ರಾಜ್ಯ

ಸೂರ್ಯನಿಗೆ ಬಳೆ ತೊಡಿಸಿದವರಾರು? ಪೊನ್ನಂಪೇಟೆಯಲ್ಲಿ ಕಂಡುಬಂದ ಅಪರೂಪದ ವಿದ್ಯಮಾನ

ಸಮಗ್ರ ನ್ಯೂಸ್: ಕೊಡಗು ಜಿಲ್ಲೆಯ ಪೊನ್ನಂಪೇಟೆಯಲ್ಲಿ ಅಪರೂಪದ ಬಾಹ್ಯಾಕಾಶ ವಿದ್ಯಮಾನವೊಂದು ಕಾಣಿಸಿಕೊಂಡಿದ್ದು ಸೂರ್ಯನ ಸುತ್ತ ಆಕರ್ಷಕ ಬಳೆಯ ರೀತಿ ಗೋಚರವಾಗಿದೆ. ಶುಕ್ರವಾರ ಮೂರು ಬಣ್ಣಗಳ ಬೃಹತ್ ಉಂಗುರದ ಮಾದರಿ ಪೊನ್ನಂಪೇಟೆ ತಾಲೂಕಿನ ಕೆಲವೆಡೆ ಕಾಣಿಸಿದೆ. ಬೆಳಕಿನ ವಕ್ರೀಭವನ ಮತ್ತು ಮೋಡದಲ್ಲಿನ ನೀರಿನ ಕಣಗಳಿಂದ ಉಂಗುರದ ರೀತಿ ಸೃಷ್ಟಿಯಾಗಿದೆ ಎಂದು ಹೇಳಲಾಗಿದೆ. ಪೊನ್ನಂಪೇಟೆ ತಾಲ್ಲೂಕಿನ ಟಿ. ಶೆಟ್ಟಿಗೇರಿ ಮತ್ತು ಶ್ರೀಮಂಗಲ ವ್ಯಾಪ್ತಿಯಲ್ಲಿ ಸೂರ್ಯ‌ನ ಸುತ್ತ ಉಂಗುರದ ಸ್ವರೂಪದಲ್ಲಿ ಕಾಣಿಸಿದೆ.

ಸೂರ್ಯನಿಗೆ ಬಳೆ ತೊಡಿಸಿದವರಾರು? ಪೊನ್ನಂಪೇಟೆಯಲ್ಲಿ ಕಂಡುಬಂದ ಅಪರೂಪದ ವಿದ್ಯಮಾನ Read More »

ಹವಾಮಾನ ವರದಿ| ಸೆ.8ರವರೆಗೆ ರಾಜ್ಯಾದ್ಯಂತ ಮಳೆ ಸಾಧ್ಯತೆ| ಹಲವು ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್

ಸಮಗ್ರ ನ್ಯೂಸ್: ಕರ್ನಾಟಕದಲ್ಲಿ ಮತ್ತೆ ವರುಣಾರ್ಭಟ ಶುರುವಾಗಿದ್ದು, ಇಂದಿನಿಂದ ಸೆಪ್ಟೆಂಬರ್ 8 ರ ವರೆಗೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಂದಿನಿಂದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ರಾಮನಗರ, ತುಮಕೂರು, ಉತ್ತರ ಒಳನಾಡಿನ ಬೀದರ್, ಕಲಬುರಗಿ, ರಾಯಚೂರು, ವಿಜಯಪುರ ಯಾದಗಿರಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಉತ್ತರ ಒಳನಾಡಿನ ಕಲಬುರಗಿ, ಬೀದರ್, ವಿಜಯಪುರ, ರಾಯಚೂರು, ಯಾದಗಿರಿ ಜಿಲ್ಲೆಗಳಿಗೆ

ಹವಾಮಾನ ವರದಿ| ಸೆ.8ರವರೆಗೆ ರಾಜ್ಯಾದ್ಯಂತ ಮಳೆ ಸಾಧ್ಯತೆ| ಹಲವು ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್ Read More »

