ರಾಜ್ಯ

ಕೋಳಿ ಅಂಕದ ಮೇಲೆ ಪೊಲೀಸರ ದಾಳಿ

ಸಮಗ್ರ ನ್ಯೂಸ್: ಜೂಜಾಟ ಅಡ್ಡೆಯ ಮೇಲೆ ಪೊಲೀಸರು ದಾಳಿ ನಡೆಸಿ 12 ಮಂದಿ ಜೂಜುಕೋರರನ್ನು ಬಂಧಿಸಿರುವ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಕಲ್ಲೂರು ಗ್ರಾಮದ ಬಳಿ ನಡೆದಿದೆ. ಕೋಲಾರ ಮೂಲದ ಜೂಜುಕೋರರಿಂದ ಜೂಜು ಅಡ್ಡೆ ತೆರೆದಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಇಂದು, ಕೋಳಿ ಅಂಕದ ಮೇಲೆ ದಾಳಿ ನಡೆಸಿದ್ದರು. ಈ ವೇಳೆ 12 ಮಂದಿ ಜೂಜುಕೋರರಿಂದ 17 ಸಾವಿರ ನಗದು, 8 ಬೈಕ್, 8 ಮೊಬೈಲ್ 3 ಪಂದ್ಯ ಕೋಳಿಗಳು ವಶಕ್ಕೆ ಪಡೆದುಕೊಳ್ಳಲಾಗಿದೆ.

ಕೋಳಿ ಅಂಕದ ಮೇಲೆ ಪೊಲೀಸರ ದಾಳಿ Read More »

ಕೊಡಗಿನಲ್ಲಿ ಪ್ರವಾಸಿಗರದೇ ಕಾರು-ಬಾರು|ಟ್ರಾಫಿಕ್ ಜಾಮ್

ಸಮಗ್ರ ನ್ಯೂಸ್: ಕ್ರಿಸ್ಮಸ್ ಹಾಗೂ ಹೊಸ ವರ್ಷ ಆಚರಣೆಗೆ ಕೊಡಗು ಜಿಲ್ಲೆಗೆ ಕಳೆದ ಬಾರಿಗಿಂತ ಅತ್ಯಧಿಕ ಪ್ರವಾಸಿಗರು ಆಗಮಿಸಿದ್ದಾರೆ. ಜಿಲ್ಲಾ ಕೇಂದ್ರವಾದ ಮಡಿಕೇರಿಯಲ್ಲಿ ಈ ಸಂಜೆ ಪ್ರವಾಸಿ ತಾಣವಾದ ರಾಜ ಸೀಟಿನಲ್ಲಿ ಅಸಂಖ್ಯ ಪ್ರವಾಸಿಗರು ನೆರೆದು ಪ್ರಕೃತಿ ಸೌಂದರ್ಯವನ್ನು ಸವಿದರು. ಮಡಿಕೇರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ಪೊಲೀಸರು ಹರಸಾಹಸ ಪಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಲಾಡ್ಜು ಹೋಂ ಸ್ಟೇ ರೆಸಾರ್ಟ್ ಗಳೆಲ್ಲ ಭರ್ತಿಯಾಗಿ ಕೆಲವು ಪ್ರವಾಸಿಗರಂತು ವಾಹನ ದಟ್ಟಣೆಯನ್ನು ನೋಡಿ ಯಾಕಪ್ಪ ಈ ಸಮಯದಲ್ಲಿ ನಾವು ಬಂದಿದ್ದೇವೆ ಅನಿಸಿದಂತೂ

ಕೊಡಗಿನಲ್ಲಿ ಪ್ರವಾಸಿಗರದೇ ಕಾರು-ಬಾರು|ಟ್ರಾಫಿಕ್ ಜಾಮ್ Read More »

