ರಾಜ್ಯ

ಬೆಂಗಳೂರು – ಹುಬ್ಬಳ್ಳಿ ಡೈಲಿ ಎಕ್ಸ್​ಪ್ರೆಸ್​ ರೈಲು ಶಾಶ್ವತವಾಗಿ ರದ್ದು

ಸಮಗ್ರ ನ್ಯೂಸ್: ಬೆಂಗಳೂರು-ಹುಬ್ಬಳ್ಳಿ ರೈಲು ಬೆಂಗಳೂರಿನಿಂದ ಬೆಳಗ್ಗೆ 7:30ಕ್ಕೆ ಹೊರಟು ಮಧ್ಯಾಹ್ನ 2.30ಕ್ಕೆ ಹುಬ್ಬಳ್ಳಿಗೆ ಆಗಮಿಸುತ್ತಿತ್ತು. ಹುಬ್ಬಳ್ಳಿಯಿಂದ ಮಧ್ಯಾಹ್ನ 3.15 ಕ್ಕೆ ಹೊರಟು ರಾತ್ರಿ 11.10 ಕ್ಕೆ ಬೆಂಗಳೂರು ತಲುಪುತ್ತಿತ್ತು. ಬೆಂಗಳೂರು-ಹುಬ್ಬಳ್ಳಿ ಡೈಲಿ ಎಕ್ಸ್​ಪ್ರೆಸ್​ ವಿಶೇಷ ರೈಲು ಸಂಖ್ಯೆ 07353/07354 ಜುಲೈ 16 ರಿಂದ ಶಾಶ್ವತವಾಗಿ ರದ್ದುಗೊಂಡಿದೆ ಎಂದು ಸೌತ್ ವೆಸ್ಟರ್ನ್ ರೈಲ್ವೆ ಮಾಹಿತಿ ನೀಡಿದೆ. ಈ ವರ್ಷ ಮಾರ್ಚ್ 23 ರಂದು ಈ ದೈನಂದಿನ ಎಕ್ಸ್​ಪ್ರೆಸ್ ವಿಶೇಷ ರೈಲನ್ನು ಪ್ರಾರಂಭಿಸಲಾಗಿತ್ತು. ಸೀಮಿತ ನಿಲುಗಡೆಗಳನ್ನಷ್ಟೇ ಹೊಂದಿದ್ದ ಈ

ಬೆಂಗಳೂರು – ಹುಬ್ಬಳ್ಳಿ ಡೈಲಿ ಎಕ್ಸ್​ಪ್ರೆಸ್​ ರೈಲು ಶಾಶ್ವತವಾಗಿ ರದ್ದು Read More »

ಕೊಟ್ಟಿಗೆಹಾರ: ಗ್ರಾಮೀಣ ಭಾಗದ ಅಂಚೆ ಕಚೇರಿಯಲ್ಲಿ ಇಂಟರ್ನೆಟ್ ಸಮಸ್ಯೆ | ಮಾಸಿಕ ವೇತನ ಪಡೆಯಲು ವೃದ್ಧರ, ಮಹಿಳೆಯರ ಪರದಾಟ

ಸಮಗ್ರ ನ್ಯೂಸ್: ನಾಗರಿಕರಿಗೆ ಉತ್ತಮ ಸೇವೆ ಶೀಘ್ರವಾಗಿ ನೀಡಲು ನೆರವಾಗುವಂತೆ ಅಂಚೆ ಕಚೇರಿಗಳಲ್ಲಿ ಮಂತ್ರ ಎಂಬ ಉಪಕರಣ ನೀಡಲಾಗಿದೆ. ಆದರೆ ವ್ಯವಸ್ಥೆಗಳನ್ನು ಮೇಲ್ದರ್ಜೆ ಏರಿಸಲಾದರೂ ನೆಟ್ ವರ್ಕ್ ಸಮಸ್ಯೆ ಮಾತ್ರ ಕಗ್ಗಂಟಾಗಿ ಉಳಿದಿದೆ. ಅಂಚೆ ಕಚೇರಿಗಳ ಮುಂಭಾಗದಲ್ಲಿ ನೆಟ್ ವರ್ಕ್ ಸಿಗುವ ಬಸ್ ನಿಲ್ದಾಣಗಳಲ್ಲಿ ನಾಗರೀಕರು ಗಂಟೆ ಗಟ್ಟಲೆ ಕಾಯುಬೇಕಾದ ದುಸ್ಥಿತಿ ಎದುರಾಗಿದೆ. ಮಲೆನಾಡು ಭಾಗದ ಗ್ರಾಮೀಣ ಪ್ರದೇಶದಲ್ಲಿ ಈಗ ಮಳೆಗಾಲವಾದ್ದರಿಂದ ನೆಟ್ ವರ್ಕ್ ಸೇವೆ ಗಗನ ಕುಸುಮವಾಗುತ್ತಿದೆ. ಅಂಚೆ ಕಚೇರಿಗಳಲ್ಲಿ ಮಾಸಿಕ ವೇತನಕ್ಕಾಗಿ ಮಾತ್ರವಲ್ಲ ಕೆಲವು

