ರಾಜ್ಯ

Weather report| ರಾಜಧಾನಿ ಬೆಂಗಳೂರಿಗೆ ಮೂರು ದಿನಮಳೆ ಮುನ್ಸೂಚನೆ| ಕರಾವಳಿಯಲ್ಲೂ ಸಾಧಾರಣ ಮಳೆ ನಿರೀಕ್ಷೆ

ಸಮಗ್ರ ನ್ಯೂಸ್: ಹವಾಮಾನ ವೈಪರೀತ್ಯದಿಂದಾಗಿ ಬೆಂಗಳೂರಿನಲ್ಲಿ ಇಂದಿನಿಂದ ಮೂರು ದಿನ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಕರ್ನಾಟಕ ಹಾಗೂ ಕರಾವಳಿಯ ಭಾಗದಲ್ಲಿ ಸಮುದ್ರ ಮಟ್ಟದಿಂದ 1.5 ಕಿಲೋ ಮೀಟರ್ ಎತ್ತರದವರೆಗೆ ಸುಳಿಗಾಳಿ ನಿರ್ಮಾಣವಾಗಿದೆ. ಎಲ್ಲೆಡೆ ಹೆಚ್ಚಾಗಿದ್ದ ತಾಪಮಾನ ತುಸು ಕಡಿಮೆ ಆಗಿದೆ. ಅಕಾಲಿಕ ಹವಾಮಾನ ಬದಲಾವಣೆಗಳ ಪರಿಣಾಮ ಮಾರ್ಚ್‌ ಇಂದಿನಿಂದ ನಗರದ ಅಲ್ಲಲ್ಲಿ ಹಗುರ ಮಳೆ ನಿರೀಕ್ಷೆ ಇದೆ ಎಂದು ಇಲಾಖೆ ಮಾಹಿತಿ ನೀಡಿದೆ. ಬೆಂಗಳೂರು ನಗರದಲ್ಲಿ ಕಳೆದ ಎರಡು ದಿನದಿಂದ

Weather report| ರಾಜಧಾನಿ ಬೆಂಗಳೂರಿಗೆ ಮೂರು ದಿನಮಳೆ ಮುನ್ಸೂಚನೆ| ಕರಾವಳಿಯಲ್ಲೂ ಸಾಧಾರಣ ಮಳೆ ನಿರೀಕ್ಷೆ Read More »

ಇಂದು ಪುನೀತ್ ರಾಜ್‍ಕುಮಾರ್ ಜನ್ಮದಿನ| ಅಭಿಮಾನಿಗಳಿಂದ ಅಪ್ಪು ಸಮಾಧಿ ಸ್ಥಳಕ್ಕೆ ಭೇಟಿ, ಪೂಜೆ ಸಲ್ಲಿಕೆ

ಸಮಗ್ರ ನ್ಯೂಸ್: ಇಂದು (ಮಾರ್ಚ್ 17) ಪುನೀತ್ ರಾಜ್​ಕುಮಾರ್ ಅವರ ಜನ್ಮದಿನ. ಇದು ಪುನೀತ್ ಇಲ್ಲದೆ ಆಚರಿಸಲಾಗುತ್ತಿರುವ ಎರಡನೇ ಜನ್ಮದಿನ. ಪುನೀತ್ ಅವರಿಗೆ ಸೆಲೆಬ್ರಿಟಿಗಳು ಹಾಗೂ ಫ್ಯಾನ್ಸ್ ಜನ್ಮದಿನದ ಶುಭಾಶಯ ತಿಳಿಸುತ್ತಿದ್ದಾರೆ. ಪುನೀತ್ (Puneeth Rajkumar) ನಮ್ಮ ಜೊತೆ ಇದ್ದಿದ್ದರೆ ಈ ದಿನದ ಮೆರುಗು ಮತ್ತಷ್ಟು ಹೆಚ್ಚುತ್ತಿತ್ತು. ಆದರೆ, ಅವರಿಲ್ಲ ಎನ್ನುವ ಬೇಸರದಲ್ಲೇ ಈ ದಿನವನ್ನು ಆಚರಿಸಲಾಗುತ್ತಿರುವುದು ನಿಜಕ್ಕೂ ದುಃಖಕರ ವಿಚಾರ. ಪುನೀತ್ ಜನ್ಮದಿನಕ್ಕೆ ಅಭಿಮಾನಿಗಳಿಂದ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ವಿಶೇಷ ದಿನದಂದು ‘ಕಬ್ಜ’ ಕೂಡ

