ರಾಜ್ಯ

ವಿವಿಧ ಹುದ್ದೆಗಳಿಗೆ ಅಧಿಸೂಚನೆ ಪ್ರಕಟಿಸಿದ ಕೆಇಎ| 757 ಹುದ್ದೆಗಳಿಗೆ ಅರ್ಜಿ ಆಹ್ವಾನ

ಸಮಗ್ರ ನ್ಯೂಸ್: ಕರ್ನಾಟಕ ರಾಜ್ಯದ ಸರ್ಕಾರಿ ಸಂಸ್ಥೆಗಳ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹಲವು ಸ್ತರದ ಹುದ್ದೆಗಳ ಭರ್ತಿಗೆ ಪ್ರಾಧಿಕಾರ ಅಧಿಸೂಚನೆ ಹೊರಡಿಸಿದೆ. ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಯಮ ನಿಯಮಿತ, ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ ಮತ್ತು ರಾಜೀವ್​ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವಾಲಯ ಹಾಗೂ ಮೈಸೂರು ಸೇಲ್ಸ್​ ಇಂಟರ್​ ನ್ಯಾಷನಲ್​ ಲಿಮಿಟೆಡ್​​ನಲ್ಲಿ ಖಾಲಿ ಇರುವ ಒಟ್ಟು 757 ಹುದ್ದೆಗಳ

ವಿವಿಧ ಹುದ್ದೆಗಳಿಗೆ ಅಧಿಸೂಚನೆ ಪ್ರಕಟಿಸಿದ ಕೆಇಎ| 757 ಹುದ್ದೆಗಳಿಗೆ ಅರ್ಜಿ ಆಹ್ವಾನ Read More »

ರಾಜ್ಯಕ್ಕೆ ಉಷ್ಣ ಮಾರುತ ಆತಂಕ| ಹೆಚ್ಚಾಗ್ತಿದೆ ಸುಡುಬಿಸಿಲು; ಜನತೆ ತತ್ತರ

ಸಮಗ್ರ ನ್ಯೂಸ್: ಕರ್ನಾಟಕದಲ್ಲಿ ಈ ಬಾರಿ ದಿನದಿಂದ ದಿನಕ್ಕೆ ಸುಡುಬಿಸಿಲು ಹೆಚ್ಚುತ್ತಿದ್ದು, ಉಷ್ಣ ಮಾರುತ ಆತಂಕ ಶುರುವಾಗಿದೆ. ಈ ಬಾರಿ ವಾಡಿಕೆಗಿಂತ ಹೆಚ್ಚು ಬಿಸಿಲು ಇದ್ದು, ಮುಂದಿನ ದಿನಗಳಲ್ಲಿ ಇದು ಇನ್ನೂ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಶನಿವಾರ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನದಲ್ಲಿ 38-39 ಆಸುಪಾಸಿನಲ್ಲಿ ಉಷ್ಣಾಂಶ ದಾಖಲಾದರೆ, ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿ 34-36 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ 35 ಡಿಗ್ರಿ ಸೆಲ್ಸಿಯಸ್ ಗೆ ಏರಿಕೆಯಾಗಿದೆ. ಏಪ್ರಿಲ್

ರಾಜ್ಯಕ್ಕೆ ಉಷ್ಣ ಮಾರುತ ಆತಂಕ| ಹೆಚ್ಚಾಗ್ತಿದೆ ಸುಡುಬಿಸಿಲು; ಜನತೆ ತತ್ತರ Read More »

