ರಾಜ್ಯ

ವಿಜಯಪುರ: ದೇಶದಲ್ಲಾದ ಬದಲಾವಣೆಯಿಂದ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದು ಫಿಕ್ಸ್- ಯತ್ನಾಳ್‌

ಸಮಗ್ರ ನ್ಯೂಸ್‌ : ವಿಶ್ವಮೆಚ್ಚಿದ ನಾಯಕ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗುವುದು ನಿಶ್ಚಿತ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ ಅವರು ಬಿಜೆಪಿ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು. ನಗರದ ಕೆ.ಹೆಚ್.ಬಿ ಕಾಲೋನಿಯಲ್ಲಿ ಹಮ್ಮಿಕೊಂಡಿದ್ದ ಪಾಲಿಕೆಯ ಐದು ವಾರ್ಡ್ ಗಳ ವ್ಯಾಪ್ತಿಯ ಪಂಡಿತ ದೀನ್ ದಯಾಳ ಉಪಾಧ್ಯಾಯ ಮಹಾಶಕ್ತಿ ಕೇಂದ್ರಗಳಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರ ಪರ‌ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕಾಂಗ್ರೆಸ್ಸಿಗರಿಗೆ ಮೋದಿ‌ ಸರ್ಕಾರದ ವಿರುದ್ಧ ಆರೋಪ ಮಾಡಲು ಯಾವುದೇ

ವಿಜಯಪುರ: ದೇಶದಲ್ಲಾದ ಬದಲಾವಣೆಯಿಂದ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದು ಫಿಕ್ಸ್- ಯತ್ನಾಳ್‌ Read More »

ವಿಜಯಪುರ:ತೊರವಿ ಭಾಗಕ್ಕೂ ಬಹು ಬೇಗ ನೀರು- ಎಂ.ಬಿ.ಪಾಟೀಲ

ಸಮಗ್ರ ನ್ಯೂಸ್: ತೊರವಿ ಭಾಗಕ್ಕೂ ನೀರಾವರಿ ಸೌಲಭ್ಯ ಕಲ್ಪಿಸಲು ಯೋಜನೆ ರೂಪಿಸಲಾಗಿದ್ದು, ತವರೂರಿನ ಋಣ ತೀರಿಸುವುದಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.‌ ತೊರವಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರೊ.ರಾಜು ಆಲಗೂರ ಪರ ಬುಧವಾರ ರಾತ್ರಿ ಪ್ರಚಾರ ಕೈಗೊಂಡು ಅವರು ಮಾತನಾಡಿದರು. ರಾಜ್ಯ ಸರಕಾರ ಪ್ರತಿಯೊಬ್ಬರ ಮನೆಗಳಿಗೆ ಗ್ಯಾರಂಟಿ ಯೋಜನೆಗಳನ್ನು ತಲುಪಿಸಿದೆ.ಆದರೆ, ಕೇಂದ್ರ ಸರಕಾರ ಜನರ ಜೀವನವನ್ನು ಬೆಲೆ ಏರಿಕೆಯಿಂದ ದುರ್ಭರಗೊಳಿಸಿದೆ. ಪೆಟ್ರೋಲ್, ಅಡುಗೆ ಅನಿಲ

ವಿಜಯಪುರ:ತೊರವಿ ಭಾಗಕ್ಕೂ ಬಹು ಬೇಗ ನೀರು- ಎಂ.ಬಿ.ಪಾಟೀಲ Read More »

