ರಾಜ್ಯ

ಪಿರಿಯಾಪಟ್ಟಣ: ನಿಂತಿದ್ದ ಟ್ರಾಕ್ಟರ್ ಗೆ ಕಾರು ಡಿಕ್ಕಿ| ಮೂವರು ಸ್ಪಾಟೌಟ್; ಕಾರ್ಯಾಚರಣೆಯಲ್ಲಿ ಭಾಗಿಯಾದ ಪುತ್ತೂರಿನ ಯುವಕರು

ಸಮಗ್ರ ನ್ಯೂಸ್: ಬೆಳ್ಳಂಬೆಳಗ್ಗೆ ನಿಂತಿದ್ದ ಟ್ರ್ಯಾಕ್ಟರ್​ಗೆ ಕಾರು ಡಿಕ್ಕಿಯಾಗಿ ಮೂವರು ಮೃತಪಟ್ಟಿರುವ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಕಂಪ್ಲಾಪುರ ಬಳಿ ನಡೆದಿದೆ. ಪಿರಿಯಾಪಟ್ಟಣದಿಂದ ಹುಣಸೂರಿಗೆ ತೆರಳುವಾಗ ಕಂಪ್ಲಾಪುರ ಬಳಿ ಇಂದು( ಜುಲೈ 18) ಮುಂಜಾನೆ 4.30ಕ್ಕೆ ಈ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ ಮುದಾಸೀರ್, ಮುಜಾಯಿದ್, ಅಹ್ಮದ್​​​ ಪಾಷಾ ಮೃತಪಟ್ಟಿದ್ದಾರೆ. ಇನ್ನುಳಿದ ಮೂವರಿಗೆ ಗಾಯಗಳಾಗಿದ್ದು, ಸ್ಥಳದಲ್ಲಿದ್ದ ಪುತ್ತೂರು ಮೂಲದ ಯುವಕರು ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸುವಲ್ಲಿ ನೆರವಾಗಿದ್ದಾರೆ. ಸ್ಥಳಕ್ಕೆ ಪಿರಿಯಾಪಟ್ಟಣ ಪೊಲೀಸರು ಭೇಟಿ

ಪಿರಿಯಾಪಟ್ಟಣ: ನಿಂತಿದ್ದ ಟ್ರಾಕ್ಟರ್ ಗೆ ಕಾರು ಡಿಕ್ಕಿ| ಮೂವರು ಸ್ಪಾಟೌಟ್; ಕಾರ್ಯಾಚರಣೆಯಲ್ಲಿ ಭಾಗಿಯಾದ ಪುತ್ತೂರಿನ ಯುವಕರು Read More »

ಉಡುಪಿ: ಡಿಕ್ಕಿಯಾದ ಕಾರನ್ನು ಎಳೆದೊಯ್ದ ಟ್ರಕ್| ಭಯಾನಕ ವಿಡಿಯೋ ವೈರಲ್

ಸಮಗ್ರ ನ್ಯೂಸ್: ಉಡುಪಿಯಲ್ಲಿ ಮೂವರನ್ನು ಹೊತ್ತೊಯ್ಯುತ್ತಿದ್ದ ಕಾರನ್ನು ಡಂಪರ್ ಟ್ರಕ್ ಎರಡು ಕಿ.ಮೀ ವರೆಗೆ ಎಳೆದುಕೊಂಡು ಹೋಗುತ್ತಿರುವುದನ್ನು ತೋರಿಸುವ ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. ವರದಿಗಳ ಪ್ರಕಾರ, ಎರಡು ವಾಹನಗಳು ಡಿಕ್ಕಿ ಹೊಡೆದು ಕಾರು ಟ್ರಕ್ ಅಡಿಯಲ್ಲಿ ಸಿಲುಕಿಕೊಂಡ ನಂತರ ಈ ಘಟನೆ ನಡೆದಿದೆ. ಸ್ಥಳೀಯ ನಿವಾಸಿಗಳು ವಾಹನವನ್ನು ಹಿಂಬಾಲಿಸಿ ಅಂತಿಮವಾಗಿ ಚಾಲಕನನ್ನು ನಿಲ್ಲಿಸಿದ್ದಾರೆ. ನಂತರ ಟ್ರಕ್ ಚಾಲಕನನ್ನು ಬಂಧಿಸಲಾಯಿತು.