ಇಂದು ಪುನೀತ್ ರಾಜ್‍ಕುಮಾರ್ ಜನ್ಮದಿನ| ಅಭಿಮಾನಿಗಳಿಂದ ಅಪ್ಪು ಸಮಾಧಿ ಸ್ಥಳಕ್ಕೆ ಭೇಟಿ, ಪೂಜೆ ಸಲ್ಲಿಕೆ Read More »

‘ಅಕುಲು ದೈವದ ನಾಟಕ ಮಲ್ತೆರ್; ಮುಕುಲು ಹಿಂದುತ್ವದ ನಾಟಕ‌ ಮಲ್ತೆರ್| ಸಚಿವ ಆರಗ ಜ್ಞಾನೇಂದ್ರರಿಂದ ‘ಗುಳಿಗೆ’ ಅವಮಾನಕ್ಕೆ ಭಾರೀ ಆಕ್ರೋಶ

ಸಮಗ್ರ ನ್ಯೂಸ್: ಒಂದೆರಡು ದಿನಗಳ ಹಿಂದೆ ರಾಷ್ಟ್ರಕವಿ ಕುವೆಂಪು ನಾಡು ತೀರ್ಥಹಳ್ಳಿಯಲ್ಲಿ ಮಾಜಿ ಶಿಕ್ಷಣ ಸಚಿವ, ಕಾಂಗ್ರೆಸ್ ನಾಯಕ ಕಿಮ್ಮನೆ ರತ್ನಾಕರ್ ಆಯೋಜನೆಯಲ್ಲಿ ಮಂಗಳೂರಿನ ಖ್ಯಾತ ನಿರ್ದೇಶಕರಾದ ವಿಜಯ ಕುಮಾರ್ ಕೋಡಿಯಾಲ್ ಬೈಲ್ ಹಾಗೂ ಕಾಂತಾರ ನಟ ಸ್ವರಾಜ್ ಶೆಟ್ಟಿ ಅಭಿನಯದ ಅತೀ ಹೆಚ್ಚು ಪ್ರದರ್ಶನಗೊಂಡ ’ಶಿವದೂತೆ ಗುಳಿಗೆ’ ಎಂಬ ಪುಣ್ಯ ಕಥಾ ನಾಟಕವೊಂದು ಪ್ರದರ್ಶನಗೊಂಡಿತ್ತು. ಕಿಕ್ಕಿರಿದ ಸಭೆಯ ನಡುವೆ ಗುಳಿಗನ ಅಬ್ಬರ ಮಲ್ನಾಡ್ ನಲ್ಲಿ ಭಾರೀ ಸಂಚಲನ ಮೂಡಿಸಿದ್ದು, ನಾಟಕ ನೋಡಲು ಸಾವಿರಾರು ಮಂದಿ ಪ್ರೇಕ್ಷಕರು

‘ಅಕುಲು ದೈವದ ನಾಟಕ ಮಲ್ತೆರ್; ಮುಕುಲು ಹಿಂದುತ್ವದ ನಾಟಕ‌ ಮಲ್ತೆರ್| ಸಚಿವ ಆರಗ ಜ್ಞಾನೇಂದ್ರರಿಂದ ‘ಗುಳಿಗೆ’ ಅವಮಾನಕ್ಕೆ ಭಾರೀ ಆಕ್ರೋಶ Read More »

ಮೂಡಿಗೆರೆ ಶಾಸಕ‌‌ ಎಂ.ಪಿ ಕುಮಾರಸ್ವಾಮಿ ವಿರುದ್ದ ಉಲ್ಟಾ ಹೊಡೆದ ಕಾರ್ಯಕರ್ತರು| ಈ ಬಾರಿ ಟಿಕೆಟ್ ನೀಡದಂತೆ ಒತ್ತಡ