ಗುಲ್ಬರ್ಗ: ರೈತೋಪಯೋಗಿ ಪರಿಕರಗಳು ವಿದ್ಯುತ್ ತಂತಿಯಿಂದ ಬೆಂಕಿಗಾಹುತಿ

ಸಮಗ್ರ ನ್ಯೂಸ್‌ : ಭೀಕರ ಬರಗಾಲದಿಂದ ಕಂಗೆಟ್ಟ ಭೀಮಾತೀರದ ರೈತರಿಗೆ ಒಂದರ ಮೇಲೊಂದು ತೊಂದರೆಗಳು ಉಲ್ಬಣವಾಗುತ್ತಿವೆ. ಕಳೆದ ರಾತ್ರಿ ವಿದ್ಯುತ್ ತಂತಿ ಸ್ಪರ್ಶದಿಂದ ಬೆಂಕಿ ಉದ್ಬವಿಸಿ ಎರಡು ಎಕರೆ ಕಬ್ಬು ಸೇರಿದಂತೆ ಸುಮಾರು 20 ಕ್ಕೂ ಹೆಚ್ಚು ರೈತರ ಮೋಟಾರುಗಳು ಮತ್ತು ಪಂಪಸೇಟಗಳು ಬೆಂಕಿಗಾಹುತಿಯಾಗಿವೆ. ನಂತರ ಮಾತನಾಡಿದ ರೈತ ಸೋಮಣ್ಣಾ ದೊಡ್ಮನಿ ಇರುವ ಎರಡು ಎಕರೆ ಹೊಲದಲ್ಲಿ ನದಿಯಲ್ಲಿ ನೀರು ಇಲ್ಲದಿದ್ದರೂ ಕಷ್ಟ ಪಟ್ಟು ಕಬ್ಬು ಬೆಳೆದಿದ್ದೆನೆ. ಇನ್ನೇನು ಕಬ್ಬು ಕಟಾವು ಮಾಡಬೇಕು ಎನ್ನುವಷ್ಟರಲ್ಲಿ ವಿದ್ಯುತ್ ತಂತಿಯಿಂದ

ಗುಲ್ಬರ್ಗ: ರೈತೋಪಯೋಗಿ ಪರಿಕರಗಳು ವಿದ್ಯುತ್ ತಂತಿಯಿಂದ ಬೆಂಕಿಗಾಹುತಿ Read More »

ಉತ್ತರ ಕನ್ನಡ: ಸರ್ಕಾರಿ ಬಸ್, ಬೈಕ್ ನಡುವೆ ಅಪಘಾತ| ಸವಾರರಿಬ್ಬರು ಸಾವು

ಸಮಗ್ರ ನ್ಯೂಸ್‌ : ಯಲ್ಲಾಪುರ-ಕಾರವಾರದಿಂದ ಅಂಕೋಲಾ ಮಾರ್ಗವಾಗಿ ಹುಬ್ಬಳ್ಳಿ ಕಡೆಗೆ ತೆರಳುತ್ತಿದ್ದ ಕರ್ನಾಟಕ ವಾಯುವ್ಯ ಸಾರಿಗೆ ಬಸ್ ಹಾಗೂ ಬೈಕ ನಡುವೆ ಭೀಕರ ಅಪಘಾತವೊಂದು ಸಂಭವಿಸಿದೆ. ಘಟನೆಯಲ್ಲಿ ಬೈಕ್ ಸವಾರರಿಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇಂದು ಮಧ್ಯಾಹ್ನ ಸುಮಾರು 2.30 ರ ಸಮಯಕ್ಕೆ ಈ ಅಪಘಾತ ನಡೆದಿದೆ ಎನ್ನಲಾಗಿದೆ. ಈ ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಸಡೆಸುತ್ತಿದ್ದಾರೆ.

ಉತ್ತರ ಕನ್ನಡ: ಸರ್ಕಾರಿ ಬಸ್, ಬೈಕ್ ನಡುವೆ ಅಪಘಾತ| ಸವಾರರಿಬ್ಬರು ಸಾವು Read More »

ಚಾಮರಾಜನಗರ: ಕಾಂಗ್ರೇಸ್ ಅಡ್ಡದಾರಿ ಹಿಡಿದಿದೆ ಇದಕ್ಕೆ ಮತದಾರರೆ ತಕ್ಕ ಉತ್ತರ ನೀಡುತ್ತಾರೆ- ಬಿ.ವೈ.ವಿಜೇಂದ್ರ

