ರಾಜ್ಯ

ಕೆರಗೋಡು ಹನುಮಧ್ವಜ ತೆರವು ವಿವಾದ/ ನಾಳೆ ಬಂದ್ ಆಗುತ್ತಾ ಮಂಡ್ಯ?

ಸಮಗ್ರ ನ್ಯೂಸ್: ಕೆರೆಗೋಡು ಹನುಮಧ್ವಜ ತೆರವು ವಿವಾದ ಹಾಗೆಯೇ ಮುಂದುವರಿದಿದ್ದು, ಫೆ. 9ಕ್ಕೆ ಬಜರಂಗದಳ, ವಿಶ್ವ ಹಿಂದೂ ಪರಿಷತ್ ಹಾಗೂ ಶ್ರೀರಾಮ ಭಜನಾ ಮಂಡಳಿ ಮಂಡ್ಯ ಜಿಲ್ಲೆ ಹಾಗೂ ಕೆರೆಗೋಡು ಬಂದ್‍ಗೆ ಕರೆ ನೀಡಿದೆ. ಜಿಲ್ಲಾಡಳಿತ ಬಂದ್ ಮಾಡದಂತೆ ಮನವಿ ಮಾಡಿದರೂ ಕೂಡ ಮಣೆ ಹಾಕದ ಹಿಂದೂಪರ ಸಂಘಟನೆಗಳಿಗೆ, ಬಜರಂಗಸೇನೆ ಸೇರಿ ಹಲವು ಸಂಘಟನೆಗಳಿಂದ ಬಂದ್ ಗೆ ಬೆಂಬಲ ಸೂಚಿಸಲಾಗಿದೆ. ಫೆ. 7ರಂದು ಕರೆ ನೀಡಲಾಗಿದ್ದ ಬಂದ್ ಅನ್ನು ಮಂಡ್ಯ ಜಿಲ್ಲಾಡಳಿತದ ಮನವಿ ಮೇರೆಗೆ ಸಮಾನ ಮನಸ್ಕರ

ಕೆರಗೋಡು ಹನುಮಧ್ವಜ ತೆರವು ವಿವಾದ/ ನಾಳೆ ಬಂದ್ ಆಗುತ್ತಾ ಮಂಡ್ಯ? Read More »

ಚಿಕ್ಕಮಗಳೂರು : ಕಾಲೇಜು ವಿದ್ಯಾರ್ಥಿನಿ ಡೆಂಗ್ಯೂಗೆ ಬಲಿ

ಸಮಗ್ರ ನ್ಯೂಸ್: ಚಿಕ್ಕಮಗಳೂರು ನಗರದ ಮಹಮ್ಮದ್ ಖಾನ್ ಗಲ್ಲಿಯ ನಿವಾಸಿ ಸಹರಾ ಬಾನು ಡೆಂಗ್ಯೂ ಜ್ವರದಿಂದ ಮೃತ ಪಟ್ಟ ಘಟನೆ ಫೆ.8 ರಂದು ನಡೆದಿದೆ. ಸಹನಾ ಬಾನು (18) ಕಾಲೇಜಿಗೆ ಹೋಗುತ್ತಿದ್ದು ಡೆಂಗ್ಯೂಗೆ ಬಲಿಯಾಗಿದ್ದಾಳೆ. ಚಿಕ್ಕಮಗಳೂರು ಮಲ್ಲೇಗೌಡ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಇದೀಗ ಸಹರಾ ಬಾನು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಚಿಕ್ಕಮಗಳೂರು ನಗರದಲ್ಲಿ ದಿನದಿಂದ ದಿನಕ್ಕೆ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿದೆ ಎಂದು ವರದಿಯಾಗಿವೆ.