ಸಮಗ್ರ ನ್ಯೂಸ್: ದಿನದಿಂದ ದಿನಕ್ಕೆ ಚುನಾವಣಾ ಕಣ ರಂಗೇರುತ್ತಿದ್ದು 120 ಪ್ಲಸ್ ಕನಸೊತ್ತಿರೋ ಬಿಜೆಪಿ ಶತಯಾಗತಾಯ ಅಧಿಕಾರಕ್ಕಾಗಿ ಹಾತೊರೆಯುತ್ತಿದೆ. ಆದರೆ, ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನಲ್ಲಿ ಸಾವಿರಾರು ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಹಾಲಿ ಶಾಸಕರ ವಿರುದ್ಧ ರೆಬಲ್ ಆಗಿ ಪ್ರತ್ಯೇಕ ಬಂಡಾಯದ ಸಭೆ ನಡೆಸಿ ಶಾಸಕರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಮೂಡಿಗೆರೆ ನಗರದ ಪ್ರೀತಂ ಕಲ್ಯಾಣ ಮಂಟಪದಲ್ಲಿ ಸಭೆ ನಡೆಸುತ್ತಿರೋ ಮುಖಂಡರು ಹಾಗೂ ಕಾರ್ಯಕರ್ತರು ಈ ಬಾರಿ ಕುಮಾರಸ್ವಾಮಿಗೆ ಟಿಕೆಟ್ ಬೇಡವೇ ಬೇಡ ಅಂತ ಬಹಿರಂಗ

ಮೂಡಿಗೆರೆ ಶಾಸಕ‌‌ ಎಂ.ಪಿ ಕುಮಾರಸ್ವಾಮಿ ವಿರುದ್ದ ಉಲ್ಟಾ ಹೊಡೆದ ಕಾರ್ಯಕರ್ತರು| ಈ ಬಾರಿ ಟಿಕೆಟ್ ನೀಡದಂತೆ ಒತ್ತಡ Read More »

5 ಮತ್ತು 8ನೇ ತರಗತಿ ಪಬ್ಲಿಕ್ ಪರೀಕ್ಷಾ ವೇಳಾಪಟ್ಟಿ ಪ್ರಕಟ| ಇಲ್ಲಿದೆ ಫುಲ್ ಡೀಟೈಲ್ಸ್…

ಸಮಗ್ರ ನ್ಯೂಸ್: ರಾಜ್ಯದಲ್ಲಿ 5 ಹಾಗೂ 8ನೇ ತರಗತಿ ಮೌಲ್ಯಂಕನ ಪರೀಕ್ಷಾ ವೇಳಾಪಟ್ಟಿಯನ್ನು ರಾಜ್ಯ ಶಿಕ್ಷಣ ಇಲಾಖೆ ಇಂದು ಬಿಡುಗಡೆ ಮಾಡಿದೆ. ಮಾ.27ರಿಂದ ಪರೀಕ್ಷೆ ಆರಂಭವಾಗಲಿದ್ದು, ಏ.1ರವರೆಗೆ ಪರೀಕ್ಷೆ ನಡೆಯಲಿದೆ. 5 ಹಾಗೂ 8 ನೇ ತರಗತಿ ಪರಿಷ್ಕೃತ ಪರೀಕ್ಷಾ ವೇಳಾಪಟ್ಟಿ:ಮಾ.27- ಸೋಮವಾರ- ಪ್ರಥಮ ಭಾಷೆ ಕನ್ನಡಮಾ.28- ಮಂಗಳವಾರ – ದ್ವಿತೀಯ ಭಾಷೆ ಇಂಗ್ಲೀಷ್ ಅಥವಾ ಕನ್ನಡಮಾ.29- ಬುಧವಾರ- ತೃತೀಯ ಭಾಷೆ ಹಿಂದಿ ಅಥವಾ ಪರಿಸರ ಅಧ್ಯಯನಮಾ.30- ಗುರುವಾರ – ಗಣಿತಮಾ.31- ಶುಕ್ರವಾರ- ವಿಜ್ಞಾನಏ.1- ಶನಿವಾರ –

