ರಾಜ್ಯ

ಉಡುಪಿ: ತಗ್ಗು ಪ್ರದೇಶಗಳು ಜಲಾವೃತ -ಜನರ ಸ್ಥಳಾಂತರ

ಸಮಗ್ರ ನ್ಯೂಸ್: ಮಳೆಯ ತೀವೃತೆಗೆ ಉಡುಪಿ ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ನೆರೆಯಲ್ಲಿ ಸಿಲುಕಿದ ಜನರ ರಕ್ಷಣೆ ಕಾರ್ಯ ನಡೆಸಲಾಗುತ್ತಿದೆ. ಜಿಲ್ಲೆಯ ಕೊಡಂಕೂರು ಭಾಗದಲ್ಲಿ ನೆರೆ ನೀರಿನಿಂದ ಹಲವು ಕುಟುಂಬಗಳು ಅಪಾಯದಲ್ಲಿ ಸಿಲುಕಿದ್ದು ಅಗ್ನಿಶಾಮಕ ದಳಮಕ್ಕಳು ಮಹಿಳೆಯರನ್ನು ರಕ್ಷಣೆ ಮಾಡುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆಕಲ್ಸಂಕ, ಬೈಲಕೆರೆ,‌ ಬನ್ನಂಜೆ ಗರಡಿ ರಸ್ತೆ, ಕುಂಜಿಬೆಟ್ಟು ಭಾಗದಲ್ಲಿ ನೆರೆ ಸೃಷ್ಟಿಯಾಗಿ ಜನ ಜೀವನ‌ ಅಸ್ತವ್ಯಸ್ತ‌ಗೊಂಡಿದೆ. ಬನ್ನಂಜೆ-ಗರಡಿ ರಸ್ತೆ ಪರಿಸರದಲ್ಲಿ ಐವತ್ತಕ್ಕೂ ಅಧಿಕ ಮನೆಗಳು ಜಲಾವೃತಗೊಂಡಿದೆ. ನಿರಂತರ ಮಳೆಯಿಂದ ಇಂದ್ರಾಣಿ ನದಿ

ಉಡುಪಿ: ತಗ್ಗು ಪ್ರದೇಶಗಳು ಜಲಾವೃತ -ಜನರ ಸ್ಥಳಾಂತರ Read More »

ವಾಟ್ಸಾಪ್‌ನಲ್ಲಿ ಮತ್ತೊಂದು ಹೊಸ ಫೀಚರ್‌

ಸಮಗ್ರ ನ್ಯೂಸ್: ವಾಟ್ಸಾಪ್‌ ಇದೀಗ ವಿಂಡೋಸ್‌ನಲ್ಲಿ ಟೆಕ್ಸ್ಟ್‌ ಗಾತ್ರವನ್ನು ಅಡ್ಜಸ್ಟ್‌ ಮಾಡುವ ಹೊಸ ಫೀಚರ್‌ ಲಾಂಚ್‌ ಮಾಡಲು ಹೊರಟಿದೆ. ಈ ಹೊಸ ಫೀಚರ್ಸ್ ಬಳಕೆದಾರರಿಗೆ ತಮ್ಮ ವಿಂಡೋಸ್ ಡೆಸ್ಕ್‌ಟಾಪ್‌ ಸ್ಕ್ರೀನ್‌ ಮೇಲೆ ಪ್ರದರ್ಶಿಸಲಾದ ಟೆಕ್ಸ್ಟ್‌ ಗಾತ್ರವನ್ನು ಕಸ್ಟಮೈಸ್‌ ಮಾಡಲು ಅನುಮತಿಸುವ ಮೂಲಕ ಯೂಸರ್‌ಗಳಿಗೆ ಹೆಚ್ಚಿನ ಅನುಕೂಲ ಮಾಡಲಿದೆ. ಸೆಟ್ಟಿಂಗ್‌ನ ಪರ್ಸನಲೈಜೇಷನ್‌ ಮೆನು ಅಡಿಯಲ್ಲಿ ಹೊಸ ಆಯ್ಕೆ ಲಭ್ಯವಿದೆ. ಈ ಹೊಸ ಫೀಚರ್ ನೊಂದಿಗೆ , ಟೆಕ್ಸ್ ಗಾತ್ರವನ್ನು ಸರಿ ಹೊಂದಿಸಲು ಕೆಲವು ಮಹತ್ವದ ಶಾರ್ಟ್ ಕಟ್ ಗಳನ್ನು

