ರಾಜ್ಯ

ಬೆಂಗಳೂರಿನಲ್ಲಿ ಮಾಜಿ‌ ಪ್ರಧಾನಿ ದಿ.ರಾಜೀವ್ ಗಾಂಧಿ ಪ್ರತಿಮೆ ಅನಾವರಣಕ್ಕೆ ಸಿದ್ಧ| ರಾಜ್ಯದ ಅತೀ ದೊಡ್ಡ ಪ್ರತಿಮೆಗೆ ಬಿಜೆಪಿಯಿಂದ ವಿರೋಧ

ಸಮಗ್ರ ನ್ಯೂಸ್: ಮಾಜಿ ಪ್ರಧಾನಿ ದಿವಂಗತ ರಾಜೀವ್‌ ಗಾಂಧಿ ಅವರ 15 ಅಡಿ ಎತ್ತರದ ಕಂಚಿನ ಪ್ರತಿಮೆ ಶೇಷಾದ್ರಿಪುರದಲ್ಲಿ ಅನಾವರಣಗೊಳ್ಳಲು ಸಿದ್ಧವಾಗಿದೆ.ರಾಜ್ಯದಲ್ಲೇ ಅತಿ ಎತ್ತರದ ರಾಜೀವ್‌ ಗಾಂಧಿ ಪ್ರತಿಮೆ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಲಿದೆ. ಜಂಕ್ಷನ್‌ಗಳ ಅಭಿವೃದ್ಧಿ ಯೋಜನೆಯಡಿ ಬಿಬಿಎಂಪಿ ನಗರದಲ್ಲಿ 25 ಜಂಕ್ಷನ್‌ಗಳನ್ನು ಅಭಿವೃದ್ಧಿ ಮಾಡುತ್ತಿದ್ದು, ಶೇಷಾದ್ರಿಪುರ, ಪ್ಲಾಟ್‌ಫಾರ್ಮ್‌ ರಸ್ತೆ ಹಾಗೂ ಸಂಪಿಗೆ ರಸ್ತೆ ಸೇರುವ ಜಂಕ್ಷನ್‌ನಲ್ಲಿ ‘ರಾಜೀವ್‌ ಗಾಂಧಿ ಸ್ಕ್ವೇರ್‌’ ನಿರ್ಮಿಸಲಾಗುತ್ತಿದೆ. ‘ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸೂಚನೆ ಮೇರೆಗೆ ಪ್ರತಿಮೆಯನ್ನು ಸ್ಥಾಪಿಸಲಾಗುತ್ತಿದೆ.

ಬೆಂಗಳೂರಿನಲ್ಲಿ ಮಾಜಿ‌ ಪ್ರಧಾನಿ ದಿ.ರಾಜೀವ್ ಗಾಂಧಿ ಪ್ರತಿಮೆ ಅನಾವರಣಕ್ಕೆ ಸಿದ್ಧ| ರಾಜ್ಯದ ಅತೀ ದೊಡ್ಡ ಪ್ರತಿಮೆಗೆ ಬಿಜೆಪಿಯಿಂದ ವಿರೋಧ Read More »

ಲೋಕಸಭಾ ಚುನಾವಣೆ ಹಿನ್ನೆಲೆ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ|33 ಡಿವೈಎಸ್ಪಿ ಬೆನ್ನಲ್ಲೇ 218 ಪಿಎಸ್‌ಐಗಳ ವರ್ಗಾವಣೆ