5 ಮತ್ತು 8ನೇ ತರಗತಿ ಪಬ್ಲಿಕ್ ಪರೀಕ್ಷಾ ವೇಳಾಪಟ್ಟಿ ಪ್ರಕಟ| ಇಲ್ಲಿದೆ ಫುಲ್ ಡೀಟೈಲ್ಸ್… Read More »

ಮಡಿಕೇರಿ: ಪ್ರೀತಿ ಕೊಂದನಾ ಕೊಲೆಗಾರ? ಮದ್ವೆಯಾದ ಮೂರೇ ದಿನಕ್ಕೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ನವವಿವಾಹಿತೆ

ಸಮಗ್ರ ನ್ಯೂಸ್: ಪ್ರೀತಿಸಿ ಮದುವೆಯಾದ ಮೂರೇ ದಿನಕ್ಕೆ ನವವಿವಾಹಿತೆಯೊಬ್ಬಳು ಅನುಮಾನಾಸ್ಪದವಾಗಿ ಕೊಲೆಯಾಗಿರುವ ಘಟನೆ ಕೊಡಗಿನ ಕುಶಾಲನಗರ ತಾಲೂಕಿನ ಹೊಸಕೋಟೆಯಲ್ಲಿ ನಡೆದಿದೆ. ಅಕ್ಷತಾ (18) ಕೊಲೆಯಾದ ಯುವತಿ. ಹೇಮಂತ್ ಎಂಬಾತ ಅಕ್ಷತಾಳನ್ನು ಪ್ರೀತಿಸಿ ಮದುವೆಯಾಗಿದ್ದ. 3 ದಿನಗಳ ಹಿಂದೆ ಇಬ್ಬರು ದೇವಾಲಯದಲ್ಲಿ ಮದುವೆಯಾಗಿ ಬಂದಿದ್ದರು. ಈ ಇಬ್ಬರು ಒಂದೇ ಗ್ರಾಮದವರಾಗಿದ್ದು, ಬೇರೆ ಬೇರೆ ಸಮುದಾಯದವರಾಗಿದ್ದರು. ಹೇಮಂತ್‍ನ ಪೋಷಕರಾದ ದಶರಥ ಮತ್ತು ಗಿರಿಜಾ ಇಬ್ಬರಿಗೂ ಈ ಮದುವೆ ಇಷ್ಟವಿರಲಿಲ್ಲ. ಇದರಿಂದಾಗಿ ಹೇಮಂತ್ ಪೋಷಕರು ಅಕ್ಷತಾ ದಲಿತ ಯುವತಿ ಎನ್ನುವ ಕಾರಣಕ್ಕೆ

ಮಡಿಕೇರಿ: ಪ್ರೀತಿ ಕೊಂದನಾ ಕೊಲೆಗಾರ? ಮದ್ವೆಯಾದ ಮೂರೇ ದಿನಕ್ಕೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ನವವಿವಾಹಿತೆ Read More »