ಹೊಸ ವರ್ಷಕ್ಕೆ ಹೊಸ ಹಾಡಿನೊಂದಿಗೆ ಹುರುಪು ತಂದ ಚಂದನ್ ಶೆಟ್ಟಿ

ಸಮಗ್ರ ನ್ಯೂಸ್: ಚಂದನ್ ಶೆಟ್ಟಿ ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ. ಕನ್ನಡದ ಜನಪ್ರಿಯ ರ್ಯಾಪರ್​ಗಳಲ್ಲಿ ಇವರು ಪ್ರಮುಖರು. ಕಾಲ-ಕಾಲಕ್ಕೆ ಹೊಸ ಹಾಡುಗಳೊಟ್ಟಿಗೆ ಜನರ ಮುಂದೆ ಬರುತ್ತಲೇ ಇರುತ್ತಾರೆ. ಸಿನಿಮಾಗಳಿಗೂ ಸಂಗೀತ ನೀಡಿರುವ ಚಂದನ್ ಶೆಟ್ಟಿ, ಇದೀಗ ನಟನಾಗಿಯೂ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಇದೆಲ್ಲದರ ನಡುವೆ ಹೊಸ ವರ್ಷಕ್ಕೆ ಹೊಸದೊಂದು ರ್ಯಾಪ್ ಹಾಡಿನೊಂದಿಗೆ ಚಂದನ್ ಶೆಟ್ಟಿ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಟಪಾಂಗುಚಿ ಮಾದರಿಯ ಹಾಡೊಂದನ್ನು ಚಂದನ್ ಶೆಟ್ಟಿ ಬಿಡುಗಡೆ ಮಾಡಿದ್ದಾರೆ. ಪ್ರತಿವರ್ಷ ಡಿಸೆಂಬರ್ ತಿಂಗಳ ಕೊನೆಯಲ್ಲಿ ಚಂದನ್ ಶೆಟ್ಟಿ

ಹೊಸ ವರ್ಷಕ್ಕೆ ಹೊಸ ಹಾಡಿನೊಂದಿಗೆ ಹುರುಪು ತಂದ ಚಂದನ್ ಶೆಟ್ಟಿ Read More »

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಬೃಜೇಶ್ ಚೌಟ ಆಯ್ಕೆ

ಸಮಗ್ರ ನ್ಯೂಸ್: ಭಾರತೀಯ ಜನತಾ ಪಾರ್ಟಿ(BJP) ಕರ್ನಾಟಕ ರಾಜ್ಯ ಕಾರ್ಯದರ್ಶಿಯಾಗಿ ಕ್ಯಾಪ್ಟನ್ ಬೃಜೇಶ್ ಚೌಟ ಆಯ್ಕೆಯಾಗಿದ್ದಾರೆ. ಕ್ಯಾಪ್ಟನ್ ಬೃಜೇಶ್ ಚೌಟಾ ಮಾಜಿ ಸೈನಿಕರಾಗಿ, ರಾಜಕೀಯ ಚಿಂತಕನಾಗಿ, ವಾಣಿಜ್ಯೋದ್ಯಮಿ, ಶಿಕ್ಷಣ ತಜ್ಞ ಮತ್ತು ನಿರ್ವಹಣಾ ತಜ್ಞರಾಗಿದ್ದಾರೆ. ಕ್ಯಾಪ್ಟನ್ ಚೌಟ ಅವರು ಭಾರತೀಯ ಸೇನೆಯ ಮಾನವ ಸಂಪನ್ಮೂಲ, ಭದ್ರತೆ, ಕಾರ್ಯಾಚರಣೆಗಳು, ಆಡಳಿತ ಮತ್ತು ಲಾಜಿಸ್ಟಿಕ್ಸ್‌ನ ಸ್ವತಂತ್ರ ನಿರ್ವಹಣೆಯಲ್ಲಿ ಏಳು ವರ್ಷಗಳ ಅನುಭವವನ್ನು ಹೊಂದಿರುವ ಸ್ನೇಹಪರ ಮತ್ತು ಸಮರ್ಥ ವೃತ್ತಿಪರರಾಗಿದ್ದಾರೆ. ಮಂಗಳೂರು ಕಂಬಳದ ರುವಾರಿಗಳು ಆಗಿರುತ್ತಾರೆ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿಯ

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಬೃಜೇಶ್ ಚೌಟ ಆಯ್ಕೆ Read More »

ದೇವಾಲಯಗಳ ನಿರ್ವಹಣೆಗೆ ಕೋರ್ಸ್/ ಆಕ್ಸ್ ಫರ್ಡ್ ಹಿಂದೂ ಅಧ್ಯಯನ ಕೇಂದ್ರದೊಂದಿಗೆ ಮುಂಬೈ ವಿಶ್ವವಿದ್ಯಾಲಯ ಒಡಂಬಡಿಕೆ