ಸಮಗ್ರ ನ್ಯೂಸ್: ಪೊಲೀಸ್ ಇಲಾಖೆಗೆ ಸಂಬಂಧಿಸಿದಂತೆ ರಾಜ್ಯದ ವಿವಿಧೆಡೆ 33 ಡಿವೈಎಸ್ಪಿಗಳು ಹಾಗೂ 132 ಇನ್‌ಸ್ಪೆಕ್ಟರ್‌ಗಳನ್ನು ಸರ್ಕಾರ ವರ್ಗಾವಣೆ ಮಾಡಿದೆ. ಇದರ ಬೆನ್ನಲ್ಲೇ ಈಗ ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿ ವ್ಯಾಪ್ತಿಯಲ್ಲಿ ಮೇಜರ್​ ಸರ್ಜರಿ ಮಾಡಲಾಗಿದ್ದು. ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿ ವ್ಯಾಪ್ತಿಯ 218 ಪಿಎಸ್‌ಐಗಳನ್ನು ವರ್ಗಾವಣೆ ಮಾಡಿ ಪೊಲೀಸ್‌ ಇಲಾಖೆ ಆದೇಶ ಹೊರಡಿಸಿದೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಆಡಳಿತಾತ್ಮಕ ದೃಷ್ಟಿಯಿಂದ ಬೆಂಗಳೂರು ನಗರ ವ್ಯಾಪ್ತಿಯ ವಿವಿಧ ಠಾಣೆಗಳಿಗೆ ಸಬ್‌ ಇನ್‌ಸ್ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಲಾಗಿದೆ. ಈ

ಲೋಕಸಭಾ ಚುನಾವಣೆ ಹಿನ್ನೆಲೆ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ|33 ಡಿವೈಎಸ್ಪಿ ಬೆನ್ನಲ್ಲೇ 218 ಪಿಎಸ್‌ಐಗಳ ವರ್ಗಾವಣೆ Read More »

ವಿಮಾನ ಟೇಕಾಫ್ ಆಗುವಷ್ಟರಲ್ಲಿ ಬ್ಯಾಗ್ ನಲ್ಲಿ ಬಾಂಬ್ ಇದೆ ಎಂದ ವ್ಯಕ್ತಿ…!

ಸಮಗ್ರ ನ್ಯೂಸ್: ಬ್ಯಾಗ್​ನಲ್ಲಿ ಬಾಂಬ್ (Bomb Threat) ಇದೆ ಎಂದು ವಿಮಾನ ಹೊರಡುವುದಕ್ಕೂ ಮುನ್ನ ಕೆಲವೇ ಕ್ಷಣಗಳ ಮುನ್ನ ಹೇಳಿದ ವ್ಯಕ್ತಿಯೊಬ್ಬನನ್ನು ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದ ಘಟನೆ ಜ. 28ರಂದು ಸಂಜೆ ನಡೆದಿದೆ. ಆರೋಪಿಯನ್ನು ಖಾಸಗಿ ಕಂಪನಿ ಉದ್ಯೋಗಿ ಸಜು ಕೆ. ಕುಮಾರನ್ ಎಂದು ಗುರುತಿಸಲಾಗಿದೆ. ಕೇರಳದ ಕೊಚ್ಚಿಗೆ ತೆರಳಲು ಏರ್ ಇಂಡಿಯಾ ವಿಮಾನದಲ್ಲಿ ಕುಳಿತಿದ್ದಾಗ ಸಜು ಕುಮಾರ್ ವಿಕೃತಿ ಮೆರೆದಿದ್ದರು. ಇದರಿಂದಾಗಿ ಭದ್ರತಾ ಸಿಬ್ಬಂದಿ ಬೇಸ್ತು ಬೀಳುವಂತಾಗಿತ್ತು. ಕೆಂಪೇಗೌಡ

ವಿಮಾನ ಟೇಕಾಫ್ ಆಗುವಷ್ಟರಲ್ಲಿ ಬ್ಯಾಗ್ ನಲ್ಲಿ ಬಾಂಬ್ ಇದೆ ಎಂದ ವ್ಯಕ್ತಿ…! Read More »