ಕುಪ್ಪೆಪದವು:ಆತ್ಮಹತ್ಯೆ ಗೆ ಶರಣಾದ ಗ್ರಾಮ ಪಂಚಾಯತ್ ಸದಸ್ಯ

ಸಮಗ್ರ ನ್ಯೂಸ್ : ಗಂಜಿಮಠ ಗ್ರಾಮ ಪಂಚಾಯತ್ ಸದಸ್ಯ ಆತ್ಮಹತ್ಯೆ ಗೆ ಶರಣಾದ ಘಟನೆ ಬುಧವಾರ ರಾತ್ರಿ ನಡೆದಿದೆ. ಗಂಜಿಮಠ ಗ್ರಾಮ ಪಂಚಾಯತ್ ನ ಮೊಗರು 9ಮತ್ತು 10 ನೇ ವಾರ್ಡ್ ನ ಬಿಜೆಪಿ ಬೆಂಬಲಿತ ಸದಸ್ಯರಾಗಿದ್ದ ಸಂದೀಪ್ ಶೆಟ್ಟಿ ಮೊಗರು(35) ಆತ್ಮಹತ್ಯೆಗೆ ಶರಣಾದವರು. ಇವರು ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ನೀರುಮಾರ್ಗ ದಲ್ಲಿರುವ ತನ್ನ ಕಟೀಲೇಶ್ವರಿ ಸೇವಾ ಸಿಂದು ಕಚೇರಿಯಲ್ಲಿ ಫ್ಯಾನಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬುಧವಾರ ಮಧ್ಯಾಹ್ನದಿಂದ ಸಂದೀಪ್ ಕಾಣೆಯಾಗಿದ್ದು, ಹುಡುಕಾಟ ನಡೆಸಿದಾಗ

ಕುಪ್ಪೆಪದವು:ಆತ್ಮಹತ್ಯೆ ಗೆ ಶರಣಾದ ಗ್ರಾಮ ಪಂಚಾಯತ್ ಸದಸ್ಯ Read More »

Weather report| ರಾಜ್ಯದಲ್ಲಿ ಇನ್ನೆರಡು ದಿನವೂ ವರ್ಷಧಾರೆ| ಕರಾವಳಿ, ಉತ್ತರ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ

ಸಮಗ್ರ ನ್ಯೂಸ್: ಬೆಂಗಳೂರು, ಮಂಗಳೂರು ಸೇರಿ ರಾಜ್ಯದ ಕೆಲವೆಡೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. ಕರಾವಳಿಯ ಎಲ್ಲ ಜಿಲ್ಲೆಗಳು, ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಗದಗ, ಹಾವೇರಿ, ದಕ್ಷಿಣ ಒಳನಾಡಿನ ಬಳ್ಳಾರಿ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ರಾಮನಗರ, ಶಿವಮೊಗ್ಗ ಜಿಲ್ಲೆಗಳ ಒಂದೆರಡು ಕಡೆ ಮುಂದಿನ 24 ಗಂಟೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಗಳಿವೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಇಂದಿನಿಂದ ಮಾರ್ಚ್ 18 ರವರೆಗೆ ಮಳೆಯಾಗುವ ಸಾಧ್ಯತೆ

Weather report| ರಾಜ್ಯದಲ್ಲಿ ಇನ್ನೆರಡು ದಿನವೂ ವರ್ಷಧಾರೆ| ಕರಾವಳಿ, ಉತ್ತರ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ Read More »

ಈ ಕಾರಣಕ್ಕೆ ತೃತೀಯಲಿಂಗಿಗಳು, ಸಲಿಂಗಕಾಮಿಗಳು ರಕ್ತದಾನ ಮಾಡಬಾರದು

ಸಮಗ್ರ ನ್ಯೂಸ್: ಎಲ್ಲಾ ದಾನಗಳಿಗಿಂತ ರಕ್ತದಾನ ಶ್ರೇಷ್ಠವಾದದ್ದು, ಹಾಗಾಗಿ ರಕ್ತದಾನ ಮಾಡುವುದಕ್ಕೂ ವೈದ್ಯಕೀಯ ಮಾರ್ಗಸೂಚಿಯಿರುತ್ತೆ. ಇಂತಹವರು ರಕ್ತದಾನ ಮಾಡಬೇಕು, ಮಾಡಬಾರದು ಎಂಬ ನಿಯಮವಿದೆ. ಯಾವುದೇ ದಾನ ಇನ್ನೊಬ್ಬರ ಜೀವಕ್ಕೆ ಆಸರೆಯಾಗಬೇಕೇ ಹೊರತು ಕೆಡುಕುಂಟು ಮಾಡಬಾರದು. ಹೀಗಾಗಿ ರಕ್ತದಾನ ಮಾಡುವಾಗ ವೈದ್ಯಕೀಯ ನಿಯಮ ಪಾಲಿಸುವುದು ತುಂಬಾ ಮುಖ್ಯ. ಆ ಮಾರ್ಗಸೂಚಿಯೇನು? ಅದನ್ನು ಯಾಕೆ ಪಾಲಿಸಬೇಕು? ಯಾರ‍್ಯಾರು ರಕ್ತದಾನ ಮಾಡಬಾರದು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಮಾರಕ ಕಾಯಿಲೆಗಳ ವಿಚಾರವಾಗಿ ವೈದ್ಯಕೀಯ ಕ್ಷೇತ್ರ ಎಚ್ಚರಿಕೆಯ ಹೆಜ್ಜೆಗಳನ್ನಿಡುತ್ತಿದೆ. ರಕ್ತದಾನದ ವಿಚಾರದಲ್ಲೂ ಇಂತಹ