ವಾಟ್ಸಾಪ್‌ನಲ್ಲಿ ಮತ್ತೊಂದು ಹೊಸ ಫೀಚರ್‌ Read More »

ಬೆಂಗಳೂರು ಮೈಸೂರು ಎಕ್ಸ್ ಪ್ರೆಸ್ ಪ್ರಯಾಣಕ್ಕೆ ಇವರು 1,000 ತೆರಲೇ ಬೇಕು| ಹೊಸ ಆದೇಶ, ವ್ಯಾಪಕ ಟೀಕೆ !

ಸಮಗ್ರ ನ್ಯೂಸ್ : ಮರಣದ ಮಾರ್ಗ ಎಂದೇ ಕರೆಸಿಕೊಂಡಿರುವ ಮೈಸೂರು ಬೆಂಗಳೂರು ಎಕ್ಸ್‌ಪ್ರೆಸ್‌ವೇ ನಲ್ಲಿ ಹಲವಾರು ತಾಂತ್ರಿಕ ಸಮಸ್ಯೆಗಳಿದ್ದು ಇದೀಗ ಹಲವು ಭೀಕರ ಅಪಘಾತಗಳು ನಡೆದಿವೆ. ತಡವಾಗಿಯಾದರೂ ಸರ್ಕಾರವು ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ತೊಡಗಿದೆ. ಇದರ ಮಧ್ಯೆ, ಈ ರಸ್ತೆಯಲ್ಲಿ ಸಂಚರಿಸುವ ಕೆಲವರಿಗೆ 1,000 ರೂಪಾಯಿಗಳ ಬರೆ ಎಳೆಯಲು ಸರ್ಕಾರ ನಿರ್ಧರಿಸಿದೆ. ಕೆಲವರಿಗೆ 1000 ರೂಪಾಯಿ ಫೈನ್ ವಿಧಿಸಲು ಸರ್ಕಾರವು ನಿರ್ಧರಿಸಿದ್ದು, ಅವರಿಗೆ ವೇಗದ ಮಿತಿಯ ಗಡಿ ಅಳವಡಿಸಿ ಎಡಿಜಿಪಿ ಅಲೋಕ್ ಕುಮಾರ್ ಆದೇಶಿಸಿದ್ದಾರೆ.

ಬೆಂಗಳೂರು ಮೈಸೂರು ಎಕ್ಸ್ ಪ್ರೆಸ್ ಪ್ರಯಾಣಕ್ಕೆ ಇವರು 1,000 ತೆರಲೇ ಬೇಕು| ಹೊಸ ಆದೇಶ, ವ್ಯಾಪಕ ಟೀಕೆ ! Read More »