ಮಹಾವೀರ ಜಯಂತಿ ರಜೆ ದಿನಾಂಕ ಬದಲಾಯಿಸಿ ರಾಜ್ಯ ಸರ್ಕಾರ ಆದೇಶ

ಸಮಗ್ರ ನ್ಯೂಸ್: ರಾಜ್ಯ ಸರ್ಕಾರದಿಂದ ಈಗಾಗಲೇ 2023ರ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯನ್ನು ಪ್ರಕಟಿಸಲಾಗಿತ್ತು. ಈ ವೇಳೆಯಲ್ಲಿ ಏ.3ರಂದು ಮಹಾವೀರ ಜಯಂತಿ ಪ್ರಯುಕ್ತ ರಜೆಯನ್ನು ಘೋಷಿಸಿತ್ತು. ಈ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ತಿದ್ದುಪಡಿ ಆದೇಶ ಹೊರಡಿಸಿದ್ದು, 2023ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯನ್ನು ದಿನಾಂಕ 21-11-2022ರ ಅಧಿಸೂಚನೆಯಲ್ಲಿ ಪ್ರಕಟಿಸಲಾಗಿತ್ತು ಎಂದಿದ್ದಾರೆ. ರಾಜ್ಯ ಸರ್ಕಾರದಿಂದ ಪ್ರಕಟಿಸಿದ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯ ಕ್ರಮ ಸಂಖ್ಯೆ 4ರಲ್ಲಿ ಮಹಾವೀರ ಜಯಂತಿ

ಮಹಾವೀರ ಜಯಂತಿ ರಜೆ ದಿನಾಂಕ ಬದಲಾಯಿಸಿ ರಾಜ್ಯ ಸರ್ಕಾರ ಆದೇಶ Read More »

ಮಂಡ್ಯ: ಪರೀಕ್ಷಾ ಕರ್ತವ್ಯನಿರತ ಶಿಕ್ಷಕರ ಎಲೆಕ್ಟ್ರಿಕ್ ಬೈಕ್ ಸ್ಪೋಟ| ಹತ್ತಿರ ನಿಲ್ಲಿಸಿದ್ದ ವಾಹನಗಳಿಗೂ ಬೆಂಕಿ

ಸಮಗ್ರ ನ್ಯೂಸ್: ಹಿಂದೆ ಎಲೆಕ್ಟ್ರಿಕ್ ವಾಹನಗಳು ಸ್ಪೋಟಗೊಂಡ ಬಹಳಷ್ಟು ಪ್ರಕರಣಗಳು ವರದಿಯಾಗಿದ್ದು, ಇತ್ತೀಚಿನ ದಿನಗಳಲ್ಲಿ ಇದು ಕಡಿಮೆಯಾಗಿತ್ತು. ಇದೀಗ ಬೇಸಿಗೆ ಸಂದರ್ಭದಲ್ಲಿ ಮತ್ತೊಂದು ಬೈಕ್ ಸ್ಪೋಟಗೊಂಡಿರುವ ಘಟನೆ ನಡೆದಿದೆ. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಹಿಟ್ಟನಹಳ್ಳಿ ಕೊಪ್ಪಲು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಹತ್ತನೇ ತರಗತಿ ಪರೀಕ್ಷಾ ಕಾರ್ಯದಲ್ಲಿ ನಿಯೋಜನೆಗೊಂಡಿದ್ದ ಶಿಕ್ಷಕ ಪ್ರಕಾಶ್ ಎಂಬವರ ಬೈಕ್ ಸ್ಫೋಟಗೊಂಡಿದೆ. ಪ್ರಕಾಶ್ ಕಿರುಗಾವಲು ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆಯುತ್ತಿದ್ದ ಹತ್ತನೇ ತರಗತಿ ಪರೀಕ್ಷೆಗೆ ಕರ್ತವ್ಯದಲ್ಲಿದ್ದು, ಆವರಣದಲ್ಲಿದ್ದ ಮರದಡಿ ಬೈಕ್ ನಿಲ್ಲಿಸಿದ್ದರು. ಈ

ಮಂಡ್ಯ: ಪರೀಕ್ಷಾ ಕರ್ತವ್ಯನಿರತ ಶಿಕ್ಷಕರ ಎಲೆಕ್ಟ್ರಿಕ್ ಬೈಕ್ ಸ್ಪೋಟ| ಹತ್ತಿರ ನಿಲ್ಲಿಸಿದ್ದ ವಾಹನಗಳಿಗೂ ಬೆಂಕಿ Read More »

