ರಾಜ್ಯ

ಮಡಿಕೇರಿ:ಮರಗೋಡಿನಲ್ಲಿ ಅಟ್ಟಹಾಸ ಮೆರೆದಿದ್ದ ಪುಂಡಾನೆ ಸೆರೆ

ಸಮಗ್ರ ನ್ಯೂಸ್: ಮಡಿಕೇರಿಯ ಅರೆಕಾಡು ಸಮೀಪದ ಮದರ ಕುಪ್ಪೆಯಲ್ಲಿ ಪುಂಡಾಟ ಮೆರೆದ ಕಾಡಾನೆಯನ್ನು ಸೆರೆ ಹಿಡಿಯಲಾಗಿದೆ. ಅರೆಕಾಡು ಗ್ರಾಮದಲ್ಲಿ ಆ. 13ರಂದು ಓರ್ವನನ್ನು ಬಲಿ ಪಡೆದಿದ್ದ ಕಾಡಾನೆಯನ್ನು ಆ. 15ರಂದು ಸೆರೆ ಹಿಡಿಯಲಾಗಿದೆ. ಸುಮಾರು 150 ಅರಣ್ಯ ಇಲಾಖಾ ಸಿಬ್ಬಂದಿಗಳ ಕಾರ್ಯಚರಣೆ ಯಶಸ್ವಿಯಾಗಿದ್ದು, ಅಟ್ಟಹಾಸ ಮೆರೆದ ಆನೆಯ ಸೆರೆಯಿಂದ ಗ್ರಾಮಸ್ಥರಿಗೆ ನಿಟ್ಟುಸಿರು ಬಿಟ್ಟಂತಾಗಿದೆ.

ಮಡಿಕೇರಿ:ಮರಗೋಡಿನಲ್ಲಿ ಅಟ್ಟಹಾಸ ಮೆರೆದಿದ್ದ ಪುಂಡಾನೆ ಸೆರೆ Read More »

ದಿಟ್ಟ ಪತ್ರಕರ್ತೆ ವಿಜಯಲಕ್ಷ್ಮೀ ಶಿಬರೂರು ವಿರುದ್ದ ಪ್ರಕರಣ ದಾಖಲು| ವಿಟ್ಲ ಠಾಣೆಯಲ್ಲಿ ದೂರು ದಾಖಲಿಸಿದ ಪೊಲೀಸರು

ಸಮಗ್ರ ನ್ಯೂಸ್: ದಿಟ್ಟ ಪತ್ರಕರ್ತೆ ವಿಜಯಲಕ್ಷ್ಮೀ ಶಿಬರೂರು ವಿರುದ್ದ ಪ್ರಕರಣ ದಾಖಲಾಗಿದೆ. ತಮ್ಮ ವಿಜಯ TIMES ಎಂಬ ಯೂಟ್ಯೂಬ್‌ ವಾಹಿನಿಯಲ್ಲಿ ‘ದ.ಕ ಜಿಲ್ಲೆಯಲ್ಲಿ ಭರ್ಜರಿ ಬಾಕ್ಸೈಟ್ ಲೂಟಿ’ ಎಂಬ ಕಾರ್ಯಕ್ರಮವನ್ನು ಜಾಲತಾಣದಲ್ಲಿ ಪ್ರಸಾರ ಮಾಡಿ, ಪೊಲೀಸರ ವೀಡಿಯೋ ಚಿತ್ರೀಕರಿಸಿ ಇದರಿಂದ ಮಾಮೂಲು ಸಂದಾಯವಾಗುತ್ತಿದೆ ಎಂಬುದಾಗಿ ವರದಿ ಮಾಡಿದ್ದರು. ಈ ಕುರಿತು ವಿಜಯಲಕ್ಷ್ಮೀ ಶಿಬರೂರು ವಿರುದ್ದ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜು.17ರಂದು ಬಂಟ್ವಾಳ ತಾಲೂಕು ಸಾಲೆತ್ತೂರು ಗ್ರಾಮದ ಮೆದು ಎಂಬಲ್ಲಿರುವ ಪೊಲೀಸ್ ಚೆಕ್ ಪೋಸ್ಟ್ ಪರಿಸರದಲ್ಲಿ

