ರಾಜ್ಯ

ಅಡಿಕೆ ಆಮದು ತಡೆಗೆ ತಕ್ಷಣವೇ ಸೂಕ್ತ ಕ್ರಮಕ್ಕೆ ಬೆಳೆಗಾರರ ಸಂಘ ಒತ್ತಾಯ

ಸಮಗ್ರ ನ್ಯೂಸ್: ಕಳೆದ ಕೆಲವು ದಿನಗಳಿಂದ ಅಡಿಕೆ ಆಮದು ಬಗ್ಗೆ ಸುದ್ದಿಗಳು ವಿವಿಧ ಮಾಧ್ಯಮಗಳ ಮೂಲಕ ಬೆಳಕಿಗೆ ಬರುತ್ತಿದೆ.ಇದರ ಜೊಎತೇ ಅಡಿಕೆ ಮಾರುಕಟ್ಟೆಯಲ್ಲಿ ವ್ಯತ್ಯಾಸ ಕಂಡುಬರುತ್ತಿದೆ. ಹೀಗಾಗಿ ಅಡಿಕೆ ಆಮದು ತಡೆಗೆ ಸರ್ಕಾರಗಳು ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘವು ಒತ್ತಾಯಿಸಿದೆ. ಈ ಬಗ್ಗೆ ಪ್ರಧಾನಿಗಳಿಗೆ ಹಾಗೂ ಮುಖ್ಯಮಂತ್ರಿಗಳಿಗೆ ಮತ್ತು ಜಿಲ್ಲೆ ಸಂಸದರಿಗೆ ಪತ್ರದ ಮೂಲಕ ಒತ್ತಾಯಿಸಿದೆ. ಅಡಿಕೆ ಬೆಳೆಗಾರರು ಈಗಾಗಲೇ ಹಲವು ಸಮಸ್ಯೆಳಿಂದ ಬಳಲುತ್ತಿದ್ದಾರೆ. ಆದರೆ ಕೆಲವು ಸಮಯಗಳಿಂದ

ಅಡಿಕೆ ಆಮದು ತಡೆಗೆ ತಕ್ಷಣವೇ ಸೂಕ್ತ ಕ್ರಮಕ್ಕೆ ಬೆಳೆಗಾರರ ಸಂಘ ಒತ್ತಾಯ Read More »

ರಾಜ್ಯದಲ್ಲಿ ಕೊರೊನಾ ಆತಂಕ| ತಾಂತ್ರಿಕ ಸಲಹಾ ಸಮಿತಿ ಸಭೆ ಬಳಿಕ ಸಿಎಂ ಮಾಹಿತಿ| ಕ್ರಿಸ್ ಮಸ್ ಹೊಸ ವರ್ಷ ಆಚರಣೆ ಬಗ್ಗೆ ನೀಡಿದ ಬಿಗ್ ಅಪ್ಡೇಟ್ ಏನು?

ಸಮಗ್ರ ನ್ಯೂಸ್: ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಹಾಕುವ ಪರಿಸ್ಥಿತಿ ಬಂದಿಲ್ಲ. ಕಡ್ಡಾಯವಾಗಿ ಮಾಸ್ಕ್ ಹಾಕಿ ಎಂದು ಹೇಳುತ್ತಿಲ್ಲ. ಸಲಹೆ ಅಷ್ಟೇ. ಇನ್ನು ಸೂಕ್ತ ಕೋವಿಡ್ ಚಿಕಿತ್ಸೆ ನೀಡಲು ಸೂಚಿಸಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಕರ್ನಾಟಕದಲ್ಲಿ ಕೋವಿಡ್ ಕುರಿತು ಗೃಹ ಕಚೇರಿ ಕಾವೇರಿಯಲ್ಲಿ ಸಿಎಂ ಸಿದ್ದರಾಮಯ್ಯ ಮಹತ್ವದ ಸಭೆ ನಡೆಸಿದರು. ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ, ಈಗಾಗಲೇ ಆರೋಗ್ಯ ಸಚಿವರು ಸಭೆ ಮಾಡಿದ್ದಾರೆ. Tac ಜೊತೆ ಚರ್ಚೆ ಮಾಡಿ ಅವರ ಸಲಹೆ ತೆಗೆದುಕೊಂಡಿದ್ದೇವೆ. ಯಾವುದೇ ಕಾರಣಕ್ಕೂ ಹಿಂದೆ