ಚಿಕ್ಕಮಗಳೂರು : ಕಾಲೇಜು ವಿದ್ಯಾರ್ಥಿನಿ ಡೆಂಗ್ಯೂಗೆ ಬಲಿ Read More »

ಕೊಡಗು: ಮುಂದುವರೆದ ಕಾಡಾನೆ ದಾಳಿ| ವೃದ್ಧೆಯ ಕಾಲು ಮುರಿತ

ಸಮಗ್ರ ನ್ಯೂಸ್: ಕಾಡಾನೆ ದಾಳಿಗೆ ವೃದ್ಧೆಯ ಕಾಲು ಮುರಿತ ಒಳಗಾದ ಘಟನೆ ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ ಚಿನ್ನೇನಹಳ್ಳಿಯಲ್ಲಿ ಇಂದು (ಫೆ.8) ಮುಂಜಾನೆ ನಡೆದಿದೆ. ವಯೋವೃದ್ಧೆ ಬಹಿರ್ದೆಸೆಗೆ ತೆರಳಿದಾಗ ದಿಢೀರನೇ ಸಲಗ ಧಾಳಿ ನಡೆಸಿದೆ. ಗಾಯಾಳು ವೆಂಕಟಮ್ಮ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿಸಲಾಗಿದೆ.

ಕೊಡಗು: ಮುಂದುವರೆದ ಕಾಡಾನೆ ದಾಳಿ| ವೃದ್ಧೆಯ ಕಾಲು ಮುರಿತ Read More »

ವಿಧಾನಸೌಧದಲ್ಲಿಂದು ಸಿಎಂ ಜನಸ್ಪಂದನಾ ಕಾರ್ಯಕ್ರಮ… ಶಕ್ತಿಸೌಧದಲ್ಲಿ ಸಿದ್ದಗೊಂಡ ಬೃಹತ್ ವೇದಿಕೆ

ಸಮಗ್ರ ನ್ಯೂಸ್: ಲೋಕಸಭಾ ಚುನಾವಣೆ ಹೊತ್ತಲ್ಲೆ ಸಿಎಂ ಜನತಾದರ್ಶನ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ. ಇಂದು ವಿಧಾನಸೌಧದ ಆವರಣದಲ್ಲಿ ಸಿಎಂ ಸಿದ್ದರಾಮಯ್ಯ ಜನಸ್ಪಂದನ ಕಾರ್ಯಕ್ರಮ ನಡೆಸಲಿದ್ದಾರೆ. ಈಗಾಗಲೇ ಕಾರ್ಯಕ್ರಮಕ್ಕೆ ವೇದಿಕೆ ಸಜ್ಜಾಗಿದೆ. ಇಂದು ಇಡೀ ದಿನ ಜನಸ್ಪಂದನ ಕಾರ್ಯದಲ್ಲಿ ಸಿಎಂ ತೊಡಗಿಸಿಕೊಳ್ಳಲಿದ್ದಾರೆ. ಇಂದು ಬೆಳಗ್ಗೆ 10 ರಿಂದ ಸಂಜೆ 6 ಗಂಟೆ ತನಕ ಜನಸ್ಪಂದನ ನಡೆಯಲಿದೆ‌. ಜನಸ್ಪಂದನ ಕಾರ್ಯಕ್ರಮಕ್ಕೆ ವಿಧಾನಸೌಧದಲ್ಲಿ ಸಕಲ ಸಿದ್ದತೆಗಳನ್ನ ಮಾಡಿಕೊಳ್ಳಲಾಗಿದೆ. ವಿಧಾನಸೌಧದ ಗ್ರ್ಯಾಂಡ್ ಸ್ಟಪ್ಸ್ ಮುಂಭಾಗ ಸಿಎಂ ಜನಸ್ಪಂದನಕ್ಕೆ ಸಿದ್ದತೆ ಮಾಡಿಕೊಳ್ಳಲಾಗಿದೆ. ಬೃಹತ್ ಜರ್ಮನ್

ವಿಧಾನಸೌಧದಲ್ಲಿಂದು ಸಿಎಂ ಜನಸ್ಪಂದನಾ ಕಾರ್ಯಕ್ರಮ… ಶಕ್ತಿಸೌಧದಲ್ಲಿ ಸಿದ್ದಗೊಂಡ ಬೃಹತ್ ವೇದಿಕೆ Read More »

