ರಾಜ್ಯ

ಪ್ರತಿ ವರ್ಷ ಎನ್‍ಸಿಆರ್‍ಟಿ ಪಠ್ಯ ಪುಸ್ತಕ ಪರಿಷ್ಕರಣೆ/ ಕೇಂದ್ರ ಶಿಕ್ಷಣ ಇಲಾಖೆ ಸಲಹೆ

ಸಮಗ್ರ ನ್ಯೂಸ್: ಕೇಂದ್ರ ಶಿಕ್ಷಣ ಇಲಾಖೆಯು, ಶಿಕ್ಷಣದಲ್ಲಿ ನಿರಂತರ ಬದಲಾವಣೆಯ ಕಾರಣಕ್ಕಾಗಿ ಪ್ರತಿ ವರ್ಷ ಎನ್‍ಸಿಆರ್‍ಟಿ ಪಠ್ಯ ಪುಸ್ತಕವನ್ನು ಪರಿಷ್ಕರಿಸಿ, ಹೊಸ ವಿಚಾರಗಳನ್ನು ಸೇರಿಸಲು ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಸಂಸ್ಥೆಗೆ ಸಲಹೆ ನೀಡಿದೆ. ಹಿಂದಿನಿಂದಲೂ ಎನ್‍ಸಿಆರ್‍ಟಿ ಪಠ್ಯ ಕ್ರಮದಲ್ಲಿ ಕಾಲಕಾಲಕ್ಕೆ ಪಠ್ಯಪುಸ್ತಕ ಪರಿಷ್ಕರಣೆಯಂತಹ ಪದ್ಧತಿ ಇರಲಿಲ್ಲ. ಆದರೆ ಇದೀಗ ಕಾಲ ವೇಗಗತಿಯಲ್ಲಿ ಬದಲಾವಣೆ ಹೊಂದುತ್ತಿದ್ದು, ಪಠ್ಯಪುಸ್ತಕದಲ್ಲಿ ಬದಲಾವಣೆ ತರುವುದು ಅವಶ್ಯಕವೆಂದು ಇಲಾಖೆ ಹೇಳಿದೆ. ಒಮ್ಮೆ ಮುದ್ರಿಸಿದ ಪುಸ್ತಕವನ್ನು ಸುದೀರ್ಘ ವರ್ಷದ ತನಕ ಇಟ್ಟುಕೊಳ್ಳುವುದು ಸೂಕ್ತವಲ್ಲ.

ಪ್ರತಿ ವರ್ಷ ಎನ್‍ಸಿಆರ್‍ಟಿ ಪಠ್ಯ ಪುಸ್ತಕ ಪರಿಷ್ಕರಣೆ/ ಕೇಂದ್ರ ಶಿಕ್ಷಣ ಇಲಾಖೆ ಸಲಹೆ Read More »

ಪತಂಜಲಿಯ 14 ಉತ್ಪನ್ನಗಳ ಪರವಾನಗಿ ರದ್ದು/ ಸುಪ್ರೀಂ ಕೋರ್ಟ್‍ಗೆ ಅಫಿಡವಿಟ್ ಸಲ್ಲಿಸಿದ ಉತ್ತರಾಖಂಡ ಸರ್ಕಾರ

ಸಮಗ್ರ ನ್ಯೂಸ್: ಯೋಗ ಗುರು ಬಾಬಾ ರಾಮ್‍ದೇವ್ ಅವರ ಪತಂಜಲಿ ಕಂಪನಿಯ ಆರ್ಯುವೇದ ಉತ್ಪನ್ನಗಳ ವಿವಾದಾತ್ಮಕ ಜಾಹೀರಾತುಗಳನ್ನು ಎದುರಿಸಿದ ನಂತರ, ಇದೀಗ 14 ಉತ್ಪನ್ನಗಳ ಪರವಾನಗಿಯನ್ನು ರದ್ದುಗೊಳಿಸಲು ಉತ್ತರಾಖಂಡ ಸರ್ಕಾರ ನಿರ್ಧರಿಸಿದೆ. ಈ ಕುರಿತು ಸೋಮವಾರ ಸುಪ್ರೀಂ ಕೋರ್ಟ್‍ಗೆ ಅಫಿಡವಿಟ್ ಸಲ್ಲಿಸಿದ್ದಾರೆ. ಪತಂಜಲಿ ಗ್ರೂಪ್‍ನ ಭಾಗವಾಗಿರುವ ದಿವ್ಯ ಫಾರ್ಮಸಿ ದೃಷ್ಟಿ ಐ ಡ್ರಾಪ್’, ‘ಸ್ವಾಸರಿ ಗೋಲ್ಡ್’, ‘ಸ್ವಾಸರಿ ವಟಿ’, ‘ಬೋನ್‍ಚೋಂ’, ‘ಸ್ವಾಸರಿ ಪ್ರವಾಹಿ’, ‘ಸ್ವಾಸರಿ ಅವಲೇಹ್’, ‘ಮುಕ್ತಾ ವಟಿ ಎಕ್ಷ್ಮಾ ಪವರ್’, ‘ಲಿಪಿಡೋಮ್’, ‘ಬಿಪಿ ಗ್ರಿಟ್’, ‘ಮಧುಗ್ರಿಟ್’,