ರಾಜ್ಯದಲ್ಲಿ ಕೊರೊನಾ ಆತಂಕ| ತಾಂತ್ರಿಕ ಸಲಹಾ ಸಮಿತಿ ಸಭೆ ಬಳಿಕ ಸಿಎಂ ಮಾಹಿತಿ| ಕ್ರಿಸ್ ಮಸ್ ಹೊಸ ವರ್ಷ ಆಚರಣೆ ಬಗ್ಗೆ ನೀಡಿದ ಬಿಗ್ ಅಪ್ಡೇಟ್ ಏನು? Read More »

ಗೃಹ ಲಕ್ಷ್ಮಿ ಯೋಜನೆಗೆ ಸರ್ಕಾರದ ಮಹತ್ವದ ನಿರ್ಧಾರ! ಗೃಹಿಣಿಯರೇ, ಇಲ್ಲಿ ಕೇಳಿ

ಸಮಗ್ರ ನ್ಯೂಸ್: ತೆಲಂಗಾಣ ರಾಜ್ಯದಲ್ಲಿ ಹೊಸ ಸರ್ಕಾರ ಹಲವು ಹಳೆಯ ಯೋಜನೆಗಳಿಗೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ಇದರ ಅಂಗವಾಗಿ ಗೃಹಲಕ್ಷ್ಮಿ ಯೋಜನೆ ಹಲವು ಕಸರತ್ತುಗಳನ್ನು ಮಾಡುತ್ತಿದೆ.  ತೆಲಂಗಾಣ ರಾಜ್ಯದಲ್ಲಿನ ಹೊಸ ಸರ್ಕಾರವು ಹಲವು ಹಳೆಯ ಯೋಜನೆಗಳಿಗೆ ಸಂಬಂಧಿಸಿದಂತೆ ಅತ್ಯಂತ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ಈಗಾಗಲೇ ಜಾರಿಗೆ ತಂದಿರುವ ಯೋಜನೆಗಳಲ್ಲಿನ ಅಕ್ರಮಗಳನ್ನು ಗುರುತಿಸಿ ಅವುಗಳ ಜಾಗದಲ್ಲಿ ಹೊಸ ಅರ್ಜಿಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಇದರ ಭಾಗವಾಗಿ ಹಿಂದಿನ ಬಿಆರ್‌ಎಸ್ ಸರ್ಕಾರ ಈಗಾಗಲೇ ತೆಗೆದುಕೊಂಡಿರುವ ಗೃಹಲಕ್ಷ್ಮಿ ಅರ್ಜಿಗಳು ನಿರುಪಯುಕ್ತವಾಗಿವೆ ಎಂದು ಕಾಂಗ್ರೆಸ್

ಗೃಹ ಲಕ್ಷ್ಮಿ ಯೋಜನೆಗೆ ಸರ್ಕಾರದ ಮಹತ್ವದ ನಿರ್ಧಾರ! ಗೃಹಿಣಿಯರೇ, ಇಲ್ಲಿ ಕೇಳಿ Read More »