ಕೊಟ್ಟಿಗೆಹಾರ: ಗ್ರಾಮೀಣ ಭಾಗದ ಅಂಚೆ ಕಚೇರಿಯಲ್ಲಿ ಇಂಟರ್ನೆಟ್ ಸಮಸ್ಯೆ | ಮಾಸಿಕ ವೇತನ ಪಡೆಯಲು ವೃದ್ಧರ, ಮಹಿಳೆಯರ ಪರದಾಟ Read More »

ಹಿಂದೂ ಎನ್ನುವುದು ಒಂದು ಧರ್ಮವೇ ಅಲ್ಲ: ಸಿದ್ದರಾಮ ಸ್ವಾಮೀಜಿ

ಸಮಗ್ರ ನ್ಯೂಸ್: ನಾವು ಹಿಂದೂ ವಿರೋಧಿಗಳಲ್ಲ, ಹಿಂದೂ ಎನ್ನುವುದು ಒಂದು ಧರ್ಮವೇ ಅಲ್ಲ ಎಂದು ಗದಗ ತೋಂಟದಾರ್ಯ ಮಠದ ಡಾ. ಸಿದ್ದರಾಮ ಸ್ವಾಮೀಜಿ ಹೇಳಿದ್ದಾರೆ. ಧಾರವಾಡದಲ್ಲಿ ಮಾತನಾಡಿದ ಅವರು, ಹಿಂದೂ ಜೀವನ ಪದ್ಧತಿಯಷ್ಟೇ. ಓರ್ವ ಸ್ಥಾಪಕ ಇದ್ದರೆ ಮಾತ್ರ ಅದೊಂದು ಧರ್ಮ ಎನಿಸಿಕೊಳ್ಳುತ್ತದೆ. ಧರ್ಮ ಎಂದರೆ ಅದರದ್ದೆಯಾದ ಸಂವಿಧಾನ ಇರಬೇಕು. ಒಂದೇ ದೇವರನ್ನು ಪೂಜಿಸುತ್ತಿರಬೇಕು. ಈ ಹಿನ್ನೆಲೆಯಲ್ಲಿ ಲಿಂಗಾಯತ ಸ್ವತಂತ್ರ ಧರ್ಮವಾಗಿದೆ. ಬಸವಣ್ಣನವರು ಇದರ ಸ್ಥಾಪಕರು ಎಂದಿದ್ದಾರೆ. ಲಿಂಗಾಯತ (Lingayat) ಧರ್ಮಕ್ಕೆ ವಚನ ಸಾಹಿತ್ಯವೇ ಸಂವಿಧಾನವಾಗಿದೆ. ನಾವೆಲ್ಲ

ಹಿಂದೂ ಎನ್ನುವುದು ಒಂದು ಧರ್ಮವೇ ಅಲ್ಲ: ಸಿದ್ದರಾಮ ಸ್ವಾಮೀಜಿ Read More »