2023 IPL ಉದ್ಘಾಟನಾ ಕಾರ್ಯಕ್ರಮದಲ್ಲಿ ಸೊಂಟ ಬಳುಕಿಸಿದ ರಶ್ಮಿಕಾ ಮಂದಣ್ಣ

ಸಮಗ್ರ ನ್ಯೂಸ್: ಮಾ.31ರಿಂದ ಪ್ರತಿಷ್ಠಿತ 16ನೇ ಐಪಿಎಲ್ ಉದ್ಘಾಟನಾ ಸಮಾರಂಭದಲ್ಲಿ ಖ್ಯಾತ ನಟಿಯರಾದ ರಶ್ಮಿಕಾ ಮಂದಣ್ಣ (Rashmika Mandanna), ತಮನ್ನಾ ಭಾಟಿಯಾ (Tamanna Bhatia) ಸೊಂಟ ಬಳುಕಿಸಿದ್ದಾರೆ. ಅಭಿಮಾನಿಗಳನ್ನ ರಂಜಿಸಿದ್ದಾರೆ. ಗುಜರಾತ್ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಹಾಲಿ ಚಾಂಪಿಯನ್ಸ್ ಗುಜರಾತ್ ಟೈಟಾನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವೆ ಸಂಜೆ 7.30ಕ್ಕೆ ಮೊದಲ ಪಂದ್ಯ ಆರಂಭವಾಗಿದೆ. ಇದಕ್ಕೂ ಮುನ್ನ ಸಂಜೆ 6 ಗಂಟೆಗೆ ನಡೆಯುವ ವೇದಿಕೆ ಕಾರ್ಯಕ್ರಮದಲ್ಲಿ ಖ್ಯಾತ ನಟಿಯರಾದ ಮಿಲ್ಕಿ ಬ್ಯೂಟಿ ತಮನ್ನಾ-

2023 IPL ಉದ್ಘಾಟನಾ ಕಾರ್ಯಕ್ರಮದಲ್ಲಿ ಸೊಂಟ ಬಳುಕಿಸಿದ ರಶ್ಮಿಕಾ ಮಂದಣ್ಣ Read More »

ಇಂದಿನಿಂದ ಹೊಸ ಆರ್ಥಿಕ ವರ್ಷಾರಂಭ| ದೇಶದ ನಾಗರಿಕರು ತಿಳಿದುಕೊಳ್ಳಬೇಕಾದ ಪ್ರಮುಖ ಅಂಶಗಳೇನು ಗೊತ್ತಾ?

ಸಮಗ್ರ ನ್ಯೂಸ್: ಏಪ್ರಿಲ್ 1 ರ ಇಂದಿನಿಂದ ಹೊಸ ಆರ್ಥಿಕ ವರ್ಷ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ನಿಮ್ಮ ದೈನಂದಿನ ಜೀವನದಲ್ಲಿ ಬದಲಾವಣೆ ತರಲಿರುವ ಕೆಲವು ನಿಯಮಗಳ ಬಗ್ಗೆ ಮುಖ್ಯವಾದ ಮಾಹಿತಿಗಳನ್ನು ತಿಳಿದುಕೊಳ್ಳಬೇಕಿದೆ. ದೇಶದಲ್ಲಿ ನೂತನ ತೆರಿಗೆ ಪದ್ದತಿ ಇಂದಿನಿಂದ ಜಾರಿಗೆ ಬರಲಿದೆ. ಉಳಿತಾಯಕ್ಕಾಗಿ ಹೂಡಲಾದ ಠೇವಣಿ ಮೊತ್ತ ಹೆಚ್ಚಿಸಲಾಗಿದೆ. ಅದಾಗ್ಯೂ ಹಲವು ಅಗತ್ಯ ವಸ್ತುಗಳು ದುಬಾರಿಯಾಗಲಿದ್ದು, ಗ್ರಾಹಕರ ಜೇಬಿಗೆ ದೊಡ್ಡ ಕತ್ತರಿ‌ ಬೀಳಲದೆ. ಕಾರ್ ಗಳ ದರ ದುಬಾರಿಯಾಗಲಿದ್ದು, ಔಷಧಗಳ ಬೆಲೆ ಏರಿಕೆ ಆಗಲಿದೆ. ಇಂದಿನಿಂದ ಚಿನ್ನಕ್ಕೆ

ಇಂದಿನಿಂದ ಹೊಸ ಆರ್ಥಿಕ ವರ್ಷಾರಂಭ| ದೇಶದ ನಾಗರಿಕರು ತಿಳಿದುಕೊಳ್ಳಬೇಕಾದ ಪ್ರಮುಖ ಅಂಶಗಳೇನು ಗೊತ್ತಾ? Read More »

