ರಾಜ್ಯ

ಮಡಿಕೇರಿ: 2 ವರ್ಷದ ಹಿಂದೆ ಮನೆಗೆ ನುಗ್ಗಿ ಕಳ್ಳತನ ಮಾಡಿದ ಐದು ಕಳ್ಳರ ಬಂಧನ

ಸಮಗ್ರ ನ್ಯೂಸ್: ಸಿದ್ದಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಗುಡ್ಲೂರು ಗ್ರಾಮದ ಚನ್ನಂಗಿ ನಿವಾಸಿ ತಂಗಚ್ಚನ್ ಕೆ.ಕೆ ಎಂಬುವರ ಮನೆಗೆ 2022ರ ಜೂನ್ 8 ರಂದು ರಾತ್ರಿ 8:30 ಸಮಯದಲ್ಲಿ ಅಪರಿಚಿತ ಮುಸುಕುದಾರಿ ವ್ಯಕ್ತಿಗಳು ತಂಗಚ್ಚನ್ ಅವರ ಮನೆಗೆ ಪ್ರವೇಶಿಸಿ ತಂಗಚ್ಚನ್ ಹಾಗೂ ಅವರ ಪತ್ನಿಯ ಮೇಲೆ ಹಲ್ಲೆ ನಡೆಸಿ ಮನೆಯಲ್ಲಿದ್ದ ಅಂದಾಜು ಎರಡು ಲಕ್ಷ ರೂಪಾಯಿ ಹಾಗೂ ಪತ್ನಿಯ ಕುತ್ತಿಗೆಯಲ್ಲಿದ್ದ ಎಂಟು ಗ್ರಾಂ ಚಿನ್ನದ ಸರ ಕಿತ್ತುಕೊಂಡು ಹೋಗಿರುವ ಬಗ್ಗೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಮಡಿಕೇರಿ: 2 ವರ್ಷದ ಹಿಂದೆ ಮನೆಗೆ ನುಗ್ಗಿ ಕಳ್ಳತನ ಮಾಡಿದ ಐದು ಕಳ್ಳರ ಬಂಧನ Read More »

ರೇವಣ್ಣ ಬಂಧನ ಹಿನ್ನೆಲೆ ಮಗನು ಶರಣಾಗ್ತಾನೆ| ಸಿ.ಎಸ್ ಪುಟ್ಟರಾಜು ಹೇಳಿಕೆ

ಸಮಗ್ರ ನ್ಯೂಸ್: ಹಾಸನ ಜೆಡಿಎಸ್ ಸಂಸದ ಪ್ರಜ್ವಲ್‌ ರೇವಣ್ಣ ಪೆನ್ ಡ್ರೈವ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮಾಜಿ ಸಚಿವ, ಜೆಡಿಎಸ್‌ ನಾಯಕ ಎಚ್‌.ಡಿ.ರೇವಣ್ಣ ಅವರನ್ನು ಎಸ್‌ಐಟಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಇದರ ಬೆನ್ನಲ್ಲೇ‌, ಅಶ್ಲೀಲ ವಿಡಿಯೊಗಳು ವೈರಲ್‌ ಆಗುತ್ತಿದ್ದಂತೆ ವಿದೇಶಕ್ಕೆ ಪರಾರಿಯಾಗಿರುವ ಪ್ರಜ್ವಲ್‌ ರೇವಣ್ಣ ಕೂಡ ಭಾರತಕ್ಕೆ ಬಂದು ಪೊಲೀಸರಿಗೆ ಶರಣಾಗಲಿದ್ದಾರೆ ಎಂದು ಮಾಹಿತಿ ತಿಳಿದುಬಂದಿದೆ. ಎಸ್‌ಐಟಿ ಅಧಿಕಾರಿಗಳು ಎಚ್‌.ಡಿ.ರೇವಣ್ಣ ಅವರನ್ನು ವಶಕ್ಕೆ ಪಡೆದಿದ್ದಾರೆ. ಕಾನೂನು ಪ್ರಕಾರ ಯಾವ ಪ್ರಕ್ರಿಯೆ ಅನುಸರಿಸಬೇಕೋ, ಅದೆಲ್ಲವನ್ನೂ ಅನುಸರಿಸಲಾಗುತ್ತದೆ. ಕಾನೂನು ಪ್ರಕಾರ ಅವರು

ರೇವಣ್ಣ ಬಂಧನ ಹಿನ್ನೆಲೆ ಮಗನು ಶರಣಾಗ್ತಾನೆ| ಸಿ.ಎಸ್ ಪುಟ್ಟರಾಜು ಹೇಳಿಕೆ Read More »

