ರಾಜ್ಯ

5 ಮತ್ತು 8ನೇ ತರಗತಿ ಪರೀಕ್ಷೆ ಮುಂದೂಡಿಕೆಗೆ ಹೈಕೋರ್ಟ್ ‌ನಕಾರ| ಮಾ.27ರಿಂದ ನಡೆಯಲಿದೆ ಎಕ್ಸಾಂ; ಹೀಗಿದೆ ವೇಳಾಪಟ್ಟಿ

ಸಮಗ್ರ ನ್ಯೂಸ್: ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ಶಾಲೆಗಳ ಐದು ಮತ್ತು ಎಂಟನೇ ತರಗತಿಗಳಿಗೆ ಮಾ.27ರಿಂದ ನಡೆಯಲಿರುವ ಬೋರ್ಡ್‌ ಮಟ್ಟದ (ಮಂಡಳಿ) ಪರೀಕ್ಷೆಗಳನ್ನು ಮುಂದೂಡಬೇಕೆಂಬ ರಾಜ್ಯ ಖಾಸಗಿ ಅನುದಾನಿತ ರಹಿತ ಶಾಲೆಗಳ ಒಕ್ಕೂಟದ ಮನವಿಯನ್ನು ಹೈಕೋರ್ಟ್‌ ಮತ್ತೊಮ್ಮೆ ತಿರಸ್ಕರಿಸಿದೆ. ಬೋರ್ಡ್‌ ಪರೀಕ್ಷೆ ನಡೆಸುವ ಸಂಬಂಧ ಹೊರಡಿಸಿದ್ದ ಸುತ್ತೋಲೆಗಳನ್ನು ರದ್ದುಪಡಿಸಿ ಏಕಸದಸ್ಯ ಪೀಠ ನೀಡಿದ್ದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿರುವ ಮೇಲ್ಮನವಿಯು ನ್ಯಾಯಮೂರ್ತಿ ಜಿ. ನರೇಂದರ್‌ ಹಾಗೂ ನ್ಯಾಯಮೂರ್ತಿ ಅಶೋಕ್‌ ಎಸ್‌. ಕಿಣಗಿ ಅವರಿದ್ದ ಪೀಠದ ಮುಂದೆ ಶುಕ್ರವಾರ

5 ಮತ್ತು 8ನೇ ತರಗತಿ ಪರೀಕ್ಷೆ ಮುಂದೂಡಿಕೆಗೆ ಹೈಕೋರ್ಟ್ ‌ನಕಾರ| ಮಾ.27ರಿಂದ ನಡೆಯಲಿದೆ ಎಕ್ಸಾಂ; ಹೀಗಿದೆ ವೇಳಾಪಟ್ಟಿ Read More »

ಇಂದು(ಮಾ. 25) ರಾಜ್ಯಕ್ಕೆ ಪ್ರಧಾನಿ ಮೋದಿ ಭೇಟಿ| ದಾವಣಗೆರೆಯಲ್ಲಿ ವಿಜಯ ಸಂಕಲ್ಪ ಮಹಾಸಂಗಮ

ಸಮಗ್ರ ನ್ಯೂಸ್: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ 4 ಕಡೆಯಿಂದ ಹಮ್ಮಿಕೊಂಡಿದ್ದ ವಿಜಯ ಸಂಕಲ್ಪ ಯಾತ್ರೆಯ ಸಮಾರೋಪ ಸಮಾರಂಭ ನಾಳೆ ದಾವಣಗೆರೆಯಲ್ಲಿ ನಡೆಯಲಿದೆ. ಮಾರ್ಚ್ 25ರಂದು ದಾವಣಗೆರೆಯಲ್ಲಿ ಬಿಜೆಪಿ ಮಹಾಸಂಗಮ ಸಮಾವೇಶ ಹಮ್ಮಿಕೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ. ಸುಮಾರು 10 ಲಕ್ಷ ಮಂದಿ ಮಹಾಸಂಗಮ ಸಮಾವೇಶದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಮಿಷನ್ 150 ಗುರಿಯೊಂದಿಗೆ ಮಾರ್ಚ್ 1 ರಂದು ಮಲೆ ಮಹಾದೇಶ್ವರ ಬೆಟ್ಟ, ಮಾರ್ಚ್ 2ರಂದು ನಂದಗಡ, ಮಾರ್ಚ್ 3ರಂದು ಬಸವಕಲ್ಯಾಣ ಮತ್ತು ಅವತಿದೇವನಹಳ್ಳಿಯಿಂದ

