ರಾಜ್ಯ

ನಾಪತ್ತೆಯಾಗಿದ್ದ ವ್ಯಕ್ತಿ “ಬಿಗ್ ಬಾಸ್”ನಿಂದಾಗಿ ತೃತೀಯ ಲಿಂಗಿಯಾಗಿ ಪತ್ತೆ

ಸಮಗ್ರ ನ್ಯೂಸ್: ಹಲವಾರು ವರ್ಷಗಳಿಂದ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬರು ಬಿಗ್ ಬಾಸ್ ನಿಂದಾಗಿ ತೃತೀಯ ಲಿಂಗಿಯಾಗಿ (Transgender) ಪತ್ತೆಯಾಗಿದ್ದಾರೆ. ನಿಜಕ್ಕೂ ಇದು ರೋಚಕ ಘಟನೆಯೇ ಸರಿ. ರಾಮನಗರ ಮೂಲದ ವ್ಯಕ್ತಿ ಲಕ್ಷ್ಮಣ್ ರಾವ್ (Laxman Rao), ಕಳೆದ ಏಳು ವರ್ಷಗಳ ಹಿಂದೆ ಸಾಲ ಮಾಡಿದ್ದರು. ಸಾಲವನ್ನು ತೀರಿಸಲಾಗದೇ ಊರು ಬಿಟ್ಟು ಹೋಗಿದ್ದರು. ಇದರಿಂದ ಇಬ್ಬರು ಮಕ್ಕಳು ಮತ್ತು ಪತ್ನಿ ಕಂಗಾಲಾಗಿದ್ದರು. ಲಕ್ಷ್ಮಣ್ ರಾವ್ ನಾಪತ್ತೆ ಕುರಿತಂತೆ ರಾಮನಗರದ ಐಜೂರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಪತ್ತೆಹಚ್ಚಲು ಪೋಲಿಸರು

ನಾಪತ್ತೆಯಾಗಿದ್ದ ವ್ಯಕ್ತಿ “ಬಿಗ್ ಬಾಸ್”ನಿಂದಾಗಿ ತೃತೀಯ ಲಿಂಗಿಯಾಗಿ ಪತ್ತೆ Read More »

ಮದ್ಯ ಪ್ರಿಯರಿಗೆ ಬಿಗ್ ಶಾಕ್ |ರಾಜ್ಯದಲ್ಲಿ ಮತ್ತೆ ಬಿಯರ್ ದರ ಏರಿಕೆ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಇಂದಿನಿಂದಲೇ (ಫೆ.1) ಮದ್ಯದ ದರ ಏರಿಕೆಯಾಗಿದ್ದು, ಮದ್ಯ ಪ್ರಿಯರಿಗೆ ಶಾಕ್ ಕೊಟ್ಟಂತಾಗಿದೆ. ಅಬಕಾರಿ ಸುಂಕವನ್ನು 185% ರಿಂದ 195%ಗೆ ಹೆಚ್ಚಿಸಿರುವ ಹಿನ್ನೆಲೆ, ಬಿಯರ್ ಬಾಟಲಿಗೆ 5 ರಿಂದ 12ರೂ. ವರೆಗೂ ಬೆಲೆ ಏರಿಕೆಯಾಗಿದೆ. ಇದರಿಂದ ಕಳೆದ 6 ತಿಂಗಳ ಅಂತರದಲ್ಲಿ ಬಿಯರ್ ಬೆಲೆ ಸುಮಾರು 40ರೂ. ಗಳಷ್ಟು ಹೆಚ್ಚಳವಾಗಿದೆ ಎಂದು ಮೂಲಗಳು ತಿಳಿಸಿವೆ. ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಂತರ ಕಾಂಗ್ರೆಸ್ ನೇನೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬಿಯರ್ ಮೇಲೆ ಶೇ. 20ರಷ್ಟು

ಮದ್ಯ ಪ್ರಿಯರಿಗೆ ಬಿಗ್ ಶಾಕ್ |ರಾಜ್ಯದಲ್ಲಿ ಮತ್ತೆ ಬಿಯರ್ ದರ ಏರಿಕೆ Read More »

ಪದ್ಮಶ್ರೀ ಪುರಸ್ಕೃತ ರೋಹನ್ ಬೋಪಣ್ಣ ಹೆಸರು ಮಡಿಕೇರಿ ನಗರದ ಮುಖ್ಯ ರಸ್ತೆಗೆ ನಾಮಕರಣ ಮಾಡುವಂತೆ ಅಖಿಲ ಕೊಡವ ಸಮಾಜ ಮನವಿ