Weather report| ಹವಾ ವರ್ತಮಾನ| ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಎರಡು ದಿನ ಮಳೆ ಸಾಧ್ಯತೆ

ಸಮಗ್ರ ನ್ಯೂಸ್: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದು ಮತ್ತು ನಾಳೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಕುರಿತಂತೆ ಹವಾಮಾನ ಇಲಾಖೆಯಿಂದ ಮಾಹಿತಿ ಬಿಡುಗಡೆ ಮಾಡಿದ್ದು, ಏಪ್ರಿಲ್ 1ರಂದು ಗುಡುಗು ಸಹಿತ ಮಳೆಯು ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಮೈಸೂರು, ರಾಮನಗರ, ಕೋಲಾರ ಮತ್ತು ಕೊಡಗು ಜಿಲ್ಲೆಯಲ್ಲಿ ಆಗಲಿದೆ ಎಂದು ತಿಳಿಸಿದೆ. ಏಪ್ರಿಲ್ 2ರಂದು ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ,

Weather report| ಹವಾ ವರ್ತಮಾನ| ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಎರಡು ದಿನ ಮಳೆ ಸಾಧ್ಯತೆ Read More »

ಕೊಟ್ಟಿಗೆಹಾರ: ಒಡೆದ ಕೆಎಂಎಫ್ ಹಾಲು, ಸಾರ್ವಜನಿಕರ ಪರದಾಟ

Samagra news: ತಾಂತ್ರಿಕ ದೋಶದಿಂದ ಕೆಎಂಎಫ್ ನಿಂದ ಮೂಡಿಗೆರೆ ತಾಲೂಕಿನ ವಿವಿಧೆಡೆ ಸರಬರಾಜು ಆಗಿದ್ದ ಸಾವಿರಾರು ಲೀಟರ್ ಹಾಲು ವಾಪಾಸಾಗಿದ್ದು ಸಾರ್ವಜನಿಕರು ಪರದಾಡುವಂತಾಯಿತು. ಶುಕ್ರವಾರ ಬೆಳಿಗ್ಗೆ ಮೂಡಿಗೆರೆ ಪಟ್ಟಣ ಸೇರಿದಂತೆ ತಾಲೂಕಿನ ಕೊಟ್ಟಿಗೆಹಾರ, ಬಣಕಲ್, ಬಾಳೂರು, ಜಾವಳಿ, ಕಳಸ, ಮಾಗುಂಡಿ, ನಿಡುವಾಳೆ ಸೇರಿದಂತೆ ಇನ್ನೀತರ ಕಡೆಗೆ ಶುಕ್ರವಾರ ಸರಬರಾಜು ಆಗಿದ್ದ ನಂದಿನಿ‌ ಹಾಲು ಒಡೆದು ಹೋದ ಪರಿಣಾಮ ಸ್ಥಳೀಯರು ಪರದಾಡುವಂತಾಯಿತು. ಯಂತ್ರದಲ್ಲಿ ಉಷ್ಣಾಂಶ ಹೆಚ್ಚಾದ ಕಾರಣ ಸಮಸ್ಯೆಯಾಗಿದ್ದು, ಸಮಸ್ಯೆ ಬಗೆಹರಿಸಲಾಗಿದೆ ಎಂದು ಕೆಎಂಎಫ್ ಕ್ವಾಲಿಟಿ ಅಧಿಕಾರಿ ನಟರಾಜ್

ಕೊಟ್ಟಿಗೆಹಾರ: ಒಡೆದ ಕೆಎಂಎಫ್ ಹಾಲು, ಸಾರ್ವಜನಿಕರ ಪರದಾಟ Read More »

