ರಾಜ್ಯ

9ನೇ ತರಗತಿಗೆ ಮೌಲ್ಯಾಂಕನ, ಪ್ರಥಮ ಪಿಯುಸಿ ಗೆ ವಾರ್ಷಿಕ ಪರೀಕ್ಷೆ | ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ನಿರ್ಧಾರ

ಸಮಗ್ರ ನ್ಯೂಸ್: 5 ಮತ್ತು 8ನೇ ತರಗತಿ ಮಾದರಿಯಲ್ಲೇ 9ನೇ ತರಗತಿಗೂ ಮೌಲ್ಯಾಂಕನ ಪರೀಕ್ಷೆ ಹಾಗೂ ಪ್ರಥಮ ಪಿಯುಗೆ ವಾರ್ಷಿಕ ಪರೀಕ್ಷೆ ನಡೆಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ನಿರ್ಧರಿಸಿದೆ. ಇದುವರೆಗೂ ಪ್ರಥಮ ಪಿಯುಗೆ ಆಯಾ ಜಿಲ್ಲಾಮಟ್ಟದಲ್ಲೇ ಪರೀಕ್ಷೆಗಳನ್ನು ನಡೆಸಲಾಗುತ್ತಿತ್ತು.ಇದೇ ಶೈಕ್ಷಣಿಕ ವರ್ಷದಿಂದ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯೇ ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸಿ, ಜಿಲ್ಲಾ ಉಪ ನಿರ್ದೇಶಕರ ಮೂಲಕ ಎಲ್ಲ ಕಾಲೇಜುಗಳಿಗೂ ಕಳುಹಿಸಿಕೊಡುತ್ತದೆ. ವಿದ್ಯಾರ್ಥಿಗಳು ತಾವು ಓದುತ್ತಿರುವ ಕಾಲೇಜಿನಲ್ಲೇ ಪರೀಕ್ಷೆ ಬರೆಯಲು ಹಾಗೂ ಅದೇ

9ನೇ ತರಗತಿಗೆ ಮೌಲ್ಯಾಂಕನ, ಪ್ರಥಮ ಪಿಯುಸಿ ಗೆ ವಾರ್ಷಿಕ ಪರೀಕ್ಷೆ | ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ನಿರ್ಧಾರ Read More »

ಕೊಟ್ಟಿಗೆಹಾರ:ರಸ್ತೆಯಲ್ಲೇ ಕರುವನ್ನು ಹಾಕಿದ ಬೀಡಾಡಿ ಹಸು

ಸಮಗ್ರ ನ್ಯೂಸ್: ಬಣಕಲ್ ನ ಕೊಟ್ಟಿಗೆಹಾರದಲ್ಲಿ ಹಲವು ಸಮಯದಿಂದ ಬೀಡಾಡಿ ದನಗಳು ರಸ್ತೆಯಲ್ಲಿ ಸಂಚರಿಸಿ ವಾಹನ ಸವಾರರಿಗೆ ತೊಂದರೆ ನೀಡುತ್ತಿವೆ.ರಾತ್ರಿಯಂತೂ ಈ ಬೀಡಾಡಿ ದನಗಳು ರಸ್ತೆಯಲ್ಲಿ ಇದ್ದರೂ ಕಾಣದೇ ಅನೇಕ ಅಪಘಾತಗಳು ಸಂಭವಿಸಿವೆ. ಆದರೂ ಬೀಡಾಡಿ ದನಗಳ ಸಂಚಾರಕ್ಕೆ ಕಡಿವಾಣ ಬಿದ್ದಿಲ್ಲ. ರಾತ್ರಿ ಹಲವು ದನಗಳು ಬಸ್ ನಿಲ್ದಾಣ, ಅಂಗಡಿ ಮುಂಗಟ್ಟುಗಳ ಮುಂದೆ ಆಶ್ರಯಿಸಿ ಸಗಣಿ ಗಂಜಲ ಹಾಕಿ ಪರಿಸರ ಕಲುಷಿತಗೊಳಿಸುತ್ತವೆ.ರಸ್ತೆಯಲ್ಲಿ ದನಗಳ ಹಿಂಡು ಕಂಡು ಬರುತ್ತಿದೆ.ಈ ಬಗ್ಗೆ ಗ್ರಾಮ ಪಂಚಾಯಿತಿಗಳು ದ್ವನಿವರ್ಧಕ ಮೂಲಕ ದನಗಳ ಮಾಲೀಕರು

