ರಾಜ್ಯ

ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ದರಪಟ್ಟಿ ಕಡ್ಡಾಯ| ರಾಜ್ಯ ಆರೋಗ್ಯ ಇಲಾಖೆಯಿಂದ ಮಹತ್ವದ ಆದೇಶ

ಸಮಗ್ರ ನ್ಯೂಸ್: ರಾಜ್ಯದ ಖಾಸಗಿ ಆಸ್ಪತ್ರೆಗಳಲ್ಲಿ ಕಡ್ಡಾಯವಾಗಿ ಚಿಕಿತ್ಸಾ ದರಪಟ್ಟಿ ಅಳವಡಿಸುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಈ ಮೂಲಕ ಖಾಸಗಿ ಆಸ್ಪತ್ರೆಗಳಲ್ಲಿ ದರಪಟ್ಟಿ ಹಾಕದೇ ರೋಗಿಗಳಿಂದ ಮನಬಂದಂತೆ ಹಣ ವಸೂಲಿ ಮಾಡುತ್ತಿರುವ ಖಾಸಗಿ ಆಸ್ಪತ್ರೆಗಳಿಗೆ ಚಾಟಿ ಬೀಸಿದೆ. ರಾಜ್ಯದಲ್ಲಿ ಖಾಸಗೀ ಆಸ್ಪತ್ರೆಗಳಲ್ಲಿ ತಮಗೆ ಇಷ್ಟಬಂದಂತೆ ರೋಗಿಗಳಿಗೆ ಚಿಕಿತ್ಸೆಯ ದರವನ್ನು ವಿಧಿಸಲಾಗುತ್ತಿವೆ. ಈ ದರಪಟ್ಟಿಯಿಂದಾಗಿ ರಾಜ್ಯದಲ್ಲಿನ ಜನರು ಸುಲಿಗೆಗೆ ಒಳಗಾಗಿದ್ದು, ಬಡವರು, ಮಧ್ಯಮ ವರ್ಗದವರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಎಂಬುದೇ ಸಿಂಹಸ್ವಪ್ನವಾದಂತೆ ಆಗಿದೆ ಎನ್ನಲಾಗುತ್ತಿದೆ. ಈ ಹಿನ್ನಲೆಯಲ್ಲಿ

ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ದರಪಟ್ಟಿ ಕಡ್ಡಾಯ| ರಾಜ್ಯ ಆರೋಗ್ಯ ಇಲಾಖೆಯಿಂದ ಮಹತ್ವದ ಆದೇಶ Read More »

ಅನ್ಯಕೋಮಿನ ಯುವಕರಿಂದ ಯಾತ್ರಿಕರಿಗೆ ಧಮ್ಕಿ: ಮೈಸೂರು- ಅಯೋಧ್ಯೆ ಧಾಮ‌ ಟ್ರೈನ್ ತಡೆದ ರಾಮಭಕ್ತರು..

