ರಾಜ್ಯ

ನ್ಯೂ ಇಯರ್​ ಸೆಲೆಬ್ರೇಷನ್​ನಲ್ಲಿ ಮುಳ್ಳುಹಂದಿ ಮಾಂಸ, ಆಮೇಲಾಗಿದ್ದೇ ಅವಾಂತರ!

ಸಮಗ್ರ ನ್ಯೂಸ್: ಅತಿಥಿಗಳಿಗೆ ಮಾಂಸ ನೀಡಲು ಕಾಡುಪ್ರಾಣಿಗಳನ್ನು ಬೇಟೆಯಾಡಿದ ಖಾಸಗಿ ಎಸ್ಟೇಟ್ ನೌಕರರು ಹಾಗೂ ಅತಿಥಿಗಳನ್ನು ಇಡುಕ್ಕಿಯ ಶಾಂತನಪಾರಾದಲ್ಲಿ ಬಂಧಿಸಲಾಗಿದೆ. ಬೇಟೆಗೆ ಬಳಸುತ್ತಿದ್ದ ಬಂದೂಕನ್ನೂ ವಶಪಡಿಸಿಕೊಳ್ಳಲಾಗಿದೆ. ಶಾಂತನಪಾರಾದ ಜಿಎ ತೋಟದಿಂದ ಮುಳ್ಳುಹಂದಿಯನ್ನು ಬೇಟೆಯಾಡಿ ಮಾಂಸ ತಿಂದಿದ್ದಾರೆ. ಬಳಿಕ ವಾಪಸ್ ಬರುವಾಗ ವಾಹನದಲ್ಲಿ ಮುಳ್ಳುಹಂದಿ ತೆಗೆದುಕೊಂಡು ಹೋಗಿದ್ದಾರೆ. ತಲಕೋಡು ಚೆಕ್ ಪೋಸ್ಟ್ ನಲ್ಲಿ ತಪಾಸಣೆ ನಡೆಸಿದಾಗ ವಾಹನದಿಂದ ಮುಳ್ಳುಹಂದಿ ಪತ್ತೆಯಾಗಿದೆ. ಎಸ್ಟೇಟ್ ಪರಿಶೀಲನೆ ವೇಳೆ ಅರಣ್ಯ ಇಲಾಖೆ ಮುಳ್ಳುಹಂದಿ ಮಾಂಸ ಹಾಗೂ ಬೇಟೆಗೆ ಬಳಸುತ್ತಿದ್ದ ಬಂದೂಕನ್ನು ವಶಪಡಿಸಿಕೊಂಡಿದ್ದಾರೆ. ಪೀರುಮೇಡುವಿನ

ನ್ಯೂ ಇಯರ್​ ಸೆಲೆಬ್ರೇಷನ್​ನಲ್ಲಿ ಮುಳ್ಳುಹಂದಿ ಮಾಂಸ, ಆಮೇಲಾಗಿದ್ದೇ ಅವಾಂತರ! Read More »

ಜ.13ರಂದು ಕೆ-ಸೆಟ್ ಪರೀಕ್ಷೆ| ಪರೀಕ್ಷಾ ನಿಯಮಗಳು ಹೀಗಿದೆ

ಸಮಗ್ರ ನ್ಯೂಸ್: ಕೆ-ಸೆಟ್ ಪರೀಕ್ಷೆಯು ಜ.13ರಂದು ನಡೆಯುತ್ತಿದ್ದು, ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು http://kea.kar.nic.in ಜಾಲತಾಣದಲ್ಲಿ ಪ್ರವೇಶ ಪತ್ರವನ್ನು ಡೌನ್‍ಲೋಡ್ ಮಾಡಿಕೊಳ್ಳಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ತಿಳಿಸಿದ್ದಾರೆ. ಜ. 3ರಂದು ಪ್ರಕಟಣೆ ನೀಡಿರುವ ಅವರು, ಅಭ್ಯರ್ಥಿಗಳು ಪರೀಕ್ಷಾ ಕೇಂದ್ರವನ್ನು ಪ್ರವೇಶಿಸುವ ಮುನ್ನ ಪ್ರವೇಶಪತ್ರ ಮತ್ತು ಸರಕಾರದಿಂದ ಮಾನ್ಯವಾಗಿರುವ ನಿಗಧಿತ ಬಗೆಯ ಗುರುತಿನ ಪತ್ರವನ್ನು ತೋರಿಸುವುದು ಕಡ್ಡಾಯವಾಗಿದೆ. ಜತೆಗೆ ಪ್ರವೇಶಪತ್ರದಲ್ಲಿ ನಮೂದಿಸಿರುವ ಪರೀಕ್ಷಾ ಕೇಂದ್ರದಲ್ಲಷ್ಟೇ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಬೇಕು. ಇತ್ತೀಚಿನ ಎರಡು ಭಾವಚಿತ್ರಗಳನ್ನು