ಸಮಗ್ರ ನ್ಯೂಸ್: ಪದ್ಮಶ್ರೀ ಪುರಸ್ಕೃತ ರೋಹನ್ ಬೊಪಣ್ಣ ಅವರ ಹೆಸರನ್ನು ಮಡಿಕೇರಿ ನಗರದ ಮುಖ್ಯ ರಸ್ತೆಗೆ ನಾಮಕರಣ ಮಾಡುವಂತೆ ಅಖಿಲ ಕೊಡವ ಸಮಾಜ ಒತ್ತಾಯಿಸಿದೆ. ಮಡಿಕೇರಿ ನಗರಸಭಾ ಅಧ್ಯಕ್ಷ ಅನಿತಾ ಪೂವಯ್ಯ ಅವರಿಗೆ ಮನವಿ ಸಲ್ಲಿಸಿದ ಸಮಾಜದ ಪ್ರಮುಖರು ವಿಶ್ವದ ಡಬ್ಬಲ್ ಮೆನ್ಸ್ ಟೆನ್ನಿಸ್ ಕ್ರೀಡಾಯಲ್ಲಿ ದಾಖಲೆ ಮೆರೆದ ಗೌರವಾರ್ಥ ಪದ್ಮಶ್ರೀ ಪುರಸ್ಕೃತ ರೋಹನ್ ಬೋಪಣ್ಣ ಅವರ ಹೆಸರನ್ನು ಮಡಿಕೇರಿ ನಗರದ ಮುಖ್ಯ ರಸ್ತೆಗೆ ನಾಮಕರಣ ಮಾಡುವಂತೆ ಮನವಿ ಮಾಡಿದರು. ಮನವಿ ಅರ್ಪಿಸಿದ ಸಂದರ್ಭ ಅಖಿಲ ಕೊಡವ

ಪದ್ಮಶ್ರೀ ಪುರಸ್ಕೃತ ರೋಹನ್ ಬೋಪಣ್ಣ ಹೆಸರು ಮಡಿಕೇರಿ ನಗರದ ಮುಖ್ಯ ರಸ್ತೆಗೆ ನಾಮಕರಣ ಮಾಡುವಂತೆ ಅಖಿಲ ಕೊಡವ ಸಮಾಜ ಮನವಿ Read More »

ಬಜೆಟ್ ನಡುವೆ ಡಿ.ಕೆ ಸುರೇಶ್ ಪ್ರತ್ಯೇಕತೆ ಕೂಗು

ಸಮಗ್ರ ನ್ಯೂಸ್: ಇಂದು ನಿರ್ಮಲಾ ಸೀತಾರಾಮನ್ ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ಮಂಡಿಸಿದ್ದಾರೆ. ಈ ನಡುವೆ ಬಜೆಟ್​ ಕುರಿತಂತೆ ಟೀಕಿಸಿರುವ ಕಾಂಗ್ರೆಸ್ ಸಂಸದ ಡಿ.ಕೆ ಸುರೇಶ್​​ ಅವರು, ಪ್ರತ್ಯೇಕ ರಾಷ್ಟ್ರದ ಕೂಗು ಎತ್ತಿದ್ದಾರೆ. ಬಜೆಟ್​ ಕುರಿತಂತೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಕೆ ಸುರೇಶ್​ ಅವರು, ಕೇಂದ್ರ ಸರ್ಕಾರದ ಇವತ್ತಿನ ಬಜೆಟ್​ನಲ್ಲಿ ಅವರ ಚುನಾವಣಾ ಪ್ರಚಾರದ ಹೇಳಿಕೆಗಳು ಮಾತ್ರ ಕೇಳಿಸುತ್ತಿವೆ. ಇವತ್ತು ಮಧ್ಯಂತರ ಬಜೆಟ್ ಅಂತ ಸಂಸತ್​ನಲ್ಲಿ ಮಂಡಿಸಿದ್ದಾರೆ. ಅದರಲ್ಲಿ ಕೇವಲ ನಾಮಫಲಕಗಳು ಮಾತ್ರ ಬದಲಾಗಿದೆ. ಸಂಸ್ಕೃತ ಮತ್ತು

ಬಜೆಟ್ ನಡುವೆ ಡಿ.ಕೆ ಸುರೇಶ್ ಪ್ರತ್ಯೇಕತೆ ಕೂಗು Read More »