ದಿಟ್ಟ ಪತ್ರಕರ್ತೆ ವಿಜಯಲಕ್ಷ್ಮೀ ಶಿಬರೂರು ವಿರುದ್ದ ಪ್ರಕರಣ ದಾಖಲು| ವಿಟ್ಲ ಠಾಣೆಯಲ್ಲಿ ದೂರು ದಾಖಲಿಸಿದ ಪೊಲೀಸರು Read More »

ಮೈಸೂರು:ರಾಜ್ಯದ ಮೊದಲ ಬೀದಿ ನಾಯಿಗಳ ಪುನರ್ವಸತಿ ಕೇಂದ್ರ ಉದ್ಘಾಟನೆಗೆ ಸಿದ್ಧ

ಸಮಗ್ರನ್ಯೂಸ್: ರಾಜ್ಯದಲ್ಲಿ ಮೊದಲ ಬಾರಿಗೆ ಮೈಸೂರಿನ ಮಹಾನಗರ ಪಾಲಿಕೆಯ ವತಿಯಿಂದ ಬೀದಿ ನಾಯಿಗಳ ಪುನರ್ವಸತಿ ಕೇಂದ್ರ ನಿರ್ಮಾಣಗೊಂಡಿದೆ. ಇದು ಹಲವಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಈ ಮೂಲಕ ರಾಜ್ಯದಲ್ಲಿ ನಿರ್ಮಾಣಗೊಳ್ಳುತ್ತಿರುವ ಮೊದಲ ‘ಬೀದಿ ನಾಯಿಗಳ ಆರೈಕೆ ಕೇಂದ್ರ’ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಮೈಸೂರಿನ ಹೊರವಲಯದ ಎಚ್.ಡಿ.ಕೋಟೆ ರಸ್ತೆಯ ರಾಯನಕೆರೆ ಬಳಿ ಬೀದಿ ನಾಯಿಗಳ ಪುನರ್ವಸತಿ ಕೇಂದ್ರ ಉದ್ಘಾಟನೆಗೆ ಸಿದ್ಧವಾಗಿದೆ. ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಕೇಂದ್ರ ಸರ್ಕಾರದ 2.50 ಕೋಟಿ ರೂಪಾಯಿ ಅನುದಾನದಲ್ಲಿ ನಿರ್ಮಾಣವಾಗಿರುವ

ಮೈಸೂರು:ರಾಜ್ಯದ ಮೊದಲ ಬೀದಿ ನಾಯಿಗಳ ಪುನರ್ವಸತಿ ಕೇಂದ್ರ ಉದ್ಘಾಟನೆಗೆ ಸಿದ್ಧ Read More »

ವೈಟ್ ಬೋರ್ಡ್ ವಾಹನ ಇರುವವರ ಬಿಪಿಎಲ್ ಕಾರ್ಡ್ ರದ್ದತಿಗೆ ಮುಂದಾದ ಆಹಾರ ಇಲಾಖೆ| RTOದಿಂದ ಮಾಹಿತಿ ಪಡೆದುಕೊಂಡು ಸರ್ವೆಗೆ ನಿರ್ಧಾರ

ಸಮಗ್ರ ನ್ಯೂಸ್: ವೈಟ್ ಬೋರ್ಡ್ ಕಾರು ಇರುವವರಿಗೆ ಪಡಿತರ ಚೀಟಿಯ ರದ್ದು ಪ್ರಕ್ರಿಯೆ ಸರ್ಕಾರ ಶುರು ಮಾಡಿದೆ. ಆಹಾರ ಇಲಾಖೆಯಿಂದ ನಾಲ್ಕು ಚಕ್ರ ವಾಹನಗಳ ಸರ್ವೆ ನಡೆಯುತ್ತಿದೆ. ಅನ್ನಭಾಗ್ಯ ಯೋಜನೆ ಜಾರಿಯಾಗಿ 5 ಕೆ.ಜಿ ಉಚಿತ ಅಕ್ಕಿ ವಿತರಣೆ ಮತ್ತು 5 ಕೆ.ಜಿಗೆ ಅಕ್ಕಿಗೆ 170 ರೂಪಾಯಿ ಹಣ ಪಡಿತರ ಚೀಟಿದಾರರಿಗೆ ತಲುಪಿದೆ. ಈ ಮಧ್ಯೆ ವೈಟ್‍ಬೋರ್ಡ್ ಕಾರು ಇರುವ ಕಾರ್ಡ್‌ಗಳನ್ನು ರದ್ದು ಮಾಡಲು ಮುಂದಾಗಿದೆ. ಈ ಪದ್ಧತಿ ಮೊದಲಿನಿಂದ ಇದೆ ಎಂದು ಹೇಳಲಾಗ್ತಿದ್ದು, ಈ ವರ್ಷ