ಮೈಸೂರು ದಸರಾ ಗಜಪಯಣಕ್ಕೆ ಅರಣ್ಯ ಸಚಿವ ಈಶ್ವರ ಖಂಡ್ರೆ ವಿದ್ಯುಕ್ತ ಚಾಲನೆ

ಸಮಗ್ರ ನ್ಯೂಸ್: ನಾಗರಹೊಳೆ ಉದ್ಯಾನದ ಹೆಬ್ಬಾಗಿಲು ವೀರನಹೊಸಹಳ್ಳಿ ಬಳಿ ಸೆ. 1ರಂದು ಗಜಪಯಣಕ್ಕೆ ಸಚಿವ ಈಶ್ವರ ಖಂಡ್ರೆ ಚಾಲನೆ ನೀಡಿದರು. ಈ ಬಾರಿಯೂ ಅಭಿಮನ್ಯು ಆನೆಯೇ ಅಂಬಾರಿ ಹೊರುತ್ತೆ, ಕಂಜನ್ ಈ ಬಾರಿ ದಸಾರಗೆ ಹೊಸ ಆನೆ ಸೇರ್ಪಡೆ ನಿಶಾನೆ ಆನೆಯನ್ನ ಇನ್ನೂ ನಿರ್ಧಾರ ಮಾಡಿಲ್ಲ. ಒಂದೂವರೆ ತಿಂಗಳು ದಸರಾ ಗಜಪಡೆಗಳು ತಾಲೀಮಿನಲ್ಲಿ ಭಾಗಿಯಾಗುತ್ತದೆ. ನಾಡ ಅದಿದೇವತೆ ಚಾಮುಂಡಿ ತಾಯಿಯ ಆಶೀರ್ವಾದ ಎಲ್ಲರ ಮೇಲೆ ಇರಲಿ. ಗಜಪಯಣಕ್ಕೆ ಚಾಲನೆ ನೀಡಿದ ಬಳಿಕ ಸಚಿವ ಈಶ್ವರ್ ಖಂಡ್ರೆ ಹೇಳಿಕೆ

ಮೈಸೂರು ದಸರಾ ಗಜಪಯಣಕ್ಕೆ ಅರಣ್ಯ ಸಚಿವ ಈಶ್ವರ ಖಂಡ್ರೆ ವಿದ್ಯುಕ್ತ ಚಾಲನೆ Read More »

ಪಡಿತರ ಚೀಟಿ ತಿದ್ದುಪಡಿಗೆ ಇಂದಿನಿಂದ ಕಾಲಾವಕಾಶ

ಸಮಗ್ರ ನ್ಯೂಸ್: ರೇಷನ್ ಕಾರ್ಡ್ ತಿದ್ದುಪಡಿಗೆ ಇಂದಿನಿಂದ ಕಾಲಾವಕಾಶ ನೀಡಲಾಗಿದ್ದು, ಪಡಿತರ ಚೀಟಿದಾರರು ಪಡಿತರ ಚೀಟಿಯಲ್ಲಿನ ವಿವರಗಳಲ್ಲಿ ಯಾವುದೇ ತಪ್ಪು ಕಂಡುಬಂದಲ್ಲಿ ವಿವರಗಳನ್ನು ಸರಿಪಡಿಸಿಕೊಳ್ಳಬಹುದಾಗಿದೆ. ವಯಸ್ಕ ಮಹಿಳೆ ಮುಖ್ಯಸ್ಥರಿದ್ದರೆ ಮಾತ್ರ ಬಿಪಿಎಲ್ ಸೌಲಭ್ಯ ದೊರಕಲಿದೆ. ಇನ್ನೊಂದೆಡೆ ರಾಜ್ಯ ಸರಕಾರದ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ನೋಂದಣಿ ಪ್ರಕ್ರಿಯೆ ಆರಂಭವಾದ ಬಳಿಕ ಮಹಿಳೆಯರು ಪಡಿತರ ಚೀಟಿಯಲ್ಲಿ ಯಜಮಾನಿ ಸ್ಥಾನಕ್ಕಾಗಿ ಆಧಾರ್‌ ಕಾರ್ಡ್‌, ರೇಷನ್‌ ಕಾರ್ಡ್‌ ಮತ್ತಿತರೆ ದಾಖಲೆಗಳನ್ನು ಹಿಡಿದು ಸೇವಾ ಕೇಂದ್ರ ಹಾಗೂ ಸರಕಾರಿ ಕಚೇರಿಗಳ ಮುಂದೆ ಅಲೆದಾಡುತ್ತಿದ್ದಾರೆ. ಹೀಗಾಗಿ

