ರಾಜ್ಯ

ಭಾರೀ ವರ್ಷಧಾರೆ ಹಿನ್ನೆಲೆ| ಚಿಕ್ಕಮಗಳೂರು ಜಿಲ್ಲೆಗೆ ಹೈ ಅಲರ್ಟ್ ಘೋಷಣೆ

ಸಮಗ್ರ ನ್ಯೂಸ್: ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಭಾರೀ ಮಳೆ ಸುರಿಯುತ್ತಿದ್ದು, ಜಿಲ್ಲಾಡಳಿತ ಮುಂದಿನ 3 ದಿನ ಭಾರೀ ಮಳೆ ಸುರಿಯುವ ಎಚ್ಚರಿಕೆ ನೀಡಿದೆ. ಜು. 5, 6 ಹಾಗೂ 7 ರಂದು ಜಿಲ್ಲೆಯಾದ್ಯಂತ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಮುಂದಿನ 3 ದಿನ 115 ರಿಂದ 204 ಮಿ.ಮೀ. ಮಳೆ ಸಾಧ್ಯತೆಯಿದ್ದು ಹವಾಮಾನ ಇಲಾಖೆಯ ಮುನ್ಸೂಚನೆ ಹಿನ್ನಲೆಯಲ್ಲಿ ಜಿಲ್ಲಾಡಳಿತ ಹೈ ಅಲರ್ಟ್ ಘೋಷಿಸಿದೆ. ಸಾರ್ವಜನಿಕರು, ವಾಹನ ಸವಾರರು ವಿದ್ಯುತ್ ಕಂಬ, ಮರಗಳ ಬಳಿ ನಿಲ್ಲದಂತೆ ಸೂಚನೆ ನೀಡಲಾಗಿದೆ. ಮಕ್ಕಳು

ಭಾರೀ ವರ್ಷಧಾರೆ ಹಿನ್ನೆಲೆ| ಚಿಕ್ಕಮಗಳೂರು ಜಿಲ್ಲೆಗೆ ಹೈ ಅಲರ್ಟ್ ಘೋಷಣೆ Read More »

ದ.ಕ ಜಿಲ್ಲೆಯಲ್ಲಿ ಭಾರೀ ಮಳೆ ಹಿನ್ನೆಲೆ| ಎಲ್ಲಾ ಶಾಲೆ, ಪಿಯು ಕಾಲೇಜುಗಳಿಗೆ ರಜೆ

ಸಮ ನ್ಯೂಸ್ : ಕರಾವಳಿ ಭಾಗದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜು.4 ಮತ್ತು 5 ರಂದು ರೆಡ್ ಅಲರ್ಟ್ ಘೋಷಣೆಯಾಗಿದ್ದು, ಜು. 5 ರಂದು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಅಂಗನವಾಡಿ, ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಮುಲ್ಫ್ ಮುಗಿಲನ್ ಆದೇಶಿಸಿದ್ದಾರೆ.

ದ.ಕ ಜಿಲ್ಲೆಯಲ್ಲಿ ಭಾರೀ ಮಳೆ ಹಿನ್ನೆಲೆ| ಎಲ್ಲಾ ಶಾಲೆ, ಪಿಯು ಕಾಲೇಜುಗಳಿಗೆ ರಜೆ Read More »

ರಾಜ್ಯ ಬಿಜೆಪಿ ಚುಕ್ಕಾಣಿ ಹಿಡಿಯುತ್ತಾರಾ ಶೋಭಾ ಕರಂದ್ಲಾಜೆ!? ಯಡಿಯೂರಪ್ಪ ಹೈಕಮಾಂಡ್ ಗೆ ಹೇಳಿದ ಆ ಗುಟ್ಟೇನು? ಇಲ್ಲಿದೆ ಕಂಪ್ಲೀಟ್ ಸ್ಟೋರಿ…