ರಾಜ್ಯದಲ್ಲಿ ಹುಕ್ಕಾ ಬಾರ್ ನಿಷೇಧ|ಆದೇಶ ಹೊರಡಿಸಿದ ಆರೋಗ್ಯ ಇಲಾಖೆ

ಸಮಗ್ರ ನ್ಯೂಸ್: ಕರ್ನಾಟಕದಲ್ಲಿ ಹುಕ್ಕಾ ಬಾರ್ ನಿಷೇಧಿಸಿ ರಾಜ್ಯ ಆರೋಗ್ಯ ಮತ್ತು ಕುಟಂಬ ಕಲ್ಯಾಣ ಇಲಾಖೆ ಆದೇಶ ಹೊರಡಿಸಿದೆ. ಹುಕ್ಕಾ, ತಂಬಾಕು ಅಥವಾ ನಿಕೋಟಿನ್ ಒಳಗೊಂಡ ನಿಕೋಟಿನ್ ರಹಿತ ತಂಬಾಕು ರಹಿತ ಸ್ವಾಧಭರಿತ, ಸ್ವಾಧರಹಿತ ಮೇಲಾಸಿಸ್ , ಶಿಶಾ ಹಾಗೂ ಇದೇ ಮಾದರಿಯ ಇನಿತ್ತರ ಹೆಸರುಗಳಿಂದ ಕರೆಯುವ ಹುಕ್ಕಾ ಉತ್ಪನ್ನ ಮಾರಾಟ ನಿಷೇಧಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಸಹ ರಾಜ್ಯದಲ್ಲಿ ಹುಕ್ಕಾ ಬಾರ್‌ ನಿಷೇಧಿಸುವುದಾಗಿ ಹೇಳಿದ್ದರು. ಇದೀಗ ಅಧಿಕೃತವಾಗಿ ಕರ್ನಾಟಕದಲ್ಲಿ

ರಾಜ್ಯದಲ್ಲಿ ಹುಕ್ಕಾ ಬಾರ್ ನಿಷೇಧ|ಆದೇಶ ಹೊರಡಿಸಿದ ಆರೋಗ್ಯ ಇಲಾಖೆ Read More »

ಜನರನ್ನು ಕಂಡು ಕದ್ದಿದ್ದ ಹಣವನ್ನು ಬಿಟ್ಟು ಎದ್ನೊ ಬಿದ್ನೊ ಓಡಿಹೋದ ಖದೀಮರು

ಸಮಗ್ರ ನ್ಯೂಸ್: ಬೆಂಗಳೂರಿನಲ್ಲಿ ಕಳ್ಳರ ಹಾವಳಿ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಈಗ ಇಂತಹದೆ ಒಂದು ಘಟನೆ ನಡೆದಿದೆ. ಹೌದು ದೇಗುಲದಲ್ಲಿ ಕಳ್ಳತನ ಮಾಡುತ್ತಿದ್ದಂತೆ ಜನರನ್ನು ನೋಡಿ ಕಳ್ರು ಎದ್ನೊ ಬಿದ್ನೊ ಅಂತಾ ಓಡಿ ಹೋದ ಘಟನೆ ದೇವನಹಳ್ಳಿಯಲ್ಲಿ ನಡೆದಿದೆ. ಮಧ್ಯರಾತ್ರಿ ಸಮಯ ಬೇರೆ ದೇವಸ್ಥಾನದ ಹಣ ಕದ್ದು ದೇವನಹಳ್ಳಿ ತಾಲೂಕಿನ ಗೋಪಸಂದ್ರ ಗ್ರಾಮದ ಮಾರಮ್ಮ ಬಳಿಯಿರುವ ಪೂಜಮ್ಮ ದೇವಾಲಯವನ್ನ ಕಳ್ಳತನ ಮಾಡಲು ಖದೀಮರು ಎಂಟ್ರಿಕೊಟ್ಟಿದ್ದಾರೆ. ಈ ವೇಳೆ ಜನರು ಬರುತ್ತಿದ್ದನ್ನು ಕಂಡು ಕದ್ದಿದ್ದ ದೇಗುಲದ ಬಳಿಯೇ

ಜನರನ್ನು ಕಂಡು ಕದ್ದಿದ್ದ ಹಣವನ್ನು ಬಿಟ್ಟು ಎದ್ನೊ ಬಿದ್ನೊ ಓಡಿಹೋದ ಖದೀಮರು Read More »