ಪಡಿತರ ಚೀಟಿ ತಿದ್ದುಪಡಿಗೆ ಇಂದಿನಿಂದ ಕಾಲಾವಕಾಶ Read More »

ಚಿಕ್ಕಮಗಳೂರು : ಕಾಫಿ ಬೆಳೆ ನಾಶದಿಂದ ರೈತ ಆತ್ಮಹತ್ಯೆ| ಎರಡೇ ದಿನಕ್ಕೆ ಇಬ್ಬರು ರೈತರು ಆತ್ಮಹತ್ಯೆಗೆ ಶರಣು

ಸಮಗ್ರ ನ್ಯೂಸ್: ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಕಿನ ರೈತನೊಬ್ಬ ಬೆಳೆ ನಾಶದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೆ.1 ರಂದು ನಡೆದಿದೆ. ಎರಡೇ ದಿನದಲ್ಲಿ ಇಬ್ಬರು ರೈತರ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಳೆ ಇಲ್ಲದೆ ಬೆಳೆ ನಾಶವಾದ ಹಿನ್ನೆಲೆ ಮನನೊಂದು ರೈತ ಪರಮೇಶ್ವರಪ್ಪ (52) ಆತ್ಮಹತ್ಯೆಗೆ ಶರಣಾಗಿದ್ದಾನೆ.ಅಜ್ಜಂಪುರ ತಾಲೂಕಿನ ಚಿಕ್ಕನಲ್ಲೂರು ಗ್ರಾಮದಲ್ಲಿ ಘಟನೆ ನಡೆದಿದೆ. 3 ಎಕರೆ ಜಮೀನನಲ್ಲಿ ಹಾಕಿದ್ದ ಈರುಳ್ಳಿ ಬೆಳೆ ಸಂಪೂರ್ಣ ನಾಶವಾಗಿದ್ದು. ಬ್ಯಾಂಕ್ ನಲ್ಲಿ ಬಡ್ಡಿ ಹಾಗೂ ಕೈಸಾಲ ಸೇರಿ 5 ಲಕ್ಷ ಸಾಲ

ಚಿಕ್ಕಮಗಳೂರು : ಕಾಫಿ ಬೆಳೆ ನಾಶದಿಂದ ರೈತ ಆತ್ಮಹತ್ಯೆ| ಎರಡೇ ದಿನಕ್ಕೆ ಇಬ್ಬರು ರೈತರು ಆತ್ಮಹತ್ಯೆಗೆ ಶರಣು Read More »

ಚಿಕ್ಕಮಗಳೂರು : ನಗರದೆಲ್ಲೆಡೆ ಧಾರಾಕಾರವಾಗಿ ಸುರಿದ ಮಳೆ

ಸಮಗ್ರ ನ್ಯೂಸ್: ಚಿಕ್ಕಮಗಳೂರು ನಗರದ ಹಲವೆಡೆ ಕಳೆದೊಂದು ಗಂಟೆಯಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಬಿಸಿಲ ಧಗೆಗೆ ಬಳಲಿ ಬೆಂಡಾಗಿದ್ದ ಕಾಫಿನಾಡಿಗೆ ವರುಣದೇವ ತಂಪೆರದಂತೆ ಆಗಿದೆ. ಗುಡುಗು-ಮಿಂಚು ಸಹಿತ ಧಾರಾಕಾರವಾಗಿ ಸುರಿಯುತ್ತಿರುವ ಮಳೆ. ಕಳೆದೊಂದು ತಿಂಗಳಿನಿಂದ ಮಳೆ ಇಲ್ಲದೆ ಕಂಗಾಲಾಗಿದ್ದ ರೈತರುಧಾರಾಕಾರವಾಗಿ ಸುರಿಯುತ್ತಿರುವ ಮಳೆ ಕಂಡು ರೈತರ ಮೊಗದಲ್ಲಿ ಮಂದಹಾಸ ಬೀರಿದೆ. ಬೆಂಬಿಡದೆ ಸುರಿದ ಮಳೆಗೆ ಚಿಕ್ಕಮಗಳೂರು ನಗರದ ತಗ್ಗುಪ್ರದೇಶಗಳಿಗೆ ನೀರು ನುಗ್ಗಿ, ಚರಂಡಿ ಬಂದ್ ಆಗಿದೆ. ರಸ್ತೆಯಲ್ಲಿ ಹರಿದ ನೀರಿನಿಂದಾಗಿ ಚಿಕ್ಕಮಗಳೂರು ನಗರದಲ್ಲಿನ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ.