ಸಮಗ್ರ ವಾರ್ತೆ: ರಾಜ್ಯ ವಿಧಾನಸಭೆ ಚುನಾವಣೆ ಮುಗಿದು ನೂತನ ಸರ್ಕಾರ ಆರಂಭವಾಗಿ ಅಧಿವೇಶನ ಶುರುವಾದರೂ ಬಿಜೆಪಿ ಅಧ್ಯಕ್ಷರ ನೇಮಕ ಮಾತ್ರ ಇನ್ನೂ ಬಾಕಿಯಾಗಿ ಉಳಿದಿದೆ. ಈ ನಿಟ್ಟಿನಲ್ಲಿ ಬಿಜೆಪಿ ಹೈಕಮಾಂಡ್‌ ಕೂಡ ಅಧ್ಯಕ್ಷ ಆಯ್ಕೆ ಬಗ್ಗೆ ತಲೆಕೆಡಿಸಿಕೊಂಡಿದ್ದು, ಈ ಸ್ಥಾನಕ್ಕೆ ಮಹಿಳೆಯೊಬ್ಬರು ಆಯ್ಕೆಯಾಗುವ ಸಾಧ್ಯತೆ ಇದೆ. ಹಾಲಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರ ಅಧಿಕಾರವಧಿ ಮುಗಿದಿದ್ದು ತುರ್ತಾಗಿ ನೂತನ ಅಧ್ಯಕ್ಷ ನೇಮಕವಾಗಬೇಕಿದೆ. ನೂತನ ಅಧ್ಯಕ್ಷರ ಸ್ಥಾನಕ್ಕೆ ಹಲವು ನಾಯಕರ ಹೆಸರುಗಳು ಕೇಳಿ ಬಂದಿದ್ದು, ಮಾಜಿ ಮುಖ್ಯಮಂತ್ರಿ

ರಾಜ್ಯ ಬಿಜೆಪಿ ಚುಕ್ಕಾಣಿ ಹಿಡಿಯುತ್ತಾರಾ ಶೋಭಾ ಕರಂದ್ಲಾಜೆ!? ಯಡಿಯೂರಪ್ಪ ಹೈಕಮಾಂಡ್ ಗೆ ಹೇಳಿದ ಆ ಗುಟ್ಟೇನು? ಇಲ್ಲಿದೆ ಕಂಪ್ಲೀಟ್ ಸ್ಟೋರಿ… Read More »

ಕೊಟ್ಟಿಗೆಹಾರ:ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಲಿ – ಮೋಹನ್ ಕುಮಾರ್

ಸಮಗ್ರ ನ್ಯೂಸ್: ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಬೇಕು’ ಎಂದು ಮೂಡಿಗೆರೆ ವಲಯ ಅರಣ್ಯಾಧಿಕಾರಿ ಬಿ.ಜಿ.ಮೋಹನ್ ಕುಮಾರ್ ಹೇಳಿದರು. ಅವರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ವನಮಹೋತ್ಸವ ಕಾರ್ಯಕ್ರಮದಲ್ಲಿ ಗಿಡ ನೆಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. ಜನರ ಇಚ್ಚಾಶಕ್ತಿಯ ಕೊರತೆಯಿಂದ ವನಮಹೋತ್ಸವವು ತನ್ನ ಮಹತ್ವವನ್ನು ಕಳೆದುಕೊಂಡು ಒಣ ಮಹೋತ್ಸವ ಆಗುತ್ತಿದೆ. ಪ್ರಾಣಿ ಪಕ್ಷಿಗಳಿಗೆ ಉಳಿಸಲು ಉತ್ತಮ ಹಣ್ಣಿನ ಗಿಡಗಳನ್ನು ನೆಡುವ ಅಗತ್ಯ ಹಿಂದಿನಿಗಿಂತಲೂ ಈಗ ಹೆಚ್ಚಾಗಿ ಆಗಬೇಕು’ ಎಂದರು. ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ

ಕೊಟ್ಟಿಗೆಹಾರ:ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಲಿ – ಮೋಹನ್ ಕುಮಾರ್ Read More »

ಕರಾವಳಿಯಲ್ಲಿ ಮುಂದುವರಿದ ವರ್ಷಧಾರೆ| ರೆಡ್ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ

ಸಮಗ್ರ ನ್ಯೂಸ್: ಕರಾವಳಿ ಭಾಗದಲ್ಲಿ ತೀವ್ರತೆಯ ಮಳೆಯಾಗುವ ಸಾಧ್ಯತೆಯಿರುವುದರಿಂದ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಕರಾವಳಿ ಭಾಗದಲ್ಲಿ ಮುಂದಿನ ಕೆಲವು ಗಂಟೆಗಳ ಕಾಲ ಧಾರಕಾರವಾಗಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಜು.4ರ ಮಧ್ಯಾಹ್ನ ಬಳಿಕ ಮುಂದಿನ ಕೆಲವು ಗಂಟೆಗಳ ಕಾಲ ಬಲವಾದ ಮೇಲ್ಮೈ ಮಾರುತಗಳು ಬೀಸಲಿದ್ದು, ಗುಡುಗು ಮತ್ತು ಮಿಂಚು ಸಹಿತ ಧಾರಾಕಾರ ಮಳೆಯಾಗುವ ಸಾಧ್ಯತೆಯಿರುವುದರಿಂದ ರೆಡ್ ಅಲರ್ಟ್ ಘೋಷಿಸಲಾಗಿದೆ.

ಕರಾವಳಿಯಲ್ಲಿ ಮುಂದುವರಿದ ವರ್ಷಧಾರೆ| ರೆಡ್ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ Read More »

ಸದನದ ಕಲಾಪಕ್ಕೂ ಮೊದಲು ಉಭಯ ಪಕ್ಷಗಳ ನಾಯಕರಿಂದ ಮಾತುಕತೆ

ಸಮಗ್ರ ನ್ಯೂಸ್: ಸದನದ ಕಲಾಪ ಪ್ರಾರಂಭವಾಗುವುದಕ್ಕೂ ಮುನ್ನ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ಪೀಕರ್ ಕಚೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದಾರೆ.‌ ಈ ಸಂದರ್ಭ ಮಾಜಿ ಸಚಿವ ಸುನಿಲ್ ಕುಮಾರ್, ಸ್ಪೀಕರ್ ಯು.ಟಿ ಖಾದರ್ ಕೂಡಾ ಉಪಸ್ಥಿತರಿದ್ದರು.

ಸದನದ ಕಲಾಪಕ್ಕೂ ಮೊದಲು ಉಭಯ ಪಕ್ಷಗಳ ನಾಯಕರಿಂದ ಮಾತುಕತೆ Read More »

ಮಡಿಕೇರಿಯಲ್ಲಿ ಇಲಿ ಜ್ವರಕ್ಕೆ ಯುವಕ ಬಲಿ

ಸಮಗ್ರ ನ್ಯೂಸ್: ಇಲಿ ಜ್ಚರಕ್ಕೆ ಯುವಕನೋರ್ವ ಬಲಿಯಾದ ಘಟನೆ ಮಡಿಕೇರಿ ತಾಲೂಕಿನ ಕರಿಕೆ ಗ್ರಾಮದಲ್ಲಿ ಸಂಭವಿಸಿದೆ. ಚೆಂಬೇರಿ ಆನೆಪಾರೆ ನಿವಾಸಿಯ ಕೂಲಿ ಕಾರ್ಮಿಕರಾದ ಬಾಲನ್ ಅವರ ಪುತ್ರ ಲಿಬೀನ್ ಇಲಿ ಜ್ವರಕ್ಕೆ ಬಲಿಯಾಗಿದ್ದಾನೆ. ಈತ ಜ್ವರ ಪೀಡಿತನಾಗಿ ಕೇರಳದ ಪೆರಿಯಾರಂ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದು, ಜಾಂಡೀಸ್ ಕಾಯಿಲೆ ಇದೆ ಎಂದು ವೈದ್ಯರು ತಿಳಿಸಿದ್ದರು. ನಂತರ ಇದರೊಂದಿಗೆ ಇಲಿ ಜ್ವರ ಕೂಡ ಬಾಧಿಸಿದ್ದು, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ. ಇಲಿ ಜ್ವರದಿಂದ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ. ಸದ್ಯ ಘಟನೆಯಿಂದ

