ರಾಜ್ಯ

ಚುನಾವಣೆಗೆ ಮೊದಲೇ ಖಾತೆ ತೆರೆದ ಬಿಜೆಪಿ| ಸೂರತ್ ನಲ್ಲಿ‌‌ ಅವಿರೋಧವಾಗಿ ಆಯ್ಕೆಯಾದ ಬಿಜೆಪಿ ಅಭ್ಯರ್ಥಿ

ಸಮಗ್ರ ನ್ಯೂಸ್: ಗುಜರಾತ್‌ನ ಸೂರತ್‌ ಕ್ಷೇತ್ರದಿಂದ ಬಿಜೆಪಿಯ ಮುಕೇಶ್‌ ದಲಾಲ್‌ ಅವಿರೋಧವಾಗಿ ಆಯ್ಕೆಯಾಗಿರುವುದಾಗಿ ಅಧಿಕೃತವಾಗಿ ಘೋಷಿಸಲಾಗಿದೆ. ಅವರಿಗೆ ಚುನಾವಣಾಧಿಕಾರಿಗಳು ವಿಜೇತರ ಪ್ರಮಾಣಪತ್ರ ನೀಡಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ನಿಲೇಶ್‌ ಕುಂಭಾನಿ ಅವರ ನಾಮಪತ್ರವನ್ನು ಚುನಾವಣಾಧಿಕಾರಿಗಳು ತಿರಸ್ಕರಿಸಿದ್ದರೆ ಉಳಿದ ಎಲ್ಲಾ ಅಭ್ಯರ್ಥಿಗಳು ಕಣದಿಂದ ಹಿಂದೆ ಸರಿದಿದ್ದಾರೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಅಭ್ಯರ್ಥಿಗಳ ಹೊರತಾಗಿ ಬಹುಜನ ಸಮಾಜದ ಪ್ಯಾರೆಲಾಲ್‌ ಭಾರತಿ ಸಹಿತ ಎಂಟು ಮಂದಿ ಇತರ ಅಭ್ಯರ್ಥಿಗಳಿದ್ದರು. ಕಣದಿಂದ ಹಿಂದೆ ಸರಿದವರಲ್ಲಿ ಪ್ಯಾರೆಲಾಲ್‌ ಕೊನೆಯವರಾಗಿದ್ದರು. ಸಾಕ್ಷಿಗಳಾಗಿ ಸಹಿ ಹಾಕಿದವರ

ಚುನಾವಣೆಗೆ ಮೊದಲೇ ಖಾತೆ ತೆರೆದ ಬಿಜೆಪಿ| ಸೂರತ್ ನಲ್ಲಿ‌‌ ಅವಿರೋಧವಾಗಿ ಆಯ್ಕೆಯಾದ ಬಿಜೆಪಿ ಅಭ್ಯರ್ಥಿ Read More »

ಮೈಸೂರು : ಬಿಜೆಪಿ ಜಯಗಳಿಸಿದರೆ ಎಲ್ಲಾ ಮಹಿಳೆಯರು ಮಂಗಳಸೂತ್ರ ಕಳೆದುಕೊಳ್ಳು ಪರಿಸ್ಥಿತಿ: ಡಾ. ಯತೀಂದ್ರ