ಸಮಗ್ರ ನ್ಯೂಸ್: ಅಯೋಧ್ಯೆಯ ಶ್ರೀರಾಮರ ದರ್ಶನ ಪಡೆದು ರೈಲಿನಲ್ಲಿ ಮರಳಿ ತಮ್ಮೂರಿಗೆ ಭಕ್ತರು ವಾಪಾಸ್ಸಾಗುತ್ತಿದ್ದರು. ಯಾತ್ರಿಕರಿದ್ದ ಬೋಗಿಗೆ ಮೂವರು ಅನ್ಯಕೋಮಿನ ಯುವಕರು ಹತ್ತಿ ಅವರೊಂದಿಗೆ ಕಾರಣವಿಲ್ಲದೆ ವಾಗ್ವಾದಕ್ಕಿಳಿದ್ದಾರೆ. ಮಾತಿನ ಭರದಲ್ಲಿ ಕಿಡಗೇಡಿಗಳು ಬೋಗಿಗೆ ಬೆಂಕಿ ಹಚ್ಚುವ ಧಮ್ಕಿ ಹಾಕಿದ್ದಾರೆ. ಈ ಮಾತಿಂದ ಕೆರಳಿದ ಯಾತ್ರಿಕರು ಒಂದು ಗಂಟೆಗಳ ಕಾಲ ಟ್ರೈನ್ ಸ್ಟಾಪ್ ಮಾಡಿ ಪ್ರತಿಭಟನೆ ಮಾಡಿ ಕಿಡಗೇಡಿಗಳನ್ನ ಬಂಧಿಸುವಂತೆ ಒತ್ತಾಯ ಮಾಡಿದ್ದಾರೆ ಸುಮಾರು 14,00 ಕ್ಕೂ ಹೆಚ್ಚು ಯಾತ್ರಿಕರು ಮೈಸೂರು- ಅಯೋಧ್ಯೆ ದಾಮಾ ರೈಲಿನಲ್ಲಿ ತಮ್ಮೂರಿಗೆ ಮರಳುತ್ತಿದ್ದರು.

ಅನ್ಯಕೋಮಿನ ಯುವಕರಿಂದ ಯಾತ್ರಿಕರಿಗೆ ಧಮ್ಕಿ: ಮೈಸೂರು- ಅಯೋಧ್ಯೆ ಧಾಮ‌ ಟ್ರೈನ್ ತಡೆದ ರಾಮಭಕ್ತರು.. Read More »

ಸ್ಕ್ರ್ಯಾಪ್ ವಾಹನದಿಂದ ಮೊಬೈಲ್ ಕ್ಯಾಂಟೀನ್‌|ಇನ್ನುಮುಂದೆ ಡಿಪೋಗಳಿಗೆ ಬರಲಿದೆ ಬಿಎಂಟಿಸಿ ‘ಭೋಜನ ಬಂಡಿ’

ಸಮಗ್ರ ನ್ಯೂಸ್: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಕೆಲವು ನೌಕರರು ಹಳೆಯ ಸ್ಕ್ರ್ಯಾಪ್​ ಆದ ಬಸ್ ಅನ್ನು ತಮ್ಮ ಸಹೋದ್ಯೋಗಿಗಳಿಗಾಗಿ ಮೊಬೈಲ್ ಕ್ಯಾಂಟೀನ್‌ ಆಗಿ ನವೀಕರಿಸಿದ್ದಾರೆ. ಪೀಣ್ಯ ಮತ್ತು ಯಶವಂತಪುರ ಬಸ್ ಡಿಪೋಗಳಲ್ಲಿ ಈ ಬಸ್​ ಕ್ಯಾಂಟೀನ್ ಸದ್ಯ ಚಾಲ್ತಿಯಲ್ಲಿದೆ ಎನ್ನಲಾಗುತ್ತಿದೆ. ಬಸ್ ನಿಲ್ದಾಣಗಳು ಸೇರಿದಂತೆ ವಿವಿಧ ಸ್ಥಳಗಳಲ್ಲಿ ಬಿಎಂಟಿಸಿ ನೌಕರರಿಗೆ ಉಪಹಾರ ಮತ್ತು ಮಧ್ಯಾಹ್ನದ ಊಟ ಮಾಡುವುದಕ್ಕೆ ಈ ಕ್ಯಾಂಟೀನ್ ಸಹಕಾರಿಯಾಗಲಿದೆ. ಕ್ಯಾಂಟಿನ್​ಗಳು ಇಲ್ಲದ ಬಿಎಂಟಿಸಿ ಡಿಪೋಗಳಿಗೆ ಈ ಮೊಬೈಲ್​ ಕ್ಯಾಂಟೀನ್ ಸಿದ್ಧಪಡಿಸಲಾಗಿದೆ. ಭೋಜನ ಬಂಡಿ

