ರಾಜ್ಯ

ದರ್ಶನ್, ಉಮಾಪತಿ ನಡುವೆ ಕಾಟೇರ ಟೈಟಲ್ ವಾರ್

ಸಮಗ್ರ ನ್ಯೂಸ್: ಚಾಲೆಂಜಿಗ್ ಸ್ಟಾರ್ ದರ್ಶನ್ ಹಾಗೂ ನಿರ್ಮಾಪಕ ಉಮಾಪತಿ ಗೌಡ ನಡುವೆ ಟಗ್ ಅಫ್ ವಾರ್ ಜೋರಾಗಿದೆ. ‘ಕಾಟೇರ’ ಸಿನಿಮಾದ ಮೂಲಕ ನಟ ದರ್ಶನ್ ದೊಡ್ಡ ಯಶಸ್ಸು ಕಂಡಿದ್ದಾರೆ. ಈ ಚಿತ್ರದ 50ನೇ ದಿನದ ಸೆಲೆಬ್ರೇಷನ್​ ಅನ್ನು ಬೆಂಗಳೂರಿನ ಪ್ರಸನ್ನ ಚಿತ್ರಮಂದಿರದಲ್ಲಿ ಮಾಡಲಾಗಿದೆ. ಈ ವೇಳೆ ದರ್ಶನ್​ ಅವರು ವೇದಿಕೆ ಮೇಲೆ ಉಮಾಪತಿಗೆ ತಿರುಗೇಟು ನೀಡಿದ್ದಾರೆ. ‘ಕಾಟೇರ’ ಸಿನಿಮಾದ ಟೈಟಲ್​ ನೀಡಿದ್ದೇ ತಾವು ಎಂದು ಈ ಮೊದಲು ಉಮಾಪತಿ ಶ್ರೀನಿವಾಸ್​ ಗೌಡ ಅವರು ಹೇಳಿದ್ದರು. ಅದಕ್ಕೆ

ದರ್ಶನ್, ಉಮಾಪತಿ ನಡುವೆ ಕಾಟೇರ ಟೈಟಲ್ ವಾರ್ Read More »

ಬೆಂಗಳೂರು: ಶಿಕ್ಷಕರ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಗೆಲುವು

ಸಮಗ್ರ ನ್ಯೂಸ್: ವಿಧಾನ ಪರಿಷತ್‌ನ ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ 1,506ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು. ಬೆಂಗಳೂರು ನಗರದ ಸರಕಾರಿ ಕಲಾ ಕಾಲೇಜು ಮುಂಭಾಗದಲ್ಲಿ ಪುಟ್ಟಣ್ಣ ಬೆಂಬಲಿಗರ ಸಂಭ್ರಮಾಚರಣೆ ಮುಗಿಲು ಮುಟ್ಟಿದ್ದು, ಬಿಜೆಪಿ – ಜೆಡಿಎಸ್ ಮೈತ್ರಿ ಅಭ್ಯರ್ಥಿ ಎ.ಪಿ. ರಂಗನಾಥ್ ಸೋತು ಮುಖಭಂಗ ಅನುಭವಿಸಿದ್ದಾರೆ. ಬೆಂಗಳೂರು ಶಿಕ್ಷಕರ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 19,152 ಮತದಾರರಿದ್ದು, ಈ ಉಪ ಚುನಾವಣೆಯಲ್ಲಿ 16,544 ಮಂದಿ ತಮ್ಮ ಮತವನ್ನು ಚಲಾಯಿಸಿದ್ದಾರೆ.

ಬೆಂಗಳೂರು: ಶಿಕ್ಷಕರ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಗೆಲುವು Read More »

SSLC ಮತ್ತು ದ್ವಿತೀಯ PUC ಪರೀಕ್ಷೆಗಳ ಅಂತಿಮ ದಿನಾಂಕ ಪ್ರಕಟ| ಇಲ್ಲಿದೆ ಪರೀಕ್ಷೆಗಳ ಸಂಪೂರ್ಣ ವೇಳಾಪಟ್ಟಿ

