ರಾಜ್ಯ

ರೈತಬಾಂಧವರೇ ಗಮನಿಸಿ| ಬೆಳೆವಿಮೆ ಪ್ರೀಮಿಯಂ ಪಾವತಿಗೆ ಜು.31 ಕೊನೆದಿನ| ಅಡಿಕೆ, ಕಾಳುಮೆಣಸಿಗೆ ಎಷ್ಟು ಮೊತ್ತ ಗೊತ್ತಾ? ಇಲ್ಲಿದೆ ಸಂಪೂರ್ಣ ವಿವರ

ಸಮಗ್ರ ನ್ಯೂಸ್: 2023 -24 ನೇ ಸಾಲಿನ ಮರುವಿನ್ಯಾಸ ಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ಅಡಿಕೆ ಹಾಗೂ ಕಾಳುಮೆಣಸು, ಬೆಳೆಗಳಿಗೆ ಬೆಳೆ ವಿಮೆ ಪಾವತಿಸಲು ದಕ್ಷಿಣ ಕನ್ನಡ ರೈತರಿಗೆ ಕೊನೆಗೂ ಅವಕಾಶ ದೊರೆತಿದೆ. ಈ ಕುರಿತ ಆದೇಶವನ್ನು ರಾಜ್ಯ ಸರಕಾರ ಜು.19 ರಂದು ಹೊರಡಿಸಿದೆ. ಜು.31 ಪ್ರೀಮಿಯಂ ಪಾವತಿಸಲು ಅಂತಿಮ ದಿನವಾಗಿದೆ. ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ ಕಾರ್ಯ ರೂಪಕ್ಕೆ ಬಂದು 5 ವರ್ಷಗಳು ಸಂದಿದ್ದು, ಇಷ್ಟೂ ವರ್ಷಗಳಲ್ಲಿ ಜೂನ್‌ ತಿಂಗಳ ಆರಂಭದ

ರೈತಬಾಂಧವರೇ ಗಮನಿಸಿ| ಬೆಳೆವಿಮೆ ಪ್ರೀಮಿಯಂ ಪಾವತಿಗೆ ಜು.31 ಕೊನೆದಿನ| ಅಡಿಕೆ, ಕಾಳುಮೆಣಸಿಗೆ ಎಷ್ಟು ಮೊತ್ತ ಗೊತ್ತಾ? ಇಲ್ಲಿದೆ ಸಂಪೂರ್ಣ ವಿವರ Read More »

ಮಣಿಪುರದಲ್ಲಿ ಮಹಿಳೆಯರ ಬೆತ್ತಲೆಗೊಳಿಸಿ ಮೆರವಣಿಗೆ ಬಳಿಕ ಗ್ಯಾಂಗ್ ರೇಪ್| ಆರೋಪಿ ಕಿಂಗ್ ಪಿನ್ ಅರೆಸ್ಟ್

ಸಮಗ್ರ ನ್ಯೂಸ್: ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿದ ಘಟನೆಯ ಹಳೆಯ ವೀಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ಒಂದು ದಿನದ ನಂತರ, ಪ್ರಮುಖ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು ಹೆರದಾಸ್ (32) ಎಂದು ಗುರುತಿಸಲಾಗಿದ್ದು, ಆತ ಹಸಿರು ಅಂಗಿ ಧರಿಸಿರುವ ವಿಡಿಯೋ ವೈರಲ್ ಆಗಿದ್ದು, ತೌಬಲ್ ಜಿಲ್ಲೆಯಿಂದ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಣಿಪುರದಲ್ಲಿ ಕುಕಿ-ಜೋ ಬುಡಕಟ್ಟು ಜನಾಂಗಕ್ಕೆ ಸೇರಿದ ಇಬ್ಬರು ಮಹಿಳೆಯರನ್ನು ಪುರುಷರ ಗುಂಪೊಂದು ರಸ್ತೆಯಲ್ಲಿ ಬೆತ್ತಲೆಯಾಗಿ ಮೆರವಣಿಗೆ ಮಾಡಲಾಗಿತ್ತು.