ಟೋಲ್ ಹಣ ಕಟ್ಟುವ ವಿಚಾರವಾಗಿ ಗಲಾಟೆ| ಟೋಲ್ ಸಿಬ್ಬಂದಿಗೆ ಹಿಗ್ಗಾಮುಗ್ಗಾ ಥಳಿತ

ಸಮಗ್ರ ನ್ಯೂಸ್: ಟೋಲ್ ಹಣ ಕಟ್ಟುವ ವಿಚಾರವಾಗಿ ವಾಹನ ಸವಾರರಿಂದ ಟೋಲ್ ಸಿಬ್ಬಂದಿಗೆ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ನವಯುಗ ಟೋಲ್ ನಲ್ಲಿ ನಡೆದಿದೆ ಟೋಲ್ ಸಿಬ್ಬಂದಿಗೆ ಬಟ್ಟೆ ಬಿಚ್ಚಿಸಿ ತೇಜಸ್, ಶರತ್ ಎಂಬುವವರು ಹಿಗ್ಗಾ ಮುಗ್ಗಾ ಥಳಿಸಿದ್ದಾರೆ. ನಾವು ಲೋಕಲ್​ ನವರು ನಮ್ಮ ಕಾರುಗಳಿಗೆ ಟೋಲ್ ಹಣ ಕೇಳುತ್ತೀರಾ ಎಂದು ಟೋಲ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ. ಈ ಇಬ್ಬರನ್ನು ನೆಲಮಂಗಲ ಪೊಲೀಸರು ಬಂಧಿಸಿದ್ದಾರೆ. ಹಲ್ಲೆಯ ವಿಡಿಯೋ ಟೋಲ್ ಸಿಸಿ ಕ್ಯಾಮರಾದಲ್ಲಿ

ಟೋಲ್ ಹಣ ಕಟ್ಟುವ ವಿಚಾರವಾಗಿ ಗಲಾಟೆ| ಟೋಲ್ ಸಿಬ್ಬಂದಿಗೆ ಹಿಗ್ಗಾಮುಗ್ಗಾ ಥಳಿತ Read More »

ದಿಂಗಾಲೇಶ್ವರ ಸ್ವಾಮೀಜಿ ವಿರುದ್ಧ ಎಫ್‌ಐಆರ್ ದಾಖಲು

ಸಮಗ್ರ ನ್ಯೂಸ್: ಧಾರವಾಡ ಜಿಲ್ಲೆಯ ನವಲಗುಂದ ಠಾಣೆಯಲ್ಲಿ ದಿಂಗಾಲೇಶ್ವರ ಸ್ವಾಮೀಜಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಹೌದು ವಿಭಿನ್ನ ವರ್ಗಗಳ ಮಧ್ಯೆ ವೈರತ್ವ ಮತ್ತು ದ್ವೇಷ ಭಾವನೆಯನ್ನುಂಟು ಮಾಡುವ ಹೇಳಿಕೆ ನೀಡಿದ ಆರೋಪದಲ್ಲಿ ಸ್ವಾಮೀಜಿ ವಿರುದ್ದ ಎಫ್‌ಐಆರ್ ದಾಖಲು ಮಾಡಲಾಗಿದೆ. ಇವರು ನವಲಗುಂದ ಮಾರ್ಕೆಟ್‌ನಲ್ಲಿ ನಡೆದಿದ್ದ ಸ್ವಾಭಿಮಾನಿ ಮತದಾರರ ಸಮಾವೇಶ ಚುನಾವಣೆ ಭಾಷಣದ ವೇಳೆ ಎಡವಟ್ಟು ಮಾಡಿದ್ದರು. ಬಿಜೆಪಿ ಅಭ್ಯರ್ಥಿ ಪ್ರಲ್ಹಾದ್‌ ಜೋಶಿ ವಿರುದ್ಧ ವಾಗ್ದಾಳಿ ನಡೆಸಿದ್ದ ಸ್ವಾಮೀಜಿ, ಭಸ್ಮ ಹೋಗಿ ಕುಂಕುಮ ಬಂತು ಹಾಗೂ ಭಂಡಾರ ಹೋಗಿ

ದಿಂಗಾಲೇಶ್ವರ ಸ್ವಾಮೀಜಿ ವಿರುದ್ಧ ಎಫ್‌ಐಆರ್ ದಾಖಲು Read More »

