ರಾಜ್ಯ

ಚಾಮರಾಜನಗರ : ಮಳೆ, ಗಾಳಿ ಆರ್ಭಟಕ್ಕೆ ಧರೆಗುರುಳಿದ ಏಸು ಕ್ರೈಸ್ತನ ಮೂರ್ತಿ

ಸಮಗ್ರ ನ್ಯೂಸ್ : ಬೀಸಿದ ಗಾಳಿಗೆ ಸುರಿದ ಮಳೆಯ ರಭಸಕ್ಕೆ ಏಸು ಕ್ರೈಸ್ತನ ಮೂರ್ತಿ ಧರೆಗುರುಳಿದ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮರಿ ಮಂಗಲ ಗ್ರಾಮದಲ್ಲಿ ನಡೆದಿದೆ. ಚಾಮರಾಜನಗರ ಜಿಲ್ಲೆಯ ಮರಿ ಮಂಗಲ ಗ್ರಾಮದಲ್ಲಿರುವ ಕ್ರೈಸ್ತ ಧರ್ಮದ ಚರ್ಚ್ ಮುಂಭಾಗದಲ್ಲಿ ಇರಿಸಲಾಗಿದ್ದ ಏಸು ಕ್ರೈಸ್ತನ ಮೂರ್ತಿಯು ಶುಕ್ರವಾರ ಸಂಜೆ ಬೀಸಿದ ಗಾಳಿ ಸುರಿದ ಮಳೆಯ ರಭಸಕ್ಕೆ ಧರೆಗುರುಳಿದೆ. ಅಲ್ಲದೆ ಗ್ರಾಮದ ಹಲವಾರು ಷೆಡ್ ಗಳು ನಾಶವಾಗಿದ್ದರೆ ಮರಗಳು ಧರೆಗುರುಳಿವೆ. ಮರಿಮಂಗಲ ಗ್ರಾಮದಲ್ಲಿ ಗಾಳಿ ಮಳೆಯ ಅವಾಂತರಕ್ಕೆ

ಚಾಮರಾಜನಗರ : ಮಳೆ, ಗಾಳಿ ಆರ್ಭಟಕ್ಕೆ ಧರೆಗುರುಳಿದ ಏಸು ಕ್ರೈಸ್ತನ ಮೂರ್ತಿ Read More »

ಕೋವಿಡ್ ಲಸಿಕೆ ಪಡೆದವರು ಪ್ರಿಡ್ಜ್ ನೀರು ಐಸ್ ಕ್ರೀಂ ಸೇವಿಸಬಾರದು| ತಪ್ಪು ಮಾಹಿತಿ ಸುತ್ತೋಲೆ ಹೊರಡಿಸಿದ ಕಾಲೇಜುಗಳಿಗೆ ನೋಟೀಸ್

ಸಮಗ್ರ ನ್ಯೂಸ್: ಕೋವಿಡ್ ನಿಯಂತ್ರಣಕ್ಕಾಗಿ ಕೋವಿಶೀಲ್ಡ್ ಲಸಿಕೆ ಪಡೆದವರಲ್ಲಿ ದಿಢೀರ್ ಹೃದಯಾಘಾತವಾಗಿ ಹಲವು ಅಡ್ಡಪರಿಣಾಮಗಳು ಉಂಟಾಗಲಿದ್ದು, ಆದ್ದರಿಂದ ಫ್ರಿಡ್ಜ್ ನೀರು, ಆಹಾರ ಸೇವನೆ ಮಾಡಬೇಡಿ ಎಂದು ಸುದ್ದಿ ಹಬ್ಬಿಸಿದ ನಗರದ ಸಿದ್ದರಾಮಯ್ಯ ಲಾ ಕಾಲೇಜು ಹಾಗೂ ಜಚನಿ ಪ್ರಥಮ ದರ್ಜೆ ಕಾಲೇಜುಗಳಿಗೆ ಚಿಕ್ಕಬಳ್ಳಾಪುರ ಜಿಲ್ಲಾ ಸರ್ವೇಕ್ಷಣ ಅಧಿಕಾರಿಗಳಿಂದ ನೋಟಿಸ್ ನೀಡಿದೆ. ಕೋವಿಡ್‌ಶೀಲ್ಡ್ ಲಸಿಕೆ ಪಡೆದವರಲ್ಲಿ ದಿಢೀರ್‌ ಹೃದಯಾಘಾತ, ರಕ್ತ ಹೆಪ್ಪುಗಟ್ಟುವುದು ಸೇರಿ ಹಲವು ರೀತಿಯ ಅಡ್ಡಪರಿಣಾಮಗಳು ಉಂಟಾಗಲಿದ್ದು, ಈ ಹಿನ್ನೆಲೆ ಲಸಿಕೆ ಪಡೆದವರು ಫ್ರಿಡ್ಜ್ ನೀರು, ಐಸ್