ಸ್ಕ್ರ್ಯಾಪ್ ವಾಹನದಿಂದ ಮೊಬೈಲ್ ಕ್ಯಾಂಟೀನ್‌|ಇನ್ನುಮುಂದೆ ಡಿಪೋಗಳಿಗೆ ಬರಲಿದೆ ಬಿಎಂಟಿಸಿ ‘ಭೋಜನ ಬಂಡಿ’ Read More »

ಶಿಲ್ಪಿ ಅರುಣ್ ಯೋಗಿರಾಜ್ ಅವರಿಗೆ “ಅಭಿನವ ಅಮರ ಶಿಲ್ಪಿ” ಬಿರುದು

ಸಮಗ್ರ ನ್ಯೂಸ್: ಅಯೋಧ್ಯೆಯಲ್ಲಿ ರಾಮಮಂದಿರಪ್ರಾಣ ಪ್ರತಿಷ್ಠಾನೆಗೊಂಡಿರುವ ಬಾಲರಾಮನ ಮೂರ್ತಿಯನ್ನು ಕೆತ್ತಿದ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರಿಗೆ ಡಾ. ಹಿರೇಮಠ ಫೌಂಡೇಶನ್ ಹಾಗೂ ಕರ್ನಾಟಕ ರಾಜ್ಯ ಸನಾತನ ಧರ್ಮ ರಕ್ಷಣಾ ವೇದಿಕೆ ಸಹಯೋಗದಲ್ಲಿ “ಅಭಿನವ ಅಮರ ಶಿಲ್ಪಿ” ಬಿರುದು ಘೋಷಣೆಯಾಗಿದೆ. ಮಾರ್ಚ್‌ 4ರಂದು ಕಾರವಾರ ನಗರದ ಸಾಗರ್‌ ಕನ್ವೆನ್ಷನ್‌ ಹಾಲ್‌ನಲ್ಲಿ ನಡೆಯವ ಕಾರ್ಯಕ್ರಮದಲ್ಲಿ ಬಿರುದು ನೀಡಿ ಗೌರವಿಸಲಾಗುವುದು ಎಂದು ಡಾ. ಹಿರೇಮಠ ಫೌಂಡೇಶನ್​ನ ಸಂಸ್ಥಾಪಕ ಡಾ. ವಿಶ್ವನಾಥ ಹಿರೇಮಠ ಅವರು ತಿಳಿಸಿದರು. ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು

ಶಿಲ್ಪಿ ಅರುಣ್ ಯೋಗಿರಾಜ್ ಅವರಿಗೆ “ಅಭಿನವ ಅಮರ ಶಿಲ್ಪಿ” ಬಿರುದು Read More »

ಬಜೆಟ್ ಅಧಿವೇಶನದಲ್ಲಿ ಭಾಗವಹಿಸಲು ಹೇಮಂತ್ ಸೊರೇನ್‍ಗೆ ಅನುಮತಿ ನಿರಾಕರಣೆ

ಸಮಗ್ರ ನ್ಯೂಸ್: ಜಾಖರ್ಂಡ್‍ನ ಬಜೆಟ್ ಅಧಿವೇಶನದಲ್ಲಿ ಭಾಗವಹಿಸಲು ಅನುಮತಿ ಕೋರಿದ್ದ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರಿಗೆ ಇಲ್ಲಿನ ವಿಶೇಷ ಪಿಎಂಎಲ್‍ಎ ನ್ಯಾಯಾಲಯ ಗುರುವಾರ ಅನುಮತಿ ನಿರಾಕರಿಸಿದೆ. ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಸೊರೇನ್ ಅವರನ್ನು ಜಾರಿ ನಿರ್ದೇಶನಾಲಯ ಜನವರಿ 31ರಂದು ಬಂಧಿಸಿತ್ತು. ಇ.ಡಿ ಕಸ್ಟಡಿ ಅವಧಿ ಮುಗಿದ ಬಳಿಕ ಫೆ.15ರಂದು ಸೊರೇನ್ ಅವರನ್ನು ಬಿರ್ಸಾ ಮುಂಡಾ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದೆ. ಫೆ. 5ರಂದು ವಿಧಾನಸಭೆಯಲ್ಲಿ ನಡೆದಿದ್ದ ವಿಶ್ವಾಸಮತ ಯಾಚನೆ ವೇಳೆ ಭಾಗವಹಿಸಲು ಸೊರೇನ್ ಅವರಿಗೆ ಈ