ಪತಂಜಲಿಯ 14 ಉತ್ಪನ್ನಗಳ ಪರವಾನಗಿ ರದ್ದು/ ಸುಪ್ರೀಂ ಕೋರ್ಟ್‍ಗೆ ಅಫಿಡವಿಟ್ ಸಲ್ಲಿಸಿದ ಉತ್ತರಾಖಂಡ ಸರ್ಕಾರ Read More »

ವಿಜಯಪುರ : ನದಿಗೆ ಮದುವೆ ಬಾಸಿಂಗ ಬಿಡಲು ಹೋಗಿದ್ದ ಬಾಲಕ ನೀರುಪಾಲು

ಸಮಗ್ರ ನ್ಯೂಸ್‌ : ಮದುವೆ ಬಾಸಿಂಗ ಬಿಡಲು ಹೋಗಿದ್ದ ಬಾಲಕ ನೀರುಪಾಲಾಗಿರುವ ಘಟನೆ ನಿಡಗುಂದಿ ತಾಲೂಕಿನ ಯಲಗೂರು ಬಳಿಯ ಕೃಷ್ಣಾ ನದಿಯಲ್ಲಿ ನಡೆದಿದೆ. ವೆಂಕಟೇಶ ಶರಣಪ್ಪ ಚಲವಾದಿ (16) ಮೃತ ಬಾಲಕ.ಮೃತ ಬಾಲಕ ಬಸವನಬಾಗೇವಾಡಿ ತಾಲೂಕಿನ ಹಂಗರಗಿ ಗ್ರಾಮದ ನಿವಾಸಿ. ಮೃತ ಬಾಲಕನ ಚಿಕ್ಕಪ್ಪ ರವಿ ಮದುವೆ ಬಳಿಕ ಸಂಪ್ರದಾಯದಂತೆ ನದಿಗೆ ಬಾಸಿಂಗ ಬಿಡಲು ಹೋದಾಗ ಈ ದುರ್ಘಟನೆ ನಡೆದಿದೆ. ಈ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಬಸವನಬಾಗೇವಾಡಿಯ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಶವ ಹುಡುಕಾಟ ನಡೆಸಿದ್ದಾರೆ.

ವಿಜಯಪುರ : ನದಿಗೆ ಮದುವೆ ಬಾಸಿಂಗ ಬಿಡಲು ಹೋಗಿದ್ದ ಬಾಲಕ ನೀರುಪಾಲು Read More »