ಕೋವಿಡ್ ಲಸಿಕೆ ಪಡೆದವರು ಪ್ರಿಡ್ಜ್ ನೀರು ಐಸ್ ಕ್ರೀಂ ಸೇವಿಸಬಾರದು| ತಪ್ಪು ಮಾಹಿತಿ ಸುತ್ತೋಲೆ ಹೊರಡಿಸಿದ ಕಾಲೇಜುಗಳಿಗೆ ನೋಟೀಸ್ Read More »

ಮೈಸೂರು: ಚಲಿಸುತ್ತಿದ್ದ ಬಸ್ ಮೇಲೆ ಉರುಳಿ ಬಿದ್ದ ವಿದ್ಯುತ್ ಕಂಬ

ಸಮಗ್ರ ನ್ಯೂಸ್ : ಮಳೆಯಿಂದ ಜನ ಜೀವನ ಅಸ್ತವ್ಯಸ್ತವಾಗಿದ್ದು, ಚಲಿಸುತ್ತಿದ್ದ ಬಸ್ ಮೇಲೆ ವಿದ್ಯುತ್ ಕಂಬಗಳು ಬಿದ್ದಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಬಸ್ನಲ್ಲಿ ಮಹಿಳೆಯರು, ಮಕ್ಕಳು, ಕಾಲೇಜು ವಿದ್ಯಾರ್ಥಿಗಳು ಹಾಗೂ ವಯೋವೃದ್ಧರು ಪ್ರಯಾಣ ಮಾಡುತ್ತಿದ್ದರು. ಈ ವೇಳೆ ಏಕಾಏಕಿ ವಿದ್ಯುತ್ ಕಂಬಗಳು ಬಿದ್ದಿದೆ. ಈ ವೇಳೆ ತಕ್ಷಣ ಸಾರ್ವಜನಿಕರು ಕರೆಂಟ್ ಕಟ್ ಮಾಡಿದ್ದಾರೆ. ಅದೃಷ್ಟವಶಾತ್ ಕರೆಂಟ್ ಕಟ್ ಆಗಿದ್ದ ಕಾರಣ ಪ್ರಯಾಣಿಕರು ಬಚಾವ್ ಆಗಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಮೈಸೂರು: ಚಲಿಸುತ್ತಿದ್ದ ಬಸ್ ಮೇಲೆ ಉರುಳಿ ಬಿದ್ದ ವಿದ್ಯುತ್ ಕಂಬ Read More »

ಕೋವಿಶೀಲ್ಡ್ ಹಾಕಿಸಿಕೊಂಡವರು ತಂಪು ಪಾನೀಯ ಸೇವಿಸಬಾರದೇ? ವೈರಲ್ ಆಗಿರುವ ಪೋಸ್ಟರ್ ನ ಕುರಿತು ಆರೋಗ್ಯ ಇಲಾಖೆ ನೀಡಿದ ಸ್ಪಷ್ಟನೆ ಏನು?