ಸಮಗ್ರ ನ್ಯೂಸ್: ಮುಂಬೈ ವಿಶ್ವವಿದ್ಯಾಲಯ ದೇವಾಲಯಗಳ ನಿರ್ವಹಣೆಗೆ ಸಂಬಂಧಿಸಿದ ಹೊಸ ಕೋರ್ಸ್ ಆರಂಭಿಸಲು ಆಕ್ಸ್ ಫರ್ಡ್ ಹಿಂದೂ ಅಧ್ಯಯನ ಕೇಂದ್ರದೊಂದಿಗೆ ಒಡಂಬಡಿಕೆಗೆ ಸಹಿ ಹಾಕಿದೆ. ಈ ಒಡಂಬಡಿಕೆ ಅನ್ವಯ ಆಫ್‍ಲೈನ್ ಮತ್ತು ಆನ್‍ಲೈನ್ ಮೂಲಕ ಈ ಡಿಪ್ಲೋಮಾ ಕೋರ್ಸ್ ಕಲಿಯಬಹುದಾಗಿದೆ. ಇತರ ಡಿಪ್ಲೋಮಾ ಕೋರ್ಸ್‍ಗಳಂತೆಯೇ ದೇವಾಲಯ ನಿರ್ವಹಣೆ ಕೋರ್ಸ್ ಕೂಡಾ ಇರಲಿದೆ ಎಂದು ವಿಶ್ವವಿದ್ಯಾಲಯ ಹೇಳಿದೆ.~ಆಕ್ಸ್ ಫರ್ಡ್ ಹಿಂದೂ ಅಧ್ಯಯನ ಕೇಂದ್ರದೊಂದಿಗೆ ಮಾಡಿಕೊಂಡ ಒಡಂಬಡಿಕೆಯಲ್ಲಿ ವಿಶ್ವವಿದ್ಯಾಲಯದ ಹಿಂದೂ ಅಧ್ಯಯನ ಕೇಂದ್ರ ಹಾಗೂ ಸಂಸ್ಕøತ ವಿಭಾಗಗಳೂ ಜತೆಗೂಡಿವೆ. ಈ

ದೇವಾಲಯಗಳ ನಿರ್ವಹಣೆಗೆ ಕೋರ್ಸ್/ ಆಕ್ಸ್ ಫರ್ಡ್ ಹಿಂದೂ ಅಧ್ಯಯನ ಕೇಂದ್ರದೊಂದಿಗೆ ಮುಂಬೈ ವಿಶ್ವವಿದ್ಯಾಲಯ ಒಡಂಬಡಿಕೆ Read More »

ರಾಜ್ಯ ಬಿಜೆಪಿಗೆ ನೂತನ ಪದಾಧಿಕಾರಿಗಳ ನೇಮಕ

ಸಮಗ್ರ ನ್ಯೂಸ್: ರಾಜ್ಯ ಬಿಜೆಪಿಗೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿ 10 ಜನರನ್ನು ನೇಮಕ ಮಾಡಲಾಗಿದೆ. ಪ್ರಧಾನ ಕಾರ್ಯದರ್ಶಿಗಳಾಗಿ ನಾಲ್ವರು, 10 ಜನ ರಾಜ್ಯ ಕಾರ್ಯದರ್ಶಿಗಳ ನೇಮಕ ಮಾಡಲಾಗಿದೆ. ಮಹಿಳಾ ಮೋರ್ಚಾ ಅಧ್ಯಕ್ಷರಾಗಿ ಸಿ. ಮಂಜುಳಾ, ಯುವ ಮೋರ್ಚಾ ಅಧ್ಯಕ್ಷರಾಗಿ ಧೀರಜ್ ಮುನಿರಾಜು, ಎಸ್ ಟಿ ಮೋರ್ಚಾ ಅಧ್ಯಕ್ಷರಾಗಿ ಬಂಗಾರು ಹನುಮಂತು, ಎಸ್ಸಿ ಮೋರ್ಚಾ ಅಧ್ಯಕ್ಷರಾಗಿ ಶಾಸಕ ಸಿಮೆಂಟ್ ಮಂಜು, ಹಿಂದುಳಿದ ವರ್ಗ ಮೋರ್ಚಾ ಅಧ್ಯಕ್ಷರಾಗಿ ರಘು ಕೌಟಿಲ್ಯ, ರೈತ ಮೋರ್ಚಾ ಅಧ್ಯಕ್ಷರಾಗಿ

ರಾಜ್ಯ ಬಿಜೆಪಿಗೆ ನೂತನ ಪದಾಧಿಕಾರಿಗಳ ನೇಮಕ Read More »

ಹಿಜಾಬ್ ನಿಷೇಧ ಆದೇಶ ಇನ್ನೂ ವಾಪಾಸ್ ಪಡೆದಿಲ್ಲ/ ಉಲ್ಟಾ ಹೊಡೆದ್ರಾ ಸಿಎಂ ಸಿದ್ದರಾಮಯ್ಯ?