ನನ್ನ ಜತೆ ಕಾಂಗ್ರೆಸ್ ಸೇರಿದವರು ಮತ್ತೆ ಬಿಜೆಪಿಗೆ ಬರ್ತಾರೆ| ಶೆಟ್ಟರ್ ಸ್ಫೋಟಕ ಹೇಳಿಕೆ

ಸಮಗ್ರ ನ್ಯೂಸ್: ನನ್ನ ಜತೆ ಕಾಂಗ್ರೆಸ್ ಸೇರಿದವರು ಮತ್ತೆ ಬಿಜೆಪಿಗೆ ಬರ್ತಾರೆ. ನಾವು ನಿಮ್ಮ ಜೊತೆ ಬಿಜೆಪಿಗೆ ಬರುತ್ತೇವೆ ಎನ್ನುತ್ತಿದ್ದಾರೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಹಲವು ಮುಖಂಡರು ಬಿಜೆಪಿ ಸೇರುವುದಕ್ಕೆ ಆಸೆ ವ್ಯಕ್ತಪಡಿಸುತ್ತಿದ್ದಾರೆ. ಕಾಂಗ್ರೆಸ್​ನ ಬಹಳಷ್ಟು ಜನ ನನ್ನ ಸಂಪರ್ಕದಲ್ಲಿದ್ದಾರೆ. ಅವರೆಲ್ಲರೂ ಆದಷ್ಟು ಶೀಘ್ರದಲ್ಲಿ ಬಿಜೆಪಿ ಸೇರಲಿದ್ದಾರೆ. ಕಾಂಗ್ರೆಸ್ ಅಧಿಕಾರದಲ್ಲಿದ್ದರೂ ಪಕ್ಷದ ವರ್ಚಸ್ಸು ಬೆಳೆಯುತ್ತಿಲ್ಲ. ಹೀಗಾಗಿ ಕಾಂಗ್ರೆಸ್ ತೊರೆಯಲು ಅಲ್ಲಿನವರು ಮನಸ್ಸು ಮಾಡುತ್ತಿದ್ದಾರೆ ಎಂದಿದ್ದಾರೆ.

ನನ್ನ ಜತೆ ಕಾಂಗ್ರೆಸ್ ಸೇರಿದವರು ಮತ್ತೆ ಬಿಜೆಪಿಗೆ ಬರ್ತಾರೆ| ಶೆಟ್ಟರ್ ಸ್ಫೋಟಕ ಹೇಳಿಕೆ Read More »

ದೇಗುಲಗಳಲ್ಲಿನ ವಸ್ತ್ರ ಸಂಹಿತೆಗೆ ಸಿಎಂ ವಿರೋಧ

ಸಮಗ್ರ ನ್ಯೂಸ್: ಇತ್ತೀಚೆಗೆ ಹಂಪಿಯಲ್ಲಿ ಡ್ರೆಸ್ ಕೋಡ್ (Dress Code Temple) ಜಾರಿ ಮಾಡಲಾಗಿತ್ತು. ಆದರೆ ಇದೀಗ ದೇಗುಲಗಳಲ್ಲಿ ವಸ್ತ್ರಸಂಹಿತೆ ನಿರ್ಧಾರಕ್ಕೆ ಸಿಎಂ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿರುವುದರ ಜೊತೆಗೆ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ. ಜ. 31ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ದೇವಸ್ಥಾನದಲ್ಲಿ ವಸ್ತ್ರಸಂಹಿತೆ ಬಗ್ಗೆ ಹಿರಿಯ ಸಾಹಿತಿ ಮರುಳಸಿದ್ಧಪ್ಪ ಅವರು ಸಿಎಂ ಮುಂದೆಯೇ ಅಕ್ಷೇಪ ವ್ಯಕ್ತಪಡಿಸಿದ್ದರು. ಮೈತುಂಬಾ ಬಟ್ಟೆ ಹಾಕಿಕೊಂಡು ಹೋಗಬೇಕು ನಿಜ. ಹಾಗಂತ‌ ಮಹಿಳೆಯರು ಸೀರೆ, ಪುರುಷರು ಪಂಚೆ ಉಡಬೇಕು ಅನ್ನೋದು ಯಾಕೆ? ಇದು

ದೇಗುಲಗಳಲ್ಲಿನ ವಸ್ತ್ರ ಸಂಹಿತೆಗೆ ಸಿಎಂ ವಿರೋಧ Read More »