ಡಿಗ್ರೀ ಪಾಸ್ ಆಗಿದ್ದೀರ? ಹಾಗಾದ್ರೆ ಉತ್ತಮ ಸಂಬಳ ಕೊಡುವ ಈ ಜಾಬ್ ಗೆ ಅರ್ಜಿ ಸಲ್ಲಿಸಿ

ಸಮಗ್ರ ಉದ್ಯೋಗ: ನೌಕರಿಗಾಗಿ ಕಾಯುತ್ತಿದ್ದೀರಾ? ಕೈಯಲ್ಲಿ ಡಿಗ್ರಿ ಇದ್ದರೂ ಲಾಭವಿಲ್ಲ ಎಂಬ ಆತಂಕದಲ್ಲಿ ಇದ್ದೀರಾ? ನಿಮಗಾಗಿ ಹುದ್ದೆ ಇಲ್ಲಿದೆ ನೋಡಿ. ಬೋಧನೆಯ ಕಲ್ಪನೆಯೊಂದಿಗೆ ಈ ಕೆಲವು ದಾಖಲೆಗಳನ್ನು ಹೊಂದಿದ್ದರೆ ಸಾಕು. ನೀವು ಉತ್ತಮ ಮಾಸಿಕ ಸಂಬಳದ ಕೆಲಸವನ್ನು ಹೊಂದಿರುತ್ತೀರಿ. ಪೆದ್ದಪಲ್ಲಿ ಜಿಲ್ಲೆಯ ರಾಮಗುಂಡಂ ಕ್ಷೇತ್ರದ ಲಿಂಗಾಪುರ ಆದರ್ಶ ಶಾಲೆಯಲ್ಲಿ ರಸಾಯನಶಾಸ್ತ್ರ ವಿಷಯದ ಪಿಜಿಟಿ ಹುದ್ದೆಗೆ ಶಾಲೆಯ ಮುಖ್ಯ ಶಿಕ್ಷಕಿ ಸಾರಾ ತಸ್ನೀಮ್ ಅವರು ಪ್ರಕಟಣೆಯನ್ನು ಬಿಡುಗಡೆ ಮಾಡಿದ್ದಾರೆ. ಆದರ್ಶ ವಿದ್ಯಾಲಯಗಳಿರುವ ಏಕೈಕ ಹುದ್ದೆಗಾಗಿ ಉದ್ಯೋಗಾವಕಾಶಗಳ ನಿರೀಕ್ಷೆಯಲ್ಲಿರುವ ನಿರುದ್ಯೋಗಿ

ಡಿಗ್ರೀ ಪಾಸ್ ಆಗಿದ್ದೀರ? ಹಾಗಾದ್ರೆ ಉತ್ತಮ ಸಂಬಳ ಕೊಡುವ ಈ ಜಾಬ್ ಗೆ ಅರ್ಜಿ ಸಲ್ಲಿಸಿ Read More »

ಅಶ್ಲೀಲ ವಿಡಿಯೋ ಪ್ರಕರಣದ ಮಹಿಳೆಯ ಅಪಹರಣ| ಎಚ್.ಡಿ ರೇವಣ್ಣ ಬಂಧನ

ಸಮಗ್ರ ನ್ಯೂಸ್: ಸಂತ್ರಸ್ತ ಮಹಿಳೆ ಅಪಹರಣ ಪ್ರಕರಣದಲ್ಲಿ ಮಾಜಿ ಸಚಿವ ಶಾಸಕ ಎಚ್.ಡಿ.ರೇವಣ್ಣ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಜಾಗೊಳಿಸಿದ ಬೆನ್ನಲ್ಲೇ ಮಾಜಿ ಸಚಿವ, ಶಾಸಕ ಎಚ್‌.ಡಿ ರೇವಣ್ಣ ಅವರನ್ನು ಎಸ್‌ಐಟಿ ಅಧಿಕಾರಿಗಳ ತಂಡ ವಶಕ್ಕೆ ಪಡೆದಿರುವುದಾಗಿ ವರದಿಯಾಗಿದೆ. ಸಂತ್ರಸ್ತ ಮಹಿಳೆ ಅಪಹರಣ ಪ್ರಕರಣದಲ್ಲಿ ಮಾಜಿ ಸಚಿವ ಶಾಸಕ ಎಚ್.ಡಿ.ರೇವಣ್ಣ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತಿರಸ್ಕರಿಸಿದೆ.