ಕೊಟ್ಟಿಗೆಹಾರ:ರಸ್ತೆಯಲ್ಲೇ ಕರುವನ್ನು ಹಾಕಿದ ಬೀಡಾಡಿ ಹಸು Read More »

ಬೆಂಗಳೂರು: ಸೆ.25 ಅರಮನೆ ಮೈದಾನದಲ್ಲಿ ವಿಶ್ವ ಕಾಫಿ ಸಮ್ಮೇಳನ

ಸಮಗ್ರ ನ್ಯೂಸ್: ಬೆಂಗಳೂರಿನಲ್ಲಿ ಸೆ. 25 ರಂದು (ಸೋಮವಾರ)ವಿಶ್ವ ಕಾಫಿ ಸಮ್ಮೇಳನ ಅರಮನೆ ಮೈದಾನದಲ್ಲಿ ನಡೆಯಲಿದೆ ಎಂದು ಮೂಡಿಗೆರೆ ತಾಲ್ಲೂಕು ಬೆಳೆಗಾರರ ಸಂಘದ ಅಧ್ಯಕ್ಷ ಬಾಲಕೃಷ್ಣ ಬಾಳೂರು ತಿಳಿಸಿದ್ದಾರೆ. ಪ್ರಥಮ ಬಾರಿಗೆ ವಿಶ್ವ ಕಾಫಿ ಸಮ್ಮೇಳನವು ಭಾರತದಲ್ಲಿ ಸಮಾವೇಶಗೊಳ್ಳುತ್ತಿರುವುದು ಸಂತಸದ ವಿಷಯವಾಗಿದೆ.ಅದರಲ್ಲೂ ಮುಖ್ಯವಾಗಿ ರಾಜ್ಯದಲ್ಲಿ ವಿಶ್ವ ಕಾಫಿ ಸಮ್ಮೇಳನ ನಡೆಯುತ್ತಿದೆ.ಈ ಸಮ್ಮೇಳನದಲ್ಲಿ 80ಕ್ಕೂ ಅಧಿಕ ದೇಶಗಳು ಭಾಗವಹಿಸಲಿವೆ. ಸಮ್ಮೇಳನದಲ್ಲಿ ವಿಶ್ವ ಕಾಫಿ ಉದ್ದಿಮೆಯ ಪ್ರಮುಖ ಉದ್ದಿಮೆದಾರರು, ರಪ್ತುದಾರರು ಭಾಗವಹಿಸುತ್ತಿದ್ದು ವಿಶ್ವ ಕಾಫಿಗೆ ಸಂಬಂಧಿಸಿದ ಪ್ರಮುಖ ನಿರ್ಣಯಗಳು, ಮುಂದಿನ

ಬೆಂಗಳೂರು: ಸೆ.25 ಅರಮನೆ ಮೈದಾನದಲ್ಲಿ ವಿಶ್ವ ಕಾಫಿ ಸಮ್ಮೇಳನ Read More »

ಮಂಡ್ಯ ಸ್ಥಬ್ದ/ ಕಾವೇರಿಗಾಗಿ ಬಂದ್ ಆಗುತ್ತಾ ಕರ್ನಾಟಕ?

ಸಮಗ್ರ ನ್ಯೂಸ್: ಕಾವೇರಿ ನೀರು ಹಂಚಿಕೆ ವಿವಾದ ವಿಚಾರದಲ್ಲಿ ಇಂದು ಜಿಲ್ಲಾ ಹಿತರಕ್ಷಣಾ ಸಮಿತಿ ಕರೆ ಕೊಟ್ಟಿದ್ದ ಮಂಡ್ಯ ಬಂದ್ ಯಶಸ್ವಿಯಾಗಿದ್ದು, ಜನರ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಮಂಡ್ಯ ಮತ್ತು ಮದ್ದೂರಿನಲ್ಲಿ ವಾಣಿಜ್ಯ ಚಟುವಟಿಕೆ ಸಂಪೂರ್ಣ ಮುಚ್ಚಿದ್ದು, ಶಾಲಾ ಕಾಲೇಜುಗಳು ಬಾಗಿಲು ತೆರೆದಿಲ್ಲ. ಸಾರಿಗೆ ವ್ಯವಸ್ಥೆ ಸಂಪೂರ್ಣ ಸ್ಥಬ್ದಗೊಂಡಿದೆ. ಬಂದ್ ಆಗುತ್ತಾ ಕರ್ನಾಟಕ: ಮಂಡ್ಯ ಬಂದ್ ಯಶಸ್ವಿ ಹಿನ್ನಲೆಯಲ್ಲಿ, ರೈತರ ಪ್ರತಿಭಟನೆ ರಾಜ್ಯಮಟ್ಟಕ್ಕೆ ವಿಸ್ತರಿಸುವ ಸಾಧ್ಯತೆ ಹೆಚ್ಚಿದೆ. ಇಂದು ಸಂಜೆ ಫ್ರೀಡಂ ಪಾರ್ಕ್‌ನಲ್ಲಿ ನಡೆಯುವ ಸಭೆಯಲ್ಲಿ ಮುಂದಿನ