ಮಡಿಕೇರಿಯಲ್ಲಿ ಇಲಿ ಜ್ವರಕ್ಕೆ ಯುವಕ ಬಲಿ Read More »

ಬೆಂಗಳೂರು: ಗಂಡನ ಅನೈತಿಕ ಸಂಬಂಧಕ್ಕೆ ಬೇಸತ್ತು ಹೆಂಡತಿ ಆತ್ಮಹತ್ಯೆ

ಸಮಗ್ರ ನ್ಯೂಸ್ : ಗಂಡನ ಅನೈತಿಕ ಸಂಬಂಧಕ್ಕೆ ಬೇಸತ್ತು ಗೃಹಿಣಿಯೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ಕೆಂಗೇರಿ ಠಾಣಾ ವ್ಯಾಪ್ತಿಯಲ್ಲಿ ಜು. 2ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ಪವಿತ್ರಾ ಎಂದು ಗುರುತಿಸಲಾಗಿದೆ. ಪವಿತ್ರಾ ಮೊದಲ ಪತಿಗೆ ವಿಚ್ಛೇದನ ನೀಡಿ ಚೇತನ್ ಗೌಡ ಎಂಬಾತನನ್ನು ಎರಡನೇ ವಿವಾಹವಾಗಿದ್ದಳು. ಚೇತನ್​ ಕಂಪೆನಿಯೊಂದರ ಮಾಲೀಕನಾಗಿದ್ದು, ಇತ್ತೀಚೆಗೆ ಚೇತನ್​ಗೆ ಮತ್ತೊರ್ವ ಯುವತಿಯ ಸಂಪರ್ಕ ಬೆಳೆದಿದ್ದು, ಇದೇ ವಿಚಾರವಾಗಿ ಇಬ್ಬರ ಮಧ್ಯೆ ಆಗಾಗ ಜಗಳ ನಡೆಯುತ್ತಿತ್ತು. ಈ ಬಗ್ಗೆ ತನ್ನ

ಬೆಂಗಳೂರು: ಗಂಡನ ಅನೈತಿಕ ಸಂಬಂಧಕ್ಕೆ ಬೇಸತ್ತು ಹೆಂಡತಿ ಆತ್ಮಹತ್ಯೆ Read More »

ಬಿಟ್ ಕಾಯಿನ್ ಹಗರಣ| ಶ್ರೀಕಿ ಹೆಗಲ ಮೇಲೆ ಬಂದೂಕು… ಗುರಿ ಎಲ್ಲಿಗೆ..?