ಸಮಗ್ರ ನ್ಯೂಸ್: 2024ರ ದ್ವಿತೀಯ ಪಿಯುಸಿ ಹಾಗೂ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯ ದಿನಾಂಕವನ್ನು ಶಾಲಾ ಶಿಕ್ಷಣ ಇಲಾಖೆ ಪ್ರಕಟಿಸಿದೆ. ಮಾರ್ಚ್‌ 1ರಿಂದ 22ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ಹಾಗೂ ಮಾರ್ಚ್‌ 25ರಿಂದ ಏಪ್ರಿಲ್‌ 6ರವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯಲಿದೆ. ಈ ಕುರಿತಂತೆ ವಿಕಾಸಸೌಧದಲ್ಲಿ ಫೆ.20ರಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು‌ ಬಂಗಾರಪ್ಪ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು. ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಬರುವಾಗ ಐಡಿ ಕಾರ್ಡ್ ಕಡ್ಡಾಯಗೊಳಿಸಲಾಗಿದೆ. ನಿಯಮಾನುಸಾರ ಹಾಗು ಕೋರ್ಟ್ ಆದೇಶದ ಅನ್ವಯವೇ

SSLC ಮತ್ತು ದ್ವಿತೀಯ PUC ಪರೀಕ್ಷೆಗಳ ಅಂತಿಮ ದಿನಾಂಕ ಪ್ರಕಟ| ಇಲ್ಲಿದೆ ಪರೀಕ್ಷೆಗಳ ಸಂಪೂರ್ಣ ವೇಳಾಪಟ್ಟಿ Read More »

ಮೈಸೂರು ಜಿಲ್ಲಾ ಕಾಂಗ್ರೆಸ್ ಸಾಂಸ್ಕೃತಿಕ ಸಮಿತಿ ಅಧ್ಯಕ್ಷರಾಗಿ ಡಾ.ಶ್ವೇತಾ ಮಡಪ್ಪಾಡಿ ನೇಮಕ

ಸಮಗ್ರ ನ್ಯೂಸ್: ಮೈಸೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ನ ಸಾಂಸ್ಕೃತಿಕ ಸಮಿತಿ ಜಿಲ್ಲಾಧ್ಯಕ್ಷರಾಗಿ ಮೈಸೂರಿನ ಯುವ ಉದ್ಯಮಿ, ಚಿಂತಕಿ ಡಾ.ಶ್ವೇತಾ ಮಡಪ್ಪಾಡಿ ಅವರ ನೇಮಕ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾ‌ರ್ ಇವರ ಆದೇಶದ ಮೇರೆಗೆ ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಡಾ. ಬಿ.ಜೆ. ವಿಜಯಕುಮಾರ್ ಇವರು ಈ ಆದೇಶವನ್ನು ಹೊರಡಿಸಿದ್ದಾರೆ. ಕಾಂಗ್ರೆಸ್ ಕಚೇರಿಯ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಡಾ. ಶ್ವೇತಾ ಮಡಪ್ಪಾಡಿ ಅವರಿಗೆ ನೇಮಕಾತಿ ಆದೇಶ ಪತ್ರವನ್ನು ನೀಡಲಾಯಿತು. ಸಾಂಸ್ಕೃತಿಕವಾಗಿ ಬಹು ಸಮೃದ್ಧತೆಯನ್ನು ಹೊಂದಿರುವ ನಮ್ಮ ಸಮಾಜದ

ಮೈಸೂರು ಜಿಲ್ಲಾ ಕಾಂಗ್ರೆಸ್ ಸಾಂಸ್ಕೃತಿಕ ಸಮಿತಿ ಅಧ್ಯಕ್ಷರಾಗಿ ಡಾ.ಶ್ವೇತಾ ಮಡಪ್ಪಾಡಿ ನೇಮಕ Read More »