ದ್ವಿತೀಯ ಪಿಯುಸಿಯಲ್ಲಿ ಕಡಿಮೆ ಅಂಕ ವಿಚಾರವಾಗಿ ಗಲಾಟೆ|ಚಾಕು ಇರಿದು ಮಗಳನ್ನೆ ಕೊಂದ ತಾಯಿ

ಸಮಗ್ರ ನ್ಯೂಸ್: ತಾಯಿ ಮತ್ತು ಮಗಳ ನಡುವೆ ಎಷ್ಟೆ ಜಗಳ ಬಂದರು ಸ್ವಲ್ಪ ಸಮಯದಲ್ಲಿ ಅದು ಸರಿಯಾಗುವಂತಹದು, ಆದರೆ ಇಲ್ಲಿ ಇಬ್ಬರ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಈ ಘಟನೆ ನಡೆದಿದ್ದು ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ, ದ್ವಿತೀಯ ಪಿಯುಸಿಯಲ್ಲಿ ಕಡಿಮೆ ಅಂಕ ವಿಚಾರವಾಗಿ ಇಬ್ಬರ ನಡುವೆ ಜಗಳ ಆರಂಭವಾಗಿದ್ದು, ಪರಸ್ಪರ ಚಾಕು ಇರಿದುಕೊಂಡಿದ್ದರಿಂದ ಮಗಳು ಮೃತಪಟ್ಟಿದ್ದು, ಗಂಭೀರವಾಗಿ ಗಾಯಗೊಂಡಿದ್ದ ತಾಯಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಗಳು ಸಾಹಿತಿ(18) ಕೊಲೆಯಾದ ಯುವತಿ. ಪದ್ಮಜಾ ಮಗಳನ್ನು ಕೊಲೆಗೈದ ತಾಯಿ. ದ್ವಿತೀಯ ಪಿಯುಸಿಯಲ್ಲಿ

ದ್ವಿತೀಯ ಪಿಯುಸಿಯಲ್ಲಿ ಕಡಿಮೆ ಅಂಕ ವಿಚಾರವಾಗಿ ಗಲಾಟೆ|ಚಾಕು ಇರಿದು ಮಗಳನ್ನೆ ಕೊಂದ ತಾಯಿ Read More »

ರಾಮನಗರ: ಈಜಲು ಹೋಗಿದ್ದ ಐವರು ನೀರುಪಾಲು

ಸಮಗ್ರ ನ್ಯೂಸ್: ಈಜಲು ಹೋಗಿದ್ದ ಐವರು ಪ್ರವಾಸಿಗರು ನೀರುಪಾಲದ ಘಟನೆ ಕನಕಪುರ ತಾಲೂಕಿನ ಮೇಕೆದಾಟು ಬಳಿ ನಡೆದಿದೆ. ಬೆಂಗಳೂರಿನ ಖಾಸಗಿ ಕಾಲೇಜಿನ ಐವರು ವಿದ್ಯಾರ್ಥಿಗಳು ನೀರುಪಾಲಾಗಿದ್ದಾರೆ. ಕನಕಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯ ಮೇಕೆದಾಟು ಸಂಗಮದಲ್ಲಿ ಈಜಲು ತೆರಳಿದ್ದಾಗ ಈ ದುರಂತ ಸಂಭವಿಸಿದೆ. ಹರ್ಷಿತಾ (18), ತೇಜಸ್ (19), ವರ್ಷಾ (18), ಸ್ನೇಹಾ (19), ಅಭಿಶೇಕ್ (19) ಮೃತರು. ಕಾವೇರಿ ನದಿಯಿಂದ ಅಗ್ನಿಶಾಮಕ ದಳ ಶವಗಳನ್ನ ಹೊರತೆಗೆದಿದ್ದಾರೆ. ಕನಕಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡಿದಿದೆ. ಅರಣ್ಯಾಧಿಕಾರಿಗಳು, ಸಾತನೂರು

ರಾಮನಗರ: ಈಜಲು ಹೋಗಿದ್ದ ಐವರು ನೀರುಪಾಲು Read More »

ಎಸ್ಐಟಿ ತನಿಖೆಗೆ ಕರೆದಾಗ ಪ್ರಜ್ವಲ್ ಬರುತ್ತಾನೆ: ಎಚ್.ಡಿ ರೇವಣ್ಣ

ಸಮಗ್ರ ನ್ಯೂಸ್: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಂಡಿದೆ. SITಗೆ ಪ್ರಕರಣ ವಹಿಸಿದ್ದು, ಇಂದು ವಿಚಾರಣೆಗೆ ಐವರು ಸಂತ್ರಸ್ತೆಯರು ಹಾಜರಾಗಿದ್ದರು. ಇನ್ನೂ ಇದೇ ವಿಚಾರವಾಗಿ ಮಾಜಿ ಸಚಿವ ಎಚ್.ಡಿ ರೇವಣ್ಣ ಪ್ರತಿಕ್ರಿಯೆ ನೀಡಿದು ನಾವೆಲ್ಲಾ ಇಲ್ಲೇ ಇದ್ದೇವೆ, ಎಲ್ಲೂ ಓಡಿ ಹೋಗಲ್ಲ. ಹಾಸನ ಪೆನ್‌ ಡ್ರೈವ್ ಪ್ರಕರಣದ ಬಗ್ಗೆ ಸದ್ಯ ನಾನು ಏನೂ ರಿಯಾಕ್ಟ್ ಮಾಡಲ್ಲ, ಕಾನೂನು ರೀತಿ ಪ್ರಕರಣವನ್ನು ನಾವು ಎದುರಿಸುತ್ತೇವೆ. ವಿಚಾರಣೆಗೆ ಕರೆದಾಗ ವಿದೇಶದಿಂದ ಪುತ್ರ ಬರುತ್ತಾನೆ ಎಂದಿದ್ದಾರೆ. 4-5