ಉಡುಪಿ: ಡಿಕ್ಕಿಯಾದ ಕಾರನ್ನು ಎಳೆದೊಯ್ದ ಟ್ರಕ್| ಭಯಾನಕ ವಿಡಿಯೋ ವೈರಲ್ Read More »

ಸಿದ್ದಾಪುರ: ಮತ್ತೆ ಆತಂಕ ಮೂಡಿಸಿದ ಕಾಡಾನೆ ಹಿಂಡು

ಸಮಗ್ರ ನ್ಯೂಸ್: ಕೊಡಗು ಜಿಲ್ಲೆಯ ಸಿದ್ದಾಪುರ ಸಮೀಪದ ಗುಹ್ಯ ಗ್ರಾಮದಲ್ಲಿ ಕಾಡಾನೆ ಹಿಂಡು ಬೀಡುಬಿಟ್ಟಿದ್ದು ಗ್ರಾಮಸ್ಥರು ಆತoಕಗೊಂಡಿದ್ದಾರೆ. 26 ಕ್ಕೂ ಹೆಚ್ಚು ಕಾಡಾನೆಗಳಿರುವ ಹಿಂಡನ್ನು ಅರಣ್ಯ ಸಿಬ್ಬಂದಿಗಳು ಕಾಡಿಗೆ ಅಟ್ಟಿಸುವ ಪ್ರಯತ್ನ ಮುಂದುವರೆದಿದೆ. 14 ಅರಣ್ಯ ಸಿಬ್ಬಂದಿಗಳ ಕಾರ್ಯಾಚರಣೆಯಲ್ಲಿ ಕಾಡಾನೆಯ ಹಿಂಡನ್ನು ಬೀಟಿ ಕಾಡಿಗೆ ಅಟ್ಟಿಸಲಾಯಿತು. ಉಳಿದ ಕಾಡಾನೆಗಳನ್ನು ನಾಳೆ ಕಾರ್ಯಾಚರಣೆ ಮುಂದುವರಿಸಲಾಗುವುದು ಎಂದು ಅರಣ್ಯ ವಲಯ ಅರಣ್ಯ ಅಧಿಕಾರಿಗಳಾದ ಕೆ.ಎಂ ದೇವಯ್ಯ ಅವರು ತಿಳಿಸಿದ್ದಾರೆ.

ಸಿದ್ದಾಪುರ: ಮತ್ತೆ ಆತಂಕ ಮೂಡಿಸಿದ ಕಾಡಾನೆ ಹಿಂಡು Read More »

ರಾಜ್ಯದಲ್ಲಿ ಮುಂದಿನ ಐದು ದಿನ ಸಾಧಾರಣ ಮಳೆ ಸಾಧ್ಯತೆ| ಕರಾವಳಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ಸಮಗ್ರ ನ್ಯೂಸ್: ರಾಜ್ಯದಲ್ಲಿ ಇಂದಿನಿಂದ ಐದು ದಿನಗಳ ಕಾಲ ಸಾಧಾರಣ ಮಳೆಯಾಗಲಿದೆ.ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಇಂದು ಮತ್ತು ನಾಳೆ (ಜು.18, 19) ರಂದು ಭಾರಿ ಮಳೆಯಾಗಲಿದ್ದು ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಕರಾವಳಿಯಲ್ಲಿ ಬಿರುಗಾಳಿಯು 40 ರಿಂದ 45 ಕಿಮೀ ವೇಗದಲ್ಲಿ ಬೀಸಲಿದೆ. ಈ ಹಿನ್ನೆಲೆ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗೆ ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನಲ್ಲಿ ಸಾಧಾರಣ ಮಳೆಯಾಗಲಿದೆ.

ರಾಜ್ಯದಲ್ಲಿ ಮುಂದಿನ ಐದು ದಿನ ಸಾಧಾರಣ ಮಳೆ ಸಾಧ್ಯತೆ| ಕರಾವಳಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ Read More »

