ರಾಜ್ಯ

ಬೆಂಗಳೂರು: ಪಿಜಿಯೊಂದರಲ್ಲಿ ಯುವತಿಯ ಕತ್ತು ಕೊಯ್ದು ಬರ್ಬರ ಕೊಲೆ

ಸಮಗ್ರ ನ್ಯೂಸ್: ಬೆಂಗಳೂರಿನ ಕೋರಮಂಗಲದ ವಿಆರ್ ಲೇಔಟ್ ನ ಪಿಜಿಯೊಂದರಲ್ಲಿ ಯುವತಿಯ ಕತ್ತು ಕೊಯ್ದು ಬರ್ಬರ ಕೊಲೆ ಮಾಡಲಾಗಿದೆ. ಬಿಹಾರ ಮೂಲದ ಕೃತಿ ಕುಮಾರಿ‌(24) ಕೊಲೆಯಾದ ಯುವತಿ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಕೃತಿ ಕುಮಾರಿ‌ಯನ್ನು ರಾತ್ರಿ ಸುಮಾರು 11.10 ರಿಂದ 11.30ರ ನಡುವೆ ಕೊಲೆ ಮಾಡಲಾಗಿದೆ. ನಿನ್ನೆ ರಾತ್ರಿ ಯುವಕನೋರ್ವ ಚಾಕು ಹಿಡಿದುಕೊಂಡು ಯುವತಿ ಇದ್ದ ಲೇಡಿಸ್ ಪಿಜಿಯೊಳಗೆ ನುಗ್ಗಿದ್ದು 3ನೇ ಮಹಡಿಯಲ್ಲಿರುವ ಕೊಠಡಿ ಬಳಿ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಕೃತಿ ಕುಮಾರಿ‌ ಕತ್ತು ಕೊಯ್ದು […]

ಬೆಂಗಳೂರು: ಪಿಜಿಯೊಂದರಲ್ಲಿ ಯುವತಿಯ ಕತ್ತು ಕೊಯ್ದು ಬರ್ಬರ ಕೊಲೆ Read More »

ಅಮ್ಮನ ಮಾತು ನಡೆಸಿದ ವಿನೋದ್ ರಾಜ್| ದರ್ಶನ್ ಭೇಟಿಗೆ ಅಸಲಿ ಕಾರಣವೇನು?

ಸಮಗ್ರ ನ್ಯೂಸ್: ರೇಣುಕಾ ಸ್ವಾಮಿ ಕೊಲೆ ಕೇಸ್ ನಲ್ಲಿ ಜೈಲಿನಲ್ಲಿ ಇರುವ ದರ್ಶನ್ ಅವರನ್ನು ವಿನೋದ್ ರಾಜ್ ಅವರು ಭೇಟಿ ಮಾಡಿದ್ದಾರೆ. ಜುಲೈ 22ರಂದು ಭೇಟಿ ಮಾಡಿದ್ದು ಜೈಲಿಗೆ ತೆರಳಿದ ವಿನೋದ್ ರಾಜ್ ಅವರು ದರ್ಶನ್ ಜೊತೆ ಮಾತುಕತೆ ನಡೆಸಿದ್ದಾರೆ. ಇದೇ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ವಿನೋದ್ ರಾಜ್ ದರ್ಶನ್ ಭೇಟಿಗೆ ತಾಯಿ ನೀಡಿದ ಹೇಳಿಕೆ ಕಾರಣ ಎಂದಿದ್ದಾರೆ. ‘ನನ್ನ ತಾಯಿ ಮಂಚದಲ್ಲಿ ಮಲಗಿದ್ದಾಗ ಒಂದು ಮಾತನ್ನು ಹೇಳಿದ್ದರು. ತೂಗುದೀಪ ಶ್ರೀನಿವಾಸ್ ಮಗ ಬೆಂಬಲ ಇಲ್ಲದೆ ಬೆಳೆದವನು.