ಬಜೆಟ್ ಅಧಿವೇಶನದಲ್ಲಿ ಭಾಗವಹಿಸಲು ಹೇಮಂತ್ ಸೊರೇನ್‍ಗೆ ಅನುಮತಿ ನಿರಾಕರಣೆ Read More »

ಅಳಿವಿನಂಚಿನ ಅಪರೂಪದ ಮೌಸ್ ಡೀರ್ ಪತ್ತೆ

ಸಮಗ್ರ ನ್ಯೂಸ್: ನೀವು ಚಿರತೆಯನ್ನು ಹೋಲುವ ಬೆಕ್ಕನ್ನು ನೋಡಿರಬಹುದು. ಆದರೆ ಜಿಂಕೆ ಮರಿಯ ತದ್ರೂಪಿಯಂತೆ ತೋರುವ ಬೇರೊಂದು ಪ್ರಾಣಿಯನ್ನು ಕಂಡಿದ್ದೀರಾ? ಹಾಗಾದ್ರೆ ಈ ವಿಡಿಯೋದಲ್ಲಿರುವ ಪುಟ್ಟ ಪ್ರಾಣಿಯನ್ನು ನೋಡಿ. ಇದು ಅಳಿಲು ಮರಿ ಅಥವಾ ಇಲಿ ಮರಿ ಅಥವಾ ಜಿಂಕೆ ಮರಿ ಆಗಿರಬಹುದು ಎಂದು ನೀವು ಯೋಚಿಸಿದಲ್ಲಿ ನಿಮ್ಮ ಊಹೆ ತಪ್ಪು. ಸುಂಟಿಕೊಪ್ಪ ಸಮೀಪದ ಹೊರೂರು ಕಾಫಿ ಬೆಳೆಗಾರರಾದ ಪಿ.ಸಿ. ಮೋಹನ್ ರವರಿಗೆ ಸೇರಿದ ಗ್ರೀನ್ ಫೀಲ್ಡ್ ಎಸ್ಟೇಟ್ ನಲ್ಲಿ ನೆನ್ನೆ ದಿನ ಬೆಳಗ್ಗೆ ಆಚನಾಕಾಗಿ ಕಾರ್ಮಿಕರ

ಅಳಿವಿನಂಚಿನ ಅಪರೂಪದ ಮೌಸ್ ಡೀರ್ ಪತ್ತೆ Read More »