ಕೇರಳದ ಮಾಜಿ ಸಿಎಂ ಉಮ್ಮನ್ ಚಾಂಡಿ ನಿಧನ

ಸಮಗ್ರ ನ್ಯೂಸ್: ಕೇರಳದ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಹಿರಿಯ ನಾಯಕ ಉಮ್ಮನ್ ಚಾಂಡಿ (73) ನಿಧನರಾಗಿದ್ದಾರೆ. ಕ್ಯಾನ್ಸರ್ ನಿಂದ ಬಳಲುತ್ತಿದ್ದ ಉಮ್ಮನ್ ಚಾಂಡಿ ಇಂದು(ಜುಲೈ 18) ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಉಮ್ಮನ್ ಚಾಂಡಿ ನಿಧನಕ್ಕೆ ಕೇರಳ ಹಾಲಿ ಸಿಎಂ ಪಿಣರಾಯಿ ವಿಜಯನ್ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ. ಉಮ್ಮನ್ ಚಾಂಡಿ ಅವರು 1943, ಅಕ್ಟೋಬರ್ 31ರಂದು ಕೇರಳದ ಕೊಟ್ಟಾಯಂ ಜಿಲ್ಲೆಯ ಕುಮಾರಕೋಮ್ ನಲ್ಲಿ ಜನಿಸಿದ್ದು, ಪುತ್ತುಪಲ್ಲಿಯ ಸೇಂಟ್ ಜಾರ್ಜ್ ಶಾಲೆಯಲ್ಲಿ ಪ್ರೌಢ ಶಿಕ್ಷಣವನ್ನು

ಕೇರಳದ ಮಾಜಿ ಸಿಎಂ ಉಮ್ಮನ್ ಚಾಂಡಿ ನಿಧನ Read More »

ಭಕ್ತಾಧಿಗಳೇ ಗಮನಿಸಿ…| ಧಾರ್ಮಿಕ ದತ್ತಿ ದೇವಾಲಯಗಳಲ್ಲಿ ಮೊಬೈಲ್ ಬಳಕೆ ನಿಷೇಧಿಸಿ ರಾಜ್ಯ ಸರ್ಕಾರ ಆದೇಶ

ಸಮಗ್ರ ನ್ಯೂಸ್: ಇನ್ಮುಂದೆ ದೇವಸ್ಥಾನಗಳಲ್ಲಿ ಮೊಬೈಲ್ ಬಳಸುವಂತಿಲ್ಲ. ಈ ಬಗ್ಗೆ ಹಿಂದೂ ಧಾರ್ಮಿಕ ಹಾಗೂ ಧರ್ಮಾದಾಯ ದತ್ತಿಗಳ ಇಲಾಖೆ ಆದೇಶ ಹೊರಡಿಸಿದೆ. ಇಲಾಖೆಯ ವ್ಯಾಪ್ತಿಗೆ ಒಳಪಡುವ ಎಲ್ಲಾ ದೇವಾಲಯಗಳಲ್ಲಿ ಮೊಬೈಲ್ ಫೋನ್ ಬಳಕೆಗೆ ನಿಷೇಧ ಹೇರಲಾಗಿದ್ದು, ಇಲಾಖೆಯ ವ್ಯಾಪ್ತಿಯ ದೇವಾಲಯಗಳ ಆವರಣದಲ್ಲಿ ಮೊಬೈಲ್ ಬಳಕೆ ಮಾಡುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಕರ್ನಾಟಕ ಸರ್ಕಾರದ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯು ವ್ಯಾಪ್ತಿಯಲ್ಲಿ ಸುಮಾರು 30 ಸಾವಿರಕ್ಕೂ ಅಧಿಕ ದೇವಸ್ಥಾನಗಳಿವೆ. ಈ ಎಲ್ಲಾ ದೇವಾಲಯಗಳಲ್ಲಿ ಮೊಬೈಲ್

ಭಕ್ತಾಧಿಗಳೇ ಗಮನಿಸಿ…| ಧಾರ್ಮಿಕ ದತ್ತಿ ದೇವಾಲಯಗಳಲ್ಲಿ ಮೊಬೈಲ್ ಬಳಕೆ ನಿಷೇಧಿಸಿ ರಾಜ್ಯ ಸರ್ಕಾರ ಆದೇಶ Read More »

‘ಕಮಲ’ ಮುಡಿಯಲಿದ್ದಾಳೆ ‘ತೆನೆ ಹೊತ್ತ ಮಹಿಳೆ’| ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಫಿಕ್ಸ್