ಮಂಡ್ಯ ಸ್ಥಬ್ದ/ ಕಾವೇರಿಗಾಗಿ ಬಂದ್ ಆಗುತ್ತಾ ಕರ್ನಾಟಕ? Read More »

ಸೆ.26: ಕಾವೇರಿಗಾಗಿ ಬೆಂಗಳೂರು ಬಂದ್

ಸಮಗ್ರ ನ್ಯೂಸ್: ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುತ್ತಿರೋದನ್ನು ಖಂಡಿಸಿ ಬೆಂಗಳೂರು ನಗರದಲ್ಲಿ ಪ್ರತಿಭಟನೆ ಜೋರಾಗುತ್ತಿದೆ. ಈ ಹಿನ್ನಲೆಯಲ್ಲಿ ಸೆಪ್ಟೆಂಬರ್.26ರಂದು ಬೆಂಗಳೂರು ಬಂದ್ ಗೆ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ರೈತ ಮುಖಂಡ ಕುರುಬೂರು ಶಾಂತಕುಮಾರ್ ಘೋಷಣೆ ಮಾಡಿದ್ದಾರೆ. ರಾಜ್ಯದ ರೈತರಿಗೆ ಕುಡಿಯೋದಕ್ಕೆ ನೀರಿಲ್ಲ. ಬೆಂಗಳೂರು ಜನತೆಗೂ ಕಾವೇರಿ ನೀರು ಸಮಸ್ಯೆ ಆಗಲಿದೆ. ಹೀಗಿದ್ದೂ ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುತ್ತಿರೋದು ಸರಿಯಲ್ಲ. ರಾಜ್ಯ ಸರ್ಕಾರ ವಿಧಾನಮಂಡಲದ ವಿಶೇಷ ಅಧಿವೇಶನ ಕರೆದು, ತಮಿಳುನಾಡಿಗೆ ನೀರು ಬಿಡದಂತ ನಿರ್ಣಯವನ್ನು ಕೈಗೊಳ್ಳಬೇಕು

ಸೆ.26: ಕಾವೇರಿಗಾಗಿ ಬೆಂಗಳೂರು ಬಂದ್ Read More »

ಚಿಕ್ಕಮಗಳೂರು : ರಸ್ತೆ ಮಧ್ಯೆ ಹೊತ್ತಿ ಉರಿದ ಕಾರು

ಸಮಗ್ರ ನ್ಯೂಸ್: ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಕುದುರೆಗುಂಡಿಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಸೆ.23 ರಂದು ನಡೆದಿದೆ. ಮೂವರು ಕಾರಿನಲ್ಲಿ ಪ್ರಯಾಣಿಸುತ್ತಿರುವಾಗ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು ತಕ್ಷಣ ಕಾರಿನಿಂದಿಳಿದು ಪಾರಾಗಿದ್ದಾರೆ. ಈ ವೇಳೆ ಸ್ಥಳೀಯರು ಬೆಂಕಿ ನಂದಿಸಲು ಹರಸಾಹಸ ಪಟ್ಟರೂ ಬೆಂಕಿಯ ತೀವ್ರತೆಯಿಂದ ಕಾರು ಸುಟ್ಟು ಕರಕಲಾಗಿದೆ. ವೀಡಿಯೋ ಲಿಂಕ್:

ಚಿಕ್ಕಮಗಳೂರು : ರಸ್ತೆ ಮಧ್ಯೆ ಹೊತ್ತಿ ಉರಿದ ಕಾರು Read More »