ಅಶ್ಲೀಲ ವಿಡಿಯೋ ಪ್ರಕರಣದ ಮಹಿಳೆಯ ಅಪಹರಣ| ಎಚ್.ಡಿ ರೇವಣ್ಣ ಬಂಧನ Read More »

ಒಂದೇ ರೀತಿಯ ಹೆಸರು ಇರುವ ಅಭ್ಯರ್ಥಿಗಳ ಸ್ಪರ್ಧೆ/ ಸ್ಪರ್ಧೆ ನಿಷೇಧಿಸಲು ನಿರಾಕರಿಸಿದ ಸುಪ್ರೀಂ ಕೋರ್ಟ್

ಸಮಗ್ರ ನ್ಯೂಸ್: ಚುನಾವಣೆಗಳಲ್ಲಿ ಒಂದೇ ರೀತಿಯ ಹೆಸರನ್ನು ಹೊಂದಿರುವ ಅಭ್ಯರ್ಥಿಗಳ ಮೇಲೆ ಸ್ಪರ್ಧಿಸದಿರುವ ಷರತ್ತು ವಿಧಿಸಲು ಅರ್ಜಿಯನ್ನು ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಅಂತಹ ನಿಷೇಧವು ಜನರ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದರು. ಮತದಾರರನ್ನು ದಾರಿ ತಪ್ಪಿಸುವ ರಾಜಕೀಯ ತಂತ್ರವಾಗಿ ಖ್ಯಾತ ಅಭ್ಯರ್ಥಿಗಳ ಹೆಸರನ್ನು ಮತಪತ್ರದಲ್ಲಿ ಇರಿಸಲಾಗಿರುವುದರಿಂದ ಮತದಾರರಲ್ಲಿ ಗೊಂದಲ ಉಂಟಾಗುತ್ತದೆ. ಅಂತಹ ಅಭ್ಯರ್ಥಿಗಳೂ ಹೆಚ್ಚಾಗಿ ಸೋಲನುಭವಿಸುತ್ತಿದ್ದರು. ಇದು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗೆ ಹಿನ್ನಡೆಯಾಗಲಿದೆ. ಆದ್ದರಿಂದ ನ್ಯಾಯಸಮ್ಮತ ಮತದಾನ ನಡೆಯುವಂತೆ ಇಂತಹ ತಂತ್ರಗಳನ್ನು ನಿಷೇಧಿಸುವಂತೆ

ಒಂದೇ ರೀತಿಯ ಹೆಸರು ಇರುವ ಅಭ್ಯರ್ಥಿಗಳ ಸ್ಪರ್ಧೆ/ ಸ್ಪರ್ಧೆ ನಿಷೇಧಿಸಲು ನಿರಾಕರಿಸಿದ ಸುಪ್ರೀಂ ಕೋರ್ಟ್ Read More »

ಚಾಮರಾಜನಗರ : ಪ್ರಜ್ವಲ್, ರೇವಣ್ಣ ಬಂಧನಕ್ಕೆ ಎಸ್‌ಡಿಪಿಐ ಆಗ್ರಹ

ಸಮಗ್ರ ನ್ಯೂಸ್ : ಹಾಸನ ಜಿಲ್ಲೆಯಲ್ಲಿ ನಡೆದಿರುವ ಲೈಂಗಿಕ ಹಗರಣದ ಆರೋಪಿ ಜೆಡಿಎಸ್ ಸಂಸದ ಹಾಗೂ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ, ಅವರ ತಂದೆ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಎಚ್.ಡಿ.ರೇವಣ್ಣ ಅವರನ್ನು ಬಂಧಿಸಿ, ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಎಸ್‌ಡಿಪಿಐ ಪದಾಧಿಕಾರಿಗಳು ಚಾಮರಾಜನಗರದಲ್ಲಿ ಶುಕ್ರವಾರ ರಾತ್ರಿ ಪ್ರತಿಭಟನೆ ನಡೆಸಿದರು. ಎನ್‌ಡಿಎ ಅಭ್ಯರ್ಥಿ ವಿರುದ್ಧ ಇಷ್ಟು ದೊಡ್ಡ ಆರೋಪ ಕೇಳಿ ಬಂದಿದ್ದರೂ, ಪ್ರಧಾನಿ ಮೋದಿ ಅವರು ಯಾಕೆ ಮೌನ ವಹಿಸಿದ್ದಾರೆ ಎಂದು

ಚಾಮರಾಜನಗರ : ಪ್ರಜ್ವಲ್, ರೇವಣ್ಣ ಬಂಧನಕ್ಕೆ ಎಸ್‌ಡಿಪಿಐ ಆಗ್ರಹ Read More »