ಸಮಗ್ರ ವಿಶೇಷ: ರಾಜ್ಯದಲ್ಲಿ ಆಡಳಿತ ನಡೆಸಿದ ಬಿಜೆಪಿ ಸರ್ಕಾರ ಸಾಕಷ್ಟು ಆರೋಪಗಳಿಗೆ ತುತ್ತಾಗಿತ್ತು. ಅದರಲ್ಲಿ ಒಂದು ಬಿಟ್ ಕಾಯಿನ್ ಹಗರಣ. ಇದು ಜನಸಾಮಾನ್ಯರಿಗೆ ಕೊಂಚ ಅರ್ಥವಾಗದ ಲೆಕ್ಕಾಚಾರ ಆಗಿದ್ದರೂ ಹಗರಣ ಎನ್ನುವುದೇ ಪ್ರಮುಖ ಸಂಗತಿ. ಹಣದ ಬದಲಿ ರೂಪ ಎನ್ನಬಹುದು. ಆನ್ಲೈನ್ ವ್ಯವಹಾರ ಮಾಡುವ ಸಂಸ್ಥೆಗಳು ಹಣದ ಬದಲಿಗೆ ಬಿಟ್ಕಾಯಿನ್ ಬಳಸುತ್ತಾರೆ. ಇಂದಿನ ಬಿಟ್ ಕಾಯಿನ್ ದರ 25,32,205 ರೂಪಾಯಿ ಆಗಿದೆ. ಸರ್ಕಾರ ಸೇರಿದಂತೆ ಹತ್ತಾರು ವೆಬ್ಸೈಟ್ಗಳನ್ನು ಹ್ಯಾಕ್ ಮಾಡಿ, ಹಣ ಮಾಡುವುದು ಸದ್ಯಕ್ಕೆ ನಡೆಯುತ್ತಿರುವ ದಂಧೆ.

ಬಿಟ್ ಕಾಯಿನ್ ಹಗರಣ| ಶ್ರೀಕಿ ಹೆಗಲ ಮೇಲೆ ಬಂದೂಕು… ಗುರಿ ಎಲ್ಲಿಗೆ..? Read More »

ಬೇನಾಮಿ ಆಸ್ತಿ ಹೊಂದಿದ್ದ ಅಜಿತ್ ರೈ ಗ್ರೇಡ್ 2 ತಹಶಿಲ್ದಾರ್ ಆಗಿ ಸಿರಿವಾರಕ್ಕೆ ನಿಯೋಜನೆ| ಸರ್ಕಾರದ ನಡೆಗೆ ವ್ಯಾಪಕ ಆಕ್ರೋಶ

ಸಮಗ್ರ ವಾರ್ತೆ: 500 ಕೋಟಿಗೂ ಅಧಿಕ ಬೇನಾಮಿ ಆಸ್ತಿ ಸಂಪಾದಿಸಿದ ಆರೋಪ ಹೊತ್ತಿರುವ ಬೆಂಗಳೂರಿನ ಕೆಆರ್ ಪುರ ತಹಶೀಲ್ದಾರ್ ಗೆ ಅಜಿತ್ ಕುಮಾರ್ ರೈ ಅವರನ್ನು ರಾಯಚೂರು ಜಿಲ್ಲೆಯ ಸಿರಿವಾರ ತಾಲೂಕಿನ ಗ್ರೇಡ್ -2 ತಹಶೀಲ್ದಾರ್ ಹುದ್ದೆಗೆ ಸರ್ಕಾರ ನೇಮಕ ಮಾಡಿದ್ದು, ಸರ್ಕಾರದ ಈ ನಡೆಗೆ ಆಕ್ರೋಶ ವ್ಯಕ್ತವಾಗಿದೆ. ಆದಾಯಕ್ಕಿಂತ ಭಾರಿ ಪ್ರಮಾಣದಲ್ಲಿ ಆಸ್ತಿ ಸಂಪಾದಿಸಿರುವ ಅಜಿತ್ ರೈ ವಿರುದ್ಧ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿ ತನಿಖೆ ಮುಂದುವರೆದಿದೆ. ಸಿರವಾರದಲ್ಲಿ ಗ್ರೇಡ್ 2 ತಹಶೀಲ್ದಾರ್ ಆಗಿದ್ದ ಪರಶುರಾಮ 500

ಬೇನಾಮಿ ಆಸ್ತಿ ಹೊಂದಿದ್ದ ಅಜಿತ್ ರೈ ಗ್ರೇಡ್ 2 ತಹಶಿಲ್ದಾರ್ ಆಗಿ ಸಿರಿವಾರಕ್ಕೆ ನಿಯೋಜನೆ| ಸರ್ಕಾರದ ನಡೆಗೆ ವ್ಯಾಪಕ ಆಕ್ರೋಶ Read More »