ನಂಜನಗೂಡು: ಶ್ರೀನಂಜುಂಡನ ಸನ್ನಿಧಿಯಲ್ಲಿ ಭಕ್ತರಿಗೆ ಮತದಾನ ಅರಿವು
ಸಮಗ್ರ ನ್ಯೂಸ್ : ದಕ್ಷಿಣ ಕಾಶಿ ನಂಜನಗೂಡಿನ ಶ್ರೀ ನಂಜುಂಡೇಶ್ವರಸ್ವಾಮಿ ದೇವಸ್ಥಾನದ ಮುಂಭಾಗ ಬೃಹತ್ ರಂಗೋಲಿ ಬಿಡಿಸಿ ಸುತ್ತಲೂ ಮಣ್ಣಿನ ಹಣತೆ, ಕ್ಯಾಂಡಲ್ ಬೆಳಗುವ ಮೂಲಕ ನಂಜನಗೂಡು ತಾಲ್ಲೂಕು ಪಂಚಾಯಿತಿ ಸ್ವೀಪ್ ಸಮಿತಿಯು ಅಪಾರ ಭಕ್ತರಿಗೆ ಮತದಾನ ಜಾಗೃತಿ ಮೂಡಿಸಿದರು. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಎನ್ ಆರ್ ಎಲ್ ಎಂ ಸಂಘದ ಮಹಿಳೆಯರು ದೇಗುಲದ ಮುಂಭಾಗ ರಂಗೋಲಿಯಲ್ಲಿ ಬಿಡಿಸಿದ್ದ ಇ.ವಿ.ಎಂ ಯಂತ್ರ, ತೋರು ಬೆರಳಿಗೆ ಶಾಹಿ ಗುರುತು, ಮತದಾನ ಕುರಿತ ಘೋಷವಾಕ್ಯಗಳು ನೆರದಿದ್ದ ಭಕ್ತರ ಗಮನ ಸೆಳೆಯಿತು.
ನಂಜನಗೂಡು: ಶ್ರೀನಂಜುಂಡನ ಸನ್ನಿಧಿಯಲ್ಲಿ ಭಕ್ತರಿಗೆ ಮತದಾನ ಅರಿವು Read More »