ಸಮಗ್ರ ನ್ಯೂಸ್‌ : ಬಿಜೆಪಿ ಅಧಿಕಾರಕ್ಕೆ ಬಂದರೆ, ಎಲ್ಲ ಮಹಿಳೆಯರು ಮಂಗಳಸೂತ್ರ ಕಳೆದುಕೊಳ್ಳುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಪುತ್ರ ಡಾ. ಯತೀಂದ್ರ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಬಿಜೆಪಿ ಅಧಿಕಾರಕ್ಕೆ ಬಂದರೆ ಎಲ್ಲ ಮಹಿಳೆಯರು ತಮ್ಮ ಗಂಡಂದಿರು, ಮಕ್ಕಳನ್ನು ಸಹ ಕಳೆದುಕೊಳ್ಳುತ್ತಾರೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಕೋಮುಗಲಭೆ, ದೊಂಬಿ ಮಾಡುತ್ತಾರೆ. ಗಲಾಟೆ ಮಾಡಿ ಮಕ್ಕಳನ್ನು ಸಾಯುವಂತೆ ಮಾಡುತ್ತಾರೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಒಬ್ಬರನ್ನೊಬ್ಬರು ಬಡಿದಾಡಿಕೊಳ್ಳುವಂತೆ ಮಾಡುತ್ತಾರೆ ಎಂದು ಕಿಡಿಕಾರಿದರು.

ಮೈಸೂರು : ಬಿಜೆಪಿ ಜಯಗಳಿಸಿದರೆ ಎಲ್ಲಾ ಮಹಿಳೆಯರು ಮಂಗಳಸೂತ್ರ ಕಳೆದುಕೊಳ್ಳು ಪರಿಸ್ಥಿತಿ: ಡಾ. ಯತೀಂದ್ರ Read More »

ನೇಹಾ ಕೊಲೆ ಪ್ರಕರಣ ಸಿಐಡಿಗೆ ವಹಿಸಿದ ರಾಜ್ಯ ಸರ್ಕಾರ

ಸಮಗ್ರ ನ್ಯೂಸ್: ಹುಬ್ಬಳ್ಳಿಯಲ್ಲಿ ನೇಹಾ ಕೊಲೆ ಪ್ರಕರಣದ ಕುರಿತು ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಆರೋಪಿ ಫಯಾಜ್‌ನನ್ನು ಎನ್‌ಕೌಂಟರ್‌ ಮಾಡಬೇಕು ಎಂಬುದಾಗಿ ನೇಹಾ ಹಿರೇಮಠ ಅವರ ತಂದೆ ನಿರಂಜನ್‌ ಹಿರೇಮಠ ಅವರು ಆಗ್ರಹಿಸಿದ್ದಾರೆ. ಪ್ರಕರಣದ ಕುರಿತು ತನಿಖೆಯಾಗಬೇಕು ಎಂಬುದಾಗಿ ಬಿಜೆಪಿ ನಾಯಕರು ಆಗ್ರಹಿಸುತ್ತಿದ್ದಾರೆ. ಎಲ್ಲೆಡೆ ಪ್ರತಿಭಟನೆ ನಡೆಯುತ್ತಿದೆ. ಇದರ ಬೆನ್ನಲ್ಲೇ, ನೇಹಾ ಹಿರೇಮಠ ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗುವುದು ಎಂಬುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, “ನೇಹಾ ಹಿರೇಮಠ ಕೊಲೆ ಪ್ರಕರಣವನ್ನು

ನೇಹಾ ಕೊಲೆ ಪ್ರಕರಣ ಸಿಐಡಿಗೆ ವಹಿಸಿದ ರಾಜ್ಯ ಸರ್ಕಾರ Read More »