ಶಿವಾಜಿನಗರದಲ್ಲಿ ಹಸಿರು ಬಾವುಟ ಹಾರಾಟ… ಆಕ್ರೋಶದ ಬಳಿಕ ತೆರವು

ಸಮಗ್ರ ನ್ಯೂಸ್: ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ಹಾಗೂ ರಾಷ್ಟ್ರ ಧ್ವಜ ವಿವಾದ ಬೆನ್ನಲ್ಲೇ ಬೆಂಗಳೂರಿನ ಶಿವಾಜಿನಗರದ ಚಾಂದಿನಿ ಚೌಕ್​ನಲ್ಲಿ ಹಾರಿಸಲಾದ ಹಸಿರು ಬಾವುಟವನ್ನು ಪೊಲೀಸರು, ತೆರವು ಮಾಡಿ ತ್ರಿವರ್ಣ ಧ್ವಜ ಹಾರಿಸಿದ್ದಾರೆ. ಬೆಂಗಳೂರಿನ ಶಿವಾಜಿನಗರದ ಚಾಂದಿನಿ ಚೌಕ್‌ನಲ್ಲಿನ ಬಿಬಿಎಂಪಿ ಧ್ವಜಸ್ತಂಭದಲ್ಲಿದ್ದ ಹಸಿರು ಬಾವುಟ ಹಾರಾಡುತ್ತಿರುವುದನ್ನು ವಿಕಾಸ್ ವಿಕ್ಕಿ ಎನ್ನುವರು ಟ್ವೀಟ್‌ ಮಾಡಿದ್ದರು. ಈ ಬಾವುಟ ಯಾವ ಧರ್ಮದ್ದು ಎಂದು ‘ಕೈ’ ನಾಯಕರು ಉತ್ತರಿಸಬೇಕು. ಹಸಿರು ಬಾವುಟ ತೆಗೆಸುವ ತಾಕತ್ ನಿಮಗೆ ಇಲ್ಲವಾ. ಹಿಂದೂ

ಶಿವಾಜಿನಗರದಲ್ಲಿ ಹಸಿರು ಬಾವುಟ ಹಾರಾಟ… ಆಕ್ರೋಶದ ಬಳಿಕ ತೆರವು Read More »

ಸಾಲ ತೀರಿಸೋಕೆ ರೈಲ್ವೆ ಪ್ರಯಾಣಿಕರ ವಸ್ತು ಕಳ್ಳತನ| ಅಸಿಸ್ಟೆಂಟ್ ಲೋಕೋ ಪೈಲಟ್ ಬಂಧನ

ಸಮಗ್ರ ನ್ಯೂಸ್: ಸಾಲ ತೀರಿಸೋಕೆ ಪರದಾಡುತ್ತಿದ್ದ ಅಸಿಸ್ಟೆಂಟ್ ಲೋಕೋ ಪೈಲಟ್ (Assistant Loco Pilot) ಸಾಲ ತೀರಿಸಲು ಕಳ್ಳತನದ (Theft) ದಾರಿ ಹಿಡಿದು ಜೈಲು ಸೇರಿದ್ದಾರೆ. ಅರಸಿಕೆರೆ ರೈಲ್ವೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು ಅಸಿಸ್ಟೆಂಟ್ ಲೋಕೋ ಪೈಲಟ್ ಪಡಿ ಸ್ವರಾಜ್ ಅವರನ್ನು ಬಂಧಿಸಿ 3ಲಕ್ಷದ 33ಸಾವಿರದ 489 ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ರೈಲ್ವೆ ಪೊಲೀಸರು ಆರೋಪಿಯನ್ನ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಸಾಲ ತೀರಿಸೋಕೆ ಪಡಿ ಸ್ವರಾಜ್ ರೈಲ್ವೆ ಪ್ರಯಾಣಿಕರ ವಸ್ತುಗಳ ಕಳ್ಳತನಕ್ಕೆ ಇಳಿದಿದ್ದರು. ಒಂದು

ಸಾಲ ತೀರಿಸೋಕೆ ರೈಲ್ವೆ ಪ್ರಯಾಣಿಕರ ವಸ್ತು ಕಳ್ಳತನ| ಅಸಿಸ್ಟೆಂಟ್ ಲೋಕೋ ಪೈಲಟ್ ಬಂಧನ Read More »