ಸಮಗ್ರ ನ್ಯೂಸ್: ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಜಾಬ್ ನಿಷೇಧ ತೆರವಿನ ಬಗ್ಗೆ ಮಾತನಾಡಿದ ಹಿನ್ನಲೆಯಲ್ಲಿ ರಾಜ್ಯದಲ್ಲಿ ಹಿಜಾಬ್ ವಿಚಾರ ಮತ್ತೆ ಮುನ್ನೆಲೆಗೆ ಬಂದಿದ್ದು, ಇಡೀ ರಾಜ್ಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಸಿದ್ದರಾಮಯ್ಯ ಮತ್ತೆ ಮಾತನಾಡಿದ್ದು, ರಾಜ್ಯದಲ್ಲಿ ಹಿಜಾಬ್ ನಿಷೇಧ ಆದೇಶ ಇನ್ನೂ ವಾಪಾಸ್ ಪಡೆದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಯಾರೋ ಪ್ರಶ್ನೆ ಕೇಳಿದ್ದರು, ಅದಕ್ಕೆ ಉತ್ತರ ಕೊಟ್ಟಿದ್ದೇನೆ ಅಷ್ಟೆ. ಹಿಜಾಬ್ ನಿಷೇಧ ಆದೇಶ ವಾಪಾಸ್ ಬಗ್ಗೆ ಯೋಚನೆ ಮಾಡುತ್ತಿದ್ದು, ಸರ್ಕಾರದಲ್ಲಿ ಈ ಬಗ್ಗೆ ಚರ್ಚೆಯಾಗಲಿದೆ. ನಂತರ ನಿರ್ಧಾರಕ್ಕೆ ಬರುತ್ತೇವೆ

ಹಿಜಾಬ್ ನಿಷೇಧ ಆದೇಶ ಇನ್ನೂ ವಾಪಾಸ್ ಪಡೆದಿಲ್ಲ/ ಉಲ್ಟಾ ಹೊಡೆದ್ರಾ ಸಿಎಂ ಸಿದ್ದರಾಮಯ್ಯ? Read More »

ಸರ್ಕಾರಿ ಆಸ್ಪತ್ರೆಗಳಿಗೆ ಲೋಕಾಯುಕ್ತ ಶಾಕ್‌‌…

ಸಮಗ್ರ ನ್ಯೂಸ್: ಬೆಂಗಳೂರಿನಲ್ಲಿ ಸರ್ಕಾರಿ ಆಸ್ಪತ್ರೆಗಳ ಮೇಲೆ ಲೋಕಾಯುಕ್ತ ದಾಳಿ ಮಾಡಿದೆ. ಕೆ.ಸಿ ಜನರಲ್ ಆಸ್ಪತ್ರೆಗೆ ಲೋಕಾಯುಕ್ತ ಡಿಜಿಪಿ ಮತ್ತು ಎಸ್​​ಪಿ ಭೇಟಿ ನೀಡಿದ್ದರು. ಲೋಕಾಯುಕ್ತ ಡಿಜಿಪಿ ಪ್ರಶಾಂತ್ ಕುಮಾರ್ ಠಾಕೂರ್ ಹಾಗೂ ಲೋಕಾಯುಕ್ತ ಎಸ್ಪಿ ವಂಶಿಕೃಷ್ಣ ಆಸ್ಪತ್ರೆಯಲ್ಲಿ ಪರಿಶೀಲನೆ ನಡೆಸಿದರು. ಆಸ್ಪತ್ರೆ ವೈದ್ಯಕೀಯ ಅಧೀಕ್ಷಕರಾದ ಡಾ. ಇಂದಿರಾ ಕಬಾಡೆ ಬಳಿ ಲೋಕಾಯುಕ್ತ ಡಿಜಿಪಿ ಬಳಿ ಮಾಹಿತಿ ಪಡೆದರು. ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸರ್ಕಾರಿ ಅಸ್ಪತ್ರೆಗಳ ಮೇಲೆ ದಾಳಿ ಮಾಡಿ ಲೋಕಾಯುಕ್ತ ಶಾಕ್‌

ಸರ್ಕಾರಿ ಆಸ್ಪತ್ರೆಗಳಿಗೆ ಲೋಕಾಯುಕ್ತ ಶಾಕ್‌‌… Read More »