ಮಣಿಪುರದಲ್ಲಿ ಮಹಿಳೆಯರ ಬೆತ್ತಲೆಗೊಳಿಸಿ ಮೆರವಣಿಗೆ ಬಳಿಕ ಗ್ಯಾಂಗ್ ರೇಪ್| ಆರೋಪಿ ಕಿಂಗ್ ಪಿನ್ ಅರೆಸ್ಟ್ Read More »

ಹವಾಮಾನ ವರದಿ| ರಾಜ್ಯಾದ್ಯಂತ ಬಿರುಗಾಳಿ ಸಹಿತ ಭಾರೀ ಮಳೆ ಸಾಧ್ಯತೆ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಕರಾವಳಿ ಜಿಲ್ಲೆಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಬಿರುಗಾಳಿ ಸಹಿತ ಉತ್ತಮ ಮಳೆಯಾಗಲಿದ್ದು ಕರಾವಳಿ ಭಾಗದಲ್ಲಿ 55 ಕಿ.ಮೀ. ವೇಗದಲ್ಲಿ ಬಿರುಗಾಳಿ ಬೀಸಲಿದೆ. ಭಾರಿ ಅಲೆಗಳು ಏಳಲಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಭಾರಿ ಮಳೆ ಹಾಘೂ ಬಿರುಗಾಳಿ ಇರುವ ಕಾರಣ ಸಮುದ್ರಕ್ಕೆ ಮೀನುಗಾರರು ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಜೊತೆಗೆ ಅಪಾಯದ ಮಟ್ಟ ಹೆಚ್ಚಿದ್ದು ಸಮುದ್ರದ ತೀರಕ್ಕೆ ತೆರಳದಂತೆ ಪ್ರವಾಸಿಗರು ಮತ್ತು ಸ್ಥಳೀಯರಿಗೂ ಸೂಚನೆ ನೀಡಲಾಗಿದೆ. ಇನ್ನು ಉತ್ತರ ಕನ್ನಡ ಜಿಲ್ಲೆಯ

ಹವಾಮಾನ ವರದಿ| ರಾಜ್ಯಾದ್ಯಂತ ಬಿರುಗಾಳಿ ಸಹಿತ ಭಾರೀ ಮಳೆ ಸಾಧ್ಯತೆ Read More »

ಟೊಮ್ಯಾಟೊ ಮೇಲೆ ಸಬ್ಸಿಡಿ ನೀಡಿದ ಕೇಂದ್ರ

ಸಮಗ್ರ ನ್ಯೂಸ್: ಕೇಂದ್ರ ಸರ್ಕಾರವು ಸಬ್ಸಿಡಿ ಟೊಮೆಟೊ ಬೆಲೆಯನ್ನು ಗುರುವಾರದಿಂದ ಪ್ರತಿ ಕೆ.ಜಿ.ಗೆ 80 ರೂ.ಗಳಿಂದ 70 ರೂ.ಗೆ ಇಳಿಸಿದೆ. ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ (NCCF) ಮತ್ತು ನ್ಯಾಷನಲ್ ಅಗ್ರಿಕಲ್ಚರಲ್ ಕೋ-ಆಪರೇಟಿವ್ ಮಾರ್ಕೆಟಿಂಗ್ ಫೆಡರೇಶನ್ ಆಫ್ ಇಂಡಿಯಾ (NAFED) ಮೂಲಕ ದೆಹಲಿ-ಎನ್ಸಿಆರ್ ಮತ್ತು ಇತರ ಕೆಲವು ಪ್ರಮುಖ ನಗರಗಳಲ್ಲಿ ಕೇಂದ್ರವು ಜನರಿಗೆ ಕೆಜಿಗೆ 80 ರೂ.ಗಳ ಸಬ್ಸಿಡಿ ದರದಲ್ಲಿ ಟೊಮೆಟೊವನ್ನು ಮಾರಾಟ ಮಾಡುತ್ತಿದೆ. ಟೊಮ್ಯಾಟೊದ ಅಖಿಲ ಭಾರತ ಸರಾಸರಿ ಚಿಲ್ಲರೆ ಬೆಲೆಗಳು ಪ್ರತಿ ಕೆ.ಜಿ.ಗೆ ಸುಮಾರು

ಟೊಮ್ಯಾಟೊ ಮೇಲೆ ಸಬ್ಸಿಡಿ ನೀಡಿದ ಕೇಂದ್ರ Read More »