ಇಂದಿನಿಂದ ಸೆ.30ರವರೆಗೆ ಬೆಳಿಗ್ಗೆ 8 ರಿಂದ ರಾತ್ರಿ 8ರವರೆಗೆ ಸಬ್ ರಿಜಿಸ್ಟ್ರಾರ್ ಕಚೇರಿ ಓಪನ್| 12 ಗಂಟೆಗಳ ಕಾಲ ಕೆಲಸ ನಿಗದಿಗೊಳಿಸಿ ಆದೇಶ

ಸಮಗ್ರ ನ್ಯೂಸ್: ಸಾರ್ವಜನಿಕ ಹಿತದೃಷ್ಟಿಯಿಂದ ರಾಜ್ಯದ ಎಲ್ಲಾ ಉಪನೋಂದಣಿ ಕಚೇರಿಗಳ ಕೆಲಸದ ಅವಧಿಯನ್ನು ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ವಿಸ್ತರಿಸಲಾಗಿದೆ. ಸೆ.23 ರಿಂದ 30ರವರೆಗೆ ಈ ಆದೇಶ ಜಾರಿಗೆಯಲ್ಲಿರಲಿದ್ದು, ಒಂದು ವಾರ ಸಾರ್ವಜನಿಕರು 12 ಗಂಟೆಗಳ ಕಾಲ ಸೇವೆ ಪಡೆಯಬಹುದಾಗಿದೆ. ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕೇಂದ್ರ ಮೌಲ್ಯ ಮಾಪನ ಸಮಿತಿಯ 2023-24ನೇ ಸಾಲಿನಲ್ಲಿ ಸ್ಥಿರಾಸ್ತಿಗಳ ಮಾರುಕಟ್ಟೆ ಮೌಲ್ಯ ಮಾರ್ಗಸೂಚಿ ದರಗಳನ್ನು ಪರಿಷ್ಕರಣೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ನೋಂದಣಿಗೆ ಹಾಜರುಪಡಿಸುವ ದಸ್ತಾವೇಜುಗಳ ಸಂಖ್ಯೆ ಹೆಚ್ಚಾಗುವ

ಇಂದಿನಿಂದ ಸೆ.30ರವರೆಗೆ ಬೆಳಿಗ್ಗೆ 8 ರಿಂದ ರಾತ್ರಿ 8ರವರೆಗೆ ಸಬ್ ರಿಜಿಸ್ಟ್ರಾರ್ ಕಚೇರಿ ಓಪನ್| 12 ಗಂಟೆಗಳ ಕಾಲ ಕೆಲಸ ನಿಗದಿಗೊಳಿಸಿ ಆದೇಶ Read More »

ವಂಚಿಸಿದ್ದ ಹಣದಲ್ಲಿ 26 ಲಕ್ಷದ ಇನ್ನೋವಾ ಖರೀದಿಸಿದ ಹಾಲಶ್ರೀ

ಸಮಗ್ರ ನ್ಯೂಸ್: ಬಿಜೆಪಿ ಟೆಕೆಟ್ ಹೆಸರಿನಲ್ಲಿ ಉದ್ಯಮಿಗೆ ವಂಚಿಸಿದ ಸಂಪಾದಿಸಿದ ಹಣದಲ್ಲಿ 26 ಲಕ್ಷ ರು. ಮೌಲ್ಯದ ಐಷಾರಾಮಿ ಇನ್ನೋವಾ ಕಾರನ್ನು ಹಾಲವೀರಪ್ಪಜ್ಜ ಸ್ವಾಮೀಜಿ ಅಲಿಯಾಸ್ ಹಾಲಶ್ರೀ ಖರೀದಿಸಿದ್ದರು ಎಂಬ ಸಂಗತಿ ಸಿಸಿಬಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಉದ್ಯಮಿ ಗೋವಿಂದ ಪೂಜಾರಿ ಅವರಿಂದ 1.5 ಕೋಟಿ ರು ಹಣವನ್ನು ಹಾಲಶ್ರೀ ಪಡೆದಿದ್ದರು. ಈ ಹಣದಲ್ಲಿ 26 ಲಕ್ಷ ರು. ವ್ಯಯಿಸಿ ಹೊಸ ಇನ್ನೋವಾ ಕಾರನ್ನು ಸ್ವಾಮೀಜಿ ಕೊಂಡಿದ್ದರು. ಆ ಕಾರನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ವಂಚಿಸಿದ್ದ ಹಣದಲ್ಲಿ 26 ಲಕ್ಷದ ಇನ್ನೋವಾ ಖರೀದಿಸಿದ ಹಾಲಶ್ರೀ Read More »