ಡಿ.ಕೆ ಸುರೇಶ್ ಪ್ರತ್ಯೇಕ ರಾಷ್ಟ್ರದ ವಿಚಾರ: ದೂರಿನ ವಿಚಾರಣೆ ಕೈಗೆತ್ತಿಕೊಂಡ ಮಂಗಳೂರು ಕೋರ್ಟ್

ಸಮಗ್ರ ನ್ಯೂಸ್: ಕೇಂದ್ರದಿಂದ ದಕ್ಷಿಣ ಭಾರತಕ್ಕೆ ಅನ್ಯಾಯ ಆಗುತ್ತಿದ್ದರೆ ಪ್ರತ್ಯೇಕ ರಾಷ್ಟ್ರ ಕೇಳಬೇಕಾಗುತ್ತದೆ ಎಂದು ಕಾಂಗ್ರೆಸ್ ಸಂಸದ ಡಿ.ಕೆ ಸುರೇಶ್ ಹೇಳಿಕೆ ನೀಡಿದ್ದರು.ಈ ಹೇಳಿಕೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಸದ್ಯ ಈ ವಿಚಾರವಾಗಿ ಡಿಕೆ ಸುರೇಶ್ ವಿರುದ್ದದ ದೂರಿನ‌‌ ವಿಚಾರಣೆಯನ್ನು ಮಂಗಳೂರು ಕೋರ್ಟ್ ಕೈಗೆತ್ತಿಕೊಂಡಿದೆ. ಇದಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಗೆ ಎಫ್ಐಆರ್ ದಾಖಲಿಸಲು ನಿರ್ದೇಶನ ನೀಡುವಂತೆ ದೂರುದಾರ ವಿಕಾಸ್ ಪುತ್ತೂರು ಪರ ವಕೀಲ ಮೋಹನ್ ರಾಜ್ ಕೆ.ಆರ್ ವಾದ ಮಂಡಿಸಿದ್ದಾರೆ. ಎಫ್ಐಆರ್ ದಾಖಲಿಸಿ ಡಿ.ಕೆ ಸುರೇಶ್ ವಿರುದ್ದ

ಡಿ.ಕೆ ಸುರೇಶ್ ಪ್ರತ್ಯೇಕ ರಾಷ್ಟ್ರದ ವಿಚಾರ: ದೂರಿನ ವಿಚಾರಣೆ ಕೈಗೆತ್ತಿಕೊಂಡ ಮಂಗಳೂರು ಕೋರ್ಟ್ Read More »

ಕೋಲಾರದಲ್ಲಿ ಭಾರತ್ ಬ್ರ್ಯಾಂಡ್ ಅಕ್ಕಿ ಖರೀದಿಸಲು ನೂಕುನುಗ್ಗಲು

ಸಮಗ್ರ ನ್ಯೂಸ್: ಕೇಂದ್ರ ಸರ್ಕಾರ ಭಾರತ್ ಬ್ರ್ಯಾಂಡ್‌‌ ಅಕ್ಕಿಗೆ ನಿನ್ನೆಯಿಂದ ಚಾಲನೆ ದೊರಕಿದೆ. ಕೆಜಿ ಭಾರತ್ ಬ್ರ್ಯಾಂಡ್​ ಅಕ್ಕಿಗೆ 29 ರೂ.ದರ ನಿಗದಿ ಮಾಡಲಾಗಿದು, 5, 10 ಕೆಜಿ ಬ್ಯಾಗ್ ಗಳಲ್ಲಿ ಭಾರತ್ ಅಕ್ಕಿ ಲಭ್ಯವಾಗುತ್ತಿದೆ. ನಿನ್ನೆ ಕೇಂದ್ರ ಸರ್ಕಾರದ ಭಾರತ್ ಬ್ರ್ಯಾಂಡ್ ಅಕ್ಕಿ ಯೋಜನೆಗೆ ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಅವರು ಚಾಲನೆ‌ ನೀಡಿದರು. ಅದರಂತ ಕೋಲಾರ ಜಿಲ್ಲೆಯ ಬಂಗಾರಪೇಟೆ ಪಟ್ಟಣದ ಬಸ್ ನಿಲ್ದಾಣದ ಬಳಿ ಬಿಜೆಪಿ ಯುವ ಮೋರ್ಚಾ ಘಟಕದಿಂದ ಭಾರತ್ ಅಕ್ಕಿ