ಸಮಗ್ರ ನ್ಯೂಸ್: ಬಿಜೆಪಿಯನ್ನು ಕಟ್ಟಿಹಾಕಲು ಮಹಾಘಟಬಂಧನ್ ನಾಯಕರು ಬೆಂಗಳೂರಲ್ಲಿ ಇಂದಿನಿಂದ ಒಗ್ಗಟ್ಟು ಪ್ರದರ್ಶನಕ್ಕೆ ಸಜ್ಜಾಗಿದ್ದಾರೆ. ಆದ್ರೆ, ದಳಪತಿ ಹೆಚ್​ಡಿ ಕುಮಾರಸ್ವಾಮಿ ಬಿಜೆಪಿ ಜೊತೆ ಸಖ್ಯ ಬೆಳೆಸಲು ದೆಹಲಿಗೆ ತೆರಳುವ ಸಾಧ್ಯತೆ ದಟ್ಟವಾಗಿದೆ. ತೆನೆ ಹೊತ್ತ ಮಹಿಳೆ ಬಹುತೇಕ ಕಮಲ ಮುಡಿಯೋದು ಫಿಕ್ಸ್ ಆಗಿದ್ದು, ದೆಹಲಿಯಲ್ಲಿ ಅಂತಿಮ ಮುದ್ರೆ ಬೀಳುವ ಸಾಧ್ಯತೆ ದಟ್ಟವಾಗಿದೆ. ಇಂದು ಅಥವಾ ನಾಳೆ ಹೆಚ್‌.ಡಿ ಕುಮಾರಸ್ವಾಮಿ ದೆಹಲಿಗೆ ಪ್ರಯಾಣ ಬೆಳೆಸಲಿದ್ದು, NDA ಸಭೆಗೂ ಮುನ್ನ ಬಿಜೆಪಿ ನಾಯಕರ ಜೊತೆ ಮಾತುಕತೆ ನಡೆಸುವ ಸಾಧ್ಯತೆ ಇದೆ.

‘ಕಮಲ’ ಮುಡಿಯಲಿದ್ದಾಳೆ ‘ತೆನೆ ಹೊತ್ತ ಮಹಿಳೆ’| ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಫಿಕ್ಸ್ Read More »

ಕೊಟ್ಟಿಗೆಹಾರ: ಮಲೆನಾಡಿನಲ್ಲಿ ಸಂಭ್ರಮದ ಆಟಿ ಅಮಾವಾಸ್ಯೆ| ಆಟಿ ಕಷಾಯ ಕುಡಿದು ಸಂಭ್ರಮಿಸಿದ ಜನ

ಸಮಗ್ರ ನ್ಯೂಸ್: ಆಟಿ ಅಮವಾಸ್ಯೆಯಂದು ಹಾಲೆ (ಪಾಲೆ) ಕಷಾಯ ಕುಡಿಯುವ ಪದ್ದತಿ ಹಿಂದಿನಿಂದಲೂ ಬೆಳೆದು ಬಂದಿದೆ .. ಮಲೆನಾಡಿನಲ್ಲಿ ಆಷಾಢ ಮುಗಿದ ನಂತರ ದಕ್ಷಿಣ ಕನ್ನಡದಲ್ಲಿ ಆಶಾಡ ಪ್ರಾರಂಭವಾದ ದಿನ ಈ ಕಷಾಯ ಕುಡಿಯುವ ಪದ್ಧತಿ ಬೆಳೆದು ಬಂದಿದೆ ಮಲೆನಾಡು ಹಾಗೂ ಕರಾವಳಿ ಹೊಂದಿಕೊಂಡಿರುವ ಜಿಲ್ಲೆಯಾದ್ದರಿಂದ ಈ ಹಬ್ಬವನ್ನು ಎರಡು ಜಿಲ್ಲೆಗಳಲ್ಲಿ ಆಚರಣೆ ಮಾಡಲಾಗುತ್ತದೆ. ಮಲೆನಾಡಿಗರಿಗೆ ಆಷಾಢವು ಒಂದು ತಿಂಗಳ ಮೊದಲೇ ಆಚರಣೆ ಮಾಡಲಾಗುತ್ತದೆ. ಕರಾವಳಿಯಲ್ಲಿ ಒಂದು ತಿಂಗಳ ನಂತರ ಪ್ರಾರಂಭವಾಗುತ್ತದೆ. ಈ ದಿನ ಹಾಲೆ ಮರ

ಕೊಟ್ಟಿಗೆಹಾರ: ಮಲೆನಾಡಿನಲ್ಲಿ ಸಂಭ್ರಮದ ಆಟಿ ಅಮಾವಾಸ್ಯೆ| ಆಟಿ ಕಷಾಯ ಕುಡಿದು ಸಂಭ್ರಮಿಸಿದ ಜನ Read More »

