ದ.ಕ ಜಿಲ್ಲೆಯಲ್ಲಿ ಮಳೆ ಅವಘಡಕ್ಕೆ ಮತ್ತೊಂದು ಬಲಿ| ವಿದ್ಯುತ್ ಸ್ಟೇ ವಯರ್ ನಲ್ಲಿ ಹರಿದ ವಿದ್ಯುತ್| ಬೆಳ್ತಂಗಡಿಯ ಶಿಬಾಜೆಯಲ್ಲಿ ಯುವತಿ ಸಾವು
ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಅವ್ಯಾಹತ ಮಳೆಯ ಅವಘಡಕ್ಕೆ ಮತ್ತೊಂದು ಬಲಿಯಾಗಿದೆ. ಸ್ಟೇ ವೈಯರ್ ನಿಂದ ವಿದ್ಯುತ್ ಹರಿದು ಇದರಿಂದ ಯುವತಿಯೊಬ್ಬಳು ಮೃತಪಟ್ಟ ದಾರುಣ ಘಟನೆ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶಿಬಾಜೆಯಲ್ಲಿ ನಡೆದಿದೆ. ಗ್ರಾಮದ ಬರ್ಗುಲಾ ನಿವಾಸಿ ಪ್ರತೀಕ್ಷಾ ಶೆಟ್ಟಿ (21) ಮೃತ ಯುವತಿ. ಮನೆಯ ರಸ್ತೆಗೆ ಪಾರ್ಸೆಲ್ ಬಂದಿದ್ದು, ಅದನ್ನು ಸ್ವೀಕರಿಸಲು ಹೋದಾಗ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ. ಗಣೇಶ್ ಶೆಟ್ಟಿ ಮತ್ತು ರೋಹಿಣಿ ದಂಪತಿ ಪುತ್ರಿ ಪ್ರತೀಕ್ಷಾ ಮನೆ ಬಳಿ