ಅಮ್ಮನ ಮಾತು ನಡೆಸಿದ ವಿನೋದ್ ರಾಜ್| ದರ್ಶನ್ ಭೇಟಿಗೆ ಅಸಲಿ ಕಾರಣವೇನು? Read More »

ಸಿದ್ದರಾಮಯ್ಯ ಆಪ್ತ, ಕಾಂಗ್ರೆಸ್ ನಾಯಕ ಮರಿಗೌಡ ಪಾಟೀಲ್ ಹುಲ್ಕಲ್ ನಿಧನ

ಸಮಗ್ರ ನ್ಯೂಸ್: ಸಿಎಂ‌‌ ಸಿದ್ದರಾಮಯ್ಯ ಅವರ ಆಪ್ತರಾಗಿದ್ದ ಕಾಂಗ್ರೆಸ್ ನಾಯಕ ಮರಿಗೌಡ ಪಾಟೀಲ್ ಹುಲ್ಕಲ್ ಹೃದಯಾಘಾತದಿಂದ ಮಂಗಳವಾರ ನಿಧನ ಹೊಂದಿದ್ದಾರೆ. ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಹುಲ್ಕಲ್ ಗ್ರಾಮದ ನಿವಾಸಿ. ಕುರುಬ ಸಮುದಾಯದ ಪ್ರಭಾವಿ ಮುಂಖಡರಾಗಿದ್ದರು. ಅವರ ನಿಧನದಿಂದ ಕುಟುಂಬಸ್ಥರು ಕಂಬನಿ ಮಿಡಿದಿದ್ದಾರೆ. ಇವರು ಕಲಬುರಗಿ ತೊಗರಿ ಮಂಡಳಿ ಅಧ್ಯಕ್ಷರಾಗಿ ಆಯ್ಕೆ ಆಗಿದ್ದರು. ಆದರೆ ತೊಗರಿ‌ ನಿಗಮ ಅಧ್ಯಕ್ಷ ಸ್ಥಾನ ನಿರಾಕರಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಅವರಿಗೂ ಆಪ್ತರಾಗಿದ್ದರು. ಮರಿಗೌಡ ಪಾಟೀಲ್ ಹುಲ್ಕಲ್ ಹಿಂದೆ‌

ಸಿದ್ದರಾಮಯ್ಯ ಆಪ್ತ, ಕಾಂಗ್ರೆಸ್ ನಾಯಕ ಮರಿಗೌಡ ಪಾಟೀಲ್ ಹುಲ್ಕಲ್ ನಿಧನ Read More »

ಕೇಂದ್ರ ಬಜೆಟ್ ನಲ್ಲಿ ಕರ್ನಾಟಕಕ್ಕೆ ಏನು ಇಲ್ಲ: ನೀತಿ ಆಯೋಗದ ಸಭೆ ಬಹಿಷ್ಕರಿಸಲು ಸಿಎಂ ಸಿದ್ದರಾಮಯ್ಯ ನಿರ್ಧಾರ…!

ಸಮಗ್ರ ನ್ಯೂಸ್: ನಿನ್ನೆ 2024-25ನೇ ಸಾಲಿನ ಕೇಂದ್ರ ಬಜೆಟ್ ನಡೆದಿದ್ದು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಿದ್ದಾರೆ. ಇದರಲ್ಲಿ ಕರ್ನಾಟಕಕ್ಕೆ ಯಾವುದೇ ಘೋಷಣೆ ಮಾಡಿಲ್ಲ. ಮೂಲಸೌಕರ್ಯ, ಕೈಗಾರಿಕೆ, ಕೃಷಿ, ನೀರಾವರಿ ಸೇರಿದಂತೆ ಅನೇಕ ವಲಯಗಳ ನಿರೀಕ್ಷೆಯಿತ್ತು. ಆದರೆ ಅದೆಲ್ಲಾ ಹುಸಿಯಾಗಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೋದಿ ಸರ್ಕಾರದ ವಿರುದ್ಧ ಆಕ್ರೋಶಗೊಂಡಿದ್ದು, ಮೋದಿ ನೇತೃತ್ವದಲ್ಲಿ ನಡೆಯಲಿರುವ ನೀತಿ ಆಯೋಗದ ಸಭೆಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ. ರಾಜ್ಯದ ಸಂಸದರೆಲ್ಲರ ಸಭೆ ಕರೆದು ರಾಜ್ಯದ ಅತ್ಯವಶ್ಯಕ ಬೇಡಿಕೆಗಳನ್ನು ಮುಂದಿಟ್ಟು ಮನವರಿಕೆ

ಕೇಂದ್ರ ಬಜೆಟ್ ನಲ್ಲಿ ಕರ್ನಾಟಕಕ್ಕೆ ಏನು ಇಲ್ಲ: ನೀತಿ ಆಯೋಗದ ಸಭೆ ಬಹಿಷ್ಕರಿಸಲು ಸಿಎಂ ಸಿದ್ದರಾಮಯ್ಯ ನಿರ್ಧಾರ…! Read More »