ಸಮಗ್ರ ನ್ಯೂಸ್: ಕೋವಿಶೀಲ್ಡ್ ಲಸಿಕೆ ಹಾಕಿಸಿಕೊಂಡಿರುವ ಪರಿಣಾಮ ರಕ್ತ ಹೆಪ್ಪುಗಟ್ಟುವುದು, ದಿಢೀ‌ರ್ ಹೃದಯಾಘಾತ ಸಂಭವಿಸಿ ಪ್ರಾಣ ಹಾನಿಯಾಗುವುದು ವರದಿ ಆಗುತ್ತಿದೆ. ಆದರೆ ಕೋವಿಶೀಲ್ಡ್ ಲಸಿಕೆ ಪರಿಣಾಮಗಳ ಬಗ್ಗೆ ಯಾವುದೇ ಸುತ್ತೋಲೆ ಹೊರಡಿಸಿಲ್ಲ ಎಂದು ಆರೋಗ್ಯ ಇಲಾಖೆ ಸ್ಪಷ್ಟನೆ ನೀಡಿದೆ. ಈ ಕುರಿತಂತೆ ಆರೋಗ್ಯ ಇಲಾಖೆಯು ಸಮಯೋಚಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಸ್ಪಷ್ಟನೆ ನೀಡಿದ್ದು, ಕೋವಿಶೀಲ್ಡ್ ಲಸಿಕೆ ಹಾಕಿಸಿಕೊಂಡಿರುವ ಪರಿಣಾಮ ರಕ್ತ ಹೆಪ್ಪುಗಟ್ಟುವುದು, ದಿಢೀ‌ರ್ ಹೃದಯಾಘಾತ ಸಂಭವಿಸಿ ಪ್ರಾಣ ಹಾನಿಯಾಗುವುದು ವರದಿ ಆಗುತ್ತಿದೆ. ಆದ ಕಾರಣ ಆರೋಗ್ಯ ಇಲಾಖೆಯು

ಕೋವಿಶೀಲ್ಡ್ ಹಾಕಿಸಿಕೊಂಡವರು ತಂಪು ಪಾನೀಯ ಸೇವಿಸಬಾರದೇ? ವೈರಲ್ ಆಗಿರುವ ಪೋಸ್ಟರ್ ನ ಕುರಿತು ಆರೋಗ್ಯ ಇಲಾಖೆ ನೀಡಿದ ಸ್ಪಷ್ಟನೆ ಏನು? Read More »

ಮತದಾನಕ್ಕೆ ವಿಶೇಷ ರೈಲು/ ಮೈಸೂರು-ತಾಳಗುಪ್ಪ-ಮೈಸೂರು ನಡುವೆ ಸಂಚರಿಸಲಿದೆ ರೈಲು

ಸಮಗ್ರ ನ್ಯೂಸ್: ಲೋಕಸಭೆ ಚುನಾವಣೆ ಮತದಾನ ಹಿನ್ನೆಲೆಯಲ್ಲಿ ಬೆಂಗಳೂರು ಮಾರ್ಗವಾಗಿ ಮೈಸೂರು-ತಾಳಗುಪ್ಪ-ಮೈಸೂರು ನಡುವೆ ಒಂದು ದಿನ ಮಾತ್ರ ವಿಶೇಷ ರೈಲು ಸಂಚರಿಸಲಿದೆ. ರೈಲು (ಸಂಖ್ಯೆ 07373) ಮೇ 6ರಂದು ರಾತ್ರಿ 10.30ಕ್ಕೆ ಮೈಸೂರಿನಿಂದ ಹೊರಟು ಮಾರನೇ ದಿನ ಬೆಳಗ್ಗೆ 9 ಗಂಟೆಗೆ ತಾಳಗುಪ್ಪ ತಲುಪಲಿದೆ. ಇದೇ ರೈಲು (ಸಂಖ್ಯೆ 07374) ಮೇ 7 ರಂದು ಸಂಜೆ 6.30ಕ್ಕೆ ತಾಳಗುಪ್ಪದಿಂದ ಹೊರಟು ಬೆಳಗಿನ ಜಾವ 4 ಗಂಟೆಗೆ ಮೈಸೂರು ತಲುಪಲಿದೆ. ಈ ರೈಲು ಬೆಂಗಳೂರು, ತುಮಕೂರು, ಬೀರೂರು ಮಾರ್ಗವಾಗಿ