ಚಿಕ್ಕಮಗಳೂರು: ಕರ್ನಾಟಕ ಬ್ಯಾಂಕ್ ATM ನಲ್ಲಿ ಅಗ್ನಿ ಅವಘಡ

ಸಮಗ್ರ ನ್ಯೂಸ್: ಚಿಕ್ಕಮಗಳೂರು ನಗರದ IG ರಸ್ತೆಯ ಸಾರಗೋಡು ಆರ್ಕೆಡ್​ನಲ್ಲಿರುವ ಕರ್ನಾಟಕ ಬ್ಯಾಂಕ್​ನ ಶಾಖೆಯ ಕೆಳಭಾಗದಲ್ಲಿರುವ ಎಟಿಎಂಗೆ (ATM) ಬೆಂಕಿ ಹೊತ್ತಿಕೊಂಡಿದ್ದು, 5 ಲಕ್ಷ ಹಣ ಸೇರಿದಂತೆ 15 ಲಕ್ಷ ಮೌಲ್ಯದ ಎಟಿಎಂ ಯಂತ್ರ ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ. ಶಾರ್ಟ್ ಸರ್ಕ್ಯೂಟ್​ನಿಂದ ಈ ಅವಘಡ ಸಂಭವಿಸಿದೆ. ಎಟಿಎಂಗೆ ಬೆಂಕಿ ಹೊತ್ತಿಕೊಂಡ ವಿಚಾರವನ್ನು ಹೈದರಾಬಾದ್ ಬ್ಯಾಂಕ್ ಕಂಟ್ರೋಲ್ ರೂಮ್​ ಅಗ್ನಿಶಾಮಕ ದಳಕ್ಕೆ ತಿಳಿಸಿದೆ. ಕೂಡಲೆ ಸ್ಥಳಕ್ಕೆ ಧಾವಿಸಿದ ಚಿಕ್ಕಮಗಳೂರು ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ.

ಚಿಕ್ಕಮಗಳೂರು: ಕರ್ನಾಟಕ ಬ್ಯಾಂಕ್ ATM ನಲ್ಲಿ ಅಗ್ನಿ ಅವಘಡ Read More »

ಹುಬ್ಬಳ್ಳಿ :ನೇಹಾ ಹಿರೇಮಠ ಹತ್ಯೆ ಪ್ರಕರಣ- ಧಾರವಾಡದ ಅಂಜುಮನ್‌ ಇಸ್ಲಾಂ ಸಂಸ್ಥೆಯಿಂದ ಬಂದ್‌ಗೆ ಕರೆ

ಸಮಗ್ರ ನ್ಯೂಸ್‌ : ಹುಬ್ಬಳ್ಳಿಯ ಪ್ರತಿಷ್ಠಿತ ಬಿವಿಬಿ ಕಾಲೇಜಿನ ಆವರಣದಲ್ಲಿ ಭೀಕರವಾಗಿ ಹತ್ಯೆಯಾದ ವಿದ್ಯಾರ್ಥಿನಿ ನೇಹಾ ಹಿರೇಮಠ ಸಾವಿಗೆ ನ್ಯಾಯ ಕೊಡಿಸಲು ಧಾರವಾಡದ ಅಂಜುಮನ್‌ ಇಸ್ಲಾಂ ಸಂಸ್ಥೆ ಹುಬ್ಬಳ್ಳಿ-ಧಾರವಾಡ ಬಂದ್‌ಗೆ ಕರೆ ನೀಡಿದೆ. ಎಲ್ಲ ಅಂಗಡಿ ಮುಂಗಟ್ಟುಗಳ ಮೇಲೆ ಬಂದ್ ಕರಪತ್ರ ಅಂಟಿಸಿ ಸಹೋದರಿ ನೇಹಾ ಸಾವಿಗೆ ನ್ಯಾಯ ಕೊಡಿಸಲು ಕೈ ಜೋಡಿಸುವಂತೆ ಮನವಿ ಮಾಡಲಾಗುತ್ತಿದೆ. ನೇಹಾ ಕೊಲೆಗೆ ರಾಜ್ಯಾದ್ಯಂತ ತೀವ್ರ ಖಂಡನೆ ವ್ಯಕ್ತವಾಗುತ್ತಿದ್ದು, ಈಗ ಮುಸ್ಲಿಂ ಸಮುದಾಯ ಕೂಡ ನೇಹಾ ಕುಟುಂಬಕ್ಕೆ ನ್ಯಾಯ ಕೊಡಿಸಲು ಜೊತೆಗೂಡಿದೆ.