ಉಡುಗೊರೆ ಬೇಡ, ಮೋದಿಗೆ ಮತನೀಡಿ| ವೈರಲ್ ಆಯ್ತು‌ ಚಿಕ್ಕಮಗಳೂರಿನ ಮದುವೆ ಆಮಂತ್ರಣ

ಸಮಗ್ರ ನ್ಯೂಸ್: ಮದುವೆ ಆಮಂತ್ರಣ ಪತ್ರಿಕೆಯನ್ನು ಬಗೆ ಬಗೆಯ ವಿನ್ಯಾಸದಲ್ಲಿ ಮುದ್ರಿಸುವುದನ್ನು ನಾವು ಕಂಡಿದ್ದೇವೆ, ಕೆಲವರು ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ಬರಹಗಳನ್ನು ಬರೆಯುವ ಮೂಲಕ ಆಮಂತ್ರಣ ಪತ್ರಿಕೆಯನ್ನು ವಿಶೇಷವಾದ ರೀತಿಯಲ್ಲಿ ಮುದ್ರಿಸುತ್ತಾರೆ ಅದರಂತೆ ಚಿಕ್ಕಮಗಳೂರಿನ ಬಿಜೆಪಿ ಕಾರ್ಯಕರ್ತರೊಬ್ಬರು ತಮ್ಮ ತಂಗಿಯ ಮದುವೆ ಆಮಂತ್ರಣ ಪತ್ರಿಕೆಯನ್ನು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿಗೆ ಮತ ನೀಡುವಂತೆ ಕೇಳಿಕೊಂಡಿದ್ದಾರೆ. ಶಶಿ, ಬಿಜೆಪಿ ಯುವ ಮೋರ್ಚಾ ಜಿಲ್ಲಾ ಕಾರ್ಯದರ್ಶಿಯಾಗಿರುವ ಶಶಿ ಅವರು ತಮ್ಮ ತಂಗಿಯ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ವಧು

ಉಡುಗೊರೆ ಬೇಡ, ಮೋದಿಗೆ ಮತನೀಡಿ| ವೈರಲ್ ಆಯ್ತು‌ ಚಿಕ್ಕಮಗಳೂರಿನ ಮದುವೆ ಆಮಂತ್ರಣ Read More »

ಮದುವೆ ಆಮಂತ್ರಣದಲ್ಲಿ ಮತ್ತೊಮ್ಮೆ‌ ಮೋದಿ ಸೌಂಡ್| ಲೋಕಸಭಾ ಚುನಾವಣೆಯಲ್ಲಿ ಮೋದಿ ಗೆಲ್ಲಿಸುವಂತೆ ಪ್ರಚಾರ

ಸಮಗ್ರ ನ್ಯೂಸ್: ಮದುವೆ ಆಮಂತ್ರಣ ಪತ್ರಿಕೆಯಲ್ಲಿ ನರೇಂದ್ರ ಮೋದಿಯವರ ಭಾವಚಿತ್ರ ಸಹಿತ 2024ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಗೆ ಮತ ನೀಡಿದರೆ ನನ್ನ ಮದುವೆಗೆ ನಿಜವಾದ ಉಡುಗೊರೆ ಎಂದು ಮುದ್ರಿಸುವ ಮೂಲಕ ಮೋದಿ ಅಭಿಮಾನಿಗಳು ಸದ್ದಿಲ್ಲದೆ ಪ್ರಚಾರ ನಡೆಸುತ್ತಿದ್ದಾರೆ. ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿಯಲ್ಲಿ ವಧುವಿನ ಕಡೆಯವರು ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪರ ಮತಯಾಚಿಸಿ ಲಗ್ನ ಪತ್ರಿಕೆ ಮುದ್ರಿಸಿದ್ದಾರೆ. ಲಗ್ನ ಪತ್ರಿಕೆ ಮೂಲಕ ಚುನಾವಣೆ ಪ್ರಚಾರ ಬಲು ಜೋರಾಗಿ ನಡೆಯುತ್ತಿದೆ. ಬನಹಟ್ಟಿಯ ಪ್ರಭು ಕರಲಟ್ಟಿ