ಇಂದು(ಮಾ. 25) ರಾಜ್ಯಕ್ಕೆ ಪ್ರಧಾನಿ ಮೋದಿ ಭೇಟಿ| ದಾವಣಗೆರೆಯಲ್ಲಿ ವಿಜಯ ಸಂಕಲ್ಪ ಮಹಾಸಂಗಮ Read More »

ಎಸ್ಸಿ ಸಮುದಾಯಕ್ಕೆ ಒಳ ಮೀಸಲಾತಿ ಪ್ರಕಟ| ಮುಸ್ಲಿಂ ಸಮುದಾಯದ 2ಬಿ ಮೀಸಲಾತಿ ರದ್ದುಗೊಳಿಸಿದ ರಾಜ್ಯ ಸರ್ಕಾರ

ಸಮಗ್ರ ನ್ಯೂಸ್: ವಿಧಾನಸಭೆ ಚುನಾವಣೆಗೂ ಮುನ್ನ ರಾಜ್ಯ ಬಿಜೆಪಿ ಸರ್ಕಾರ ಎಸ್ಸಿ ಸಮುದಾಯಕ್ಕೆ ಶುಕ್ರವಾರ ಭರ್ಜರಿ ಗಿಫ್ಟ್ ನೀಡಿದ್ದು, ಅವಕಾಶ ವಂಚಿತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯಗಳಿಗೆ ಒಳ ಮೀಸಲಾತಿ ಪ್ರಕಟಿಸಿದೆ. ವಿಧಾನಸೌಧದಲ್ಲಿ ನಡೆದ ಮಹತ್ವದ ಸಚಿವ ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಎಸ್ಸಿ ಸಮುದಾಯಕ್ಕೆ ಒಳ ಮೀಸಲಾತಿ ನೀಡಲು ಸಂಪುಟ ನಿರ್ಧಾರ ಕೈಗೊಂಡಿದೆ. ಎಸ್ಸಿ ಮೀಸಲಾತಿಯನ್ನು ನಾಲ್ಕು ಗುಂಪುಗಳಾಗಿ ವರ್ಗೀಕರಿಸಿ ಜನಸಂಖ್ಯೆಗೆ ಅನುಗುಣವಾಗಿ ನೀಡಲಾಗಿದೆ

ಎಸ್ಸಿ ಸಮುದಾಯಕ್ಕೆ ಒಳ ಮೀಸಲಾತಿ ಪ್ರಕಟ| ಮುಸ್ಲಿಂ ಸಮುದಾಯದ 2ಬಿ ಮೀಸಲಾತಿ ರದ್ದುಗೊಳಿಸಿದ ರಾಜ್ಯ ಸರ್ಕಾರ Read More »

ಸಂಸದ ಸ್ಥಾನದಿಂದ ರಾಹುಲ್ ಗಾಂಧಿ ಅನರ್ಹ| ಲೋಕಸಭೆ ಕಾರ್ಯದರ್ಶಿಯಿಂದ ಆದೇಶ

ಸಮಗ್ರ ನ್ಯೂಸ್: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ಕೇರಳದ ವಯನಾಡ್‌ ಸಂಸದ ಸ್ಥಾನದಿಂದ ಅನರ್ಹ ಮಾಡಲಾಗಿದೆ. ಮಾನನಷ್ಟ ಪ್ರಕರಣ ಸಂಬಂಧ ಸೂರತ್‌ ಕೋರ್ಟ್‌ 2 ವರ್ಷ ಜೈಲು ಶಿಕ್ಷೆ ವಿಧಿಸಿದ ಬೆನ್ನಲ್ಲೇ ಲೋಕಸಭೆ ಸಚಿವಾಲಯದ ಕಾರ್ಯದರ್ಶಿ ರಾಹುಲ್‌ ಗಾಂಧಿ ಅವರನ್ನು ಅನರ್ಹಗೊಳಿಸಿ ಆದೇಶ ಹೊರಡಿಸಿದ್ದಾರೆ. 2019ರ ಲೋಕಸಭಾ ಚುನಾವಣೆಯ ವೇಳೆ ನರೇಂದ್ರ ಮೋದಿಯವರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿಗೆ ಸೂರತ್ ಕೋರ್ಟ್ ಗುರುವಾರ ಬೆಳಗ್ಗೆ 2 ವರ್ಷ ಜೈಲು ಶಿಕ್ಷೆ