ಹುಬ್ಬಳ್ಳಿ :ನೇಹಾ ಹಿರೇಮಠ ಹತ್ಯೆ ಪ್ರಕರಣ- ಧಾರವಾಡದ ಅಂಜುಮನ್‌ ಇಸ್ಲಾಂ ಸಂಸ್ಥೆಯಿಂದ ಬಂದ್‌ಗೆ ಕರೆ Read More »

ನಂಜನಗೂಡಿನಲ್ಲಿ ರೋಡ್ ಶೋ ನಡೆಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ

ಸಮಗ್ರ ನ್ಯೂಸ್‌ : ಚಾಮರಾಜನಗರ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯ ಅಭ್ಯರ್ಥಿ ಎಸ್.ಬಾಲರಾಜು ಪರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ರೋಡ್ ಶೋ ನಡೆಸಿ ಅಬ್ಬರದ ಪ್ರಚಾರ ನಡೆಸಿದ್ದಾರೆ. ನಂಜನಗೂಡು ನಗರದ ಆರ್‌ಪಿ ರಸ್ತೆಯಲ್ಲಿರುವ ಚಿಂತಾಮಣಿ ಗಣಪತಿ ದೇವಾಲಯದ ಮುಂಭಾಗದಲ್ಲಿ ಬಿವೈ ವಿಜಯೇಂದ್ರ ಅವರಿಗೆ ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತ ಕೋರಿದರು. ಆರ್ ಪಿ ರಸ್ತೆಯ ಮೂಲಕ ನಗರದ ಬಜಾರ್ ರಸ್ತೆಯಲ್ಲಿ ರೋಡ್ ಶೋ ನಡೆಸಿ ಬಿರುಸಿನ ಮತ ಪ್ರಚಾರ ನಡೆಸಿದ್ದಾರೆ. ಬಳಿಕ ಮಾತನಾಡಿದ

ನಂಜನಗೂಡಿನಲ್ಲಿ ರೋಡ್ ಶೋ ನಡೆಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ Read More »

ಸುಳ್ಯ: ವರ್ಷ ಕಳೆದರೂ ಉದ್ಘಾಟನೆ‌ ಭಾಗ್ಯ ಕಾಣದ ವಿದ್ಯುತ್ ಪರಿವರ್ತಕ| ಮನವಿಗಳಿಗೂ ಕಿಮ್ಮತ್ತು ಕೊಡದ ಮೆಸ್ಕಾಂ

ಸಮಗ್ರ ನ್ಯೂಸ್: ಸ್ಥಾಪನೆ ಮಾಡಿ ಎರಡು ವರ್ಷ ಕಳೆದರೂ ವಿದ್ಯುತ್ ಸಂಪರ್ಕ ಕಲ್ಪಿಸದೇ ಟ್ರಾನ್ಸ್ ಫಾರ್ಮರ್ ಒಂದಕ್ಕೆ ಗ್ರಹಣ ಹಿಡಿದ ಘಟನೆ ತಾಲೂಕಿನ ಐವರ್ನಾಡು ಗ್ರಾಮದಲ್ಲಿ ಕಂಡುಬರುತ್ತಿದೆ. ಐವರ್ನಾಡು ಗ್ರಾಮದ ಬದಂತಡ್ಕ ಕೊಯಿಲ ಎಂಬಲ್ಲಿ ಗ್ರಾಮಸ್ಥರ ಮನವಿಯ ಮೇರೆಗೆ ಕಳೆದ ಒಂದು ವರ್ಷಗಳ ಹಿಂದೆ ಟಿಸಿ ಅಳವಡಿಸಲಾಗಿತ್ತು.‌ ಆರಂಭದಲ್ಲಿ ಚುರುಕಿನಿಂದ‌ ಕೆಲಸ ಪ್ರಾರಂಭಿಸಿ ಟಿಸಿ ಸ್ಥಾಪನೆ ಮಾಡಲಾಗಿದೆ. ಅದಾದ‌ ಬಳಿಕ ಸಂಪರ್ಕ ಇದುವರೆಗೆ ಲಭಿಸಿಲ್ಲ. ಈ ಕುರಿತಂತೆ ಗ್ರಾಮಸ್ಥರು ಗ್ರಾಮಸಭೆ, ವಾರ್ಡ್ ಸಭೆಗಳಲ್ಲಿ ಚರ್ಚಿಸಿದರೂ ಪ್ರಯೋಜನವಾಗಿಲ್ಲ. ಇನ್ನು

