ನಾಳೆ ರೋಡಿಗಿಳಿಯಲಿವೆ ಅಶ್ವಮೇಧ ಕ್ಲಾಸಿಕ್| KSRTCಯ ಹೊಸ ಬಸ್ ಗಳಿಗೆ ನಾಳೆ(ಫೆ.5) ಚಾಲನೆ| ಮಹಿಳೆಯರಿಗೆ ಇದರಲ್ಲಿದೆಯೇ ಉಚಿತ ಪ್ರಯಾಣ?
ಸಮಗ್ರ ನ್ಯೂಸ್: ಕರ್ನಾಟಕ ಸಾರಿಗೆ ಇಲಾಖೆ ಹೊಸ 100 ಕ್ಲಾಸಿಕ್ ಬಸ್ ಗಳನ್ನು ರಸ್ತೆಗಿಳಿಸುತ್ತಿದೆ. ಈ ಬಸ್ಸುಗಳಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ನಾಳೆ ಬೆಳಗ್ಗೆ ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ಸ್ ಮೇಲೆ ಚಾಲನೆ ನೀಡಲಿದ್ದಾರೆ. ಕೆಎಸ್ಆರ್ ಟಿಸಿಗೆ ಒಟ್ಟು 1,000 ಹೊಸ ಬಸ್ ಗಳು ಬರಲಿದ್ದು, ಮೊದಲ ಹಂತದಲ್ಲಿ 100 ಕ್ಲಾಸಿಕ್ ಬಸ್ ಗಳು ರಸ್ತೆಗಿಳಿಯಲಿವೆ. ಈ ನೂರು ಬಸ್ ಗಳಿಗೆ ಅಶ್ವಮೇಧ ಕ್ಲಾಸಿಕ್ ಎಂದು ಹೆಸರಿಡಲಾಗಿದೆ.