ಮದುವೆ ಆಮಂತ್ರಣದಲ್ಲಿ ಮತ್ತೊಮ್ಮೆ‌ ಮೋದಿ ಸೌಂಡ್| ಲೋಕಸಭಾ ಚುನಾವಣೆಯಲ್ಲಿ ಮೋದಿ ಗೆಲ್ಲಿಸುವಂತೆ ಪ್ರಚಾರ Read More »

ಮಡಿಕೇರಿ:ಸರ್ಕಾರಿ ಬಸ್ – ಸ್ಕೂಟಿ ಡಿಕ್ಕಿ ಪರ್ಪಲ್ ಫಾರ್ಮ್ ರಿಸಾರ್ಟ್ ಸಿಬ್ಬಂದಿ ದುರ್ಮರಣ

ಸಮಗ್ರ ನ್ಯೂಸ್: ಮಡಿಕೇರಿಯಿಂದ ಮೈಸೂರಿಗೆ ತೆರಳುತ್ತಿದ್ದ KSRTC ಬಸ್ ಹಾಗೂ ಅತ್ತೂರಿನಿಂದ ಗುಡ್ಡೆ ಹೊಸೂರು ಕಡೆ ಬರುತ್ತಿದ್ದ ಸ್ಕೂಟಿ ನಡುವೆ ಡಿಕ್ಕಿಯಾದ ಪರಿಣಾಮಸಿದ್ದಾಪುರದ ಲಲಿತಾ (53) ಎಂಬ ಮಹಿಳೆ ಮೃತಪಟ್ಟಿದ್ದಾಳೆ. ಸ್ಕೂಟಿ ಚಲಾಯಿಸುತ್ತಿದ್ದ ಲಲಿತಾ ಅವರ ಸಹೋದರಿ ಪುತ್ರಿ ಸಿಂಚನಾ ಸ್ಥಿತಿ ಗಂಭೀರವಾಗಿದೆ. ಗುಡ್ಡೆಹೊಸೂರು ಹೆದ್ದಾರಿಯಲ್ಲಿ ಮಂಗಳವಾರ ಬೆಳಗ್ಗೆ ಈ ಘಟನೆ ನಡೆದಿದೆ. ನಿಯಂತ್ರಣ ತಪ್ಪಿ ಬಸ್ಸಿನ ಅಡಿಗೆ ಸಿಲುಕಿದ ಸ್ಕೂಟಿಡಿಕ್ಕಿಯ ರಭಸಕ್ಕೆ ನಜ್ಜುಗುಜ್ಜಾಗಿದೆ.

ಮಡಿಕೇರಿ:ಸರ್ಕಾರಿ ಬಸ್ – ಸ್ಕೂಟಿ ಡಿಕ್ಕಿ ಪರ್ಪಲ್ ಫಾರ್ಮ್ ರಿಸಾರ್ಟ್ ಸಿಬ್ಬಂದಿ ದುರ್ಮರಣ Read More »