ಮತದಾನಕ್ಕೆ ವಿಶೇಷ ರೈಲು/ ಮೈಸೂರು-ತಾಳಗುಪ್ಪ-ಮೈಸೂರು ನಡುವೆ ಸಂಚರಿಸಲಿದೆ ರೈಲು Read More »

ಮಲೆನಾಡು, ಘಟ್ಟ ಪ್ರದೇಶದ ಹಲವೆಡೆ ಮಳೆ| ಮಡಿಕೇರಿ, ಸುಳ್ಯ, ಮೈಸೂರಲ್ಲಿ ವರುಣ ಸಿಂಚನ

ಸಮಗ್ರ ನ್ಯೂಸ್: ಕರಾವಳಿ ಜಿಲ್ಲೆ‌ ದ.ಕನ್ನಡದ ಅವಿಭಜಿತ ಸುಳ್ಯ ತಾಲೂಕು ಹಾಗೂ ಮಲೆನಾಡಿನ ‌ಕೆಲ ಜಿಲ್ಲೆಗಳಲ್ಲಿ ಮಳೆಯ ಸಿಂಚನವಾಗಿದೆ. ಶುಕ್ರವಾರ(ಮೇ4) ಸಂಜೆ ವೇಳೆಗೆ ಕುಕ್ಕೆ ಸುಬ್ರಹ್ಮಣ್ಯ, ಸುಳ್ಯ, ಸಂಪಾಜೆ, ಮಡಿಕೇರಿ ಜಿಲ್ಲೆಯ ಕೆಲವಡೆ, ಮೈಸೂರು ನಗರ, ಹಾಗೂ ರಾಜಧಾನಿ ಬೆಂಗಳೂರಿನಲ್ಲಿ ಸಾಧಾರಣ ಮಳೆಯಾಗಿದೆ. ಮಳೆಯ ಜೊತೆಗೆ ಗುಡುಗು, ಸಿಡಿಲಿನ ಅಬ್ಬರವೂ ಜೋರಾಗಿತ್ತು. ಮಳೆಯಿಂದಾಗಿ ರಣಬಿಸಿಲಿನಿಂದ ತತ್ತರಿಸಿದ್ದ ಜನತೆ ಕೊಂಚ ನಿರಾಳವಾಗಿದ್ದಾರೆ. ಮುಂದಿನ ಕೆಲ ದಿನ ಮಲೆನಾಡು ಹಾಗೂ ದ. ಒಳನಾಡಿನ ಹಲವಡೆ ಮಳೆಯಾಗುವ ಮುನ್ಸೂಚನೆ ಇದೆ. ಕೊಡಗು,

ಮಲೆನಾಡು, ಘಟ್ಟ ಪ್ರದೇಶದ ಹಲವೆಡೆ ಮಳೆ| ಮಡಿಕೇರಿ, ಸುಳ್ಯ, ಮೈಸೂರಲ್ಲಿ ವರುಣ ಸಿಂಚನ Read More »