ವೈಟ್ ಬೋರ್ಡ್ ವಾಹನ ಇರುವವರ ಬಿಪಿಎಲ್ ಕಾರ್ಡ್ ರದ್ದತಿಗೆ ಮುಂದಾದ ಆಹಾರ ಇಲಾಖೆ| RTOದಿಂದ ಮಾಹಿತಿ ಪಡೆದುಕೊಂಡು ಸರ್ವೆಗೆ ನಿರ್ಧಾರ Read More »

ಹವಾಮಾನ ವರದಿ| ರಾಜ್ಯದಲ್ಲಿ ಮತ್ತೆ ಮುಂಗಾರು ಚುರುಕು| ಆ.20ರ ವರೆಗೆ ಬಿರುಸಿನ ಮಳೆ ಮುನ್ಸೂಚನೆ

ಸಮಗ್ರ ನ್ಯೂಸ್: ರಾಜ್ಯದಾದ್ಯಂತ ಮತ್ತೆ ಮುಂಗಾರು ಚುರುಕು ಪಡೆದಿದ್ದು, ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮಳೆಯಾಗಿದೆ. ಆ.20ರವರೆಗೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಉಳಿದಂತೆ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಕೊಪ್ಪಳ, ವಿಜಯಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಮಂಡ್ಯ, ಮೈಸೂರು,

ಹವಾಮಾನ ವರದಿ| ರಾಜ್ಯದಲ್ಲಿ ಮತ್ತೆ ಮುಂಗಾರು ಚುರುಕು| ಆ.20ರ ವರೆಗೆ ಬಿರುಸಿನ ಮಳೆ ಮುನ್ಸೂಚನೆ Read More »

ಕೈಗೆಟುಕುವ ದರಕ್ಕೆ ಕೆಂಪು ಸುಂದರಿ| ಕಣ್ಣೀರು ತರಿಸುತ್ತಿದೆ ಈರುಳ್ಳಿ

ಸಮಗ್ರ ನ್ಯೂಸ್: ಕಳೆದ ಮೂರು ತಿಂಗಳಿನಿಂದ ರಾಕೆಟ್ ವೇಗದಲ್ಲಿ ಬೆಲೆ ಏರಿಕೆಯಾಗಿದ್ದ ಟೊಮ್ಯಾಟೊ ಬೆಲೆ ಇದೀಗ ದಿಢೀರ್ ಕುಸಿಯುತ್ತಿದ್ದಂತೆ ಮಾರುಕಟ್ಟೆಯಲ್ಲಿ ಈರುಳ್ಳಿ ದರ ಕಣ್ಣಲ್ಲಿ ನೀರು ಬರಿಸುತ್ತಿದೆ. ಟೊಮ್ಯಾಟೊ ಬೆಲೆ ಇಳಿಮುಖವಾಗುತ್ತಿದ್ದಂತೆ ಕೊಂಚ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದ ಗ್ರಾಹಕರಿಗೆ ಇದೀಗ ಈರುಳ್ಳಿ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ಆತಂಕ ಸೃಷ್ಟಿಸಿದೆ. ಮೂಲಗಳ ಪ್ರಕಾರ ದೇಶದ ಪ್ರಮುಖ ರಾಜ್ಯಗಳಾದ ಉತ್ತರ ಪ್ರದೇಶ, ಮಹಾರಾಷ್ಟ್ರ ಸೇರಿದಂತೆ ಮತ್ತಿತರ ಕಡೆ ಈ ಬಾರಿ ವಾಡಿಕೆಗಿಂತ ಮಳೆ ಕಡಿಮೆಯಾಗಿರುವುದರಿಂದ ಈರುಳ್ಳಿ ಬೆಳೆಯು ಬಹುತೇಕ

ಕೈಗೆಟುಕುವ ದರಕ್ಕೆ ಕೆಂಪು ಸುಂದರಿ| ಕಣ್ಣೀರು ತರಿಸುತ್ತಿದೆ ಈರುಳ್ಳಿ Read More »

ಪ್ರೇಮಿಯನ್ನು ಕೂಡಲು ಪತಿಯನ್ನೇ ಕೊಂದ ಪತ್ನಿ| ನಿದ್ದೆ ಮಾತ್ರೆ ನೀಡಿ ಚಿರನಿದ್ರೆಗೆ ಕಳುಹಿಸಿದ ಅರ್ಧಾಂಗಿ!!