ಸಂಸದ ಸ್ಥಾನದಿಂದ ರಾಹುಲ್ ಗಾಂಧಿ ಅನರ್ಹ| ಲೋಕಸಭೆ ಕಾರ್ಯದರ್ಶಿಯಿಂದ ಆದೇಶ Read More »

ಬೆಂಗಳೂರು ಈಗ ಪಿಂಕ್ ಸಿಟಿ| ಉದ್ಯಾನನಗರಿ‌ ತುಂಬೆಲ್ಲಾ ಗುಲಾಬಿ ರಂಗು

ಸಮಗ್ರ ನ್ಯೂಸ್: ಉದ್ಯಾನ ನಗರಿ ಗಾರ್ಡನ್‌ ಸಿಟಿ ಸಿಲಿಕಾನ್ ಸಿಟಿ, ಐಟಿ ಬಿಟಿ ಹಬ್‌, ಬೆಂದಕಾಳೂರು ಮುಂತಾದ ಹಲವು ಹೆಸರು ಹಾಗೂ ಹಿರಿಮೆಯಿಂದ ಗುರುತಿಸಿಕೊಂಡಿರುವ ನಮ್ಮ ರಾಜ್ಯದ ರಾಜಧಾನಿ ಬೆಂಗಳೂರು ವಸಂತಕಾಲದಲ್ಲಿ ಆಕಾಶದಿಂದ ನೋಡುವಾಗ ಹೇಗೆ ಕಾಣಿಸುತ್ತೆ ಎಂಬ ಕುತೂಹಲ ಎಲ್ಲರಿಗೂ ಇದೆ. ಇದಕ್ಕೆ ಉತ್ತರವಾಗಿ ಡ್ರೋನ್‌ ಮೂಲಕ ಸೆರೆ ಹಿಡಿದ ವಿಡಿಯೋವೊಂದು ವೈರಲ್ ಆಗಿದೆ. ಬೆಂಗಳೂರಿನ ಸೌಂದರ್ಯಕ್ಕೆ ಕಳಶವಿಟ್ಟಂತಿದ್ದು, ನೋಡಲು ಎರಡು ಕಣ್ಣು ಸಾಲದೆಂಬಂತಿದೆ ಈ ಮನಮೋಹಕ ದೃಶ್ಯಾವಳಿ. ವಸಂತಕಾಲದಲ್ಲಿ ಅರಳಿ ನಿಂತ ಹೂಗಳು ನಗರದ

ಬೆಂಗಳೂರು ಈಗ ಪಿಂಕ್ ಸಿಟಿ| ಉದ್ಯಾನನಗರಿ‌ ತುಂಬೆಲ್ಲಾ ಗುಲಾಬಿ ರಂಗು Read More »

ವಿರಾಜಪೇಟೆ: ಉಂಗುರ ನುಂಗಿದ 8 ತಿಂಗಳ ಮಗು ಉಸಿರುಗಟ್ಟಿ ಸಾವು

ಸಮಗ್ರ ನ್ಯೂಸ್: ಮನೆಯಲ್ಲಿ ಆಟವಾಡುತ್ತಿದ್ದಾಗ 8 ತಿಂಗಳ ಮಗುವೊಂದು ಉಂಗುರ ನುಂಗಿ ಮೃತಪಟ್ಟ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನಲ್ಲಿ ನಡೆದಿದೆ. ತಾಲೂಕಿನ ಕರಡಿಗೋಡು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮುನೀರ್ ಎನ್ನುವವರ ಮಗು ಮೃತಪಟ್ಟಿದೆ. ಮಗು ಬುಧವಾರ ರಾತ್ರಿ ಮನೆಯಲ್ಲಿ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಉಂಗುರ ನುಂಗಿತ್ತು. ತಕ್ಷಣ ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಮಗುವನ್ನು ದಾಖಲಿಸಿದರೂ ಉಸಿರಾಟದ ಸಮಸ್ಯೆಯಿಂದಾಗಿ ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಜಿಲ್ಲಾ ಆಸ್ಪತ್ರೆಯ ವೈದ್ಯರ ತಂಡ ರಾತ್ರಿ 9 ಗಂಟೆಯಿಂದ ಸುಮಾರು 12

ವಿರಾಜಪೇಟೆ: ಉಂಗುರ ನುಂಗಿದ 8 ತಿಂಗಳ ಮಗು ಉಸಿರುಗಟ್ಟಿ ಸಾವು Read More »

