ರಾಜ್ಯ

ಅಥಣಿ:ತಾವಂಶಿ ಗ್ರಾಮದಲ್ಲಿ ಆಲಿಕಲ್ಲು ಸಮೇತವಾಗಿ ಅಬ್ಬರಿಸಿದ ಮಳೆರಾಯ.

ಸಮಗ್ರ ನ್ಯೂಸ್:ಅಥಣಿ ತಾಲೂಕಿನ ಪೂರ್ವ ಹಾಗು ಪಶ್ಚಿಮ ಭಾಗದ ಗ್ರಾಮಗಳಲ್ಲಿ ಮಂಗಳವಾರ ಮಧ್ಯಾಹ್ನ ಬಿರುಗಾಳಿಯೊಂದಿಗೆ ಸುರಿದ ಆಲಿಕಲ್ಲು ಮಳೆಗೆ ಅಪಾರ ಪ್ರಮಾಣದ ದ್ರಾಕ್ಷಿ ಬೆಳೆ ಹಾಗೂ ಮನೆಗಳಿಗೆ ಹಾನಿಯಾಗಿದೆ. ಅಥಣಿ ತಾಲೂಕಿನ ತಾವಂಶಿ ಗ್ರಾಮದಲ್ಲಿ ಗುಡುಗು ಗಾಳಿ ಸಮೇತವಾಗಿ ಆಲಿಕಲ್ಲು ಮಳೆಯಾಗಿ ಮ ಅವಾಂತರವನ್ನ ಸೃಷ್ಟಿಮಾಡಿದೆ ,ತಾಂವಶಿ ಗ್ರಾಮದ ಮುರುಗೆಪ್ಪ ಇಮಗೌಡರ್ ಇವರಿಗೆ ಸೇರಿದ್ದ ದನಗಳ ಕೊಠಡಿಯ ಮೇಲ್ಚಾವಣಿ ಹಾರಿ ಹೋಗಿ ಆಹಾರ ಧಾನ್ಯ ಹಾಗೂ ಗೃಹೋಪಯೋಗಿ ಸಲಕರಣೆಗಳು ಸಂಪೂರ್ಣವಾಗಿ ಹಾಳಾಗಿವೆ. ಕೋಹಳ್ಳಿ‌ ಗ್ರಾಮದ ನೀವಾಸಿಗಳಾದ ಗಂಗವ್ವ

ಅಥಣಿ:ತಾವಂಶಿ ಗ್ರಾಮದಲ್ಲಿ ಆಲಿಕಲ್ಲು ಸಮೇತವಾಗಿ ಅಬ್ಬರಿಸಿದ ಮಳೆರಾಯ. Read More »

ರಾಜ್ಯದಲ್ಲಿ ಮಳೆ ಅನಾಹುತಕ್ಕೆ ಎರಡು ಬಲಿ; ಹಲವೆಡೆ ಅವಘಡ| ಇನ್ನೂ ಮೂರು ದಿನ ಮಳೆ ಜೋರು

ಸಮಗ್ರ ನ್ಯೂಸ್: ರಾಜ್ಯದಲ್ಲಿ ಇನ್ನೂ 3 ದಿನ ಮಳೆ ಮುನ್ಸೂಚನೆ ಇದ್ದು, ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ. ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ ಬೆನ್ನಲ್ಲೇ ಜಿಲ್ಲಾಡಳಿತಗಳಿಗೆ ಎಚ್ಚರದಿಂದ ಇರಲು ಸೂಚನೆ ನೀಡಲಾಗಿದೆ. ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಉತ್ತರ ಒಳನಾಡಿನ ಕೆಲವು ಕಡೆ ಅಧಿಕ ಮಳೆಯಾಗಲಿದೆ. ಗಾಳಿಯ ವೇಗವು ಗಂಟೆಗೆ 40 ಕಿ.ಮೀ ರಿಂದ 50 ಕಿ.ಮೀ ಇರುವ ಸಾಧ್ಯತೆ ಇದೆ. ಬೆಂಗಳೂರು ಸೇರಿ ರಾಜ್ಯದ ಏಳು ಜಿಲ್ಲೆಗಳಲ್ಲಿ ಮಂಗಳವಾರವೂ ಕೆಲಕಾಲ

ರಾಜ್ಯದಲ್ಲಿ ಮಳೆ ಅನಾಹುತಕ್ಕೆ ಎರಡು ಬಲಿ; ಹಲವೆಡೆ ಅವಘಡ| ಇನ್ನೂ ಮೂರು ದಿನ ಮಳೆ ಜೋರು Read More »