ಸಮಗ್ರ ನ್ಯೂಸ್: ಪ್ರಿಯತಮನ ಜೊತೆ ಸೇರಲು‌ ತಾಳಿ ಕಟ್ಟಿದ ಪತಿಗೇ ಪತ್ನಿ ಹಳ್ಳ ತೋಡಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಹನುಮನ ಹಳ್ಳಿಯಲ್ಲಿ ನಡೆದಿದೆ. ಆರೋಪಿಯನ್ನು ಇಲ್ಲಿನ ನಿವಾಸಿ ಪಾವನ ಎಂದು ಗುರುತಿಸಲಾಗಿದ್ದು, ನವೀನ್(28) ಮೃತ ದುರ್ದೈವಿ. ಆರೋಪಿ ಪಾವನ ತನ್ನ ಪ್ರೇಮಿ ಸಂಜಯ್ ನ ಜೊತೆಗಿರಲು ನವೀನ್ ಅಡ್ಡಿಯಾಗಿದ್ದ. ಇದಕ್ಕಾಗಿ ಈಕೆ ಗಂಡನಿಗೆ ಗತಿ ಕಾಣಿಸಲು ತೀರ್ಮಾನಿಸಿದ್ದು, ಊಟದಲ್ಲಿ ನಿದ್ರೆ ಮಾತ್ರೆ ಹಾಕಿ ಜ್ಞಾನ ತಪ್ಪಿಸಿದ್ದಾಳೆ. ಬಳಿಕ ಪ್ರಜ್ಞೆ ತಪ್ಪಿದ ಪತಿಯನ್ನು ಪ್ರೇಮಿ ಜೊತೆ

ಪ್ರೇಮಿಯನ್ನು ಕೂಡಲು ಪತಿಯನ್ನೇ ಕೊಂದ ಪತ್ನಿ| ನಿದ್ದೆ ಮಾತ್ರೆ ನೀಡಿ ಚಿರನಿದ್ರೆಗೆ ಕಳುಹಿಸಿದ ಅರ್ಧಾಂಗಿ!! Read More »

ಮಡಿಕೇರಿ:ಕಾಡಾನೆ ದಾಳಿಗೆ ಟ್ರ್ಯಾಕ್ಟರ್ ಚಾಲಕ ಬಲಿ

ಸಮಗ್ರ ನ್ಯೂಸ್: ಮಡಿಕೇರಿಯ ಅರೆಕಾಡು ಗ್ರಾಮದಲ್ಲಿ ಹಾಡ-ಹಗಲೇ ಆನೆ ದಾಳಿಗೆ ಟ್ರ್ಯಾಕ್ಟರ್ ಚಾಲಕ ಬಲಿಯಾದ ಘಟನೆ ಆ. 13ರಂದು ನಡೆದಿದೆ. ಕಟ್ಟೆಮಾಡು ಸಮೀಪದ ಪರಂಬು ನಿವಾಸಿ ದೇವಪ್ಪ ಅವರು ಸ್ಥಳದಲ್ಲೇ ಮೃತ ಪಟ್ಟಿದ್ದಾರೆ. ಅರೆಕಾಡು ನೇತಾಜಿ ನಗರದ ಜನ ವಸತಿ ಪ್ರದೇಶದಲ್ಲಿ ಕಾಣಿಸಿಕೊಂಡ ಕಾಡಾನೆ ಸಾರ್ವಜನಿಕರನ್ನು ಅಟ್ಟಾಡಿಸಿಕೊಂಡು ಬರುತ್ತಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಡಿಕೇರಿ:ಕಾಡಾನೆ ದಾಳಿಗೆ ಟ್ರ್ಯಾಕ್ಟರ್ ಚಾಲಕ ಬಲಿ Read More »

ಬಿಸ್ಲೆ ಘಾಟ್ ರಸ್ತೆಯ ತಿರುವಿನಲ್ಲಿ ಹೊಂಡದಲ್ಲಿ ಸಿಲುಕಿದ ಬಸ್ !