ಹೊರಗುತ್ತಿಗೆ ನೇಮಕಾತಿಗಳಲ್ಲೂ ಮೀಸಲು ಜಾರಿಗೆ ಸರ್ಕಾರ ಚಿಂತನೆ: ಸಿಎಂ ಸಿದ್ದರಾಮಯ್ಯ

ಸಮಗ್ರ ನ್ಯೂಸ್: ಹೊರಗುತ್ತಿಗೆ ನೇಮಕಾತಿಗಳಲ್ಲೂ ಮೀಸಲಾತಿ ಜಾರಿಗೆ ಸರ್ಕಾರ ಚಿಂತನೆ ನಡೆಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಜನಮನ ಪ್ರತಿಷ್ಠಾನ ಮತ್ತು ಸಮತಾ ಅಧ್ಯಯನ ಕೇಂದ್ರ ದೇವರಾಜ ಅರಸು ಭವನದಲ್ಲಿ ಆಯೋಜಿಸಿದ್ದ ಪ್ರಬುದ್ಧ ಕರ್ನಾಟಕ ಜನಮನ ಸಮಾವೇಶದ ಸಂವಾದದಲ್ಲಿ ಮಾತನಾಡಿದ ಸಿದ್ದರಾಮಯ್ಯ, ರಾಜ್ಯ ಸರ್ಕಾರದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ನಾವು ಪ್ರಣಾಳಿಕೆಯಲ್ಲಿ ಹೇಳಿದ್ದೆವು. ಅದರಂತೆ ಹಂತ ಹಂತವಾಗಿ ಭರ್ತಿ ಮಾಡಿಕೊಳ್ಳುತ್ತೇವೆ. ಅಲ್ಲಿಯವರೆಗೂ ಹೊರಗುತ್ತಿಗೆ ನೇಮಕಾತಿಗಳಲ್ಲೂ ಮೀಸಲಾತಿ ತರುವ ಉದ್ದೇಶ ಹೊಂದಿದ್ದೇವೆ ಎಂದರು. ಮಕ್ಕಳು ವಿಶ್ವಪ್ರಜ್ಞೆ

ಹೊರಗುತ್ತಿಗೆ ನೇಮಕಾತಿಗಳಲ್ಲೂ ಮೀಸಲು ಜಾರಿಗೆ ಸರ್ಕಾರ ಚಿಂತನೆ: ಸಿಎಂ ಸಿದ್ದರಾಮಯ್ಯ Read More »

ನಿವೇಶನಕ್ಕಾಗಿ ರಾಷ್ಟ್ರಪತಿಗಳಿಗೆ ಪತ್ರ ಬರೆದಿದ ವಿದ್ಯಾರ್ಥಿನಿ

ಸಮಗ್ರ ನ್ಯೂಸ್‌: ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ವಿದ್ಯಾರ್ಥಿನಿ ನಿವೇಶನಕ್ಕಾಗಿ ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದಾಳೆ. ತೂಯಲಹಳ್ಳಿ ಸರಕಾರಿ ಪ್ರೌಢಶಾಲೆಯಲ್ಲಿ 9ನೇ ತರಗತಿ ಓದುತ್ತಿರುವ ವಿದ್ಯಾರ್ಥಿನಿ ಲಕ್ಷ್ಮಿ (11) ಕಳೆದ ತಿಂಗಳು ಜೂ. 29 ರಂದು ಮನೆ ಕಟ್ಟಲು ನಿವೇಶನ ನೀಡುವಂತೆ ರಾಷ್ಟ್ರಪತಿಗಳಿಗೆ ಪತ್ರ ಬರೆದು ಮನವಿ ಮಾಡಿದ್ದಾಳೆ. ಪತ್ರದ ಸಾರಾಂಶನಾನು (ಲಕ್ಷ್ಮೀ) ತಂದೆ, ತಾಯಿ ಹಾಗೂ ಇಬ್ಬರು ಸಹೋದರಿಯರೊಂದಿಗೆ ಗುಡಿಸಲಿನಲ್ಲಿ ವಾಸವಿದ್ದೇವೆ. ನಾವು ವಾಸಿಸುತ್ತಿರುವ ಸ್ಥಳದಲ್ಲಿ ಮನೆ ಕಟ್ಟಿಕೊಳ್ಳಲು ನಮ್ಮ ಸಂಬಂಧಿಕರು ತಕರಾರು ಮಾಡುತ್ತಿದ್ದಾರೆ. ಇದೇ ಗುಡಿಸಿಲನಲ್ಲಿ