ಸಚಿವ ಸಂಪುಟ ಸರ್ಕಸ್| ಹೈಕಮಾಂಡ್ ಜೊತೆ ಚರ್ಚೆಗೆ ಸಿಎಂ, ಡಿಸಿಎಂ ಇಂದು ದೆಹಲಿಗೆ

ಸಮಗ್ರ ನ್ಯೂಸ್: ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ 8 ಮಂದಿ ಸಚಿವರು ಪ್ರಮಾಣವಚನ ಸ್ವೀಕರಿಸಿದ್ದು, ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಇಂದು ಹೈಕಮಾಂಡ್ ಜೊತೆ ಚರ್ಚೆ ನಡೆಸಲು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಸಂಜೆ 6:30ಕ್ಕೆ ವಿಶೇಷ ವಿಮಾನದಲ್ಲಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಸಂಪುಟ ವಿಸ್ತರಣೆಯ ಸಂಬಂಧ ಹೈಕಮಾಂಡ್ ನಾಯಕರ ಜೊತೆಗೆ ಚರ್ಚೆ ನಡೆಸಲಿದ್ದಾರೆ. ಸಂಪುಟ ವಿಸ್ತರಣೆ ಕುರಿತಾಗಿ ಒಪ್ಪಿಗೆ ಪಡೆದುಕೊಳ್ಳಲಿದ್ದಾರೆ. ಮಧು ಬಂಗಾರಪ್ಪ, ಬಿ.ಕೆ. ಹರಿಪ್ರಸಾದ್, ಕೃಷ್ಣ ಬೈರೇಗೌಡ,

ಸಚಿವ ಸಂಪುಟ ಸರ್ಕಸ್| ಹೈಕಮಾಂಡ್ ಜೊತೆ ಚರ್ಚೆಗೆ ಸಿಎಂ, ಡಿಸಿಎಂ ಇಂದು ದೆಹಲಿಗೆ Read More »

ಕೃಷಿ ಪಂಪ್ ಸೆಟ್ ಗಳ ಆರ್.ಆರ್ ನಂಬರ್ ಗೆ ರೈತರ ಆಧಾರ್ ಜೋಡಣೆ ಮಾಡಲು ಸರ್ಕಾರಕ್ಕೆ ಕೆಇಆರ್ ಸಿ ಸೂಚನೆ

ಸಮಗ್ರ ನ್ಯೂಸ್: ಕೃಷಿ ಪಂಪ್‌ಸೆಟ್‌ಗಳ ಆರ್‌.ಆರ್‌. ನಂಬರ್‌ ಅನ್ನು ಆಧಾರ್‌ ಸಂಖ್ಯೆಯೊಂದಿಗೆ ಜೋಡಣೆ ಮಾಡುವಂತೆ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ) ಸರ್ಕಾರಕ್ಕೆ ಸೂಚಿಸಿದೆ. ಈ ಸೂಚನೆಯಿಂದ ಮುಂಬರುವ ದಿನಗಳಲ್ಲಿ ಮೀಟರ್‌ ಅಳವಡಿಕೆಯ ಸಾಧ್ಯತೆಯ ಮೊದಲ ಹಂತ ಎಂಬುದು ರೈತರ ಆತಂಕಕ್ಕೆ ಕಾರಣವಾಗಿದೆ ಸದ್ಯಕ್ಕೆ ಯಾವುದೇ ಕೃಷಿ ಪಂಪ್‌ಸೆಟ್‌ಗಳಿಗೆ ಮೀಟರ್‌ ಅಳವಡಿಕೆ ಇಲ್ಲ. ಎಷ್ಟು ಪ್ರಮಾಣದ ವಿದ್ಯುತ್‌ ಪೂರೈಕೆ ಆಗುತ್ತಿದೆ ಎಂಬ ನಿಖರ ಲೆಕ್ಕವೂ ಇಲ್ಲ. ಆದರೆ ದಶಕ ಗಳಿಂದ ಒಟ್ಟಾರೆ ಬಳಕೆಯ ಶೇ.34ರಷ್ಟು ವಿದ್ಯುತ್‌ ಪಂಪ್‌ಸೆಟ್‌ಗಳಿಗೆ ಹೋಗುತ್ತಿದೆ.