Accenture given gate pass to employees| ಐಟಿ‌ ದಿಗ್ಗಜ ಅಕ್ಸೆಂಚರ್ ನಿಂದ 19 ಸಾವಿರ ಉದ್ಯೋಗಿಗಳಿಗೆ ಗೇಟ್ ಪಾಸ್

ಸಮಗ್ರ ನ್ಯೂಸ್: ಐಟಿ ದೈತ್ಯ ಅಕ್ಸೆಂಚರ್ ಗುರುವಾರ ಸುಮಾರು 19,000 ಉದ್ಯೋಗಗಳನ್ನು ಕಡಿತಗೊಳಿಸುವುದಾಗಿ ಘೋಷಿಸಿದೆ. ಇದು ತನ್ನ ಉದ್ಯೋಗಿಗಳ ಶೇಕಡಾ 2.5ರಷ್ಟನ್ನು ಪ್ರತಿನಿಧಿಸುತ್ತದೆ. ಅರ್ಧಕ್ಕಿಂತ ಹೆಚ್ಚು ವಜಾಗಳು ತನ್ನ ಬಿಲ್ ಮಾಡಲಾಗದ ಕಾರ್ಪೊರೇಟ್ ಕಾರ್ಯಗಳಲ್ಲಿನ ಉದ್ಯೋಗಿಗಳ ಮೇಲೆ ಪರಿಣಾಮ ಬೀರುತ್ತವೆ ಎಂದು ಕಂಪನಿ ಘೋಷಿಸಿದೆ. ಅಕ್ಸೆಂಚರ್ ತನ್ನ ವಾರ್ಷಿಕ ಆದಾಯ ಮತ್ತು ಲಾಭದ ಅಂದಾಜುಗಳನ್ನ ಸಹ ಕಡಿಮೆ ಮಾಡಿದೆ. ಐಟಿ ಕಂಪನಿಯು ಈಗ ತನ್ನ ವಾರ್ಷಿಕ ಆದಾಯದ ಬೆಳವಣಿಗೆಯನ್ನ ಸ್ಥಳೀಯ ಕರೆನ್ಸಿಯಲ್ಲಿ ಶೇಕಡಾ 8ರಿಂದ 10ರ ವ್ಯಾಪ್ತಿಯಲ್ಲಿ

Accenture given gate pass to employees| ಐಟಿ‌ ದಿಗ್ಗಜ ಅಕ್ಸೆಂಚರ್ ನಿಂದ 19 ಸಾವಿರ ಉದ್ಯೋಗಿಗಳಿಗೆ ಗೇಟ್ ಪಾಸ್ Read More »

ಶ್ರವಣಬೆಳಗೊಳ ಜೈನಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಜಿನೈಕ್ಯ

ಸಮಗ್ರ ನ್ಯೂಸ್: ಅನಾರೋಗ್ಯದಿಂದ ಬಳಲುತ್ತಿದ್ದ ಶ್ರವಣಬೆಳಗೊಳದ ಜೈನಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ (73) ಅವರು ಇಂದು ಬೆಳಗ್ಗೆ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯನ್ನು ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಮುಂಜಾನೆ ನಿಧನರಾಗಿದ್ದಾರೆ. ಅನಾರೋಗ್ಯದ ಹಿನ್ನೆಲೆ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರನ್ನು ಅಂಬ್ಯುಲೆನ್ಸ್ ಮೂಲಕ ಬೆಳ್ಳೂರಿನ ಆದಿಚುಂಚನಗಿರಿ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಮುಂಜಾನೆ ನಿಧನರಾಗಿದ್ದಾರೆ. ಸ್ವಸ್ಥಿ ಶ್ರಿ ಚಾರುಕೀರ್ತಿ ಅನ್ನುವ ಬಿರುದಾಂಕಿತ ಜೈನಭಟ್ಟಾರಕ

ಶ್ರವಣಬೆಳಗೊಳ ಜೈನಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಜಿನೈಕ್ಯ Read More »

ಉರಿಗೌಡ – ನಂಜೇಗೌಡ ವಿವಾದ| ಕೆಲಸ ಮಾಡಿ ಓಟು ಕೇಳಲು ಯೋಗ್ಯತೆ ಇಲ್ಲದವರು ಜನಾಂಗವನ್ನು ಎತ್ತಿಕಟ್ಟುತ್ತಿದ್ದಾರೆ| ನಟ ಕಿಶೋರ್ ಎಚ್ಚರಿಕೆ ಸಂದೇಶ