ಸಹಾಯಕ‌ ಪ್ರಾದ್ಯಾಪಕರ ನೇಮಕಾತಿಗೆ ಪಿ.ಎಚ್.ಡಿ ಮಾನದಂಡವಲ್ಲ – ಯುಜಿಸಿ

ಸಮಗ್ರ ನ್ಯೂಸ್: ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಪಿಹೆಚ್.ಡಿ ಮಾನದಂಡ ಅಲ್ಲ ಎಂದು ವಿಶ್ವವಿದ್ಯಾಲಯಗಳ ಅನುದಾನ ಆಯೋಗ ತಿಳಿಸಿದೆ. ಈ ಹುದ್ದೆ ನೇಮಕಾತಿಗೆ ಪಿಹೆಚ್.ಡಿ ಕಡ್ಡಾಯಗೊಳಿಸುವ ತನ್ನ ನಿರ್ಧಾರವನ್ನು ಯುಜಿಸಿ ಹಿಂತೆಗೆದುಕೊಂಡಿದೆ. ಸಹಾಯಕ ಪ್ರಾಧ್ಯಾಪಕರ ಹುದ್ದೆ ನೇರ ನೇಮಕಾತಿಗೆ ನೆಟ್, ಸೆಟ್, ಸ್ಲೆಟ್ ನಂತಹ ಪರೀಕ್ಷೆಗಳು ಕನಿಷ್ಠ ಮಾನದಂಡವಾಗಿರುತ್ತದೆ ಎಂದು ಯುಜಿಸಿ ಮೂಲಗಳು ತಿಳಿಸಿವೆ.

ಸಹಾಯಕ‌ ಪ್ರಾದ್ಯಾಪಕರ ನೇಮಕಾತಿಗೆ ಪಿ.ಎಚ್.ಡಿ ಮಾನದಂಡವಲ್ಲ – ಯುಜಿಸಿ Read More »

ಗಗನ ಕುಸುಮವಾದ ಟೊಮ್ಯಾಟೊ| ಕೆಲವು ನಗರಗಳಲ್ಲಿ ಪೆಟ್ರೋಲ್ ಗಿಂತಲೂ ರೇಟ್ ಜಾಸ್ತಿ

ಸಮಗ್ರ ನ್ಯೂಸ್: ದೇಶದಲ್ಲಿ ಟೊಮ್ಯಾಟೊ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಇನ್ನು ಹಲವು ನಗರಗಳಲ್ಲಿ ಟೊಮ್ಯಾಟೊ ದರ ಪೆಟ್ರೋಲ್ ಬೆಲೆಯನ್ನು ಹಿಮ್ಮೆಟ್ಟಿಸಿದೆ. ಪೆಟ್ರೋಲ್ 102-108 ರೂಪಾಯಿಗೆ ಮಾರಾಟವಾಗುತ್ತಿದೆ. ಇತ್ತ ಮಾರುಕಟ್ಟೆಯಲ್ಲಿ ಈಗ ಪೆಟ್ರೋಲ್‌ಗಿಂತ ಟೊಮ್ಯಾಟೊ 140-150 ರೂ.ಗೆ ಮಾರಾಟವಾಗುತ್ತಿದೆ ಎಂದು ಅನೇಕ ಗ್ರಾಹಕರು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಬೆಂಗಳೂರಿನ ಮಾರುಕಟ್ಟೆಯಲ್ಲಿ ಟೊಮ್ಯಾಟೊ ಬೆಲೆ ಕೆಜಿಗೆ 100-125 ರೂ.ಗೆ ಮಾರಾಟವಾಗುತ್ತಿದೆ. ಇತ್ತ ಪೆಟ್ರೋಲ್​​ ಬೆಲೆ 101-108 ರೂ. ಇದೆ. ದಿನನಿತ್ಯ ವಸ್ತುಗಳಲ್ಲಿ ಆಗಿರುವ ಬೆಲೆ ಏರಿಕೆಯಿಂದಾಗಿ ಗ್ರಾಹಕರು ಕಂಗೆಟ್ಟಿದ್ದಾರೆ. ಬಿಹಾರದಲ್ಲಿ

ಗಗನ ಕುಸುಮವಾದ ಟೊಮ್ಯಾಟೊ| ಕೆಲವು ನಗರಗಳಲ್ಲಿ ಪೆಟ್ರೋಲ್ ಗಿಂತಲೂ ರೇಟ್ ಜಾಸ್ತಿ Read More »