ಕೃಷಿ ಪಂಪ್ ಸೆಟ್ ಗಳ ಆರ್.ಆರ್ ನಂಬರ್ ಗೆ ರೈತರ ಆಧಾರ್ ಜೋಡಣೆ ಮಾಡಲು ಸರ್ಕಾರಕ್ಕೆ ಕೆಇಆರ್ ಸಿ ಸೂಚನೆ Read More »

ಸುಳ್ಯ:ಸ್ಕೂಟಿ ಮತ್ತು ಕಾರು ನಡುವೆ ಭೀಕರ ಅಪಘಾತ; ಸವಾರ ಸ್ಥಳದಲ್ಲೇ ಸಾವು

ಸಮಗ್ರ ನ್ಯೂಸ್: ಸ್ಕೂಟಿ‌ ಮತ್ತು ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಸ್ಕೂಟಿ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮಾಣಿ-ಮೈಸೂರು ರಾ.ಹೆದ್ದಾರಿಯ ಅರಂತೋಡು ಮರ್ಕಂಜ ಕ್ರಾಸ್ ಬಳಿ ನಡೆದಿದೆ. ಮೃತಪಟ್ಟ ಸ್ಕೂಟಿ ಸವಾರನನ್ನು ಸುಳ್ಯದ ಕುಕ್ಕುಜಡ್ಕ ಮೂಲದ ನವೀನ್(30) ಎಂದು ಹೇಳಲಾಗಿದೆ. ಕಾರು ಮಂಡ್ಯ ಮೂಲದ್ದಾಗಿದ್ದು ಮಡಿಕೇರಿಯಿಂದ ಮಂಗಳೂರು ಕಡೆಗೆ ಪ್ರಯಾಣಿಸುತ್ತಿತ್ತು.ಈ ವೇಳೆ ಅರಂತೋಡು ಮರ್ಕಂಜ ಕ್ರಾಸ್ ಬಳಿ ಕಲ್ಲುಗುಂಡಿಯಿಂದ ಸುಳ್ಯ ಕಡೆಗೆ ಬರುತ್ತಿದ್ದ ಸ್ಕೂಟಿಗೆ ಡಿಕ್ಕಿ ಹೊಡೆದಿದೆ. ಘಟನೆ ಪರಿಣಾಮ ಸ್ಕೂಟಿ ನಜ್ಜುಗುಜ್ಜಾಗಿದ್ದು ಸವಾರ ಸ್ಥಳದಲ್ಲಿ

ಸುಳ್ಯ:ಸ್ಕೂಟಿ ಮತ್ತು ಕಾರು ನಡುವೆ ಭೀಕರ ಅಪಘಾತ; ಸವಾರ ಸ್ಥಳದಲ್ಲೇ ಸಾವು Read More »

ಐತಿಹಾಸಿಕ ದಾಖಲೆ ನಿರ್ಮಿಸಿದ ಮಹೀಂದ್ರಾ ಥಾರ್ SUV| ಒಂದು ಲಕ್ಷ ವಾಹನ ಮಾರಾಟ ಸಾಧನೆ

ಸಮಗ್ರ ನ್ಯೂಸ್: ಮಹೀಂದ್ರಾ ಥಾರ್ ಎಸ್‍ಯುವಿಯು ಬಹಳ ವರ್ಷಗಳಿಂದ ದೇಶಿಯ ಮಾರುಕಟ್ಟೆಯಲ್ಲಿ ಜನಪ್ರಿಯ ಆಫ್-ರೋಡರ್ ಎಸ್‍ಯುವಿಯಾಗಿದೆ. ಸದ್ಯ ದೇಶಿಯ ಮಾರುಕಟ್ಟೆಯಲ್ಲಿರುವ ಪ್ರಸ್ತುತ ಜನರೇಷನ್ ಮಹೀಂದ್ರಾ ಥಾರ್ ಮಾದರಿಯು ಬಹುಬೇಡಿಯೊಂದಿಗೆ ಭರ್ಜರಿಯಾಗಿ ಮಾರಾಟವಾಗುತ್ತಿದೆ. ಇದರಿಂದ ಬೇಡಿಕೆ ಹೆಚ್ಚಾಗಿರುವುದರಿಂದ ಮಹೀಂದ್ರಾ ಥಾರ್ ಎಸ್‍ಯುವಿಯ ಕಾಯುವ ಅವಧಿಯು ಕೂಡ ಹೆಚ್ಚಾಗುತ್ತಿದೆ. ಇದೀಗ ಮಹೀಂದ್ರಾ ಥಾರ್ ಎಸ್‍ಯುವಿಯು 1 ಲಕ್ಷ ಮಾರಾಟವಾಗಿ ಹೊಸ ಮೈಲಿಗಲ್ಲು ದಾಖಲಿಸಿದೆ. 2020ರ ಆಗಸ್ಟ್ ತಿಂಗಳಿನಲ್ಲಿ ಬಿಡುಗಡೆಯಾದ ಈ ಆಫ್-ರೋಡ್ 1 ಲಕ್ಷ ಉತ್ಪಾದನಾ ಗಡಿಯನ್ನು ದಾಟಿದೆ ಮತ್ತು