ಮಡಿಕೇರಿ: ಸಿಡಿಲು ಬಡಿದು ಅಸ್ಸಾಂ ಕಾರ್ಮಿಕ ಗಂಭೀರ

ಸಮಗ್ರ ನ್ಯೂಸ್: ಮನೆಯ ಹೊರಭಾಗದಲ್ಲಿ ನಿಂತಿದ್ದ ಸಂದರ್ಭ ಸಿಡಿಲು ಬಡಿದು ಅಸ್ಸಾಂ ಕಾರ್ಮಿಕ ಪ್ರಮಾತ್ ಚಿಂತಾಜನಕ ಸ್ಥಿತಿ ತಲುಪಿದ ಘಟನೆ ಮಡಿಕೇರಿ ಸಮೀಪದ ಬೆಟ್ಟಗೇರಿಯಲ್ಲಿ ನಡೆದಿದೆ. ಗರ್ಮಾನಿ (37) ಎಂಬಾತ ಮಡಿಕೇರಿ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮಡಿಕೇರಿ: ಸಿಡಿಲು ಬಡಿದು ಅಸ್ಸಾಂ ಕಾರ್ಮಿಕ ಗಂಭೀರ Read More »

ಬಾಗಲಕೋಟೆ: ʼಪ್ರಜ್ವಲ್ ರೇವಣ್ಣ ಯಾವ ದೇಶದಲ್ಲಿ ಇದ್ದರೂ ಹಿಡಿದು ತರುತ್ತೇವೆʼ

ಸಮಗ್ರ ನ್ಯೂಸ್‌ : ಪ್ರಜ್ವಲ್ ರೇವಣ್ಣ ಯಾವುದೇ ದೇಶದಲ್ಲಿ ಇದ್ದರೂ ಹಿಡಿದು ತರುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದರು. ಕೇಂದ್ರ ಸರ್ಕಾರ ಪ್ರಜ್ವಲ್ ರಕ್ಷಣೆ ಮಾಡೋ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು. ಬಾಗಲಕೋಟೆಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಪಾಸ್ ಪೋರ್ಟ್ ರದ್ಧತಿಗೆ ಪ್ರಧಾನಿಗೆ ಪತ್ರ ಬರೆದಿದ್ದೇನೆ. ಆದರೂ ಕೇಂದ್ರ ಸರ್ಕಾರ ಏನು ಮಾಡುತ್ತಿಲ್ಲ. ಮಹಿಳೆಯರ ಮೇಲೆ ಅನ್ಯಾಯ ನಡೆದಿದೆ ಎಂದು ಹೇಳಿದ್ದಾರೆ. ಕುಮಾರಸ್ವಾಮಿ ಪ್ರಜ್ವಲ್ ನನ್ನ ಮಗ ಅನ್ನುತ್ತಿದ್ದರು, ಈಗ ಏನು ಹೇಳ್ತಾರೆ?. ಪ್ರಜ್ವಲ್ ಪ್ರಕರಣ

ಬಾಗಲಕೋಟೆ: ʼಪ್ರಜ್ವಲ್ ರೇವಣ್ಣ ಯಾವ ದೇಶದಲ್ಲಿ ಇದ್ದರೂ ಹಿಡಿದು ತರುತ್ತೇವೆʼ Read More »