ದುಡಿಯಲು ಸಮರ್ಥಳಾದ ಪತ್ನಿ ಹೆಚ್ಚಿನ ಜೀವನಾಂಶ ಕೇಳುವಂತಿಲ್ಲ: ಹೈಕೋರ್ಟ್ ತೀರ್ಪು

ಸಮಗ್ರ ನ್ಯೂಸ್: ದುಡಿಯಲು ಸಮರ್ಥ ಪತ್ನಿ ಹೆಚ್ಚಿನ ಜೀವನಾಂಶ ಕೋರುವಂತಿಲ್ಲವೆಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ. ಜತೆಗೆ, ಪ್ರಕರಣವೊಂದರಲ್ಲಿ ಪತ್ನಿಗೆ ಪತಿ ನೀಡಬೇಕಿದ್ದ ಮಾಸಿಕ ಜೀವನಾಂಶದ ಮೊತ್ತವನ್ನು 10 ಸಾವಿರ ರೂಪಾಯಿಯಿಂದ 5 ಸಾವಿರ ರೂಪಾಯಿಗಳಿಗೆ ಕಡಿಮೆ ಮಾಡಿದ ಸೆಷನ್ಸ್ ಕೋರ್ಟ್ ಆದೇಶವನ್ನು ಎತ್ತಿಹಿಡಿದಿದೆ. ವಿವಾಹಕ್ಕೆ ಮುನ್ನ ಉದ್ಯೋಗದಲ್ಲಿದ್ದ ಪತ್ನಿ ಈಗ ಮತ್ತೆ ಕೆಲಸಕ್ಕೆ ಸೇರದಿರಲು ಸಮರ್ಪಕ ಕಾರಣಗಳಿಲ್ಲ. ಆಲಸ್ಯದಿಂದ ಮನೆಯಲ್ಲಿಯೇ ಕುಳಿತು ಪತಿಯಿಂದಲೇ ಸಂಪೂರ್ಣ ಜೀವನಾಂಶ ಕೇಳುವುದು ಸಮಂಜಸವಲ್ಲ. ತನ್ನ ಜೀವನ ನಿರ್ವಹಣೆಗೆ ಪತ್ನಿ ಪ್ರಯತ್ನಿಸಬೇಕು.

ದುಡಿಯಲು ಸಮರ್ಥಳಾದ ಪತ್ನಿ ಹೆಚ್ಚಿನ ಜೀವನಾಂಶ ಕೇಳುವಂತಿಲ್ಲ: ಹೈಕೋರ್ಟ್ ತೀರ್ಪು Read More »

ಸಕಾಲಿಕ ಚಿಂತನೆ| ವಿಧಾನ ಮಂಡಲ ಅನುಭಾವ ತುಂಬಿದ ಅನುಭವ ಮಂಟಪವಾಗಬೇಕಲ್ಲದೆ ಹುಚ್ಚರ ಸಂತೆಯಾಗಬಾರದು..!

ಸಮಗ್ರ ವಿಶೇಷ: ವಿಧಾನ ಮಂಡಲದ ಉಭಯ ಸದನಗಳ ಕಾರ್ಯಕಲಾಪಗಳನ್ನು ನೇರವಾಗಿ ವೀಕ್ಷಿಸುವ ಯುವ ಜನಾಂಗದ ಮನಸ್ಸುಗಳು ಹೇಗೆ ಯೋಚಿಸಬಹುದು? ಕನಿಷ್ಠ ಶಾಲೆಗಳಲ್ಲಿ ಇರುವಷ್ಟು ಶಿಸ್ತು ಅಥವಾ ಬಸ್ಸು ರೈಲು ನಿಲ್ದಾಣಗಳಲ್ಲಿ ಇರಬಹುದಾದಷ್ಟು ಶಿಸ್ತು, ಮದುವೆಯ ಆರತಕ್ಷತೆಯಲ್ಲಿ ಇರುವ ಶಿಸ್ತು, ಮತದಾನ ಮಾಡುವಾಗ ಇರುವಷ್ಟು ಶಿಸ್ತು, ಉಪನ್ಯಾಸ – ವಿಚಾರ ಸಂಕಿರಣಗಳಲ್ಲಿ ಇರುವ ಶಿಸ್ತು ಅಥವಾ ಸಿನಿಮಾ ಮಂದಿರಗಳಲ್ಲಿ ಇರಬಹುದಾದಷ್ಟು ಶಿಸ್ತು ಕೂಡ ಇವರಲ್ಲಿ ಇಲ್ಲವಾಯಿತೇ? ಎಂದು ಒಂದು ಕ್ಷಣ ಅನಿಸಬಹುದೇ. ಎಷ್ಟೊಂದು ವ್ಯವಸ್ಥಿತವಾಗಿ, ಎಷ್ಟೊಂದು ಬುದ್ದಿವಂತ ಅಧಿಕಾರಿಗಳ