ಸಮಗ್ರ ನ್ಯೂಸ್ : ಬೆಂಗಳೂರು ಗ್ರಾಮಾಂತರ ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಳ್ಳೇಗಾಲದಲ್ಲಿ ಮಾತನಾಡಿದ ಬಿ.ವೈ.ವಿಜೇಂದ್ರ ಕಾಂಗ್ರೆಸ್ಸಿಗರು ಹತಾಶೆಯಿಂದ ಈ ರೀತಿ ಕೆಲಸಕ್ಕೆ ಮುಂದಾಗಿದ್ದಾರೆ ಇದಕ್ಕೆ ಜನರು ತಕ್ಕ ಉತ್ತರ ಕೊಡ್ತಾರೆ ಎಂದರು. ಚಾಮರಾಜನಗರ ಲೋಕಸಭಾ ಅಭ್ಯರ್ಥಿ ಬಾಲರಾಜು ಪರ ಪ್ರಚಾರಕ್ಕೆ ಆಗಮಿಸಿದ್ದ ವೇಳೆ ಮಾತನಾಡಿದ ವಿಜೇಂದ್ರ ಅವರು ಬೆಂಗಳೂರು ಗ್ರಾಮಾಂತರದಲ್ಲಿ ಹಣಬಲ ಮತ್ತು ಅಧಿಕಾರದ ಬಲದಿಂದ ಹೇಗಾದರು ಮಾಡಿ ಗೆಲುವು ಕಾಣಬೇಕು ಎಂದು ಕಾಂಗ್ರೇಸ್ ನವರು ಅಡ್ಡದಾರಿ ಹಿಡಿದಿದ್ದಾರೆ. ಇದಕ್ಕೆ ಮತದಾರರೆ ತಕ್ಕ

ಚಾಮರಾಜನಗರ: ಕಾಂಗ್ರೇಸ್ ಅಡ್ಡದಾರಿ ಹಿಡಿದಿದೆ ಇದಕ್ಕೆ ಮತದಾರರೆ ತಕ್ಕ ಉತ್ತರ ನೀಡುತ್ತಾರೆ- ಬಿ.ವೈ.ವಿಜೇಂದ್ರ Read More »

ದಾವಣಗೆರೆ: ಕೆಎಸ್‌ಆರ್‌ಟಿಸಿ ಬಸ್, ಓಮ್ನಿ ಕಾರು ಮುಖಾಮುಖಿ|ಮೂವರು ಮೃತ್ಯು

ಸಮಗ್ರ ನ್ಯೂಸ್‌ : ಕೆಎಸ್‌ಆರ್‌ಟಿಸಿ ಬಸ್ ಮತ್ತು ಓಮ್ನಿ ಕಾರು ಮಧ್ಯೆ ಡಿಕ್ಕಿಯಾಗಿದ್ದು, ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ದಾವಣಗೆರೆಯ ನ್ಯಾಮತಿ ತಾಲೂಕಿನ ಚಿನ್ನಿಕಟ್ಟಿ ಗ್ರಾಮದಲ್ಲಿ ನಡೆದಿದೆ. ಮೃತರನ್ನು ನಂಜುಂಡಪ್ಪ (83), ರಾಕೇಶ್ (27), ದೇವರಾಜ್ (30) ಎಂದು ಗುರುತಿಸಲಾಗಿದೆ. ಈ ಮೂವರು ಶಿವಮೊಗ್ಗ ಗ್ರಾಮಾಂತರ ತಾಲೂಕಿನ ಹರಮಘಟ್ಟ ಗ್ರಾಮದವರು ಎಂಬ ಮಾಹಿತಿ ತಿಳಿದು ಬಂದಿದೆ. ಕೆಎಸ್‌ಆರ್‌ಟಿಸಿ ಬಸ್‌ ಶಿಕಾರಿಪುರದ ಕಡೆಯಿಂದ ಬರುತ್ತಿತ್ತು. ಶಿವಮೊಗ್ಗದ ಕಡೆಯಿಂದ ಹೊರಟಿದ್ದ ಕಾರಿನ ನಡುವೆ ಅಪಘಾತ ಸಂಭವಿಸಿದೆ. ಬಸ್‌-ಕಾರು ಮುಖಾಮುಖಿ

ದಾವಣಗೆರೆ: ಕೆಎಸ್‌ಆರ್‌ಟಿಸಿ ಬಸ್, ಓಮ್ನಿ ಕಾರು ಮುಖಾಮುಖಿ|ಮೂವರು ಮೃತ್ಯು Read More »

ಧಾರವಾಡ:ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ವಿದ್ಯಾಕಾಶಿ ಧಾರವಾಡಕ್ಕೆ 23ನೇ ಸ್ಥಾನ