ಸಮುದ್ರ ಉಕ್ಕೇರುವ ಸಾಧ್ಯತೆ/ ಕಾಸರಗೋಡಿನ ಕಡಲ ತೀರಗಳಲ್ಲಿ ರೆಡ್ ಅಲರ್ಟ್

ಸಮಗ್ರ ನ್ಯೂಸ್: ರಾಷ್ಟ್ರೀಯ ಸಮುದ್ರಶಾಸ್ತ್ರ ಮತ್ತು ಸಂಶೋಧನಾ ಕೇಂದ್ರ ನೀಡಿರುವ, ಕಡಲು ಉಕ್ಕೇರುವ ಸಾಧ್ಯತೆ ಇದೆ ಎಂಬ ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯ ಎಲ್ಲಾ ಕಡಲ ತೀರಗಳ ವ್ಯಾಪ್ತಿಯಲ್ಲಿ ರೆಡ್ ಆಲರ್ಟ್ ಘೋಷಿಸಲಾಗಿದ್ದು, ಎಲ್ಲಾ ಪ್ರವಾಸಿ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ. ಜಿಲ್ಲಾಡಳಿತ ವ್ಯಾಪಕ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದು, ಬೇಕಲ, ಪಳ್ಳಿಕ್ಕರ ಬೀಚ್, ಹೊಸದುರ್ಗ ಕೈಟ್ ಬೀಚ್, ಚೆಂಬರಿಕಾ, ಅಯಿತ್ತಲ, ವಲಿಯಪರಂಬ, ಕಣ್ವತೀರ್ಥ ಬೀಚ್‍ಗಳಿಗೆ ಪ್ರವಾಸಿಗರ ಪ್ರವೇಶವನ್ನು ತಾತ್ಕಾಲಿಕವಾಗಿ ನಿಷೇಧಿಸಿದೆ. ಜೊತೆಗೆ ಜಿಲ್ಲೆಯಲ್ಲಿರುವ ತೇಲುವ ಸೇತುವೆಯ ಕಾರ್ಯಾಚರಣೆಯನ್ನು ಕೂಡಾ ತಾತ್ಕಾಲಿಕವಾಗಿ

ಸಮುದ್ರ ಉಕ್ಕೇರುವ ಸಾಧ್ಯತೆ/ ಕಾಸರಗೋಡಿನ ಕಡಲ ತೀರಗಳಲ್ಲಿ ರೆಡ್ ಅಲರ್ಟ್ Read More »

ಶಬರಿಮಲೆಗೆ ರೋಪ್ ವೇ ಸೌಲಭ್ಯ/ ಸರ್ವೇ ಕಾರ್ಯ ಆರಂಭ

ಸಮಗ್ರ ನ್ಯೂಸ್: ದಕ್ಷಿಣ ಭಾರತದ ಪ್ರಸಿದ್ಧ ಯಾತ್ರಾ ಸ್ಥಳಗಳಲ್ಲಿ ಒಂದಾಗಿರುವ ಶಬರಿಮಲೆಗೆ ನಿರ್ಮಿಸಲು ಉದ್ದೇಶಿಸಲಾಗಿರುವ 80 ಕೋಟಿ ರೂಪಾಯಿ ವೆಚ್ಚದ ರೋಪ್ ಯೋಜನೆಗೆ ಈಗಾಗಲೇ ಚಾಲನೆ ಸಿಕ್ಕಿದ್ದು, ಪಂಪಾದಿಂದ ಸನ್ನಿಧಾನದವರೆಗಿನ ಸರ್ವೇ ಕಾರ್ಯ ಆರಂಭವಾಗಿದೆ. ಮರಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ನೀಡಿರುವ ಪ್ರಸ್ತಾವನೆ ಪರಿಗಣಿಸಿ ರೋಪ್ ವೇ ಎತ್ತರವನ್ನು 35 ಮೀಟರ್‍ನಿಂದ 60 ಮೀಟರ್ಗೆಗೆ ಹೆಚ್ಚಿಸಲು ನಿರ್ಧರಿಸಲಾಗಿದೆ. ಇದರಿಂದ ಕಡಿಯಬೇಕಾದ ಮರಗಳ ಸಂಖ್ಯೆ 510ರಿಂದ 50ಕ್ಕೆ ಇಳಿಯಲಿದೆ. ಪರಿಷ್ಕøತ ಯೋಜನೆ ಪ್ರಕಾರ ಕಂಬಗಳ ಸಂಖ್ಯೆಯೂ 5ಕ್ಕೆ

ಶಬರಿಮಲೆಗೆ ರೋಪ್ ವೇ ಸೌಲಭ್ಯ/ ಸರ್ವೇ ಕಾರ್ಯ ಆರಂಭ Read More »