ಸಕಾಲಿಕ ಚಿಂತನೆ| ವಿಧಾನ ಮಂಡಲ ಅನುಭಾವ ತುಂಬಿದ ಅನುಭವ ಮಂಟಪವಾಗಬೇಕಲ್ಲದೆ ಹುಚ್ಚರ ಸಂತೆಯಾಗಬಾರದು..! Read More »

ದೇಶೀಯ ಮೊಬೈಲ್ ಮಾರ್ಕೆಟ್ ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ಒನ್ ಪ್ಲಸ್ ನಾರ್ಡ್-3| ಏನಿದರ ಸ್ಪೆಷಲ್ ಫೀಚರ್ಸ್ ಗೊತ್ತಾ?

ಸಮಗ್ರ ಡಿಜಿಟಲ್ ಡೆಸ್ಕ್: ಭಾರತದಲ್ಲಿ ಮೊಬೈಲ್‌ ಮಾರುಕಟ್ಟೆಗೆ ಒನ್‌ಪ್ಲಸ್‌ ನಾರ್ಡ್‌ 3 ಸ್ಮಾರ್ಟ್‌ಫೋನ್‌ ಗ್ರ್ಯಾಂಡ್‌ ಎಂಟ್ರಿ ನೀಡಿದೆ. ಈ ಸ್ಮಾರ್ಟ್‌ಫೋನ್‌ ಮೀಡಿಯಾಟೆಕ್‌ ಡೈಮೆನ್ಸಿಟಿ 9000 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದ್ದು, ಮುಖ್ಯ ಕ್ಯಾಮೆರಾ 50 MP ಸೆನ್ಸಾರ್‌ ಒಳಗೊಂಡಿದೆ. ಒನ್‌ಪ್ಲಸ್‌ ನಾರ್ಡ್‌ 3 ಸ್ಮಾರ್ಟ್‌ಫೋನ್‌ ಭಾರತದಲ್ಲಿ ಬಿಡುಗಡೆಯಾಗಿದೆ. ಈ ಸ್ಮಾರ್ಟ್‌ಫೋನ್‌ ಹೈ ಲೆವೆಲ್‌ ಸ್ಮಾರ್ಟ್‌ಫೋನ್‌ಗಳಲ್ಲಿ ಕಂಡುಬರುವ ಟ್ರೈ ಸ್ಟೇಟ್‌ ಅಲರ್ಟ್‌ ಸ್ಲೈಡರ್‌ ಅನ್ನು ಪಡೆದುಕೊಂಡಿದೆ. ಜೊತೆಗೆ 5,000mAh ಸಾಮರ್ಥ್ಯದ

ದೇಶೀಯ ಮೊಬೈಲ್ ಮಾರ್ಕೆಟ್ ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ಒನ್ ಪ್ಲಸ್ ನಾರ್ಡ್-3| ಏನಿದರ ಸ್ಪೆಷಲ್ ಫೀಚರ್ಸ್ ಗೊತ್ತಾ? Read More »

ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆ| ಎಲ್ಲೋ ಅಲರ್ಟ್ ಘೋಷಣೆ| ಸಂಪರ್ಕ ಕಡಿತದ ಭೀತಿಯಲ್ಲಿ ಸಂಪಾಜೆ ಘಾಟ್!