ಚಿಕ್ಕಮಗಳೂರು : 6. 44 ಕೋಟಿ ಮೌಲ್ಯದ ಚಿನ್ನ ವಶ

ಸಮಗ್ರ ನ್ಯೂಸ್: ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ವೇಳೆ ದಾಖಲೆ ಇಲ್ಲದೆ ಸಾಗಾಟ ಮಾಡುತ್ತಿದ್ದ 6.44 ಕೋಟಿ ಮೌಲ್ಯದ ಚಿನ್ನವನ್ನು ತರೀಕೆರೆ ತಾಲೂಕಿನ ಎಂ.ಸಿ.ಹಳ್ಳಿಯಲ್ಲಿ ಚುನಾವಣೆ ಅಧಿಕಾರಿಗಳು ವಶಕ್ಕೆ ಪಡೆದ್ದಿದ್ದಾರೆ. ಶಿವಮೊಗ್ಗ-ಚಿಕ್ಕಮಗಳೂರು ಗಡಿ‌ ಗ್ರಾಮವಾದ ಎಂ.ಸಿ.ಹಳ್ಳಿ ಚುನಾವಣೆ ಅಧಿಕಾರಿಗಳು ವಾಹನ ತಪಾಸಣೆ ಮಾಡುತ್ತಿದ್ದ ವೇಳೆ ದಾಖಲೆ ಇಲ್ಲದೆ ಟಾಟಾ ಏಸ್ ನಲ್ಲಿ ಸಾಗಿಸುತ್ತಿದ್ದ ಸುಮಾರು 17 ಕೆ.ಜಿ. ಚಿನ್ನ ಹಾಗೂ ಬೆಳ್ಳಿ ಸೀಜ್ ಮಾಡಿದ್ದಾರೆ.

ಚಿಕ್ಕಮಗಳೂರು : 6. 44 ಕೋಟಿ ಮೌಲ್ಯದ ಚಿನ್ನ ವಶ Read More »

ಇಂದು ತ್ರಿವಿಧ ದಾಸೋಹಿ ಲಿಂಗೈಕ್ಯ ಸಿದ್ದಗಂಗಾ ಶ್ರೀಗಳ 116ನೇ ಜಯಂತಿ| ಮಠದಲ್ಲಿ ವಿಶೇಷ ಪೂಜೆ

ಸಮಗ್ರ ನ್ಯೂಸ್: ಇಂದು ತ್ರಿವಿಧ ದಾಸೋಹಿ ಲಿಂಗೈಕ್ಯ ಶಿವಕುಮಾರ ಶ್ರೀಗಳ ಜಯಂತಿ ನಡೆಯಲಿದೆ. ತುಮಕೂರಿನ ಸಿದ್ದಗಂಗಾ ಮಠದಲ್ಲಿ ಶ್ರೀಗಳ ಗದ್ದುಗೆಗೆ ವಿಶೇಷ ಪೂಜೆ ನೆರವೇರಿಸಲಾಗುವುದು. ಇಂದು ರುದ್ರಾಕ್ಷಿ ಮಂಟಪದಲ್ಲಿ ಶ್ರೀಗಳ ಪ್ರತಿಮೆ ಇಟ್ಟು ಮೆರವಣಿಗೆ ನಡೆಸಲಾಗುತ್ತದೆ. ಬೆಳಗ್ಗೆ 11 ಗಂಟೆಗೆ ಶ್ರೀ ಗೋಸಲ ಸಿದ್ದೇಶ್ವರ ವೇದಿಕೆಯಲ್ಲಿ ಕಾರ್ಯಕ್ರಮ ನಡೆಯಲಿದೆ. ಸಿದ್ದಗಂಗಾ ಮಠದ ಸಿದ್ದಲಿಂಗ ಶ್ರೀಗಳು, ಸುತ್ತೂರು ಮಠದ ಶ್ರೀಗಳು ಸಾನಿಧ್ಯ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ರಾಜ್ಯಪಾಲ ತಾವರ್ ಚಂದ್ ಗೆಹ್ಲೊಟ್, ಸಭಾಪತಿ ಬಸವರಾಜ ಹೊರಟ್ಟಿ ಭಾಗವಹಿಸಲಿದ್ದಾರೆ.

ಇಂದು ತ್ರಿವಿಧ ದಾಸೋಹಿ ಲಿಂಗೈಕ್ಯ ಸಿದ್ದಗಂಗಾ ಶ್ರೀಗಳ 116ನೇ ಜಯಂತಿ| ಮಠದಲ್ಲಿ ವಿಶೇಷ ಪೂಜೆ Read More »