ವೇಣೂರಿನ ಭಗವಾನ್ ಶ್ರೀಬಾಹುಬಲಿ ಸ್ವಾಮಿಗೆ ಇಂದಿನಿಂದ ಮಹಾಮಸ್ತಕಾಭಿಷೇಕ

ಸಮಗ್ರ ನ್ಯೂಸ್: ಇಂದಿನಿಂದ ಒಂಬತ್ತು ದಿನಗಳ ಕಾಲ ಜಗತ್ತಿನ ಏಕೈಕ ಮಂದಸ್ಮಿತ ಬಾಹುಬಲಿ ಏಕಶಿಲಾ ಮೂರ್ತಿಯಾದ ವೇಣೂರಿನ ಭಗವಾನ್ ಶ್ರೀಬಾಹುಬಲಿ ಸ್ವಾಮಿಗೆ ಮಹಾಮಸ್ತಕಾಭಿಷೇಕ ನಡೆಯಲಿದೆ. ಹನ್ನೆರಡು ವರ್ಷಗಳಿಗೊಮ್ಮೆ ಮಹಾಮಸ್ತಕಾಭಿಷೇಕ ನೆರವೇರಲಿದ್ದು, ಒಂಬತ್ತು ದಿನಗಳು ಜಲಾಭಿಷೇಕ, ಕಷಾಯ, ಕಲ್ಕಚೂರ್ಣ, ಅರಿಶಿಣ, ಶ್ರೀಗಂಧ, ಅಷ್ಟಗಂಧ, ಹಾಲು, ಎಳನೀರು ಹಾಗೂ ಕೇಸರಿ ದ್ರವ್ಯಗಳಿಂದ ಅಭಿಷೇಕ ನಡೆಯಲಿದೆ. ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಅಧ್ಯಕ್ಷತೆಯಲ್ಲಿ ಮಸ್ತಕಾಭಿಷೇಕ ನಡೆಯಲಿದ್ದು, ಇಡೀ ಜಗತ್ತೇ ಈ ಸಂಭ್ರಮವನ್ನು ಎದುರು ನೋಡುತ್ತದೆ.

ವೇಣೂರಿನ ಭಗವಾನ್ ಶ್ರೀಬಾಹುಬಲಿ ಸ್ವಾಮಿಗೆ ಇಂದಿನಿಂದ ಮಹಾಮಸ್ತಕಾಭಿಷೇಕ Read More »

ರಾಜ್ಯದ ಎಲ್ಲಾ ಶಾಸಕರಿಗೆ ಚಿನ್ನಲೇಪಿತ ಬ್ಯಾಡ್ಜ್ ಭಾಗ್ಯ| ಏನಿದರ ವಿಶೇಷತೆ?

ಸಮಗ್ರ ನ್ಯೂಸ್: ವಿಧಾನಸಭೆ ಸಚಿವಾಲಯದಿಂದ ರಾಜ್ಯದ ಆಡಳಿತ ಮತ್ತು ಪ್ರತಿಪಕ್ಷಗಳ ಎಲ್ಲ 224 ಶಾಸಕ, ಸಚಿವರಿಗೆ ಸರ್ಕಾರದ ಗಂಡಭೇರುಂಡ ಲಾಂಛನವುಳ್ಳ ಚಿನ್ನ ಲೇಪಿತ ಬ್ಯಾಡ್ಜ್‌ಗಳನ್ನು ವಿತರಿಸಲಾಗಿದೆ. ಬೆಂಗಳೂರಿನ ಐ ಡ್ರೀಮ್ಸ್‌ ಟ್ರೇಡ್‌ ಅಂಡ್‌ ಈವೆಂಟ್‌ ಲಿಮಿಟೆಡ್‌ ಕಂಪನಿಯಿಂದ ತಲಾ 2832 ರೂ. ನಂತೆ ಈ ಬ್ಯಾಡ್ಜ್‌ಗಳನ್ನು ಖರೀದಿ ಮಾಡಲಾಗಿದೆ. ಮುಂದಿನ ಅಧಿವೇಶನದಿಂದ ಎಲ್ಲ ಸದಸ್ಯರು ಕಡ್ಡಾಯವಾಗಿ ಈ ಬ್ಯಾಡ್ಜ್‌ ಧರಿಸಿ ಸದನಕ್ಕೆ ಹಾಜರಾಗುವಂತೆ ಸ್ಪೀಕರ್‌ ಯು.ಟಿ.ಖಾದರ್‌ ಸೂಚಿಸಿದ್ದಾರೆ. ಬುಧವಾರ ವಿಧಾನಸಭೆ ಕಾರ್ಯಕಲಾಪದ ವೇಳೆ ಈ ಬಗ್ಗೆ ಮಾಹಿತಿ