ವ್ಯಾಪಕ ಮಳೆ‌ ಹಿನ್ನಲೆ| ಬೆಳಗಾವಿಯಲ್ಲಿ 4 ತಾಲೂಕಿನ ಶಾಲೆ, ಪಿಯು ಕಾಲೇಜುಗಳಿಗೆ ರಜೆ

ಸಮಗ್ರ ನ್ಯೂಸ್: ಭಾರೀ ಮಳೆ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ 4 ತಾಲೂಕಿನ ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಆದೇಶಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಖಾನಾಪುರ, ಬೆಳಗಾವಿ, ಬೈಲಹೊಂಗಲ, ಕಿತ್ತೂರು ತಾಲೂಕಿನ ಎಲ್ಲಾ ಶಾಲೆಗಳಿಗೆ ಹಾಗೂ ಬೆಳಗಾವಿ ಮತ್ತು ಖಾನಾಪುರದಲ್ಲಿ ಪಿಯು ಕಾಲೇಜುಗಳಿಗೆ ಸೇರಿ ರಜೆ ಘೋಷಿಸಲಾಗಿದೆ.

ವ್ಯಾಪಕ ಮಳೆ‌ ಹಿನ್ನಲೆ| ಬೆಳಗಾವಿಯಲ್ಲಿ 4 ತಾಲೂಕಿನ ಶಾಲೆ, ಪಿಯು ಕಾಲೇಜುಗಳಿಗೆ ರಜೆ Read More »

ರೀಲ್ಸ್ ಮಾಡೋ ಪೊಲೀಸರಿಗೆ ಬಿಸಿ ಮುಟ್ಟಿಸಿದ ಇಲಾಖೆ| ಖಾಕಿಯಲ್ಲಿ ರೀಲ್ಸ್ ಮಾಡಿದರೆ ಶಿಸ್ತು ಕ್ರಮ – ಕಮಿಷನರ್

ಸಮಗ್ರ ನ್ಯೂಸ್: ಸಮವಸ್ತ್ರದಲ್ಲಿ ರೀಲ್ಸ್ ಮಾಡುವ ಪೊಲೀಸರಿಗೆ ಬೆಂಗಳೂರು ನಗರ ಕಮಿಷನರ್ ಬಿ.ದಯಾನಂದ ಅವರು ಬಿಸಿ ಮುಟ್ಟಿಸಿದ್ದಾರೆ. ಸಮವಸ್ತ್ರದಲ್ಲಿ ರೀಲ್ಸ್ ಮಾಡುವ ಪೊಲೀಸರಿಗೆ ಶಿಸ್ತು ಕ್ರಮದ ಎಚ್ಚರಿಕೆ ನೀಡಿರುವ ಅವರು, ಇಲಾಖೆಗೆ ಸಂಬಂಧಪಡದೇ ಇರುವ ವಿಷಯಗಳು ಇಲಾಖೆಯ ಘನತೆ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ. ಪೊಲೀಸ್ ಸಮವಸ್ತ್ರವು ಪೊಲೀಸರ ಬದ್ಧತೆ, ಸಮರ್ಪಣೆ ಮತ್ತು ಹೊಣೆಗಾರಿಕೆಯ ಸಂಕೇತವಾಗಿದೆ. ಡಿಜಿಟಲ್ ಫೋರಮ್​​ನಲ್ಲಿ ಇದರ ಬಳಕೆಯು ಈ ಮೌಲ್ಯಗಳನ್ನು ಪ್ರತಿಬಿಂಬಿಸುವಂತಿರಬೇಕಾಗುತ್ತದೆ. ಹಾಗಾಗಿ ಸಮವಸ್ತ್ರದಲ್ಲಿ ರೀಲ್ಸ್ ಮಾಡುವವರಿಗೆ ಶಿಸ್ತು ಕ್ರಮದ ಎಚ್ಚರಿಕೆ ನೀಡಲಾಗಿದೆ.