ಜ.13ರಂದು ಕೆ-ಸೆಟ್ ಪರೀಕ್ಷೆ| ಪರೀಕ್ಷಾ ನಿಯಮಗಳು ಹೀಗಿದೆ Read More »

ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗದಂತೆ ಗಮನಹರಿಸಿ: ಭೋಸರಾಜು

ಸಮಗ್ರ ನ್ಯೂಸ್: ಮಡಿಕೇರಿ ಜ.02, ಮುಂದಿನ ಆರು ತಿಂಗಳಲ್ಲಿ ಜಿಲ್ಲೆಯ ಗ್ರಾಮೀಣ, ಪಟ್ಟಣ ಹಾಗೂ ನಗರ ಪ್ರದೇಶದಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗದಂತೆ ಗಮನಹರಿಸಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಭೋಸರಾಜು ಅವರು ಸ್ಪಷ್ಟ ನಿರ್ದೇಶನ ನೀಡಿದ್ದಾರೆ. ನಗರದ ಜಿ.ಪಂ.ಸಭಾಂಗಣದಲ್ಲಿ ಮಂಗಳವಾರ ನಡೆದ ಕೆಡಿಪಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕುಡಿಯುವ ನೀರು ಪೂರೈಕೆಗೆ ಪ್ರಥಮ ಆದ್ಯತೆ ನೀಡಬೇಕು. ಜಿಲ್ಲೆಯ ಯಾವ ಭಾಗದಲ್ಲಿಯೂ ಕುಡಿಯುವ

ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗದಂತೆ ಗಮನಹರಿಸಿ: ಭೋಸರಾಜು Read More »

ವಿದ್ಯುತ್ ದರದಲ್ಲಿ ಅಲ್ಪಪ್ರಮಾಣದ ಇಳಿಕೆ !

ಸಮಗ್ರ ನ್ಯೂಸ್: ಗ್ರಾಹಕರು ಬಳಸಿದ ವಿದ್ಯುತ್‌ಗೆ ಜನವರಿ ತಿಂಗಳಲ್ಲಿ ನೀಡಲಿರುವ ಬಿಲ್ ಮೊತ್ತದಲ್ಲಿ ಅಲ್ಪ ಪ್ರಮಾಣದ ಇಳಿಕೆಯಾಗಲಿದೆ. ಗ್ರಾಹಕರಿಗೆ ಎಸ್ಕಾಂಗಳು ಹೊಸ ವರ್ಷದ ಕೊಡುಗೆಯಾಗಿ ನೀಡಿದಂತಾಗಿದೆ.ಆದರೆ ವಿದ್ಯುತ್ ದರ ಕಡಿತವು ಮಾರುಕಟ್ಟೆ ಏರಿಳಿತವನ್ನು ಅವಲಂಬಿಸಿದೆ. ಹೀಗಾಗಿ ಜನವರಿ ನಂತರದ ತಿಂಗಳ ಬಿಲ್‌ನಲ್ಲೂ ಇಳಿಕೆ ಅಥವಾ ಏರಿಕೆ ಖಚಿತಪಡಿಸುವುದು ಸಾಧ್ಯವಿಲ್ಲ ಎಂದು ವಿದ್ಯುತ್ ಸರಬರಾಜು ಕಂಪನಿ ಮೂಲಗಳು ಹೇಳುತ್ತವೆ. ಇಂಧನ ಮತ್ತು ವಿದ್ಯುತ್ ಖರೀದಿ ವೆಚ್ಚ ಹೊಂದಾಣಿಕೆ ಶುಲ್ಕದ ಲಾಭವು ಗ್ರಾಹಕರಿಗೆ ವಿದ್ಯುತ್ ದರ ಕಡಿಮೆ ರೂಪದಲ್ಲಿ ಲಭಿಸಿದೆ.