ಇಂದಿನಿಂದ (ಜು.20) ಸಂಸತ್ ಮುಂಗಾರು ಅಧಿವೇಶನ|

ಸಮಗ್ರ ನ್ಯೂಸ್ : ಇಂದಿನಿಂದ 17 ದಿನಗಳ ಕಾಲ ಸಂಸತ್ ಮುಂಗಾರು ಅಧಿವೇಶನ ನಡೆಯಲಿದ್ದು, ಹಲವು ವಿಷಗಳನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಪ್ರತಿಪಕ್ಷಗಳು ಸಜ್ಜಾಗಿದ್ದು, ಅದಕ್ಕೆ ತಿರುಗೇಟು ನೀಡಲು ಕೇಂದ್ರ ಸರ್ಕಾರ ಕೂಡ ಸಜ್ಜಾಗಿದೆ. ದೆಹಲಿ ಸುಗ್ರೀವಾಜ್ಞೆ ಸೇರಿದಂತೆ 21 ಮಸೂದೆಗಳನ್ನು ಅಧಿವೇಶನದಲ್ಲಿ ಮಂಡಿಸಲಾಗುವುದು. ಮಣಿಪುರ ಹಿಂಸಾಚಾರ, ಅನೇಕ ರಾಜ್ಯಗಳಲ್ಲಿ ವಿಪಕ್ಷ ನಾಯಕರ ಮೇಲೆ ಕೇಂದ್ರೀಯ ತನಿಖಾ ಸಂಸ್ಥೆಗಳ ದಾಳಿ, ಟೊಮೆಟೊ ದರ ಹೆಚ್ಚಳ, ಅಗತ್ಯ ವಸ್ತುಗಳ ಬೆಲೆ ಏರಿಕೆ ಸೇರಿದಂತೆ ಹಲವು ವಿಷಯಗಳು ಬಿರುಗಾಳಿ

ಇಂದಿನಿಂದ (ಜು.20) ಸಂಸತ್ ಮುಂಗಾರು ಅಧಿವೇಶನ| Read More »

ಚಲಿಸುತ್ತಿದ್ದ ಬಸ್ ಬೆಂಕಿ ಹತ್ತಿಕೊಂಡು ಭಸ್ಮ| ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ‌ ಭಾರೀ ಅನಾಹುತ

ಸಮಗ್ರ ನ್ಯೂಸ್: ಸಾರಿಗೆ ಬಸ್ ಚಾಲನೆಯ ವೇಳೆಯಲ್ಲಿ ಇಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಇಲ್ಲಿನ ನಗರ ಸಾರಿಗೆ ಬಸ್ ನಲ್ಲಿ ಬೆಂಕಿ ಕಂಡು ಚಾಲಕ ಪ್ರಯಾಣಿಕರನ್ನು ಕೆಳಗೆ ಇಳಿಸಿದ ಕೆಲವೇ ಕ್ಷಣಗಳಲ್ಲಿ ನಡುರಸ್ತೆಯಲ್ಲಿ ಬಸ್ ಧಗಧಗಿಸಿ ಹೊತ್ತಿ ಉರಿದಿದೆ. ದಾವಣಗೆರೆಯ ನಿಟ್ಟುವಳ್ಳಿಯ 60 ಅಡಿ ರಸ್ತೆಯಲ್ಲಿ ಇಂದು ನಗರ ಸಾರಿಗೆ ಬಸ್ಸಿನ ಇಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಚಾಲಕ, ಕೂಡಲೇ ಬಸ್ ನಿಲ್ಲಿಸಿ ಪ್ರಯಾಣಿಕರನ್ನು ಕೆಳಗಿಳಿಸಿದ್ದಾರೆ. ಹೀಗಾಗಿ ಮುಂದಾಗಲಿದ್ದ ದೊಡ್ಡ

ಚಲಿಸುತ್ತಿದ್ದ ಬಸ್ ಬೆಂಕಿ ಹತ್ತಿಕೊಂಡು ಭಸ್ಮ| ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ‌ ಭಾರೀ ಅನಾಹುತ Read More »

ತಾಯಿ, ತಂಗಿಯನ್ನು ತೋರಿಸಿ‌ ಹಿಂದೂ ಮನೆ ಬಾಡಿಗೆ ಪಡೆದಿದ್ದ ಉಗ್ರ!! ರೂಂನಲ್ಲೇ ಕುಳಿತು ವಿಧ್ವಂಸಕ ಕೃತ್ಯಕ್ಕೆ ಸಂಚು