ಕೋಲಾರದಲ್ಲಿ ಭಾರತ್ ಬ್ರ್ಯಾಂಡ್ ಅಕ್ಕಿ ಖರೀದಿಸಲು ನೂಕುನುಗ್ಗಲು Read More »

ಮುಖ್ಯಮಂತ್ರಿ ಕಚೇರಿಗೆ ಬಿಜೆಪಿ ನಾಯಕರ ಮುತ್ತಿಗೆ

ಸಮಗ್ರ ನ್ಯೂಸ್: ಒಂದು ಕಡೆ ದೆಹಲಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದ್ದರೆ ಇಂದು ಬರ ಪರಿಸ್ಥಿತಿ ನಿಭಾಯಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿ ವಿಧಾನಸೌಧದ ಗಾಂಧಿಪ್ರತಿಮೆ ಮುಂದೆ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಮುಖ್ಯಮಂತ್ರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದರು. ಪೊಲೀಸರು ಕಾರ್ಯಕರ್ತರನ್ನು ವಶಕ್ಕೆ ಪಡೆದರು ವಿಪಕ್ಷ ನಾಯಕ ಆರ್ ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆದಿದ್ದು ರಾಜ್ಯ ಸರ್ಕಾರದ ವಿರುದ್ಧ ಕಾರ್ಯಕರ್ತರು ಘೋಷಣೆ ಕೂಗಿದ್ದರು. ವಿಪಕ್ಷ ನಾಯಕ ಅಶೋಕ್

ಮುಖ್ಯಮಂತ್ರಿ ಕಚೇರಿಗೆ ಬಿಜೆಪಿ ನಾಯಕರ ಮುತ್ತಿಗೆ Read More »

ನಮ್ಮದು ರಾಜಕೀಯ ಪ್ರತಿಭಟನೆ ಅಲ್ಲ| ರಾಜ್ಯಕ್ಕಾಗಿ ಪ್ರತಿಭಟನೆ: ಸಿಎಂ ಸಿದ್ದರಾಮಯ್ಯ

ಸಮಗ್ರ ನ್ಯೂಸ್: ಇಂದು ತೆರಿಗೆ ಹಂಚಿಕೆಯಲ್ಲಿ ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ ಎಂದು ಕಾಂಗ್ರೆಸ್ ಸರ್ಕಾರ ಆರೋಪ ಮಾಡಿದ್ದು, ನಮ್ಮ ತೆರಿಗೆ ನಮ್ಮ ಹಕ್ಕು ಎಂಬ ಉದ್ಘೋಷದೊಂದಿಗೆ ಮೋದಿ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಕರ್ನಾಟಕ ಸರ್ಕಾರ ಮುಂದಾಗಿದೆ. ಈಗಾಗಲೇ ಕಾಂಗ್ರೆಸ್ ಶಾಸಕರು, ಸಚಿವರು ಸೇರಿದಂತೆ ಸಿಎಂ ಸಿದ್ದರಾಮಯ್ಯ ದೆಹಲಿಗೆ ತೆರಳಿದ್ದಾರೆ. ದೆಹಲಿಯ ಜಂತರ್ ಮಂತರ್​​ನಲ್ಲಿ ಪ್ರತಿಭಟನೆಗೆ ದಿಲ್ಲಿ ಪೊಲೀಸರು ಅವಕಾಶ ನೀಡಿದ್ದು ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆಗಳ ಕಾಲ ಅವಕಾಶ ನೀಡಲಾಗಿದೆ. ಸಿಎಂ, ಡಿಸಿಎಂ

ನಮ್ಮದು ರಾಜಕೀಯ ಪ್ರತಿಭಟನೆ ಅಲ್ಲ| ರಾಜ್ಯಕ್ಕಾಗಿ ಪ್ರತಿಭಟನೆ: ಸಿಎಂ ಸಿದ್ದರಾಮಯ್ಯ Read More »