ಸಮಗ್ರ ನ್ಯೂಸ್‌ : ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ವಿದ್ಯಾಕಾಶಿ ಧಾರವಾಡ ಈ ಫಲಿತಾಂಶದಲ್ಲಿ 23ನೇ ಸ್ಥಾನ ಪಡೆದುಕೊಂಡಿದೆ. ಕಳೆದ ಬಾರಿ ಶೇ.73.4 ರಷ್ಟು ಫಲಿತಾಂಶ ಕಂಡು 27ನೇ ಸ್ಥಾನದಲ್ಲಿದ್ದ ಧಾರವಾಡ, ಪ್ರಸಕ್ತ ವರ್ಷ ಶೇ.80.7 ರಷ್ಟು ಫಲಿತಾಂಶ ಮಾಡಿ 23ನೇ ಸ್ಥಾನಕ್ಕೇರಿದೆ. ಹುಬ್ಬಳ್ಳಿ ವಿದ್ಯಾನಿಕೇತನ ಪಿಯು ಕಾಲೇಜಿನ ವಿದ್ಯಾರ್ಥಿನಿ ವಿದ್ಯಾ 598 ಅಂಕ ಪಡೆದು ವಿಜ್ಞಾನ ವಿಭಾಗದಲ್ಲಿ ಮೊದಲ ಬ್ಯಾಂಕ್ ಪಡೆದುಕೊಂಡಿದ್ದು, ಕಲಾ ವಿಭಾಗದಲ್ಲಿ ಧಾರವಾಡದ ಕೆ.ಇ. ಬೋರ್ಡ್ ಪಿಯು ಕಾಲೇಜಿನ ವಿದ್ಯಾರ್ಥಿನಿ ರವೀನಾ ಲಮಾಣಿ

ಧಾರವಾಡ:ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ವಿದ್ಯಾಕಾಶಿ ಧಾರವಾಡಕ್ಕೆ 23ನೇ ಸ್ಥಾನ Read More »

ಹುಬ್ಬಳ್ಳಿ: ಗಾಂಜಾ ಘಾಟು| ಅಲರ್ಟ್ ಆದ CEN ಪೊಲೀಸರು

ಸಮಗ್ರ ನ್ಯೂಸ್‌ : ಹುಬ್ಬಳ್ಳಿ-ಧಾರವಾಡ ಅವಳಿನಗರದಲ್ಲಿ ಗಾಂಜಾ ಮಾರಾಟ, ಸಾಗಾಟ ಹೆಚ್ಚಾಗಿದೆ. ದಿನದಿಂದ ದಿನಕ್ಕೆ ಗಾಂಜಾ ಪ್ರಕರಣಗಳು ಏರುತ್ತಲೇ ಇವೆ. ಇದಕ್ಕೆಲ್ಲ ಕಡಿವಾಣ ಹಾಕುವ ನಿಟ್ಟಿನಲ್ಲಿ ಹುಬ್ಬಳ್ಳಿ-ಧಾರವಾಡ ಪೊಲೀಸರು ಅಭಿಯಾನ ಆರಂಭಿಸಿದ್ದಾರೆ. ಅದರಂತೆ ಇಂದು CEN ಪೊಲೀಸರು ಹುಬ್ಬಳ್ಳಿಯ ಹೊಸ ಬಸ್‌ ನಿಲ್ದಾಣ, ರೈಲ್ವೆ ನಿಲ್ದಾಣ ಸೇರಿದಂತೆ ಜನಜಂಗುಳಿ ಪ್ರದೇಶದಲ್ಲಿ ಇನ್ಸ್‌ಪೆಕ್ಟರ್ ಬಿ.ಕೆ ಪಾಟೀಲ್ ನೇತೃತ್ವದಲ್ಲಿ ಅನುಮಾನಾಸ್ಪದ ಜನರನ್ನು ತಡೆದು ಶ್ವಾನದಳದಿಂದ ತಪಾಸಣೆ ನಡೆಸಿದ್ದಾರೆ. ಈ ವೇಳೆ ಸಾರ್ವಜನಿಕರಿಗೆ ಗಾಂಜಾ ಮಾರಾಟ ಹಾಗೂ ಸಾಗಾಟ ಕಂಡು ಬಂದಲ್ಲಿ,

ಹುಬ್ಬಳ್ಳಿ: ಗಾಂಜಾ ಘಾಟು| ಅಲರ್ಟ್ ಆದ CEN ಪೊಲೀಸರು Read More »

ದ್ವಿತೀಯ ಪಿಯು ಪರೀಕ್ಷೆಯಲ್ಲಿ ಕೊಡಗಿನ ತಾಯಿ ಮಗಳು ಪಾಸ್!