ಎಸ್ಐಟಿ ತನಿಖೆಗೆ ಕರೆದಾಗ ಪ್ರಜ್ವಲ್ ಬರುತ್ತಾನೆ: ಎಚ್.ಡಿ ರೇವಣ್ಣ Read More »

ಬೀದರ್ : 5 ಲಕ್ಷ ಮೌಲ್ಯದ ನಶೆ ಗುಳಿಗೆ ವಶಕ್ಕೆ ಪಡೆದ ಅಬಕಾರಿ ಇಲಾಖೆ

ಸಮಗ್ರ ನ್ಯೂಸ್ : ಅಬಕಾರಿ ಅಧಿಕಾರಿಗಳ ಖಚಿತ ಮಾಹಿತಿ ಮೇರೆಗೆ ನಗರದ ಮಾಂಗರವಾಡಿ ಗಲ್ಲಿಯ ಮನೆಯೊಂದರ ಮೇಲೆ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆ ದಾಳಿ ನಡೆಸಿ 1.5 ಲಕ್ಷ ಮೌಲ್ಯದ ನಶೆ ಗುಳಿಗೆಯನ್ನು ವಶಕ್ಕೆ ಪಡೆದಿದೆ. ಮಾಂಗರವಾಡಿಯ ಅಶೋಕ ಮತ್ತು ವಿಕಾಸ್ ಮನೆಯ ಮೇಲೆ ದಾಳಿ ಮಾಡಿ 3065 ನಶೆ ಬರೋ ಡ್ರೆಮಿಡಾಲ್ ಕ್ಯಾಪಸೂಲ್ ವಶಕ್ಕೆ ಪಡೆದಿದೆ. ದಾಳಿ ಸಂಧರ್ಭದಲ್ಲಿ ಆರೋಪಿ ಅಶೋಕ ಮತ್ತು ವಿಕಾಸ ಪರಾರಿಯಾಗಿದ್ದಾರೆ. ಮನೆ ಪರಿಶೀಲನೆ ನಡೆಸಿದ ಅಬಕಾರಿ ಅಧಿಕಾರಿಗಳು 3065

ಬೀದರ್ : 5 ಲಕ್ಷ ಮೌಲ್ಯದ ನಶೆ ಗುಳಿಗೆ ವಶಕ್ಕೆ ಪಡೆದ ಅಬಕಾರಿ ಇಲಾಖೆ Read More »

ಬೀದರ್ : ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ ಎಂದ ಸುರ್ಜೇವಾಲಾ

ಸಮಗ್ರ ನ್ಯೂಸ್‌ : ಕರ್ನಾಟಕ ಪ್ರವಾಸದಲ್ಲಿರುವ ಮೋದಿಗೆ‌ ಗೋ ಬ್ಯಾಕ್ ಘೋಷಣೆ ಎದುರಾಗಿದೆ. ಪ್ರಧಾನಿ ಮೋದಿ ಮತ್ತು ಕೇಂದ್ರ ಬಿಜೆಪಿ‌ ಸರ್ಕಾರದ‌ ಡಿಎನ್‌ಎ ಕರ್ನಾಟಕ ಮತ್ತು ಕನ್ನಡಿಗರ ವಿರೋಧಿ‌ ಆಗಿದೆ. ಬರ ಪರಿಹಾರ ಮತ್ತು ನೀರಾವರಿ ಯೋಜನೆಗಳಿಗೆ ಅನುದಾನ ನೀಡದ ಮೋದಿ ಸರ್ಕಾರ ಕರ್ನಾಟಕದ‌ ಜನರ‌ ವಿರುದ್ಧ ದ್ವೇಷ‌ ಸಾಧಿಸುತ್ತಿದೆ. ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ ಎಂದು ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲಾ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಖಾಲಿ ಚೊಂಬು ಪ್ರದರ್ಶನ ಮಾಡಿ