ನಿವೇಶನಕ್ಕಾಗಿ ರಾಷ್ಟ್ರಪತಿಗಳಿಗೆ ಪತ್ರ ಬರೆದಿದ ವಿದ್ಯಾರ್ಥಿನಿ Read More »

Jain muni Murder : ಜೈನಮುನಿ ಕಾಮಕುಮಾರ ನಂದಿ ಮಹಾರಾಜ್‌ ಪಂಚಭೂತಗಳಲ್ಲಿ ಲೀನ

ಸಮಗ್ರ ನ್ಯೂಸ್: ಹತ್ಯೆಯಾಗಿರುವ ಬೆಳಗಾವಿಯ ಚಿಕ್ಕೋಡಿ ತಾಲೂಕಿನ ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಅಂತ್ಯಕ್ರಿಯೆಯು ಜೈನ ಸಂಪ್ರದಾಯದಂತೆ ನೆರೆವೇರಿದೆ. ಹುಬ್ಬಳ್ಳಿಯ ವರೂರು ಮಠದ ಧರ್ಮಸೇನ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮೀಜಿ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನ ನೆರವೇರಿಸಲಾಯಿತು. ಜೈನಮುನಿಯ ಅವರ ಪೂರ್ವಾಶ್ರಮದ ಅಣ್ಣನ ಮಗ, ಆಶ್ರಮದ ಟ್ರಸ್ಟ್ ಅಧ್ಯಕ್ಷರೂ ಆಗಿರುವ ಭೀಮಗೊಂಡ ಉಗಾರೆ ಅವರು ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು. ನಮೋಕಾರ ಮಂತ್ರ ಪಠಣ:ಮರಣೋತ್ತರ ಪರೀಕ್ಷೆ ಬಳಿಕ ಬೆಳಗಾವಿ ಜಿಲ್ಲಾಸ್ಪತ್ರೆಯಿಂದ ಕಾಮಕುಮಾರ ಮುನಿಶ್ರೀ ಅವರ ಪಾರ್ಥಿವ ಶರೀರವನ್ನು ನಂದಿ ಪರ್ವ

Jain muni Murder : ಜೈನಮುನಿ ಕಾಮಕುಮಾರ ನಂದಿ ಮಹಾರಾಜ್‌ ಪಂಚಭೂತಗಳಲ್ಲಿ ಲೀನ Read More »

ಇಂದಿರಾ ಕ್ಯಾಂಟೀನ್ ಅವ್ಯವಹಾರಗಳನ್ನೂ ರಿಪೇರಿ ಮಾಡ್ತೀನಿ: ಡಿ.ಕೆ ಶಿವಕುಮಾರ್

ಸಮಗ್ರ ನ್ಯೂಸ್: ಬೆಂಗಳೂರು ನಗರದಲ್ಲಿ ಪ್ರದಕ್ಷಿಣೆ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಇಂದಿರಾ ಕ್ಯಾಂಟೀನ್ ಅವ್ಯವಹಾರಗಳನ್ನೂ ರಿಪೇರಿ ಮಾಡ್ತೀನಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರು ನಗರದಲ್ಲಿ ಪ್ರದಕ್ಷಿಣೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ನಾನು ಯಾವ ಅಧಿಕಾರಿಗಳಿಗೂ ತಿಳಿಸದೆ ನಗರ ಪ್ರದಕ್ಷಿಣೆ ಮಾಡಿದ್ದೀನಿ. ತ್ಯಾಜ್ಯ ಸಂಸ್ಕರಣಾ ಕೇಂದ್ರಕ್ಕೆ ಭೇಟಿ ಮಾಡಿದ್ದೀನಿ. ಇಲ್ಲಿ ಅಧಿಕಾರಿಗಳು ಸರಿಯಾಗಿ ಪರಿಶೀಲನೆ ಮಾಡ್ತಿಲ್ಲ. ಕೆಲವರು ಕಸವನ್ನು ಪುಟ್‌ಪಾತ್‌ನಲ್ಲೇ ಡಂಪ್ ಮಾಡ್ತಿದ್ದಾರೆ. ಅದನ್ನ ಕಮಿಷನರ್‌ಗೆ ತೋರಿಸಿದ್ದೇನೆ. ಇದರ ಜವಾಬ್ದಾರಿ ಯಾರದ್ದು ಅನ್ನೋದನ್ನ ಫಿಕ್ಸ್