PUC ಹಾಗೂ SSLC ಪರೀಕ್ಷೆಗಳ ಅಂತಿಮ ವೇಳಾಪಟ್ಟಿ ಪ್ರಕಟ: ಶಿಕ್ಷಣ ಸಚಿವರಿಂದ ಅಧಿಕೃತ ಮಾಹಿತಿ

ಸಮಗ್ರ ನ್ಯೂಸ್: ದ್ವಿತೀಯ ಪಿಯುಸಿ ಹಾಗೂ ಎಸ್ಎಸ್ಎಲ್​ಸಿ ಪರೀಕ್ಷೆಗಳ ಅಂತಿಮ ವೇಳಾಪಟ್ಟಿ ಪ್ರಕಟವಾಗಿದೆ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಇಂದು ವಿಕಾಸಸೌಧದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿ ಪರೀಕ್ಷಾ ದಿನಾಂಕ ಹಾಗೂ ಪರೀಕ್ಷೆಗಳಿಗೆ ಸಂಬಂಧಪಟ್ಟ ಇತರ ಮಾಹಿತಿಗಳನ್ನು ನೀಡಿದರು. ದ್ವಿತೀಯ ಪಿಯುಸಿ ಪರೀಕ್ಷೆ ಮಾರ್ಚ್​ 01 ರಿಂದ 22ರ ವರೆಗೆ ಹಾಗೂ ಎಸ್ಎಸ್ಎಲ್​ಸಿ ಪರೀಕ್ಷೆಗಳು ಮಾರ್ಚ್​​ 25 ರಿಂದ ಏಪ್ರಿಲ್ 06ರವರೆಗೆ ನಡೆಯಲಿವೆ ಎಂದು ತಿಳಿಸಿದರು. ಈ ವರ್ಷ ರಾಜ್ಯದಲ್ಲಿ 8,96,271 ಮಕ್ಕಳು ಎಸ್​ಎಸ್​ಎಲ್​ಸಿ

PUC ಹಾಗೂ SSLC ಪರೀಕ್ಷೆಗಳ ಅಂತಿಮ ವೇಳಾಪಟ್ಟಿ ಪ್ರಕಟ: ಶಿಕ್ಷಣ ಸಚಿವರಿಂದ ಅಧಿಕೃತ ಮಾಹಿತಿ Read More »

ಆನೆದಾಳಿಯಿಂದ ಕೇರಳದಲ್ಲಿ ಕೊಲ್ಲಲ್ಪಟ್ಟ ವ್ಯಕ್ತಿಗೆ ಕರ್ನಾಟಕದಿಂದ ಪರಿಹಾರ| ಬಿಜೆಪಿಯಿಂದ ಆಕ್ರೋಶ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಸೆರೆಹಿಡಿಯಲಾದ ಆನೆಯಿಂದ ಕೊಲ್ಲಲ್ಪಟ್ಟ ಕೇರಳದ ವ್ಯಕ್ತಿಯ ಕುಟುಂಬಕ್ಕೆ ಕರ್ನಾಟಕ ಸರ್ಕಾರವು ಪರಿಹಾರ ಹಣದ ರೂಪವಾಗಿ ₹15 ಲಕ್ಷವನ್ನು ಕಾನೂನುಬಾಹಿರವಾಗಿ ಮಂಜೂರು ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ‘ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ವಯನಾಡು ಸಂಸದರಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕದ ತೆರಿಗೆದಾರರ ಹಣವನ್ನು ಕಾಂಗ್ರೆಸ್‌ ದುರುಪಯೋಗಪಡಿಸಿಕೊಳ್ಳುತ್ತಿದೆ. ಅಲ್ಲದೇ ಕರ್ನಾಟಕದಲ್ಲಿ ಸೆರೆಹಿಡಿಯಲಾದ ಆನೆಯ ತುಳಿತಕ್ಕೊಳಗಾಗಿ ಕೇರಳದ ಅಜೀಶ್‌ ಮೃತಪಟ್ಟಿದ್ದಾರೆ ಎಂದು ಸುಳ್ಳು ಹಬ್ಬಿಸಲಾಗಿದೆ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಎಕ್ಸ್‌ನಲ್ಲಿ ಕಿಡಿಕಾರಿದ್ದಾರೆ. ‘ಬರಗಾಲದಿಂದ ರಾಜ್ಯದಾದ್ಯಂತ

ಆನೆದಾಳಿಯಿಂದ ಕೇರಳದಲ್ಲಿ ಕೊಲ್ಲಲ್ಪಟ್ಟ ವ್ಯಕ್ತಿಗೆ ಕರ್ನಾಟಕದಿಂದ ಪರಿಹಾರ| ಬಿಜೆಪಿಯಿಂದ ಆಕ್ರೋಶ Read More »