ಚಿಕ್ಕಮಗಳೂರು: ಬೀಟಮ್ಮ ಗ್ಯಾಂಗ್ ಓಡಿಸಲು ಅಖಾಡಕ್ಕಿಳಿದ ಅಭಿಮನ್ಯು ಆ್ಯಂಡ್ ಟೀಮ್

ಸಮಗ್ರ ನ್ಯೂಸ್: ಚಿಕ್ಕಮಗಳೂರು ನಗರದ ಕೂಗಳತೆ ದೂರದಲ್ಲಿರುವ ಪ್ರತಿಷ್ಠಿತ ಆ್ಯಂಬರ್ ವ್ಯಾಲಿ ಖಾಸಗಿ ವಸತಿ ಶಾಲೆ ಆವರಣದಲ್ಲಿ ಬೀಟಮ್ಮ ಗ್ಯಾಂಗ್ ನ 30 ಕಾಡಾನೆಗಳು ಬೀಡು ಬಿಟ್ಟಿದ್ದವು. ಇದೀಗ ಬೀಟಮ್ಮ ಗ್ಯಾಂಗ್ ಉಪಟಳ ಹೆಚ್ಚಾಗಿದ್ದು ಇದಕ್ಕೆ ಬ್ರೇಕ್ ಹಾಕಲು ಸಾಕಾನೆ ಅಭಿಮನ್ಯು ನೇತೃತ್ವದ ತಂಡ ಅಖಾಡಕ್ಕಿಳಿದಿದೆ. ಈ ಆನೆಗಳನ್ನು ಜ.29 ರಂದು ಶಾಲಾ ಆವರಣದಿಂದ ಅರಣ್ಯ ಇಲಾಖೆ ಸಿಬ್ಬಂದಿ ಓಡಿಸಲಾಗಿದೆ, ಆದರೆ ಅದು ತನ್ನ ಉಪಟಳವನ್ನು ಮುಂದುವರಿಸಿದೆ. ಇದೀಗ ಅಭಿಮನ್ಯು ನೇತೃತ್ವದಲ್ಲಿ ಬೀಟಮ್ಮ ಗ್ಯಾಂಗ್ ಕಾರ್ಯಚರಣೆ ನಡೆಯಲಿದೆ,

ಚಿಕ್ಕಮಗಳೂರು: ಬೀಟಮ್ಮ ಗ್ಯಾಂಗ್ ಓಡಿಸಲು ಅಖಾಡಕ್ಕಿಳಿದ ಅಭಿಮನ್ಯು ಆ್ಯಂಡ್ ಟೀಮ್ Read More »

ತಂಗಿಯನ್ನು ಕಾಪಾಡಲು ಬಾವಿಗೆ ಹಾರಿದ ಅಣ್ಣ| ಅಣ್ಣ ತಂಗಿ ಇಬ್ಬರೂ ಸಾವು

ಸಮಗ್ರ ನ್ಯೂಸ್: ಕಾಲೇಜಿಗೆ ಹೋಗು ಎಂದು ಅಣ್ಣ ಬೈದು ಬುದ್ದಿ ಹೇಳಿದ್ದಕ್ಕೆ ಮನ ನೊಂದ ತಂಗಿ ಓಡಿ ಹೋಗಿ ಬಾವಿಗೆ ಜಿಗಿದಿದ್ದು ತಂಗಿಯನ್ನು ಕಾಪಾಡಲು ಅಣ್ಣ ಕೂಡ ಬಾವಿಗೆ ಹಾರಿ ಪ್ರಾಣ ಕಳೆದುಕೊಂಡ ಅಮಾನವೀಯ ಘಟನೆ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಪಟಪಳ್ಳಿ ಗ್ರಾಮದಲ್ಲಿ ನಡೆದಿದೆ. ತಂಗಿ ನಂದಿನಿ(18), ಅಣ್ಣ ಸಂದೀಪ್(21) ಮೃತ ದುರ್ದೈವಿಗಳು. ನಂದಿನಿ ಕಾಲೇಜಿಗೆ ಹೋಗಲಿಲ್ಲ ಎಂದು ಕೋಪಗೊಂಡಿದ್ದ ಸಂದೀಪ್ ಕಾಲೇಜಿಗೆ ಹೋಗು ಎಂದು ಬೈದು ಬುದ್ದಿ ಹೇಳಿದ್ದು, ಅಣ್ಣ ಬೈದ ಎಂದು ಕೋಪಗೊಂಡು

ತಂಗಿಯನ್ನು ಕಾಪಾಡಲು ಬಾವಿಗೆ ಹಾರಿದ ಅಣ್ಣ| ಅಣ್ಣ ತಂಗಿ ಇಬ್ಬರೂ ಸಾವು Read More »