ಇಂದಿರಾ ಕ್ಯಾಂಟೀನ್ ಅವ್ಯವಹಾರಗಳನ್ನೂ ರಿಪೇರಿ ಮಾಡ್ತೀನಿ: ಡಿ.ಕೆ ಶಿವಕುಮಾರ್ Read More »

ಬೆಳ್ತಂಗಡಿಯ ಸೋಮಂತಡ್ಕದಲ್ಲಿ ಶ್ರೀ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 22ನೇ ನೂತನ ಶಾಖೆ ಉದ್ಘಾಟನೆ| ಸಂಘವು ಸಹಕಾರಿ‌ ಕ್ಷೇತ್ರದ ಪ್ರಬಲ ಶಕ್ತಿ – ಶಾಸಕ ಹರೀಶ್ ಪೂಂಜಾ ಅಭಿಮತ

ಸಮಗ್ರ ನ್ಯೂಸ್: ಸಹಕಾರಿ ಸಂಘಗಳು ಆರ್ಥಿಕವಾಗಿ ಪ್ರಬಲವಾಗಲು ಬೆಳ್ತಂಗಡಿ ತಾಲೂಕು ಸಮರ್ಥವಾಗಿದೆ. ಇದೇ ಕಾರಣದಿಂದ ವೆಂಕಟರಮಣ ಸೊಸೈಟಿ ತಾಲೂಕಿನಲ್ಲಿ ಐದು ಶಾಖೆಗಳನ್ನು ಪ್ರಾರಂಭಿಸಿದೆ. ದ.ಕ ಜಿಲ್ಲೆ ಸಹಕಾರಿ ಕ್ಷೇತ್ರದಲ್ಲಿ ಬೆಳವಣಿಗೆ ಕಾಣುತ್ತಿದೆ. ಸಹಕಾರಿ ಕ್ಷೇತ್ರ ಜನರಿಗೆ ಸಹಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ. ವೆಂಕಟರಮಣ ಸೊಸೈಟಿ ಉತ್ತಮ ಕಾರ್ಯ ನಿರ್ವಹಿಸುತ್ತಿದ್ದು ಆರ್ಥಿಕವಾಗಿ ಪ್ರಬಲ ಶಕ್ತಿಯಾಗಿ ಬೆಳೆದಿದೆ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅಭಿಪ್ರಾಯಪಟ್ಟರು. ಅವರು ಇಂದು(ಜು. 9) ಬೆಳ್ತಂಗಡಿಯ ಸೋಮಂತಡ್ಕದಲ್ಲಿ ಶ್ರೀ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಸುಳ್ಯ ಇದರ

ಬೆಳ್ತಂಗಡಿಯ ಸೋಮಂತಡ್ಕದಲ್ಲಿ ಶ್ರೀ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 22ನೇ ನೂತನ ಶಾಖೆ ಉದ್ಘಾಟನೆ| ಸಂಘವು ಸಹಕಾರಿ‌ ಕ್ಷೇತ್ರದ ಪ್ರಬಲ ಶಕ್ತಿ – ಶಾಸಕ ಹರೀಶ್ ಪೂಂಜಾ ಅಭಿಮತ Read More »

ಶಿವಮೊಗ್ಗದಲ್ಲಿ ನಡೆದ ಟ್ರಯಲ್‌ ಬ್ಲಾಸ್ಟ್‌ ಪ್ರಕರಣ|9 ಜನರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದ NIA