ಬೀದರ್ : ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ ಎಂದ ಸುರ್ಜೇವಾಲಾ Read More »

ಚಾಮರಾಜನಗರ : ಸುನೀಲ್ ಬೋಸ್ ೧ ಲಕ್ಷಕ್ಕೂ ಹೆಚ್ಚು ಮತಗಳಿಂದ ಜಯಗಳಿಸಲಿದ್ದಾರೆ-ಮಾಜಿ ಶಾಸಕ ಆರ್ ನರೇಂದ್ರ

ಸಮಗ್ರ ನ್ಯೂಸ್ : ಮೀಸಲು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸುನೀಲ್ ಬೋಸ್ ರವರು ಒಂದು ಲಕ್ಷಕ್ಕೂ ಹೆಚ್ಚು ಮತಗಳಿಂದ ಜಯಗಳಿಸಲಿದ್ದಾರೆ ಎಂದು ಮಾಜಿ ಶಾಸಕ ಆರ್ ನರೇಂದ್ರ ವಿಶ್ವಾಸ ವ್ಯಕ್ತಪಡಿಸಿದರು. ಹನೂರು ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ 1, 61,644 ಮತಗಳು ಚಲಾವಣೆಯಾಗಿದೆ. ಈ ಪೈಕಿ ಕಾಂಗ್ರೆಸ್ ಪಕ್ಷಕ್ಕೆ ಹನೂರು ವಿಧಾನಸಭಾ ಕ್ಷೇತ್ರ ಒಂದರಲ್ಲಿ 20 ರಿಂದ 25 ಸಾವಿರದವರೆಗೆ ಹೆಚ್ಚಿನ ಅಂತರದಲ್ಲಿ ಸಿಗಲಿದೆ.

ಚಾಮರಾಜನಗರ : ಸುನೀಲ್ ಬೋಸ್ ೧ ಲಕ್ಷಕ್ಕೂ ಹೆಚ್ಚು ಮತಗಳಿಂದ ಜಯಗಳಿಸಲಿದ್ದಾರೆ-ಮಾಜಿ ಶಾಸಕ ಆರ್ ನರೇಂದ್ರ Read More »

ವಿಜಯಪುರ: ರಥೋತ್ಸವದ ವೇಳೆ ರಥದ ಚಕ್ರ ಹಾಯ್ದು ಇಬ್ಬರು ಸಾವು, ಓರ್ವ ಗಂಭೀರ ಗಾಯ

ಸಮಗ್ರ ನ್ಯೂಸ್: ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದ ಆರಾಧ್ಯ ದೈವ ಶ್ರೀ ಸಿದ್ದಲಿಂಗ ಮಹಾರಾಜರ ಕಮರಿಮಠದ ಜಾತ್ರೆ ಇಂದು ನಡೆಯಿತು. ಈ ಜಾತ್ರೆಯ ರಥೋತ್ಸವ ವೇಳೆ ರಥದ ಚಕ್ರ ಹಾಯ್ದು ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬನಿಗೆ ಗಂಭೀರ ಗಾಯಗಳಾಗಿವೆ. ಇಂದು ಸಂಜೆ ಗೋಧೋಳಿ ಮುಹೂರ್ತದಲ್ಲಿ ಶ್ರೀ ಸಿದ್ದಲಿಂಗ ಮಹರಾಜರ ರಥೋತ್ಸವ ನಡೆದಿದ್ದು, ಸಾವಿರಾರು ಜನರು ಭಾಗಿಯಾಗಿದ್ದರು. ಜಾತ್ರೆಯಲ್ಲಿನ ನೂಕು ನುಗ್ಗಲಿನಲ್ಲಿ ರಥದ ಚಕ್ರಕ್ಕೆ ಸಿಲುಕಿ ಇಬ್ಬರು ಮೃತಪಟ್ಟಿದ್ದಾರೆ. ತೀವ್ರವಾಗಿ ಗಾಯಗೊಂಡ ಮತ್ತೊಬ್ಬನನ್ನು ಜಿಲ್ಲಾಸ್ಪತ್ರೆಗೆ ರವಾನೆ

ವಿಜಯಪುರ: ರಥೋತ್ಸವದ ವೇಳೆ ರಥದ ಚಕ್ರ ಹಾಯ್ದು ಇಬ್ಬರು ಸಾವು, ಓರ್ವ ಗಂಭೀರ ಗಾಯ Read More »