ರೀಲ್ಸ್ ಮಾಡೋ ಪೊಲೀಸರಿಗೆ ಬಿಸಿ ಮುಟ್ಟಿಸಿದ ಇಲಾಖೆ| ಖಾಕಿಯಲ್ಲಿ ರೀಲ್ಸ್ ಮಾಡಿದರೆ ಶಿಸ್ತು ಕ್ರಮ – ಕಮಿಷನರ್ Read More »

೫೦ ವರ್ಷ ಮೀರಿದ ಶಿಕ್ಷಕರಿಗೆ ಶುಭ ಸುದ್ದಿ| ಕರ್ನಾಟಕ ಹೈಕೋರ್ಟ್ ನಿಂದ ಮಹತ್ವದ ಆದೇಶ

ಸಮಗ್ರ ವಾರ್ತೆ: 50 ವರ್ಷ ಮೀರಿದ ಮಹಿಳಾ ಶಿಕ್ಷಕರಿಗೆ ವರ್ಗಾವಣೆಯಿಂದ ವಿನಾಯಿಸಿ ನೀಡುವ ಕರ್ನಾಟಕ ರಾಜ್ಯ ನಾಗರಿಕ ಸೇವೆಗಳು (ಶಿಕ್ಷಕರ ನಿಯಂತ್ರಣ ಮತ್ತು ವರ್ಗಾವಣೆ) ಕಾಯ್ದೆಯ ನಿಯಮವನ್ನು ಕರ್ನಾಟಕ ಹೈಕೋರ್ಟ್ ಎತ್ತಿ ಹಿಡಿದಿದೆ. “ಕರ್ನಾಟಕ ರಾಜ್ಯ” ಪರವಾಗಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎನ್. ವಿ. ಅಂಜಾರಿಯಾ ಹಾಗೂ ನ್ಯಾ. ಎಸ್.ಜಿ. ಪಂಡಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ತೀರ್ಪು ನೀಡಿದೆ. 50 ವರ್ಷ ದಾಟಿದ್ದ ಇಬ್ಬರು ಶಿಕ್ಷಕಿಯರನ್ನು ವರ್ಗಾವಣೆ ಮಾಡಿದ್ದ

೫೦ ವರ್ಷ ಮೀರಿದ ಶಿಕ್ಷಕರಿಗೆ ಶುಭ ಸುದ್ದಿ| ಕರ್ನಾಟಕ ಹೈಕೋರ್ಟ್ ನಿಂದ ಮಹತ್ವದ ಆದೇಶ Read More »

ಅಂಕೋಲ: ಗುಡ್ಡ ಕುಸಿತ ‌ಪ್ರಕರಣ| ಮತ್ತೊಂದು ‌ಶವ‌ ಪತ್ತೆ; ಮೃತರ ಸಂಖ್ಯೆ 8ಕ್ಕೆ ಏರಿಕೆ

ಸಮಗ್ರ ನ್ಯೂಸ್: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಶಿರೂರು ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಬೆಳಗ್ಗೆ ಗಂಗಾವಳಿ ನದಿ ಸಂಗಮದ ಮಂಜುಗುಣಿಯಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದೆ. ಇದರಿಂದ ಒಟ್ಟು ಸಾವಿನ ಸಂಖ್ಯೆ 8 ಕ್ಕೆ ಏರಿಕೆಯಾಗಿದೆ ಈಗಾಗಲೇ ಏಳು ಮೃತದೇಹ ಪತ್ತೆಯಾಗಿತ್ತು. ಈ ಮೃತ ದೇಹದ ಕೈಯಲ್ಲಿ ಬಳೆ ಮತ್ತು ಸೊಂಟದ ಮೇಲಿನ ಬಟ್ಟೆಯ ಮೇಲೆ ಪತ್ತೆ ಮಾಡಬಹುದಾಗಿದೆ. ಗಂಗಾವಳಿ ನದಿ ತೀರದ ಉಳುವರೆ ಗ್ರಾಮದ ಸಣ್ಣಿ ಗೌಡ ಎನ್ನುವ ಮಹಿಳೆ ನಾಪತ್ತೆಯಾಗಿದ್ದರು. ಮೃತದೇಹ ಆಕೆಯದ್ದೇ?