ಸುಳ್ಯ: ವರ್ಷ ಕಳೆದರೂ ಉದ್ಘಾಟನೆ‌ ಭಾಗ್ಯ ಕಾಣದ ವಿದ್ಯುತ್ ಪರಿವರ್ತಕ| ಮನವಿಗಳಿಗೂ ಕಿಮ್ಮತ್ತು ಕೊಡದ ಮೆಸ್ಕಾಂ Read More »

ಹವಾಮಾನ ವರದಿ| ಇಂದು, ನಾಳೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ

ಸಮಗ್ರ ನ್ಯೂಸ್: ರಾಜ್ಯಾದ್ಯಂತ ಇಂದು ಮತ್ತು‌ ನಾಳೆ ಸಾಧಾರಣದಿಂದ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಹಲವು ಜಿಲ್ಲೆಗಳಲ್ಲಿ ಆರೆಂಜ್ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ರಾಜ್ಯದ ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಇಂದು ಭಾರೀ ಮಳೆಯಾಗುವ ಸಾಧ್ಯತೆ ಇದ್ದು ಆರೆಂಜ್ ಅಲರ್ಟ್ ಘೊಷಿಸಲಾಗಿದೆ. ಕರಾವಳಿಯ ಮೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಎಚ್ಚರಿಕೆ ನೀಡಲಾಗಿದೆ. ಸೋಮವಾರ (ಎ. ೨೨) ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಚಿತ್ರದುರ್ಗ, ಮಂಡ್ಯ, ಮೈಸೂರು, ಶಿವಮೊಗ್ಗ, ತುಮಕೂರು, ಬೆಳಗಾವಿ, ಧಾರವಾಡ, ಗದಗ, ಹಾವೇರಿ,

ಹವಾಮಾನ ವರದಿ| ಇಂದು, ನಾಳೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ Read More »

ಬೆಳಗಾವಿಯಲ್ಲಿ ಲವ್ ಜಿಹಾದ್ ಗೆ ಒತ್ತಾಯ| ಲೈಂಗಿಕ ದೌರ್ಜನ್ಯವೆಸಗಿ, ಖಾಸಗಿ ಫೋಟೋ ವೈರಲ್ ಮಾಡುವಂತೆ ಬೆದರಿಕೆ

ಸಮಗ್ರ ನ್ಯೂಸ್: ಇತ್ತ ಹುಬ್ಬಳ್ಳಿಯಲ್ಲಿ ನೇಹಾ ವಿಚಾರ ಜೋರಾಗಿ ಸದ್ದು ನಡೆಯುತ್ತಿದರೆ. ಬೆಳಗಾವಿಯಲ್ಲು ಲವ್ ಜಿಹಾದ್‌ನ ಮತ್ತೊಂದು ಕರಾಳ ಮುಖ ಅನಾವರಣಗೊಂಡಿದೆ. ಹಿಂದೂ ಯುವತಿಗೆ ಕೆಲಸ ಕೊಡಿಸುತ್ತೇನೆಂದು ಲೈಂಗಿಕ ದೌರ್ಜನ್ಯವೆಸಗಿ, ಬಲವಂತವಾಗಿ ಮತಾಂತರ ಮಾಡಲು ಯತ್ನಿಸಿದ್ದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಸವದತ್ತಿ ತಾಲೂಕಿನ ಮುನವಳ್ಳಿ ಪಟ್ಟಣದಲ್ಲಿ ಸಂತ್ರಸ್ತ ಮಹಿಳೆ ವಾಸವಾಗಿದ್ದಾರೆ. ಸಂತ್ರಸ್ತ ಮಹಿಳೆಯ ಪತಿ ಮುನವಳ್ಳಿ ಪಟ್ಟಣದಲ್ಲಿ ಕಿರಾಣಿ ಅಂಗಡಿ ಹೊಂದಿದ್ದಾರೆ. ಪತಿ ಇಲ್ಲದಿದ್ದಾಗ ಈ ಮಹಿಳೆ ಕಿರಾಣಿ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದರು. ಈ ವಿಚಾರ ತಿಳಿದ