ಸಮಗ್ರ ನ್ಯೂಸ್: ಭಾರೀ ವಿವಾದಕ್ಕೆ ಕಾರಣವಾಗಿರುವ ಟಿಪ್ಪು ಸುಲ್ತಾನರನ್ನು ಕೊಂದರು ಎಂದು ಬಿಜೆಪಿ ಹಾಗೂ ಸಂಘಪರಿವಾರ ಬಿಂಬಿಸುತ್ತಿರುವ ಉರಿಗೌಡ ಹಾಗೂ ನಂಜೇಗೌಡರ ಬಗ್ಗೆ ಕನ್ನಡದ ಹೆಸರಾಂತ ನಟ ಕಿಶೋರ್ ಎಚ್ಚರಿಕೆಯ ಸಂದೇಶ ನೀಡಿದ್ದಾರೆ. ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿರುವ ಕಿಶೋರ್, ‘ಮಾಡಿದ ಕೆಲಸದ ಮೇಲೆ ಮತ ಯಾಚಿಸಲು ಯೋಗ್ಯತೆಯಿಲ್ಲದ ಧರ್ಮಾಂಧ ಮನೆಹಾಳರು ಉರಿಗೌಡ, ನಂಜೇಗೌಡ ಹೆಸರಿನಲ್ಲಿ ಮುಸ್ಲಿಮರು, ಒಕ್ಕಲಿಗರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ”ನಂಜೇಗೌಡ ಉರಿಗೌಡರ ಸೃಷ್ಟಿ ಒಂದು

ಉರಿಗೌಡ – ನಂಜೇಗೌಡ ವಿವಾದ| ಕೆಲಸ ಮಾಡಿ ಓಟು ಕೇಳಲು ಯೋಗ್ಯತೆ ಇಲ್ಲದವರು ಜನಾಂಗವನ್ನು ಎತ್ತಿಕಟ್ಟುತ್ತಿದ್ದಾರೆ| ನಟ ಕಿಶೋರ್ ಎಚ್ಚರಿಕೆ ಸಂದೇಶ Read More »

ಯುಗಾದಿ ವರ್ಷ ಭವಿಷ್ಯ| ನೂತನ ಸಂವತ್ಸರದಲ್ಲಿ ದ್ವಾದಶ ರಾಶಿಗಳ ಗೋಚಾರಫಲ

ಸಮಗ್ರ ನ್ಯೂಸ್: ಈ ನವ ಸಂವತ್ಸರದಲ್ಲಿ ಶನಿ ಗ್ರಹವು ಯುಗಾದಿ ಆರಂಭದಿಂದ ಸಂವತ್ಸರದ ಅಂತ್ಯದ ತನಕ ಈಗಿರುವ ಕುಂಭ ರಾಶಿಯಲ್ಲಿಯೇ ಸಂಚಾರ ಮುಂದುವರಿಸಲಿದೆ. ಇನ್ನು ಗುರು ಗ್ರಹವು ಇದೇ ಏಪ್ರಿಲ್ 22 ತನಕ ಮೀನ ರಾಶಿಯಲ್ಲಿದ್ದು, ಏಪ್ರಿಲ್ 22 ನಂತರ ಈ ಸಂವತ್ಸರದ ಅಂತ್ಯದ ತನಕ ಮೇಷ ರಾಶಿಯಲ್ಲಿ ಸಂಚಾರ ನಡೆಸಲಿದೆ. ಯುಗಾದಿ ಆರಂಭದಿಂದ ಅಕ್ಟೋಬರ್ 30ರವರೆಗೆ ರಾಹು ಮೇಷದಲ್ಲಿ, ತುಲಾದಲ್ಲಿ ಕೇತು ಇದ್ದು, ಅಕ್ಟೋಬರ್ 30 ರಿಂದ ಸಂವತ್ಸರದ ಕೊನೆ ತನಕ ಮೀನದಲ್ಲಿ ರಾಹು, ಕನ್ಯಾದಲ್ಲಿ

ಯುಗಾದಿ ವರ್ಷ ಭವಿಷ್ಯ| ನೂತನ ಸಂವತ್ಸರದಲ್ಲಿ ದ್ವಾದಶ ರಾಶಿಗಳ ಗೋಚಾರಫಲ Read More »