ಐತಿಹಾಸಿಕ ದಾಖಲೆ ನಿರ್ಮಿಸಿದ ಮಹೀಂದ್ರಾ ಥಾರ್ SUV| ಒಂದು ಲಕ್ಷ ವಾಹನ ಮಾರಾಟ ಸಾಧನೆ Read More »

ವಿಧಾನಸಭಾ ಸ್ಪೀಕರ್ ಆಗಿ ಯು.ಟಿ ಖಾದರ್ ಆಯ್ಕೆ| ಇಂದು ನಾಮಪತ್ರ ಸಲ್ಲಿಕೆ

ಸಮಗ್ರ ನ್ಯೂಸ್: ವಿಧಾನಸಭೆಯ ನೂತನ ಸ್ಪೀಕರ್ ಹುದ್ದೆಗೆ ಮಾಜಿ ಸಚಿವ ಯು ಟಿ ಖಾದರ್ ಅವರನ್ನು ಕಾಂಗ್ರೆಸ್ ಅಂತಿಮಗೊಳಿಸಿದೆ. ಯು ಟಿ ಖಾದರ್ ಇಂದು ಸ್ಪೀಕರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲಿದ್ದಾರೆ. ಮಂಗಳೂರು ವಿಧಾನಸಭಾ ಕ್ಷೇತ್ರದಿಂದ ಐದನೇ ಬಾರಿಗೆ ಆಯ್ಕೆಯಾಗಿರುವ ಯು ಟಿ ಖಾದರ್ ಎಂಬ ಸೋಲಿಲ್ಲದ ಸರದಾರನಿಗೆ ಈ ಬಾರಿಯ ಕಾಂಗ್ರೆಸ್ ಸರ್ಕಾರದಲ್ಲಿ ಗೃಹ ಅಥವಾ ತತ್ಸಮಾನ ಪ್ರಮುಖ ಖಾತೆ ನೀಡಲಾಗುತ್ತೆ ಎಂದು ಊಹಿಸಲಾಗಿತ್ತು. ಆದರೆ ಸ್ಪೀಕರ್ ಹುದ್ದೆಗೆ ಯು ಟಿ ಖಾದರ್ ಹೆಸರು ಅಚ್ಚರಿಯ ಆಯ್ಕೆ.

ವಿಧಾನಸಭಾ ಸ್ಪೀಕರ್ ಆಗಿ ಯು.ಟಿ ಖಾದರ್ ಆಯ್ಕೆ| ಇಂದು ನಾಮಪತ್ರ ಸಲ್ಲಿಕೆ Read More »

ಇಂದಿನಿಂದ ದೇಶಾದ್ಯಂತ ಬ್ಯಾಂಕ್ ಗಳಲ್ಲಿ ₹. 2000 ನೋಟು ವಿನಿಮಯ ಅವಕಾಶ

ಸಮಗ್ರ ನ್ಯೂಸ್: ಇಂದಿನಿಂದ ದೇಶಾದ್ಯಂತ ಎಲ್ಲಾ ಬ್ಯಾಂಕ್ ಗಳಲ್ಲಿ 2000 ಮುಖಬೆಲೆಯ ನೋಟುಗಳ ವಿನಿಮಯ ಆರಂಭಿಸಲಾಗುತ್ತಿದೆ. ಕೌಂಟರ್ನಲ್ಲಿ 2000 ರೂ.ಗಳ ನೋಟುಗಳನ್ನು ವಿನಿಮಯ ಮಾಡುವ ಸೌಲಭ್ಯವನ್ನು ಸಾರ್ವಜನಿಕರಿಗೆ ಸಾಮಾನ್ಯ ರೀತಿಯಲ್ಲಿ ಒದಗಿಸಲಾಗುವುದು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(RBI) ಹೇಳಿದೆ. ಮೇ.23ರ ಮಂಗಳವಾರದ ಇಂದಿನಿಂದ ಹಿಂಪಡೆಯಲಾದಂತ 2,000 ರೂಪಾಯಿ ಮುಖಬಲೆಯ ನೋಟುಗಳನ್ನು ಯಾವುದೇ ಬ್ಯಾಂಕಿನಲ್ಲಿ ನೀಡಿ, ಇತರೆ ಮುಖ ಬೆಲೆಯ ನೋಟುಗಳನ್ನು ಪಡೆಯಬಹುದು ಎಂಬುದಾಗಿ ತಿಳಿಸಿದೆ. 2000 ಮುಖಬೆಲೆಯ ನೋಟುಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಬಿಡುಗಡೆ ಮಾಡುವುದನ್ನು