ಅಂಕೋಲ: ಗುಡ್ಡ ಕುಸಿತ ‌ಪ್ರಕರಣ| ಮತ್ತೊಂದು ‌ಶವ‌ ಪತ್ತೆ; ಮೃತರ ಸಂಖ್ಯೆ 8ಕ್ಕೆ ಏರಿಕೆ Read More »

ಬ್ರೇಕ್ ಕೊಟ್ಟ ಮಳೆರಾಯ| ಶಿರಾಡಿ, ಸಂಪಾಜೆ ಘಾಟ್ ನಲ್ಲಿ ರಾತ್ರಿ ಸಂಚಾರ ಆರಂಭ

ಸಮಗ್ರ ನ್ಯೂಸ್: ಮುಂಗಾರು ಮಳೆ ಕೊಂಚ ಬಿಡುವು ಕೊಟ್ಟ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ- 75ರ ಶಿರಾಡಿ ಘಾಟಿ ಮಾರ್ಗದಲ್ಲಿ ವಾಹನಗಳ ಸಂಚಾರ ಪುನರಾರಂಭವಾಗಿದೆ. ಸಕಲೇಶಪುರ ಸಮೀಪ ದೊಡ್ಡತಪ್ಪಲು ಬಳಿ ಮತ್ತು ಶಿರಾಡಿ ಘಾಟಿಯಲ್ಲಿ ರಸ್ತೆ ಮೇಲೆ ಭೂ ಕುಸಿತ ಸಂಭವ ಹಿನ್ನೆಲೆಯಲ್ಲಿ ಸಕಲೇಶಪುರದಿಂದ ಮಂಗಳೂರು, ಧರ್ಮಸ್ಥಳದ ನಡುವೆ ರಾತ್ರಿ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು. ಆದರೆ ರವಿವಾರ ಸಂಜೆಯಿಂದ ಮಳೆ ಅಬ್ಬರ ಕಡಿಮೆಯಾಗುತ್ತ ಬಂದಿದ್ದು, ಸೋಮವಾರ ಮಳೆ ಬಿಡುವು ಕೊಟ್ಟಿರುವುದರಿಂದ ಶಿರಾಡಿ ಘಾಟಿ ಮಾರ್ಗದಲ್ಲಿ ಎಲ್ಲ ವಾಹನಗಳ ಸಂಚಾರಕ್ಕೆ

ಬ್ರೇಕ್ ಕೊಟ್ಟ ಮಳೆರಾಯ| ಶಿರಾಡಿ, ಸಂಪಾಜೆ ಘಾಟ್ ನಲ್ಲಿ ರಾತ್ರಿ ಸಂಚಾರ ಆರಂಭ Read More »

ಕನಕಪುರ: ಮಹಿಳೆಯರು ಸೇರಿದಂತೆ ಏಳು ಜನರ ಮೇಲೆ‌ ಮಾರಕಾಸ್ತ್ರಗಳಿಂದ ಹಲ್ಲೆ

ಸಮಗ್ರ ನ್ಯೂಸ್: ಮಾರಕಾಸ್ತ್ರಗಳಿಂದ ಮಹಿಳೆಯರು ಸೇರಿದಂತೆ‌ 7 ಜನರ ಮೇಲೆ ಹಲ್ಲೆ ನಡೆದಿರುವ ಘಟನೆ ಜಿಲ್ಲೆಯ ಕನಕಪುರ ತಾಲೂಕಿನ ಮಾಳಗಾಳು ಗ್ರಾಮದ ಎನ್.ಕೆ.ಕಾಲೋನಿಯಲ್ಲಿ ನಡೆದಿದೆ. ಗಡಿಪಾರು ರೌಡಿಶೀಟರ್ ಹರ್ಷ ಗ್ಯಾಂಗ್​ನಿಂದ ಕೃತ್ಯ ಆರೋಪ ಮಾಡಲಾಗಿದೆ. ದಾರಿಗೆ ಅಡ್ಡವಾಗಿ ನಿಂತಿದ್ದಕ್ಕೆ 2 ಗುಂಪುಗಳ ನಡುವೆ ಗಲಾಟೆ ನಡೆದಿದೆ. ಘಟನೆ ಸಂಬಂಧ ಕೆಲವರನ್ನ ವಶಕ್ಕೆ ಪಡೆಯಲಾಗಿದ್ದು, ಕನಕಪುರ ಟೌನ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಗಲಾಟೆಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷನ ಕೈ ಕಟ್ ಆಗಿದೆ. ಘಟನಾ ಸ್ಥಳಕ್ಕೆ ರಾಮನಗರ

ಕನಕಪುರ: ಮಹಿಳೆಯರು ಸೇರಿದಂತೆ ಏಳು ಜನರ ಮೇಲೆ‌ ಮಾರಕಾಸ್ತ್ರಗಳಿಂದ ಹಲ್ಲೆ Read More »