ಚಿಕ್ಕಮಗಳೂರು : ನಗರದೆಲ್ಲೆಡೆ ಧಾರಾಕಾರವಾಗಿ ಸುರಿದ ಮಳೆ Read More »

ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ಗಳಲ್ಲಿ ಉದ್ಯೋಗ ಅವಕಾಶ| ಇಲ್ಲಿದೆ ಪೂರ್ಣ ಮಾಹಿತಿ

ಸಮಗ್ರ ನ್ಯೂಸ್: ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ಗಳಲ್ಲಿ ಉದ್ಯೋಗ ಪಡೆಯಲು ಬಯಸುವವರಿಗೆ ಸಿಹಿಸುದ್ದಿ. ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಇತ್ತೀಚೆಗೆ ಉದ್ಯೋಗ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಕಂಪ್ಯೂಟರ್‌ ಪ್ರೋಗ್ರಾಮರ್‌ ಮತ್ತು ದ್ವಿತೀಯ ದರ್ಜೆ ಗುಮಾಸ್ತ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಲ್ಲಿ ಒಟ್ಟು 125 ಹುದ್ದೆಗಳಿವೆ. ಪದವಿ ಮತ್ತು ಡಿಪ್ಲೊಮಾ ವಿದ್ಯಾರ್ಹತೆ ಇರುವವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಹುದ್ದೆಗಳ ವಿವರ ಕಂಪ್ಯೂಟರ್

ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ಗಳಲ್ಲಿ ಉದ್ಯೋಗ ಅವಕಾಶ| ಇಲ್ಲಿದೆ ಪೂರ್ಣ ಮಾಹಿತಿ Read More »

ಸಂಸತ್ ಸದಸ್ಯತ್ವದಿಂದ ಪ್ರಜ್ವಲ್ ರೇವಣ್ಣ ಅನರ್ಹ| ಹೈಕೋರ್ಟ್ ನಿಂದ ಮಹತ್ವದ ಆದೇಶ

ಸಮಗ್ರ ನ್ಯೂಸ್: ಕಳೆದ ಬಾರಿ ಸಂಸತ್ತು ಚುನಾವಣೆ ಸಂದರ್ಭದಲ್ಲಿ ಚುನಾವಣಾ ಪ್ರಮಾಣ ಪತ್ರದಲ್ಲಿ ಸುಳ್ಳು ಮಾಹಿತಿ ಸಲ್ಲಿಸಿದ್ದಾರೆ ಎಂಬ ಹಿನ್ನೆಲೆಯಲ್ಲಿ ಹಾಸನ ಲೋಕಸಭಾ ಕ್ಷೇತ್ರದ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಅನರ್ಹಗೊಳಿಸಿ ಹೈಕೋರ್ಟ್‌ ಶುಕ್ರವಾರ ಆದೇಶ ಹೊರಡಿದಿದೆ. ಜೆಡಿಎಸ್‌ನ ಏಕೈಕ ಸಂಸದ, ಹಾಸನ ಲೋಕಸಭಾ ಕ್ಷೇತ್ರದ ಎಂ.ಪಿ. ಪ್ರಜ್ವಲ್ ರೇವಣ್ಣ ಅವರು ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಆಸ್ತಿ ಘೋಷಣೆ ವಿವರ, ಪ್ರಮಾಣ ಪತ್ರದಲ್ಲಿ ತಪ್ಪು ಮಾಹಿತಿ ನೀಡಿದ್ದಾರೆ ಎಂದು 2019ರಲ್ಲಿ ಹೈಕೋರ್ಟ್ ನಲ್ಲಿ ಅವರ ವಿರುದ್ಧ ಅರ್ಜಿ

ಸಂಸತ್ ಸದಸ್ಯತ್ವದಿಂದ ಪ್ರಜ್ವಲ್ ರೇವಣ್ಣ ಅನರ್ಹ| ಹೈಕೋರ್ಟ್ ನಿಂದ ಮಹತ್ವದ ಆದೇಶ Read More »