ಹೊಸ ವರ್ಷಕ್ಕೆ ಹೊಸ ನಿಯಮ; ಹಲವು ಆರ್ಥಿಕ ಬದಲಾವಣೆಗಳಿಗೆ ಸಜ್ಜಾಗಿ

ಸಮಗ್ರ ನ್ಯೂಸ್: ಕ್ಯಾಲೆಂಡರ್ ವರ್ಷ 2023ಕ್ಕೆ ವಿದಾಯ ಹೇಳಲು ದಿನಗಣನೆ ಆರಂಭವಾಗಿದೆ. ದೈನಂದಿನ ಜನಜೀವನದ ಮೇಲೆ ಪರಿಣಾಮ ಬೀರುವಂಥ ಅನೇಕ ಬದಲಾವಣೆಗಳು 2024ರ ಜನವರಿಯಿಂದ ಜಾರಿಗೆ ಬರಲಿವೆ. ಡಿಸೆಂಬರ್ 31ರ ಮಧ್ಯರಾತ್ರಿ ಕಳೆಯುತ್ತಲೇ ಜಾರಿಗೆ ಬರಲಿರುವ ಬದಲಾವಣೆಗಳತ್ತ ಒಂದು ಪಕ್ಷಿ ನೋಟ ಇಲ್ಲಿದೆ. *ಡಿಮ್ಯಾಟ್ ನಾಮನಿರ್ದೇಶನ:* ಷೇರು ಮತ್ತು ಸೆಕ್ಯುರಿಟಿಗಳನ್ನು ವಿದ್ಯುನ್ಮಾನ ರೂಪದಲ್ಲಿ ಹೊಂದಲು ಬಳಕೆಯಾಗುವ ಡಿಮ್ಯಾಟ್ ಖಾತೆಗೆ 2024ರ ಜನವರಿ 1ರೊಳಗೆ ಜನರು ತಮ್ಮ ನಾಮನಿರ್ದೇಶನ ಘೋಷಣೆಗಳನ್ನು ಸಲ್ಲಿಸಬೇಕು ಎಂಬುದನ್ನು ಷೇರು ಮಾರುಕಟ್ಟೆ ನಿಯಂತ್ರಣ ಸಂಸ್ಥೆ

ಹೊಸ ವರ್ಷಕ್ಕೆ ಹೊಸ ನಿಯಮ; ಹಲವು ಆರ್ಥಿಕ ಬದಲಾವಣೆಗಳಿಗೆ ಸಜ್ಜಾಗಿ Read More »

ರಾಜ್ಯದಲ್ಲಿ ಇಂದು 22 ಮಂದಿಗೆ ಕೋವಿಡ್ ಪಾಸಿಟಿವ್| ಸೋಂಕಿತರಲ್ಲಿ ಇಬ್ಬರು ಸಾವು

ಸಮಗ್ರ ನ್ಯೂಸ್: ರಾಜ್ಯದಲ್ಲಿ ಕೋವಿಡ್ ( Covid19 ) ಆರ್ಭಟ ಶುರುವಾಗಿದೆ. ವಿವಿಧ ಜಿಲ್ಲೆಗಳಲ್ಲಿ ಇಂದು ಒಂದೇ ದಿನ 22 ಮಂದಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಅಲ್ಲದೇ ಸೋಂಕಿತರಲ್ಲಿ ಇಬ್ಬರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಈ ಕುರಿತಂತೆ ರಾಜ್ಯ ಆರೋಗ್ಯ ಇಲಾಖೆಯಿಂದ ( Karnataka Health Department ) ಮಾಹಿತಿ ನೀಡಲಾಗಿದ್ದು, ಬೆಂಗಳೂರು ನಗರದಲ್ಲಿ 359 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಇವರಲ್ಲಿ 19 ಜನರಿಗೆ ಕೊರೋನಾ ಪಾಸಿಟಿವ್ ಎಂಬುದು ವರದಿಯಲ್ಲಿ ದೃಢಪಟ್ಟಿದೆ ಎಂದಿದೆ. ಚಿಕ್ಕಬಳ್ಳಾಪುರದಲ್ಲಿ 94

ರಾಜ್ಯದಲ್ಲಿ ಇಂದು 22 ಮಂದಿಗೆ ಕೋವಿಡ್ ಪಾಸಿಟಿವ್| ಸೋಂಕಿತರಲ್ಲಿ ಇಬ್ಬರು ಸಾವು Read More »