ಸಮಗ್ರ ನ್ಯೂಸ್: ಸುಬ್ರಹ್ಮಣ್ಯದ ಕುಲ್ಕುಂದ – ಬಿಸ್ಲೆಘಾಟ್ ರಸ್ತೆಯ ಶ್ರೀ ಚೌಡೇಶ್ವರಿ ಅಮ್ಮನವರ ದೇವಾಲಯದ ಪಕ್ಕದ ತಿರುವಿನಲ್ಲಿ ಕೆಎಸ್‌ಆರ್‌ಟಿಸಿ ಬಸ್‌ನ ಚಕ್ರ ಹೊಂಡದಲ್ಲಿ ಸಿಲುಕಿಕೊಂಡು ಬಸ್ ಬಾಕಿಯಾದ ಘಟನೆ ಆ.13ರಂದು ಮುಂಜಾನೆ ಸಂಭವಿಸಿದೆ. ಬೆಂಗಳೂರಿನಿಂದ ಅರಕಲಗೂಡು ಶನಿವಾರ ಸಂತೆ – ಕುಕ್ಕೆ ಸುಬ್ರಹ್ಮಣ್ಯ ಮಾರ್ಗವಾಗಿ ಮಂಗಳೂರಿಗೆ ತೆರಳುವ ಬಸ್ ರವಿವಾರ ಮುಂಜಾನೆ ಹೊತ್ತಿಗೆ ಬಿಸ್ಲೆ ಗಡಿ ದೇವಲದ ಸಮೀಪ ರಸ್ತೆಯ ತಿರುವಿನಲ್ಲಿ ಬಸ್ ರಸ್ತೆಯ ಬದಿ ಆಳವಾದ ಹೊಂಡಕ್ಕೆ ಬಸ್ಸಿನ ಹಿಂಭಾಗವು ಸರಿದು ಸಿಲುಕಿಕೊಂಡಿದೆ. ಬಸ್ಸನ್ನು ಮೇಲೆತ್ತಲು

ಬಿಸ್ಲೆ ಘಾಟ್ ರಸ್ತೆಯ ತಿರುವಿನಲ್ಲಿ ಹೊಂಡದಲ್ಲಿ ಸಿಲುಕಿದ ಬಸ್ ! Read More »

‘ಬುದ್ದಿವಂತ’ ನಿಗೆ ಸಂಕಷ್ಟ| ನಟ ಉಪೇಂದ್ರ ಮೇಲೆಅಟ್ರಾಸಿಟಿ ಕೇಸ್ ದಾಖಲು

ಸಮಗ್ರ‌ ನ್ಯೂಸ್: ನಟ ಉಪೇಂದ್ರ ವಿರುದ್ದ ‘ಅಟ್ರಾಸಿಟಿ ಕೇಸ್‌’ ದಾಖಲು ಮಾಡಲಾಗಿದೆ. ನಿನ್ನೆಯಿಂದ ಉಪೇಂದ್ರ ಅವರು ಮಾತನಾಡಿರುವ ವಿಡಿಯೋವೊಂದರಲ್ಲಿ ‘ಊರು ಅಂದ್ಮೇಲೆ ಹೊಲ್ಗೇರಿ ಇರುತ್ತಲ್ಲಾ ಹಾಗೆ’ ಅಂತ ಹೇಳಿದ್ದರು. ಈ ಹೇಳಿಕೆಗೆ ಉಪೇಂದ್ರ ಅವರ ವಿರುದ್ದ ಆಕ್ರೋಶವನ್ನು ವಿವಿಧ ವರ್ಗದ ಜನತೆ ವ್ಯಕ್ತಪಡಿಸಿದ್ದರು. ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕ ಮಧುಸೂಧನ್‌ ಎನ್ನುವವರು ದೂರು ನೀಡಿದ್ದಾರೆ. ಇನ್ನೂ ಇದೇ ವೇಳೆ ನಟ ಉಪೇಂದ್ರ ಅವರ ವಿರುದ್ದ ಸಿಕೆ ಅಚ್ಚುಕಟ್ಟೆ ಪೋಲಿಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ‘ಅಟ್ರಾಸಿಟಿ ಕೇಸ್‌ ದಾಖಲಾಗಿದ್ದು,

‘ಬುದ್ದಿವಂತ’ ನಿಗೆ ಸಂಕಷ್ಟ| ನಟ ಉಪೇಂದ್ರ ಮೇಲೆಅಟ್ರಾಸಿಟಿ ಕೇಸ್ ದಾಖಲು Read More »