ಸೌಜನ್ಯ ಅತ್ಯಾಚಾರ-ಕೊಲೆ ಪ್ರಕರಣ| ಸಂತೋಷ್ ರಾವ್ ನ್ಯಾಯಾಲಯಕ್ಕೆ ಹಾಜರಾಗುವಂತೆ ನೋಟಿಸ್ ನೀಡಲು ಆದೇಶ

ಸಮಗ್ರ ನ್ಯೂಸ್: 12 ವರ್ಷದ ಹಿಂದೆ ಕಾಲೇಜು ವಿದ್ಯಾರ್ಥಿನಿ ಕು. ಸೌಜನ್ಯ(17) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಿಶೇಷ ನ್ಯಾಯಾಲಯವು ಆರೋಪಿಯಾಗಿದ್ದ ಸಂತೋಷ್ ರಾವ್ ಮೇಲಿನ ಸಾಕ್ಷಧಾರದ ಕೊರತೆಯಿಂದ ಜೂನ್ 16, 2023 ರಂದು ದೋಷಮುಕ್ತಗೊಳಿಸಿ ಆದೇಶ ನೀಡಲಾಗಿತ್ತು‌. ಅದರನ್ವಯ ಕೆಳ ನ್ಯಾಯಾಲಯ ಸಂತೋಷ್ ರಾವ್ ವಿರುದ್ದ ದೋಷ-ಮುಕ್ತಗೊಳಿಸಿದ ಆದೇಶದ ವಿರುದ್ಧ ಸಿಬಿಐ ಪರ ವಕೀಲ ಪ್ರಸನ್ನ ಕುಮಾರ್ ಸಲ್ಲಿಸಿದ್ದ ಅಪೀಲು ಜ.30 ರಂದು ಬೆಂಗಳೂರು ಹೈಕೋರ್ಟ್ ನ ನ್ಯಾಯಾಧೀಶರಾದ ಶ್ರೀನಿವಾಸ ಹರೀಶ್ ಕುಮಾರ್ ಮತ್ತು ವಿಜಯ

ಸೌಜನ್ಯ ಅತ್ಯಾಚಾರ-ಕೊಲೆ ಪ್ರಕರಣ| ಸಂತೋಷ್ ರಾವ್ ನ್ಯಾಯಾಲಯಕ್ಕೆ ಹಾಜರಾಗುವಂತೆ ನೋಟಿಸ್ ನೀಡಲು ಆದೇಶ Read More »

ಮಗನ ಕೈಗೆ ಚಿನ್ನಾಭರಣ ಕೊಟ್ಟು ಸೆಲ್ಫಿ ವೀಡಿಯೊ ಮಾಡ್ತಾ ಆತ್ಮಹತ್ಯೆಗೆ ಯತ್ನ

ಸಮಗ್ರ ನ್ಯೂಸ್: ಚಿಕ್ಕಬಳ್ಳಾಪುರದ ನಂದಿ ಬೆಟ್ಟ ಪ್ರವಾಸಿತಾಣವಾದರೂ ಕೆಲವರಿಗಂತು ಅದು ಸೂಸೈಡ್ ಸ್ಪಾಟ್ ಆಗೋಗಿದೆ.ಹೌದು ನನ್ನ ಗಂಡ, ಅತ್ತೆ, ಅವರ ಸಂಬಂಧಿಕರು ಸೇರಿ ನನಗೆ ಮಾನಸಿಕ ಕಿರುಕುಳ ನೀಡಿದ್ದಾರೆ. ನನ್ನ ಸಾವಿಗೆ ನನ್ನ ಗಂಡ ನವೀನ್ ಕಾರಣ ಅಂತ ಸೆಲ್ಫಿ ವೀಡಿಯೊ ಮಾಡಿ… ಮಗನ ಕಣ್ಮುಂದೆ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ. ಆತ್ಮಹತ್ಯೆಗೆ ಯತ್ನಿಸಿದ ಈ ಮಹಿಳೆಯ ಹೆಸರು ಕಾವ್ಯಾ, ಬೆಂಗಳೂರಿನ ಕೆ.ಆರ್. ಪುರಂ ಮೂಲದ ಗೃಹಿಣಿ. ಚಿಕ್ಕಬಳ್ಳಾಪುರ ತಾಲೂಕಿನ ನಂದಿಗಿರಿಧಾಮಕ್ಕೆ ತನ್ನ ಮಗನ ಜೊತೆ ಆಗಮಿಸಿ ಮೈಮೇಲಿದ್ದ