ವಿದ್ಯುತ್ ದರದಲ್ಲಿ ಅಲ್ಪಪ್ರಮಾಣದ ಇಳಿಕೆ ! Read More »

ಸಿನಿಮಾ ಶೈಲಿಯಲ್ಲಿ ಕಾರಿನಲ್ಲೆ ವಿವಾಹವಾದ ಪ್ರೇಮಿಗಳು… ಸಾಂತ್ವನ ಕೇಂದ್ರದಲ್ಲಿ ಕುಟುಂಬಸ್ಥರ ನಡುವೆ ವಾಗ್ವಾದ

ಸಮಗ್ರ ನ್ಯೂಸ್: ಸಿನಿಮೀಯ ಶೈಲಿಯಲ್ಲಿ ಪ್ರೇಮಿಗಳು ಕಾರಿನಲ್ಲಿ ಪರಸ್ಪರ ಹಾರ ಬದಲಾಯಿಸಿಕೊಳ್ಳುವ ಮೂಲಕ ಮದುವೆಯಾಗಿದ್ದಾರೆ. ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆಯ ಶಿವಪ್ರಸಾದ್ ಮತ್ತು ಕೊಪ್ಪಳ ಮೂಲದ ಯುವತಿ ಅಮೃತಾ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಯುವಕ ಕೆಳಜಾತಿಗೆ ಸೇರಿದ್ದಾನೆ ಎಂಬ ಕಾರಣಕ್ಕೆ ಪೋಷಕರು ಮಗಳ ಪ್ರೇಮ ವಿವಾಹಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಪ್ರೇಮಿಗಳು ಮಂಗಳವಾರ ಸಂಜೆ ಓಡಿ ಹೋಗಿ ಸಿರುಗುಪ್ಪ ನಗರದಲ್ಲಿ ಕಾರಿನಲ್ಲಿ ಹಾರ ಬದಲಾಯಿಸಿಕೊಂಡು ವಿವಾಹವಾಗಿದ್ದಾರೆ. ಬಳಿಕ ತೆಕ್ಕಲುಕೋಟೆ ಠಾಣೆಗೆ ಬಂದು ರಿಜಿಸ್ಟರ್​ ಮದುವೆ ಮಾಡಿಸಿ ಎಂದು ಪೊಲೀಸರ

ಸಿನಿಮಾ ಶೈಲಿಯಲ್ಲಿ ಕಾರಿನಲ್ಲೆ ವಿವಾಹವಾದ ಪ್ರೇಮಿಗಳು… ಸಾಂತ್ವನ ಕೇಂದ್ರದಲ್ಲಿ ಕುಟುಂಬಸ್ಥರ ನಡುವೆ ವಾಗ್ವಾದ Read More »

22 ರಂದು ಗೋಧ್ರಾ ರೀತಿಯ ಅಪಾಯ ಸಂಭವಿಸುವ ಮಾಹಿತಿ ಇದೆ, ಅಯೋಧ್ಯ ಯಾತ್ರಿಗಳಿಗೆ ಸರ್ಕಾರ ರಕ್ಷಣೆ ನೀಡಿ: ಬಿ.ಕೆ ಹರಿಪ್ರಸಾದ್ ಸ್ಪೋಟಕ ಹೇಳಿಕೆ

ಸಮಗ್ರ ನ್ಯೂಸ್: ರಾಜ್ಯ ರಾಜಕೀಯದಲ್ಲಿ ಈಗ ಸ್ಪೋಟಕ ಹೇಳಿಕೆಯೊಂದು ಎಲ್ಲರಲ್ಲಿ ಸಂಶಯ ಮೂಡುವಂತೆ ಮಾಡಿದೆ. ಜನವರಿ 22ರಂದು ಅಯೋಧ್ಯೆಗೆ ತೆರಳುವವರಿಗೆ ಸರ್ಕಾರ ರಕ್ಷಣೆ ನೀಡಬೇಕು. ಗೋಧ್ರಾ ದುರಂತದ ರೀತಿ ಮತ್ತೆ ಅಪಾಯ ಸಂಭವಿಸುವ ಮಾಹಿತಿ ಇದೆ. ನಮಗೆ ಮಾಹಿತಿ ಸಿಗುತ್ತಿದೆ. ಹೀಗಾಗಿ ಅಯೋಧ್ಯೆಗೆ ತೆರಳುವವರಿಗೆ ರಕ್ಷಣೆ ಒದಗಿಸುವ ಕೆಲಸ ಆಗಬೇಕು ಎಂದು ಕಾಂಗ್ರೆಸ್ ಮುಖಂಡ, ಎಂಎಲ್​ಸಿ ಬಿ.ಕೆ.ಹರಿಪ್ರಸಾದ್ ಸ್ಪೋಟಕ ಹೇಳಿಕೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮ ಧಾರ್ಮಿಕ ಕಾರ್ಯಕ್ರಮವಲ್ಲ

