಯ ಸೂಚನೆ ನೀಡಿದೆ. ಈ ಸಂಬಂಧ ನಾಳೆ ಅಧಿಕಾರಿಗಳು, ತಜ್ಞರ ಜತೆ ಸಭೆ ನಡೆಸಲಾಗುತ್ತೆ. ರೋಗ ಲಕ್ಷಣದಿಂದಾಗಿ ಕೆಮ್ಮು ಉಂಟಾಗಿರುವ ಮಾಹಿತಿ ಇದೆ. ಸೋಂಕು ತಡೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ

ರಾಜ್ಯದಲ್ಲಿ ಮತ್ತೆ ಕೊರೊನಾ ಗುಮ್ಮ| ಅಲ್ಲಲ್ಲಿ ಹೆಚ್ಚಾಗ್ತಿದೆ ಸೋಂಕು ಪ್ರಕರಣ| Read More »

ಮಾಡಾಳು ವಿರೂಪಾಕ್ಷಪ್ಪ ಬಳಿಕ ಮತ್ತೊಬ್ಬ ಸಚಿವರ ಮೇಲೆ‌ ಭ್ರಷ್ಟಾಚಾರದ ಆರೋಪ| ಬೈರತಿ ಬಸವರಾಜ್ ಮೇಲೆ‌ ತಿರುಗಿ ಬಿದ್ದ KSDL ನೌಕರರ ಸಂಘ

ಸಮಗ್ರ ನ್ಯೂಸ್: ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಬೆನ್ನಲ್ಲೇ ಇದೀಗ ಸಚಿವ ಭೈರತಿ ಬಸವರಾಜ್ ವಿರುದ್ಧವೂ ಕೆ ಎಸ್ ಡಿ ಎಲ್ ನೌಕರರ ಸಂಘ ಗಂಭೀರ ಆರೋಪ ಮಾಡಿದೆ. ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಕೆ ಎಸ್ ಡಿ ಎಲ್ ಅಧ್ಯಕ್ಷರಾಗಿದ್ದಾಗ 800 ಕೋಟಿ ಅಕ್ರಮ ನಡೆಸಿದ್ದಾರೆ ಎಂಬ ಬಗ್ಗೆ ಆರೋಪ ಮಾಡಿರುವ ಕೆ ಎಸ್ ಡಿ ಎಲ್ ನೌಕರರ ಸಂಘ ಹಿಂದಿನ ಅಧ್ಯಕ್ಷರಾಗಿದ್ದ ಭೈರತಿ ಬಸವರಾಜ್ ಅವರೂ ಕೂಡ 3 ಕೋಟಿಗೂ ಅಧಿಕ ಅಕ್ರಮ ನಡೆಸಿದ್ದಾರೆ ಎಂದು

ಮಾಡಾಳು ವಿರೂಪಾಕ್ಷಪ್ಪ ಬಳಿಕ ಮತ್ತೊಬ್ಬ ಸಚಿವರ ಮೇಲೆ‌ ಭ್ರಷ್ಟಾಚಾರದ ಆರೋಪ| ಬೈರತಿ ಬಸವರಾಜ್ ಮೇಲೆ‌ ತಿರುಗಿ ಬಿದ್ದ KSDL ನೌಕರರ ಸಂಘ Read More »

ಮೆದುಳು ನಿಷ್ಕ್ರಿಯ; ಯುವಕನ ಅಂಗಾಂಗ ದಾನ ಮಾಡಿದ ಕುಟುಂಬಸ್ಥರು| ಆರು ಜನರ ಜೀವ ಉಳಿಸಿದ ‘ಮಣಿ’

ಸಮಗ್ರ ನ್ಯೂಸ್: ರಸ್ತೆ ಅಪಘಾತದಲ್ಲಿ ತಲೆ ಭಾಗಕ್ಕೆ ಗಂಭೀರವಾಗಿ ಪೆಟ್ಟು ಬಿದ್ದು ಆಸ್ಪತ್ರೆ ಸೇರಿದ್ದ 27 ವರ್ಷದ ಮಣಿ ಎಂಬ ಯುವಕನ ಮೆದುಳು ನಿಷ್ಕ್ರಿಯ ಗೊಂಡಿದ್ದು, ಅಂಗಾಂಗ ದಾನ ಮಾಡುವ ಮೂಲಕ 6 ಜನರ ಜೀವ ಉಳಿಸಿದ ಮಣಿ, ಸಾವಿನಲ್ಲೂ ಸಾರ್ಥಕತೆ ಮರೆದಿದ್ದಾರೆ. ಹೃದಯ, ಯಕೃತ್ತು, ಎರಡು ಮೂತ್ರಪಿಂಡಗಳು, ಮತ್ತು ಕಾರ್ನಿಯಾಗಳನ್ನು ದಾನ ಮಾಡಲಾಗಿದೆ. ಹೃದಯವನ್ನು ಗ್ರೀನ್ ಕಾರಿಡಾರ್​ ಮೂಲಕ ಬೆಂಗಳೂರಿಗೆ ವರ್ಗಾಯಿಸಲಾಗಿದೆ. ಚಾಮರಾಜನಗರ ಜಿಲ್ಲೆಯ ಬಂಡಿಗೆರೆ ಗ್ರಾಮದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮಣಿ ತಲೆಗೆ ಗಂಭೀರವಾದ

ಮೆದುಳು ನಿಷ್ಕ್ರಿಯ; ಯುವಕನ ಅಂಗಾಂಗ ದಾನ ಮಾಡಿದ ಕುಟುಂಬಸ್ಥರು| ಆರು ಜನರ ಜೀವ ಉಳಿಸಿದ ‘ಮಣಿ’ Read More »