ಕಲ್ಯಾಣ್ ಜ್ಯುವೆಲ್ಲರ್ಸ್ ನಲ್ಲಿ ಎಸಿ ಸ್ಪೋಟ| ಆರು ಮಂದಿಗೆ ಗಾಯ, ಓರ್ವ ಗಂಭೀರ

ಸಮಗ್ರ ನ್ಯೂಸ್: ಕಲ್ಯಾಣ್ ಜ್ಯುವೆಲರ್ಸ್ ಅಂಗಡಿಯಲ್ಲಿ ಏರ್ ಕಂಡಿಷನರ್ ಸ್ಫೋಟಗೊಂಡ ಪರಿಣಾಮ 6 ಮಂದಿ ಗಾಯಗೊಂಡು ಓರ್ವ ಗಂಭೀರ ಸ್ಥಿತಿಯಲ್ಲಿರುವ ಘಟನೆ ಗುರುವಾರ ಬಳ್ಳಾರಿಯಲ್ಲಿ ನಡೆದಿದೆ. ಬಳ್ಳಾರಿ ನಗರದ ರಥಬೀದಿಯ ಮಾರ್ಟಿನ್ ರಸ್ತೆಯಲ್ಲಿರುವ ಕಲ್ಯಾಣ್ ಜ್ಯುವೆಲರ್ಸ್‌ ಮಳಿಗೆಯಲ್ಲಿ ಎಸಿ ಸ್ಫೋಟಗೊಂಡಿದ್ದು, ಇದನ್ನು ದುರಸ್ತಿಗೊಳಿಸಲು ಬಂದಿದ್ದ ನಿಂಗಪ್ಪ, ಸೈಯದ್ ಝುಬೇರ್‌ ಎಂಬವರಿಗೆ ಗಂಭೀರ ಗಾಯವಾಗಿದೆ. ಮೂವರು ಸಿಬ್ಬಂದಿಗೆ ಸಣ್ಣ ಗಾಯಗಳಾಗಿವೆ. ಗಾಯಾಳುಗಳನ್ನು ನಗರದ ವಿಮ್ಸ್‌ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಜ್ಯುವೆಲರ್ಸ್ ಮಳಿಗೆಯಲ್ಲಿ ಕಳೆದ ಕೆಲ ದಿನಗಳಿಂದ ಸೆಂಟ್ರಲೈಜ್ಡ್ ಎಸಿಯಲ್ಲಿ

ಕಲ್ಯಾಣ್ ಜ್ಯುವೆಲ್ಲರ್ಸ್ ನಲ್ಲಿ ಎಸಿ ಸ್ಪೋಟ| ಆರು ಮಂದಿಗೆ ಗಾಯ, ಓರ್ವ ಗಂಭೀರ Read More »

ಉಡುಪಿ‌‌: ವಿಪರೀತ ಸೆಖೆಯಿದೆ ಎಂದು ಟೆರೇಸ್ ನಲ್ಲಿ ಮಲಗಿದ್ದ ಶಿಕ್ಷಕ ಸಾವು

ಸಮಗ್ರ ನ್ಯೂಸ್‌ : ವಿಪರೀತ ಸೆಖೆಯಿದೆ ಎಂದು ಮನೆಯ ಟೆರೇಸ್ ಮೇಲೆ ಮಲಗಿದ್ದ ಶಿಕ್ಷಕ ಸಾವನ್ನಪ್ಪಿದ ಘಟನೆ ಬೆಳಕಿಗೆ ಬಂದಿದೆ. ಮೃತಪಟ್ಟವರನ್ನು ಅಜೆಕಾರು ಆಶ್ರಯನಗರ ನಿವಾಸಿ ಸುಂದರ ನಾಯ್ಕ್ ( 55) ಎಂದು ಗುರುತಿಸಲಾಗಿದೆ. ಸುಂದರ ನಾಯ್ಕ್ ಕಾರ್ಕಳ ತಾಲೂಕಿನ ಎಣ್ಣೆ ಹೊಳೆ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. ರಾತ್ರಿ ಸುಮಾರು 10:30 ರ ವೇಳೆಗೆ ಟೆರೇಸ್ ಮೇಲೆ ಮಲಗಲು ತೆರಳಿದ್ದರು. ಬೆಳಿಗ್ಗೆ 6:30 ವೇಳೆಗೆ ಗಮನಿಸಿದಾಗ ಟೆರೇಸ್ ಮೇಲಿಂದ ಕೆಳಗೆ ಬಿದ್ದಿರೋದು ಬೆಳಕಿಗೆ ಬಂದಿದೆ.

ಉಡುಪಿ‌‌: ವಿಪರೀತ ಸೆಖೆಯಿದೆ ಎಂದು ಟೆರೇಸ್ ನಲ್ಲಿ ಮಲಗಿದ್ದ ಶಿಕ್ಷಕ ಸಾವು Read More »