ಇಂದಿನಿಂದ ದೇಶಾದ್ಯಂತ ಬ್ಯಾಂಕ್ ಗಳಲ್ಲಿ ₹. 2000 ನೋಟು ವಿನಿಮಯ ಅವಕಾಶ Read More »

ಸಿಡ್ನಿ: ಮೋದಿ ಸಮ್ಮುಖದಲ್ಲಿ ನೃತ್ಯ ಪ್ರದರ್ಶನ ನೀಡಲಿದ್ದಾರೆ ಮಂಗಳೂರಿನ ಅನಿಶಾ

ಸಮಗ್ರ ನ್ಯೂಸ್: ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾ ಪ್ರಧಾನಿ ಅಂಧೋನಿ ಅಲ್ಪನೀಸ್ ಸಮ್ಮುಖದಲ್ಲಿ ನೃತ್ಯ ಪ್ರದರ್ಶನ ನೀಡುವ ಅಪರೂಪದ ಅವಕಾಶ ಮಂಗಳೂರು ಮೂಲದ ಯುವತಿ ಅನಿಶಾ ಪೂಜಾರಿ ಅವರಿಗೆ ಒಲಿದಿದೆ. ಮೋದಿ ಆಸ್ಟ್ರೇಲಿಯ ಭೇಟಿ ಸಂದರ್ಭ ಮೇ 23ರಂದು ಆಸೀಸ್ ಪ್ರಧಾನಿ ಜೊತೆ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ. ನಂತರ ಸಮುದಾಯ ಸ್ವಾಗತ ಸಂದರ್ಭ ಅನಿಶಾ ಅವರು ಇರುವ `ನಾಟ್ಯೋಕ್ತಿ’ ನೃತ್ಯ ತಂಡ ತುಳು ಜಾನಪದ ಮತ್ತು ಕಾಂತಾರ ಚಿತ್ರಗೀತೆಗಳಿಗೆ ನೃತ್ಯ ಪ್ರದರ್ಶನ

ಸಿಡ್ನಿ: ಮೋದಿ ಸಮ್ಮುಖದಲ್ಲಿ ನೃತ್ಯ ಪ್ರದರ್ಶನ ನೀಡಲಿದ್ದಾರೆ ಮಂಗಳೂರಿನ ಅನಿಶಾ Read More »

ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆಯಬ್ಬರ| ಅಪಾರ ಹಾನಿ; 8 ಮಂದಿ ಬಲಿ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆಯಬ್ಬರಕ್ಕೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಪ್ರಮಾಣದ ಬೆಳೆ ನಷ್ಟವಾಗಿದ್ದು, ವರುಣಾರ್ಭಟಕ್ಕೆ 8 ಮಂದಿ ಬಲಿಯಾಗಿದ್ದಾರೆ. ಅಕಾಲಿಕ ಮಳೆಗೆ ರಾಜ್ಯದಲ್ಲೇ ಅತಿಹೆಚ್ಚು ಬೆಳೆ ನಷ್ಟ ಕೋಲಾರದಲ್ಲಿ ಆಗಿದ್ದು, 7,166 ಎಕರೆ ಬೆಳೆಹಾನಿಯಾಗಿದೆ. ಕೊಪ್ಪಳದಲ್ಲಿ 618 ಕ್ಕೂ ಹೆಚ್ಚು ಎಕರೆ, ದಾವಣಗೆರೆಯಲ್ಲಿ 153 ಎಕರೆ, ಚಿಕ್ಕಬಳ್ಳಾಪುರದಲ್ಲಿ 100 ಎಕರೆ, ಹಾವೇರಿಯಲ್ಲಿ 16 ಎಕರೆ, ಚಿತ್ರದುರ್ಗ 39 ಎಕರೆ, ಹಾವೇರಿಯಲ್ಲಿ 16 ಎಕರೆ ಬೆಳೆ ನಷ್ಟವಾಗಿದೆ. ಮುಂಗಾರು ಪೂರ್ವ ಮಳೆಗೆ ರಾಜ್ಯದಲ್ಲಿ ಮತ್ತೆ

ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆಯಬ್ಬರ| ಅಪಾರ ಹಾನಿ; 8 ಮಂದಿ ಬಲಿ Read More »