ಪತ್ರಕರ್ತ‌ ನಿಶಾಂತ್ ಬಿಲ್ಲಂಪದವು ಮೇಲಿನ ದೌರ್ಜನ್ಯಕ್ಕೆ ಕಡಬ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಖಂಡನೆ|ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಸಮಗ್ರ ನ್ಯೂಸ್: ವಿಜಯವಾಣಿ ಮತ್ತು ದಿಗ್ವಿಜಯ ವಾಹಿನಿಯ ಪುತ್ತೂರು ವರದಿಗಾರರಾಗಿ ಕಾರ್ಯ ನಿರ್ವಹಿಸುತ್ತಿರುವ ನಿಶಾಂತ್ ಬಿಲ್ಲಂಪದವು ಅವರ ಮೇಲೆ ನಿನ್ನೆ (ಜು. 15) ಪುತ್ತೂರಿನ ಬಪ್ಪಳಿಗೆಯಲ್ಲಿ ನಡೆದಿರುವ ದೌರ್ಜನ್ಯವನ್ನು ಕಡಬ ತಾಲೂಕು ಪತ್ರಕರ್ತರ ಸಂಘ ಖಂಡಿಸಿದೆ. ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಾಗಿರುವ ನಿಶಾಂತ್ ಬಿಲ್ಲಂಪದವು ಅವರು ಕಾರ್ಯ ನಿರತರಾಗಿದ್ದ ವೇಳೆ ಅಮಾನವೀಯವಾಗಿ ವರ್ತಿಸಿ ಅವರಿಗೆ ಹಲ್ಲೆ ನಡೆಸಿ ಮೊಬೈಲ್ ಫೋನ್‌ ಹುಡಿ ಮಾಡಿ ಜೀವ ಬೆದರಿಕೆ‌ ಒಡ್ಡಿರುವ ಘಟನೆಯನ್ನು‌ ಕಡಬ ತಾಲೂಕು ಪತ್ರಕರ್ತರ ಸಂಘ ಗಂಭೀರವಾಗಿ ಪರಿಗಣಿಸುತ್ತದೆ.

ಪತ್ರಕರ್ತ‌ ನಿಶಾಂತ್ ಬಿಲ್ಲಂಪದವು ಮೇಲಿನ ದೌರ್ಜನ್ಯಕ್ಕೆ ಕಡಬ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಖಂಡನೆ|ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ Read More »

ಸುಂಟಿಕೊಪ್ಪ: ಶುದ್ಧ ನೀರಿನ ಘಟಕ ಉದ್ಘಾಟಿಸಿದ ಡಾ. ಮಂತರ್ ಗೌಡ

ಸಮಗ್ರ ನ್ಯೂಸ್:‌ ಸುಂಟಿಕೊಪ್ಪ ಗ್ರಾಮ ಪಂಚಾಯತ್ ವತಿಯಿಂದ ಮಾದಾಪುರ ರಸ್ತೆಯಲ್ಲಿರುವ ಜಿ.ಎಂ.ಪಿ. ಶಾಲಾ ಮೈದಾನದ ತಡೆಗೋಡೆ ಬದಿಯಲ್ಲಿ ನಿರ್ಮಿಸಿರುವ ನೂತನ ಶುದ್ಧ ನೀರಿನ ಘಟಕವನ್ನು ಶಾಸಕರಾದ ಡಾ. ಮಂತರ್ ಗೌಡ ಅವರು ಉದ್ಘಾಟಿಸಿದರು. ಪಂಚಾಯತಿ ಅಧ್ಯಕ್ಷರಾದ ಶಿವಮ್ಮ ಮಹೇಶ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷರಾದ ಕೆ.ಕೆ. ಪ್ರಸಾದ್ ಕುಟ್ಟಪ್ಪ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಬಿ. ಹೆಚ್. ವೇಣುಗೋಪಾಲ್ ಹಾಗೂ ಸದಸ್ಯರು, ಪಂಚಾಯತ್ ಸಿಬ್ಬಂದಿ ಉಪಸ್ಥಿತರಿದ್ದರು.ಡ್ರಮ್ ವಿತರಣೆ: ನಂತರ ಮೇಲಿನ ಪನ್ಯ ತೋಟದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಂಚಾಯತಿಯ

ಸುಂಟಿಕೊಪ್ಪ: ಶುದ್ಧ ನೀರಿನ ಘಟಕ ಉದ್ಘಾಟಿಸಿದ ಡಾ. ಮಂತರ್ ಗೌಡ Read More »