ಸಮಗ್ರ ವಾರ್ತೆ: ಕೊಎಗು ಜಿಲ್ಲೆಯಲ್ಲಿ ಮಳೆ ಬಿರುಸು ಪಡೆದಿದ್ದು, ಹವಾಮಾನ ಇಲಾಖೆಯು ಯೆಲ್ಲೋ ಆಲರ್ಟ್ ಘೋಷಣೆ ಮಾಡಿದೆ. ಕಳೆದ ಹಲವು ದಿನಗಳಿಂದ ಬಿಡುವು ಕೊಟ್ಟಿದ್ದ ಮಳೆ ಮತ್ತೆ ಚುರುಕು ಪಡೆದುಕೊಂಡಿದೆ. ಜಿಲ್ಲೆಯ ಮಡಿಕೇರಿ, ನಾಪೋಕ್ಲು, ಗಾಳಿಬೀಡು, ವಿರಾಜಪೇಟೆ ಸೇರಿದಂತೆ ವಿವಿಧ ಭಾಗದಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಹವಾಮಾನ ಇಲಾಖೆ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಿಸಿದೆ. ಕೊಡಗಿನ ಹಲವು ಭಾಗಗಳಲ್ಲಿ ಮಳೆ ಜೊತೆಗೆ ಗಾಳಿಯೂ ಹೆಚ್ಚಾಗಿದ್ದು, ಮರಗಳು ಧರೆಗುರುಳಿವೆ. ಬೋಹಿಕೇರಿ ಮತ್ತು ಕುಶಾಲನಗರಕ್ಕೆ ತೆರಳುವ ರಸ್ತೆಯಲ್ಲಿ ಮರ

ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆ| ಎಲ್ಲೋ ಅಲರ್ಟ್ ಘೋಷಣೆ| ಸಂಪರ್ಕ ಕಡಿತದ ಭೀತಿಯಲ್ಲಿ ಸಂಪಾಜೆ ಘಾಟ್! Read More »

ಹವಾಮಾನ ವರದಿ| ಕರ್ನಾಟಕ ಸೇರಿದಂತೆ 8 ರಾಜ್ಯಗಳಲ್ಲಿ ಜು.8ರವರೆಗೆ ಭಾರೀ ಮಳೆ‌ ಮುನ್ಸೂಚನೆ

ಸಮಗ್ರ ನ್ಯೂಸ್: ಜುಲೈ 8 ರವರೆಗೆ ದಕ್ಷಿಣ ಪೆನಿನ್ಸುಲರ್ ಭಾರತದಲ್ಲಿ ತೀವ್ರವಾದ ಮಳೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ಬುಧವಾರ ತಿಳಿಸಿದೆ. ಉತ್ತರಾಖಂಡ, ಹಿಮಾಚಲ ಪ್ರದೇಶ, ಗೋವಾ, ಗುಜರಾತ್, ಕರ್ನಾಟಕ, ಕೇರಳ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಕೇಂದ್ರ ಹವಾಮಾನ ಮುನ್ಸೂಚನೆ ಸಂಸ್ಥೆ ಮುನ್ಸೂಚನೆ ನೀಡಿದೆ. ಜುಲೈ 6 ರಂದು ಮಹಾರಾಷ್ಟ್ರದ ನಾಲ್ಕು ಜಿಲ್ಲೆಗಳಾದ ಸತಾರಾ, ಪುಣೆ, ರತ್ನಾಗಿರಿ ಮತ್ತು ರಾಯಗಡ್ನಲ್ಲಿ ಭಾರಿ ಮಳೆಯಾಗಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.

ಹವಾಮಾನ ವರದಿ| ಕರ್ನಾಟಕ ಸೇರಿದಂತೆ 8 ರಾಜ್ಯಗಳಲ್ಲಿ ಜು.8ರವರೆಗೆ ಭಾರೀ ಮಳೆ‌ ಮುನ್ಸೂಚನೆ Read More »