ಸಮಗ್ರ ನ್ಯೂಸ್: ಶಿವಮೊಗ್ಗ ಜಿಲ್ಲೆಯ ತುಂಗಾ ತೀರದಲ್ಲಿ ನಡೆದ ಟ್ರಯಲ್‌ ಬ್ಲಾಸ್ಟ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) 9 ಜನರ ವಿರುದ್ಧ ಶುಕ್ರವಾರ ಸಲ್ಲಿಸಿದ ಎರಡು ಚಾರ್ಜ್‌ಶೀಟ್‌ನಲ್ಲಿ ಸ್ಫೋಟಕ ಮಾಹಿತಿಯೊಂದು ಬಯಲಾಗಿದೆ. ರೋಬೋಟ್‌ಗಳ ಮೂಲಕ ವಿಧ್ವಂಸಕ ಕೃತ್ಯಕ್ಕೆ ಐಸಿಸ್(ISIS) ಸಂಚು ರೂಪಿಸಿತ್ತು ಎಂದು ತಿಳಿದುಬಂದಿದೆ. ಇದಕ್ಕಾಗಿ ಅವರು ಕೋರ್ಸ್‌ಗಳನ್ನು ಕಲಿಯಲು ಮುಂದಾಗಿದ್ದರು ಎಂದು ಎನ್‌ಐಎ ತನ್ನ ಚಾರ್ಜ್‌ಶೀಟ್‌ನಲ್ಲಿ ತಿಳಿಸಿದೆ. ಆರೋಪಿಗಳನ್ನು ಮೊಹಮ್ಮದ್ ಶಾರಿಖ್, ಮಾಜ್ ಮುನೀರ್ ಅಹಮದ್ , ಸೈಯದ್ ಯಾಸಿನ್ , ರೀಶಾನ್

ಶಿವಮೊಗ್ಗದಲ್ಲಿ ನಡೆದ ಟ್ರಯಲ್‌ ಬ್ಲಾಸ್ಟ್‌ ಪ್ರಕರಣ|9 ಜನರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದ NIA Read More »

ಇಂದಿನಿಂದ ಹಂಪಿಯಲ್ಲಿ ಜಿ-20 ಶೃಂಗಸಭೆ|ನವವಧುವಿನಂತೆ ಶೃಂಗಾರಗೊಂಡಿದೆ ವಿಶ್ವಪಾರಂಪರಿಕ ತಾಣ

ಸಮಗ್ರ ನ್ಯೂಸ್: ವಿಶ್ವ ವಿಖ್ಯಾತ ಹಂಪಿಯಲ್ಲಿ ಇದೇ ಮೊದಲ ಬಾರಿಗೆ ಜಿ-20 ಶೃಂಗಸಭೆ ನಡೆಯುತ್ತಿದೆ. ಜುಲೈ 9ರಿಂದ 16 ರವರೆಗೆ ನಡೆಯಲಿರುವ ಜಿ-20 ಶೃಂಗಸಭೆಗೆ ಹಂಪಿ ನವವಧುವಿನಂತೆ ಶೃಂಗಾರಗೊಂಡಿದೆ. ಹಿಂದೆಂದೂ ಕಾಣದಷ್ಟು ಅಭಿವೃದ್ಧಿ ಕಾರ್ಯಗಳನ್ನು ಜಿ-20 ಸಲುವಾಗಿ ಹಂಪಿಯಲ್ಲಿ ಕೈಗೊಳ್ಳಲಾಗಿದೆ. ಜಿ-20 ಶೃಂಗಸಭೆಗೆ ಈ ಬಾರಿಯ ಅಧ್ಯಕ್ಷೀಯ ರಾಷ್ಟ್ರ ಭಾರತವಾಗಿದೆ. ಅದಕ್ಕಾಗಿಯೇ ಅತಿ ಮುಖ್ಯವಾದ ಜಿ-20 ಶೃಂಗಸಭೆಯ 3ನೇ ಪ್ರಮುಖ ಸಭೆ ವಿಶ್ವಪಾರಂಪರಿಕ ತಾಣ ಹಂಪಿಯಲ್ಲಿ ಇಂದಿನಿಂದ 16 ರವರೆಗೆ ನಡೆಯಲಿದೆ. 3 ದಿನಗಳ ಕಾಲ ಸಾಂಸ್ಕೃತಿಕ

ಇಂದಿನಿಂದ ಹಂಪಿಯಲ್ಲಿ ಜಿ-20 ಶೃಂಗಸಭೆ|ನವವಧುವಿನಂತೆ ಶೃಂಗಾರಗೊಂಡಿದೆ ವಿಶ್ವಪಾರಂಪರಿಕ ತಾಣ Read More »