ಮಗನ ಕೈಗೆ ಚಿನ್ನಾಭರಣ ಕೊಟ್ಟು ಸೆಲ್ಫಿ ವೀಡಿಯೊ ಮಾಡ್ತಾ ಆತ್ಮಹತ್ಯೆಗೆ ಯತ್ನ Read More »

ಜಯದೇವ ಆಸ್ಪತ್ರೆ ನಿರ್ದೇಶಕ ಡಾ. ಸಿ.ಎನ್ ಮಂಜುನಾಥ್ ನಿವೃತ್ತಿ| ಪ್ರಭಾರ ನಿರ್ದೇಶಕರಾಗಿ‌ ಡಾ. ರವೀಂದ್ರನಾಥ ನೇಮಕ

ಸಮಗ್ರ ನ್ಯೂಸ್: ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಅಳಿಯ ಹಾಗೂ ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್ ಮಂಜುನಾಥ್ ಅವರ ಸೇವಾವಧಿ ಮುಗಿದಿದ್ದು, ಜ.31 ರಂದು ನಿವೃತ್ತಿ ಹೊಂದಿದ್ದಾರೆ. ಈ ಹಿನ್ನಲೆಯಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆಯ ಪ್ರಭಾರ ನಿರ್ದೇಶಕರಾಗಿ ಡಾ.ರವೀಂದ್ರನಾಥ್ ಅವರನ್ನು ನೇಮಕ ಮಾಡಲಾಗಿದೆ. ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕರಾಗಿದ್ದ ಡಾ.ಸಿ.ಎನ್‌.ಮಂಜುನಾಥ್‌ ಅವರ ಅವಧಿ ಇಂದಿಗೆ (ಜ.31) ಮುಕ್ತಾಯವಾಗಿದೆ. ಈಗಾಗಲೇ ಡಾ.ಮಂಜುನಾಥ್‌ ಅವರ ಸೇವಾವಧಿಯನ್ನು ನಾಲ್ಕು ಬಾರಿ ವಿಸ್ತರಿಸಲಾಗಿದ್ದು, ಈ ಬಾರಿ ಹೊಸ ನಿರ್ದೇಶಕರನ್ನು ನೇಮಕ ಮಾಡಲು

ಜಯದೇವ ಆಸ್ಪತ್ರೆ ನಿರ್ದೇಶಕ ಡಾ. ಸಿ.ಎನ್ ಮಂಜುನಾಥ್ ನಿವೃತ್ತಿ| ಪ್ರಭಾರ ನಿರ್ದೇಶಕರಾಗಿ‌ ಡಾ. ರವೀಂದ್ರನಾಥ ನೇಮಕ Read More »

ಕರ್ನಾಟಕ ಹೈಕೋರ್ಟ್ ಸಿಜೆ ಆಗಿ ಪಿ.ಎಸ್ ದಿನೇಶ್ ಕುಮಾರ್ ನೇಮಕ

ಸಮಗ್ರ ನ್ಯೂಸ್: ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಆಗಿದ್ದ ಪ್ರಸನ್ನ ಬಿ. ವರಾಳೆ ಅವರು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ ಪದೋನ್ನತಿ ಹೊಂದಿದ ಹಿನ್ನೆಲೆಯಲ್ಲಿ ಕನ್ನಡಿಗ ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ ಅವರನ್ನು ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡಲಾಗಿದೆ. ನ್ಯಾಯಮೂರ್ತಿ ಕುಮಾರ್ ಅವರು ಈಗ ಕರ್ನಾಟಕ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿದ್ದಾರೆ. ನ್ಯಾಯಮೂರ್ತಿ ಕುಮಾರ್ ಅವರನ್ನು ಮುಖ್ಯ ನ್ಯಾಯಮೂರ್ತಿಯಾಗಿ ನೇಮಿಸಬೇಕು ಎಂದು ಸುಪ್ರೀಂ ಕೋರ್ಟ್‌ನ ಕೊಲಿಜಿಯಂ ಜನವರಿ 19ರಂದು ಶಿಫಾರಸು ಮಾಡಿತ್ತು. ನ್ಯಾ.ಪಿ.ಎಸ್. ದಿನೇಶ್ ಕುಮಾರ್ ಫೆಬ್ರವರಿ

ಕರ್ನಾಟಕ ಹೈಕೋರ್ಟ್ ಸಿಜೆ ಆಗಿ ಪಿ.ಎಸ್ ದಿನೇಶ್ ಕುಮಾರ್ ನೇಮಕ Read More »