ರಾಜ್ಯದ ಎಲ್ಲಾ ಶಾಸಕರಿಗೆ ಚಿನ್ನಲೇಪಿತ ಬ್ಯಾಡ್ಜ್ ಭಾಗ್ಯ| ಏನಿದರ ವಿಶೇಷತೆ? Read More »

ಇಂದಿನಿಂದ ಶಾಲಾ ಮಕ್ಕಳಿಗೆ ರಾಗಿ‌ಮಾಲ್ಟ್ ವಿತರಣೆ

ಸಮಗ್ರ ನ್ಯೂಸ್: ರಾಜ್ಯದ ಶಾಲಾ ಮಕ್ಕಳಿಗೆ ಗುಡ್ ನ್ಯೂಸ್ ಎನ್ನುವಂತೆ ಇಂದಿನಿಂದ ಶಾಲಾ ಮಕ್ಕಳಿಗೆ ರಾಗಿ ಮಾಲ್ಟ್ ಮಿಶ್ರಿತ ಹಾಲು ವಿತರಣೆ ಮಾಡಲಾಗುತ್ತಿದೆ. ಈ ಕುರಿತಂತೆ ಮಾಹಿತಿ ನೀಡಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಸರ್ಕಾರದ ಕ್ಷೀರಭಾಗ್ಯ ಯೋಜನೆಯಡಿ ಪ್ರಸ್ತುತ ವಾರದಲ್ಲಿ ಐದು ದಿನ ಸರ್ಕಾರಿ ಹಾಗೂ ಅನುದಾನಿತ ಶಾಲಾ ಮಕ್ಕಳಿಗೆ ಕೆನೆಭರಿತ ಹಾಲು ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ. ಸರ್ಕಾರದ ಕ್ಷೀರಭಾಗ್ಯ ಯೋಜನೆಯಡಿ ಪ್ರಸ್ತುತ ವಾರದಲ್ಲಿ ಐದು ದಿನ ಸರ್ಕಾರಿ ಹಾಗೂ ಅನುದಾನಿತ ಶಾಲಾ ಮಕ್ಕಳಿಗೆ

ಇಂದಿನಿಂದ ಶಾಲಾ ಮಕ್ಕಳಿಗೆ ರಾಗಿ‌ಮಾಲ್ಟ್ ವಿತರಣೆ Read More »

ಇಂದು ಕರ್ನಾಟಕ ಪ್ರವಾಸ ಕೈಗೊಳ್ಳಲಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ

ಸಮಗ್ರ ನ್ಯೂಸ್: ಇಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಕರ್ನಾಟಕ ಪ್ರವಾಸ ಕೈಗೊಳ್ಳಲಿದ್ದಾರೆ. ರಾಜ್ಯದಲ್ಲಿ ಕೆಲವು ಕಾರ್ಯಕ್ರಮಗಳಿಗೆ ಚಾಲನೆ ಮತ್ತು ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಬೆಳಗ್ಗೆ ದೆಹಲಿಯಿಂದ ಹೊರಟು ವಿಶೇಷ ವಿಮಾನದ ಮೂಲಕ ಬೆಳಗಾವಿಗೆ ಆಗಮಿಸಲಿದ್ದಾರೆ. ಮಧ್ಯಾಹ್ನ 12.30 ಗಂಟೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಬೆಳಗಾವಿಯಿಂದ ಹೊರಟು ಮಧ್ಯಾಹ್ನ 2.40ಕ್ಕೆ ಶಿವಮೊಗ್ಗ ತಲುಪಲಿದ್ದಾರೆ. ಮಧ್ಯಾಹ್ನ 3.15ಕ್ಕೆ ಶಿವಮೊಗ್ಗದಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಜೆ ಶಿವಮೊಗ್ಗದಿಂದ ಬೆಂಗಳೂರಿಗೆ

ಇಂದು ಕರ್ನಾಟಕ ಪ್ರವಾಸ ಕೈಗೊಳ್ಳಲಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ Read More »