ಮಕ್ಕಳ ಕೈಯಲ್ಲೇ ಶೌಚಾಲಯ ಕ್ಲೀನ್ ಮಾಡಿಸಿದ ಶಿಕ್ಷಕರು…! ಒಂದು ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಪ್ರಕರಣ

ಸಮಗ್ರ ನ್ಯೂಸ್: ಇತ್ತಿಚೇಗಷ್ಟೆ ಶೌಚಗುಂಡಿಗೆ ಮಕ್ಕಳನ್ನ ಇಳಿಸಿದ ಪ್ರಕರಣ ಕೋಲಾರದಲ್ಲಿ ನಡೆದಿತ್ತು. ಅದು ಮಾಸುವ ಬೆನ್ನೆಲ್ಲೇ ಮತ್ತೊಂದು ಪ್ರಕರಣ ಬಯಲಿಗೆ ಬಂದಿದೆ. ಬೆಂಗಳೂರಿನ ಯಶವಂತಪುರ ವಿಧಾನಸಭಾ ಕ್ಷೇತ್ರದ ಸರ್ಕಾರಿ ಶಾಲೆಯಲ್ಲಿ ಮತ್ತೊಂದು ಘಟನೆ ನಡೆದಿದೆ. ಯಶವಂತ ವಿಧಾನಸಭಾ ಕ್ಷೇತ್ರದ ಆಂದ್ರಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಕೈಯಿಂದ ಟಾಯ್ಲೇಟ್ ಕ್ಲೀನಿಂಗ್ ಮಾಡಿಸಲಾಗಿದೆ. ಈ ಬಗ್ಗೆ ಪೋಷಕರಿಗೆ ವಿಷಯ ಗೊತ್ತಾಗಿ, ಶಾಲೆಯ ಮುಂದೆ ಪ್ರತಿಭಟನೆ ಮಾಡಲಾಗುತ್ತಿದೆ. ಮಕ್ಕಳ ಕೈಯಿಂದ ಶೌಚಾಲಯ ಸ್ವಚ್ಛಗೊಳಿಸಿದ್ದಕ್ಕೆ ಪೋಷಕರು ಅಸಮಾಧಾನಗೊಂಡಿದ್ದಾರೆ. ಶಾಲೆಯ ಮುಂದೆ ಜಮಾಯಿಸುತ್ತಿರುವ

ಮಕ್ಕಳ ಕೈಯಲ್ಲೇ ಶೌಚಾಲಯ ಕ್ಲೀನ್ ಮಾಡಿಸಿದ ಶಿಕ್ಷಕರು…! ಒಂದು ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಪ್ರಕರಣ Read More »

ಹಿಜಾಬ್ ನಿಷೇಧ ವಾಪಸ್/ ಸಿದ್ದರಾಮಯ್ಯ ಘೋಷಣೆ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಹಿಜಾಬ್ ನಿಷೇಧ ವಾಪಸ್ ಪಡೆಯಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿನಲ್ಲಿ ಘೋಷಣೆ ಮಾಡಿದ್ದಾರೆ. ಬಿಜೆಪಿ ಸರ್ಕಾರ ಹಿಜಾಬ್ ನಿಷೇಧಿಸಿದ್ದು, ಅದನ್ನು ವಾಪಸ್ ಪಡೆಯಲಾಗುವುದು. ಹಿಜಾಬ್ ನಿಷೇಧ ವಾಪಸ್‍ಗೆ ತಿಳಿಸಿದ್ದೇನೆ ಎಂದು ಸಿಎಂ ತಿಳಿಸಿದರು. ಉಡುಪು ಅವರವರ ಇಷ್ಟ. ಪ್ರಧಾನಿ ಮೋದಿ ಅವರ ಸಬ್ ಕಾ ಸಾಥ್-ಸಬ್ ಕಾ ವಿಕಾಸ್ ಎನ್ನುವುದು ಬೋಗಸ್. ಬಟ್ಟೆ, ಉಡುಪು, ಜಾತಿ ಆಧಾರದ ಮೇಲೆ ಜನರನ್ನು ವಿಭಜಿಸುವ, ಸಮಾಜವನ್ನು ವಿಭಜಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ನಾವು ಅಂತಹ ಕೆಲಸ

ಹಿಜಾಬ್ ನಿಷೇಧ ವಾಪಸ್/ ಸಿದ್ದರಾಮಯ್ಯ ಘೋಷಣೆ Read More »