22 ರಂದು ಗೋಧ್ರಾ ರೀತಿಯ ಅಪಾಯ ಸಂಭವಿಸುವ ಮಾಹಿತಿ ಇದೆ, ಅಯೋಧ್ಯ ಯಾತ್ರಿಗಳಿಗೆ ಸರ್ಕಾರ ರಕ್ಷಣೆ ನೀಡಿ: ಬಿ.ಕೆ ಹರಿಪ್ರಸಾದ್ ಸ್ಪೋಟಕ ಹೇಳಿಕೆ Read More »

ಮಕ್ಕಳು ಹೂ ಕಿತ್ತಿದ್ದಕ್ಕೆ ಅಂಗನವಾಡಿ ಸಹಾಯಕಿಯ ಮೂಗು ಕತ್ತರಿಸಿದ ರಾಕ್ಷಸ

ಸಮಗ್ರ ನ್ಯೂಸ್: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತವರು ಕ್ಷೇತ್ರ ಬೆಳಗಾವಿ ಜಿಲ್ಲೆ ಒಂದಲ್ಲಾ ಒಂದು ಕೇಸ್ ನಲ್ಲಿ ಮುಂದಿದ್ದು, ಈ ಜಿಲ್ಲೆಯಲ್ಲಿ ಇಂತ ಪರಿಸ್ಥಿತಿಗೆ ಕಾರಣವೇನು ಅಂತಾನೆ ತಿಳಿಯದಂತಾಗಿದೆ. ಬೆಳಗಾವಿಯ ವಂಟಮೂರಿ ಗ್ರಾಮದ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಬೆಳಗಾವಿಯ ಬಸುರ್ತೆ ಗ್ರಾಮದಲ್ಲಿ ಅಂಗನವಾಡಿ ಸಹಾಯಕಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಹಲ್ಲೆಗೊಳಗಾದ 50 ವರ್ಷದ ಅಂಗನವಾಡಿ ಸಹಾಯಕಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದು, ಸದ್ಯ ಬೆಳಗಾವಿ ನಗರದ ಖಾಸಗಿ ಆಸ್ಪತ್ರೆಯಲ್ಲಿ

ಮಕ್ಕಳು ಹೂ ಕಿತ್ತಿದ್ದಕ್ಕೆ ಅಂಗನವಾಡಿ ಸಹಾಯಕಿಯ ಮೂಗು ಕತ್ತರಿಸಿದ ರಾಕ್ಷಸ Read More »

ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್‌ಹೆಸರಿನಲ್ಲಿ ನಕಲಿ ಪಾಸ್‌| ಆರೋಪಿ ಬಂಧನ

ಸಮಗ್ರ ನ್ಯೂಸ್: ವಿಧಾನ ಪರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ್‌ ಅವರ ಹೆಸರಿನಲ್ಲಿ ನಕಲಿ ಪಾಸ್‌ ಸೃಷ್ಟಿಸಿ, ಕಾರಿಗೆ ಹಾಕಿಕೊಂಡು ಸಂಚರಿಸುತ್ತಿದ್ದ ಆರೋಪಿಯನ್ನು ಸದಾಶಿವನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಜಯನಗರದ ನಿವಾಸಿ, ಹಣ್ಣಿನ ವ್ಯಾಪಾರಿ ಸಿಬ್ಗತ್ ಉಲ್ಲಾ ಬೋಖರಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ‘ನಕಲಿ ಪಾಸ್‌ ಸೃಷ್ಟಿಸಿ, ವ್ಯಕ್ತಿಯೊಬ್ಬ ಓಡಾಟ ನಡೆಸುತ್ತಿರುವ ಕುರಿತು ಬಿ.ಕೆ.ಹರಿಪ್ರಸಾದ್ ಅವರ ಆಪ್ತ ಸಹಾಯಕ ಎಸ್‌.ಬಿ.ಅವಿನಾಶ್‌ ಅವರು ಡಿ.29ರಂದು ದೂರು ನೀಡಿದ್ದರು. ದೂರು ಆಧರಿಸಿ, ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿ ಓಡಾಟ ನಡೆಸುತ್ತಿದ್ದ ಇನ್ನೊವಾ ಕ್ರಿಸ್ಟಾ

ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್‌ಹೆಸರಿನಲ್ಲಿ ನಕಲಿ ಪಾಸ್‌| ಆರೋಪಿ ಬಂಧನ Read More »