ಸೂರಜ್ ರೇವಣ್ಣಗೆ ಬಿಗ್ ರಿಲೀಫ್ ನೀಡಿದ ಹೈಕೋರ್ಟ್/ ಅನರ್ಹ ಅರ್ಜಿ ವಜಾ

ಸಮಗ್ರ ನ್ಯೂಸ್: ವಿಧಾನ ಪರಿಷತ್‌ ಸದಸ್ಯ ಸ್ಥಾನದಿಂದ ಸೂರಜ್ ರೇವಣ್ಣ ಅವರನ್ನು ಅನರ್ಹಗೊಳಿಸಲು ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾ ಮಾಡಿದೆ. ವಕೀಲ ದೇವರಾಜೇಗೌಡ ಲೋಕಸಭೆ ಚುನಾವಣೆಯಲ್ಲಿ ಅಕ್ರಮ ನಡೆಸಿದ ಆರೋಪದ ಮೇಲೆ, ಪರಿಷತ್ ಸದಸ್ಯ ಸ್ಥಾನದಿಂದ ಸೂರಜ್ ರೇವಣ್ಣರನ್ನು ಅನರ್ಹಗೊಳಿಸುವಂತೆ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಇದೀಗ ವಿಧಾನಪರಿಷತ್‌ ಸದಸ್ಯ ಸೂರಜ್ ರೇವಣ್ಣಗೆ ಬಿಗ್ ರಿಲೀಫ್ ಸಿಕ್ಕಿದ್ದು, ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಹೈಕೊರ್ಟ್ ಪೀಠಅರ್ಜಿಯನ್ನು ವಜಾಗೊಳಿಸಿದೆ.

ಸೂರಜ್ ರೇವಣ್ಣಗೆ ಬಿಗ್ ರಿಲೀಫ್ ನೀಡಿದ ಹೈಕೋರ್ಟ್/ ಅನರ್ಹ ಅರ್ಜಿ ವಜಾ Read More »

‘ಗ್ಯಾಸ್ ಸಂಪರ್ಕ ಹೊಂದಿದವರು ಕೆವೈಸಿ ಮಾಡಿಸಿದ್ರೆ ₹500 ಸಬ್ಸಿಡಿ’| ಜಾಲತಾಣಗಳಲ್ಲಿ ಹರಿದಾಡ್ತಿರೋ ಸಂದೇಶದ ಅಸಲಿಯತ್ತೇನು?

ಸಮಗ್ರ ನ್ಯೂಸ್: ಗ್ಯಾಸ್ ಸಂಪರ್ಕ ಇದ್ದವರು ತಮ್ಮ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ, ಗ್ಯಾಸ್ ಏಜೆನ್ಸಿ ನೀಡಿದ ಕಾರ್ಡ್, ಈ ಮೂರನ್ನು ಡಿ. 31ರೊಳಗೆ ಆಯಾ ಗ್ಯಾಸ್ ಏಜೆನ್ಸಿಯ ಕಚೇರಿಗೆ ತೆಗೆದುಕೊಂಡು ಹೋಗಿ ಕಡ್ಡಾಯವಾಗಿ ಕೆವೈಸಿ ಮಾಡಿಸಬೇಕು. ಕೆವೈಸಿ ಮಾಡಿಸಿದರೆ ಜನವರಿ 1ರಿಂದ ಪ್ರತೀ ಅನಿಲ ಗ್ರಾಹಕರಿಗೆ 500 ರೂ. ಸಬ್ಸಿಡಿ ಸಿಗುತ್ತದೆ. ಇಲ್ಲದಿದ್ದರೆ ‘ಅಡುಗೆ ಅನಿಲ’ವು 2024ರ ಜನವರಿ 1ರ ಬಳಿಕ ‘ವಾಣಿಜ್ಯ ಅನಿಲ’ವಾಗಿ ಮಾರ್ಪಾಡು ಹೊಂದಲಿದೆ. ಇದರಿಂದ ನಿಮಗೆ ನಷ್ಟವಾಗಲಿದೆ. ಹಾಗಾಗಿ ತಕ್ಷಣ

