ಪತಂಜಲಿಯ 14 ಉತ್ಪನ್ನಗಳ ಪರವಾನಗಿ ರದ್ದು/ ಸುಪ್ರೀಂ ಕೋರ್ಟ್‍ಗೆ ಅಫಿಡವಿಟ್ ಸಲ್ಲಿಸಿದ ಉತ್ತರಾಖಂಡ ಸರ್ಕಾರ

ಸಮಗ್ರ ನ್ಯೂಸ್: ಯೋಗ ಗುರು ಬಾಬಾ ರಾಮ್‍ದೇವ್ ಅವರ ಪತಂಜಲಿ ಕಂಪನಿಯ ಆರ್ಯುವೇದ ಉತ್ಪನ್ನಗಳ ವಿವಾದಾತ್ಮಕ ಜಾಹೀರಾತುಗಳನ್ನು ಎದುರಿಸಿದ ನಂತರ, ಇದೀಗ 14 ಉತ್ಪನ್ನಗಳ ಪರವಾನಗಿಯನ್ನು ರದ್ದುಗೊಳಿಸಲು ಉತ್ತರಾಖಂಡ ಸರ್ಕಾರ ನಿರ್ಧರಿಸಿದೆ. ಈ ಕುರಿತು ಸೋಮವಾರ ಸುಪ್ರೀಂ ಕೋರ್ಟ್‍ಗೆ ಅಫಿಡವಿಟ್ ಸಲ್ಲಿಸಿದ್ದಾರೆ.

. Ad Widget . Ad Widget

ಪತಂಜಲಿ ಗ್ರೂಪ್‍ನ ಭಾಗವಾಗಿರುವ ದಿವ್ಯ ಫಾರ್ಮಸಿ ದೃಷ್ಟಿ ಐ ಡ್ರಾಪ್’, ‘ಸ್ವಾಸರಿ ಗೋಲ್ಡ್’, ‘ಸ್ವಾಸರಿ ವಟಿ’, ‘ಬೋನ್‍ಚೋಂ’, ‘ಸ್ವಾಸರಿ ಪ್ರವಾಹಿ’, ‘ಸ್ವಾಸರಿ ಅವಲೇಹ್’, ‘ಮುಕ್ತಾ ವಟಿ ಎಕ್ಷ್ಮಾ ಪವರ್’, ‘ಲಿಪಿಡೋಮ್’, ‘ಬಿಪಿ ಗ್ರಿಟ್’, ‘ಮಧುಗ್ರಿಟ್’, ‘ಮಧುನಾಶಿನಿ ವಟಿ ಎಕ್ಕಾ ಪವರ್’, ‘ಲಿವಾಮೃತ್ ಅಡ್ವಾನ್ಸ್’, ‘ಲಿವೋಗ್ರಿಟ್’ ಮತ್ತು ‘ಐಗ್ರಿಟ್ ಗೋಲ್ಡ್ ಅನ್ನು ನಿಲ್ಲಿಸಲಾಗಿದೆ.

. Ad Widget . . Ad Widget . Ad Widget

ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ, ಪತಂಜಲಿ ಅಲೋಪತಿ ವೈದ್ಯಕೀಯ ವ್ಯವಸ್ಥೆಯನ್ನು ಟೀಕಿಸಲು ಪ್ರಚಾರ ಮಾಡಿತು. ಇದನ್ನು ಪ್ರಶ್ನಿಸಿ ಮೊಕದ್ದಮೆ ದಾಖಲಿಸಿದ್ದಕ್ಕೆ ಪತಂಜಲಿ ಇತ್ತೀಚೆಗೆ ಕ್ಷಮೆಯಾಚಿಸಿದೆ. ಮಂಗಳವಾರವೂ ವಿಚಾರಣೆ ಮುಂದುವರಿಯಲಿದ್ದು, ಅದಕ್ಕೂ ಮುನ್ನ ಪರವಾನಗಿ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.

Leave a Comment

Your email address will not be published. Required fields are marked *