ಸಮಗ್ರ ನ್ಯೂಸ್: ರಾಜ್ಯ‌ ರಾಜಧಾನಿ ಬೆಂಗಳೂರಿನಲ್ಲಿ ವಿಧ್ವಂಸಕ ಸ್ಫೋಟ ನಡೆಸಲು ಸ್ಕೆಚ್‌ ಹಾಕುವ ವೇಳೆ ಬಂಧಿತರಾದ ಐವರು ಶಂಕಿತ ಉಗ್ರರು ತಮ್ಮ ಕಾರ್ಯಸಾಧನೆಗಾಗಿ ಹಲವಾರು ತಂತ್ರಗಳನ್ನು ಬಳಸಿರುವುದು ಬಯಲಾಗಿದೆ. ಬೆಂಗಳೂರಿನ ಸಿಸಿಬಿ ಪೊಲೀಸರು ಬೆಂಗಳೂರಿನ ಕನಕ ನಗರದ ಸುಲ್ತಾನಾ ಪಾಳ್ಯದ ಮಸೀದಿ ಬಳಿ ಟೆರರ್‌ ಮೀಟಿಂಗ್‌ ನಡೆಯುತ್ತಿದ್ದ ವೇಳೆ ದಾಳಿ ಮಾಡಿ ಸುಹೈಲ್, ಉಮರ್, ತಬ್ರೇಜ್, ಮುದಾಸಿರ್, ಫೈಜಲ್‌ ಮತ್ತು ರಬ್ಬಾನಿ ಎಂಬವರನ್ನು ಬಂಧಿಸಿದ್ದಾರೆ. ಈ ಐವರು ಆರೋಪಿಗಳು ಕನಕನಗರದ ಒಂದು ಮನೆಯಲ್ಲಿ ವಾಸವಾಗಿದ್ದರು. ಅವರು ಈ

ತಾಯಿ, ತಂಗಿಯನ್ನು ತೋರಿಸಿ‌ ಹಿಂದೂ ಮನೆ ಬಾಡಿಗೆ ಪಡೆದಿದ್ದ ಉಗ್ರ!! ರೂಂನಲ್ಲೇ ಕುಳಿತು ವಿಧ್ವಂಸಕ ಕೃತ್ಯಕ್ಕೆ ಸಂಚು Read More »

‘ಅಲ್ಲಾ’ನನ್ನು‌ ನಂಬಿರುವ ನಾವು ‘ವಂದೇ ಮಾತರಂ’ ಹೇಳಲಾಗದು| ಎಸ್ ಪಿ ಶಾಸಕನ ವಿವಾದಾತ್ಮಕ ಹೇಳಿಕೆ

ಸಮಗ್ರ ನ್ಯೂಸ್: ಸಮಾಜವಾದಿ ಪಕ್ಷದ ಶಾಸಕರೊಬ್ಬರು ವಂದೇ ಮಾತರಂ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಬೆನ್ನಲ್ಲೇ ಮಹಾರಾಷ್ಟ್ರದ ವಿಧಾನಸಭೆ ಅಧಿವೇಶನದಲ್ಲಿ ಕೋಲಾಹಲ ಉಂಟಾಗಿ ಸದನವನ್ನು ಮುಂದೂಡಲಾಗಿದೆ. ಮನ್​ಖುರ್ದ್​ ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಅಬು ಅಜ್ಮಿ ನಾವು ಅಲ್ಲಾನನ್ನು ನಂಬುವುದರಿಂದ ವಂದೇ ಮಾತರಂಗೆ ತಲೆಬಾಗಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ವಿವಾದದ ಕಿಡಿಯನ್ನು ಹೊತ್ತಿಸಿದ್ದಾರೆ. ಸಂಭಾಜಿನಗರ ಜಿಲ್ಲೆಯಲ್ಲಿ ನಡೆದ ಗಲಭೆಯನ್ನು ಸದನದಲ್ಲಿ ಪ್ರಸ್ತಾಪಿಸುವ ವೇಳೆ ವಂದೇ ಮಾತರಂ ಪಠಣಕ್ಕೆ ಅಸಮ್ಮತಿ ಸೂಚಿಸಿ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

‘ಅಲ್ಲಾ’ನನ್ನು‌ ನಂಬಿರುವ ನಾವು ‘ವಂದೇ ಮಾತರಂ’ ಹೇಳಲಾಗದು| ಎಸ್ ಪಿ ಶಾಸಕನ ವಿವಾದಾತ್ಮಕ ಹೇಳಿಕೆ Read More »