ಈ ಕಾರಣಕ್ಕೆ ತೃತೀಯಲಿಂಗಿಗಳು, ಸಲಿಂಗಕಾಮಿಗಳು ರಕ್ತದಾನ ಮಾಡಬಾರದು Read More »

ಚುನಾವಣೆ ಘೋಷಣೆಗೆ ದಿನಗಣನೆ| ಜಿಲ್ಲೆಯಲ್ಲಿ ಅನಧಿಕೃತ ಜಾಹೀರಾತು ಬ್ಯಾನರ್ ತೆರವಿಗೆ ಜಿಲ್ಲಾಧಿಕಾರಿ ಸೂಚನೆ

ಸಮಗ್ರ ನ್ಯೂಸ್: ರಾಜ್ಯ ವಿಧಾನಸಭೆ ಚುನಾವಣೆ ಘೋಷಣೆಗೆ ಕೆಲವೇ ದಿನಗಳಿರುವ ಬೆನ್ನಲ್ಲೇ ಇದೀಗ ದಕ್ಷಿಣಕನ್ನಡ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದ್ದು, ಜಿಲ್ಲೆಯಲ್ಲಿ ಅನಧಿಕೃತವಾಗಿ ಅಳವಡಿಸಿರುವ ಬ್ಯಾನರ್, ಫ್ಲೆಕ್ಸ್‌ , ಜಾಹೀರಾತು ಮತ್ತು ಫಲಕಗಳನ್ನು ತೆರವುಗೊಳಿಸಬೇಕು. ರಾಜಕೀಯ ಪಕ್ಷಗಳ ಸಾರ್ವಜನಿಕ ಸಭೆ ಸಮಾರಂಭಗಳ ಮೇಲೆ ನಿಗಾವಹಿಸಬೇಕು ಎಂದು ಜಿಲ್ಲಾಧಿಕಾರಿ ರವಿಕುಮಾರ್‌ ಎಂ.ಆರ್‌. ಅಧಿಕಾರಿಗಳಿಗೆ ಸೂಚಿಸಿದ್ದಾರೆ. ವಿಧಾನಸಭಾ ಚುನಾವಣೆ ಸದ್ಯದಲ್ಲೆ ಘೋಷಣೆಯಾಗುವ ಸಾಧ್ಯತೆ ಇದೆ. ಅದಕ್ಕೂ ಮುನ್ನವೇ ಜಿಲ್ಲಾಡಳಿತವು ನಿಷ್ಪಕ್ಷಪಾತ ಚುನಾವಣೆ ನಡೆಸಲು ಸಜ್ಜಾಗಬೇಕು ಎಂದು ಅವರು ಜ್ಞಾಪನಾ ಪತ್ರದಲ್ಲಿ ಮಂಗಳವಾರ ತಿಳಿಸಿದ್ದಾರೆ.

ಚುನಾವಣೆ ಘೋಷಣೆಗೆ ದಿನಗಣನೆ| ಜಿಲ್ಲೆಯಲ್ಲಿ ಅನಧಿಕೃತ ಜಾಹೀರಾತು ಬ್ಯಾನರ್ ತೆರವಿಗೆ ಜಿಲ್ಲಾಧಿಕಾರಿ ಸೂಚನೆ Read More »