‘ಗ್ಯಾಸ್ ಸಂಪರ್ಕ ಹೊಂದಿದವರು ಕೆವೈಸಿ ಮಾಡಿಸಿದ್ರೆ ₹500 ಸಬ್ಸಿಡಿ’| ಜಾಲತಾಣಗಳಲ್ಲಿ ಹರಿದಾಡ್ತಿರೋ ಸಂದೇಶದ ಅಸಲಿಯತ್ತೇನು? Read More »

ರಾಜಕೀಯ, ಧಾರ್ಮಿಕ ಸಮಾವೇಶವನ್ನು ಮೀರಿಸಿದ ಗುತ್ತಿಗಾರಿನ ಸೌಜನ್ಯಳ ಪರ ನ್ಯಾಯಕ್ಕಾಗಿ ಹೋರಾಟ| ಅಜೆಂಡಾ, ಸಿದ್ದಾಂತಗಳಿಗೆ ಎರಡನೇ ಪ್ರಾಶಸ್ತ್ಯ;ಪ್ರಬುದ್ದ ಯೋಚನೆಗಳತ್ತ ಯುವ ಸಮುದಾಯದ ಮಿಡಿತ..?

ಸಮಗ್ರ ನ್ಯೂಸ್: ಸೌಜನ್ಯ ಹೋರಾಟ ಸಮಿತಿ ಗುತ್ತಿಗಾರು ವತಿಯಿಂದ ಸುಳ್ಯ ತಾಲೂಕಿನ ಗುತ್ತಿಗಾರಿನಲ್ಲಿ‌ ಜರುಗಿದ ಪ್ರತಿಭಟನಾ ಸಭೆ ಗುತ್ತಿಗಾರಿನ ಮಟ್ಟಿಗೆ ಐತಿಹಾಸಿಕ ಜನಸ್ತೋಮವಾಗಿದ್ದು , ಯುವ ಸಮುದಾಯದ ಪ್ರಯತ್ನಗಳಿಗೆ ಸಿಕ್ಕ ಯಶಸ್ಸು ಎಂದೇ ವಿಶ್ಲೇಷಿಸಲಾಗಿದೆ. ಸಂಘಟಕರ ನಿರೀಕ್ಷೆಯನ್ನು ಮೀರಿ ನೆರೆದಿದ್ದ ಜನಸ್ತೋಮ ಗುತ್ತಿಗಾರಿನ ಮಟ್ಟಿಗೆ ಇದುವರೆಗೆ ರಾಜಕೀಯ ಮತ್ತು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಮಾವೇಶಗೊಂಡಿದ್ದ ಜನಸಂಖ್ಯೆಯನ್ನು ಮೀರಿಸಿದ ಕಾರ್ಯಕ್ರಮವಾಗಿತ್ತು. ಎರಡು ದಶಕಗಳ ಹಿಂದೆ ಗುತ್ತಿಗಾರಿನಲ್ಲಿ ನಡೆದಿದ್ದ ಕನ್ನಡ ಸಾಹಿತ್ಯ ಸಮ್ಮೇಳನ‌ ಮತ್ತು ಪ್ರಥಮ‌ ನವಸಾಕ್ಷರರ ಸಮ್ಮೇಳನದ ಸಾಹಿತ್ಯ ಸಂಗಮ

ರಾಜಕೀಯ, ಧಾರ್ಮಿಕ ಸಮಾವೇಶವನ್ನು ಮೀರಿಸಿದ ಗುತ್ತಿಗಾರಿನ ಸೌಜನ್ಯಳ ಪರ ನ್ಯಾಯಕ್ಕಾಗಿ ಹೋರಾಟ| ಅಜೆಂಡಾ, ಸಿದ್ದಾಂತಗಳಿಗೆ ಎರಡನೇ ಪ್ರಾಶಸ್ತ್ಯ;ಪ್ರಬುದ್ದ ಯೋಚನೆಗಳತ್ತ ಯುವ ಸಮುದಾಯದ ಮಿಡಿತ..? Read More »