ಸಮಗ್ರ ನ್ಯೂಸ್: ಕುಶಾಲನಗರ ತಾಲೂಕಿನ ಕೂಡ್ಲೂರು ಚೆಟ್ಟಳ್ಳಿ ಗ್ರಾಮದ ರಿನಿಶಾ ಹಾಗು ಅವಳ ತಾಯಿ ಬೇಬಿರಾಣಿ 2023-24ನೇ ಸಾಲಿನ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.! ಗೋಣಿಕೊಪ್ಪಲಿನ ವಿದ್ಯಾನಿಕೇತನ ಕಾಲೇಜಿನಲ್ಲಿ ಓದುತಿರುವ ಎಲೆಕ್ಟ್ರಿಕಲ್ ಕ್ಲಾಸ್ 1 ಗುತ್ತಿಗೆದಾರ ಸುರೇಂದ್ರ.ಟಿ.ಕೆ ರವರ ಪುತ್ರಿ ರಿನಿಶಾ ಟಿ.ಎಸ್ 600ಕ್ಕೆ 570 ಪಡೆದು ಅತ್ಯುನ್ನತ ಅಂಕ ಪಡೆದರೆ ಅವಳ ತಾಯಿ ಬೇಬಿರಾಣಿ.ಎಂ. ಯು. ನೆಲ್ಲಿಹುದಿಕೇರಿ ಜೂನಿಯರ್ ಕಾಲೇಜಿನಲ್ಲಿ ಖಾಸಗಿ ಅಭ್ಯರ್ಥಿಯಾಗಿ ಪರೀಕ್ಷೆ ಬರೆದು 600ಕ್ಕೆ 388 ಪಡೆಯುವ ಮೂಲಕ ಒಂದೇ ವರ್ಷದಲ್ಲಿ ತಾಯಿಮಗಳು ಪಿಯುಸಿ

ದ್ವಿತೀಯ ಪಿಯು ಪರೀಕ್ಷೆಯಲ್ಲಿ ಕೊಡಗಿನ ತಾಯಿ ಮಗಳು ಪಾಸ್! Read More »

ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ ಚಿನ್ನದ ಬೆಲೆ/ 10 ಗ್ರಾಂ ಚಿನ್ನದ ಬೆಲೆ ರೂ. 74,000

ಸಮಗ್ರ ನ್ಯೂಸ್: ಚಿನ್ನ ಮತ್ತು ಬೆಳ್ಳಿ ಬೆಲೆ ದರ ಏರಿಕೆ ಮುಂದುವರೆದಿದ್ದು, ಎರಡೂ ಲೋಹಗಳ ಬೆಲೆ ಬುಧವಾರ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆ. ಬೆಂಗಳೂರು ಚಿನಿವಾರ ಪೇಟೆಯಲ್ಲಿ 99.5 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 74060 ರು.ಗೆ ತಲುಪಿದೆ. ಇನ್ನು ಬೆಳ್ಳಿ ಬೆಲೆ ಕೆಜಿಗೆ 84600 ರು. ತಲುಪಿದೆ. ಇನ್ನು ಮುಂಬೈನಲ್ಲಿ 99.5 ಕ್ಯಾರೆಟ್ ಶುದ್ಧತೆಯ ಚಿನ್ನದ ಬೆಲೆ 10 ಗ್ರಾಂಗೆ 71535 ರು. ತಲುಪಿದ್ದರೆ, 99.9 ಶುದ್ಧತೆಯ ಚಿನ್ನದ ಬೆಲೆ 71823 ರು.ಗೆ ತಲುಪಿದೆ.

ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ ಚಿನ್ನದ ಬೆಲೆ/ 10 ಗ್ರಾಂ ಚಿನ್ನದ ಬೆಲೆ ರೂ. 74,000 Read More »