ಬೆಳಗಾವಿಯಲ್ಲಿ ಲವ್ ಜಿಹಾದ್ ಗೆ ಒತ್ತಾಯ| ಲೈಂಗಿಕ ದೌರ್ಜನ್ಯವೆಸಗಿ, ಖಾಸಗಿ ಫೋಟೋ ವೈರಲ್ ಮಾಡುವಂತೆ ಬೆದರಿಕೆ Read More »

ಅಕ್ರಮವಾಗಿ ಗೋವು ಸಾಗಾಟ ಮಾಡುತ್ತಿದ್ದ ಲಾರಿ ಚಾಲಕನಿಗೆ ಹಿಂದೂಪರ ಕಾರ್ಯಕರ್ತರಿಂದ ಥಳಿತ

ಸಮಗ್ರ ನ್ಯೂಸ್: ಬೆಳಗಾವಿಯಲ್ಲಿ ಅಕ್ರಮವಾಗಿ ಗೋವು ಸಾಗಾಟ ಮಾಡುತ್ತಿದ್ದ ಲಾರಿ ಚಾಲಕನಿಗೆ 50ಕ್ಕೂ ಹೆಚ್ಚು ಹಿಂದೂಪರ ಕಾರ್ಯಕರ್ತರಿಂದ ಥಳಿಸಿ ನೈತಿಕ ಪೊಲೀಸ್​ಗಿರಿ ಮೆರೆದಿದ್ದಾರೆ. ಬೆಳಗಾವಿಯ ಸುವರ್ಣಸೌಧದ ಮುಂಭಾಗದಲ್ಲಿ ಈ ಘಟನೆ ನಡೆದಿದೆ. ಮಹಾರಾಷ್ಟ್ರದಿಂದ ಹುಬ್ಬಳ್ಳಿ ಕಡೆ ಹೊರಟ್ಟಿದ್ದ ಲಾರಿಯನ್ನು ಹೆದ್ದಾರಿಯಲ್ಲೇ ತಡೆದು ಕಲ್ಲು ತೂರಿ, ಅಕ್ರಮವಾಗಿ ಗೋವು ಸಾಗಿಸುತ್ತಿದ್ದ ಎಂದು ಚಾಲಕನ ಮೇಲೆ ಹಲ್ಲೆ ಮಾಡಲಾಗಿದೆ. ಕಾಸರಗೋಡು ಮೂಲದ ಲಾರಿ ಚಾಲಕ ಉಮರ್​ ಮೋಯಿದ್ದೀನ್​​ಗೆ ಕಾಲಿನಿಂದ ಒದ್ದು ಕಟ್ಟಿಗೆಯಿಂದಲೂ ಹಲ್ಲೆ ಮಾಡಲಾಗಿದೆ. ಲಾರಿ ಚಾಲಕ ಉಮರ್ ತಲೆ,

ಅಕ್ರಮವಾಗಿ ಗೋವು ಸಾಗಾಟ ಮಾಡುತ್ತಿದ್ದ ಲಾರಿ ಚಾಲಕನಿಗೆ ಹಿಂದೂಪರ ಕಾರ್ಯಕರ್ತರಿಂದ ಥಳಿತ Read More »