ರಾಜ್ಯಾದ್ಯಂತ ಭುಗಿಲೆದ್ದ ಕಾವೇರಿ ಕಾವು| ಸಂಸದರ ನಿವಾಸಕ್ಕೆ ಮುತ್ತಿಗೆ ಹಾಕಲಿರುವ ಕರವೇ

ಸಮಗ್ರ ನ್ಯೂಸ್: ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ರಾಜ್ಯದ ಹಲವು ಕಡೆ ಪ್ರತಿಭಟನೆ ನಡೆಸಿದ್ದಾರೆ. ಮಂಡ್ಯ, ಬೆಂಗಳೂರಿನಲ್ಲಿ ಕರವೇ ಕಾರ್ಯಕರ್ತರ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದ್ದು, ನಾಳೆ ರಾಜ್ಯ ಸಂಸದರ ನಿವಾಸಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದ್ದು, ಈ ಹಿನ್ನೆಲೆಯಲ್ಲಿ ಬಿಗಿ ಬಂದೋಬಸ್ತ್ ನಡೆಸಲಾಗಿದೆ. ದಾವಣಗೆರೆಯಲ್ಲಿ ಕರವೇ ಕಾರ್ಯಕರ್ತರು ಸಂಸದ ಜಿಎಂಸಿದ್ದೇಶ್ವರ ಕಚೇರಿಗೆ ಮುತ್ತಿಗೆ ಹಾಕಿದ್ದಾರೆ. ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ರಾಜ್ಯದ ಹಿತ

ರಾಜ್ಯಾದ್ಯಂತ ಭುಗಿಲೆದ್ದ ಕಾವೇರಿ ಕಾವು| ಸಂಸದರ ನಿವಾಸಕ್ಕೆ ಮುತ್ತಿಗೆ ಹಾಕಲಿರುವ ಕರವೇ Read More »

ಧರ್ಮಸ್ಥಳದಲ್ಲಿ ಆತ್ಮಹತ್ಯೆಗೆ ಮುಂದಾದ ಯುವತಿ ಬೆಂಗಳೂರಿನಲ್ಲಿ ಕಟ್ಟಡದಿಂದ ಹಾರಿದಳು!!

ಸಮಗ್ರ ನ್ಯೂಸ್: ಯುವತಿಯೊಬ್ಬಳು ಅಪಾರ್ಟ್ಮೆಂಟ್ ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ.ವಿಜಯಲಕ್ಷ್ಮಿ (17) ವರ್ಷ ಮೃತ ಯುವತಿ. ಈ ಘಟನೆ ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ನಡೆದಿದೆ. ಖಿನ್ನತೆಗೊಳಗಾಗಿ ವಿದ್ಯಾರ್ಥಿನಿ ಇಲ್ಲಿನ ಬ್ರೈಡ್ ಅಪಾರ್ಟ್ ಮೆಂಟ್ ಕಟ್ಟಡದ ಮೇಲಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಕೆಲವು ದಿನಗಳ ಹಿಂದೆ ಈಕೆ ಆತ್ಮಹತ್ಯೆ ಮಾಡಿಕೊಳ್ಳಲು ಧರ್ಮಸ್ಥಳಕ್ಕೆ ಹೋಗಿದ್ದಳು. ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾಗ ಸ್ಥಳೀಯರೊಬ್ಬರು ರಕ್ಷಣೆ ಮಾಡಿ ಬುದ್ಧಿ ಹೇಳಿ ಕಳುಹಿಸಿದ್ದರು. ಪೋಷಕರಿಗೆ ಫೋನ್ ಮಾಡಿ ತಿಳಿ ಹೇಳಿ

ಧರ್ಮಸ್ಥಳದಲ್ಲಿ ಆತ್ಮಹತ್ಯೆಗೆ ಮುಂದಾದ ಯುವತಿ ಬೆಂಗಳೂರಿನಲ್ಲಿ ಕಟ್ಟಡದಿಂದ ಹಾರಿದಳು!! Read More »