ಬಸ್ ನಿಲ್ಲಿಸಿಲ್ಲವೆಂದು ಕಲ್ಲೆಸೆದು ‘ಶಕ್ತಿ’ ಪ್ರದರ್ಶಿಸಿದ ಮಹಿಳೆ| ಐದು ಸಾವಿರ ದಂಡಕಟ್ಟಿ ಅದೇ ಬಸ್ ನಲ್ಲಿ ಪ್ರಯಾಣ!!
ಸಮಗ್ರ ನ್ಯೂಸ್: ಬಸ್ ನಿಲ್ಲಿಸಿಲ್ಲವೆಂದು ರೊಚ್ಚಿಗೆದ್ದ ಮಹಿಳೆಯೊಬ್ಬರು ಬಸ್ ಗೆ ಕಲ್ಲು ತೂರಿದ ಘಟನೆ ಕೊಪ್ಪಳ ತಾಲೂಕಿನ ಹೊಸಲಿಂಗಾಪುರ ಬಳಿ ನಡೆದಿದೆ. ಕಲ್ಯಾಣ ಕರ್ನಾಟಕ ಸಾರಿಗೆ ವಿಭಾಗದ ಎಕ್ಸ್ ಪ್ರೆಸ್ ಬಸ್ ಕೊಪ್ಪಳದಿಂದ-ಹೊಸಪೇಟೆಗೆ ಹೊರಟಿತ್ತು. ಇಲಕಲ್ಲ ಬಳಿಯ ಪಾಪನಳ್ಳಿ ನಿವಾಸಿ ಲಕ್ಷ್ಮಿ ಎಂಬುವರು ಬಸ್ ನಿಲ್ಲಿಸಿಲ್ಲವೆಂದು ಬಸ್ ಗೆ ಕಲ್ಲು ಎಸೆದಿದ್ದಾರೆ. ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣ ನೀಡಲಾಗುತ್ತಿದ್ದು, ಸಾರಿಗೆ ಬಸ್ ಗಳು ಮಹಿಳಾ ಪ್ರಯಾಣಿಕರಿಂದ ತುಂಬಿ ತುಳುಕುತ್ತಿದೆ. ಆದರೆ ಬಸ್ ನಿಲ್ಲಿಸಿಲ್ಲ ಎಂದು ಬಸ್