ಹೃದಯಾಘಾತದಿಂದ ಏಳನೇ ತರಗತಿ ವಿದ್ಯಾರ್ಥಿನಿ ಸಾವು

ಸಮಗ್ರ ನ್ಯೂಸ್: ಏಳನೇ ತರಗತಿ ವಿದ್ಯಾರ್ಥಿನಿ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೆಸವಳಲು ಜೋಗಣ್ಣನಕೆರೆ ಗ್ರಾಮದಲ್ಲಿ ನಡೆದಿದೆ. 13 ವರ್ಷದ ಸೃಷ್ಟಿ ಮೃತ ವಿದ್ಯಾರ್ಥಿನಿ. ಇಂದು ಬೆಳಗ್ಗೆ ಶಾಲೆಗೆ ತೆರಳುವಾಗ ಸೃಷ್ಟಿ ಕುಸಿದು ಬಿದ್ದಿದ್ದಾಳೆ. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಸೃಷ್ಟಿಯ ಪ್ರಾಣಪಕ್ಷಿ ಹಾರಿ ಹೋಗಿದೆ. ಹೃದಯಾಘಾತದಿಂದಲೇ ಸೃಷ್ಟಿ ಮೃತಪಟ್ಟಿದ್ದಾಳೆ ಎಂದು ಮೂಡಿಗೆರೆ ಎಂಜಿಎಂ ಸರ್ಕಾರಿ ವೈದ್ಯರು ಮಾಹಿತಿ ನೀಡಿದ್ದಾರೆ. ಮೃತ ವಿದ್ಯಾರ್ಥಿನಿ ದಾರದಹಳ್ಳಿ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಮಗಳ ಸಾವಿನಿಂದ

ಹೃದಯಾಘಾತದಿಂದ ಏಳನೇ ತರಗತಿ ವಿದ್ಯಾರ್ಥಿನಿ ಸಾವು Read More »

ಕೊರೊನಾ ಏರಿಕೆ ಹಿನ್ನಲೆ| ಸಾರಿಗೆ ಬಸ್ ಗಳಲ್ಲಿ ಮಾಸ್ಕ್ ಧರಿಸಿ ಪ್ರಯಾಣಿಸಲು ಸಚಿವ ರೆಡ್ಡಿ ಸೂಚನೆ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದ್ದು, ಸರ್ಕಾರದ ಮಾರ್ಗಸೂಚಿಯಂತೆ ಬಸ್ ಗಳಲ್ಲಿ ಮಾಸ್ಕ್ ಧರಿಸಿ ಪ್ರಯಾಣಿಸುವಂತೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸೂಚಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಸಚಿವರು, ಕೋವಿಡ್ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಪ್ರತಿಯೊಬ್ಬ ಪ್ರಯಾಣಿಕರು ಮಾಸ್ಕ್ ಧರಿಸಿ ಪ್ರಯಾಣಿಸಿ ಎಂದು ಸಲಹೆ ನೀಡಿದ್ದಾರೆ. ಸರ್ಕಾರದ ಆದೇಶವನ್ನು ನಾವು ಕಟ್ಟುನಿಟ್ಟಾಗಿ ಪಾಲಿಸುತ್ತೇವೆ. ಕೇಂದ್ರ ಆರೋಗ್ಯ ಸಚಿವರ ಜೊತೆ ದಿನೇಶ್ ಗುಂಡೂರಾವ್ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಸಚಿವರು ಸಲಹೆ ಪಡೆದಿದ್ದಾರೆ. ಅದರಂತೆ ಮುಜರಾಯಿ ಇಲಾಖೆ, ಸಾರಿಗೆ ನಿಗಮಗಳಲ್ಲಿ

ಕೊರೊನಾ ಏರಿಕೆ ಹಿನ್ನಲೆ| ಸಾರಿಗೆ ಬಸ್ ಗಳಲ್ಲಿ ಮಾಸ್ಕ್ ಧರಿಸಿ ಪ್ರಯಾಣಿಸಲು ಸಚಿವ ರೆಡ್ಡಿ ಸೂಚನೆ Read More »