ಬನ್ನೇರುಘಟ್ಟದಲ್ಲಿ ದೇಶದ ಅತಿದೊಡ್ಡ ಚಿರತೆ ಸಫಾರಿ ಶೀಘ್ರವೇ ಆರಂಭ

ಸಮಗ್ರ ನ್ಯೂಸ್: ದೇಶದ ಅತಿದೊಡ್ಡ ಹಾಗೂ ರಾಜ್ಯದ ಮೊದಲ ಚಿರತೆ ಸಫಾರಿ ಬೆಂಗಳೂರಿನ ಬನ್ನೇರುಘಟ್ಟದಲ್ಲಿ ಶೀಘ್ರವೇ ಆರಂಭವಾಗಲಿದೆ. ಈಗಾಗಲೇ ಇರುವ ಹುಲಿ ಮತ್ತು ಸಿಂಹ ಸಫಾರಿ ಮಾದರಿಯಲ್ಲಿಯೇ ಚಿರತೆ ಸಫಾರಿಯನ್ನು ಆರಂಭಿಸಲಾಗುತ್ತದೆ. ಚಿರತೆ ಸಫಾರಿ ಶೀಘ್ರವೇ ಕಾರ್ಯರೂಪಕ್ಕೆ ಬರಲಿದ್ದು, ಎಲ್ಲವೂ ಅಂದುಕೊಂಡಂತೆಯೇ ನಡೆದರೆ ಇನ್ನೇನು ಒಂದೂವರೆ ತಿಂಗಳಲ್ಲಿಯೇ ಸಫಾರಿ ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಲಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚನೆ ನೀಡಿದ್ದಾರೆ. ಬೇರೆ ಕಡೆಗಳಿಂದ ಬಂದ ಚಿರತೆಗಳು ವಾತಾವರಣಕ್ಕೆ, ಸಹಬಾಳ್ವೆಗೆ ಹೊಂದಿಕೊಳ್ಳಲು ಸಮಯ ಹಾಗೂ ತರಬೇತಿ

ಬನ್ನೇರುಘಟ್ಟದಲ್ಲಿ ದೇಶದ ಅತಿದೊಡ್ಡ ಚಿರತೆ ಸಫಾರಿ ಶೀಘ್ರವೇ ಆರಂಭ Read More »

ಪ್ರಾಣಿವಸ್ತುಗಳು ಮತ್ತು ಟ್ರೋಫಿಯನ್ನು ಸರಕಾರಕ್ಕೆ ಹಿಂತಿರುಗಿಸಲು ಸೂಚನೆ/ ಸರಕಾರದ ಅಧಿಸೂಚನೆಗೆ ರಾಜ್ಯ ಉಚ್ಛ ನ್ಯಾಯಾಲಯ ತಡೆಯಾಜ್ಞೆ

ಸಮಗ್ರ ನ್ಯೂಸ್: ಪ್ರಾಣಿವಸ್ತುಗಳು ಮತ್ತು ಟ್ರೋಫಿಯನ್ನು ಮೂರು ತಿಂಗಳ ಒಳಗೆ ಹಿಂತಿರುಗಿಸಲು ಸರಕಾರ ಹೊರಡಿಸಿರುವ ಅಧಿಸೂಚನೆಗೆ ರಾಜ್ಯ ಉಚ್ಛ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಜನವರಿ 1 ರಂದು ಕರ್ನಾಟಕ ಸರ್ಕಾರವು ವನ್ಯಜೀವಿ ಸಂರಕ್ಷಣಾ ಕಾಯ್ದಿದೆ 2003 ಅಧಿಸೂಚನೆಯ ಅಧಿನಿಯಮಗಳಿಗೆ ಸಂಬಂಧಿಸಿದಂತೆ ವನ್ಯಜೀವಿಗಳ ಪ್ರಾಣಿವಸ್ತುಗಳು ಮತ್ತು ಟ್ರೋಫಿಯನ್ನು 3 ತಿಂಗಳ ಒಳಗೆ ಸರ್ಕಾರಕ್ಕೆ ಒಪ್ಪಿಸಲು ನಿಯಮಾವಳಿಗಳನ್ನು ರಚಿಸಿ ಅದೇಶ ಹೊರಡಿಸಲಾಗಿತ್ತು. ಕೊಡಗಿನವರಾದ ರಂಜಿ ಪೂಣಚ್ಚ ಮತ್ತು ಕುಟ್ಟಪ್ಪ ಈ ಅಧಿಸೂಚನೆಯ ಅಧಿನಿಯಮಗಳ ವಿರುದ್ಧ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ದಾವೆ

ಪ್ರಾಣಿವಸ್ತುಗಳು ಮತ್ತು ಟ್ರೋಫಿಯನ್ನು ಸರಕಾರಕ್ಕೆ ಹಿಂತಿರುಗಿಸಲು ಸೂಚನೆ/ ಸರಕಾರದ ಅಧಿಸೂಚನೆಗೆ ರಾಜ್ಯ ಉಚ್ಛ ನ್ಯಾಯಾಲಯ ತಡೆಯಾಜ್ಞೆ Read More »