ಕೊಡಗು:ಅಕ್ರಮ ಮದ್ಯ ತಯಾರಿಕೆ ಪ್ರಕರಣ

ಸಮಗ್ರ ನ್ಯೂಸ್: ಕೊಡಗು ಜಿಲ್ಲಾ ವಾಪ್ತಿಯ ಭಾಗಮಂಡಲ ಪೊಲೀಸ್‌ ಠಾಣಾ ಸರಹದ್ದಿನಲ್ಲಿ ಅಕ್ರಮವಾಗಿ ಮದ್ಯ ತಯಾರಿಕೆ ಮಾಡುತ್ತಿದ್ದ ಪ್ರಕರಣವನ್ನು ಆ. 31ರಂದು ಪತ್ತೆ ಮಾಡುವಲ್ಲಿ ಕೊಡಗು ಜಿಲ್ಲಾ ಪೊಲೀಸ್‌ ಯಶಸ್ವಿಯಾಗಿದೆ. ಭಾಗಮಂಡಲ ಠಾಣಾ ಸರಹದ್ದಿನ ತಾವೂರು ಗ್ರಾಮದ ತೋಟದ ಲೈನ್‌ ಮನೆಯೊಂದರಲ್ಲಿ ಅಕ್ರಮವಾಗಿ ಕೇರಳ ರಾಜ್ಯದಲ್ಲಿ ಮಾರಾಟ ಮಾಡಲು ಅಮಲೇರಿಸುವ ಪದಾರ್ಥ ಬಳಸಿ ಮದ್ಯ ತಯಾರಿಕೆ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇಲೆ DCRB ಪೊಲೀಸ್‌ ಅಧಿಕಾರಿ ಮತ್ತು ಸಿಬ್ಬಂದಿ, ಭಾಗಮಂಡಲ ಠಾಣಾ ಪಿ.ಎಸ್‌.ಐ ಮತ್ತು

ಕೊಡಗು:ಅಕ್ರಮ ಮದ್ಯ ತಯಾರಿಕೆ ಪ್ರಕರಣ Read More »

ವಿರಾಜಪೇಟೆ: ಮಟ್ಕಾ ದಂಧೆ ಪತ್ತೆ| ಇಬ್ಬರ ಬಂಧನ

ಸಮಗ್ರ ನ್ಯೂಸ್:ವಿರಾಜಪೇಟೆ ಗ್ರಾಮಾಂತರ ಠಾಣಾ ವ್ಯಾಪ್ತಿಯ ಚೊಕಂಡಳ್ಳಿಯಲ್ಲಿ ಮಟ್ಕಾ ದಂಧೆಯಲ್ಲಿ ತೊಡಗಿದ್ದ ಇಬ್ಬರ ಬಂಧನ. ಆ. 31ರ ಸಂಜೆ 6 ಗಂಟೆ ಸಮಯದಲ್ಲಿ ಚೋಕಂಡಳ್ಳಿ ಅಂಗಡಿಯೊಂದರ ಸಮೀಪ ಹೊರ ರಾಜ್ಯದ ಲಾಟರಿ ಫಲಿತಾಂಶಕ್ಕೆ ಚೀಟಿ ಕೊಡುವ ಮೂಲಕ ಮಟ್ಕಾ ದಂಧೆ ನಡೆಸುತ್ತಿದ್ದ ಖಚಿತ ವರ್ತಮಾನದ ಮೇಲೆ ಗ್ರಾಮಾಂತರ ಪೊಲೀಸರು ದಾಳಿ ನಡೆಸಿ ಇಬ್ಬರು ಆರೋಪಿಗಳಾದ ಆಟೋ ಚಾಲಕ ಕಿರಣ್ ಲೋಬೊ ಮತ್ತು ಅಝೀಜ್ ಎಂಬುವವರನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ಮಟ್ಕಾ ದಂಧೆಗೆ ಬಳಸಲಾದ 2140 ರೂಪಾಯಿಯನ್ನು ವಶಪಡಿಸಿಕೊಳ್ಳಲಾಗಿದೆ. ವಿರಾಜಪೇಟೆ

ವಿರಾಜಪೇಟೆ: ಮಟ್ಕಾ ದಂಧೆ ಪತ್ತೆ| ಇಬ್ಬರ ಬಂಧನ Read More »