ಭಿಕ್ಷೆ ಬೇಡುತ್ತಿದ್ದ ಬಾಲಕಿಯನ್ನೂ ಬಿಡದ ಕಾಮಾಂಧರು| ಮೈಸೂರಿನಲ್ಲಿ ಕೇರಳದ ಪ್ರವಾಸಿ ಯುವಕರ ತಂಡದಿಂದ ವಿಕೃತಿ

ಸಮಗ್ರ ನ್ಯೂಸ್: ಕೇರಳದಿಂದ ಬಂದ ನಾಲ್ಕು ಯುವಕರ ಗುಂಪೊಂದು ಬಸ್‌ ನಿಲ್ದಾಣದಲ್ಲಿ ಭಿಕ್ಷೆ ಬೇಡುತ್ತಿದ್ದ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿಕೊಂಡು ವೇಗವಾಗಿ ಹೋಗುವಾಗ ಗ್ರಾಮವೊಂದರಲ್ಲಿ ಕಾರು ಅಪಘಾತ ಮಾಡಿದ್ದು, ಅಲ್ಲಿ ಅಪ್ರಾಪ್ತ ಹುಡುಗಿ ಅಪಹರಣ ಮಾಡಿರುವುದು ಬೆಳಕಿಗೆ ಬಂದಿದೆ. ಕೊಳ್ಳೇಗಾಲದ ಬಸ್‌ ನಿಲ್ದಾಣದಲ್ಲಿ ಭಿಕ್ಷೆ ಬೇಡುತ್ತಿದ್ದ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ರಾಜ್ಯದ ಗಡಿ ದಾಟಲು ಯತ್ನಿಸಿದ ಕೇರಳ ಮೂಲದ ನಾಲ್ವರು ಇದೀಗ ಪೊಲೀಸರ ಅತಿಥಿಗಳಾಗಿದ್ದಾರೆ. ಕಾರಿನಲ್ಲಿ ಕುಳಿತಿದ್ದ ಕಿಡಿಗೇಡಿಗಳ ಬಳಿ ಬಾಲಕಿ ಭಿಕ್ಷೆ ಬೇಡಲು ಬಂದಾಗ ಬಾಲಕಿಯನ್ನು ಅಪಹರಿಸಿ

ಭಿಕ್ಷೆ ಬೇಡುತ್ತಿದ್ದ ಬಾಲಕಿಯನ್ನೂ ಬಿಡದ ಕಾಮಾಂಧರು| ಮೈಸೂರಿನಲ್ಲಿ ಕೇರಳದ ಪ್ರವಾಸಿ ಯುವಕರ ತಂಡದಿಂದ ವಿಕೃತಿ Read More »

ಮಗುವಿನ ನಿರೀಕ್ಷೆಯಲ್ಲಿ ನಟಿ ಅದಿತಿ ಪ್ರಭುದೇವ

ಸಮಗ್ರ ನ್ಯೂಸ್: ಸ್ಯಾಂಡಲ್​ವುಡ್ ನಟಿ ಅದಿತಿ ಪ್ರಭುದೇವ ಅವರು ಹೊಸ ವರ್ಷದ ಸಂದರ್ಭದಲ್ಲಿ ಗುಡ್​ನ್ಯೂಸ್ ಕೊಟ್ಟಿದ್ದಾರೆ. ನಟಿ ಅದಿತಿ ಅಮ್ಮನಾಗಲಿರುವ ಸಂತಸದ ಸುದ್ದಿಯನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಸಂಬಂಧಗಳಲ್ಲಿ ಶ್ರೇಷ್ಠವಾದದ್ದು , ಹುಟ್ಟಿದಾಗಿನಿಂದ ಸಾಯುವವರೆಗೂ ಪ್ರತಿಯೊಂದು ನೋವು ನಲಿವಿನಲ್ಲೂ ನಮ್ಮ ಬಾಯಿಂದ ಬರುವ ಏಕೈಕ ಪದ “ಅಮ್ಮ”. . . ಜೀವನದಲ್ಲಿ ಪ್ರತಿಯೊಬ್ಬರೂ ಪ್ರೀತಿಯಿಂದ ಗೌರವದಿಂದ ಕಾಣುವ ಸಂಬಂಧ “ಅಮ್ಮ” ಪ್ರತಿಕ್ಷಣ ನಮಗಾಗಿ ಮಿಡಿಯುವ ಜೀವ “ಅಮ್ಮ” 2024 ಕ್ಕೆ ನಾನು ” ಅಮ್ಮ” ಎಂದು ನಟಿ

ಮಗುವಿನ ನಿರೀಕ್ಷೆಯಲ್ಲಿ ನಟಿ ಅದಿತಿ ಪ್ರಭುದೇವ Read More »