ಪ್ರಾಮಾಣಿಕ ಗೃಹರಕ್ಷಕರೇ ದೇಶದ ನಿಜವಾದ ಆಸ್ತಿ: ಡಾ|ಚೂಂತಾರು

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಸುರತ್ಕಲ್ ಘಟಕದ ಗೃಹರಕ್ಷಕಿಯಾದ ಸರಿತಾ ಇವ್ರು ಪ್ರಸ್ತುತ 2015ರಲ್ಲಿ ಗೃಹರಕ್ಷಕದಳದ ಸದಸ್ಯನಾಗಿ ಸೇರ್ಪಡೆಯಾಗಿ, 8 ವರ್ಷಗಳಿಂದ ಸ್ವಾರ್ಥ ರಹಿತ ನಿಷ್ಕಾಮ ಸೇವೆಯನ್ನು ಸಲ್ಲಿಸುತ್ತಾ ಬಂದವರು. ಇವರ ಸೇವಾ ಅವಧಿಯಲ್ಲಿ ಅನೇಕ ಬಂದೋಬಸ್ತು ಕರ್ತವ್ಯ, ಕವಾಯತು, ಚುನಾವಣಾ ಕರ್ತವ್ಯಗಳನ್ನು ನಿರ್ವಹಿಸಿರುತ್ತಾರೆ. ಇವರು ಒರ್ವ ದಕ್ಷ, ಪ್ರಾಮಾಣಿಕ ಮತ್ತು ಮಾದರಿ ಗೃಹರಕ್ಷಕರಾಗಿದ್ದು, ಸುರತ್ಕಲ್ ಗೃಹರಕ್ಷಕದಳದ ಸಕ್ರಿಯ ಸದಸ್ಯರಾಗಿರುತ್ತಾರೆ. ಅವರ ಸೇವೆಯನ್ನು ಗುರುತಿಸಿ ಗೌರವಿಸಿ ಅವರನ್ನು ಸನ್ಮಾನಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ

ಪ್ರಾಮಾಣಿಕ ಗೃಹರಕ್ಷಕರೇ ದೇಶದ ನಿಜವಾದ ಆಸ್ತಿ: ಡಾ|ಚೂಂತಾರು Read More »

ವಿಧಾನಸೌಧ ಕಾರಿಡಾರ್ ನಲ್ಲಿ ಅಸ್ವಸ್ಥಗೊಂಡು ಕುಸಿದು ಬಿದ್ದ ಶಾಸಕ ಯತ್ನಾಳ್

ಸಮಗ್ರ ನ್ಯೂಸ್: ಹತ್ತು ಶಾಸಕರನ್ನು ವಿಧಾನ ಸಭೆಯಿಂದ ಅಮಾನತ್ತು ಮಾಡಲಾದ ಹಿನ್ನೆಲೆಯಲ್ಲಿ ಮಾರ್ಷಲ್ ಗಳು ಶಾಸಕರನ್ನು ಹೊತ್ತು ಹೊರ ಹಾಕುವ ವೇಳೆ ಪಬಿಜೆಪಿ ಶಾಸಕರು ಪ್ರತಿಭಟನೆ ಮಾಡುತ್ತಿದ್ದರು, ಬಸವನಗೌಡ ಯತ್ನಾಳ್ ವಿಧಾನ ಸೌಧದ ಕಾರಿಡಾರ್ ನಲ್ಲಿ ಕುಸಿದು ಬಿದ್ದರು. ಗದ್ದಲದ ವೇಳೆ ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಅಸ್ವಸ್ಥ, ಬಿಪಿ ಜಾಸ್ತಿಯಾಗಿ ಕುಸಿದು ಬಿದ್ದಿದ್ದಾರೆ ಎನ್ನಲಾಗಿದೆ. ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅವರನ್ನು ತುರ್ತುವಾಹನದ ಮೂಲಕ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಪೀಕರ್ ನಿಲುವು ಖಂಡಿಸಿ ಬಿಜೆಪಿ

ವಿಧಾನಸೌಧ ಕಾರಿಡಾರ್ ನಲ್ಲಿ ಅಸ್ವಸ್ಥಗೊಂಡು ಕುಸಿದು ಬಿದ್ದ ಶಾಸಕ ಯತ್ನಾಳ್ Read More »