6 ಟ್ರಂಕ್ ಗಳಲ್ಲಿ ತಮಿಳುನಾಡಿಗೆ ಮರಳಲಿದೆ ಜಯಲಲಿತಾ ಆಭರಣಗಳು

ಸಮಗ್ರ ನ್ಯೂಸ್: ಜಯಲಲಿತಾರ ಆಭರಣಗಳು ತಮಿಳುನಾಡಿಗೆ ಮರಳುತ್ತಿದೆ. ಬೆಂಗಳೂರಿನ ವಿಶೇಷ ಕೋರ್ಟ್ 6 ಟ್ರಂಕ್ ಗಳೊಂದಿಗೆ ಬೆಂಗಳೂರಿಗೆ ಬರುವಂತೆ ತಮಿಳುನಾಡಿನ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಕರ್ನಾಟಕದ ಮೇಲುಕೋಟೆಯಲ್ಲಿ ಜನಿಸಿದ್ದ ತಮಿಳುನಾಡು ಸಿಎಂ ಜಯಲಲಿತಾ ಅವರು ಆದಾಯ ಮೀರಿದ‌ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಒಳಗಾಗಿದ್ದರು. ವಿಚಾರಣೆ ಬೆಂಗಳೂರಿನಲ್ಲಿ ನಡೆದಿದ್ದರಿಂದ ಜಯಲಲಿತಾರಿಂದ ಆಭರಣ, ಸೀರೆ ಮತ್ತಿತರ ವಸ್ತುಗಳೂ ಬೆಂಗಳೂರಿನ ಕೋರ್ಟ್ ಸುಪರ್ದಿಯಲ್ಲೇ ಇದ್ದವು.‌ ಇದೀಗ ಈ ಆಭರಣಗಳನ್ನು ತಮಿಳುನಾಡು ಸರ್ಕಾರಕ್ಕೆ ಹಿಂತಿರುಗಿಸಲು ಕೋರ್ಟ್ ನಿರ್ಧರಿಸಿದೆ. ದಿ. ಜಯಲಲಿತಾ

6 ಟ್ರಂಕ್ ಗಳಲ್ಲಿ ತಮಿಳುನಾಡಿಗೆ ಮರಳಲಿದೆ ಜಯಲಲಿತಾ ಆಭರಣಗಳು Read More »

ಜ್ಞಾನದೇಗುಲವಿದು, ಧೈರ್ಯವಾಗಿ ಪ್ರಶ್ನಿಸಿ ಬರಹ/ ಸಮಾಜ ಕಲ್ಯಾಣ ಇಲಾಖೆ ಸ್ಪಷ್ಟನೆ

ಸಮಗ್ರ ಸಮಾಚಾರ: ಕುವೆಂಪು ಅವರ ಜ್ಞಾನದೇಗುಲವಿದು ಕೈ ಮುಗಿದು ಒಳಗೆ ಬಾ ಬರಹವನ್ನು ತೆಗೆದು ಹಾಕಿ ಜ್ಞಾನದೇಗುಲವಿದು, ಧೈರ್ಯವಾಗಿ ಪ್ರಶ್ನಿಸಿ ಎನ್ನುವ ಬದಲಾವಣೆಯನ್ನು ವಿಜಯಪುರದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರವೇಶ ದ್ವಾರದಲ್ಲಿ ಮಾಡಲಾಗಿತ್ತು. ಇದರಿಂದಾಗಿ ಸಾಕಷ್ಟು ಪರ-ವಿರೋಧ ಚರ್ಚೆಗಳು ನಡೆದಿದ್ದು, ಇದೀಗ ಸಮಾಜ ಕಲ್ಯಾಣ ಇಲಾಖೆಯು ಕುವೆಂಪು ಘೋಷವಾಕ್ಯ ಬದಲಾಯಿಸಲು ಹೇಳಿಲ್ಲ ಎಂದು ಸ್ಪಷ್ಟನೆ ನೀಡಿದೆ. ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಣಿವಣ್ಣನ್ ಅವರ ಆದೇಶದ ಮೇಲೆ ಈ ರೀತಿ ಬದಲಾವಣೆ ಮಾಡಿದ್ದೇವೆ. ಆದರೆ ಅವರು ಟೆಲಿಗ್ರಾಂನಲ್ಲಿ

ಜ್ಞಾನದೇಗುಲವಿದು, ಧೈರ್ಯವಾಗಿ ಪ್ರಶ್ನಿಸಿ ಬರಹ/ ಸಮಾಜ ಕಲ್ಯಾಣ ಇಲಾಖೆ ಸ್ಪಷ್ಟನೆ Read More »